ಅಭಿಪ್ರಾಯ / ಸಲಹೆಗಳು

  ಅಪಘಾತ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಸದಾನಂದ ಕರಿಯ ಮೂಲ್ಯ , ಪ್ರಾಯ: 51 ವರ್ಷ, ತಂದೆ: ಕರಿಯ ಮೂಲ್ಯ , ವಾಸ: ಸಾಯಿ ಸುಗಂದ ನಡು ಅಲೆವೂರು ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕು, ಉಡುಪಿ ಜಿಲ್ಲೆ ಇವರ ಅತ್ತೆ ನಳೀನಾಕ್ಷಿ ರವರು ದಿನಾಂಕ 24/12/2021 ರಂದು ತನ್ನಮನೆಯಿಂದ ಪಡುಬೆಳ್ಳೆಯ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೊಜನೆಯ ಬಗ್ಗೆ ಹಣ ಕಟ್ಟಲು ತನ್ನ ಅಳಿಯ ರಂಜಿತರವರೊಂದಿಗೆ KA-19- Y -3461 ನೇದರಲ್ಲಿ ಹಿಂಬದಿ ಸವಾರಳಾಗಿ ಹೋಗಿತ್ತಿರುವ ಸಮಯ ಬೆಳಿಗ್ಗೆ 10:30 ಗಂಟೆಗೆ ಪಡುಬೆಳ್ಳೆ ತಿರುವು ತಲುಪುವಾಗ ರಂಜಿತ್‌ ರವರು KA-19- Y-3461 ನೇಯ ದ್ವಿಚಕ್ರ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಹೊಂಡಕ್ಕೆ ಬಿದ್ದ ಪರಿಣಾಮ ಪಿರ್ಯಾದಿದಾರರ ಅತ್ತೆಯ ತಲೆಗೆ ಒಳ ಜಖಂ ಆಗಿರತ್ತದೆ. KA-19- Y- 3461 ನೇ ದ್ವಿಚಕ್ರ ಸವಾರ ರಂಜಿತ್ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 78/2021, ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ : ಪಿರ್ಯಾದಿದಾರರಾದ ಜೆಸಿಂತಾ ಪಿರೇರಾ (58), ಗಂಡ: ಲೋರೆನ್ಸ್ ಪಿರೇರಾ , ವಾಸ: ಕುದ್ರೆಬೆಟ್ಟು ಮನೆ ಸೂಡ ಗ್ರಾಮ, ಕಾರ್ಕಳ ತಾಲೂಕು ಇವರ ಮಗ ಜೋನ್ಸನ್ ಪಿರೇರಾ (23) ಇವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಇದೇ ಕಾರಣಕ್ಕೆ ಜೀವನದಲ್ಲಿ ನೊಂದು ದಿನಾಂಕ 18/12/2021 ರಂದು ರಾತ್ರಿ 11:00 ಗಂಟೆಗೆ ಮಲ್ಲಿಗೆ ಗಿಡಕ್ಕೆ ಹಾಕುವ ಕೀಟನಾಶಕವನ್ನು ಸೇವಿಸಿದವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಟಿ ಎಂ ಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಒಳರೋಗಿಯಾಗಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 25/12/2021 ರಂದು 13:30 ಗಂಟೆಗೆ ಮೃತ ಪಟ್ಟಿರುವುದಾಗಿದೆ ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 50/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ಸುರೇಶ್ ಶೆಟ್ಟಿ (48) ,ತಂದೆ: ದಿ|| ಮಹಾಬಲ ಶೆಟ್ಟಿ, ವಾಸ: ದೇವಿ ಆನಂದ, ದರ್ಶ ಗ್ರಾನೈಟ್ ಬಳಿ , ಶೆಡಿಗುಡ್ಡೆ, ಅಂಚೆ ಮತ್ತು ಗ್ರಾಮ ಉಡುಪಿ ತಾಲೂಕು ಇವರ ತಾಯಿ ಸುಮಾರು 75 ವರ್ಷದ ಗಿರಿಜಾ ಶೆಡ್ತಿ ಎಂಬುವವರಿಗೆ ಹಲವಾರು ವರ್ಷದಿಂದ ಮಾನಸಿಕ ಅಸ್ವಸ್ಥತೆಯ ಕಾಯಿಲೆ ಇದ್ದು ಈ ಬಗ್ಗೆ ಚಿಕಿತ್ಸೆ ಮಾಡಿದರು ಸಂಪೂರ್ಣ ಗುಣಮುಖರಾಗಿರುವುದಿಲ್ಲ ಕಳೆದ 10-15 ವರ್ಷಗಳಿಂದ ರಕ್ತದೊತ್ತಡ ಕಾಯಿಲೆ ಇದ್ದು ಅದಕ್ಕೂ ಚಿಕಿತ್ಸೆ ಮಾಡಿಸುತ್ತಿದ್ದು , ಕಳೆದ ಒಂದುವರೆ ತಿಂಗಳ ಹಿಂದೆ ಅನಾರೋಗ್ಯದ ನಿಮಿತ್ತಾ ಅದರ್ಶ ಅಸ್ಪತ್ರೆಯಲ್ಲಿ ಒಳರೋಗಿಯಾಗಿದಾಖಲಾಗಿದ್ದು ನಂತರ ಗುಣಮುಖರಾಗಿ ಮನೆಗೆ ಬಂದಿದ್ದು, ಅವರು ತನ್ನ ಅನಾರೋಗ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 25/12/2021 ರಂದು ಮನೆಯಲ್ಲಿಯಾರು ಇಲ್ಲದ ವೇಳೆ ಮದ್ಯಾಹ್ನ 12:00 ಗಂಟೆಯಿಂದ 13: 30 ಗಂಟೆ ಮಧ್ಯಾವದಿಯಲ್ಲಿ ಮನೆಯ ಬಾವಿಗೆ ಹಾರಿಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 30/2021 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಂಕರನಾರಾಯಣ: ದಿನಾಂಕ: 24/12/2021 ರಂದು 22:00 ಗಂಟೆಗೆ ಆಪಾದಿತ ಥಾಮಸ್ ವರಾಹಿ ರಸ್ತೆ ಸಿದ್ದಾಪುರ ಗ್ರಾಮ ಇವರು ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಜನತಾ ಕಾಲೋನಿ ವಾರಾಹಿ ರಸ್ತೆ ಯ ಪಿರ್ಯಾದಿದರರಾದ ಚಂದ್ರ ಪೂಜಾರಿ (50), ತಂದೆ: ಕುಷ್ಠ ಪೂಜಾರಿ, ವಾಸ: ಜನತಾ ಕಾಲೋನಿ ವಾರಾಹಿ ರಸ್ತೆ ಸಿದ್ಧಾಪುರ ಗ್ರಾಮ ಕುಂದಾಪುರ ತಾಲೂಕು ಇವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ನಂತರ ಮನೆಯ ಬಾಗಿಲು ದೂಡಿ ಒಳಗೆ ಹೋಗಿ ಅವಾಚ್ಯ ಶಬ್ದಗಳಿಂದ ಬೈದು ಹೊರಗೆ ಬಾ ಎಂದು ಕರೆದಾಗ ಮಾತಿಗೆ ಮಾತು ಬೆಳೆದು ಪಿರ್ಯಾದಿದಾರರ ಮಗ ಕೃಷ್ಣ ಪೂಜಾರಿ ಆಪಾದಿತನನ್ನು ಕರೆದುಕೊಂಡು ಗೇಟಿನ ಹತ್ತಿರ ಹೋಗುತ್ತೀರುವಾಗ ಅಯತಪ್ಪಿ ನೆಲಕ್ಕೆ ಬಿದ್ದಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 114/2021 ಕಲಂ: 447,448, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಶಿವ ಪೂಜಾರಿ (61), ತಂದೆ:ನಾಗ ಪೂಜಾರಿ, ವಾಸ: ಹಾಡಿಮನೆ ಹಕ್ಲಾಡಿಗುಡ್ಡೆ ಹಕ್ಲಾಡಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 24/12/2021 ರಂದು 20:00 ಗಂಟೆಗೆ ಹರ್ಕೂರು ಗ್ರಾಮದ ಕಟ್ಟಿನಮಕ್ಕಿ ಎಂಬಲ್ಲಿ ಆಲೂರು-ಮುಳ್ಳಿಕಟ್ಟೆ ರಸ್ತೆಯಲ್ಲಿ ತನ್ನ KA-20- C-7361 ನಂಬ್ರದ ಆಟೋ ರಿಕ್ಷಾವನ್ನು ಚಲಾಯಿಸಿಕೊಂಡು ಬರುವಾಗ ಕಟ್ಟಿನಮಕ್ಕಿ ಎಂಬಲ್ಲಿ 2 ಮೋಟಾರ್‌ಸೈಕಲ್ ಅನ್ನು 4 ಜನರು ರಸ್ತೆ ಬದಿಯಲ್ಲಿ ನಿಲ್ಲಿಸಿಕೊಂಡು ಪಿರ್ಯಾದಿದಾರರ ರಿಕ್ಷಾವನ್ನು ನಿಲ್ಲಿಸುವಂತೆ ಸೂಚಿಸಿದಾಗ ಪಿರ್ಯಾದಿದಾರರು ರಿಕ್ಷಾವನ್ನು ನಿಲ್ಲಿಸಿದಾಗ ಅವರಲ್ಲಿ ಒಬ್ಬನು ಬೈಕ್‌ ನಲ್ಲಿ ಪೆಟ್ರೋಲ್ ಖಾಲಿಯಾಗಿದೆ ಮುಳ್ಳಿಕಟ್ಟೆಗೆ ಹೋಗಿ ಪೆಟ್ರೋಲ್‌ ತರುವ ಎಂದು ಹೇಳಿ ರಿಕ್ಷಾದಲ್ಲಿ ಕುಳಿತುಕೊಂಡಿದ್ದು ಪಿರ್ಯಾದಿದಾರರು ರಿಕ್ಷಾವನ್ನು ಚಲಾಯಿಸಿಕೊಂಡು ಸ್ವಲ್ಪ ಮುಂದೆ ಬಂದಾಗ ರಿಕ್ಷಾದಲ್ಲಿ ಕುಳಿತಿದ್ದ ವ್ಯಕ್ತಿಯು ರಿಕ್ಷಾ ಚಲಾಯಿಸುತ್ತಿದ್ದ ಪಿರ್ಯಾದಿದಾರರ ಎರಡೂ ಕೈಗಳನ್ನು ಹಿಂದಕ್ಕೆ ಎಳೆದು ಗಟ್ಟಿಯಾಗಿ ಹಿಡಿದುಕೊಂಡು ರಿಕ್ಷಾವನ್ನು ನಿಲ್ಲಿಸಿದನು. ಆಗ ಬೈಕ್‌ನಲ್ಲಿದ್ದ 3 ಜನರ ರಿಕ್ಷಾದ ಬಳಿಗೆ ಬಂದು ಪಿರ್ಯಾದಿದಾರರನ್ನು ಗಟ್ಟಿಯಾಗಿ ಹಿಡಿದುಕೊಂಡು ಕೈಯಿಂದ ಗುದ್ದಿ ಅವರ ಕುತ್ತಿಗೆಯಲ್ಲಿದ್ದ 52,000/- ರೂಪಾಯಿ ಮೌಲ್ಯದ 2 ½ ಪವನ್ (20 ಗ್ರಾಂ) ತೂಕದ ಚಿನ್ನದ ಸರವನ್ನು ಬಲಾತ್ಕಾರವಾಗಿ ಎಳೆದು ತೆಗೆದು ಸುಲಿಗೆ ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 119/2021 , ಕಲಂ: 392 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಸತೀಶ ಪ್ರಾಯ (42) ,ತಂದೆ:ಮಹಾಬಲ ಪೂಜಾರಿ, ವಾಸ:ಸಾಯಿಕೃಪಾ ನಿಲಯ ಮೂಡಾರು ಗ್ರಾಮ,ಭಜಗೋಳಿ ಅಂಚೆ, ಕಾರ್ಕಳ ತಾಲೂಕು ಉಡುಪಿ ಇವರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕೆಎಸ್‌ಆರ್‌ಟಿಸಿ ಬಸ್‌ ಸ್ಟ್ಯಾಂಡ್‌ ಬಳಿ ಇರುವ ಶಾಂತಿ ಸಾಗರ್‌ ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವುದಾಗಿದೆ. ಅತಿಶ್ ಮತ್ತು ರಜಾಕ್‌ರವರು ಕೂಡಾ ಶಾಂತಿ ಸಾಗರ್‌ ಹೋಟೆಲ್‌ನ ಕೆಲಸಗಾರರಾಗಿದ್ದು, ದಿನಾಂಕ: 25/12/2021 ರಂದು ರಾತ್ರಿ 10:45 ಗಂಟೆಗೆ ಅತಿಶ್ ಮತ್ತು ರಜಾಕ್‌ ಎಂಬುವವರು ದೂಡಾಡಿಕೊಂಡು ಗಲಾಟೆ ಮಾಡಿಕೊಳ್ಳುತ್ತಿದ್ದರು. ಅತಿಶ್‌ನಿಗೆ ರಜಾಕ್‌ ತರಕಾರಿ ಬಕೆಟ್‌ನಿಂದ ಹೊಡೆದು ನಿನ್ನನ್ನುಸಾಯಿಸಿ ಬಿಡುತ್ತೇನೆ ಎಂದು ಕೊಲೆ ಮಾಡುವ ಉದ್ದೇಶದಿಂದ ಚೂಪಾದ ಚೂರಿಯಿಂದ ಹೊಟ್ಟೆಯ ಭಾಗಕ್ಕೆ ತಿವಿದು ರಕ್ತಗಾಯ ಮಾಡಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವುದಾಗಿದೆ. ಹಲ್ಲೆಯ ಪರಿಣಾಮ ಅತೀಶ್‌ನಿಗೆ ಹೊಟ್ಟೆಗೆ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 192/2021ಕಲಂ 307 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 26-12-2021 11:08 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080