ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾಧ ಮಂಜುನಾಥ (26) ತಂದೆ; ನಾಗರಾಜ, ವಾಸ ಕತ್ತಲೆಹೊಳೆ, ಯಳಜಿತ್ ಗ್ರಾಮ, ಬೈಂದೂರು ತಾಲೂಕು, ಉಡುಪಿ ಇವರು ದಿನಾಂಕ 24/09/2021 ರಂದು ಇವರ ಮೋಟಾರ್ ಸೈಕಲ್ ನಂಬ್ರ ಕೆಎ-20 ಈಎಲ್-1991 ನೇದರಲ್ಲಿ ಸಹಸವಾರನ್ನಾಗಿ ಅವರ ಮಾವ ಗುರುವಪ್ಪ ಎಂಬವವರನ್ನು ಕುಳ್ಳಿರಿಸಿಕೊಂಡು ಕೆಲಸ ಮುಗಿಸಿ ವಾಪಸ್ಸು ಮನೆಯಾದ ಕತ್ತಲೆಕೋಣೆಗೆ ಬರುವರೇ ಬೆಳಿಗ್ಗೆ 08:30 ಗಂಟೆಗೆ ಯಳಜಿತ್ ಗ್ರಾಮದ ಯಳಜಿತ್ ರಿಕ್ಷಾ ನಿಲ್ದಾಣದ ಬಳಿ ರಸ್ತೆಯ ಎಡಬದಿಯಿಂದ ಬಲಬದಿಗೆ ತಿರುಗಿಸುವರೇ ಇಂಡಿಕೇಟರ್ ಹಾಕಿ ಸೂಚನೆ ನೀಡಿ ಬಲಬದಿಗೆ ಚಲಾಯಿಸಿಕೊಂಡು ಬಂದಾಗ ಗೋಳಿಹೊಳೆ ಕಡೆಯಿಂದ ಯಡ್ತರೆ ಕಡೆಗೆ ರಾಷ್ಟ್ರೀಯ ಹೆದ್ದಾರಿ 766ಸಿ ನೇದರಲ್ಲಿ ಮೋಟಾರ್ ಸೈಕಲ್ ನಂಬ್ರ ಕೆಎ-47 ಆರ್-7207ನೇದನ್ನು ಅದರ ಸವಾರ ಶೇಖರ ಮರಾಠಿಯು ಆತನ ಮೋಟಾರ್ ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಮಂಜುನಾಥ ರವರ ಮೋಟಾರು ಸೈಕಲ್ ನ ಎಡಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ನೊಂದಿಗೆ ಇವರು ಮತ್ತು ಸಹಸವಾರ ಗುರುವಪ್ಪರವರು ರಸ್ತೆಗೆ ಬಿದ್ದಿದ್ದು ಪರಿಣಾಮ ಗುರುವಪ್ಪರವರ ಎಡಕಾಲಿಗೆ ಮೂಳೆ ಮುರಿತದ ರಕ್ತಗಾಯವಾಗಿದ್ದು, ಮಂಜುನಾಥ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಗಾಯಗೊಂಡ ಗುರುವಪ್ಪನವರನ್ನು ಇತರರು ಸೇರಿ ಉಪಚರಿಸಿ ಒಂದು ವಾಹನದಲ್ಲಿ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ವೈದ್ಯ ಸಲಹೆಯಂತೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಅಲ್ಲಿಂದ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಗುರುವಪ್ಪರವರನ್ನು ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಮಂಜುನಾಥ ರವರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಅವರ ಆರೈಕೆಯಲ್ಲಿದ್ದರಿಂದ ತಡವಾಗಿ ದೂರು ನೀಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 159/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ರತ್ನಾಕರ ನಾಯ್ಕ (45) ತಂದೆ ಓಬಯ್ಯ ನಾಯ್ಕ ವಾಸ: ಕುಂಠಿ ಬೈಲು ಮಿಯ್ಯಾರು ಕಾರ್ಕಳ ಇವರು ದಿನಾಂಕ 25/09/2021  ರಂದು  ತನ್ನ ಸ್ನೇಹಿತರಾದ ನಂದ ಕಿಶೋರ ಹಾಗೂ ಶಶಿಧರ ದೇವಾಡಿಗರೊಂದಿಗೆ ಕೆಲಸದ ನಿಮಿತ್ತ ವೊಲ್ಸ ವ್ಯಾಗನ್ ಕಾರು ನಂಬ್ರ KA-20 P-9544 ನೇದರಲ್ಲಿ ಕುಂದಾಪುರದಿಂದ ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೊರಟಿದ್ದು ಕಾರನ್ನು ಶಶಿಧರ ದೇವಾಡಿಗರು ಚಲಾಯಿಸಿಕೊಂಡಿದ್ದು ಸಮಯ ಸಂಜೆ ಸುಮಾರು 4:30 ಗಂಟೆಗೆ ಬ್ರಹ್ಮಾವರ  ತಾಲೂಕು, ಮೂಡಹಡು   ಗ್ರಾಮದ ಮೂಡು ಗಣಪತಿ ದೇವಸ್ಥಾನದ ಎದುರು ಬರುವಾಗ ಶಶಿಧರ ದೇವಾಡಿಗರು ಕಾರನ್ನು  ಅತೀವೇಗದಿಂದ ಚಲಾಯಿಸಿದ ಪರಿಣಾಮ  ಕಾರು ನಿಯಂತ್ರಣ ತಪ್ಪಿ ರಸ್ತೆಯ ಬಳಿಯಿರುವ ಡಿವೈಡರ್ ಮೇಲೆ ಹೋಗಿ ಮಗುಚಿ ಬಿದ್ದಿರುತ್ತದೆ ಕಾರಿನಲ್ಲಿದ್ದವರಿಗೆ ಗಾಯ ನೋವು ಆಗಿರುವುದಿಲ್ಲ. ಕಾರಿನ ಎದುರುಗಡೆ ಸಂಪೂರ್ಣ ಜಖಂ ಆಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 167/2021 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 25/09/2021 ರಂದು ಪಿರ್ಯಾದಿದಾರರಾಧ ನಾಗರಾಜ (43) ತಂದೆ ದಿ ಪರಶುರಾಮ  ನಾಯ್ಕ ವಾಸ- ಡೋರ  ನಂ.  2-113 ಎ 10  ಆಶೋಕ  ನಗರ  ಮಲ್ಪೆ  ಕ್ರಾಸ್  ರಸ್ತೆ  ಪುತ್ತೂರು  ಉಡುಪಿ ಇವರ ತಾಯಿ ರಂಗಮ್ಮ ರವರು ಮನೆಯಿಂದ ಸಂತೆಕಟ್ಟೆ ಹೋಗಿ ಮನೆಗೆ ಬೇಕಾದ ವಸ್ತುಗಳನ್ನು  ಖರೀದಿಸಿ   ವಾಪಾಸು ಮನೆ ಕಡೆಗೆ ಆಶೀರ್ವಾದ ಜಂಕ್ಷನ್ನನಿಂದ ಮಲ್ಪೆ ರಸ್ತೆಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು  ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 11:00 ಗಂಟೆಗೆ ಕಡೆಗೆ ಆಶೀರ್ವಾದ ಜಂಕ್ಷನ್ನ ಕಡೆಯಿಂದ  ಮಲ್ಪೆ ಕಡೆಗೆ KA-20 C-0224 ನೇ ರಿಕ್ಷಾ ಚಾಲಕ ಸಂಜೀವ ಎಂಬವರು ತನ್ನ ರಿಕ್ಷಾವನ್ನು ಆಶೀರ್ವಾದ – ಮಲ್ಪೆ ರಸ್ತೆಯಲ್ಲಿರುವ ನಂದಿನಿ ಮಿಲ್ಕ ಪಾರ್ಲರ್ ಅಂಗಡಿ ಬಳಿ ದುಡುಕುತನ ಮತ್ತು ನಿರ್ಲಕ್ಷತನದಿಂದ   ರಸ್ತೆಯ ತೀರಾ ಎಡ  ಬದಿಗೆ ಚಲಾಯಿಸಿ ನಾಗರಾಜ ಇವರ ತಾಯಿ  ರಂಗಮ್ಮ  ರವರಿಗೆ  ಡಿಕ್ಕಿ  ಹೊಡೆದ  ಪರೀಣಾಮ ರಂಗಮ್ಮ  ರವರು  ರಸ್ತೆಗೆ  ಬಿದ್ದು ಮುಖ ತಲೆ ಕೈ ಕಾಲುಗಳಿಗೆ ಗಾಯವಾಗಿದ್ದು ಎಡಕೈಗೆ  ಮೂಳೆ ಮುರಿತ ಉಂಟಾಗಿದ್ದು  ಚಿಕಿತ್ಸೆಯ ಬಗ್ಗೆ  ಉಡುಪಿ  ಜಿಲ್ಲಾ  ಸರಕಾರಿ  ಅಸ್ಪತ್ರೆಗೆ  ದಾಖಲಿಸಿ  ನಂತರ  ಹೆಚ್ಚಿನ  ಚಿಕಿತ್ಸೆಯ  ಬಗ್ಗೆ  ಉಡುಪಿ ಆದರ್ಶ ಅಸ್ಪತ್ರೆಗೆ  ದಾಖಲಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 63/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಮಾಸೆಬೈಲು: ಪಿರ್ಯಾದಿದಾರರಾಧ ಶ್ರೀಮತಿ ಹೇಮಾವತಿ (30) ಗಂಡ ದಯಾನಂದ ಶೆಟ್ಟಿ ವಾಸ: ದಾಸನಹೊಳೆ ಗುಡ್ಡೆಯಂಗಡಿ  5ಸೆಂಟ್ಸ್ ಶೇಡಿಮನೆ ಗ್ರಾಮ ಹೆಬ್ರಿ ಇವರ ಗಂಡ ದಯಾನಂದ ಶೆಟ್ಟಿ (36) ಇವರು ಮೊದಲಿನಿಂದಲೂ ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದು ಅಲ್ಲದೆ ಕೆಲವೊಂದು ಕಡೆ ಸಾಲ ಮಾಡಿದ್ದು  ದುಡಿದ ಹಣವನ್ನು ಕುಡಿತಕ್ಕೆ ಬಳಸುತ್ತಿದ್ದು ಇತ್ತೀಚೆಗೆ ಸರಿಯಾಗಿ ಕೆಲಸ ಸಂಪಾದನೆ ಇಲ್ಲದೆ ಇದ್ದು ಅಲ್ಲದೆ ಅವರಿಗೆ ಒಂದು ಕಣ್ಣಿನ ದೃಷ್ಟಿ ಕೂಡಾ ಸರಿಯಾಗಿ ಇಲ್ಲದೆ ಇದ್ದು ಅದೇ ಚಿಂತೆಯಿಂದ ಮನ ನೊಂದು ದಿನಾಂಕ 25/09/2021 ರಂದು ಶ್ರೀಮತಿ ಹೇಮಾವತಿ ರವರು ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಸಂಜೆ 17:00 ಗಂಟೆ ಸಮಯಕ್ಕೆ ತನ್ನ ಮನೆಯಾದ ಶೇಡಿಮನೆ ಗ್ರಾಮದ ದಾಸನಹೊಳೆ 5 ಸೆಂಟ್ಸ್ ಎಂಬಲ್ಲಿ ಮನೆಯ ಸಿಮಂಟ್ ಶೀಟು ಮಾಡಿನ ಕಬ್ಬಿಣದ ಪಕ್ಕಾಸಿಗೆ ಲುಂಗಿಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು  ಶ್ರೀಮತಿ ಹೇಮಾವತಿ ರವರ ಮಗಳು ಶಶಿಕಲಾ ಎಂಬವರು ನೋಡಿ ಲುಂಗಿಯನ್ನು ಕತ್ತಿಯಿಂದ ತುಂಡರಿಸಿ ಕೆಳಗಿಳಿಸಿ ನೋಡಿದಲ್ಲಿ ದಯಾನಂದ ಶೆಟ್ಟಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 9/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಕಾಪು: ಪಿರ್ಯಾದಿದಾರರಾಧ ಶಿವರಾಜು ಎಂ, ದ್ವಿ. ದ. ಲೆಕ್ಕ ಸಹಾಯಕ. ಗ್ರಾಮ ಪಂಚಾಯತ್  ಉದ್ಯಾವರ. ಉದ್ಯಾವರ ಇವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಉದ್ಯಾವರ ಗ್ರಾಮ ಪಂಚಾಯತಿಯಲ್ಲಿ ದ್ವಿತಿಯ ದರ್ಜೆ ಲೆಕ್ಕ ಸಹಾಯಕನಾಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ. ಶಿವರಾಜು ಎಂ ರವರ ಮೇಲೆ ಆರೋಪಿ 1)  ಶೇಖರ ಕೋಟ್ಯಾನ್ ತಂದೆ : ದಿ. ಕೂಸ ಜಿ. ಸುವರ್ಣ   ವಾಸ : ಗುರು ಕಾಂಪ್ಲೇಕ್ಸ್   ಪಿತ್ರೋಡಿ  ಉದ್ಯಾವರ ಗ್ರಾಮ ಉಡುಪಿ ತಾಲೂಕು. 2) ಭಾಸ್ಕರ್ ಕೋಟ್ಯಾನ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಗೊವಿಂದರಗುಡ್ಡೆ ಹತ್ತಿರ ಕಲಾಯಿಬೈಲು, ಉದ್ಯಾವರ ಗ್ರಾಮ ಇವರುಗಳು ಈ ಭ್ರಷ್ಟ ಅಧಿಕಾರಿ ಶಿವರಾಜುರನ್ನು ಪಂಚಾಯತ್ ಅಧಿಕಾರಿಯಾಗಿ ನೇಮಕ ಮಾಡಿರುವುದು ಅಧಿಕೃತವೇ? ಈಗಾಗಲೇ ಸಾಕಷ್ಟು ಆಡಳಿತ  ಸಿಬ್ಬಂದಿ  ಇರುವಾಗ  ಗ್ರಾಮ ಪಂಚಾಯತಿಗೆ  ಹೊರೆಯಾಗಿ ನೇಮಕ ಮಾಡಿರುವ ಉದ್ದೇಶವೇನು  ಈ ಭ್ರಷ್ಟ  ಅಧಿಕಾರಿಯ ಅಧಿಕಾರ ದರ್ಪ ವಸೂಲಿ ಧಂದೆ ಸಾರ್ವಜನಿಕ ನೀಡಿರುವ ಸರ್ಕಾರಿ ಸೇವೆ ಬಗ್ಗೆ ಮಾನಸಿಕ ಕಿರಿಕಿರಿ ಬಗ್ಗೆ ಕೊನೆ ಇಲ್ಲವೆ. ಈತ ಸೇವೆಯಲ್ಲಿ ಮುಂದುವರೆಯಲು ಅರ್ಹನೇ? ಇಂತಹ ಭ್ರಷ್ಟ  ಅಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಿ ಮಾನ್ಯ ಲೋಕಾಯುಕ್ತ ನ್ಯಾಯಾಲಯದಲ್ಲಿ ಕಾನೂನು  ಕ್ರಮ ಜರುಗಿಸಿ ಕೇಸು ದಾಖಲಿಸಿ ಕೇಸು ಇತ್ಯರ್ಥ ಆಗುವ ತನಕ ಮಾಸಿಕ ವೇತನ ಸೌಲಭ್ಯಕ್ಕೆ ತಡೆ ಆಜ್ಞೆ ನೀಡಬೇಕೆಂದು ಶಿವರಾಜು ರವರ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ನೀಡಿರುತ್ತಾರೆ.  ದಿನಾಂಕ 23/09/2021 ರಂದು ಉದ್ಯಾವರ ಗ್ರಾಮ ಪಂಚಾಯತಿನ 2021-2022 ನೇ ಸಾಲಿನ ಗ್ರಾಮ  ಸಭೆಯು ಉದ್ಯಾವರ ಬಿಲ್ಲವ ಮಹಾಜನ ಸಂಘ, ಉದ್ಯಾವರದಲ್ಲಿ  ಬೆಳಗ್ಗೆ 11:00 ರಿಂದ ಸಂಜೆ 4:00  ಗಂಟೆಯವರೆಗೆ ನಡೆದಿದ್ದು, ಸದ್ರಿ ಗ್ರಾಮ ಸಭೆಯಲ್ಲಿ  ಮೇಲಿನ ವಿಷಯದಲ್ಲಿ  ಆರೋಪಿಗಳು ಶಿವರಾಜು ರವರ ವಿರುದ್ಧ ಅಸಭ್ಯವಾಗಿ ಮಾತನಾಡಿ ಮೇಲಿನ ದೂರಿನ ವಿಷಯವನ್ನು ಪುನಃ ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಿ ಸಾರ್ವಜನಿಕವಾಗಿ ಅವಮಾನ ಮಾಡಿ ಉದ್ಯಾವರ ಗ್ರಾಮ ಪಂಚಾಯತ್‌‌ನ ಲೆಕ್ಕ ಸಹಾಯಕನನ್ನು  ಉದ್ಯಾವರದಿಂದ ವರ್ಗಾವಣೆ ಮಾಡಿ ಇಲ್ಲಿಂದ ಓಡಿಸಬೇಕು. ಇಂತಹ  ಲೆಕ್ಕ  ಸಹಾಯಕ ಉದ್ಯಾವರ  ಗ್ರಾಮ ಪಂಚಾಯತ್‌ನಲ್ಲಿ ಇರುವುದು ಬೇಡ ಎಂಬುವುದಾಗಿ ಅವಮಾನ ಮಾಡಿ ಸಾಮಾಜಿಕ ಬಹಿಷ್ಕಾರ  ಹಾಕಿರುತ್ತಾರೆ. ಹಾಗೂ ಸದ್ರಿ  ಗ್ರಾಮ ಸಭೆಯಲ್ಲಿ ಶಿವರಾಜು ರವರು ಪರಿಶಿಷ್ಟ ಜಾತಿಯ ನೌಕರ ಎನ್ನುವ ಕಾರಣಕ್ಕೆ ಅವಮಾನಗೊಳಿಸುವ ಉದ್ದೇಶದಿಂದ ಉದ್ದೇಶ ಪೂರ್ವಕವಾಗಿ ಅಪಮಾನಗೊಳಿಸಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 150/2021 US 3(1)(P) 3(1)(R) 3(1)(U) 3(1)(ZC) SC-ST Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾಧ ವಿಲ್ಪ್ರೆಡ್‌‌ಲೂವಿಸ್‌‌(63), ತಂದೆ: ದಿ ಲಿಯೋ ಲೂವಿಸ್‌‌ವಾಸ:ಮನೆ ನಂಬ್ರ 1/8 ಪಡುಬೈಕಾಡಿ ಬೈಕಾಡಿ ಗ್ರಾಮ, ಬ್ರಹ್ಮಾವರ ಇವರ ಹೆಂಡತಿ ವಿಕ್ಟೋರಿಯಾಳ ಕೃಷಿ ಜಾಗವು ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆಯಲ್ಲಿದ್ದು, ಸದ್ರಿ ಜಾಗದಲ್ಲಿ ತಕರಾರು ಇದ್ದು, ಇತರರು ಪ್ರವೇಶ ಮಾಡದಂತೆ ಮಾನ್ಯ ನ್ಯಾಯಾಲಯದ ಇಂಜೆಕ್ಷನ್‌‌‌ ಆದೇಶ ಇರುತ್ತದೆ. ದಿನಾಂಕ 24/09/2021 ರಂದು ಸಂಜೆ 5:00 ಗಂಟೆ ಸುಮಾರಿಗೆ ವಿಲ್ಪ್ರೆಡ್‌‌ಲೂವಿಸ್‌ ಹಾಗೂ ಅವರ ಹೆಂಡತಿ ಸದ್ರಿ ಜಾಗಕ್ಕೆ ಹೋದಾಗ, ಸದ್ರಿ ಜಾಗದಲ್ಲಿ ಇವರು ಹಾಕಿದ ಶಿಲೆಕಲ್ಲನ್ನು, ಜಾಗದ ಪಕ್ಕದ ಮನೆಯ ಆರೋಪಿ 1ನೇ ಲಿನೆಟ್‌‌‌ಲೋಬೋ ರವರು ತೆಗೆದಾಗ, ಇವರು ಆಕ್ಷೇಪಿಸಿ, ನ್ಯಾಯಾಲಯದ ಆದೇಶ ಇರುವುದಾಗಿ ಹೇಳಿದ್ದಕ್ಕೆ ಆರೋಪಿ 1ನೇ ಲಿನೆಟ್‌ಲೋಬೋ, ಆರೋಪಿ 2 ನೇ ಸೊಲೋಮಾನ್‌ ಲೋಬೋರವರು ಜಾಗಕ್ಕೆ ಬಂದು ಕಬ್ಬಿಣದ ರಾಡ್‌‌ನಿಂದ ವಿಲ್ಪ್ರೆಡ್‌‌ಲೂವಿಸ್‌ ಇವರ ಎಡಗೈ ಬೆರಳುಗಳಿಗೆ ಹೊಡೆದು, ಉಂಗುರ ಬೆರಳಿಗೆ ಹಾಗೂ ಮಧ್ಯ ಬೆರಳಿಗೆ ರಕ್ತಗಾಯವಾಗಿದ್ದು ತೀವ್ರ ಒಳ ಜಖಂ ಉಂಟಾಗಿರುತ್ತದೆ. ಜಗಳವನ್ನು ತಪ್ಪಿಸಲು ಬಂದ ಇವರ ಹೆಂಡತಿಗೂ ಕೂಡಾ ಆರೋಪಿ ಸೋಲೋಮಾನ್‌ರವರು ಕೈಯಲ್ಲಿ ಹೊಡೆದು ನಂತರ ಆರೋಪಿ 1ನೇ ಲಿನೆಟ್‌ಲೋಬೋ ಹಾಗೂ ಆರೋಪಿ 3ನೇ ಆಲ್ವಿನ್‌ಲೋಬೋರವರು ದೂಡಿ ಹಾಕಿರುತ್ತಾರೆ. ನಂತರ ಅಲ್ಲಿ ಇದ್ದ ಹತ್ತಿರದ ಮನೆಯವರು ವಿಲ್ಪ್ರೆಡ್‌‌ಲೂವಿಸ್‌ ಇವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ವೈಧ್ಯರ ಸಲಹೆ ಮೇರೆಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 173/2021 ಕಲಂ: 323, 326, 354, RW 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾಧ ಲಿನೆಟ್ ಲೋಬೋ (45), ಗಂಡ: ವಿಪ್ರಿಯ ಲೋಬೋ  ಉಪ್ಪಿನ ಕೋಟೆ ,ವಾರಂಬಳ್ಳಿ ಗ್ರಾಮ ಇವರು ದಿನಾಂಕ 24/09/2021 ರಂದು ಸಂಜೆ 5:00 ಗಂಟೆ ಸುಮಾರಿಗೆ ತನ್ನ ಮನೆಯ ಎದುರು  ರಸ್ತೆಗೆ  ಹಾಕಿ ಕಲ್ಲನ್ನು ತೆಗೆಯಲು ಇವರು ಹಾಗೂ ಅವರ ಮೈದುನ ಸೋಲೋಮನ್ ರವರು ಹೋದಾಗ ಆರೋಪಿಗಳು 1. ವಿಲ್ಲ್ ಪ್ರೆಡ್ ಲೂವೀಸ್ , 2.ವಿಕ್ಟೋರಿಯಾ ಬುತ್ತೆಲ್ಲೋ 3. ಚಾರ್ಲಿ ಬುತ್ತೆಲ್ಲಾ  ಲೋಬೋ4. ಮಾರ್ಷಲ್ಲ್  ಬುತ್ಎಲ್ಲೋ 5.ಜುಲೆಟ್ ಬುತೆಲ್ಲೋ, ಮತ್ತು ಅವರ ಮಕ್ಕಳು ಅಲ್ಲಿಗೆ ಬಂದು ದೊಣ್ಣೆಯಿಂದ ಕುತ್ತಿಗೆಗೆ ಹೊಡೆದು ಕತ್ತಿಯಿಂದ ಎಡಕೈಗೆ ಹೊಡೆದಿದ್ದು ನೀನು ನನ್ನ ಜಾಗಕ್ಕೆ ಬರ ಬಾರದು  ನೀನು ಸತ್ತರೆ ಎಲ್ಲಾ ಸರಿಯಾಗುತ್ತದೆ ನಿನ್ನನನು ಕೊಂದುಹಾಕುತ್ತೇನೆ ಎಂದು ಆರೋಪಿ ಚಾರ್ಲಿಬುತ್ತೆಲೋರವರು ಬೆದರಿಕೆ ಹಾಕಿರುತ್ತಾರೆ ಆರೋಪಿಗಲ್ಲೆರೂ ಸೇರಿ ಕಾಲಿನಿಂದ ತುಳಿದಿರುತ್ತಾರೆ  ಪರಿಣಾಮ ಲಿನೆಟ್ ಲೋಬೋ ಇವರ ಮೊಣ ಕೈ ಗೆ ರಕ್ತಗಾಯವಾಗಿರುತ್ತದೆ ಅಲ್ಲದೇ ಕುತ್ತಿಗೆಗೆ ಭುಜಕ್ಕೆ ಬಲವಾದ ನೋವಾಗಿದ್ದು ಚಿಕಿತ್ಸೆಗಾಗಿ ಉಡುಪಿ  ಅಜ್ಜರಕಾಡು ಆಸ್ಪತ್ರೆಗೆ  ದಾಖಲಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 174/2021 ಕಲಂ: 143,147,,148,324,,323,506 R/W 149    ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾಧ ರೋಶಿನಿ ಬುತ್ತೇಲ್ಲೋ (46), ಗಂಡ: ಪ್ರೀಜವನ್‌‌‌ಬುತ್ತೇಲ್ಲೋ   ವಾಸ: ಬುತ್ತೇಲ್ಲೋ ಕಾಂಪೌಂಡ್‌‌‌ಉಪ್ಪಿನ ಕೋಟೆ ,ವಾರಂಬಳ್ಳಿ ಇವರು ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆಯಲ್ಲಿದ್ದು, ದಿನಾಂಕ 24/09/2021 ರಂದು ಮಧ್ಯಾಹ್ನ 14:00 ಗಂಟೆ ಸುಮಾರಿಗೆ ರೋಶಿನಿ ಬುತ್ತೇಲ್ಲೋ ರವರು ಮನೆಯಲ್ಲಿರುವ ಸಮಯ ಲಿನೇಟ್‌‌‌ಲೋಬೋ ಮತ್ತು ಅವರ ಮನೆಯವರು ಸೇರಿ ಇವರ ಜಾಗಕ್ಕೆ ಆಕ್ರಮ ಪ್ರವೇಶ ಮಾಡಿ ಗೇಟನ್ನು ಕಿತ್ತು ಹಾಕಿ ಬಿಸಾಡಿ ರೋಶಿನಿ ಬುತ್ತೇಲ್ಲೋ ರವರನ್ನು ಉದ್ದೇಶಿಸಿ ನಿನ್ನನ್ನು ಬಿಡುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 175/2021 ಕಲಂ: 447, 427, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮದ ಆರೋಪಿತರಾದ . ಮಾಲಿ ರಿಜ್ವಾನ್ (45) ತಂದೆ: ಮಾಲಿ ಅಬ್ಬು, ವಾಸ: ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು, 2. ಮೌಲಾನಾ ಹಾದಿ (45), ಮೌಲ್ವಿ ಮತ್ತು ಉರ್ದು ಶಾಲಾ ಪ್ರಮುಖ, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು, 3. ಇಲಿಯಾಸ್ (48), ತಂದೆ: ಮನ್ನಿ ಅಬ್ದುಲ್ ಖಾದರ್, ಜನತಾ ಐಸ್ ಫ್ಯಾಕ್ಟರಿ ಬಳಿ, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು, 4. ಮಾಲಿ ಸುಭಾನ್, ತಂದೆ: ಮಾಲಿ ಅಬ್ಬು,  ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು, 5. ಅಬು ಸಾಲಿ, ತಂದೆ: ಮನ್ನಿ ಅಬ್ದುಲ್ ಖಾದರ್, ಹೋಲಿ ಕ್ರಾಸ್, ತ್ರಾಸಿ ಗ್ರಾಮ, ಕುಂದಾಪುರ ತಾಲೂಕು, 6. ಅಬ್ದುಲ್ ರಜಾಕ್, 7. ಮಜೀದ್ @ ಫಿಟ್ಟರ್ ಮಜೀದ್, 8.ಮೊಹಮ್ಮದ್ ಇಬ್ರಾಹಿಂ, 9. ಇಮಾಮ್ ಶೇಖ್, ಮತ್ತು ಇತರರು ಗಂಗೊಳ್ಳಿ ಗ್ರಾಮದ ಮಾಲಿ ರಿಜ್ವಾನ್ ಎಂಬವರ ಮನೆಯ ಸಮೀಪ ಮತ್ತು ಇತರ ಕಡೆಗಳಲ್ಲಿ ಅಕ್ರಮವಾಗಿ ಯಾವುದೇ ಕಾನೂನಾತ್ಮಕ ದಾಖಲೆ ಇಲ್ಲದೇ ಕಾನೂನು ಬಾಹಿರವಾಗಿ ಗೋ ಕಳ್ಳತನ ಮಾಡಿ ಗೋವುಗಳನ್ನು ತಂದು ಅವುಗಳನ್ನು ಕೋಮು ಸೂಕ್ಷ್ಮವಾದ ಗಂಗೊಳ್ಳಿ ಪರಿಸರದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ಮತ್ತು ಗಂಗೊಳ್ಳಿ ಹಾಲ್ಮಕ್ಕಿ ದೇವಸ್ಥಾನದ ಬಳಿ ಕೇವಲ ಕೋಮು ಗಲಭೆ ಸೃಷ್ಟಿಸುವ ಮತ್ತು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ದುರುದ್ದೇಶ ಇರಿಸಿ ಹಿಂಸಾತ್ಮಕವಾಗಿ ಅವುಗಳ ಕಾಲು ಕಟ್ಟಿ ಹಾಕಿ ಅವುಗಳನ್ನು ಹಿಂಸಾತ್ಮಕವಾದ ರೀತಿಯಲ್ಲಿ ಕ್ರೌರ್ಯದಿಂದ ಹರಿತವಾದ ಆಯುಧದಿಂದ ಅವುಗಳ ಕುತ್ತಿಗೆ ಒತ್ತಿ ಹಿಡಿದು ಚೂರಿಯಿಂದ ತಿವಿದು ಪ್ರಾಣಿ ಹಿಂಸೆ ಮಾಡಿ ಅವುಗಳ ಬರ್ಬರವಾದ ವಧೆಯನ್ನು ಮಾಡಿ ಪ್ರಚೋದಿಸಿರುವುದಲ್ಲದೇ ಮತ್ತು ಸದ್ರಿ ಹಿಂಸಾತ್ಮಕ ಕೃತ್ಯವನ್ನು ದಿನಾಂಕ 24/09/2021 ರಂದು ವಿಡಿಯೋವನ್ನು ಸಾರ್ವಜನಿಕವಾಗಿ ಹರಿ ಬಿಟ್ಟು ಕೋಮು ಗಲಭೆಗೆ ಪ್ರಚೋದನೆಯನ್ನು ನೀಡುವ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಹಿಂಸೆ ಮತ್ತು ಗೋವುಗಳ ವಧೆಯನ್ನು ಮಾಡಿರುತ್ತಾರೆ, ಎಂಬುದಾಗಿ ಯಶವಂತ ಖಾರ್ವಿ (33) ತಂದೆ: ಸುಬ್ರಾಯ ಬೋರ್ಕರ್ ವಾಸ: ಗಂಗೊಳ್ಳಿ ಗ್ರಾಮ ಮತ್ತು ಅಂಚೆ ಕುಂದಾಪುರ ತಾಲೂಕು ಇವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 88/2021 ಕಲಂ: 295(A), 505(2) ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-09-2021 11:00 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080