ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಹೊನ್ನಪ್ಪ ಶಿವಣ್ಣ ಕುಂಬಾರ (32), ತಂದೆ: ಶಿವಣ್ಣ ಕುಂಬಾರ, ವಾಸ: ಹೆಗ್ಡೆ ಕಂಪೌಂಡ್‌, ಕೊರಂಗ್ರಪಾಡಿ ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಬಲಾಯಿಪಾದೆ ಮಹಾಲಕ್ಷ್ಮಿ ಕಾಂಪ್ಲೆಕ್ಸ್‌ ನಲ್ಲಿರುವ ಮಂಜುಶ್ರೀ ಹರ್ಬಲ್ಸ್‌ ಎಂಬ ಅಂಗಡಿಯನ್ನು ನಡೆಸಿಕೊಂಡಿದ್ದು, ದಿನಾಂಕ 25/11/2022 ರಂದು 20:00 ಗಂಟೆಯಿಂದ ದಿನಾಂಕ 26/11/2022 ರಂದು ಬೆಳಿಗ್ಗೆ 09:00 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಅಂಗಡಿಯ ಶೆಟರ್‌ ನ್ನು ಮುರಿದು ಒಳಪ್ರವೇಶಿಸಿ, ಆಫೀಸ್‌ನ ಬೀಗ ಮುರಿದು, ಕ್ಯಾಶ್‌ ಡ್ರಾವರಿನ ಲಾಕ್‌ನ್ನು ಯಾವುದೋ ಆಯುಧದಿಂದ ಮುರಿದು ಅದರ ಒಳಗಿದ್ದ ರೂಪಾಯಿ 46,000/- ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೇ ಅಪರಾಧ ಕ್ರಮಾಂಕ 170/2022 ಕಲಂ:  454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಸುರೇಶ ಎಚ್.ಎಸ್, ಆಹಾರ ನಿರೀಕ್ಷಕರು, ಕುಂದಾಪುರ ಕುಂದಾಪುರ ಇವರಿಗೆ  ದಿನಾಂಕ 25/11/2022 ರಂದು ರಾತ್ರಿ 11:00 ಗಂಟೆಗೆ ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಸಂತೋಷ ನಗರ ಎಂಬಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲು ವಾಹನದಲ್ಲಿ ಸಾಗಾಟ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಪಿರ್ಯಾದಿದಾರರು ಕುಂದಾಪುರ ಪೊಲೀಸ್ ಠಾಣೆಗೆ ತೆರಳಿ ಠಾಣಾ ಪೊಲೀಸ್‌ ಉಪನಿರೀಕ್ಷಕರು ಹಾಗೂ ಸಿಬ್ಬಂದಿಯವರೊಂದಿಗೆ ಹೊರಟು ರಾತ್ರಿ 11:30 ಗಂಟೆಗೆ ಹೆಮ್ಮಾಡಿ ಗ್ರಾಮದ ಸಂತೋಷ ನಗರಕ್ಕೆ ತಿರುಗುವಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಒಂದು ಗೂಡ್ಸ್ ವಾಹನವು ಬರುತ್ತಿರುವುದನ್ನು ಪರಿಶೀಲಿಸಲಾಗಿ ಗೂಡ್ಸ್ ವಾಹನದ ಬಾಡಿಯಲ್ಲಿ ಬಿಳಿ ಬಣ್ಣದ 24 ಪ್ಲಾಸ್ಟಿಕ್ ಚೀಲದಲ್ಲಿ ಅಕ್ಕಯನ್ನು ತುಂಬಿಸಿರುವುದು ಕಂಡು ಬಂದಿದ್ದು, ಅಲ್ಲದೇ  ಬಿಳಿ ಬಣ್ಣದ 40 ಖಾಲಿ ಚೀಲಗಳು ಕಂಡು ಬಂದಿದ್ದು, ಬಳಿಕ ಚಾಲಕನಾದ ವಿಜಯ ಟಿ ಪೂಜಾರಿ(39), ತಂದೆ: ದಿ ತಮ್ಮ ಪೂಜಾರಿ, ವಾಸ: ಮನೆ ನಂಬ್ರ 2-6, ಹಕ್ರಿ ಮನೆ, ಬಡಾಕೆರೆ, ನಾವುಂದ ಗ್ರಾಮ, ಬೈಂದೂರು ತಾಲೂಕು, ಉಡುಪಿ ಇವರನ್ನು ವಿಚಾರಿಸಲಾಗಿ ಸರಕಾರದ ಅನ್ನಭಾಗ್ಯ ಯೋಜನೆಯ ಬೆಳ್ತಿಗೆ ಅಕ್ಕಿಯನ್ನು ಹೆಮ್ಮಾಡಿ ಗ್ರಾಮದ ಸಂತೋಷನಗರ ನಿವಾಸಿ ಅಯೂಬ್ ಎಂಬುವವರು ಊರುಗಳಿಂದ ಸಂಗ್ರಹಿಸಿ ಆತನ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದು  ಅಕ್ಕಿಯನ್ನು ಮರವಂತೆಗೆ ತಂದು ಕೊಡುವಂತೆ ಪರಿಚಯದ ಕೋಡಿಯ ನಿವಾಸಿ ಫಿರೋಝ್ ರವರು ಕರೆ ಮಾಡಿ ತಿಳಿಸಿದ್ದು ಅದರಂತೆ ಅಯೂಬ್ ರವರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದಾಗ ಆತನು ಸಂತೋಷ ನಗರ ದ ಮನೆಗೆ ಬರುವಂತೆ ತಿಳಿಸಿದಂತೆ ಆತನ ಮನೆಗೆ ರಾತ್ರಿ 09:45 ಗಂಟೆಗೆ ತೆರಳಿದ್ದು ಆತನ ಮನೆಯ ಅಂಗಳದಲ್ಲಿದ್ದ ಅಕ್ಕಿಯನ್ನು ತಾನು ಮತ್ತು ಆಯೂಬ್ ಸೇರಿ ತುಂಬಿಸಿ ಫಿರೋಜ್ ನಿಗೆ ನೀಡಲು ಮರವಂತೆಗೆ ಕೊಂಡು ಹೋಗುತ್ತಿರುವುದಾಗಿ ಮತ್ತುಈ ಬಗ್ಗೆ ಯಾವುದೇ ಪರವಾನಿಗೆ ಹೊಂದಿಲ್ಲವಾಗಿ ತಿಳಿಸಿರುವುದಾಗಿದೆ. ಬಳಿಕ ತೂಕದ ಮೆಶಿನನ್ನು ತರಿಸಿ ತೂಕ ನೋಡಲಾಗಿ  1 ರಿಂದ 24  ಚೀಲಗಳನ್ನು ತೂಕ ನೋಡಲಾಗಿ ಕ್ರಮವಾಗಿ1) 35 ಕೆ.ಜಿ, 2) 48 ಕೆ.ಜಿ, 3) 20 ಕೆ.ಜಿ,, 4)50 ಕೆ.ಜಿ, 5) 50 ಕೆ.ಜಿ, 6) 50 ಕೆ.ಜಿ, 7) 35 ಕೆ.ಜಿ,, 8) 33 ಕೆ.ಜಿ, 9) 50 ಕೆ.ಜಿ, 10) 50 ಕೆ.ಜಿ, 11) 40 ಕೆ.ಜಿ, 12) 50 ಕೆಜಿ. 13) 45 ಕೆ.ಜಿ, 14) 43 ಕೆ.ಜಿ,, 15) 35 ಕೆ.ಜಿ, 16) 44 ಕೆ.ಜಿ, 17) 40 ಕೆ.ಜಿ, 18) 50 ಕೆ.ಜಿ, 19) 45 ಕೆ.ಜಿ, 20) 48 ಕೆ.ಜಿ, 21) 29 ಕೆ.ಜಿ, 22) 28 ಕೆ.ಜಿ, 23) 42 ಕೆ.ಜಿ, 24) 40 ಕೆ.ಜಿ, ಇದ್ದು, ಒಟ್ಟು ತೂಕ  1000 ಕೆ.ಜಿ ತೂಕ ಇರುತ್ತದೆ.   ಅದರ ಅಂದಾಜು ಮೌಲ್ಯ ರೂಪಾಯಿ  22,000/- ಆಗಿರುತ್ತದೆ . ಬಿಳಿ 40 ಖಾಲಿ ಪ್ಲಾಸ್ಟಿಕ್ ಚೀಲಗಳ  ಒಟ್ಟು ಮೌಲ್ಯ ರೂಪಾಯಿ 600/- ಆಗಿರುತ್ತದೆ .  ಗೂಡ್ಸ್ ವಾಹನವನ್ನು ಪರಿಶೀಲಿಸಲಾಗಿ  MAHINDRA  MAXIMA  GOODS ವಾಹನವಾಗಿ ದ್ದು,  ಅದರ ನೊಂದಣಿ ನಂಬ್ರ KA-19-D-7105 ಆಗಿದ್ದು,   ಅದರ ಮೌಲ್ಯ  ರೂಪಾಯಿ 1,30,000/- ಆಗಿರುತ್ತದೆ . ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 125/2022 ಕಲಂ: 3 ,6,7 ಅವಶ್ಯಕ ವಸ್ತಗಳ ಅಧಿನಿಯಮ ಕಾಯ್ದೆ 1955 ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 26-11-2022 06:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080