ಅಭಿಪ್ರಾಯ / ಸಲಹೆಗಳು

 • ಅಪಘಾತ ಪ್ರಕರಣ
  ಗಂಗೊಳ್ಳಿ: ದಿನಾಂಕ:24/12/2022 ರಂದು ಪಿರ್ಯಾದಿ  ಸತೀಶ ಖಾರ್ವಿ ರವರು ತ್ರಾಸಿಯಿಂದ ಗಂಗೊಳ್ಳಿ ಕಡೆಗೆ ಹೋಗುವ ಡಾಂಬಾರು ರಸ್ತೆಯಲ್ಲಿ  KA 20 EF 1907 ನೇ ಮೋಟಾರು ಸೈಕಲ್‌ನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಕುಂದಾಪುರ ತಾಲೂಕು ಹೊಸಾಡು ಗ್ರಾಮದ ರಾಜು ದೇವಾಡಿಗರ ರವರ ಮನೆಯ ಹತ್ತೀರ ಕಂಚಗೋಡು ಕ್ರಾಸ್‌ಬಳಿ ಡಾಂಬಾರು ರಸ್ತೆಯಲ್ಲಿ ಮೋಟಾರು ಸೈಕಲ್‌ನ ಬಲಬದಿಯ ಇಂಡಿಕೇಟರ್‌ಹಾಕಿ ಕಂಚಗೋಡು ರಸ್ತೆ ಕಡೆಗೆ  ಹೋಗುತ್ತೀರುವುವಾಗ ಸಮಯ ಸುಮಾರು 19:30 ಗಂಟೆಗೆ ಗಂಗೊಳ್ಳಿ ಕಡೆಯಿಂದ  ತ್ರಾಸಿ ಕಡೆಗೆ ರಾಜೇಂದ್ರ ಗಾಣಿಗ ಎಂಬವರು  KA20 EN 6888 ನೇ ಬುಲೇಟ್‌ಬೈಕನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿರುವ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ಮೋಟಾರು ಸೈಕಲ್‌ಸಮೇತವಾಗಿ ಹಾಗೂ ಆಪಾದಿತನು ಬುಲೆಟ್‌ಸಮೇತವಾಗಿ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಎಡಕಾಲಿನ ಕೊಲುಕಾಲಿಗೆ ಮೂಳೆ ಮುರಿತ, ಬಲಕೈಗೆ, ಎಡಕೈಗೆ ತರಚಿದ ಗಾಯ ಹಾಗೂ ಸೊಂಟಕ್ಕೆ ಒಳ ಜಖಂ ಉಂಟಾಗಿರುತ್ತದೆ. ಮತ್ತು ಆಪಾದಿತನಿಗೂ ಸಣ್ಣಪುಟ್ಟ ಗಾಯವಾಗಿರುತ್ತದೆ. ಈ ಅಪಘಾತಕ್ಕೆ KA20 EN 6888 ನೇ ಬುಲೇಟ್‌ಬೈಕ ಸವಾರನ ಅತೀ ವೇಗ ಹಾಗೂ ಅಜಾಗೂಕತೆಯ  ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 113/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ಪಿರ್ಯಾದಿ ರಾಘವೇಂದ್ರ ನಾಯಕ್ ಇವರ ಬಾಬ್ತು ದಿ:24-12-2022 ರಂದು ಸಂಜೆ ಸುಮಾರು 07:35 ಗಂಟೆ ಸಮಯಕ್ಕೆ ಕೆಮ್ಮಣ್ಣು ಕಡೆಯಿಂದ ಹಂಪನಕಟ್ಟೆ ಕಡೆಗೆ  ತನ್ನ ಬಾಬ್ತು KA 20 ET 3659 ನೇ  ಸ್ಕೂಟರ್ ನಲ್ಲಿ ತನ್ನ ಜೊತೆ ಕೆಲಸಗಾರ ಮಂಗಲ್ ಎಂಬುವನನ್ನು ಹಿಂಬದಿಯಲ್ಲಿ ಕುರಿಸಿಕೊಂಡು ಹಂಪನಕಟ್ಟೆಯ ಪೈ ಲೇಔಟ್ ಬಳಿ ಬರುತ್ತಿರುವಾಗ ಎದುರಿನಿಂದ (ಹಂಪನಕಟ್ಟೆಯಿಂದ ಕೆಮ್ಮಣ್ಣು ಕಡೆಗೆ) ಬಂದ ಬಿಳಿ ಬಣ್ಣದ ಕಾರಿನ ಚಾಲಕನು ಕಾರನ್ನು ಅತೀ ವೇಗ ಮತ್ತು ಅಜಾಗರುಕತೆ ಹಾಗೂ ಅತೀ ನಿರ್ಲಕ್ಷತನದಿಂದ ಕಾರನ್ನು ತೀರ ಬಲಭಾಗಕ್ಕೆ ಚಲಾಯಿಸಿ ಪಿರ್ಯಾಧಿದಾರರ ಸ್ಕೂಟರ್ ನ ಬಲ ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರು ಹಾಗೂ ಸಹ ಸವಾರ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾಧಿದಾರರ ತಲೆಯ ಎಡಭಾಗಕ್ಕೆ ಗುದ್ದಿದ ಜಖಂ, ಎಡ ಕಿವಿಯ ಬಳಿ ರಕ್ತಗಾಯ, ಹಣೆಯಲ್ಲಿ ತರಚಿದ ಗಾಯ ಆಗಿದ್ದು, ಹಿಂಬದಿ ಸವಾರ ಮಂಗಲ್ ನ ಮುಖಕ್ಕೆ ಹಾಗೂ ಎಡಕಾಲಿಗೆ ತೆರಚಿದ ರಕ್ತಗಾಯ ವಾಗಿರುತ್ತದೆ. ಅಪಘಾತ ನಡೆಸಿದ ಕಾರಿನ ಚಾಲಕನು ಕಾರನ್ನು ನಿಲ್ಲಿಸದೆ ಹೋಗಿದ್ದು ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 113/2022,ಕಲಂ278, 337 ಐಪಿಸಿ ಮತ್ತು 134 (a)(b) ಮೋ.ವಾ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 25/12/2022 ರಂದು ಮಧ್ಯಾಹ್ನ ಸುಮಾರು 2:10 ಗಂಟೆಗೆ,  ಕುಂದಾಪುರ  ತಾಲೂಕಿನ,  ಕನ್ಯಾನ ಗ್ರಾಮದ ಕನ್ಯಾನ ಕೂಡ್ಲು ಶಾಲೆಯ ಬಳಿ, ಅಯ್ಯಪ್ಪ ಮಾಲದಾರಿಗಳ ಚಪ್ಪರದ ಎದುರುಗಡೆ ರಸ್ತೆಯಲ್ಲಿ, ಆಪಾದಿತ ಅಪೂರ್ವ  ಶೆಟ್ಟಿ  ಎಂಬವರು GA05-B-2843 ನೇ ಕಾರನ್ನು ನೇರಳಕಟ್ಟೆ ಕಡೆಯಿಂದ ತಲ್ಲೂರು ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ರಸ್ತೆ  ದಾಟಲು ನಿಂತುಕೊಂಡಿದ್ದ  ಶೀನರವರಿಗೆ ಡಿಕ್ಕಿ ಹೊಡೆದ ಪರಿಣಾಮ ಶೀನರವರ ಬಲಕಾಲಿನ ಪಾದದ ಗಂಟಿಗೆ ಮೂಳೆ ಮುರಿತವಾದ  ರಕ್ತಗಾಯ, ತಲೆಗೆ, ಹಾಗೂ ಬಲ ಕೈಗೆ ತರಚಿದ ಗಾಯವಾಗಿ ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ  ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 138/2022   ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿ ಹರೀಶ್ ಕೆ ಶೆಟ್ಟಿ ಇವರು ದಿನಾಂಕ: 25.12.2022 ರಂದು ಅವರ ಬಾಬ್ತು KA-20-MA-8233 ನೇ ನಂಬ್ರದ ಎರ್ಟಿಗಾ ಕಾರಿನಲ್ಲಿ ಚಾಲಕನಾಗಿ ದಿನೇಶ್ ಪೂಜಾರಿ ಎಂಬುವರೊಂದಿಗೆ ಅವರ ಹೆಂಡತಿ ಹಾಗೂ ಮಕ್ಕಳೊಂದಿಗೆ ಮೂಲ್ಕಿ ಬಪ್ಪನಾಡು ದೇವಸ್ಥಾನದಲ್ಲಿನ ಮದುವೆ ಕಾರ್ಯಕ್ರಮಕ್ಕೆಂದು ಹೋಗಿ, ವಾಪಾಸ್ಸು ಬರುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ರಸ್ತೆ ಕಾಮಗಾರಿ ಕೆಲಸ ನಡೆಯುತ್ತಿದ್ದು, ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ವಾಹನಗಳನ್ನು ಬೀಡು ಡಿವೈಡರ್ ಬಳಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ರಸ್ತೆಗೆ ಡೈವರ್ಶನ್ ಮಾಡಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ವಾಹನ ದಟ್ಟಣೆ ಅಧಿಕವಿದ್ದು, ಪಿರ್ಯಾದಿದಾರರ ಕಾರಿನ ಚಾಲಕ ದಿನೇಶ್ ಪೂಜಾರಿ ಕಾರನ್ನು ನಿಧಾನವಾಗಿ ಚಲಾಯಿಸಿಕೊಂಡು ಪಡುಬಿದ್ರಿ ಕಡೆಗೆ ಹೋಗುತ್ತಿರುವ ಸಮಯ ಸುಮಾರು 12:40 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿಯ ಭವ್ಯ ಪೆಟ್ರೋಲ್ ಪಂಪ್ ಬಳಿ KA-20-MA-7130 ನೇ ನಂಬ್ರದ ಸ್ವಿಫ್ಟ್ ಕಾರಿನ ಚಾಲಕ ಮೊಹಮ್ಮದ್ ಜಲಾಲುದ್ದೀನ್ ಎಂಬಾತನು ತನ್ನ ಕಾರನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರಿನ ಹಿಂಬದಿ ಡಿಕ್ಕಿ, ಬಂಪರ್ ಹಾಗೂ ಹಿಂಬದಿಯ ಗ್ಲಾಸ್ ಜಖಂಗೊಂಡಿದ್ದು, ಆರೋಪಿತನ ಕಾರಿನ ಮುಂಭಾಗದ ಬಂಪರ್‌ಕೂಡಾ ಜಖಂಗೊಂಡಿದ್ದು, ಯಾವುದೇ ಗಾಯ, ನೋವುಗಳು ಉಂಟಾಗಿರುವುದಿಲ್ಲ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 167/2022,  ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ:  ಪಿರ್ಯಾದಿ ಜೋಯಲ್ ಲಿಯೋನಾರ್ಡ್‌ಪಿಂಟೋ ಇವರು ದಿನಾಂಕ:25.12.2022 ರಂದು ಅವರ ಬಾಬ್ತು GA-05-F-2260 ನೇ ನಂಬ್ರದ ಟಾಟಾ ನೆಕ್ಸಾನ್ ಕಾರಿನಲ್ಲಿ ಅವರ ತಾಯಿ, ತಂಗಿ, ಹೆಂಡತಿಯೊಂದಿಗೆ ಮಲ್ಪೆ ಬೀಚಿಗೆ ಹೋಗಿ ವಾಪಾಸ್ಸು ಮಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಹೋಗುತ್ತಾ ಸಮಯ ಸುಮಾರು 15:00 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಕೋರ್ಟ್‌ಯಾರ್ಡ್‌ಬಳಿ ರಸ್ತೆ ಕಾಮಗಾರಿಯ ಕಾರಣ ವಾಹನ ದಟ್ಟಣೆಯಿಂದಾಗಿ ಬಸ್ಸು ಒಂದು ನಿಂತಿದ್ದು, ಪಿರ್ಯಾದಿದಾರರು ಕಾರನ್ನು ನಿಧಾನವಾಗಿ ಚಲಾಯಿಸುತ್ತಾ ನಿಲ್ಲಿಸಿದಾಗ, ಅದೇ ಮಾರ್ಗದಲ್ಲಿ ಹಿಂದಿನಿಂದ KA-18-C-2572 ನೇ ನಂಬ್ರದ ಈಚರ್ ಲಾರಿಯನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರು ಮುಂದೆ ಇದ್ದ ಬಸ್ಸಿಗೆ ಡಿಕ್ಕಿ ಹೊಡೆದಿರುತ್ತದೆ. ಅಪಘಾತ ಮಾಡಿದ ಲಾರಿಯ ಚಾಲಕ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ  ಸದ್ರಿ ಅಪಘಾತದ ಪರಿಣಾಮ ಪಿರ್ಯಾದಿದಾರರ ಕಾರಿನ ಹಿಂಬದಿ ಮತ್ತು ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರ ತಾಯಿ ಲೆನಿತಾ ಪಿಂಟೋ ರವರ ಬಲಕೈಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ನಂತರ ಗಾಯಾಳುವನ್ನು ಸುರತ್ಕಲ್‌‌ನ ಅಥರ್ವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 168/2022 ಕಲಂ 279,  338  ಐಪಿಸಿ ಮತ್ತು ಕಲಂ: 134(ಎ)(ಬಿ) ಜೊತೆಗೆ 187 ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಶಿರ್ವಾ: ಪಿರ್ಯಾದಿದಾರರಾಧ ಬಿ . ನಾಗರಾಜ್ ಭಟ್  (62) ತಂದೆ: ದಿ/ಗೋಪಾಲಕೃಷ್ಣ ಭಟ್, ವಾಸ: ಮನೆ ನಂ 2-95(11), ನೆಲ್ಲಿಕಟ್ಟೆ, ಮೂಡುಬೆಳ್ಳೆ ಬೆಳ್ಳೆ  ಗ್ರಾಮ, ಕಾಪು ತಾಲೂಕು, ಉಡುಪಿ ಇವರ ಬಾಡಿಗೆ ಮನೆಯಲ್ಲಿ  ಮೂಡುಬೆಳ್ಳೆಯ ರಸ್ತೆ ಕಾಮಗಾರಿ ಕೆಲಸ ಮಾಡುವ ಹೊರ ಜಿಲ್ಲೆಯವರಾದ ಕಲ್ಲಪ್ಪ ಮಡಿವಾಳ (37) ರವರು ಸುಮಾರು ಒಂದು ತಿಂಗಳಿನಿಂದ ವಾಸವಿರುತ್ತಾರೆ. ಕಲ್ಲಪ್ಪ ಮಡಿವಾಳರವರು ಮೂಡುಬೆಳ್ಳೆ ರಸ್ತೆ ಕಾಮಗಾರಿಯ ರೋಡ್ ರೋಲರ್ ನ ಡ್ರೈವರ್  ಆಗಿ  ಕೆಲಸ ಮಾಡಿಕೊಂಡಿದ್ದು ವಿಪರೀತ ಮದ್ಯಪಾನ ಕುಡಿತದ ಚಟವನ್ನು  ಹೊಂದಿದ್ದು, ಕಾಲುನೋವಿನಿಂದ ಬಳಲುತ್ತಿದ್ದರು. ದಿನಾಂಕ 24/12/2022 ರಂದು ರಾತ್ರಿ 11:00 ಗಂಟೆ ಸುಮಾರಿಗೆ ಊಟ ಮಾಡಿ ರೂಂ ನಲ್ಲಿ ಮಲಗಿದವರನ್ನು ಬೆಳಿಗ್ಗೆ07:00 ಗಂಟೆಗೆ ಎಬ್ಬಿಸುವಾಗ ಯಾವುದೇ ಪ್ರತಿಕ್ರಿಯೆ ಇಲ್ಲದೇ ಇದ್ದು, ಕಲ್ಲಪ್ಪ ಮಡಿವಾಳ ರವರು ವಿಪರೀತ ಕುಡಿತದ ಚಟವನ್ನು ಹೊಂದಿದ್ದು, ಅಸೌಖ್ಯದಿಂದ ಬಳಲುತ್ತಿದ್ದು  ಇದೇ ಕಾರಣದಿಂದ ದಿನಾಂಕ 24/12/2022 ರಾತ್ರಿ 11:00 ಗಂಟೆಯಿಂದ ದಿನಾಂಕ 25/12/2022 ರ ಬೆಳಿಗ್ಗೆ 07:00 ಗಂಟೆಯ ನಡುವಿನ ಅವಧಿಯಲ್ಲಿ ಮೃತಪಟ್ಟಿದ್ದು, ಮೃತರ  ಮರಣದಲ್ಲಿ ಬೇರೆ ಯಾವುದೇ  ಸಂಶಯ  ಇರುವುದಿಲ್ಲವಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಯು.ಡಿಆರ್‌ ಕ್ರಮಾಂಕ 31/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ̤
 • ಕಾರ್ಕಳ: ಪಿರ್ಯಾದಿದಾರರಾಧ ತೋಮಸ್ ಸೊರೇನ್ (32) ತಂದೆ: ಪ್ರದೀಪ್ ಸೊರೇನ್ ವಾಸ: ಅಮರ್ ಪಾಲಿ ಅಂಚೆ ದುರ್ಜನ್ಥಲ್ ಜಂಗ್ಲ್ ಗ್ರಾಮ ಭಿರ್ ಮಹಾರಾಜ್ ಪುರ್ ತಾಲೂಕು ಸೋನ ಪುರ್ ಜಿಲ್ಲೆ ಇವರ ತಮ್ಮ ಸುಜಿತ್ (23) ಇವರು ಉಡುಪಿ ಮಂಗಳೂರು ಕಡೆಗೆ ಕೂಲಿ ಕೆಲಸಕ್ಕೆಂದು  ಒಂದು ತಿಂಗಳ ಹಿಂದೆ ಬಂದಿದ್ದು,  ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಪೊಸ್ರಾಲ್ ಎಂಬಲ್ಲಿನ ಜ್ಯೋತಿ ಮಸ್ಕರೇನಸ್ ರವರ ಮನೆ ಕೆಲಸ ಮಾಡುತ್ತಿದ್ದು, ದಿನಾಂಕ 18/12/2022 ರಂದು 10:30 ಗಂಟೆಗೆ  ಸುಜಿತ್ ನು   ಸೈಕಲ್ ಸವಾರಿ ಮಾಡಿಕೊಂಡು ಸಚ್ಚರಿಪೇಟೆ ಪೆಟ್ರೋಲ್  ಪಂಪ್ ಬಳಿ ಇಳಿಜಾರು ರಸ್ತೆಯಲ್ಲಿ ಹೋಗುತ್ತಿರುವಾಗ ಸುಜಿತ್ ಸವಾರಿ ಮಾಡುತ್ತಿದ್ದ ಸೈಕಲಿನ ಹತೋಟಿ ತಪ್ಪಿ ರಸ್ತೆಗೆ ಬಿದ್ದಿದ್ದು,  ಪರಿಣಾಮ ಸುಜಿತನ ತಲೆಗೆ ತೀವ್ರ ರೀತಿಯ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ  ಮಂಗಳೂರಿನ ವೆನ್ಲಾಕ್  ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆಗೆ ಸ್ಪಂದಿಸದೆ ದಿನಾಂಕ 24/12/2022 ರಂದು ಅಪರಾಹ್ನ 03:08 ಗಂಟೆಗೆ ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಯು.ಡಿಆರ್‌ ಕ್ರಮಾಂಕ 45/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಮಾಸೆಬೈಲು: ಫಿರ್ಯಾದಿ ಸುರೇಶ ಎಂ ತಾಂಡೇಲ ಇವರ  ಅಣ್ಣ   ನಾರಾಯಣ ಮಂಜುನಾಥ ತಾಂಡೇಲ ರವರು (70) ಹೊಸಂಗಡಿ ಕೆಪಿಸಿಯಲ್ಲಿ ಮ್ಯಾನೇಜರ್‌ಆಗಿ ಕೆಲಸ ಮಾಡಿಕೊಂಡಿದ್ದು ಈಗ ನಿವೃತ್ತಿಗೊಂಡು  ಹೊಸಂಗಡಿ ಗ್ರಾಮದ ಪೊಲೀಸ್‌ಚೆಕ್‌ಪೊಸ್ಟ ಬಳಿಯ ಮನೆಯಲ್ಲಿ ವಾಸ ಮಾಡಿಕೊಂಡಿರುತ್ತಾರೆ ಈ ದಿನ ದಿನಾಂಕ 25/12/2022 ರಂದು ಬೆಳ್ಳಿಗ್ಗೆ 08:00 ಗಂಟೆಯ ಸುಮಾರಿಗೆ ಮನೆಯ ಹೊರಗೆ ರಸ್ತೆ ಕಾಮಗಾರಿ ಮಾಡುವ ಕೆಲಗಾರರೊಂದಿಗೆ ಮಾತನಾಡಿಕೊಂಡಿರುವಾಗ ಒಮ್ಮಲೆ ಕುಸಿದು ಬಿದ್ದಿದ್ದು ಅವರನ್ನು ಸ್ಥಳಿಯರು ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು  ಮೈತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣಾ ಯು.ಡಿಆರ್‌ ಕ್ರಮಾಂಕ 15/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ̤̤
 • ಅಮಾಸೆಬೈಲು: ಫಿರ್ಯಾದಿ ಜೀವನ ಕುಲಾಲ್‌ ಇವರ ಮಾವನ ಹೆಂಡತಿ  ಶೀಲಾವತಿ ಎಂಬುವವರ ಗಂಡ ಒಂದು ವರ್ಷದ ಹಿಂದೆ ಕರೋನಾದಿಂದ ಮೃತಪಟ್ಟಿದ್ದು ಇದೇ ಕಾರಣದಿಂದ  ಮಾನಸಿಕವಾಗಿ ಬಳಲುತ್ತಿದ್ದು ಕುಂದಾಪುರ ಮಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ದಿನ ದಿನಾಂಕ 25-12-2022 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ಶೀಲಾವತಿ ಯವರು ಬಾವಿಗೆ ಹಾರಿ ಅವರ ಮೃತ ದೇಹ ತೆಲುತ್ತಿರುವುದಾಗಿ ಮೃತಳ ಮಕ್ಕಳು ಫಿರ್ಯಾದಿದಾರರಿಗೆ ತಿಳಿಸಿದ್ದು.ಫಿರ್ಯಾದಿದಾರರು ಕೂಡಲೇ ಬಂದು ನೋಡಿರುತ್ತಾರೆ. ಮೃತರ ಗಂಡ ತೀರಿ ಹೋದ ಚಿಂತೆಯಿಂದ ಮಾನಸಿಕವಾಗಿ ಬಳಲುತ್ತಿದ್ದು ಮನೆಯ ಬಾವಿಗೆ ಹಾರಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣಾ ಯು.ಡಿಆರ್‌ ಕ್ರಮಾಂಕ 16/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿ ಸಚಿನ್ ಪೂಜಾರಿ  ಇವರ ತಂದೆ ಶಿವಣ್ಣ ಪೂಜಾರಿ ಪ್ರಾಯ  65 ವರ್ಷ ಇವರು ದಿನಾಂಕ 23/12/2022 ರಂದು ಸಂಜೆ 6:30 ಗಂಟೆಗೆ ಅಡಿಕೆ ಮಾರಾಟ ಮಾಡಿ ಬರುವುದಾಗಿ ಮನೆಯಿಂದ ಹೇಳಿ ಹೋಗಿದ್ದು, ಅಡಿಕೆ ಮಾರಾಟ ಮಾಡಿ ವಾಪಾಸು ಮನೆಗೆ ಬರುತ್ತಾ, ಕಾರ್ಕಳ ತಾಲೂಕು ಮುಡಾರು ಗ್ರಾಮದ ಮುದೆಲ್ ಕಡಿ ತೋಡಿನ ಸಂಕದ ಮೇಲೆ ಕುಳಿತವರು ಆಯತಪ್ಪಿ ತೋಡಿಗೆ ಬಿದ್ದು, ತೋಡಿನ ನೀರಿನಲ್ಲಿ  ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಯು.ಡಿಆರ್‌ ಕ್ರಮಾಂಕ 46/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ಮೊಹಮ್ಮದ್  ಜಲಾಲುದ್ದೀನ್, (30) ತಂದೆ:  ದಿ. ಖಾಸಿಂ, ವಾಸ: ತೆಂಕನ ಪೂಜಾರಿ ತೋಟ, ಆಯಿಷಾ ಮಂಜಿಲ್, ಕನ್ನಂಗಾರ್, ನಡ್ಸಾಲು ಗ್ರಾಮ, ಕಾಪು ತಾಲೂಕು, ಉಡುಪಿ ಇವರು ದಿನಾಂಕ 25/12/2022 ರಂದು ಅವರ KA-20-MA- 7130 ನೇ ನಂಬ್ರದ ಸ್ವಿಫ್ಟ್‌ ಕಾರಿನಲ್ಲಿ ಅವರ ಹೆಂಡತಿ ಹಾಗೂ ಮಕ್ಕಳನ್ನು ಕರೆದುಕೊಂಡು ಕಾರ್ಕಳದಲ್ಲಿನ ಕಾರ್ಯಕ್ರಮಕ್ಕೆ ಮನೆಯಿಂದ ಹೊರಟು, ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ರಸ್ತೆ ಕಾಮಗಾರಿ ಕೆಲಸ ನಡೆಯುತ್ತಿದ್ದು, ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ವಾಹನಗಳನ್ನು ಬೀಡು ಡಿವೈಡರ್ ಬಳಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ  ಸಾಗುವ ಏಕಮುಖ ರಸ್ತೆಗೆ ಡೈವರ್ಶನ್ ಮಾಡಿ ಬಿಟ್ಟಿದ್ದು, ಎರಡೂ ಕಡೆಗೆ ಸಾಗುವ ವಾಹನಗಳು ಒಂದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರಿಂದ ವಾಹನ ದಟ್ಟಣೆ ಅಧಿಕವಿದ್ದು, ಜಲಾಲುದ್ದೀನ್ ರವರು ಅದೇ ರಸ್ತೆಯಲ್ಲಿ ಪಡುಬಿದ್ರಿ ಕಡೆಗೆ ಹೋಗುತ್ತಾ ಸಮಯ ಸುಮಾರು 12:45 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿಯ ಬಸ್ತಿಕಾರ್ ಹಾರ್ಡ್‌ವೇರ್ ಬಳಿ ತಲುಪುತ್ತಿದ್ದಂತೆ, ಜಲಾಲುದ್ದೀನ್ ರವರ ಕಾರಿನ ಎದುರಿನಿಂದ ಹೋಗುತ್ತಿದ್ದ KA-20-MA-8233 ನೇ ನಂಬ್ರದ ಎರ್ಟಿಗಾ ಕಾರಿನ ಚಾಲಕ ದಿನೇಶ್ ಪೂಜಾರಿ ಎಂಬಾತನು ತನ್ನ ಕಾರನ್ನು ಒಮ್ಮೆಲೇ ನಿಲ್ಲಿಸಿದಾಗ, ಜಲಾಲುದ್ದೀನ್ ರವರ ಕಾರು ನಿಯಂತ್ರಣ ತಪ್ಪಿ  ಎದುರಿನಿಂದ ಹೋಗುತ್ತಿದ್ದ ಎರ್ಟಿಗಾ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿರುತ್ತದೆ. ಆ ಸಮಯ ಎರ್ಟಿಗಾ ಕಾರಿನ ಮಾಲಕ ಹರೀಶ್ ಎಂಬುವರು ಕಾರಿನಿಂದ ಅವರ ಚಾಲಕನೊಂದಿಗೆ ಇಳಿದು ಬಂದು ಜಲಾಲುದ್ದೀನ್ ಇವರನ್ನು ಉದ್ದೇಶಿಸಿ, ಬೈದು ಜಲಾಲುದ್ದೀನ್ ರವರ ಅಂಗಿಯನ್ನು ಹಿಡಿದು ಎಳೆದಾಡಿ, ಕೈಯಿಂದ ಕೆನ್ನೆಗೆ ಮತ್ತು ಎದೆಗೆ ಹೊಡೆದಿರುತ್ತಾರೆ. ಸದ್ರಿ ಹಲ್ಲೆಯಿಂದ ಜಲಾಲುದ್ದೀನ್ ರವರ ಕೆನ್ನೆಗೆ, ಎದೆಗೆ ಗುದ್ದಿದ ನೋವು ಮತ್ತು ಕುತ್ತಿಗೆಯ ಬಳಿ ತರಚಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಮೂಲ್ಕಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ.  ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 166/2022,  ಕಲಂ: 341, 504, 323 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 26-12-2022 10:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080