ಅಭಿಪ್ರಾಯ / ಸಲಹೆಗಳು

ಗಂಡಸು ಕಾಣೆ ಪ್ರಕರಣ

 • ಹಿರಿಯಡ್ಕ: ಪಿರ್ಯಾದಿದಾರರಾದ ಜಯ ನಾಯ್ಕ್ (40) ತಂದೆ: ದಿ;ನಾರಾಯಣ ನಾಯ್ಕ್ ವಾಸ: ರತ್ನ ನಿಲಯ, ಮರಾಠಿಕೇರಿ, ಗದ್ದಿಗೆ ಕ್ರಾಸ್, ಕುಕ್ಕೆಹಳ್ಳಿ ಇವರ ಹೆಂಡತಿಯ ತಮ್ಮ ನಾದ ಶೇಖರ್ ನಾಯ್ಕ್ (27) ಎಂಬವರು ದಿನಾಂಕ 11/11/2021 ರಂದು ತನ್ನ ವಾಸ್ತವ್ಯದ ಮನೆಯಾದ ಕುಕ್ಕೆಹಳ್ಳಿ ಗ್ರಾಮದ ಒಳಮಡಿ ಎಂಬಲ್ಲಿಂದ ಬೆಳಿಗ್ಗೆ 8:00 ಗಂಟೆಗೆ ಕೆಲಸಕ್ಕೆಂದು ಹೋದವರು ವಾಪಾಸು ಮನೆಗೆ ಬರದೆ ಕಾಣೆಯಾಗಿರುತ್ತಾರೆ ಸದ್ರಿಯವರ ಅವರು ಕೆಲಸ ಮಾಡುತ್ತಿರುವ ಬಾರ್ಕೂರು ಬ್ರಹ್ಮಾವರ ಹೆರಾಡಿ ಮುಂತಾದೆಡೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲವಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 62/2021 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

 • ಹೆಬ್ರಿ: ಪಿರ್ಯಾದಿದಾರರಾಧ ವರದರಾಜ್ (18) ತಂದೆ: ಉಮೇಶ ವಾಸ: ಮುಳ್ಳುಗುಡ್ಡೆ ಶಿವಪುರ ಗ್ರಾಮ ಹೆಬ್ರಿ ಇವರು ತನ್ನ ಸ್ನೇಹಿತರಾದ ರಿತೇಶ್ ಮೂಲ್ಯ, ರಿತೇಶ್, ಪವನ್, ದೀಕ್ಷಿತ್, ದರ್ಶನ್, ಸುಜನ್, ವಿವೇಕ್, ಸುಹಾನ್, ಕಿರಣ, ಸೋನಿಶ್ ಮತ್ತು ಸುದರ್ಶನ್ ರವರು ಎಲ್ಲರೂ ಮಾತನಾಡಿಕೊಂಡು ಕಾಲೇಜ್ ಗೆ ಗೈರು ಹಾಜರಾಗಿ ಶಿವಪುರ ಕೊರಗಜ್ಜ ದೇವಸ್ಥಾನಕ್ಕೆ ಹೋಗುವುದಾಗಿ ತಿರ್ಮಾನಿಸಿ ಶಿವಪುರ ಗ್ರಾಮದ ಬಟ್ರಾಡಿ ಹೊಳೆಯಲ್ಲಿ ಸ್ನಾನ ಮಾಡಿ ಹೋಗುವುದಾಗಿ ತಿರ್ಮಾನಿಸಿ ಎಲ್ಲರೂ ಸೇರಿ ಹೊಳೆಯ ಬದಿಗೆ ಹೋಗಿ  ಕಿರಣ ಸುದರ್ಶನ್ ಮತ್ತು ಸೋನೀಶ್ ರವರು ಹೊಳೆಯಲ್ಲಿ ಸ್ನಾನ ಮಾಡುವ ಸಲುವಾಗಿ ತಮ್ಮ ಬಟ್ಟೆಗಳನ್ನು ಬದಿಯಲ್ಲಿ ಇಟ್ಟು ಹೊಳೆಗೆ ಇಳಿದು ಸುಮಾರು 10-15 ಗಂಟೆಗೆ ಕಿರಣ್ ಇವರು ಹೊಳೆಯ ನೀರಿನಲ್ಲಿ ಮುಂದೆ ಮುಂದೆ ಹೋಗಿ ಇತ್ತೀಚೆಗೆ ಸುರಿದ ಬಾರಿ ಮಳೆಯಿಂದ ನೀರಿನ ಅಳ ತಿಳಿಯದೇ ಅತನು ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿದನ್ನು ಸುದರ್ಶನ್ ಮತ್ತು ಸೋನೀಶ್ ಇವರು ಕಂಡು ಹೊಳೆಗೆ ಇಳಿದು ಕಿರಣ್ ಇವರನ್ನು ರಕ್ಷಿಸುವ ಸಲುವಾಗಿ ಹೊಳೆಯ ನೀರಿನಲ್ಲಿ ಮುಂದೆ ಹೋದಾಗ ನೀರಿನ ಅಳ ತಿಳಿಯದೇ ಮೂರು ಜನರು ನೀರಿನಲ್ಲಿ ಮುಳುಗಿ ಉಸಿರು ಕಟ್ಟಿ ಮೃತ ಪಟ್ಟಿರುವುದಾಗಿದೆ, ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 39/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿದಾರರಾದ ಪೈಝಲ್ (44) ತಂದೆ: ಅಬ್ದುಲ್ ರಜಾಕ್ ವಾಸ: ಸ್ಟಾರ್ ಹೌಸ್, ಗುರ್ಮೆ, ಮಲ್ಲಾರು ಪಕೀರಣಕಟ್ಟೆ, ಕಾಪು ಇವರ ದೊಡ್ಡಮ್ಮನ ಮಗ ಅಬ್ದುಲ್ ರಜಾಕ್(48) ಎಂಬುವರು ಅನಾರೋಗ್ಯದಿಂದ ಇದ್ದು ಅವರು ಎಂ.ಜೆ.ಎಂ ಮಸೀದಿ ಪಕೀರಣಕಟ್ಟೆಯ ಹತ್ತಿರ ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದರು. ದಿನಾಂಕ 26/11/2021 ರಂದು ಬೆಳಿಗ್ಗೆ 9:00 ಗಂಟೆಗೆ ಸ್ಥಳೀಯರೊಬ್ಬರು ಪೈಝಲ್ ರವರಿಗೆ ಪೋನ್ ಮಾಡಿ ಮಲ್ಲಾರು ಗ್ರಾಮದ ಕುರ್ತ್ತಿಮಾರು ಉರ್ದು ಶಾಲೆಯ ಹತ್ತಿರ ರೈಲ್ವೆ ಹಳಿಯ ಸಮೀಪ ಅಬ್ದುಲ್ ರಜಾಕ್ ನು ಯಾವುದೋ ರೈಲಿಗೆ ತಾಗಿ ಮೃತಪಟ್ಟು ಬಿದ್ದಿರುವುದಾಗಿ ಮಾಹಿತಿ ನೀಡಿದ್ದು ಕೂಡಲೇ  ಪೈಝಲ್ ರವರು ಸ್ಥಳಕ್ಕೆ ಬಂದು ನೋಡುವಾಗ ಅಬ್ದುಲ್ ರಜಾಕ್ ನು ರೈಲ್ವೆ ಹಳಿಯ ಪೂರ್ವ ಬದಿಯಲ್ಲಿ ಬಿದ್ದಿದು, ಮುಖ ಜಖಂ ಗೊಂಡಿದ್ದು, ಎಡ ಕೈ, ಎಡ ಕಾಲು ಕಟ್ಟಾಗಿರುತ್ತದೆ. ಈ ಬಗ್ಗೆ ವಿಚಾರಿಸಲಾಗಿ ದಿನಾಂಕ 26/11/2021 ರಂದು ಬೆಳಿಗ್ಗೆ 06:30 ಗಂಟೆಯಿಂದ 08:00 ಗಂಟೆಯ ಮಧ್ಯೆ ಅಬ್ದುಲ್ ರಜಾಕ್ ನು ಮಲ್ಲಾರು ಗ್ರಾಮದ ಕುರ್ತ್ತಿಮಾರು ಉರ್ದುಶಾಲೆಯ ಹತ್ತಿರ ರೈಲ್ವೆ ಹಳಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಬ್ದುಲ್ ರಜಾಕ್ ನಿಗೆ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ಯಾವುದೋ ರೈಲು ಆಕಸ್ಮಿಕವಾಗಿ ಡಿಕ್ಕಿ ಹೊಡೆದು ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ವಿರುವುದಿಲ್ಲವಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 44/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯಾದಿದಾರರಾದ ಸೀತಾರಾಮ ಆಚಾರಿ(65)ತಂದೆ:ದಿ. ಶೀನ ಆಚಾರಿ, ವಾಸ:ಬನ್ನೇರಳಕಟ್ಟೆ ಹಾಲು ಡೈರಿಬಳಿ,ಬಿಲ್ಲಾಡಿ ಗ್ರಾಮ, ಜಾನುವಾರುಕಟ್ಟೆ ಅಂಚೆ , ಬ್ರಹ್ಮಾವರ ಇವರ ಮಗನಾದ ಶ್ರೀನಿವಾಸ ಆಚಾರಿ(32) ಎಂಬವರು ಮರದ ಕೆಲಸಮಾಡಿಕೊಂಡಿದ್ದು ವಿಪರೀತ ಮಧ್ಯಪಾನ ಚಟ ಹೊಂದಿದ್ದು,  ಆತನು ಅಪರೂಪಕ್ಕೊಮ್ಮೆ ಮನೆಗೆ ಬರುತ್ತಿದ್ದು, ಹೆಚ್ಚಾಗಿ ಸಂಬಂಧಿಕರ ಮನೆಯಲ್ಲೇ ಇರುತ್ತಿದ್ದು, ಅದರಂತೆ ದಿನಾಂಕ 23/11/2021 ರಂದು ಮಧ್ಯಾಹ್ನ 1:30 ಗಂಟೆಗೆ ಮನೆಯಿಂದ ತನ್ನ ಕೆಎ-15-ಇಇ-8912 ನೇ ಪ್ಯಾಶನ್‌‌ಪ್ರೋ- ಮೋಟಾರ್‌ ಸೈಕಲ್‌ನಲ್ಲಿ ‌ಹೋದವರು ವಾಪಾಸು ಮನೆಗೆ ಬಾರದೇ ಇದ್ದು,  ಸಂಜೆ 4:00 ಗಂಟೆ ಸುಮಾರಿಗೆ ಹೊಸಾಳ ಗ್ರಾಮದ ನಾಗರಮಠ ಡ್ಯಾಮ್‌ನ ಬಳಿ ರಸ್ತೆ ಬದಿಯಲ್ಲಿ ಮೋಟಾರ್‌ ಸೈಕಲ್‌ನ್ನು ನಿಲ್ಲಿಸಿಟ್ಟು ಅಲ್ಲೇ ಹೆಚ್ಚಾಗಿ ಜನರು ಮೀನು ಹಿಡಿಯುವ ಹೊಳೆಯ ಕಡೆಗೆ ಹೋದವನು ತನ್ನ ಅಂಗಿ ಪ್ಯಾಂಟ್‌ನ್ನು ಬಿಚ್ಚಿಟ್ಟು ಹೊಳೆಯ ನೀರಿಗೆ ಮೀನು/ಮಳಿ ಹಿಡಿಯಲು ಇಳಿದಿದ್ದು, ಈಜಲು ಬಾರದೇ ಇದ್ದುದರಿಂದ ನೀರಿನ ಸೆಳೆತಕ್ಕೆ ಸಿಕ್ಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮೃತ ಶರೀರವು ದಿನಾಂಕ 26/11/2021 ರಂದು ಬೆಳಿಗ್ಗೆ  8:40 ಗಂಟೆ ಸುಮಾರಿಗೆ ಹೊಸಾಳ ಗ್ರಾಮದ ನಾಗರಮಠ ರಿಜರ್ಡ ಎಂಬುವವರ ಮನೆಯ ಬಳಿ ಸೀತಾನದಿಯ ನೀರಿನಲ್ಲಿ, ಕೊಳೆತು ಹೋದ ಸ್ಥಿತಿಯಲ್ಲಿ ಶ್ರೀನಿವಾಸ ಆಚಾರಿರವರ ಮೃತ ದೇಹ ದೊರಕಿರುತ್ತದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 69/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ಉದಯ ಮರಕಾಲ (42) ತಂದೆ: ದಿ ಚಂದ್ರ ಮರಕಾಲ ವಾಸ: ಗುರು ಕೃಪಾ ಪಾರಂಪಳ್ಳಿ ಸೋಸೈಟಿ ಬಳಿಯಲ್ಲಿ  ಪಾರಂಪಳ್ಳಿ ಪಡುಕೆರೆ  ಪಾರಂಪಳ್ಳಿ ಇವರ  ತಾಯಿ  ಲಕ್ಷ್ಮಿ ಮರಕಾಲ್ತಿ  (62) ಇವರು ಸುಮಾರು 10 ವರ್ಷಗಳಿಂದ ಉಬ್ಬಸ ಖಾಯಿಲೆಯಿಂದ ಬಳಲುತ್ತಿದ್ದು, ಅಲ್ಲದೇ  ಕಳೆದ 6  ತಿಂಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಆಸ್ಪತ್ರೆಯಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದು,  ಅವರಿಗಿರುವ ದೈಹಿಕ ಖಾಯಿಲೆಯಿಂದ ಆಗಾಗ ಸಾಯುತ್ತೇನೆಂದು ಹೇಳುತ್ತಿದ್ದು ಈ ಹಿಂದೆ ಕೂಡಾ  ಸಾಯಲು ಪ್ರಯತ್ನ ಪಟ್ಟಿದ್ದಾಗಿರುತ್ತದೆ. ದಿನಾಂಕ 24/11/2021  ರಂದು  ಬೆಳಿಗ್ಗೆ  11:30  ಗಂಟೆಗೆ ಮನಯಿಂದ ಹೊರಗೆ ಹೋದವರು ಮನೆಗೆ ವಾಪಸು ಬಾರದೆ ಇದ್ದು ದಿನಾಂಕ 25/11/2021 ರಂದು ಉದಯ ಮರಕಾಲ ರವರು ನೀಡಿದ  ದೂರಿನಂತೆ  ಕೋಟ  ಠಾಣೆಯಲ್ಲಿ  ಹೆಂಗಸು  ಕಾಣೆ  ಪ್ರಕರಣ  ದಾಖಲಾಗಿರುತ್ತದೆ.  ದಿನಾಂಕ 26/11/2021  ರಂದು  ಬೆಳಿಗ್ಗೆ 6:30  ಘಂಟೆಗೆ ಪಾರಂಪಳ್ಳಿ ಗ್ರಾಮದ ಪಡುಕೆರೆ  ನ್ಯಾಯಬೆಲೆ  ಅಂಗಡಿ  ರಸ್ತೆಯಲ್ಲಿರುವ ಉದಯ ಮರಕಾಲ ಇವರ  ಮನೆ  ಹತ್ತಿರದ  ಗಿರೀಶ ಎಂಬುವವ ಮನೆ  ಹಿಂಬದಿ  ಕೆರೆಯಲ್ಲಿ ಶ್ರೀಮತಿ  ಲಕ್ಷ್ಮೀ  ಮರಕಾಲ್ತಿ  ರವರ  ಮೃತದೇಹ  ಸಿಕ್ಕಿರುತ್ತದೆ. ಸದ್ರಿಯವರಿಗೆ  ಉಬ್ಬಸ  ಕಾಯಿಲೆ ಹಾಗೂ  ಮಾನಸಿಕ ಕಾಯಿಲೆ ಇದ್ದು  ಇದೇ  ಚಿಂತೆಯಲ್ಲಿ  ಜೀವನದಲ್ಲಿ  ಜಿಗುಪ್ಸೆ ಗೊಂಡು  ದಿನಾಂಕ  24/11/2021 ರಂದು ಬೆಳಿಗ್ಗೆ 11:30 ಗಂಟೆಯಿಂದ ದಿನಾಂಕ 26/11/2021 ರಂದು  ಬೆಳಿಗ್ಗೆ  6:30 ಘಂಟೆಯ  ಮಧ್ಯಾವದಿಯಲ್ಲಿ  ಸೀರೆಗೆ ಶಿಲೆಕಲ್ಲನ್ನು ಕಟ್ಟಿ  ಕೆರೆಗೆ  ಹಾರಿ  ಮೃತಪಟ್ಟಿರುವುದಾಗಿದೆ, ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 46/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-11-2021 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080