ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಶಿರ್ವ: ಪಿರ್ಯಾದಿ: ಸಂತೋಷ್ ಎಸ್ ಪೂಜಾರಿ (41) ತಂದೆ:ಸಾಧು ಪೂಜಾರಿ, ವಾಸ: ಬೈಲು ಹೌಸ್, ಮೂಡು ಮಟ್ಟಾರ್ ಮಟ್ಟಾರ್ ಪೋಸ್ಟ್ , ಶಿರ್ವ ಗ್ರಾಮ ಇವರು ತನ್ನ ಕಾರಿನಲ್ಲಿ ದಿನಾಂಕ: 25-12-2022 ರಂದು   ಸ್ವಂತ ಕೆಲಸದ ನಿಮಿತ್ತ  ಬೆಳ್ಳಣ್ ಗೆ ಹೋಗಿದ್ದು, ಕೆಲಸ ಮುಗಿಸಿ ವಾಪಾಸು ಬೆಳ್ಮಣ್‌ನಿಂದ ಶಿರ್ವ ಕಡೆಗೆ ಕಾರನ್ನು ಚಲಾಯಿಸಿಕೊಂಡು ಬರುತ್ತಿರುವಾಗ   ಎದುರಿನಲ್ಲಿ ಒಂದು ಕಾರನ್ನು ಅದರ  ಚಾಲಕನು ಶಿರ್ವ ಕಡೆಗೆ  ಚಲಾಯಿಸಿಕೊಂಡು  ಹೋಗುತ್ತಿದ್ದು ರಾತ್ರಿ ಸುಮಾರು 10:00 ಗಂಟೆ ಸಮಯಕ್ಕೆ ಶಿರ್ವ – ಕಟಪಾಡಿ ಸಾರ್ವಜನಿಕ ರಸ್ತೆಯ ಶಿರ್ವ ಗ್ರಾಮದ ಸಂಗೀತಾ ಕಾಂಪ್ಲೆಕ್ಸ್ ಬಳಿ ತಲುಪುವಾಗ ಎದುರುಗಡೆಯಿಂದ ಅಂದರೆ ಶಿರ್ವಾ ಕಡೆಯಿಂದ ಬೆಳ್ಳಣ್ ಕಡೆಗೆ ಒಂದು ಟೆಂಪೋ ಟ್ರಾವೆಲ್ಲರನ್ನು  ಅದರ  ಚಾಲಕನು ಅತೀ ವೇಗ ಹಾಗೂ ಅಜಾಗರೂ ಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ  ಎದುರಿನಿಂದ  ಹೋಗುತ್ತಿದ್ದ ಕಾರಿಗೆ ಡಿಕ್ಕಿ  ಹೊಡೆದಾಗ ಕೂಡಲೇ ಪಿರ್ಯಾದಿದಾರರು ಕಾರನ್ನು ನಿಲ್ಲಿಸಿ ಸ್ಥಳಕ್ಕೆ ಹೋಗಿ ನೋಡಲಾಗಿ  ಅಪಘಾತಗೊಂಡ ಕಾರು  ಚಾಲಕನು  ಪರಿಚಯದ ದಿನೇಶ  ಆಗಿದ್ದು ಅಪಘಾತದಿಂದ ಅವರ ತಲೆಗೆ ಹಾಗೂ ಮುಖಕ್ಕೆ ತೀವ್ರ ಸ್ವರೂಪದ  ಗಾಯವಾಗಿರುತ್ತದೆ. ಕಾರಿನ  ಎದುರು  ಸೀಟಿನಲ್ಲಿ  ಕುಳಿತ್ತಿದ್ದ ವ್ಯಕ್ತಿ  ಕೂಡಾ ಪರಿಚಯದ  ಸೂರಜ್‌ ಆಗಿದ್ದು, ಅಪಘಾತದಿಂದ   ಆತನ ಮುಖಕ್ಕೆ ಹಾಗೂ ಕಣ್ಣಿಗೆ ರಕ್ತ ಗಾಯವಾಗಿದ್ದಲ್ಲದೆ  ಹಲ್ಲು ಕೂಡ ಅಲುಗಾಡುತ್ತಿತ್ತು. ಗಾಯಗೊಂಡವರನ್ನು ಉಪಚರಿಸಿ, ದಿನೇಶ್‌‌ನು ಚಲಾಯಿಸುತ್ತಿದ್ದ  ಕಾರಿನ ನಂಬರ್‌ ನೋಡಲಾಗಿ KA05 MF 3110 ನೇ ನೊಂದಣಿ ಸಂಖ್ಯೆಯ ಮಾರುತಿ ಕಂಪೆನಿ ಸ್ವಿಪ್ಟ್‌ಕಾರು ಆಗಿದ್ದು ಜಖಂಗೊಂಡಿರುತ್ತದೆ. ಅಪಘಾತಪಡಿಸಿದ ಟೆಂಪೋ ಟ್ರಾವೆಲ್ಲರ ನಂಬ್ರ ನೋಡಲಾಗಿ KA05 AH 3308 ಆಗಿದ್ದು ಜಖಂಗೊಂಡಿರುತ್ತದೆ. ಟೆಂಪೋ ಟ್ರಾವೆಲ್ಲರನ ಚಾಲಕನ ಹೆಸರು ಕೇಳಲಾಗಿ ಪ್ರಮೋದ್‌ಎಸ್‌ಪಿ ಎಂದು ತಿಳಿಸಿದರು.  ಈ ಅಪಘಾತಕ್ಕೆ KA05 AH 3308 ನೇ  ನೊಂದಣಿ ಸಂಖ್ಯೆಯ  ಟೆಂಪೋ ಟ್ರಾವೆಲ್ಲರಿನ  ಚಾಲಕ ಪ್ರಮೋದ್ ಎಸ್ ಪಿ  ರವರ  ಅತೀ  ವೇಗ  ಮತ್ತು  ಅಜಾಗರೂಕತೆಯು ಕಾರಣವಾಗಿರುತ್ತದೆ. ಈ  ಬಗ್ಗೆ ಶಿರ್ವ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ  93/22 ಕಲಂ 279,  338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾರ್ಕಳ: ದಿನಾಂಕ 25/12/2022 ರಂದು ಮದ್ಯಾಹ್ನ 4:45 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಸರಕಾರಿ ಆಸ್ಪತ್ರೆಯ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ರಸ್ತೆಯಲ್ಲಿ  ಪಿರ್ಯಾದಿ ಜ್ಯೋತಿ  ಪ್ರಾಯ: 32 ವರ್ಷ ತಂದೆ: ಮಣಿಕಂಠ  ವಾಸ:  ಮಾವಿನಕಟ್ಟೆ ನಂದಳಿಕೆ ಗ್ರಾಮ ಕಾರ್ಕಳ ತಾಲೂಕು ಇವರ ಗಂಡ ಮಣಿಕಂಠರವರು  ನಡೆದುಕೊಂಡು ಹೋಗುತ್ತಿರುವಾಗ KA20MC4401 ನೇ ನಂಬ್ರದ ಕಾರು  ಚಾಲಕ ಅವಿನಾಶ್ ಮೂಲ್ಯ  ಎಂಬಾತನು ತನ್ನ ಕಾರನ್ನು ಕಾರ್ಕಳ ಕಡೆಯಿಂದ  ಬೆಳ್ಮಣ್ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು  ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ಮಣಿಕಂಠನಿಗೆ ಡಿಕ್ಕಿ ಹೊಡೆದ ಪರಿಣಾಮ ಮಣಿಕಂಠವರ  ಬಲಕೈ ಮತ್ತು ಎರಡು ಕಾಲುಗಳಿಗೆ ಪೆಟ್ಟಾಗಿದ್ದು, ನಿಟ್ಟೆ ಗಾಜ್ರಿಯಾ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದು,   ಅಲ್ಲದೇ  ಕಾರಿನಲ್ಲಿದ್ದ ಬಾಲು ಮೂಲ್ಯ ಅವರಿಗೂ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 148/2022 ಕಲಂ: 279, 337,ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

 • ಕಾರ್ಕಳ: ಪಿರ್ಯಾದಿ:ಶ್ರೀ ಸುಂದರ ಗೌಡ ಪ್ರಾಯ: 45 ವರ್ಷ ತಂದೆ: ದಿ: ಮೋಂಟ ಗೌಡ ವಾಸ: ಶಾಂತಿಪಲ್ಕೆ ಹೌಸ್, ನೂರಾಳ್ ಬೆಟ್ಟು ಅಂಚೆ ನೂರಾಳ್ ಬೆಟ್ಟು ಗ್ರಾಮ ಹಾಗೂ ಅವರ ತಮ್ಮ ಕೃಷ್ಣರವರು ಹೊಸದಾಗಿ ನಿರ್ಮಾಣ ಮಾಡುತ್ತಿರುವ ಮನೆಯ ನೆರೆಕೆರೆಯ ವಾಸಿ ಆರೋಪಿ ಸುಬ್ಬಯ್ಯ ಗೌಡ ಈತನ ಸ್ನೇಹಿತೆ ಶ್ರೀಮತಿ ಸುಜಾತಾ ಎಂಬವರೊಂದಿಗೆ ಮಾತನಾಡಿದ ಕೋಪದಿಂದ ಸುಬ್ಬಯ್ಯ ಗೌಡ ಈತನು ಈ ದಿನ ದಿನಾಂಕ: 26/12/2022 ರಮದು ಬೆಳಿಗ್ಗೆ 08:30 ಗಂಟೆಗೆ ಕಾರ್ಕಳ ತಾಲೂಕು ನೂರಾಳ್ ಬೆಟ್ಟು ಗ್ರಾಮದ ಶೇಡಿಮನೆ ಎಂಬಲ್ಲಿ ಪಿರ್ಯಾದಿ ಸುಂದರ ರವರು ತನ್ನ ತಮ್ಮ ಕೃಷ್ಣನೊಂದಿಗೆ ತನ್ನ ಬಾಬ್ತು MH12-HM-3230 ನೇ ನಂಬ್ರದ ಬೈಕಿನಲ್ಲಿ ಹೋಗುತ್ತಿರುವಾಗ ಆರೋಪಿ ಸುಬ್ಯಯ್ಯ ತನ್ನ ಕೆ,ಎ-20-ಇ,ಎಮ್-1677 ನೇದರಲ್ಲಿ ಬಂದು ಪಿರ್ಯಾದಿ ಹಾಗೂ ಅವರ ತಮ್ಮ ಕೃಷ್ಣನ್ನು ತಡೆದು ನಿಲ್ಲಿಸಿ “ನನ್ನ ಸ್ನೇಹಿತೆ ಸುಜಾತಾನ ಬಳಿ ಯಾಕೆ ಮಾತನಾಡುವುದು ಇನ್ನು ಮುಂದೆ ನೀವಿಬ್ಬರು ಅವಳ ಜೊತೆ ಮಾತನಾಡಿದರೆ ನಿಮ್ಮನ್ನು ಕೊಂದು ಹಾಕುತ್ತೇನೆ” ಎಂದು ಅವಾಚ್ಯ ಶಬ್ದಗಳಿಂದ ಬೈದು ರಸ್ತೆ ಬದಿಯಲ್ಲಿ ಇದ್ದ ಒಂದು ಕಲ್ಲನ್ನು ತೆಗೆದುಕೊಂಡು ಆ ಕಲ್ಲನ್ನು ಆತನ ಶಾಲ್ ನಲ್ಲಿ ಸುತ್ತಿ ಪಿರ್ಯಾದುದಾರರ  ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯಗೊಳಿಸಿದ್ದು ಅಲ್ಲದೇ ತಪ್ಪಿಸಲು ಹೋದ ಪಿರ್ಯಾದುದಾರರ ತಮ್ಮ ಕೃಷ್ಣ ರವರ ಬಲಕೈ ಮೊಣಗಂಟಿನ ಬಳಿ ಕಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಗಾಯಳುಗಳು ಕಾರ್ಕಳ ಸರಕಾರಿ ಆಸ್ಪತ್ರೆಗೆ ಹೋಗಿ  ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 149/2022  ಕಲಂ : 341,504,506,324 ಐ,ಪಿ,ಸಿ, ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕಾಪು: ಪಿರ್ಯಾದಿ ಪ್ರಶಾಂತ್ ಕೆ ಕೋಟ್ಯಾನ್ (41) ತಂದೆ: ಕೃಷ್ಣ ಡಿ ಪೂಜಾರಿ ವಾಸ: ಗಣೇಶ ನಗರ ಉದ್ಯಾವರ ಉಡುಪಿ ತಾಲೂಕು ಇವರ ತಂದೆ: ಕೃಷ್ಣ ಡಿ ಪೂಜಾರಿ (71)‌ರವರು 20 ವರ್ಷಗಳ ಹಿಂದೆ ತನ್ನ ಹೆಂಡತಿ ಮತ್ತು ಮಕ್ಕಳಿಂದ  ಬೇರ್ಪಟ್ಟು ಕೋಟೆ ಗ್ರಾಮದ ಖಂಡಿಗೆಯ ಅವರ ಮನೆಯಲ್ಲಿ ವಾಸಮಾಡಿಕೊಂಡಿದ್ದರು. ಪಿರ್ಯಾದಿದಾರರು ತುಮಕೂರಿನಲ್ಲಿ ವಾಸಮಾಡಿಕೊಂಡಿದ್ದು ನಿನ್ನೆ ದಿನ ದಿನಾಂಕ 25/12/2022 ರಂದು ರಾತ್ರಿ ಸುಮಾರು 11:30 ಗಂಟೆಗೆ ಪಿರ್ಯಾದಿದಾರರ ತಂದೆಯ ಅಳಿಯನಾದ ಜಗನ್ನಾಥ ಕೋಟೆಯವರು ರಾತ್ರಿ ಮೊಬೈಲ್‌ಗೆ ಕರೆ ಮಾಡಿ ನಿನ್ನ ತಂದೆಯವರು ರಾತ್ರಿ ಸುಮಾರು 9:30 ಗಂಟೆ ಸಮಯಕ್ಕೆ ಮಟ್ಟುವಿನ ಕುಂದರ ರಸ್ತೆಯಲ್ಲಿ ಬಿದ್ದಿದ್ದರವರನ್ನು ಗೋಪಾಲಕೃಷ್ಣ ರಾವ್ ಎಂಬವರು ಉಡುಪಿ ಜಿಲ್ಲಾ  ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರೀಕ್ಷಿಸಿ ರಾತ್ರಿ10:15 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಿರುವುದಾಗಿ ತಿಳಿಸಿದ್ದು  ಅದರಂತೆ  ಪಿರ್ಯಾದಿದಾರರು ತನ್ನ ತಂಗಿಯೊಂದಿಗೆ ಬಂದಿರುತ್ತಾರೆ. ಪಿರ್ಯಾದಿದಾರರ ತಂದೆ ಕೃಷ್ಣ ಡಿ ಪೂಜಾರಿರವರು ವಿಪರೀತ ಕುಡಿತದ ಚಟವನ್ನು ಹೊಂದಿದ್ದು  ದಿನಾಂಕ 25/12/2022 ರಂದು ರಾತ್ರಿ ವಿಪರೀತ ಶರಾಬು ಕುಡಿದು ಮನೆಯ ಕಡೆ ನಡೆದುಕೊಂಡು ಹೋಗುವಾಗ ರಸ್ತೆಯಲ್ಲಿ ಬಿದ್ದು ಮೃತಪಟ್ಟಿರುವದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಯು.ಡಿ.ಆರ್. ನಂಬ್ರ 39/2022 ಕಲಂ 174 ಸಿಆರ್‌‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.


ಇತ್ತೀಚಿನ ನವೀಕರಣ​ : 26-12-2022 06:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080