ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಗಂಗೊಳ್ಳಿ: ಫಿರ್ಯಾದಿ ನಾಗೇಶ್ ರಾವ್ ರವರು ಎಂದಿನಂತೆ ಗಂಗೊಳ್ಳಿ ಅರ್ಬನ್ ಬ್ಯಾಂಕ್ ನಲ್ಲಿ ರಾತ್ರಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮುಗಿಸಿ ದಿನಾಂಕ: 27-01-2022 ರಂದು ಬೆಳಿಗ್ಗೆ ಗಂಗೊಳ್ಳಿಯಿಂದ ಕುಂದಾಪುರಕ್ಕೆ ತನ್ನ ಬಾಬ್ತು ಸೈಕಲ್  ಸವಾರಿ ಮಾಡಿಕೊಂಡು  ಹೋಗುತ್ತಿರುವಾಗ ಬೆಳಿಗ್ಗೆ  ಸಮಯ ಸುಮಾರು 8:00  ಗಂಟೆಗೆ ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಗುಜ್ಜಾಡಿ ಬಸ್  ನಿಲ್ದಾಣದ ಬಳಿ ತಲುಪುವಾಗ್ಗೆ ಹಿಂದಿನಿಂದ ಅಂದರೆ ಗಂಗೊಳ್ಳಿ  ಕಡೆಯಿಂದ ತ್ರಾಸಿ ಕಡೆಗೆ ವಿನೀತ್ ಪೂಜಾರಿ ಎಂಬವರು KA-20 EU-1687 ನೇ ಬೈಕ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ  ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರಿಗೆ  ಹಿಂದಿನಿಂದ  ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಆಪಾದಿತ ಬೈಕ್  ಸವಾರನು ಕೂಡಾ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಫಿರ್ಯಾದಿದಾರರಿಗೆ  ಬಲ ಕಾಲಿನ ಮೂಳೆ ಹಾಗೂ ಎಡ ಕೈ ಮೂಳೆ ಮುರಿತವಾಗಿದ್ದು ಅಲ್ಲಲ್ಲಿ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ. ಆಪಾದಿತ ಬೈಕ್ ಸವಾರನಿಗೂ ಕೈಕಾಲುಗಳಿಗೆ ತರಚಿದ ಗಾಯವಾಗಿದ್ದು  ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 11 /2022  ಕಲಂ 279,338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 24/01/2022  ರಂದು  ಬೆಳಿಗ್ಗೆ ಜಾವ  ಸುಮಾರು 05:30  ಗಂಟೆಗೆ, ಕುಂದಾಪುರ  ತಾಲೂಕಿನ  ವಕ್ವಾಡಿ ಗ್ರಾಮದ ವಕ್ವಾಡಿ ವರಾಹಿ  ನಿರಾವರಿ  ಕಾಲುವೆಯ  ಸೇತುವೆ ಕೆಲಸ ನಡೆಯುತ್ತಿರುವ  ರಸ್ತೆಯಲ್ಲಿ,  ಆಪಾದಿತ  ರಂಜಿತ್  ಎಂಬವರು   KA20-EW-0794ನೇ ಬೈಕನ್ನು  ಕೆದೂರು ಕಡೆಯಿಂದ ಕೊಟೇಶ್ವರ  ಕಡೆಗೆ ಅತೀವೇಗ ಹಾಗೂ  ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು  ಹೋಗಿ, ನೀರಾವರಿ  ಕಾಲುವೆ  ಸೇತುವೆ ಕೆಲಸ ನಡೆಯುತ್ತಿರುವ  ರಸ್ತೆಯಲ್ಲಿ ಬೈಕಿನ ಹತೋಟಿ ತಪ್ಪಿ,  ಸೇತುವೆ  ಕೆಲಸ ನಡೆಯುತ್ತಿರುವ  ಹೊಂಡದ ಜಾಗಕ್ಕೆ ಬೈಕ್‌ ಸಮೇತ ಬಿದ್ದು,  ರಂಜಿತ್  ರವರ ಎರಡೂ ಕೈ, ಹಾಗೂ ಹೊಟ್ಟೆಯ  ಭಾಗಕ್ಕೆ ಗಂಭೀರ ಗಾಯವಾಗಿ  ಕೊಟೇಶ್ವರ  ಎನ್‌. ಆರ್‌ ಆಚಾರ್ಯ  ಆಸ್ಬತ್ರೆಯಲ್ಲಿ  ಪ್ರಥಮ ಚಿಕಿತ್ಸೆ  ಪಡೆದುಕೊಂಡು ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಣಿಪಾಲ  ಕೆ.ಎಂಸಿ   ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಶ್ರೀಮತಿ ಎಸ್‌ ಪ್ರಾಯ 30 ವರ್ಷ ಗಂಡ: ಸತೀಶ ವಾಸ: ಕೆಳಬೆಟ್ಟು, ಶಾನಾಡಿ, ಕೆದೂರು ಅಂಚೆ & ಗ್ರಾಮ, ಕುಂದಾಪುರ ತಾಲೂಕು ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 15/2022 ಕಲಂ:279,,338  ಭಾ,ದಂ,ಸಂ ರಂತೆ ಪ್ರಕರಣ ದಾಖಲಿಸಲಾಗಿದೆ. 
  • ಪಡುಬಿದ್ರಿ: ಪಿರ್ಯಾದಿ ಸತೀಶ್ ಬಂಗೇರ, ಪ್ರಾಯ: 45 ವರ್ಷ, ತಂದೆ: ದಿ. ನಾಗಪ್ಪ ಸುವರ್ಣ, #5-57/2, ಸಬಾಸ್ಟಿಯನ್ ಡಿ ಕ್ರೂಜ್ ಕಂಪೌಂಡ್, 5 ನೇ ಬ್ಲಾಕ್ , ಕೃಷ್ಣಾಪುರ, ಕಾಟಿಪಳ್ಳ, ಮಂಗಳೂರು ಇವರ ಹೆಂಡತಿಯ ತಂದೆಯ ತಮ್ಮನ ಮಗ ವಿವೇಖ್ ಸುವರ್ಣ(25) ಎಂಬುವರು ದಿನಾಂಕ: 25.01.2022 ರಂದು ಸಂಜೆ ದೈವದ ಪೂಜಾ ಕಾರ್ಯದ ನಿಮಿತ್ತ ಆತನ  ಬಾಬ್ತು KA-19-EY-2393 ನೇ ನಂಬ್ರದ ಪಲ್ಸರ್ ಮೋಟಾರ್ ಸೈಕಲ್‌ನಲ್ಲಿ ಪಲಿಮಾರಿಗೆ ಹೋಗಿ, ಪೂಜಾ ಕಾರ್ಯ ಮುಗಿಸಿ ರಾಜ್ಯ ಕಾರ್ಕಳ-ಪಡುಬಿದ್ರಿ ಹೆದ್ದಾರಿ-01 ರಲ್ಲಿ ಪಲಿಮಾರಿನಿಂದ ಪಡುಬಿದ್ರಿ ಕಡೆಗೆ ಬರುತ್ತಾ ಸಮಯ ರಾತ್ರಿ ಸುಮಾರು 23:30 ಗಂಟೆಯ ವೇಳೆಗೆ  ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಭಾರತ್ ಸೂಪರ್ ಬಜಾರ್  ಎದುರು ಹೋಗುತ್ತಿರುವಾಗ KA-20-EN-5279 ನೇ ನಂಬ್ರದ ಸ್ಕೂಟಿ ಸವಾರ ಯಶಪಾಲ್ ಬಂಗೇರ ಎಂಬಾತನು ತನ್ನ ಸ್ಕೂಟಿಯನ್ನು ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ವಿವೇಕನ ಮೋಟಾರ್‌‌ ಸೈಕಲ್ಲಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ, ವಿವೇಕನ ಮೋಟಾರ್  ಸೈಕಲ್  ನಿಯಂತ್ರಣ ತಪ್ಪಿ ರಸ್ತೆಯ ಅಂಚಿನಲ್ಲಿ ಹೆದ್ದಾರಿ ಇಲಾಖೆಯವರು ನೆಟ್ಟಿದ್ದ ಸೂಚನಾ ಫಲಕದಕಬ್ಬಿಣದ ರಾಡಿಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿರುತ್ತಾನೆ. ಸದ್ರಿ ಅಪಘಾತದಿಂದ ವಿವೇಕನ ಬಲಕಾಲಿನ ಪಾದಕ್ಕೆಮೂಳೆ ಮುರಿತದ ಗಾಯವಾಗಿ ಹೆಬ್ಬೆರಳು ತುಂಡಾಗಿ ಮೂಳೆ ಹೊರಗೆ ಬಂದಿದ್ದು, ಎಡಕೈಗೆ ತರಚಿದ ಗಾಯವಾಗಿರುತ್ತದೆ, ನಂತರ ಗಾಯಾಳುವಿಗೆ ಸುರತ್ಕಲ್‌‌ನ ಅಥರ್ವ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು, ಪಿರ್ಯಾದಿದಾರರು ಗಾಯಾಳುವಿನ ಅರೈಕೆಯಲ್ಲಿದ್ದುದರಿಂದ ದೂರು ನೀಡಲು ವಿಳಂಬವಾಗಿರುತ್ತದೆ.ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ. 09/2022 ಕಲಂ 279,338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಇತರ ಪ್ರಕರಣ

  • ಹಿರಿಯಡ್ಕ: ಅನಿಲ್ ಬಿ ಮಾದರ  ಪಿಎಸ್‌, ಹಿರಿಯಡ್ಕ ಪೊಲೀಸ್ ಠಾಣೆ ಇವರು ದಿನಾಂಕ: 27/02/2021  ರಂದು 10:30  ಗಂಟೆಗೆ ಠಾಣೆಯಲ್ಲಿರುವಾಗ ಉಡುಪಿ ತಾಲೂಕು ಅತ್ರಾಡಿ ಗ್ರಾಮದ ಹಾಲು ಡೈರಿಯ ಎದುರು ಸಾರ್ವಜನಿಕ ರಸ್ತೆಯಲ್ಲಿ  ಒಬ್ಬ  ವ್ಯಕ್ತಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ಖಚಿತ ಮಾಹಿತಿ ದೊರೆತ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತೆರಳಿ ಖಚಿತಪಡಿಸಿಕೊಂಡು 10:35 ಗಂಟೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟಕ್ಕೆ ನಡೆಸುತ್ತಿದ್ದ ಪ್ರವೀಣ್ ಕೆ  ಎಂಬವರನ್ನು ವಶಕ್ಕೆ ಪಡೆದು ಆಪಾದಿತರನ್ನು ವಿಚಾರಿಸಿದಾಗ ತಾನು ತನ್ನ ಸ್ವಂತ ಲಾಭಕ್ಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿರುವುದಾಗಿ ತಿಳಿಸಿರುತ್ತಾರೆ. ಆಪಾದಿತರಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ರೂ  1240/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ- 1,  ಬಾಲ್‌ಪೆನ್‌-1 ನ್ನು ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಹಿರಿಯಡ್ಕ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 03/2022 ಕಲಂ : 78 (I)(III) KP ACT   ನಂತೆ ಪ್ರಕರಣ ದಾಖಲಾಗಿರುತ್ತದೆ.     


ಇತ್ತೀಚಿನ ನವೀಕರಣ​ : 27-01-2022 06:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080