ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ಇಸ್ಮಾಯಿಲ್ (22), ತಂದೆ: ದಿ. ಮಾಬು ಸಾಹೇಬ್, ವಾಸ: ಮುಳಗುಂದ ಗ್ರಾಮ ಮತ್ತು ಅಂಚೆ, ಗದಗ ತಾಲೂಕು ಮತ್ತು ಜಿಲ್ಲೆ ಇವರು ಅಕ್ಕ ರಮೀಜಾ ಹಾಗೂ ಅವರ ಬಾವ ಹುಸೈನ್ ಸಾಬ್ ಎಂಬುವವರೊಂದಿಗೆ ಕಳೆದ ಒಂದು ವರ್ಷದಿಂದ ಹೆಜಮಾಡಿಯಲ್ಲಿ ವಾಸವಾಗಿದ್ದು, ಪಿರ್ಯಾದಿದಾರರು ಅವರ ಬಾವನೊಂದಿಗೆ ದಿನಾಂಕ 24/10/2021 ರಂದು ಸಂಜೆ ಮನೆಗೆ ಸಾಮಗ್ರಿ ತರಲು ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಪೇಟೆಗೆ ಬಂದಿದ್ದು, ಸಾಮಗ್ರಿಗಳನ್ನು ಖರೀದಿಸಿ 19:50 ಗಂಟೆಗೆ ಪಡುಬಿದ್ರಿಯ ಕಾರ್ಕಳ ಜಂಕ್ಷನ್ ನಿಂದ ಅಯ್ಯಂಗಾರ್ ಬೇಕರಿ ಕಡೆಗೆ ರಸ್ತೆ ದಾಟುತ್ತಿರುವ ಸಮಯ KA-19-AC-9209 ನೇ ನಂಬ್ರದ ಎಸ್.ಎನ್.ಡಿ.ಪಿ. ಬಸ್ ಚಾಲಕ ಶ್ರೀಕಾಂತ್  ತನ್ನ ಬಸ್ಸನ್ನು ಉಡುಪಿ ಕಡೆಯಿಂದ ಪಡುಬಿದ್ರಿ ಕಡೆಗೆ ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಬಾವ ಹುಸೈನ್ ಸಾಬ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಹುಸೈನ್ ಸಾಬ್‌ರವರು ರಸ್ತೆಗೆ ಬಿದ್ದು, ಅವರ ಬಲ ಕಣ್ಣಿನ ಬಳಿ ಹಣೆಗೆ, ಹಲ್ಲಿಗೆ ಮತ್ತು ಹೊಟ್ಟೆಗೆ ರಕ್ತ ಗಾಯವಾಗಿರುತ್ತದೆ. ನಂತರ ಗಾಯಾಳುವಿಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 103/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ಪಂಕಜ್ (15), ತಂದೆ: ಗಣೇಶ ಶೆಟ್ಟಿಗಾರ್, ವಾಸ: ಶ್ರೀ ಛಾಯಾ ನಿಲಯ ಕೊಳಗೇರಿ ಅಚ್ಲಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರು ಎಂದಿನಂತೆ ದಿನಾಂಕ 25/10/2021 ರಂದು ಬೆಳಿಗ್ಗೆ ತನ್ನ ತಂದೆಯವರ ಟಿವಿಎಸ್ ವೇಗೋ ಸ್ಕೂಟಿ ನಂಬ್ರ KA-20-EM-0874 ನೇಯದರಲ್ಲಿ ತಂದೆಯವರೊಂದಿಗೆ ಕೋಟ  ಹೈಸ್ಕೂಲಿಗೆ ಹೊರಟು ಸ್ಕೂಟಿಯನ್ನು ತಂದೆಯವರು ಚಲಾಯಿಸುತ್ತಾ ಸೈಬ್ರಕಟ್ಟೆ ಕಡೆಯಿಂದ ಹೊರಟು ಸಾಗುತ್ತಾ  ಚಿತ್ರಪಾಡಿ ಗ್ರಾಮದ ಬೆಟ್ಲಕ್ಕಿ ಕ್ರಾಸ್ ಬಳಿಯಲ್ಲಿ 08:30 ಗಂಟೆಯ ಸಮಯಕ್ಕೆ ತಲುಪುವಾಗ  KA-20-AB-1331 ನೇ ಅಪೇ ಆಟೋ ರಿಕ್ಷಾ ಚಾಲಕ ಮಂಜುನಾಥ ತನ್ನ ಆಟೋ ರಿಕ್ಷಾವನ್ನು ಸೈಬ್ರಕಟ್ಟೆ ಕಡೆಯಿಂದ ಕೋಟ ಮೂರು ಕೈ ಕಡೆಗೆ  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆಯವರು ಚಲಾಯಿಸುತ್ತಿರುವ ಸ್ಕೂಟಿಯನ್ನು ಓವರ್ ಟೇಕ್ ಮಾಡಿ ಮುಂದೆ ಸಾಗುವಾಗ ಎದುರಲ್ಲಿ  ಬರುತ್ತಿರುವ ವಾಹನವನ್ನು ನೋಡಿ  ನಿರ್ಲಕ್ಷತೆಯಿಂದ ರಸ್ತೆಯ ತೀರಾ ಎಡಕ್ಕೆ ಚಲಾಯಿಸಿ  ಪಿರ್ಯಾದಿದಾರರ ತಂದೆಯವರ ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಸ್ಕೂಟಿ  ಚಲಾಯಿಸುತ್ತಿದ್ದ  ಪಿರ್ಯಾದಿದಾರರ ತಂದೆ  ಸ್ಕೂಟಿ ಸಮೇತವಾಗಿ ಕೆಳಗೆ ಬಿದ್ದರು, ಪಿರ್ಯಾದಿದಾರರಿಗೆ  ಮೂಗಿನ ಬಳಿ ,ಹಣೆಗೆ, ಗಲ್ಲಕ್ಕೆ, ಹಾಗೂ ಎಡ ಕಾಲಿಗೆ ರಕ್ತಗಾಯವಾಗಿದ್ದು ಅಲ್ಲದೇ ತಂದೆ ಗಣೇಶ ಶೆಟ್ಟಿಗಾರವರಿಗೆ  ತಲೆಗೆ ತೀವೃ ತರಹದ ಗಾಯ ತುಟಿಗೆ  ರಕ್ತಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿಲ್ಲ ಕೂಡಲೇ ಅಪಘಾತ ಪಡಿಸಿದ ರಿಕ್ಷಾ ಚಾಲಕ ಮಂಜುನಾಥ ಅದೇ ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ  ಕೋಟ ಹೈಸ್ಕೂಲ್ ತನಕ ಕರೆದುಕೊಂಡು ಬಂದು  ನಂತರ ಅಂಬುಲೆನ್ಸ ವಾಹನದಲ್ಲಿ ಉಡುಪಿ ಹೈಟೆಕ್  ಆಸ್ಪತ್ರೆಗೆ ಕರೆದುಕೊಂಡು  ಹೋಗಿ ಪಿರ್ಯಾದಿದಾರರಿಗೆ  ಚಿಕಿತ್ಸೆ  ನೀಡಿ  ಪಿರ್ಯಾದಿದಾರರ ತಂದೆಯನ್ನು ಹೆಚ್ಚಿನ ಚಿಕಿತ್ಸೆಯ  ಬಗ್ಗೆ  ಉಡುಪಿ ಆದರ್ಶ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 183/2021 ಕಲಂ: 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಸುದರ್ಶನನ್ ಕೆ ಸಿ (47), ತಂದೆ: ಚಂದ್ರ ಶೇಖರ  ಕೆ ಎಸ್, ವಾಸ: ಪೊನಕ್ಕಲ್ ಹೌಸ್ , ಚೂತುಪಾರ ಪೋಸ್ಟ  ಕೇಣಿ ಚೆರ ವಯಾ ವಯಾನಾಡ್ ರೈಲ್ವೆ  ಕೇರಳ ರಾಜ್ಯ ಇವರು ಕೇರಳ ರಾಜ್ಯದ ಮೂಲ ನಿವಾಸಿಯಾಗಿದ್ದು ಪ್ರಸ್ತುತ ಹೊಂಬಾಡಿ ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ ಎಂಬಲ್ಲಿ ಅಂಪಾರಿನ ರಾಜೀವ ಶೆಟ್ಟಿರವರ  ಮನೆಯಲ್ಲಿ ಬಾಡಿಗೆಗೆ ವಾಸ ಮಾಡಿಕೊಂಡಿದ್ದು , ರಾಜೀವ ಶೆಟ್ಟಿಯವರ  ಹೊಂಬಾಡಿ ಮಂಡಾಡಿ ಗ್ರಾಮದ ಕ್ಯಾಸಮಕ್ಕಿ ಎಂಬಲ್ಲಿ ಇರುವ 40 ಎಕರೆ ಜಮೀನ ನನ್ನು 10 ವರ್ಷಗಳ ಲೀಸ್ ನಲ್ಲಿ 2 ವರ್ಷಗಳ ಹಿಂದೆ ಪಡೆದುಕೊಂಡಿದ್ದು  ಅದರಲ್ಲಿ  ಒಂದು ಭಾಗದಲ್ಲಿ ಇದ್ದ ಕಾಡುಗಳನ್ನು ಸ್ವಚ್ಚ ಮಾಡಿ ತೆಂಗಿನ ಕಾಯಿ ಹಾಗೂ ಗೇರು ಬೀಜವನ್ನು  ತೆಗೆದು ಮಾರಾಟ ಮಾಡುತ್ತಿದ್ದು, 40 ಎಕರೆ ಜಮೀನಿನಲ್ಲಿ ಸುಮಾರು 10 ಎಕರೆ ಜಮೀನಿನಲ್ಲಿ ದಟ್ಟವಾದ  ಕಾಡುಗಳು ಬೆಳೆದಿದ್ದು  ಅಲ್ಲಿ ಇರುವ ತೆಂಗಿನ ಕಾಯಿಗಳನ್ನು  ಕೊಯ್ಯಲು ಹೋಗಿರುವುದಿಲ್ಲ. ದಿನಾಂಕ 25/10/2021 ರಂದು ದಟ್ಟವಾಗಿ ಬೆಳೆದ ಆ ಭಾಗದ  ಕಾಡುಗಳನ್ನು ಸ್ವಚ್ಚ ಮಾಡುತ್ತಿರುವಾಗ  ಬೆಳಿಗ್ಗೆ  10:00 ಗಂಟೆಯ ಸಮಯಕ್ಕೆ  ಒಂದು ತೆಂಗಿನ ಮರ ಹಾಗೂ ಗೋಳಿ  ಮರದ ಕೆಳಗೆ ಮನುಷ್ಯನ ತಲೆ ಬುರುಡೆ ಕೈ ಕಾಲುಗಳ ಎಲುಬುಗಳು ಅಲ್ಲಲ್ಲಿ ಬಿದ್ದು ಕೊಂಡಿದ್ದು , ವ್ಯಕ್ತಿಯು ಸುಮಾರು 2-3 ವರ್ಷಗಳ ಹಿಂದೆ  ಮೃತ ಪಟ್ಟಿರುವ ಸಾಧ್ಯತೆ ಕಂಡು ಬರುತ್ತದೆ. ವ್ಯಕ್ತಿಯು ಯಾವುದೋ ಕಾರಣಕ್ಕೆ ಮೃತ ಪಟ್ಟಿರುವ ಸಾಧ್ಯತೆಯಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 40/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾದ ಉದಯ ಜಿ (36), ತಂದೆ: ಮಂಜು ನಾಯ್ಕ, ವಾಸ: ಕೆಳಬೈಳು ಕೊಡಿಯಾಲ್ ಕೇರಿ ಗೋಳಿಹೊಳೆ  ಗ್ರಾಮ ಬೈಂದೂರು ತಾಲೂಕು ಇವರ ಅಣ್ಣ ಸುರೇಶ (50) ರವರು ಪಿರ್ಯಾದಿದಾರರ ಮನೆಯ ಪಕ್ಕದಲ್ಲಿ ಪ್ರತ್ಯೇಕವಾಗಿ ಮನೆ ಮಾಡಿಕೊಂಡಿದ್ದು ಹೆಂಡತಿ ಬಾಗೀರಥಿ ಹಾಗೂ ಮಕ್ಕಳಾದ ವಿಜಯ ಹಾಗೂ ವಿಮಲ ರೊಂದಿಗೆ ವಾಸಮಾಡಿಕೊಂಡಿರುತ್ತಾರೆ. ಸುರೇಶ ರವರು ಕೃಷಿಕರಾಗಿದ್ದು  ಅವರಿಗೆ ಅಡೆಕೆ ತೋಟ ವಿರುತ್ತದೆ.  ದಿನಾಂಕ 25/10/2021 ರಂದು ಸಂಜೆ 4:30 ಗಂಟೆಗೆ ಮನೆಯ ಸಮೀಪದ ಅಡಿಕೆ ತೋಟದ ಕೆಲಸಕ್ಕೆಂದು  ಹೋಗಿದ್ದು ಆಡಿಕೆ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿರುವಾಗ  ಸುರೇಶರವರಿಗೆ ಯಾವುದೋ ವಿಷಪೂರಿತ ಹಾವು ಕಚ್ಚಿದ್ದು ತಕ್ಷಣ ಸುರೇಶ ರವರು ಗಾಬರಿಗೊಂಡು  ಮನೆಗೆ ಬಂದಿರುತ್ತಾರೆ.  ಅವರನ್ನು ಪಿರ್ಯಾದಿದಾರರು, ರಾಜು ನಾಯ್ಕ ಹಾಗೂ  ಅವರ ಮಗ ವಿಜಯ ರವರು ಒಂದು ವಾಹನದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ, ಅಲ್ಲಿನ ವೈದ್ಯರು ಪರೀಕ್ಷಿಸಿ ಪಿರ್ಯಾದಿದಾರರ ಅಣ್ಣ ಸುರೇಶರವರು ಮೃತಪಟ್ಟಿರುವುದಾಗಿ ಸಂಜೆ 06 :40  ಗಂಟೆಗೆ ಧೃಢಿಕರಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 44/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 26-10-2021 10:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080