ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಸಿಲ್ವೆಸ್ಟರ್ ಡಿಸೋಜಾ (64) ತಂದೆ: ಲಿಯೋ ಡಿಸೋಜಾ ವಾಸ: ಸೂಳ್ಕುದ್ರು ಪಾಂಡೇಶ್ವರ ಇವರು ದಿನಾಂಕ 26/09/2021 ರಂದು ಸಂತ ಅಂತೋನಿ ಚರ್ಚ ಗೆ ರವಿವಾರದ ಪೂಜೆಗೆಂದು ಸೈಕಲಿನಲ್ಲಿ ಹೋಗುತ್ತಿರುವಾಗ ಇವರ ಎದುರುಗಡೆಯಲ್ಲಿ ತಿಮೋತಿ ಎರಿಕ್ ಲುವಿಸ್ (63) ರವರು ಕೂಡ ಸೈಕಲಿನಲ್ಲಿ ಇಗರ್ಜಿಗೆ ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 07:15 ಗಂಟೆಯ ಸಮಯಕ್ಕೆ ರಾಷ್ಟ್ರೀಯ ಹೆದ್ದಾರಿ 66 ರ ಮಾಬುಕಳ ಸೇತುವೆಯ ಬಳಿ  ಹಿಂದುಗಡೆಯಿಂದ AP-39 TC-8712 ನೇ ಲಾರಿಯ ಚಾಲಕ ಅಬ್ದುಲ್ ರೆಹಮಾನ್ ಅನ್ಸಾರ್ ತನ್ನ ಲಾರಿಯನ್ನು ಉಡುಪಿ ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎಡ ಭಾಗದಲ್ಲಿ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿದ್ದ ತಿಮೋತಿ ಎರಿಕ್ ಲುವಿಸ್ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ತಿಮೋತಿ ಎರಿಕ್ ಲುವಿಸ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಎಡಕಾಲಿಗೆ ಪೆಟ್ಟಾಗಿದ್ದು ತಲೆಗೆ ತೀವೃ ತರಹದ ರಕ್ತಗಾಯವಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 168/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 25/09/2021 ರಂದು ಓರ್ವ ಅಪರಿಚಿತ  ಲಾರಿ ಚಾಲಕ  ತನ್ನ  ಲಾರಿಯನ್ನು ಉಡುಪಿ ಕರಾವಳಿ  ಜಂಕ್ಷನ್ನ ಕಡೆಯಿಂದ ಸಂತೆಕಟ್ಟೆ  ಕಡೆಗೆ  ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸವಾರಿ ಮಾಡಿಕೊಂಡು ಬಂದು ಸಮಯ ಸುಮಾರು ರಾತ್ರಿ 11:30 ಗಂಟೆಗೆ  ಅಂಬಾಗಿಲು  ಜಂಕ್ಷನ್ನ  ತಲುಪುವಾಗ ದುಡುಕುತನ ಮತ್ತು ನೀರ್ಲಕ್ಷ್ಯತನ ದಿಂದ   ಚಲಾಯಿಸಿ ತನ್ನ ಎದುರಿನಲ್ಲಿ ರೋಹಿತ್  ಎಂಬಾತ  ಸವಾರಿಮಾಡಿಕೊಂಡು ಹೋಗುತಿದ್ದು  KA-20 EF-6432 ನೇ  ನಂಬ್ರದ ಮೋಟಾರು ಸೈಕಲಿನ ಎಡಬದಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿ ಲಾರಿಯನ್ನು ನಿಲ್ಲಿಸದೇ ಲಾರಿ ಸಮೇತ  ಪರಾರಿಯಾಗಿದ್ದ ಈ  ಅಪಘಾತದ ಪರೀಣಾಮ ಮೋಟಾರು ಸೈಕಲ್ ಸಮೇತ ರೋಹಿತ್ ರಸ್ತೆಗೆ ಬಿದ್ದು ಕೈ  ಕಾಲುಗಳಿಗೆ ಮತ್ತು  ತಲೆಗೆ  ಗಂಬೀರ ಗಾಯವಾಗಿದ್ದು  ರಕ್ತ  ಬರುತಿದ್ದು  ಮಾತನಾಡದೇ ಇದ್ದವರನ್ನು  ಚಿಕಿತ್ಸೆಯ ಬಗ್ಗೆ  ಉಡುಪಿ ಆದರ್ಶ ಅಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರೀಕ್ಷೀಸಿದ ವೈದ್ಯರು ಸಮಯ ಸುಮಾರು ರಾತ್ರಿ 12:00 ಗಂಟೆಗೆ ಮೃತ ಪಟ್ಟಿರುತ್ತಾರೆಂದು ತಿಳಿಸಿರುವುದಾಗಿದೆ, ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 64/2021 ಕಲಂ: 279, 304 (ಎ) ಐ.ಪಿ.ಸಿ & 134 (A) & (B) ಐ ಎಂ ವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ದಿನಾಂಕ 26/09/2021 ರಂದು ಪಿರ್ಯಾಧಿದಾರರಾಧ ಆಕಾಶ್‌(18) ತಂದೆ: ಸೋಮಣ್ಣಲಮಾನಿ, ವಾಸ: ಸಿದ್ದೇಶ್ವರನಗರ, ಕಬ್ಜೂರುಗ್ರಾಮ, ಹಾನಗ ಲ್‌ತಾಲೂಕು, ಹಾವೇರಿಜಿಲ್ಲೆ, ಹಾಲಿವಾಸ: ಕೇರಾಫ್‌: ಸೈಮನ್‌ ರವರ ಬಾಡಿಗೆಮನೆ, ಶಿರ್ವ ಸೊಸೈಟಿ ಬಳಿ, ಶಿರ್ವ ಅಂಚೆ ಮತ್ತು ಗ್ರಾಮ, ಕಾಪು ತಾಲೂಕು ಇವರು ತನ್ನ ಸ್ನೇಹಿತನ ಮೋಟಾರ್‌ ಸೈಕಲ್‌ ನಂಬ್ರ KA-20 R-5034 ನೇದರಲ್ಲಿ ಉದ್ಯಾವರಕ್ಕೆ ಕೂಲಿ ಕೆಲಸದ ನಿಮಿತ್ತ ತನ್ನ ತಾಯಿ ಲಕ್ಷ್ಮವ್ವರವರನ್ನು ಹಿಂಬದಿಸವಾರಳನ್ನಾಗಿ ಕುಳ್ಳಿರಿಸಿಕೊಂಡು ಬೆಳಿಗ್ಗೆ ಮನೆಯಿಂದ ಶಿರ್ವ-ಕಟಪಾಡಿ ಮಾರ್ಗವಾಗಿ ಹೋಗುತ್ತಿರುವಾಗ ಸಮಯ ಸುಮಾರು 8:30 ಗಂಟೆಗೆ ಶಿರ್ವ ಗ್ರಾಮದ ಪಂಜಿಮಾರು ಫ್ರೆಂಡ್ಸ್‌ ಅಟೋ ಸರ್ವಿಸ್‌‌ಸ್ಟೇಷನ್‌ ಬಳಿತಲುಪುವಾಗ ಹಿಂಬದಿಯಿಂದ ಅಂದರೆ ಶಿರ್ವ ಕಡೆಯಿಂದ ಕಟಪಾಡಿಕಡೆಗೆ ಕೆಎ-20 ಎಂಡಿ-0157 ನೇಕಾರಿನ ಚಾಲಕನು ತಾನು ಚಲಾಯಿಸುತ್ತಿದ್ದ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬೇರೊಂದು ವಾಹನವನ್ನು ಓವರ್‌ಟೇಕ ಮಾಡುವಬರದಲ್ಲಿ ರಸ್ತೆಯ ತೀರಾ ಎಡಕ್ಕೆ ಬಂದು ಪಿರ್ಯಾದಿದಾರರು ಸವಾರಿಮಾಡಿಕೊಂಡು ಬರುತ್ತಿದ್ದ ಮೋಟಾರ್‌ ಸೈಕಲ್‌ಗೆ ಬಲಬದಿಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಹಿಂಬದಿ ಸವಾರಳಾದ ಲಕ್ಷ್ಮವ್ವ ಮೋಟಾರ್‌ ಸೈಕಲ್‌ ಸಮೇತ ಬಲಬದಿ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಬಲಕೈ ಮೊಣಗಂಟಿಗೆ, ಬಲಭುಜಕ್ಕೆ, ಹಣೆಗೆ, ಎಡಕೈಭುಜಕ್ಕೆ ತರಚಿದರಕ್ತಗಾಯವಗಿರುತ್ತದೆ. ತಾಯಿ ಲಕ್ಷ್ಮವ್ವರವರಿಗೆ ಬಲಬದಿಹಿಂಬದಿ ತಲೆಗೆತೀವ್ರ ತರದ ಒಳಜಖಂ ಹಾಗೂ ಮುಖಕ್ಕೆ, ಎಡಕೆನ್ನೆಗೆ, ಹಣೆಗೆ, ಬಲ ಮತ್ತು ಎಡಕೈಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 46/2021, ಕಲಂ 279,  ,337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾಧಿದಾರರಾದ ಅಯ್ಯಪ್ಪ (45) ತಂದೆ: ಶಿವಪ್ಪ ಆಚಾರ್ಯ ವಾಸ; ಮದನಾಡು, ನಿಟ್ಟೆ ಗ್ರಾಮ, ಕಾರ್ಕಳ ಇವರ ತಂದೆ ಶಿವಪ್ಪ ಆಚಾರ್ಯ (79) ರವರು ವಯೋವೃದ್ದರಾಗಿದ್ದು, 3 ವರ್ಷದ ಹಿಂದೆ ಅವರ ಪತ್ನಿ ರತ್ನಾವತಿ ಯವರು ಕ್ಯಾನ್ಸರ್ ಖಾಯಿಲೆಯಿಂದ ಮೃತಪಟ್ಟಿದ್ದು, ಬಳಿಕ ಇವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 25/09/21 ರಂದು ಬೆಳಿಗ್ಗೆ 8:30 ಗಂಟೆಯಿಂದ ಮದ್ಯಾಹ್ನ 2:45 ಗಂಟೆ ಮಧ್ಯಾವಧಿಯಲ್ಲಿ ನಿಟ್ಟೆ ಗ್ರಾಮ ತೊಡಲೆ ಹಳೆ ಮನೆಯ ಪಕ್ಕಾಸಿಗೆ ಬೈರಾಸ್ ನಿಂದ ಕಟ್ಟಿ ಕೊರಳಿಗೆ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಇವರ ಸಾವಿಗೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 33/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಫುರ: ಸಂದೀಪ ರವರು ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು  ಸರಿಯಾಗಿ  ಕೆಲಸ  ಇಲ್ಲದೇ ಇರುವ  ಕಾರಣ  ಆರ್ಥಿಕವಾಗಿ ಸಂಕಷ್ಟಗೊಳಗಾಗಿದ್ದು ಅಲ್ಲದೇ ವಿಪರೀತ ಮದ್ಯ ಸೇವನೆ ಮಾಡುವ ಹವ್ಯಾಸ ಇದ್ದ ಕಾರಣ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 25/09/2021 ರಂದು ರಾತ್ರಿ  ಸುಮಾರು 10:00 ಗಂಟೆಯಿಂದ ದಿನಾಂಕ 26/09/2021 ರಂದು ಬೆಳಿಗ್ಗೆ ಸುಮಾರು 06:30 ಗಂಟೆಯ ಮಧ್ಯಾವಧಿಯಲ್ಲಿ ತನ್ನ ಹೆಂಡತಿ ಮನೆಯಾದ  ವಡೇರಹೋಬಳಿ  ಗ್ರಾಮದ  ಸಲಿಂ  ಅಲಿ ರಸ್ತೆಯ ಸಮೀಪ ಇರುವ   ಜಯಲಕ್ಷ್ಮೀ  ನಿಲಯದಲ್ಲಿ  ಸಿಟ್‌ಔಟ್‌ನ  ತಾರಸಿಯ ಕಬ್ಬಿಣದ  ಹುಕ್‌ಗೆ  ನೈಲಾನ್  ಹಗ್ಗ ಕಟ್ಟಿಕೊಂಡು  ಕುತ್ತಿಗೆಗೆ  ನೇಣು ಹಾಕಿಕೊಂಡು  ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಎಂಬುದಾಗಿ ಪ್ರದೀಪ (35)  ತಂದೆ ದಿ. ಮಹಾಲಿಂಗ ಮೊಗವೀರ ವಾಸ: ಶ್ರೀದೇವಿ ನಿವಾಸ, ಮಾರ್ಗೋಳಿ ಬಸ್ರೂರು  ಇವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 38/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಗಂಗೊಳ್ಳಿ: ಫಿರ್ಯಾದಿದಾರರಾದ ವಿಜಯಡಿಮೆಲ್ಲೋ (38) ತಂದೆ;ಜೋನ್ಡಿಮೆಲ್ಲೋ, ವಾಸ: ಜನತಾ ಕಾಲೊನಿ, ರಾಮನಗರ, ನಾಡಗ್ರಾಮ, ಬೈಂದೂರು ಇವರ ತಂದೆ ಜೋನ್ಡಿ ಮೆಲ್ಲೋ (70) ರವರುಸುಮಾರು 7-8 ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿದ್ದು ಈಬಗ್ಗೆ ಕುಂದಾಪುರ ಮಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಗುಣಮುಖವಾಗಿರುವುದಿಲ್ಲ. ದಿನಾಂಕ 26/09/2021 ರಂದು ಮದ್ಯಾಹ್ನ 12:30 ಗಂಟೆಗೆ ಫಿರ್ಯಾದಿದಾರರು ಗುಡ್ಡೆಯಂಗಡಿಯಲ್ಲಿ ಇರುವಾಗ ಫಿರ್ಯಾದಿದಾರರ ತಾಯಿ ಫೋನ ಮಾಡಿ ಜೋನ್ಡಿ ಮೆಲ್ಲೋರವರು ನಾಡಗ್ರಾಮದ ಜನತಾಕಾಲೊನಿಯಲ್ಲಿರುವ ಅಂಗನವಾಡಿಯ ಬಾವಿಗೆಹಾರಿರುವುದಾಗಿ ತಿಳಿಸಿದ್ದು ಫಿರ್ಯಾದಿದಾರರು ಕೂಡಲೇ ಬಂದು ನೋಡಲಾಗಿ ಬಾವಿಯ ನೀರಿನ ಅಡಿಯಲ್ಲಿ ಮೃತದೇಹ ಇರುವುದು ಕಂಡುಬಂತು. ಫಿರ್ಯಾದಿದಾರರ ತಂದೆ ಜೋನ್ಡಿಮೆಲ್ಲೋ ರವರು ಮಾನಸಿಕ ಅಸ್ವಸ್ಥರಾಗಿದ್ದು ಜೀವನದಲ್ಲಿ ಜಿಗುಪ್ಸೆ ಗೊಂಡು ದಿನಾಂಕ 26/09/2021 ರಂದು ಮದ್ಯಾಹ್ನ 12:15  ಗಂಟೆಗೆ ಮನೆಯಿಂದ ಹೋದವರು 12:30 ಗಂಟೆಯ ಮಧ್ಯಾವಧಿಯಲ್ಲಿ ನಾಡಗ್ರಾಮದ ಜನತಾಕಾಲೊನಿಯಲ್ಲಿರುವ ಅಂಗನವಾಡಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ, ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 29/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾಧ ವೆಂಕಟೇಶ ಮೇಸ್ತ (49) ತಂದೆ; ವಿಠಲ ಮೇಸ್ತ ವಾಸ: ಕೇಸರಕೋಡಿ, ಅಳ್ವೆಗದ್ದೆ ಶಿರೂರು ಗ್ರಾಮ, ಬೈಂದೂರು ತಾಲೂಕು ಇವರ ಮಗ ಪನ್ನಗ (12) ಇವರು ಮನೆಯ ಹತ್ತಿರದ ಉಮೇಶ ಮೇಸ್ತನ ಮಗನಾದ ರಾಜೇಶನೊಂದಿಗೆ ದಿನಾಂಕ 26/09/2021 ರಂದು ಬೆಳಿಗ್ಗೆ 9:30 ಗಂಟೆಗೆ ಬೈಂದೂರು ತಾಲೂಕು ಶಿರೂರು ಗ್ರಾಮದ ಕಿರುಹೊಳೆ ಕುಸಿನಗದ್ದೆಹೊಳೆಯ ದಡದಲ್ಲಿ ಆಟವಾಡುತ್ತಿರುವಾಗ ಕಾಲುಜಾರಿಹೊಳೆಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿದ ಎಂದು ಸಮಯ ಸುಮಾರು 10:45 ಗಂಟೆಗೆ ವೆಂಕಟೇಶ ಮೇಸ್ತ ರ ರ ಮಗನೊಂದಿಗೆ ಆಟವಾಡಲು ಹೋದ ರಾಜೇಶ ತಿಳಿಸಿದ್ದು ಕೂಡಲೇ ಪಿರ್ಯಾದಿದಾರರು ಹೋಗಿ ನೋಡಿ ಪನ್ನಗನನ್ನು ನೀರಿನಿಂದ ಮೇಲಕ್ಕೆ ಎತ್ತಿ ಚಿಕಿತ್ಸೆ ಬಗ್ಗೆ ಅಂಬುಲೆನ್ಸ್ನಲ್ಲಿ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರೀಕ್ಷಿಸಿದ ವೈದ್ಯಾಧಿಕಾರಿಯವರು ಪಿರ್ಯಾದಿದಾರರ ಮಗ ಪನ್ನಗ ಮೃತಪಟ್ಟಿರುವುದಾಗಿ ತಿಳಿಸಿದ್ದು ಮೃತ ಪನ್ನಗ ರವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 38/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ದಾಮೋದರ ಕೆಬಿ ಪೊಲೀಸ್ ಉಪನಿರೀಕ್ಷಕರು  ಕಾರ್ಕಳ ನಗರ ಪೊಲೀಸ್‌ ಠಾಣೆ ಇವರಿಗೆ ಬಂದ ಖಚಿತ ಮಾಹಿತಿಯಂತೆ ತಮ್ಮ ಸಿಬ್ಬಂದಿಯವರೊಂದಿಗೆ ದಿನಾಂಕ 26/09/2021 ರಂದುಬೆಳಿಗ್ಗೆ  07:30 ಗಂಟೆಗೆ ಕೌಡೂರು ಗ್ರಾಮದ ಪಳ್ಳಿಕ್ರಾಸ್‌ ಬಳಿ ವಾಹನತಪಾಸಣೆ ಮಾಡುತ್ತಿದ್ದ ಸಮಯದಲ್ಲಿ KA-20 AA-5254 ನೊಂದಣಿ ಸಂಖ್ಯೆಯ ಪಿಕಪ್‌ ಗೂಡ್ಸ್‌ ವಾಹನವನ್ನು ಅದರ ಚಾಲಕನು ರಂಗನಪಲ್ಕೆ ಕಡೆಯಿಂದ ಚಲಾಯಿಸಿಕೊಂಡು ಬರುತ್ತಿದ್ದುದ್ದನ್ನು ತಡೆದು ನಿಲ್ಲಿಸಿ ನೋಡಲಾಗಿ ಎರಡು ಗಂಡು ಕರುಗಳ ಕಾಲಿಗೆ ಹಗ್ಗವನ್ನು ಕಟ್ಟಿ ಹಿಂಸಾತ್ಮಾಕ ರೀತಿಯಲ್ಲಿ ತುಂಬಿಸಿ ಮಾಂಸ ಮಾಡಿ ಮಾರಾಟ ಮಾಡು ಉದ್ದೇಶದಿಂದ ಗಂಡುಕರುಗಳನ್ನು ಸಾಗಾಟ ಮಾಡುತ್ತಿದ್ದುದ್ದನ್ನು ಕಂಡು ಪಿಕಪ್‌ ವಾಹನದಲ್ಲಿದ್ದ ಮಹಾಬಲ ಪೂಜಾರಿಯವರಲ್ಲಿ ವಿಚಾರಿಸಿದಾಗ ಕೌಡೂರು ಮಾಣಿಕು ಮೇರಿ ಎಂಬಲ್ಲಿ ಹಟ್ಟಿಯಲ್ಲಿದ್ದ ಗಂಡು ಕರುವನ್ನು ಮೂರು ಜನರು ಸೇರಿ ಕಳವು ಮಾಡಿ ತಂದಿರುವುದಾಗಿ ತಿಳಿಸಿರುತ್ತಾರೆ. ಅದರಂತೆ ಪಿಕಪ್‌ ವಾಹನದ ಚಾಲಕರವೀಂದ್ರ, ಪಿಕಪ್‌ ವಾಹನದಲ್ಲಿದ್ದ ಹಮೀದ್‌ ಸಾಹೇಬ್‌, ಮಹಾಬಲ ಪೂಜಾರಿಯವರ ವಿರುದ್ದ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 119/2021, US: 5, 12 The Karnataka Prevention of slaughter and preservation of cattle ordinance Act 2020, US 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-09-2021 06:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080