ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ಫಿರ್ಯಾದಿದಾರರಾದ ಅಶೋಕ ದೇವಾಡಿಗರವರು ದಿನಾಂಕ: 25-10-2021 ರಂದು ಸಂಜೆ ಮನೆಯ ಎದುರುಗಡೆ ರಸ್ತೆಯ ಬಳಿ ನಿಂತುಕೊಂಡಿದ್ದಾಗ ಸಂಜೆ ಸಮಯ ಸುಮಾರು 5:30 ಗಂಟೆಗೆ ಪರಿಚಯವಿರುವ ಮರವಂತೆ ಕೆನರಾ ಬ್ಯಾಂಕ್ ಮ್ಯಾನೇಜರ್ ರವರ ಹೆಂಡತಿ ರೂಪಂ ಕುಮಾರಿ ಹಾಗೂ ಮಗಳು ಮಾನ್ವಿಯವರು ತ್ರಾಸಿ ಕಡೆಯಿಂದ ಗಂಗೊಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ಹೋಲಿಕ್ರಾಸ್ ವೃದ್ಧಾಶ್ರಮದ ಬಳಿ ರಸ್ತೆಯ  ಎಡ ಬದಿಯ ಮಣ್ಣು ರಸ್ತೆಯಲ್ಲಿ  ನಡೆದುಕೊಂಡು ಬರುತ್ತಿರುವಾಗ ಗಂಗೊಳ್ಳೀ ಕಡೆಯಿಂದ ತ್ರಾಸಿ  ಕಡೆಗೆ ರಘುವೀರ್ ಎಂಬವರು KA-20 EV-7746 ನೇ ಬೈಕ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಒಂದು ವಾಹನವನ್ನು ಹಿಂದಿಕ್ಕುವ  ಭರದಲ್ಲಿ ಬೈಕ್ ನ್ನು ತೀರಾ ಬಲಬದಿಗೆ  ಸವಾರಿ ಮಾಡಿಕೊಂಡು ಬಂದು ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರೂಪಂ ಕುಮಾರಿ ಹಾಗೂ ಮಾನ್ವಿಯವರಿಗೆ  ಡಿಕ್ಕಿ ಹೊಡೆದ ಪರಿಣಾಮ ತಾಯಿ ಮಗಳು ಹಗೂ ಬೈಕ್ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ರೂಪಂ ಕುಮಾರಿಯವರಿಗೆ ಎಡ ಕಾಲಿನ ಮೂಳೆ, ಎಡ ಕೈ ಮೂಳೆಗೆ ಪೆಟ್ಟಾಗಿದ್ದು ಕೈಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ. ಮನ್ವಿಯವರಿಗೆ ಮುಖಕ್ಕೆ, ಕೈಕಾಲುಗಳಿಗೆ ಪೆಟ್ಟಾಗಿರುತ್ತದೆ. ಹಾಗೂ ಬೈಕ್ ಸವಾರನಿಗೂ  ತಲೆಗೆ, ಕೈಕಾಲುಗಳಿಗೆ ಪೆಟ್ಟಾಗಿರುತ್ತದೆ. ಮೂವರನ್ನೂ ಚಿಕಿತ್ಸೆ ಬಗ್ಗೆ  ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 100/2021  ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಫಿರ್ಯಾದಿದಾರರಾದ  ಬೀಪಾತಿಮಾ ಇವರ ವಿವಾಹವು ದಿನಾಂಕ:15/07/2018 ರಂದು 1 ನೇ ಆರೋಪಿ ಆಸೀಫ್ ಶೇಖ್ ಈತನೊಂದಿಗೆ ಸೈಯದ್ ಅರಬಿ ಜುಮ್ಮಾ ಮಸೀದಿ ಉಚ್ಚಿಲ ಕಾಪು  ನಲ್ಲಿ ನೆರವೇರಿರುತ್ತದೆ. ಮದುವೆಯ ಸಮಯದಲ್ಲಿ ಪಿರ್ಯಾಧಿದಾರರ ಮನೆಯವರು ಆರೋಪಿತರ ಬೇಡಿಕೆಯಂತೆ  ವರದಕ್ಷಿಣೆ ರೂಪದಲ್ಲಿ 6 ¼ ಪವನ್ ಚಿನ್ನ, ವಾಚ್ ಹಾಗೂ ರೂ 1,30,000/- ವನ್ನು ನೀಡಿರುತ್ತಾರೆ. ಮದುವೆಯ ನಂತರ ಪಿರ್ಯಾಧಿದಾರರು ಆರೋಪಿತರ ಮನೆಯಾದ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವಾಸ ಮಾಡಿಕೊಂಡಿದ್ದು,1 ನೇ ಆರೋಪಿಯು ವಿನಾ ಕಾರಣ ಪಿರ್ಯಾಧಿದಾರರ ಮೇಲೆ ಹಲ್ಲೆ ಮಾಡುತ್ತಿದ್ದು, ವ್ಯಾಪಾರದ ಸಲುವಾಗಿ ತವರು ಮನೆಯವರು ನೀಡಿದ 6 ¼ ಪವನ್ ಚಿನ್ನವನ್ನು ಪಿರ್ಯಾಧಿದಾರರಿಂದ ಪಡೆದುಕೊಂಡಿರುತ್ತಾರೆ. ಅಲ್ಲದೇ 2 ನೇ ಆರೋಪಿ ಫಾಮಿದಾ ಪಿರ್ಯಾಧಿದಾರ  ಬಗ್ಗೆ  ಇಲ್ಲಸಲ್ಲದ ಚಾಡಿ ಮಾತನ್ನು 1 ನೇ ಆರೋಪಿಯ ಬಳಿ ಹೇಳಿ 1 ನೇ ಆರೋಪಿಯು ಪಿರ್ಯಾಧಿಯ ಮೇಲೆ  ಹಲ್ಲೆ ಮಾಡುವಂತೆ ಮಾಡುತ್ತಿರುತ್ತಾರೆ.  ಅಲ್ಲದೇ ಆರೋಪಿಗಳು ಪಿರ್ಯಾಧಿದಾರರಿಗೆ ನಿನ್ನ ಮನೆಯವರು ವರದಕ್ಷಿಣೆ ರೂಪವಾಗಿ  3,00,000/- ವನ್ನು ನೀಡಬೇಕಾಗಿದ್ದು, ಅವರು ಖಾಲಿ 1,30,000/- ವನ್ನು ಮಾತ್ರ ನೀಡಿದ್ದು, ನೀನು ಹೋಗಿ ಹಣವನ್ನು ತರಬೇಕು ಇಲ್ಲದಿದ್ದರೆ ಮನೆಯಿಂದ ಹೊರ ಹಾಕುತ್ತೇವೆ ಎಂದು   ಬೆದರಿಕೆ ಹಾಕಿರುತ್ತಾರೆ. ಪಿರ್ಯಾಧಿದಾರರಿಗೆ ಅನಾರೋಗ್ಯ ಆದಾಗ ಆರೋಪಿತರುಗಳು ಸರಿಯಾಗಿ ಚಿಕಿತ್ಸೆಯನ್ನು ನೀಡುತ್ತಿರಲಿಲ್ಲ. ಪಿರ್ಯಾಧಿದಾರರು ತವರು ಮನೆಗೆ ಬಂದಾಗ 1 ನೇ ಆರೋಪಿ ಪೋನ್ ಮಾಡಿ "ನೀನು ಇಲ್ಲಿಗೆ ಬರುವುದು ಬೇಡಾ ನೀನು ಅಲ್ಲಿಯೇ ಇರು, ನಾನು ನಿನಗೆ ತಲಾಖ್ ನೀಡುತ್ತೇನೆ" ಎಂದು ಬೆದರಿಕೆ ಹಾಕಿರುತ್ತಾರೆ. ನಂತರ ಆರೋಪಿಗೆ ಹೆದರಿ ಪಿರ್ಯಾದಿದಾರರು ಸಾಗರಕ್ಕೆ ಹೋಗಿ ಸಾಂಸಾರಿಕ ಜೀವನ ಮಾಡಿಕೊಂಡಿದ್ದು,  ದಿನಾಂಕ: 12/06/2019 ರಂದು ಪಿರ್ಯಾಧಿದಾರರನ್ನು ನೋಡಲು  ತವರು ಮನೆಯವರು ಬಂದಾಗ ಆರೋಪಿತರುಗಳು  ಪಿರ್ಯಾಧಿಯ ತಂದೆ ತಾಯಿಗೆ  ಅವಮಾನ ಮಾಡಿರುತ್ತಾರೆ. ನಂತರ ಪಿರ್ಯಾಧಿದಾರರಿಗೆ ಜ್ವರ ಬಂದ ಕಾರಣ ಚಿಕಿತ್ಸೆಯನ್ನು ನೀಡದೇ ತವರು ಮನೆಗೆ ಬಿಟ್ಟು ಹೋಗಿದ್ದು, ಪಿರ್ಯಾಧಿದಾರರು ಮಾನಸಿಕವಾಗಿ ನೊಂದು ಹೋಗಿದ್ದು, ಪಿರ್ಯಾಧಿದಾರರು  ಆರೋಪಿಗಳ ಹಿಂಸೆ ತಾಳಲಾರದೇ ತವರು ಮನೆಯಲ್ಲಿಯೇ ವಾಸವಾಗಿದ್ದು ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021 ಕಲಂ:498(ಎ), 323,504,506 ಜೊತೆಗೆ 34 ಐಪಿಸಿ, 3,4 Dowry Prohibition Act , 3,4 The Muslim women (Protection Of rights On Marriage)Act 2019 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವ: ಪಿರ್ಯಾದಿ ಡೇವಿಡ್‌ಡಿ ಸೋಜ ಇವರು KL 40-8687 ನೊಂದಣಿ ಸಂಖ್ಯೆ  ಹೊಂದಿರುವ Hitachi 200 ಮತ್ತು KA 01 AG 2187, KA 01 AG 5646, KA 19 AD 0340, KL 41 B 2822  ನೊಂದಣಿ ಸಂಖ್ಯೆ ಹೊಂದಿರುವ  ಟಿಪ್ಪರ್‌ಲಾರಿಗಳ ಮಾಲಕರಾಗಿರುತ್ತಾರೆ. ಪಿರ್ಯಾದಿದಾರರು ದಿನಾಂಕ 20.03.2021 ರಂದು 1ನೇ ಆರೋಪಿ ರಾಜೇಶ್‌ಕುಮಾರ್‌ ಮುಖಾಂತರ ಒಂದು ಕರಾರನ್ನು ಮಾಡಿಕೊಂಡಿದ್ದು, ಸದ್ರಿ ಕರಾರಿನ ಪ್ರಕಾರ ಎಲ್ಲಾ ವಾಹನಗಳನ್ನು ಒಟ್ಟು 40,00,000/- ರೂಪಾಯಿಗೆ ಖರೀದಿ  ಮಾಡಲು ಆರೋಪಿಗಳು ಒಪ್ಪಿದ್ದು, ಅದೇ ದಿವಸ ಆರೋಪಿಗಳು 10,00,000/- ರೂ. ಹಣವನ್ನು ಪಾವತಿಸಿದ್ದು, ಬಾಕಿ ಉಳಿದ  30,00,000/- ಕ್ಕೆ 2 ನೇ ಆರೋಪಿ ಶೇಕ್‌ಬಶೀರ್‌ ಗೆ ಸೇರಿದ ದಿನಾಂಕ 25.04.2021 ರ ನಂಬ್ರ 881418 ರ ಬ್ಯಾಂಕ್‌ಆಫ್‌ಬರೋಡ, ಮಂಗಳೂರು ಭವಂತಿ ಸ್ಟ್ರೀಟ್‌ಶಾಖೆಯ ರೂ. 15,00,000/-ಕ್ಕೆ ಮತ್ತು ದಿನಾಂಕ 25.05.2021 ರ ನಂಬ್ರ 881419 ರ ಬ್ಯಾಂಕ್‌ಆಫ್‌ಬರೋಡ, ಮಂಗಳೂರು ಭವಂತಿ ಸ್ಟ್ರೀಟ್‌ಶಾಖೆಯ ರೂ. 15,00,000/-ಕ್ಕೆ ಚೆಕ್ಕುಗಳನ್ನು ನೀಡಿದ್ದು, ಪಿರ್ಯಾದಿದಾರರ ಮತ್ತು ಆರೋಪಿಗಳ ನಡುವೆ ಆದ ಕರಾರಿನ ಪ್ರಕಾರ ಪಿರ್ಯಾದಿದಾರರು ಎಲ್ಲಾ ವಾಹನಗಳನ್ನು ಆರೋಪಿಗಳ ಸ್ವಾಧೀನತೆಗೆ ಬಿಟ್ಟು ಕೊಟ್ಟಿದ್ದು, ಅಲ್ಲದೆ ವಾಹನಗಳ ಮಾಲಕತ್ವ ವರ್ಗಾವಣೆ ಮಾಡುವರೇ ಸಂಬಂಧಿಸಿದ ಫಾರಂ 29 & 30 ಗಳಿಗೆ ಸಹಿ ಹಾಕಿ ಕೊಟ್ಟಿದ್ದು, ಆದರೆ ಸದ್ರಿ ವಾಹನಗಳ ಮಾಲಕತ್ವವನ್ನು ಸಂಪೂರ್ಣ ಹಣ ಪಾವತಿ/ಚೆಕ್‌ನಗದೀಕರಣವಾದ ನಂತರವೇ  1ನೇ ಆರೋಪಿ ವರ್ಗಾಯಿಸಿಕೊಳ್ಳತಕ್ಕದ್ದು, ಆರೋಪಿಗಳು ವಾಹನಗಳನ್ನು ತಮ್ಮ ಸ್ವಾಧೀನತೆಗೆ ಪಡೆದುಕೊಂಡ ನಂತರ ಪಿರ್ಯಾದಿದಾರರು ಆರೋಪಿಗಳು ತಿಳಿಸಿದ ಪ್ರಕಾರ ಅವರು ಕೊಟ್ಟ ಚೆಕ್ಕುಗಳನ್ನು ನಗದೀಕರಿಸಲು ತಮ್ಮ ಬ್ಯಾಂಕಿಗೆ ಹಾಕಿದ್ದು, ಆದರೆ ಪಿರ್ಯಾದಿದಾರರ ಬ್ಯಾಂಕಿನವರು ದಿನಾಂಕ  21.06.2021 ರಂದು ಹಿಂಬರಹನೀಡಿದ್ದು ಅದರಲ್ಲಿ payment stoped  by the drawer ಎಂಬ  ಷರಾದೊಂದಿಗೆ ಚೆಕ್‌ಗಳು  ಬೌನ್ಸ್‌ಆಗಿರುತ್ತದೆ. ಆರೋಪಿಗಳು ಪಿರ್ಯಾದಿದಾರರಿಗೆ ಮೋಸ ವಂಚನೆ ಮಾಡುವ ಇರಾದೆಯಿಂದ ಚೆಕ್‌ಗಳನ್ನು ನೀಡಿ ನಂತರ ಪೇಮೆಂಟ್‌ಸ್ಟಾಪ್‌ಗೆ ಅರ್ಜಿ ಸಲ್ಲಿಸಿದ್ದು, ಪಿರ್ಯಾದಿದಾರರಿಗೆ ಸೇರಿದ ವಾಹನಗಳನ್ನು ಆರೋಪಿಗಳು ಸ್ವಾದೀನತೆಗೆ ಪಡೆದು ಪ್ರತಿಫಲ ಹಣ ಸಂಪೂರ್ಣ ಪಾವತಿಸದೆ ವಂಚಿಸಿದ್ದು, ಮೇಲಿನ 5 ವಾಹನಗಳ ಪೈಕಿ 3 ವಾಹನಗಳನ್ನು KL 40-8687 , KA 01 AG 2187, KL 41 B 2822 ಗಳನ್ನು ಪಿರ್ಯಾದಿದಾರರ ಅನುಮತಿ ಇಲ್ಲದೆ ಮಾರಾಟಮಾಡಿರುತ್ತಾರೆ.  ಆರೋಪಿತರು ಪಿರ್ಯಾದಿದಾರರ ವಿಶ್ವಾಸಕ್ಕೆ ನಂಬಿಕೆ ದ್ರೋಹ ಎಸಗಿರುತ್ತಾರೆ.ಆರೋಪಿತರ ಈ ಕೃತ್ಯದಿಂದ ಪಿರ್ಯಾದಿದಾರರಿಗೆ ಲಕ್ಷಗಟ್ಟಲೆ ನಷ್ಟವುಂಟಾಗಿದ್ದು, ಮೋಸ  ವಂಚನೆ ನಂಬಿಕೆ ದ್ರೋಹ ಎಸಗಿರುವ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ  ಕೈಗೊಳ್ಳ ಬೇಕು ಎಂಬಿತ್ಯಾದಿ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2021 ಕಲಂ: 406, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಫಿರ್ಯಾದಿ ರಂಗನಾಥ ಎಸ್ ಇವರ ತಂದೆಯಾದ ಶಿವರುದ್ರಪ್ಪ (56  ವರ್ಷ)ರವರು  ಕಳೆದ  ಐದಾರು  ವರ್ಷಗಳಿಂದ  ಉಡುಪಿಯಲ್ಲಿ  ಗುತ್ತಿಗೆ ಪೌರಕಾರ್ಮಿಕರಾಗಿ  ಕೆಲಸ  ಮಾಡಿಕೊಂಡಿದ್ದವರು  ವಿಪರೀತ  ಮದ್ಯವ್ಯಸನಿಯಾಗಿದ್ದು, ನಿನ್ನೆ  ದಿನ  ದಿನಾಂಕ:  25/10/2021 ರಂದು  ಬೆಳಿಗ್ಗೆ  11:30 ಗಂಟೆಯ ಸುಮಾರಿಗೆ  ಬೀಡಿನಗುಡ್ಡೆಯ  ಹಿರೇನ್‌ವೈನ್‌ಬಾರಿನ  ಶೌಚಾಲಯದಲ್ಲಿ  ತೀವ್ರ  ಅಸ್ವಸ್ಥಗೊಂಡು  ಬಿದ್ದಿದ್ದವರನ್ನು  ಸಮಾಜ ಸೇವಕರಾದ  ನಿತ್ಯಾನಂದ  ಒಳಕಾಡುರವರು ಚಿಕಿತ್ಸೆಯ ಬಗ್ಗೆ  ಅಜ್ಜರಕಾಡು  ಜಿಲ್ಲಾಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ  ಪರೀಕ್ಷಿಸಿದ  ವೈದ್ಯರು  ಶಿವರುದ್ರಪ್ಪರವರು  ಅದಾಗಲೇ ಮೃತಪಟ್ಟಿರುವುದಾಗಿ  ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 42/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿ ಶ್ರೀಮತಿ ಲಲಿತಾ ಇವರ ಅಕ್ಕ ಶ್ರೀಮತಿ ಜಾನಕಿರವರ ಮಗ ಪ್ರವೀಣ ಪ್ರಾಯ: 19 ವರ್ಷ ಇವರು ಬಾಳೆಹೊನ್ನೂರಿನಿಂದ ನಿನ್ನೆ ಪಿರ್ಯಾದುದಾರರ ಮನೆಯಾದ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಆರ್ಯಾಡ್ ಮಾನಬೆಟ್ಟು ಎಂಬಲ್ಲಿಗೆ ಬಂದಿದ್ದು ಈ ದಿನ ಮಧ್ಯಾಹ್ನ ಸುಮಾರು 12:30 ಗಂಟೆಗೆ ಪಿರ್ಯಾದುದಾರರು ತನ್ನ ಮಗ ಚೇತನ್, ಪ್ರವೀಣ್ ಹಾಗೂ ನೆರೆಕೆರೆಯವರಾದ ಸುಶೀಲ ಹಾಗೂ ರೇಖಾಳೊಂದಿಗೆ ಮನೆಯ ಬಳಿಯ ಕಲ್ಲಗುಂಡಿ ಎಂಬಲ್ಲಿ ತೋಡಿಗೆ ಬಟ್ಟೆ ತೊಳೆಯಲು ಹೋಗಿದ್ದು,  ಪಿರ್ಯಾದುದಾರರ ಮಗ ಚೇತನ್ ಈಜಾಡುವ ಬಗ್ಗೆ ನೀರಿಗೆ ಇಳಿದು ಈಜಾಡುತ್ತಿರುವಾಗ ಮಧ್ಯಾಹ್ನ 01:15 ಗಂಟೆಗೆ ಪ್ರವೀಣನು  ಚೇತನ್ ನ ಬಳಿ ಹೋಗುವ ಬಗ್ಗೆ ತೋಡಿನ ಬದಿಯಲ್ಲಿ ನೀರಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ನೀರಿನ ಸುಳಿಗೆ ಸಿಕ್ಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 38/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-10-2021 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080