ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಸದಾಶಿವ (48), ತಂದೆ ದಿ. ವಿಟ್ಟು, ವಾಸ: ಕೌಸ್ತುಭ ನಿಲಯ, ಸ್ವಾಗತ ನಗರ ದರ್ಖಾಸು ಮಲ್ಲಾರು ಗ್ರಾಮ, ಕಾಪು ತಾಲೂಕು ಇವರು  ದಿನಾಂಕ 25/11/2021 ರಂದು ಬೆಳಿಗ್ಗೆ 10:00 ಗಂಟೆಗೆ ಅಗತ್ಯ ಕೆಲಸದ ಬಗ್ಗೆ ಕಾಪು ಕಡೆಗೆ ಹೋಗಲು ಶಿರ್ವ ಕಡೆಯಿಂದ ಕಾಪು ಕಡೆಗೆ ಹೋಗುವ ರಸ್ತೆಯ ಸ್ವಾಗತ ನಗರ ಜಂಕ್ಷನ್ ಸಮೀಪವಿರುವ ವನಜ ಎಂಬುವವರ ಅಂಗಡಿ ಬಳಿ ರಸ್ತೆ ಬದಿಯಲ್ಲಿ ನಿಂತಿರುವಾಗ ಶಿರ್ವ ಕಡೆಯಿಂದ ಓರ್ವ ಕಾರು ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ತೀರಾ ಎಡ ಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ನಿಂತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ನಂತರ ವನಜರವರ ಅಂಗಡಿಗೆ ಡಿಕ್ಕಿ ಹೊಡೆದು ನಂತರ ಸುರೇಶ್  ಎಂಬುವವರ ಗೋಡೆ ಮತ್ತು ಬಾಗಿಲಿಗೆ ಡಿಕ್ಕಿ ಹೊಡೆದಿರುತ್ತದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡ ಸೊಂಟಕ್ಕೆ ಗುದ್ದಿನ ನೋವು ಆಗಿದ್ದು, ಎಡ ಕೈಗೆ ತರಚಿದ ಗಾಯ ಮತ್ತು ತಲೆಯ ಹಿಂದಿನ ಭಾಗದಲ್ಲಿ ಸಣ್ಣ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಉಡುಪಿ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಕಾರು ವನಜರವರ ಅಂಗಡಿಗೆ ಡಿಕ್ಕಿ ಹೊಡೆದ ಪರಿಣಾಮ ಅಂಗಡಿಯು ಜಖಂಗೊಂಡು 20,000/- ರೂಪಾಯಿ ನಷ್ಟವುಂಟಾಗಿರುವುದಾಗಿದೆ. ಸುರೇಶ್ ರವರ ಅಂಗಡಿಯ ಗೋಡೆ, ಮತ್ತು ಬಾಗಿಲು ಜಖಂ ಗೊಂಡಿದ್ದು  50,000/- ರೂಪಾಯಿ ನಷ್ಟವುಂಟಾಗಿರುತ್ತದೆ.  ಅಪಘಾತ ಪಡಿಸಿದ ಕಾರು ಸ್ಥಳದಲ್ಲೇ ಇದ್ದು ನಂಬ್ರ ನೋಡಲಾಗಿ KA -05-ND-2429 ಆಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 175/2021 ಕಲಂ: 279, 337, 427  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಕಾರ್ಕಳ : ದಿನಾಂಕ 25/11/2021 ರಂದು ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ದೂಪದಕಟ್ಟೆ ರಿಕ್ಷಾ ನಿಲ್ದಾಣದ ಬಳಿ ಆರೋಪಿ ಉಮಾನಾಥ (36), ತಂದೆ: ಜಯ ಶೆಟ್ಟಿ, ವಾಸ: ಮನೆ ನಂಬ್ರ: 2-399 ತೆಳ್ಳಾರ್ ರಸ್ತೆ, ಶಬರಿ ಆಶ್ರಮದ ಹತ್ತಿರ, ಕಾರ್ಕಳ ಕಸಬಾ ಎಂಬಾತ ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟು ಹಣವನ್ನು  ಪಡೆದುಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿದ್ದ  ಬಗ್ಗೆ ಬಂದ  ಮಾಹಿತಿಯಂತೆ ತೇಜಸ್ವಿ, ಪೊಲೀಸ್ ಉಪನಿರೀಕ್ಷಕರು,  ಕಾರ್ಕಳ ಗ್ರಾಮಾಂತರ ಠಾಣೆ ಇವರು ದಾಳಿ ನಡೆಸಿ  ಆರೋಪಿಯನ್ನು  ವಶಕ್ಕೆ  ಪಡೆದು ಆರೋಪಿ  ವಶದಲ್ಲಿ ಮಟ್ಕಾ ಜುಗಾರಿ  ಆಟದಿಂದ  ಸಂಗ್ರಹಿಸಿದ  ನಗದು ರೂಪಾಯಿ 2140/-,  ಮಟ್ಕಾ ಬರೆದ ಚೀಟಿ ಮತ್ತು ಬಾಲ್‌ ಪೆನ್‌ -01 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 135 /2021 ಕಲಂ: 78 (i)(iii) ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ದಿನಾಂಕ 25/11/2021  ರಂದು ಶ್ರೀಶೈಲ್‌.ಡಿ.ಎಂ, ಪೊಲೀಸ್ ಉಪನಿರೀಕ್ಷಕರು, ಶಿರ್ವಾ ಪೊಲೀಸ್ ಠಾಣೆ ಇವರಿಗೆ ಸಿಕ್ಕಿದ ಮಾಹಿತಿಯಂತೆ ಕಾಪು ತಾಲೂಕಿನ ಬೆಳ್ಳೆ  ಗ್ರಾಮದ  ಪಡುಬೆಳ್ಳೆ  ಪೇಟೆಯ ಬಸ್ ನಿಲ್ದಾಣದ  ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಾರಾಯಣ ಕುಂದರ್‌ (50), ತಂದೆ: ದಿ: ಚಂದು, ವಾಸ: ಶಿವಶಂಕರಿ ನಿಲಯ, ಸುಬಾಸ್‌ನಗರ, ಸರ್ಕಾರಿಗುಡ್ಡೆ, ಶಂಕರಪುರ ಅಂಚೆ,  ಮೂಡಬೆಟ್ಟು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಎಂಬಾತ  ಸಾರ್ವಜನಿಕರನ್ನು ಗುಂಪು ಗೂಡಿಸಿಕೊಂಡು  ಮಟ್ಕಾ  ಜುಗಾರಿ ಆಟದ  ಬಗ್ಗೆ ಹಣ  ಸಂಗ್ರಹ ಮಾಡುತ್ತಿದ್ದಾಗ ದಾಳಿ ನಡೆಸಿ ಮಟ್ಕಾ ಜುಗಾರಿ ಆಟದ ಬಗ್ಗೆ  ಸಂಗ್ರಹ ಮಾಡಿದ ನಗದು ಹಣ 1800/- ಮಟ್ಕಾ ಚೀಟಿ ಹಾಗೂ ಬಾಲ್‌ಪೆನ್‌‌-1 ನ್ನು  ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2021 ಕಲಂ: 78 (i)(iii) ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಶಿರ್ವಾ: ಪಿರ್ಯಾದಿದಾರರಾದ ಸುನಿಲ್‌ (34), ತಂದೆ: ಸಿದ್ದ, ವಾಸ: ಜ್ಯೋತಿ ಪ್ರತಿಕ್ಷಾ, ಹೇರಾಡಿ ಗ್ರಾಮ, ಬಾರ್ಕೂರು ಅಂಚೆ ಮತ್ತು ಬ್ರಹ್ಮಾವರ ತಾಲೂಕು ಮತ್ತು ಉಡುಪಿ ಜಿಲ್ಲೆ ಇವರ ಅಕ್ಕ ಯಶೋದ (47) ರವರು ತನ್ನ ಗಂಡ ತೀರಿ ಹೋದ ಬಳಿಕ ಮಾನಸಿಕವಾಗಿ ವರ್ತಿಸುತ್ತಿದ್ದು ಅಲ್ಲದೆ ರಕ್ತದ ಒತ್ತಡ ಹಾಗೂ ನಿದ್ರಾಹೀನತೆ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಉದ್ಯಾವರ ಆಯುರ್ವೆದಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ದಿನಾಂಕ 25/11/2021 ರಂದು ಬೆಳಿಗ್ಗೆ 07:30 ಗಂಟೆಗೆ  ಬೆಳ್ಳೆ ಗ್ರಾಮದ ತಿರ್ಲಪಲ್ಕೆಯಲ್ಲಿರುವಾಗ ರಕ್ತದೊತ್ತಡ ಖಾಯಿಲೆ ಉಲ್ಬಣಗೊಂಡವರನ್ನು ಚಿಕಿತ್ಸೆಯ ಬಗ್ಗೆ ಕೆಎಂಸಿ ಆಸ್ಪತ್ರೆ ಮಣಿಪಾಲ ಇಲ್ಲಿಗೆ ಕರೆದುಕೊಂಡು ಬಂದಿದ್ದು 10:45 ಗಂಟೆಗೆ ವೈದ್ಯಾಧಿಕಾರಿಯವರು ಪರೀಕ್ಷಿಸಿ ಧೃಡಿಕರಿಸಿರುತ್ತಾರೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 21/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಪಿರ್ಯಾದಿದಾರರಾದ ಶಂಕರ  ಶೆಟ್ಟಿ (32), ತಂದೆ: ವಿಠಲ್ ಶೆಟ್ಟಿ, ವಾಸ: ಬಾನಾಳಿ  ಬುಗ್ರಿಮನೆ ಬಾಂಡ್ಯ ಅಂಚೆ  ಕೊಡ್ಲಾಡಿ  ಗ್ರಾಮ ಕುಂದಾಪುರ ತಾಲೂಕು ಇವರ  ಮಾವ  ವಿಠಲ್ ಶೆಟ್ಟಿ (62) ಇವರ  ಹೆಂಡತಿ 10 ವರ್ಷದ  ಹಿಂದೆ ತೀರಿಹೋಗಿದ್ದು  ಆ  ಬಳಿಕ  ಅವರ  ಮಕ್ಕಳು ಸಹ  ಅವರನ್ನು   ಸರಿಯಾಗಿ  ನೋಡಿಕೊಳ್ಳದೇ  ಇದ್ದು,   ಹಾಗೂ  ಸುಮಾರು  ಸಮಯದಿಂದ   ಕಾಯಿಲೆಯಿಂದ  ಬಳಲುತ್ತಿದ್ದು. ಈ ವಿಷಯದಲ್ಲಿ  ಜೀವನದಲ್ಲಿ   ಜಿಗುಪ್ಸೆಗೊಂಡು ದಿನಾಂಕ  25/11/2021  ರಂದು   ಬೆಳಿಗ್ಗೆ  9;00  ಗಂಟೆಗೆ  ಅವರ  ವಾಸದ   ಮನೆಯಾದ ಕುಂದಾಪುರ ತಾಲೂಕಿನ   ಕೊಡ್ಲಾಡಿ ಗ್ರಾಮದ ಬಾನಾಳಿ  ಬುಗ್ರಿಮನೆ ಎಂಬಲ್ಲಿ  ಅಡಿಕೆ  ತೋಟಕ್ಕೆ  ಸಿಂಪಡಿಸುವ ಔಷದಿ ಸೇವಿಸಿ  ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಯ ಬಗ್ಗೆ  ಸಿದ್ದಾಪುರ ಸರಕಾರಿ ಆಸ್ಪತ್ರೆಗೆ   ಕರೆದುಕೊಂಡು  ಹೋಗಿ ಅಲ್ಲಿಂದ  ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಕುಂದಾಪುರ  ಸರಕಾರಿ  ಆಸ್ಪತ್ರೆಗೆ  ಕರೆದುಕೊಂಡು  ಹೋಗುವಾಗ  ದಾರಿ  ಮಧ್ಯೆ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 45/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಪಿರ್ಯಾದಿದಾರರಾದ ಉದಯ ನಾಯ್ಕ (31), ತಂದೆ: ನರಸಿಂಹ ನಾಯ್ಕ , ವಾಸ: ಒಳಗುಡ್ಡಿ, ತೊಂಭತ್ತು. ಹೆಂಗವಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರ  ತಾಯಿ ಶ್ರೀಮತಿ   ಜಲಜ  ಭಾಯಿ (59)  ಇವರು ದಿನಾಂಕ   22/11/2021  ರಂದು   16:30 ಗಂಟೆಗೆ  ಅವರ ವಾಸದ   ಮನೆಯಲ್ಲಿ  ಶರಾಬಿನೊಂದಿಗೆ  ಮೈಲ್ಲುತ್ತುತ್ತು  ಮಿಶ್ರಣ ಮಾಡಿ  ಕುಡಿದವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ  ದಾಖಲು ಮಾಡಿದ್ದು,  ಅಲ್ಲಿ    ಚಿಕಿತ್ಸೆ  ಫಲಕಾರಿಯಾಗದೇ ದಿನಾಂಕ 25/11/2021  ರಂದು 12:50 ಗಂಟೆಗೆ   ಮಣಿಪಾಲ  ಕೆ.ಎಮ್.ಸಿ  ಆಸ್ಪತ್ರೆಯಲ್ಲಿ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 46/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ ನಾಗರತ್ನ (62),  ಗಂಡ: ದಿ. ಸಹದೇವ, ವಾಸ: ಗೌರಾಣಿ ಯಡೂರು  ಗ್ರಾಮ  ಹೊಸನಗರ ತಾಲೂಕು  ಶಿವಮೊಗ್ಗ  ಜಿಲ್ಲೆ ಇವರ  ಮಗಳು   ಶ್ರೀಮತಿ  ಶಾರದ( 30)   ಇವರು  3  ವರ್ಷದ   ಹಿಂದೆ    ಕುಂದಾಪುರ  ತಾಲೂಕಿನ ಹೆಂಗವಳ್ಳಿ ಗ್ರಾಮದ  ಕೆಪ್ಪಹೊಂಡ   ಎಂಬಲ್ಲಿಯ   ರತ್ನಾಕರ ಎಂಬುವವರನ್ನು   ಪ್ರೀತಿಸಿ  ಮದುವೆ  ಆಗಿದ್ದು,  ದಿನಾಂಕ  25/11/2021 ರಂದು 15:00 ಗಂಟೆಗೆ  ಮನೆಯ  ಹತ್ತಿರದ     ಹೆಂಗವಳ್ಳಿ ಗ್ರಾಮದ  ಕೆಪ್ಪೆಹೊಂಡ  ಕೆರೆಹಾಡಿ ಎಂಬಲ್ಲಿ  ನೀರು ತರಲು  ಮನೆಯ ಹತ್ತಿರದ  ಕೆರೆಗೆ  ಹೋದಾಗ ಆಕಸ್ನಿಕವಾಗಿ  ಕಾಲು ಜಾರಿ  ಕೆರೆಯ ನೀರಿಗೆ ಬಿದ್ದು  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 47/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಹೆಂಗಸು ಕಾಣೆ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಉದಯ ಮರಕಾಲ (42), ತಂದೆ: ದಿ. ಚಂದ್ರ ಮರಕಾಲ, ವಾಸ: ಗುರು ಕೃಪಾ ಪಾರಂಪಳ್ಳಿ ಸೋಸೈಟಿ ಬಳಿಯಲ್ಲಿ  ಪಾರಂಪಳ್ಳಿ ಪಡುಕೆರೆ  ಪಾರಂಪಳ್ಳಿ ಗ್ರಾಮ ಬ್ರಹ್ಮಾವರ ತಾಲೂಕು ಇವರ  ಅಮ್ಮ ಲಕ್ಷ್ಮಿ ಮರಕಾಲ್ತಿ (62) ಇವರು ದಿನಾಂಕ 24/11/2021 ರಂದು ಬೆಳಿಗ್ಗೆ  11:30 ಗಂಟೆಗೆ  ಮನೆಯಿಂದ ಹೊರಗಡೆ ಹೋದವರು ಈ ವರೆಗೆ ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 201/2021 ಕಲಂ: ಹೆಂಗಸು  ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕರ್ತವ್ಯಕ್ಕೆ ಅಡ್ಡಿ ಪ್ರಕರಣ

  • ಉಡುಪಿ: ದಿನಾಂಕ 25/11/2021 ರಂದು  ಬೆಳಿಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಸ್ಥಿರ ದೂರವಾಣಿ ನಂಬರ್‌ಗೆ ಓರ್ವ ಸಾರ್ವಜನಿಕರು ಕರೆ ಮಾಡಿ ಕೊರಂಗ್ರಪಾಡಿ-ಅಲೆವೂರು ರಸ್ತೆಯಲ್ಲಿ ಒಂದು ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವುದಾಗಿ ಮಾಹಿತಿ ನೀಡಿದ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆ ಸಿಬ್ಬಂದಿಯವರು ಕೊರಂಗ್ರಪಾಡಿ-ಅಲೆವೂರು ರಸ್ತೆಯ ಮಾನಸ ಬಸ್ಸು ನಿಲ್ದಾಣದ ಬಳಿ ಹೋಗಿ ನೋಡಲಾಗಿ ಒಂದು ಟಿಪ್ಪರ್‌ ಲಾರಿ ನಿಂತಿದ್ದು, 5-6 ಜನ ನಿಂತು ಲಾರಿ ಚಾಲಕನ ಜೊತೆ ಮಾತನಾಡುತ್ತಿದ್ದು, ಟಿಪ್ಪರ್‌ಲಾರಿಯನ್ನು ಪರಿಶೀಲನೆ ಮಾಡಲಾಗಿ ಅದರ ಮುಂಭಾಗದ ನಂಬರ್‌ ಪ್ಲೇಟ್‌ನಲ್ಲಿ KA-19-D-1684 ಎಂದೂ, ಹಿಂಭಾಗದಲ್ಲಿ KA-19-D-1685 ಎಂದು ನಮೂದು ಇದ್ದು, ಅದರಲ್ಲಿ ಮರಳು ತುಂಬಿರುವುದು ಕಂಡು ಬಂತು. ಚಾಲಕನ ಹೆಸರು ಕೇಳಲಾಗಿ, ಯಲ್ಲಪ್ಪ ಜಾಲಾಪುರ, ಬಾಗಲಕೋಟೆ ಜಿಲ್ಲೆ ಎಂದು ಹೇಳಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ಆತನೊಂದಿಗೆ ತಕರಾರು ತೆಗೆಯುತ್ತಿದ್ದಾಗ ಟಿಪ್ಪರ್‌ ಚಾಲಕನಲ್ಲಿ ಟಿಪ್ಪರ್‌ನ್ನು ಉಡುಪಿ ನಗರ ಪೊಲೀಸ್‌ ಠಾಣೆಗೆ ತರುವಂತೆ ತಿಳಿಸಿದಾಗ, ಬೆಳಿಗ್ಗೆ 10:15 ಗಂಟೆಗೆ ಟಿಪ್ಪರ್‌ ಚಾಲಕನು ಸಮವಸ್ತ್ರದಲ್ಲಿದ್ದ ಸಿಬ್ಬಂದಿಯವರ ಅಂಗಿಯನ್ನು ಹಿಡಿದು ಏಳೆದು ಹಿಂದೆ ದೂಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಟಿಪ್ಪರ್‌ನ್ನು ಹತ್ತಿ ಚಲಾಯಿಸಿಕೊಂಡು ಪರಾರಿಯಾಗಿರುತ್ತಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 173/2021 ಕಲಂ: 353 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ವಿನಯ ಕುಮಾರ್ (45). ತಂದೆ : ದಿ.ನಾಗೇಶ್ ಶೆಟ್ಟಿ, ಆಹಾರ ನಿರೀಕ್ಷಕರು, ಬೈಂದೂರು ತಾಲೂಕು ಇವರಿಗೆ ದಿನಾಂಕ 24/11/2021 ರಂದು ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಓಲಗ ಮಂಟಪ ಕಡೆಯಿಂದ ಟಾಟಾ ಏಸ್ ವಾಹನದಲ್ಲಿ 1) ಇಲಿಯಾಸ್ ಹಸನ್ ಬ್ಯಾರಿ (33), ತಂದೆ: ಹಸನ್ ಬ್ಯಾರಿ ವಾಸ: ಸರ್ಪನಕಟ್ಟೆ, ಭಟ್ಕಳ ತಾಲೂಕು ಉ.ಕ ಜಿಲ್ಲೆ, 2) ಮೊಹಮ್ಮದ್ ರಫಿಕ್ (33), ತಂದೆ: ಬಾಷಾ ಸಾಬ್  ವಾಸ: ಸರ್ಪನಕಟ್ಟೆ, ಭಟ್ಕಳ ತಾಲೂಕು ಉ.ಕ ಜಿಲ್ಲೆ, 3) ಇಬ್ರಾಹಿಂ ಬ್ಯಾರಿ (36), ತಂದೆ:ಮೊಹಮ್ಮದ್ ವಾಸ: ಗಣೇಶನಗರ, ಭಟ್ಕಳ ತಾಲೂಕು ಉ.ಕ ಜಿಲ್ಲೆ ಇವರು ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ದೊರೆತ ಮೇರೆಗೆ ಪಿರ್ಯಾದಿದಾರರು ಬೈಂದೂರು ಪೊಲೀಸರೊಂದಿಗೆ ಸಂಜೆ 5:40 ಗಂಟೆಗೆ ಉಪ್ಪುಂದ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂಭಾಗ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಳಿ ಓಲಗಮಂಟಪದ ಕಡೆಯಿಂದ ಒಂದು ಟಾಟಾ ಏಸ್ ಗೂಡ್ಸ್ ವಾಹನ ತಡೆದು ನಿಲ್ಲಿಸಿ ಪರಿಶೀಲಿಸಲಾಗಿ ಬೆಳ್ತಿಗೆ ಅಕ್ಕಿ ತುಂಬಿರುವ 23 ಚೀಲ (ತೂಕ 685.300 ಕೆಜಿ) ಕುಚ್ಚಲಕ್ಕಿ ತುಂಬಿರುವ 18 ಚೀಲಗಳು (ತೂಕ 534.100)ಒಟ್ಟು 41  ಚೀಲ ಅಕ್ಕಿ (ಒಟ್ಟು ತೂಕ 1219.400 ಕೆಜಿ ಅಕ್ಕಿಯ ಮೌಲ್ಯ 29,265/- ರೂಪಾಯಿ) ಟಾಟಾ ಏಸ್ ವಾಹನ ಸಂಖ್ಯೆ KA-47-A-2403 ಹಾಗೂ ಕಿತ್ತಳೆ ಬಣ್ಣದ ಫೈಬರ್ ಬಾಕ್ಸ್ ಹಾಗೂ 15 ಬಿಳಿಯ ಬಣ್ಣದ ಖಾಲಿ ಪಾಲಿಥೀನ್ ಚೀಲ ಇದ್ದು ಹಾಗೂ ಬ್ಯಾಟರಿ ಚಾಲಿತ ಹ್ಯಾಂಡ್ ವೇಯಿಂಗ್ ಮೆಷಿನ್ ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 188/2021 ಕಲಂ: 3,6,7 ಅವಶ್ಯಕ ವಸ್ತುಗಳ ಅಧಿನಿಯಮ ಕಾಯ್ದೆ 1955 ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 26-11-2021 10:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080