ಅಭಿಪ್ರಾಯ / ಸಲಹೆಗಳು


ಅಪಘಾತ ಪ್ರಕರಣ

  • ಕುಂದಾಪುರ:  ದಿನಾಂಕ 26/08/2022 ರಂದು ಬೆಳಿಗ್ಗೆ ಸುಮಾರು 9:25 ಗಂಟೆಗೆ,  ಕುಂದಾಪುರ  ತಾಲೂಕಿನ, ಕಾವ್ರಾಡಿ   ಗ್ರಾಮದ  ಮುಳ್ಳುಗುಡ್ಡೆಯ  ಶ್ರೀ ಮಹಾಗಣಪತಿ ಕ್ರಾಸ್‌ಬಳಿ, SH 52 ರಸ್ತೆಯಲ್ಲಿ, ಆಪಾದಿತ ಸಾಗರ  ಎಂಬವರು  KA20-EY-2941ನೇ ಬೈಕನ್ನು ಸಿದ್ದಾಪುರ ಕಡೆಯಿಂದ ಕುಂದಾಪುರ ಕಡೆಗೆ  ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಸವಾರಿ  ಮಾಡಿಕೊಂಡು ಬಂದು,  ಕೊಟೇಶ್ವರ ಕಡೆಯಿಂದ ಹಳ್ನಾಡು ಕಡೆಗೆ ಪಿರ್ಯಾದಿ ಶ್ರೀಮತಿ ರೇಷ್ಮಾ ಬಂಗೇರ ಪ್ರಾಯ  33   ವರ್ಷ      ಗಂಡ: ಪ್ರದೀಪ್‌ಬಂಗೇರ ವಾಸ: ಮೇಪು ಕೊಟೇಶ್ವರ  ಗ್ರಾಮ, ಕುಂದಾಪುರ  ರವರು  KA20-EG-2579ನೇ ಸುಜುಕಿ ಆಕ್ಸೆಸ್‌ಸ್ಕೂಟರ್‌ಸವಾರಿ ಮಾಡಿಕೊಂಡು ಹೋಗಿ ರಸ್ತೆಯ ಬಲಬದಿಗೆ ತಿರುಗಿಸಲು ನಿಲ್ಲಿಸಿಕೊಂಡಿದ್ದ ಸದ್ರಿ ಸ್ಕೂಟರ್‌‌ಗೆ  ಡಿಕ್ಕಿ ಹೊಡೆದ ಪರಿಣಾಮ ರೇಷ್ಮಾ ಬಂಗೇರ ರವರ  ಎಡಕಾಲಿನ ಕೋಲು ಕಾಲಿಗೆ ಹಾಗೂ ಮೊಣಗಂಟಿಗೆ ರಕ್ತಗಾಯ ಹಾಗೂ ಒಳಜಖಂ  ಗಾಯವಾಗಿ  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ,ಅಪರಾಧ ಕ್ರಮಾಂಕ  94/2022  ಕಲಂ 279, 337   IPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ:

  • ಮಣಿಪಾಲ: ಪಿರ್ಯಾದಿ ಚಂದ್ರಹಾಸ  ಎಂ. ಪ್ರಾಯ: 33 ವರ್ಷ ತಂದೆ:ರಾಮ ಪೂಜಾರಿ ವಾಸ: ಮನೆ ನಂಬ್ರ : 2-92-1, ಮೈರಬೆಟ್ಟು ಹೌಸ್, ಆರಂಬೋಡಿ ಗ್ರಾಮ ಮತ್ತು ಪೋಸ್ಟ್, ಬೆಳ್ತಂಗಡಿ ಇವರು  ದಿನಾಂಕ: 16.08.2022 ರಂದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಎದುರುಗಡೆ ಅಂದರೆ ಮಣಿಪಾಲದಿಂದ ಪರ್ಕಳ ಕಡೆಗೆ ಹೋಗುವ ರಸ್ತೆಯ ಎಡ ಬದಿಯಲ್ಲಿ ಕೀ ಸಮೇತ ನಿಲ್ಲಿಸಿ ಹೋಗಿದ್ದ KA 21 S 2925 ನೇ HONDA CB UNICORN ಮೋಟಾರ್‌ಸೈಕಲ್‌ನ್ನು ಮಧ್ಯಾಹ್ನ ಸಮಯ ಸುಮಾರು 3:00 ಗಂಟೆಯಿಂದ ಸಂಜೆ 6:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಪಿರ್ಯಾದಿದಾರರು ಮೋಟಾರು ಸೈಕಲನ್ನು ಆಸ್ಪತ್ರೆ ಸುತ್ತಮುತ್ತ ಹಾಗು ಇತರ ಕಡೆಗಳಲ್ಲಿ ಹುಡುಕಾಡಿದ್ದು, ಇದುವರೆಗೆ ಪತ್ತೆಯಾಗದೇ ಇದ್ದುದರಿಂದ ದೂರು ನೀಡಿರುತ್ತಾರೆ.ಕಳವಾದ ಮೋಟಾರು ಸೈಕಲಿನ ವಿವರ ಈ ರೀತಿಯಲ್ಲಿದೆ. . Reg No : KA21S2925 Company : HONDA CB UNICORN CBF 150 MA ,Ingine No : KC09E86726085 Chasis No : ME4KC09CDE8715691 Model : 2014Colour : P Black Value : 40,000/-  ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ,  ಅಪರಾಧ .ಕ್ರಮಾಂಕ  120/2022 ಕಲಂ: 379 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಮನುಷ್ಯ ಕಾಣೆ ಪ್ರಕರಣ

  • ಕಾಪು: ಪಿರ್ಯಾದಿ ಮಹಿಮಾ ಹೇರ್ಳೆ ಜಿ  ಪ್ರಾಯ : 28 ವರ್ಷ  ಗಂಡ : ಹರಿಪ್ರಸಾದ್   ವಾಸ : ಶಂಕರ ನಿಲಯ ಶಿರಿಬೀಡು ಉಡುಪಿ ಇವರ ಗಂಡ ಹರಿಪ್ರಸಾದ್ ಪ್ರಾಯ: 31 ವರ್ಷ ಇವರು ಪಿರ್ಯಾದಿದಾರರ ಮನೆಯಾದ ಶಂಕರ ನಿಲಯ ಶಿರಿಬೀಡು ಉಡುಪಿಯಿಂದ ದಿನಾಂಕ: 25/08/2022 ರಂದು ಬೆಳಿಗ್ಗೆ 08.45  ಗಂಟೆಗೆ ಕೆಲಸಕ್ಕೆಂದು ತೆರಳಿದ್ದು, ಮಧ್ಯಾಹ್ನ ಕಾಪುವಿನ ಬ್ಯಾಂಕ್ ಆಫ್ ಬರೋಡದ ಜುವೆಲ್ ಚೆಕ್ ಗಾಗಿ ಹೋಗುವುದಾಗಿ ಪಿರ್ಯಾದಿದಾರರಲ್ಲಿ ತಿಳಿಸಿರುತ್ತಾರೆ. ನಂತರ  ಪಿರ್ಯಾದಿದಾರರು ಸಂಜೆ 04.00 ಗಂಟೆಗೆ ಕರೆ ಮಾಡಿ ಬೇಗ ಮನೆಗೆ ಬರುವಂತೆ ತಿಳಿಸಿದ್ದಲ್ಲಿ ತಡವಾಗುವುದಾಗಿ ತಿಳಿಸಿರುತ್ತಾರೆ. ಬಳಿಕ ಪಿರ್ಯಾದಿದಾರರ ಅತ್ತೆ ಕರೆ ಮಾಡಿ ಮನೆಗೆ ಬೇಗ  ಬರುವಂತೆ ತಿಳಿಸಿರುತ್ತಾರೆ. ನಂತರ ಪಿರ್ಯಾದಿದಾರರು ಸಂಜೆ 07.00 ಗಂಟೆಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಎಂದು ಬರುತ್ತಿದ್ದು, ಶಿರ್ವ ಬ್ರಾಂಚ್ ನ್ ಮ್ಯಾನೇಜರ್ ಗೆ ವಿಚಾರಿಸಿದಲ್ಲಿ  ಹರಿಪ್ರಸಾದ್ ಸಂಜೆ 06.00 ಗಂಟೆಗೆ ಕಾಪುವಿನಿಂದ ಮನೆಗೆ ಹೋಗುತ್ತೇನೆ. ಎಂದು ಹೇಳಿ ಹೋಗಿರುತ್ತಾರೆ. ಎಂದು ತಿಳಿಸಿರುತ್ತಾರೆ. ಪರಿಚಯದವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದಾಗ ಅಲ್ಲಿಗೂ ಹೋಗದೇ ಮನೆಗೂ ಬಾರದೇ  ಕಾಣೆಯಾಗಿರುತ್ತಾರೆ. ಕಾಣೆಯಾದವರ ಚಹರೆ  ಕಾಣೆಯಾದವರ ಹೆಸರು: ಹರಿಪ್ರಸಾದ್ ಪ್ರಾಯ: 31ಚಹರೆ: ದುಂಡನೆಯ  ಮುಖ ಎತ್ತರ: 6 ಅಡಿ  ಎತ್ತರ ಬಣ್ಣ: ಗೋಧಿ ಮೈ ಬಣ್ಣ ಸಾಧಾರಣ ಶರೀರ, ಕೂದಲು: ಕಪ್ಪು ಬಿಳಿ ಮಿಶ್ರಿತ ಬಟ್ಟೆ: ಬಿಳಿ ಬಣ್ಣದ ಚೆಕ್ಸ್‌ಅರ್ಧ ತೋಳಿನಿ ಶರ್ಟ್  ಹಾಗೂ ನೀಲಿ  ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.ಭಾಷೆ:ಕನ್ನಡ, ಹಿಂದಿ, ತುಳು, ಇಂಗ್ಲೀಷ್‌, ಭಾಷೆ ಮಾತನಾಡುತ್ತಾನೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 91/2022  ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿ ಸೃಜನ್ ಎ (25 ವರ್ಷ)ತಂದೆ: ಆಂಟೋನಿ ತಿರುವನಂತಪುರಂ , ಕೇರಳ ಇವರ  ತಂದೆ:  ಆಂಟೋನಿ ಜೆ(55 ವರ್ಷ)  ರವರು ಕೇರಳದಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ,ದಿನಾಂಕ: 10-08-2022  ರಂದು ಡೆನ್ಸನ್  ರವರ  ಬೋಟಿನಲ್ಲಿ  ಕೊಚ್ಚಿನ್  ಬಂದರಿನಿಂದ  ಇತರ ಮೀನುಗಾರರೊಂದಿಗೆ  ಮೀನುಗಾರಿಕೆಗೆ ಹೊರಟು  ಅರಬ್ಬಿ ಸಮುದ್ರ ದಲ್ಲಿ ಮೀನುಗಾರಿಕೆ  ಮಾಡಿಕೊಂಡು  ಮಲ್ಪೆ ಬಂದರಿನಲ್ಲಿ ಖಾಲಿ ಮಾಡಿ  ಪುನ: ಮೀನುಗಾರಿಕೆ ಗೆ ದಿನಾಂಕ: 20-08-2022  ರಂದು   ಮೀನುಗಾರಿಕೆಗೆ ತೆರಳಿದ್ದು ಸಮುದ್ರದಲ್ಲಿ  ಗಾಳಿ ಮತ್ತು ಅಲೆಗಳ  ಅಬ್ಬರ ಜಾಸ್ತಿಯಾಗಿ  ಇದ್ದುದರಿಂದ ದಿನಾಂಕ :23-08-2022 ರಂದು ವಾಪಸ್ಸು ಮಲ್ಪೆ  ಬಂದರಿಗೆ ಬಂದು  ತನ್ನ ಪರಿಚಯದವರ ರೂಮಿನಲ್ಲಿ  ಉಳಿದುಕೊಂಡಿರುತ್ತಾರೆ.  ಪಿರ್ಯಾದಿದಾರರ ತಂದೆ ಶರಾಬು ಕುಡಿಯುವ  ಅಭ್ಯಾಸ  ಇರುತ್ತದೆ.  ಈ ದಿನ ದಿನಾಂಕ: 25-08-2022 ರಂದು ಪಿರ್ಯಾದಿದಾರರ  ತಂದೆ  ಅಸ್ವಸ್ಥಗೊಂಡಿರುವುದಾಗಿ  ಬೋಟಿನ ಮಾಲಕರಿಗೆ  ರೂಮಿನಲ್ಲಿ ರುವವರು ತಿಳಿಸಿದಂತೆ  ,ಬೋಟಿನ ಮಾಲಕರು ಪಿರ್ಯಾದಿದಾರರ ತಂದೆಯನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ  ತಂದೆಗೆ ಬಿಪಿ  ಜಾಸ್ತಿ ಆಗಿ ಮೆದುಳಿನಲ್ಲಿ  ರಕ್ತಸ್ರಾವವಾಗಿರುವುದಾಗಿ ತಿಳಿಸಿ ಹೆಚ್ಚಿನ  ಚಿಕಿತ್ಸೆಗೆ  ಮಂಗಳೂರು ವೆನ್ಲಾಕ್  ಅಸ್ಪತ್ರೆಗೆ ಕರೆದುಕೊಂಡು  ಹೋಗಲು ತಿಳಿಸಿದಂತೆ  ಬೋಟಿನ ಮಾಲಕರು  ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ  ದಾಖಲಿಸಿದ್ದು ,  ಪಿರ್ಯಾದಿದಾರರ ತಂದೆಯವರು  ಈ ದಿನ ದಿನಾಂಕ 25-08-2022 ರಂದು  ಚಿಕಿತ್ಸೆ ಫಲಕಾರಿಯಾಗದೇ  ಮಧ್ಯಾಹ್ನ  12:50 ಗಂಟೆಗೆ ಮೃತಪಟ್ಟಿರುವುದಾಗಿದೆ. ಮೆದುಳಿನಲ್ಲಿ ರಕ್ತಸ್ರಾವವಾಗಿ ಅಥವಾ ಇನ್ಯಾವುದೋ  ಕಾರಣದಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ  ಪೊಲೀಸ್‌ ಠಾಣಾ UDR NO  46 /2022 . ಕಲಂ 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.  

ಇತ್ತೀಚಿನ ನವೀಕರಣ​ : 26-08-2022 06:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080