ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಸುರೇಶ್ ಶೆಟ್ಟಿ (49), ತಂದೆ: ದಿ. ಮಂಜುನಾಥ ಶೆಟ್ಟಿ, ವಾಸ: ಶ್ರೀ ದೈವಾನುಗ್ರಹ ಪಢುಮನೆ, ನಾಗಬನ ಹತ್ತಿರ, ಪರೀಕ, ಆತ್ರಾಡಿ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ  ಇವರು ಹಾಗೂ ಅವರ ಹೆಂಡತಿ ಆರತಿ ದಿನಾಂಕ 23/11/2022 ರಂದು ಕೆಲಸ ಮುಗಿಸಿಕೊಂಡು ಆರತಿ ಯವರ KA-20-EY-5681 ನೇ ಸುಜುಕಿ ಆಕ್ಸಿಸ್ ಮೋಟಾರ್ ಸೈಕಲ್ ನಲ್ಲಿ ಆರತಿಯವರನ್ನು ಹಿಂಬದಿಯ ಸವಾರಳನ್ನಾಗಿ ಕುಳಿರಿಸಿಕೊಂಡು ಧಶರಥನಗರ-ಬಡಗಬೆಟ್ಟು ರಸ್ತೆಯಲ್ಲಿ ಮನೆಗೆ ಹೊರಟಿದ್ದು,  04:45 ಗಂಟೆಗೆ ದಶರಥನಗರ 9 ನೇ ಕ್ರಾಸ್ ತಲುಪುವಾಗ ಆರೋಪಿ ಫಯಾಜ್ ತನ್ನ  KA-20-EY-7251 ನೇ ಮೋಟಾರ್ ಸೈಕಲ್ ನ್ನು ದಶರಥನಗರ ಕಡೆಯಿಂದ ಬಡಗುಬೆಟ್ಟು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ನ್ನು ಬಲಗಡೆಯಿಂದ ಹಿಂದಿಕ್ಕಿ ಒಮ್ಮೆಲೆ  ಎಡಕ್ಕೆ ಚಲಾಯಿಸಿದಾಗ  ಪಿರ್ಯಾದಿದಾರರ ಮೋಟಾರ್ ಸೈಕಲ್ ಆಪಾಧಿತ ಫಯಾಜ್ ನ  ಮೋಟಾರ್ ಸೈಕಲ್ ನ ಹಿಂಬದಿಗೆ ತಾಗಿದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಹೆಂಡತಿ ಆರತಿ  ಸಮತೋಲನ ತಪ್ಪಿ ಮೋಟಾರ್ ಸೈಕಲ್ ಸಮೇತ್ ರಸ್ತೆಗೆ ಬಿದ್ದಿದ್ದು  ಪಿರ್ಯಾದಿದಾರರಿಗೆ ಎಡಕಾಳಿನ ಮೊಣಗಂಟಿನ ಕೆಳಭಾಗದ ಮೂಳೆಗೆ ಬಳ ಜಖಂ ಉಂಟಾಗಿದ್ದು, ಆರತಿಯವರಿಗೆ ಎಡಕೈಯ ಮಣಿಗಂಟಿನ ಬಳಿ ಮೂಳೆಗೆ ಒಳ ಜಖಂ ಗಾಯ ಉಂಟಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 205/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಕಳವು ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ದೀಪಕ್ ರಾಮದಾಸ್ ನಾಯಕ್ (34), ತಂದೆ:ಗುಜ್ಜಾಡಿ ರಾಮದಾಸ ನಾಯಕ್, ವಾಸ: ಸ್ವರ್ಣಗಂಗಾ ಗುಜ್ಜಾಡಿ ಕಂಪೌಂಡ್ ಕೆಳಾರ್ಕಳಬೆಟ್ಟು ಇವರು  ಕೆಳಾರ್ಕಳಬೆಟ್ಟುವಿನಲ್ಲಿರುವ  ಸ್ವರ್ಣೊದ್ಯಮ ಆಭರಣ ತಯಾರಿಕಾ  ಸಂಸ್ಥೆಯ ಉಸ್ತುವಾರಿ  ನೋಡಿಕೊಳ್ಳುತ್ತಿದ್ದು,  ಆಭರಣಾ ಸಂಸ್ಥೆಯವರು  ಇತರ ಚಿನ್ನದ ಸಂಸ್ಥೆಗಳಿಗೆ   ಚಿನ್ನದ ಆಭರಣವನ್ನು ಮಾಡಿಕೊಡುವ ಕೆಲಸ ಮಾಡಿಕೊಂಡಿರುತ್ತಾರೆ.  ದಿನಾಂಕ 25/11/2022 ಬೆಳಿಗ್ಗೆ 8:55 ಗಂಟೆಗೆ  ಸ್ವರ್ಣೊದ್ಯಮ ಆಭರಣಾ ಸಂಸ್ಥೆಯ ವರ್ಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮಂಗಲ್ ದೀಪ್  ಮಂಡಲ್ ಎಂಬುವವರು ಕರೆ ಮಾಡಿ  ಆಭರಣ ತಯಾರಿಕ ಘಟಕಕ್ಕೆ  ಯಾರೋ ಬೀಗವನ್ನು  ಒಡೆದು ಒಳಪ್ರವೇಶಿಸಿ ಆಭರಣ ತಯಾರಿಸಲು ಇಟ್ಟಿದ್ದ  ಚಿನ್ನ ಹಾಗೂ ಅರ್ಧ ತಯಾರಿಸಿದ ನೆಕ್ಲೆಸ್  ಹಾಗೂ ಮೇಣದಲ್ಲಿ ಇರಿಸಿದ ಚಿನ್ನವನ್ನು  ದಿನಾಂಕ 25/11/2022 ರ ಬೆಳಗಿನ ಜಾವ 1:20 ಗಂಟೆಯಿಂದ 8:55 ಗಂಟೆಯ ಮಧ್ಯಾವಧಿಯಲ್ಲಿ  ಕಳವು ಮಾಡಿಕೊಂಡು ಹೋಗಿರುವುದಾಗಿ ವಿಷಯ ತಿಳಿಸಿದಂತೆ  ಪಿರ್ಯಾದಿದಾರರು ಆಭರಣ ಘಟಕಕ್ಕೆ ಹೋಗಿ ಪರಿಶೀಲಿಸಿದ್ದು 126 ಗ್ರಾಂ  ಚಿನ್ನವನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಒಟ್ಟು ಚಿನ್ನದ ಮೌಲ್ಯ 6,30,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 104/2022 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ನರಸಿಂಹ ಪೂಜಾರಿ(55), ತಂದೆ: ದಿ. ಲಿಂಗ ಪೂಜಾರಿ, ವಾಸ: ಕೊಠಾರಿತ್ಲುಮನೆ, ಮಡಿಕಲ್ , ಉಪ್ಪುಂದ ಗ್ರಾಮ ಬೈಂದೂರು ತಾಲೂಕು ಇವರ ತಂಗಿ ಪಾರ್ವತಿ (44)ರವರಿಗೆ  ಮದುವೆಯಾಗಿ 15 ವರ್ಷವಾಗಿದ್ದು ಅವರಿಗೆ 13 ವರ್ಷದ ಮಗನಿರುತ್ತಾನೆ,  ಪಾರ್ವತಿಯವರು ಸುಮಾರು 13 ವರ್ಷಗಳಿಂದ  ಮಾನಸಿಕ ಖಿನ್ನತೆಯಿಂದ  ಬಳಲುತ್ತಿದ್ದವರು  ಕುಂದಾಪುರ  ಮಾತ ಆಸ್ಪತ್ರೆ ಮತ್ತು ಬೆಂಗಳೂರು ಸ್ಪಂದನ ನರ್ಸಿಂಗ  ಹೊಂನಲ್ಲಿ ಚಿಕಿತ್ಸೆ  ಪಡೆಯುತ್ತಿದ್ದರು ಆದರೂ ಕೂಡಾ ಅವರ ಮಾನಸಿಕ ಖಾಯಿಲೆ ಗುಣಮುಖವಾಗದೇ ಈ ಹಿಂದೆ  2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಮನೆಯವರು ನೋಡಿ ಬದುಕಿಸಿರುತ್ತಾರೆ.  ದಿನಾಂಕ 25/11/2022 ರಂದು ಸಂಜೆ 5:30 ಗಂಟೆಗೆ  ಪಿರ್ಯಾದಿದಾರರಿಗೆ ಪಾರ್ವತಿರವರು ಕುಡಿಯಲು ಟೀ ಮಾಡಿಕೊಟ್ಟಿದ್ದು ಪಿರ್ಯಾದಿದಾರರು ಟೀ ಕುಡಿದು ಅಲ್ಲೇ ಸಮೀಪ ಅಂಗಡಿ ಕಡೆಗೆಹೋಗಿ  ವಾಪಾಸ್ಸು 6:00 ಗಂಟೆಗೆ ಮನೆಗೆ ಬಂದಾಗ  ಮನೆಯಲ್ಲಿ ತಂಗಿ ಪಾರ್ವತಿ ಕಾಣದೆ ಕರೆದು ಹುಡುಕುತ್ತಾ ಅಂಗಳದ ಬದಿಯ ಬಾವಿಯಲ್ಲಿ ಇಣುಕಿ ನೋಡಿದಾಗ  ಪಾರ್ವತಿ  ಬಾವಿಯ ನೀರಿನಲ್ಲಿ ಮುಳುಗಿ ಎಳುವುದನ್ನು ನೋಡಿ ಬೊಬ್ಬೆ ಹಾಕಿ ನೆರೆಕೆರೆಯ ಬಾಲಕೃಷ್ಣ ಖಾರ್ವಿ ಹಾಗೂ ಇತರರ  ಸಹಾಯದಿಂದ ಪಾರ್ವತಿಯನ್ನು ಮೇಲಕ್ಕೆ ಎತ್ತಿ ಮನೆಯ ಮುಂಭಾಗ ಮಲಗಿಸಿ ನೋಡಿದ್ದು ಪಾರ್ವತಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 61/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣದ ದಾಖಲಾಗಿರುತ್ತದೆ .
  • ಪಡುಬಿದ್ರಿ: ದಿನಾಂಕ 25/11/2022 ರಂದು ರಾತ್ರಿ ಪಾದೆಬೆಟ್ಟು ಗ್ರಾಮದ  ಉಳ್ಳೂರು  ರೈಲ್ವೇ ಲೆವೆಲ್ ಕ್ರಾಸಿಂಗ್ ಗೇಟ್ ನ ಗೇಟ್ ಮನ್ ಆದ ಅನೀಲ್ ಎಂಬುವವರು ಪಡುಬಿದ್ರಿ  ರೈಲ್ವೇ ಸ್ಟೇಷನ್ ಮಾಸ್ಟರ್ ಆದ  ಪಿರ್ಯಾದಿದಾರರಾದ ಇಂದುಕಲಾಧರನ್ (59), ತಂದೆ: ಕೆ.ಕೆ. ಶಂಕರ  ಪಿಳ್ಳೈ, ವಾಸ: ಆಶಾ ಭವನ, ಪುನ್ನೂರು, ಇಡುಕಿ ಜಿಲ್ಲೆ. ಕೇರಳ ರಾಜ್ಯ ಇವರಿಗೆ  ಕರೆ ಮಾಡಿ ರಾತ್ರಿ 20:40 ಗಂಟೆಗೆ  ಉಳ್ಳೂರು  ರೈಲ್ವೇ ಕ್ರಾಸಿಂಗ್ ಗೇಟ್ ಸಮೀಪ  ಮೈಲಿಕಲ್ಲು  ನಂಬ್ರ 714/0  ನೇದರ ಸಮೀಪ ಉಡುಪಿ ಕಡೆಯಿಂದ ಮಂಗಳೂರು  ಕಡೆಗೆ ಚಲಿಸಿದ ಗೂಡ್ಸ್  ರೈಲೊಂದಕ್ಕೆ  ಸಿಲುಕಿ ಸುಮಾರು 35 ವರ್ಷ  ಪ್ರಾಯದ ಗಂಡಸು  ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 28/2022 ಕಲಂ: 174 ಸಿ.ಆರ್.‌ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಕಾಪು: ದಿನಾಂಕ 24/11/2022 ರಂದು ಬೆಳಗ್ಗೆ ಶ್ರೀಶೈಲ ಮುರಗೋಡ, ಪೊಲೀಸ್‌ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ರೌಂಡ್ಸ್‌ ನಲ್ಲಿರುವಾಗ ಕಮಲ್ಲಾರು ಗ್ರಾಮದ ರೈಲ್ವೇ ಬ್ರಿಡ್ಜ್‌ ಬಳಿ ಕೋಟೆ ರೋಡ್‌ ಮಸೀದಿ ಹತ್ತಿರ ಅನುಮಾನಾಸ್ಪದ ಓರ್ವ ವ್ಯಕ್ತಿ ಕಂಡು ಬಂದಿದ್ದು, ಆತನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ಆತನನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಚಾರಿಸಿಲಾಗಿ ಆತನ ಹೆಸರು ಹನೀಪ್‌ (36), ತಂದೆ: ಇಬ್ರಾಹಿಂ, ವಾಸ: ಸರಕಾರಿಗುಡ್ಡೆ ಮೂಡಬೆಟ್ಟು ಗ್ರಾಮ ಕಾಪು ತಾಲೂಕು ಎಂದು ತಿಳಿಸಿದ್ದು, ಆತನನ್ನು  ಪ್ರೊಫೆಸರ್ ಅಂಡ್ ಹೆಡ್ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ ಮಣಿಪಾಲ ಇವರ ಮುಂದೆ ಹಾಜರುಪಡಿದ್ದು, ಪರೀಕ್ಷಿಸಿದ ವೈದ್ಯರು ದಿನಾಂಕ 25/11/2022 ರಂದು ಹನೀಫ್‌ ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿರುತ್ತಾರೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 129/2022 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 26-11-2022 09:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080