ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಕೋಟ: ಪಿರ್ಯಾದಿ ಪ್ರಸನ್ನ  ಸಾಲಿಯಾನ್ ಇವರು ನಿನ್ನೆ ದಿನಾಂಕ  25/08/2021 ರಂದು ತನ್ನ ಸ್ವಂತ ಕೆಲಸದ ಬಗ್ಗೆ ಸಾಲಿಗ್ರಾಮಕ್ಕೆ ಬಂದಿದ್ದು ಕೆಲಸ ಮುಗಿಸಿ ಬಾಡಿಗೆ ಮನೆಯಾದ ಪಾಂಡೇಶ್ವರಕ್ಕೆ ಹೊರಟು ರಾ ಹೆ 66 ರಲ್ಲಿ ಹೋಗುತ್ತಾ ಸಂಜೆ 7.45 ಗಂಟೆಯ ಸಮಯಕ್ಕೆ ಸಾಸ್ತಾನ ಟೋಲ್ ಬಳಿಯಲ್ಲಿ ಹೋಗುತ್ತಿರುವಾಗ ಪಿರ್ಯಾದಿದಾರರ ಎದುರಿನಲ್ಲಿ ಹೋಗುತ್ತಿದ್ದ AP- 02-TB 6669 ನೇ ಲಾರಿಯ ಚಾಲಕ ತನ್ನ ಬಾಬ್ತು ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಹೋಗುತ್ತ ಟೋಲ್ ಗೇಟಿನ ಒಂದು ಲೇನ್ ನಿಂದ ಇನ್ನೊಂದು ಲೇನ್  ಕಡೆಗೆ  ತನ್ನ ಲಾರಿಯನ್ನು ನಿರ್ಲಕ್ಷ ವಾಗಿ ತೀರಾ ಎಡಕ್ಕೆ ಚಾಲಯಿಸಿಕೊಂಡು ಹೋಗಿ ಅದೇ ಮಾರ್ಗವಾಗಿ ಹೋಗುತ್ತಿದ್ದ ಮೋಟಾರ್ ಸೈಕಲ್ KA20EB9308ನೇದಕ್ಕೆ  ಢಿಕ್ಕಿ ಹೊಡೆದನು.   ಪರಿಣಾಮ ಮೋಟಾರ್ ಸೈಕಲ್ ಸವಾರ  ಮೋಟಾರ್ ಸೈಕಲ್ ಸಮೇತ ರಸ್ತೆಗೆ ರಸ್ತೆಗೆ ಬಿದ್ದನು. ಮೋಟಾರ್ ಸೈಕಲ್ ಸವಾರ ಗಣೇಶ ಎಂಬವರಾಗಿದ್ದು ಈ ಅಪಘಾತದಿಂದ ಅವರಿಗೆ ಹಣೆಗೆ, ಬೆನ್ನಿಗೆ, ರಕ್ತಗಾಯ ಎಡ ಕೈ ಮೂಳೆ ಮುರಿತ ಹಾಗೂ ಹೊಟ್ಟೆ ಒಳ ನೋವು ಉಂಟಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ.ಲಾರಿ ಚಾಲಕ ಹಾಗೂ ಪಿರ್ಯಾದಿದಾರರು ಅಲ್ಲಿ ಸೇರಿದವರು  ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಲಾರಿ ಚಾಲಕನ ಹೆಸರು ಇರ್ಫಾನ್ ಎಂಬುವುದಾಗಿ ತಿಳಿಯಿತು. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 157/2021 ಕಲಂ: 279. 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿ ಸುರೇಶ ಇವರು ಪ.ಜಾತಿಯವರಾಗಿದ್ದು ಪ.ಜಾತಿ ಪ.ಪಂಗಡ ನಿಯಮದ ಅಡಿ ಸಂಖ್ಯೆ SWD59SPA2019 ರ ದಿನಾಂಕ:20/05/2019 ರ ಯೋಜನೆಯ ಅಡಿ ಹಾಗೂ ಕಂದಾವರ ಗ್ರಾಮ ಪಂಚಾಯತ್ ದಿನಾಂಕ;26-04-2021 ನಿರ್ಣಯ ಸಂಖ್ಯೆ 08/2021-22 ರ ನಿರ್ಣಯದಂತೆ ಹಾಗೂ ದಿನಾಂಕ:04-08-2021ರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಉಡುಪಿ ಜಿಲ್ಲಾ ಪಂಚಾಯತ್‌ರವರ ಆದೇಶದ ಮೇರೆಗೆ ಜಲ ಜೀವನ ಮೀಷನ್ ಯೋಜನೆ ಅಡಿ ಸರ್ವೇ ನಂ:152/ಪಿ1 ರಲ್ಲಿ ನಿರ್ಮಿಸಿದ ಮನೆಗೆ ಕುಡಿಯುವ ನೀರಿನ ಸಂಪರ್ಕಕಕ್ಕೆ ಆದೇಶ ಮಾಡಿರುತ್ತಾರೆ. ದಿನಾಂಕ: 25-08-2021 ರಂದು ಸುಮಾರು 11:15 ಗಂಟೆಗೆ ಆರೋಪಿತರಾದ ರಾಮಚಂದ್ರ ಸೇರಿಗಾರ,ಅನುಪಮ ಶೆಡ್ತಿ ಮತ್ತು ಜಯಶ್ರೀ ಶೆಡ್ತಿಯೊಂದಿಗೆ ಸೇರಿ ಕಂದಾವರ ಗ್ರಾಮ ಪಂಚಾಯತ್‌ ಕಛೇರಿಯ ಮುಂದೆ ಸಾರ್ವಜನಿಕವಾಗಿ ಹರಿಜನರಿಗೆ ನೀರು ಕೊಡಲು ನನ್ನ ಆಕ್ಷೇಪ ಇದೆ. ಎಲ್ಲಿಯಾದರು ನೀರು ಕೊಟ್ಟಲ್ಲಿ ಪೈಪನ್ನು ಕಿತ್ತು ಹಾಕತ್ತೇನೆ ಎಂದು ಸಾರ್ವಜನಿಕ ನಿಂದನೆ ಮಾಡಿರುತ್ತಾರೆ. ಅಲ್ಲದೆ ಸರಕಾರಿ ಅಧಿಕಾರಿಗಳ ಆದೇಶಕ್ಕೆ ಗೌರವ ನೀಡದೆ ಮೇಲೆ ಹೇಳಿದ ವ್ಯಕ್ತಿಗಳು ನಮಗೆ ಅಗತ್ಯ ಇರುವ ಕುಡಿಯುವ ನೀರಿನ ಸಂಪರ್ಕವನ್ನು ತಡೆದು ಸಾಮಾಜಿಕ ಬಹಿಷ್ಕಾರ ಹಾಕಿ ದೌರ್ಜನ್ಯ ಎಸಗಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2021 ಕಲಂ: (U/s-3(1)(s),3(1)(zc)) SC AND THE ST (PREVENTION OF ATTROCITIES) ACT, 1989  ನಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಫಿರ್ಯಾದಿ ಸಂತೋಷ ಪೂಜಾರಿ ಇವರ ತಂದೆ ಮಾಧವ ಪೂಜಾರಿ ಪ್ರಾಯ 68 ವರ್ಷದರವರಿಗೆ 2 ವರ್ಷಗಳಿಂದ ಎಡಕಾಲಿನ ಮೊಣಗಂಟು ನೋವಿದ್ದು ಆ ಬಗ್ಗೆ  ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿದ್ದರು ಗುಣಮುಖವಾಗಿರುವುದಿಲ್ಲ. ಮಾಧವ ಪೂಜಾರಿರವರು ದಿನಾಂಕ; 25/08/2021 ರಂದು ಸಂಜೆ 05:00 ಗಂಟೆಗೆ ಹೆರೆಂಜಾಲಿನ ತನ್ನ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು. ದಿನಾಂಕ; 26/08/2021 ರಂದು 09:00 ಗಂಟೆಗೆ ಫಿರ್ಯಾದಿದಾರರಿಗೆ ಮನೆಯ ಹತ್ತಿರದ ಸರ್ಕಾರಿ ಹಾಡಿಯಲ್ಲಿ ಅವರ ತಂದೆ ಮಾಧವ ಪೂಜಾರಿರವರು ನೇಣು ಬಿಗಿದು ನೇತಾಡುತ್ತಿರುವುದಾಗಿ ಮಾಹಿತಿ ಬಂದಂತೆ  ಫಿರ್ಯಾದಿದಾರರು ಓಡಿ ಹೋಗಿ ನೋಡಲಾಗಿ ಫಿರ್ಯಾದಿದಾರರ ತಂದೆಯವರು ನೇಣು ಬಿಗಿದು ಮೃತಪಟ್ಟಿರುತ್ತಾರೆ. ಮಾಧವ ಪೂಜಾರಿರವರು ಎಡಕಾಲಿನ ಮೊಣಗಂಟು ನೋವಿನ ಬಗ್ಗೆ ಚಿಕಿತ್ಸೆ ಮಾಡಿ ಗುಣಮುಖವಾಗದೇ ಇದ್ದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ; 25/08/2021 ರಂದು ಸಂಜೆ 05:00 ಗಂಟೆಯಿಂದ ದಿನಾಂಕ; 26/08/2021 ರಂದು ಬೆಳಿಗ್ಗೆ 09:00 ಗಂಟೆಯ ಮಧ್ಯಾವಧಿಯಲ್ಲಿ ಫಿರ್ಯಾದಿದಾರರ ಮನೆಯ ಹತ್ತಿರವಿರುವ ಸರಕಾರಿ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ  32/2021  ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಫಿರ್ಯಾದಿ ಅಕ್ಷಯ ಇವರು ಹರ್ಕೂರು ಗ್ರಾಮದ ಗುಡಿಮನೆ ನಾರ್ಕಳಿ  ನಿವಾಸಿಯಾಗಿದ್ದು, ಅವರ ತಂಗಿ ಅಶ್ವಿನಿ (23 ವರ್ಷ) ಎಂಬುವವರು ದಿನಾಂಕ 23/08/2021 ರಂದು ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್‌ -19 ಪ್ರಥಮ ಡೋಸ್‌ ಇಂಜೆಕ್ಷನ್ ಪಡೆದಿರುತ್ತಾರೆ. ಅಶ್ವಿನಿ ಯವರು ದಿನಾಂಕ 24/08/2021 ರಂದು ಮನೆಯಲ್ಲಿರುವಾಗ ರಾತ್ರಿ ವಾಂತಿ ಮಾಡಿಕೊಂಡು ಅಸ್ವಸ್ಥಳಾಗಿದ್ದು, ಚಿಕಿತ್ಸೆ ಬಗ್ಗೆ ಕುಂದಾಪುರ New Medical ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ BP Low ಆಗಿರುವುದಾಗಿ ತಿಳಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 25/08/2021 ರಂದು ರಾತ್ರಿ 10:45 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ  24/2021  ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿ ಸುರೇಂದ್ರ ಕುಲಾಲ್ ಇವರ ತಮ್ಮ ಶ್ರೀ ಸತೀಶ್ ಕುಲಾಲ್ ಇವರಿಗೆ 33 ವರ್ಷ ಪ್ರಾಯವಾಗಿದ್ದು ಅವರು ಸುಮಾರು 01 ವರ್ಷಗಳಿಂದ ಮಾನಸಿಕ ಖಾಯಿಲೆ ಇದ್ದು ಈ ಬಗ್ಗೆ ನಿಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ಗುಣಮುಖರಾಗದೇ ಇದ್ದು ಈ ಹಿಂದೆ ಕೂಡಾ ಹಲವಾರು ಬಾರಿ ಮನೆ ಬಿಟ್ಟು ಹೋಗಿ ಒಂದೆರಡು ದಿನ ಬಿಟ್ಟು ವಾಪಾಸ್ಸು ಮನೆಗೆ ಬರುತ್ತಿದ್ದು ಅದರಂತೆ ದಿನಾಂಕ: 24/08/2021 ರಂದು ರಾತ್ರಿ ಮಲಗಿದವರು ಎದ್ದು ಹೋದ ಸತೀಶ್ ಕುಲಾಲ್ ರವರು ವಾಪಾಸ್ಸು ಮನೆಗೆ ಬಾರದೇ ಇದ್ದು ಮನೆಯವರೆಲ್ಲಾ ಸೇರಿ ಹುಡುಕಾಡುತ್ತಿರುವಾಗ ಈ ದಿನ ಬೆಳಿಗ್ಗೆ 08:00 ಗಂಟೆಯ ಸಮಯಕ್ಕೆ ಮನೆಯ ಬಳಿಯ ಶ್ರೀ ವ್ಯಾಘ್ರಚಾಮುಂಡಿ  ದೈವಸ್ಥಾನದ ಬಾವಿಯಲ್ಲಿ ಸತೀಶ್ ಕುಲಾಲ್ ಇವರ ಮೃತ ಶರೀರ ಕಂಡುಬಂದಿದ್ದು  ಮೃತರು ಮಾನಸಿಕ ಖಾಯಿಲೆಯಿಂದ ಇದ್ದು ಇದೇ ಕಾರಣದಿಂದ ಮನನೊಂದು ದಿನಾಂಕ:24/08/2021 ರಂದು ಮಧ್ಯರಾತ್ರಿಯಿಂದ ಈ ದಿನ ದಿನಾಂಕ:26/08/2021 ರಂದು ಬೆಳಿಗ್ಗೆ 08:00 ಗಂಟೆಯ ನಡುವಿನ ಅವಧಿಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ  29/2021  ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 26-08-2021 05:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080