ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಉಡುಪಿ: ಪಿರ್ಯಾದಿ ಸತ್ಯೋದಯ ಎನ್‌ ಹೆಗ್ಡೆ ಇವರು ಕಾಪುವಿನ ಏಣಗುಡ್ಡೆಯ ನಿವಾಸಿಯಾಗಿದ್ದು, ತಮ್ಮ ಕುಟುಂಬಕ್ಕೆ ಸಂಬಂಧಿಸಿದಂತೆ ಪಡು ಏಣಗುಡ್ಡೆ ಪಡುಮನೆ, ಬಳ್ಕುಂಜೆ ಕಕ್ವ ಪರಾರಿ ಮತ್ತು ತಿಮಿರುಗುತ್ತು ನಾಗಬನ ಫ್ಯಾಮಿಲಿ ಟ್ರಸ್ಟನ್ನು ಕುಟುಂಬದ ಸದಸ್ಯರು ರಚಿಸಿ ಸದ್ರಿ ನಾಗಬನ ಫ್ಯಾಮಿಲಿ ಟ್ರಸ್ಟನ ಸದಸ್ಯನಾಗಿರುತ್ತಾರೆ. ಕೆನರಾ ಬ್ಯಾಂಕ್‌ ಉಡುಪಿ ಕೋರ್ಟ್‌ ರೋಡ್‌ ಶಾಖೆಯಲ್ಲಿ  ಟ್ರಸ್ಟ್ ನ ಹೆಸರಿನಲ್ಲಿ ಎಸ್‌ಬಿ ಖಾತೆಯನ್ನು ಯಾರ ಗಮನಕ್ಕೂ ತಾರದೇ 1ನೇ ಶ್ರೀಮತಿ ಚೇತನ ಬಿ ಶೆಟ್ಟಿ ಮತ್ತು 2ನೇ ಹರೀಂದ್ರನಾಥ್‌ ಹೆಗ್ಡೆ ಆರೋಪಿತರು ಸೇರಿಕೊಂಡು ತಾವೇ ಆಡಳಿತದಾರರು ಎಂಬಂತೆ ನಂಬಿಸಿ ಖಾತೆ ತೆರೆದಿರುತ್ತಾರೆ. ಯಾವುದೇ ಟ್ರಸ್ಟಿಗಳ ಅಥವ ಟ್ರಸ್ಟಿನ ಇತರರ ಗಮನಕ್ಕೆ ತಾರದೇ 1 ಮತ್ತು 2 ನೇ ಆರೋಪಿತರು ತಮಗೆ ಬೇಕಾದ ರೀತಿಯಲ್ಲಿ ಯಾವುದೇ ನಿರ್ಣಯವಿಲ್ಲದೇ ದಿನಾಂಕ: 30/11/2020 ರಂದು 3,00,000/- ರೂಪಾಯಿ ಹಣವನ್ನು ಹಣ ವಿತ್‌ ಡ್ರಾ ಮಾಡಿ ಸ್ವ ಹಿತಕ್ಕೊಸ್ಕರ ಉಪಯೋಗಿಸಿದ್ದು, 3ನೇ ಆರೋಪಿ ಬ್ಯಾಂಕ್‌ ಅಧಿಕಾರಿ ಆರೋಪಿತರಿಗೆ ಸಹಕರಿಸಿ ಟ್ರಸ್ಟ್ ನ ಸದಸ್ಯರಿಗೆ  ಮೋಸ ಹಾಗೂ ನಂಬಿಕೆ ದ್ರೋಹ ಎಸಗಿ ಪಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿರುತ್ತಾರೆ.  ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 120/2021 ಕಲಂ: 406,409,417,418,463,464,468, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿ ಶೇಖರ  ಇವರು  ಡಿಸಿಸಿ ಬ್ಯಾಂಕ್‌ ಬೆಳುವಾಯಿ  ಬ್ರಾಂಚ್‌ನಲ್ಲಿ  ಸೀನಿಯರ್‌  ಸೂಪರ್‌  ವೈಸರ್‌ ಆಗಿ  ಕೆಲಸ ನಿರ್ವಹಿಸಿಕೊಂಡಿದ್ದು ಆದಿದ್ರಾವಿಡ  ಜಾತಿಗೆ ಸೇರಿದವನಾಗಿರುತ್ತಾರೆ.ಪಿರ್ಯಾದಿದಾರರು ಬೈಲೂರು ಡಿಸಿಸಿ ಬ್ಯಾಂಕ್‌ನಲ್ಲಿ ಕೆಲಸದಲ್ಲಿರುವ ಸಮಯದಲ್ಲಿ ಸುಕೀರ್ತಿ ಎಂಬವರಿಗೆ ರೂಪಾಯಿ 25,000/-  ಸಾಲವನ್ನು ಮಂಜೂರು ಮಾಡಿದ್ದು ಈ ಸಾಲವನ್ನು ಸುಕೀರ್ತಿಯವರು ಮರುಪಾವತಿ ಮಾಡಿರುವುದಿಲ್ಲ. ಪಿರ್ಯಾದಿದಾರರು ದಿನಾಂಕ:24.08.2021 ರಂದು  ಡಿಸಿಸಿ ಬ್ಯಾಂಕ್‌ ಬೆಳುವಾಯಿ  ಬ್ರಾಂಚ್‌ನಲ್ಲಿ ಕೆಲಸದಲ್ಲಿರುವ ಸಮಯದಲ್ಲಿ  ಮದ್ಯಾಹ್ನ 2:52  ಗಂಟೆಗೆ ಪಿರ್ಯಾದಿದಾರರ ಮೊಬೈಲಿಗೆ  ಸುಕೀರ್ತಿ ಕರೆ  ಮಾಡಿ ತಾನು ಬೈಲೂರು ಡಿಸಿಸಿ ಬ್ಯಾಂಕ್‌ನಲ್ಲಿ ಪಡೆದ ಸಾಲವನ್ನು ಕಟ್ಟುತ್ತೇನೆ ಎಷ್ಟು ಇದೆ ಎಂದು ಕೇಳಿದ್ದು  ಪಿರ್ಯಾದಿದಾರರು ಬ್ಯಾಂಕ್‌ನಲ್ಲಿ   ಆತನ  ಸಾಲದ  ಖಾತೆಯನ್ನು  ಪರಿಶೀಲಿಸಿ  ಬಾಕಿ ಇದ್ದ ಸಾಲದ ಮೊತ್ತವನ್ನು ತಿಳಿಸಿರುತ್ತಾರೆ. ಪಿರ್ಯಾದಿದಾರರಿಗೆ ಸುಕೀರ್ತಿ ಪರಿಚಯಸ್ಥನಾಗಿದ್ದರಿಂದ ಸಮಯ ಸುಮಾರು ಸಂಜೆ 5:22 ಗಂಟೆಗೆ ಸಾಲದ ಮೊತ್ತವನ್ನು  ಕಟ್ಟಿದ್ದೀರೆ  ಎಂದು ಕೇಳಿದಾಗ  ಆ ಸಮಯದಲ್ಲಿ ಸುಕೀರ್ತಿ ಪಿರ್ಯಾದಿದಾರರನ್ನು ಉದ್ದೇಶಿಸಿ  ಅವಾಚ್ಯ  ಶಬ್ದಗಳಿಂದ ಬೈದು  ಕೊಲೆ  ಮಾಡುವುದಾಗಿ ಬೆದರಿಕೆ  ಹಾಕಿರುತ್ತಾರೆ. ಪಿರ್ಯಾದಿದಾರರು ಕೆಲಸ ಮುಗಿಸಿ  ಸಂಜೆ ಸಮಯ ಸುಮಾರು  6:50 ಗಂಟೆಗೆ  ಬೈಲೂರು ರಿಕ್ಷಾ ಸ್ಟ್ಯಾಂಡ್‌ ಬಳಿ ತನ್ನ ಸ್ನೇಹಿತ ಪ್ರದೀಪ, ತನ್ನ ತಮ್ಮ ಗಿರೀಶನ ಜೊತೆಯಲ್ಲಿ  ಮಾತನಾಡುತ್ತಿರುವಾಗ ಒಂದು ಬಿಳಿಬಣ್ಣದ ಕಾರನ್ನು ಅದರ ಚಾಲಕನು ಚಲಾಯಿಸಿಕೊಂಡು  ಬಂದು ಪಿರ್ಯಾದಿದರರು  ರಸ್ತೆ ಬದಿಯಲ್ಲಿ ನಿಲ್ಲಿಸಿಟ್ಟ  ಪಿರ್ಯಾದಿದಾರರ  ಕಾರಿಗೆ ಅಡ್ಡವಾಗಿ ಇಟ್ಟು  ಬಳಿಕ ಕಾರಿನಿಂದ ಸುಕೀರ್ತಿ,ಸುಕೇಶ, ಜಗದೀಶ ಪೂಜಾರಿ @ ಜಗ್ಗು ಮತ್ತು ಇತರ ಇಬ್ಬರು ಇಳಿದು ಪಿರ್ಯಾದಿದಾರರ ಬಳಿಗೆ ಬಂದಿದ್ದು  ಅವರ ಪೈಕಿ ಜಗದೀಶ ಪೂಜಾರಿ @ ಜಗ್ಗು ಪಿರ್ಯಾದಿದಾರರನ್ನು ಉದ್ದೇಶಿಸಿ  ನೀನು ಪೋನ್‌ನಲ್ಲಿ  ಸುಕೀರ್ತಿಗೆ ಬಾರಿ ಬೈಯ್ಯುತ್ತೀಯ ಎಂದು ಬೆದರಿಸಿ ಬಳಿಕ ಆತನು ತುಳು ಭಾಷೆಯಲ್ಲಿ  ಅವಾಚ್ಯ  ಶಬ್ದಗಳಿಂದ ಬೈದು ಬೆದರಿಕೆ  ಹಾಕಿ ನೀನು ಯಾವ  ಮ್ಯಾನೇಜರ್‌ ಎಂದು ಸಾರ್ವಜನಿಕ ಸ್ಥಳದಲ್ಲಿ ಪಿರ್ಯಾದಿದಾರರನ್ನು  ತುಚ್ಚವಾಗಿ ಏಕವಚನದಿಂದ  ಅವಾಚ್ಯ ಶಬ್ದಗಳಿಂದ ಬೈದು  ಕೊಲೆ ಬೆದರಿಕೆ  ಹಾಕಿ ಜಾತಿ ನಿಂದನೆ ಮಾಡಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 105/2021  ಕಲಂ 341,504, 506 ಜೊತೆಗೆ 149 ಐಪಿಸಿ ಮತ್ತು 3(i) (r), 3(i)(s), 3(ii) (v) (a) sc st act ನಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಫಿರ್ಯಾದಿ ಶ್ರೀಮತಿ ಮಾದೇವಿ ಇವರು ಮನೆಯಲ್ಲಿರುವಾಗ ದಿನಾಂಕ; 24/08/2021 ರಂದು ಮಧ್ಯಾಹ್ನ ಸಮಯ ಸುಮಾರು 03:00 ಗಂಟೆಗೆ ಆಪಾದಿತ ಗಣೇಶ್ ಶೇರುಗಾರ ಈತನು ವಿನಾಕಾರಣ ಫಿರ್ಯಾದಿದಾರರ ಸ್ಥಳದಲ್ಲಿದ್ದ ಬಾಳೆಗಿಡ ಹಾಗೂ ಸಸಿಗಳನ್ನು ಕಡಿದಿದ್ದು ಈ ಬಗ್ಗೆ ಫಿರ್ಯಾದಿದಾರರು ಆಕ್ಷೇಪಿಸಿದ್ದಕ್ಕೆ ಆಪಾದಿತನು ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಫಿರ್ಯಾದಿದಾರರಿಗೆ ಕಡಿಯಲು ಬಂದು ದೂಡಿಹಾಕಿ ಹಲ್ಲೆ ಮಾಡಿದ್ದು ನಂತರ ಫಿರ್ಯಾದಿದಾರರ ಮನೆಯ ಕಂಪೌಂಡ್ ಕಲ್ಲುಗಳನ್ನು ಕಿತ್ತು ಹಾಕಿದ್ದು ಮತ್ತು  ಆಪಾದಿತನು ಫಿರ್ಯಾದಿದಾರರಿಗೆ, ಅವರ ಗಂಡ ಹಾಗೂ ಫಿರ್ಯಾದಿದಾರರ ಚಿಕ್ಕ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಅಲ್ಲದೆ ಪ್ರಾಣ ಹಾನಿಗೊಳಿಸುವ ಬೆದರಿಕೆ ಹಾಕಿ ಗಲಾಟೆ ಮಾಡಿರುತ್ತಾನೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 139/2021 ಕಲಂ:354, 323, 427, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದು ನಂಬ್ರ 55/2021 ರ ಸಾರಾಂಶವೇನೆಂದರೆ  ಪಿರ್ಯಾದಿ ದೇವೇಂದ್ರ ಎನ್‌ ಭಾಗವತ್‌ ಇವರು ಸುಮಾರು 25 ವರ್ಷಗಳಿಂದ ಉಡುಪಿಯ ರಥಬೀದಿಯ ಹತ್ತಿರ ಅದಮಾರು ಮಠ ಲೇನ್‌ (ಓಣಿ) ಯಲ್ಲಿ ನಗರ ಸಭೆ ಪರವಾನಿಗೆಯನ್ನು ಪಡೆದುಕೊಂಡು ಗೂಡಂಗಡಿ ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ: 04/07/2021 ರಂದು2:00 ಗಂಟೆಯಿಂದ ದಿನಾಂಕ: 05/07/2021 ರಂದು ಬೆಳಿಗ್ಗೆ 11:00 ಗಂಟೆಗೆ ಅಂಗಡಿ ತೆರೆಯಲು ಬಂದಾಗಅಲ್ಲಿ ಗೂಡಂಗಡಿ ಇಲ್ಲದೇ ಇದ್ದು 1ನೇ 1ಗೋವಿಂದರಾಜು ಮ್ಯಾನೇಜರ್‌ ಅದಮಾರು ಮಠ  ಮತ್ತು 2ನೇ ರಾಘವೇಂದ್ರ ಮ್ಯಾನೇಜರ್‌ ಅದಮಾರು ಮಠ  ಆರೋಪಿತರು ಗೂಡಂಗಡಿಯನ್ನು ತೆರವು ಮಾಡುವಂತೆ ಸುಮಾರು ಸಮಯದಿಂದ ಒತ್ತಾಯಿಸುತ್ತಿದ್ದು,ಸದ್ರಿ ಗೂಡಂಗಡಿಯನ್ನು 1ನೇ ಮತ್ತು 2ನೇ ಆರೋಪಿತರು ಸೇರಿ ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಒಟ್ಟು ಮೌಲ್ಯ 3,28,000/- ರೂ ಆಗಬಹುದು ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 121/2021 ಕಲಂ: 379,447,457 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿ ಸುನೀಲ್ ಇವರು  ದಿನಾಂಕ 25/08/2021 ರಂದು ಮಧ್ಯಾಹ್ನ  ಊಟ ಮಾಡಿ  ಬಳಿಕ ಮಧ್ಯಾಹ್ನ ಸುಮಾರು 3.00 ಗಂಟೆಯ ಸಮಯಕ್ಕೆ ಮನೆಯ ಎದುರು ಇರುವ ಸುರೇಶ ಕಿರಣ್ ರವರ ಹಾಡಿಯ ಬಳಿ ಬಂದಾಗ ಅವರ ಮಾವ ಚಂದ್ರ ಶೇಖರ (47  ವರ್ಷ ) ರವರು ಸದ್ರಿ ಹಾಡಿಯ ಒಳಗೆ ಬಾಗಳ ಮರಕ್ಕೆ ಪಂಚೆಯಿಂದ  ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಕೊಂಡು ನೇತಾಡುವ ಸ್ಥಿತಿಯಲ್ಲಿದ್ದು, ಕೂಡಲೇ ಪಿರ್ಯಾದಿದಾರರು ಕುತ್ತಿಗೆಗೆ ಕಟ್ಟಿದ ಮಾವನ   ಪಂಚೆಯನ್ನು ಬಿಚ್ಚಿ ಕೆಳಗೆ  ಇಳಿಸಿ ಮಲಗಿಸಿದ್ದುಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಕೂಡಲೇ ಸಂಬಂಧಿಕರಿಗೆ ತಿಳಿಸಿ ಸಂಬಂದಿಕರು ಬಂದು ನೋಡಿದಾಗ ಮೃತ ಪಟ್ಟಿರುವುದು ತಿಳಿಯಿತು, ಪಿರ್ಯಾದಿದಾರರ ಮಾವ ಮೃತ ಚಂದ್ರ ಶೇಖರರವರು ಕೂಲಿ ಕೆಲಸ ಮಾಡಿಕೊಂಡಿದ್ದು ವಿಪರೀತ ಕುಡಿತದ ಚಟ ಹೊಂದಿದ್ದು,ಇದೇ ಕಾರಣದಿಂದ ಅಥವಾ ಇನ್ನಾವುದೋ ಕಾರಣದಿಂದ ದಿನಾಂಕ:  25/08/2021 ರಂದು ಬೆಳಿಗ್ಗೆ 11.00 ಗಂಟೆಯಿಂದ  ಸಂಜೆ 03.00 ಗಂಟೆಯ ಮಧ್ಯಾವಧಿಯಲ್ಲಿ ಕುತ್ತಿಗೆಗೆ ಪಂಚೆಯಿಂದ  ಬಿಗಿದು ಕೊಂಡು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ  ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ  28/2021  ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-08-2021 10:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080