ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ ‌

  • ಶಂಕರನಾರಾಯಣ: ಪಿರ್ಯಾದಿ ಕೃಷ್ಣ ನಾಯ್ಕ ಇವರ ಮಗ ಅಜಿತ ಪ್ರಾಯ 21 ವರ್ಷ ಇವನಿಗೆ ದಿನಾಂಕ 19-09-2022 ರಂದು ವಿಪರೀತ ಜ್ವ ರ ಬಂದಿದ್ದರಿಂದ  ಆತನ ತಾಯಿ ರುಕ್ಮಿಣಿ ಇವರು ಸಿದ್ದಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಔಷದಿ ಕೊಡಿಸಿದ್ದು ಜ್ವರ  ಜಾಸ್ತಿಯಾದ್ದರಿಂದ ದಿನಾಂಕ 20-09-2022 ರಂದು ಪಿರ್ಯಾದಿದಾರರು  ಅಜಿತನನ್ನು ಚಿಕಿತ್ಸೆಯ ಬಗ್ಗೆ  ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲು ಮಾಡಿದ್ದು ಅಲ್ಲಿ ಚಿಕಿತ್ಸೆ ನೀಡಿದ ವೈದ್ಯಾಧಿಕಾರಿವರು ಹಳದಿ ಕಾಯಿಲೆ ಇದೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೆ ಎಂ ಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ   ಕೆ ಎಂ ಸಿ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಿದ್ದು ಅಲ್ಲಿ ರಕ್ತ, ಮೂತ್ರ ಪರೀಕ್ಷೆ ಮಾಡಿದ ವೈದ್ಯಾಧಿಕಾರಿವರು ಅಜಿತನು ಯಾವುದೋ ವಿಷ ಪದಾರ್ಥ ಸೇವಿಸಿರುತ್ತಾನೆ ಎಂದು ತಿಳಿಸಿರುತ್ತಾರೆ. ದಿನಾಂಕ 25/09/2022 ರಂದು ಕೆಎಂ ಸಿ ಮಣಿಪಾಲ ಆಸ್ಪತ್ರೆಯಲ್ಲಿ  ಚಿಕಿತ್ಸೆಯಲ್ಲಿದ್ದವರು 19:15 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯು.ಡಿ.ಆರ್ 33/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಲ್ಪೆ: ಪಿರ್ಯಾದಿ ಅಶ್ವತ್  ನಾರಾಯಣ ಗೌಡ ಇವರ ಮಗನಾದ ನಿಶಾಂತ್ ಯಾದವ್ ಬಿ ಎ (21)  ರವರು ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯದ ಇಂಟರ್ ನ್ಯಾಷನಲ್ ಸೆಂಟರ್ ಆಫ್ ಅಪ್ಲೈಡ್ ಕಾಲೇಜಿನಲ್ಲಿ ಬಿ ಇ ವ್ಯಾಸಂಗ ಮಾಡಿಕೊಂಡಿರುತ್ತಾನೆ. ದಿನಾಂಕ:25-09-2022 ರಂದು 8:00 ಗಂಟೆ ಮಣಿಪಾಲ ಕಾಲೇಜಿನ ವಿದ್ಯಾರ್ಥಿಯಾದ ದೀಪಕ್ ರವರು ಪಿರ್ಯಾದಿಯ ಮೊಬೈಲ್ ಗೆ ಕರೆ ಮಾಡಿ ನಿಮ್ಮ ಮಗ ನಿಶಾಂತ್ ರವರು ನೀರಿನಲ್ಲಿ ಮುಳುಗಿ ಚಿಂತಾಜನಕನಾಗಿ ಆಸ್ಪತ್ರೆಯಲ್ಲಿಇರುವುದಾಗಿ ತಿಳಿಸಿದ ಕೂಡಲೇ ಪಿರ್ಯಾದಿದಾರರು ತನ್ನ ಅಳಿಯ ಸುಹಾಸ್ , ಸ್ನೇಹಿತ ಆದಿತ್ಯ ರವರೊಂದಿಗೆ ಕೂಡಲೇ ಬೆಂಗಳೂರಿನಿಂದ ಹೊರಟು ಮಲ್ಪೆಗೆ ಬಂದು ನಿಶಾಂತ್ ಯಾದವ್ ರವರೊಂದಿಗೆ ಬೀಚ್‌ ಗೆ ತೆರಳಿದ ವಿದ್ಯಾರ್ಥಿ  ಗೋಕುಲ್ ರವರಿಗೆ ಕರೆ ಮಾಡಿ ವಿಷಯ ಕೇಳಿದಾಗ ನಿಶಾಂತ್ ಯಾದವ್, ಮೇಹುಲ್, ಗೋಕುಲ,ಸ್ಪರ್ಶ,ಸತ್ಯಜಿತ್, ವಿನೀಶ್, ಶ್ರಿಶಾಂತ್ ರವರುಗಳು ರಜಾ ದಿನವಾಗಿದ್ದರಿಂದ ಬೆಳಿಗ್ಗೆ 6:30 ಗಂಟೆಗೆ ಮಣಿಪಾಲದಿಂದ ಹೊರಟು ಆಗುಂಬೆ ಮತ್ತು ಇತರೆ ಕಡೆ ವಿಹಾರ ನಡೆಸಿ, ಸಂಜೆ 4:00 ಗಂಟೆಗೆ ಹೂಡೆ ಬೀಚ್ ತಲುಪಿದ್ದು ಅಲ್ಲಿ ವಿದ್ಯಾರ್ಥಿಗಳಾದ ಷಣ್ಮುಖ ಹಾಗೂ ಶ್ರೀಧರ್ ರವರೊಂದಿಗೆ ಸೇರಿಕೊಂಡು ಪಡುತೋನ್ಸೆ ಗ್ರಾಮದ ಹೂಡೆ ಸಮುದ್ರದ ನೀರಿನಲ್ಲಿಆಟವಾಡಲು ಇಳಿದಿದ್ದುಸಂಜೆ 5:40 ಗಂಟೆ ಸಮಯಕ್ಕೆ ಸಮುದ್ರದ ಅಬ್ಬರದ ಅಲೆಗಳಿಗೆ ಮಗ ನಿಶಾಂತ್,ಶ್ರೀಧರ್, ಷಣ್ಮುಖ ರವರು ಸಿಲುಕಿ ನೀರಿನಲ್ಲಿ ಮುಳುಗಿದ್ದು, ನಿಶಾಂತ್, ಷಣ್ಮುಖ ರವರನ್ನು ಸ್ನೇಹಿತರು ಹಾಗೂ ನಾಗರೀಕರ ಸಹಾಯದಿಂದ ಸಂಜೆ 6:20 ಗಂಟೆಗೆ ಅವರನ್ನು ನೀರಿನಿಂದ ಮೇಲೆತ್ತಿ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿ ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿದ್ದು ಹಾಗೂ ಶ್ರೀಧರ್ ವಿದ್ಯಾರ್ಥಿಯ ನೀರಿನಲ್ಲಿ ಕಾಣೆಯಾಗಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯು.ಡಿ.ಆರ್ 52/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಲ್ಪೆ: ಪಿರ್ಯಾದಿ ಶ್ರೀಕಾಕೊಳಪು ಎಎಲ್ ಎನ್  ಗುಪ್ತ ಇವರ ಮಗನಾದ ಶ್ರೀಕರ ಗುಪ್ತಾ  (18)  ರವರು ಮಣಿಪಾಲದ ICASಸಂಸ್ಥೆಯಲ್ಲಿ ಪ್ರಥಮ ವರ್ಷದ BSC(Applied Sciences )  ವ್ಯಾಸಂಗ ಮಾಡಿಕೊಂಡಿರುತ್ತಾನೆ. ದಿನಾಂಕ:25-09-2022 ರಂದು 8:00 ಗಂಟೆ ಮಣಿಪಾಲ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸದಾಶಿವ ಪ್ರಭು ರವರು ಪಿರ್ಯಾಧಿದಾರರ ಮೊಬೈಲ್ ಗೆ ಕರೆ ಮಾಡಿ ಕಾಲೇಜಿಗೆ ರಜೆ ಇರುವುದರಿಂದ  ಸಹಪಾಠಿಗಳಾದ ನಿಶಾಂತ್ ಯಾದವ್, ಸಾಹಿ ಷಣ್ಮಖ, ಮೇಹುಲ್, ಸಂಶ್ರಿತ್ ಗೋಕುಲ, ಶ್ರಿಶಾಂತ್  ಹಾಗೂ ಇತರೊಂದಿಗೆ ಹೂಡೆ ಬೀಚ್  ಹೋಗಿ ಸಮುದ್ರದ ನೀರಿನಲ್ಲಿ ಆಟವಾಡುತ್ತಿರುವಾಗ ಸಂಜೆ ಸುಮಾರು 5:40 ಗಂಟೆ ಸಮಯಕ್ಕೆ ಸಮುದ್ರದ ಅಲೆಗೆ ಸಿಲುಕಿ  ಶ್ರೀಕರ ಗುಪ್ತ, ಆತನ  ಸ್ನೇಹಿತರಾದ ನಿಶಾಂತ , ಸಾಹಿಷಣ್ಮುಖ,   ನೀರಿನಲ್ಲಿ  ಮುಳುಗಿ  ಕೊಚ್ಚಿಕೊಂಡು ಹೋಗಿದ್ದು ,ಸುಮಾರು ಅರ್ಧ ಗಂಟೆ ನಂತರ ನಿಶಾಂತ , ಸಾಹಿಷಣ್ಮುಖ ಸಮುದ್ರದ ತೀರಕ್ಕೆ  ಬಂದಿದ್ದು ,ಅವರನ್ನು ಕೆಎಂ ಸಿ ಮಣಿಪಾಲ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ಅಲ್ಲಿ ಪರಿಕ್ಷಿಸಿದ ವೈದ್ಯರು  ಈಗಾಗಲೆ  ಮೃತಪಟ್ಟಿರುವುದಾಗಿ  ತಿಳಿಸಿದ್ದು , ಪಿರ್ಯಾದುದಾರರ ಮಗ  ಶ್ರೀಕರ ಗುಪ್ತ  ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕಾಣೆಯಾಗಿರುವುದಾಗಿ ತಿಳಿಸಿರುತ್ತಾರೆ. ವಿಷಯವನ್ನು ತಿಳಿದು ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ ಹೆಂಡತಿ  ಹೈದರಬಾದಿಯಿಂದ ಹೊರಟಿರುತ್ತಾರೆ. ದಿನಾಂಕ:26-09-2022 ರಂದು ಪಿರ್ಯಾದಿದಾರರ ಮಗ ಶ್ರೀಕರ ಗುಪ್ತರವರ ಮೃತದೇಹ ಬೆಳಿಗ್ಗೆ 5:00 ಗಂಟೆಗೆ  ದೊರೆತಿರುವುದಾಗಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಸದಾಶಿವ ಪ್ರಭು ರವರು ಪಿರ್ಯಾಧಿದಾರರಿಗೆ ಕರೆ ಮಾಡಿ ತಿಳಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯು.ಡಿ.ಆರ್ 53/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣ

  • ಕುಂದಾಪುರ: ದಿನಾಂಕ: 25.09.2022 ರಂದು ಸಂಜೆ 06:30 ಗಂಟೆಗೆ ಪಿರ್ಯಾದಿ ವಿಸ್ಮಯ ಇವರ ಬಾಬ್ತು ಸರ್ವೆ ನಂಬ್ರ 44/32 ರಲ್ಲಿ ಆರೋಪಿತ ಸುಕುರಾಮ್‌ ಶೆಟ್ಟಿ, ಸಂದೇಶ ಶೆಟ್ಟಿ,  ಗಿರೀಶ್‌ ಗಳು ಸೇರಿಕೊಂಡು ಅಕ್ರಮ ಪ್ರವೇಶ ಮಾಡಿ 407 ಟೆಂಪೋ ವಾಹನವನ್ನು ಕಾಲುದಾರಿಯಲ್ಲಿ ತರುತ್ತಿರುವಾಗ ಪಿರ್ಯಾಧಿದಾರರು ಹೋಗಿ ಟೆಂಪೋ ವಾಹನವನ್ನು ತಡೆದು ನಿಲ್ಲಿಸಿ ನಮ್ಮ ಸ್ಥಿರಾಸ್ಥಿಯಲ್ಲಿ ಓಡಾಡಬೇಡಿ ಎಂದು ಹೇಳಿದಾಗ ಆರೋಪಿಗಳ ಪೈಕಿ ಸುಕುರಾಮ್‌ ಶೆಟ್ಟಿ ಹಾಗೂ ಸಂದೇಶ ಶೆಟ್ಟಿ ಯವರು ಟೆಂಪೋದಿಂದ ಇಳಿದು ಪಿರ್ಯಾಧಿದಾರರಿಗೆ ಹಲ್ಲೆ ಮಾಡಿದ್ದು ಇದರ ಪರಿಣಾಮ ಪಿರ್ಯಾಧಿದಾರರ ಮೊಬೈಲ್‌ ಪೋನ್‌ ಕೆಸರಿನಲ್ಲಿ ಬಿದ್ದು ಹಾಳಾಗಿರುತ್ತದೆ. ಆಗ ಪಿರ್ಯಾಧಿದಾರರನ್ನು ಬಿಡಿಸಲು ಬಂದ ಪಿರ್ಯಾಧಿದಾರರ ಅಮ್ಮನನ್ನು ಕೂಡಾ  ಆರೋಪಿಗಳು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದು.  ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 51/2022 ಕಲಂ: 354, 447, 427, 323, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-09-2022 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080