ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ: ದಿನಾಂಕ 24/07/2022 ರಂದು ಪಿರ್ಯಾದಿದಾರಾದ ಮಹಮ್ಮದ್ ನಯಾಜ್ (29), ತಂದೆ: ಮಹಮ್ಮದ್, ಇಸ್ಮಾಯಿಲ್,  ವಾಸ: ಪತೇಖಾನ್ ಮೈನ್ ಬಸ್ ಸ್ಟಾಂಡ್‌ ಜಾಮೀಯಾ ಮಸೀದಿ ಎದುರು ದೊಣಭಗಟ್ಟೆ ಗ್ರಾಮ ಭದ್ರಾವತಿ ತಾಲೂಕು ಶೀವಮೊಗ್ಗ ಜಿಲ್ಲೆಇವರು ತನ್ನ KA-14-EW-3307 ನೇ ಮೋಟಾರ್ ಸೈಕಲ್ ನಲ್ಲಿ ತನ್ನ ತಮ್ಮ ಸಲ್ಮಾನ್ ಖಾನ್ ಇವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಹೆಬ್ರಿ – ಅಗುಂಬೆ ರಸ್ತೆಯಲ್ಲಿ ಹೆಬ್ರಿ ಕಡೆಯಿಂದ ಅಗುಂಬೆ ಕಡೆಗೆ ಹೋಗುತ್ತಿರುವಾಗ ಅವರು ಸಂಜೆ 5:00 ಗಂಟೆಗೆ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆಯ ಕ್ರಾಸ್ ನ ಸಮೀಪ ತಲುಪಿದಾಗ ಅವರ ಎದುರುಗಡೆಯಿಂದ ಅಂದರೆ ಅಗುಂಬೆ ಕಡೆಯಿಂದ ಹೆಬ್ರಿ ಕಡೆಗೆ KA-40-M-5773 ನೇ ಕಾರಿನ ಚಾಲಕ ಕಿರಣ್ ಇವರು ಕಾರನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆಯ ಬಲ ಬದಿಗೆ ಬಂದು ಪಿರ್ಯಾದಿದಾರರಾದ ಮಹಮ್ಮದ್ ನಯಾಜ್ ಇವರು ಚಲಾಯಿಸುತ್ತಿದ್ದ KA-14-EW-3307 ನೇ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನಗಳು ಜಖಂಗೊಂಡು ಮೋಟಾರ್ ಸೈಕಲ್ ಸವಾರ ಮಹಮ್ಮದ್ ನಯಾಜ್ ಮತ್ತು ಸಹ ಸವಾರ ಸಲ್ಮಾನ್ ಖಾನ್ ಇವರಿಗೆ ತೀವ್ರ  ಮತ್ತು ಸಾದಾ ಸ್ವರೂಪದ ಗಾಯವಾಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 31/2022 ಕಲಂ: 279 , 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ಸುಜಾತ (30), ಗಂಡ:ರಾಘವೇಂದ್ರ  ಬೋವಿ, ವಾಸ: ಕೇರಿಮನೆ  ಮುದೂರು ಗ್ರಾಮ ಬೈಂದೂರು  ತಾಲೂಕು ಇವರು  ದಿನಾಂಕ 23/07/2022 ರಂದು ಸಂಜೆ 6:45 ಗಂಟೆಗೆ ತನ್ನ ಗಂಡ ರಾಘವೇಂದ್ರರವರ KA-20-EN-4197 ನೇ ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸಹ ಸವಾರರಾಗಿ ಮುದೂರು ಕಡೆಯಿಂದ  ಕಾಲ್ತೋಡು  ಕಡೆಗೆ  ಹೋಗುತ್ತಿರುವಾಗ ಅಪಾದಿತ ರಾಘವೇಂದ್ರ ಬೋವಿ ಮೋಟಾರ್ ಸೈಕಲ್‌ನ್ನು ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿ ಬೈಂದೂರು  ತಾಲೂಕು  ಮುದೂರು ಗ್ರಾಮದ  ಮೂದುರು  ಮೈದಾನದಿಂದ ಸ್ವಲ್ಪ ಮುಂದೆ ತಿರುವು ರಸ್ತೆಯಲ್ಲಿ ಮೋಟಾರ್ ಸೈಕಲ್‌ನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರ ಎಡ ಬದಿಗೆ ಚಲಾಯಿಸಿ ಹತೋಟಿ ತಪ್ಪಿ ರಸ್ತೆಬದಿಯ ಚರಂಡಿಗೆ ಬಿದ್ದ ಪರಿಣಾಮ  ಪಿರ್ಯಾದಿದಾರರಿಗೆ  ಎಡಕಾಲಿನ  ಮಧ್ಯದ ಮೂರು ಬೆರಳುಗಳಿಗೆ ಗಂಭೀರ ಸ್ವರೂಪದ ಗಾಯ ಹಾಗೂ  ಪಾದದ ಗಂಟಿನ  ಮೇಲ್ಭಗದಲ್ಲಿ  ತರಚಿದ  ಗಾಯ ಉಂಟಾಗಿ  ಕುಂದಾಪುರ ನ್ಯೂ ಮೆಡಿಕಲ್‌ ಸೆಂಟರ್‌‌ನಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 33/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ರಾಜೇಶ್ ಶೆಟ್ಟಿ ( 43), ತಂದೆ: ಈಶ್ವರ ಶೆಟ್ಟಿ, ವಾಸ: ರತಿ ನಿವಾಸ, ಎರ್ಮಾಳು ತೆಂಕ ಗ್ರಾಮ, ಪಡುಬಿದ್ರಿ ಅಂಚೆ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಪರಿಚಯದ ವಸಂತ ಶೆಟ್ಟಿ ರವರು ದಿನಾಂಕ 25/07/2022 ರಂದು ಅವರ KA-20-EM-4527 ನೇ ನಂಬ್ರದ ಸ್ಕೂಟಿಯಲ್ಲಿ ರಾಜ್ಯ ಹೆದ್ದಾರಿ-01 ರಲ್ಲಿ ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ ಬರುತ್ತಾ 17:00 ಗಂಟೆಯ ವೇಳೆಗೆ ಕಾಪು ತಾಲೂಕು ನಂದಿಕೂರು ಗ್ರಾಮ ಅಡ್ವೆ ಕಂಕಣಗುತ್ತು ಕ್ರಿಸ್ಟಲ್ ಹೋಲೋ ಬ್ಲಾಕ್ ಎದುರು ತಲುಪುತ್ತಿದ್ದಂತೆ KA-19-HA-4408 ನೇ ನಂಬ್ರದ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲ್ಲನ್ನು ಅದೇ ರಸ್ತೆಯಲ್ಲಿ ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ವಸಂತ ಶೆಟ್ಟಿ ರವರ ಸ್ಕೂಟಿಗೆ ಎದುರಿನಿಂದ ಡಿಕ್ಕಿ  ಹೊಡೆದ ಪರಿಣಾಮ, ಸವಾರರಿಬ್ಬರೂ ಸ್ಕೂಟರ್ ಮತ್ತು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಇಬ್ಬರಿಗೂ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿ ಮಾತನಾಡುವ ಸ್ಥಿತಿಯಲ್ಲಿರದ, ಇಬ್ಬರೂ ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಅಂಬ್ಯುಲೆನ್ಸ್ ನಲ್ಲಿ ಮಂಗಳೂರು ಕಡೆಗೆ ಕಳುಹಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 92/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 24/07/2022 ರಂದು ರಾತ್ರಿ 21:15  ಗಂಟೆಗೆ ಕುಂದಾಪುರ ತಾಲೂಕು, ವಡೇರಹೋಬಳಿ ಗ್ರಾಮದ ನೆಹರೂ ಮೈದಾನದ ಎದುರುಗಡೆ ಎನ್ ಹೆಚ್ 66 ರಸ್ತೆಯಲ್ಲಿ ಆಪಾದಿತ ರಾಘವೇಂದ್ರ  KA-20-P-4491 ನೇ ALTO ಕಾರನ್ನು  ಕುಂದಾಪುರ ಕಡೆಯಿಂದ ಉಡುಪಿ  ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ  ಮಾಡಿಕೊಂಡು ಬಂದು, ಎನ್ ಹೆಚ್ 66 ರಸ್ತೆ ದಾಟುತ್ತಿದ್ದ ನಿಂಗಪ್ಪ ಸಂಗಪ್ಪ ಹುಡೇದ್ ರವರಿಗೆ ಡಿಕ್ಕಿ ಹೊಡೆದ ಪರರಿಣಾಮ ನಿಂಗಪ್ಪ ರವರ ಎಡಕಾಲಿಗೆ ಒಳಜಖಂ ,ಬಲಕಾಲಿಗೆ,ಬಲಕೈ ಹಾಗೂ ತಲೆಗೆ  ರಕ್ತಗಾಯವಾಗಿ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 88/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಅರುಣ್ ಸೀನ ಪೂಜಾರಿ (34), ತಂದೆ: ಸೀನ ಪೂಜಾರಿ, ಸೀನಿಯರ್ ಅಕೌಂಟ್ಸ್ ಮ್ಯಾನೇಜರ್ ಬಾಳೆತೋಟ ಕೊರಂಗ್ರಪಾಡಿ, ಉಡುಪಿ ಇವರು ಉಡುಪಿಯ ಹಳೇ ಅಂಚೆ ಕಛೇರಿ ರಸ್ತೆಯಲ್ಲಿರುವ  ಬಾಳಿಗಾ ಫಿಶ್‌ ನೆಟ್‌ ಎಂಬ ಸಂಸ್ಥೆಯಲ್ಲಿ ಸೀನಿಯರ್ ಅಕೌಂಟ್ ಮ್ಯಾನೇಜರ್‌‌ ಆಗಿದ್ದು ಸಂಸ್ಥೆಯು ಫಿಶ್‌ ನೆಟ್‌ ಹಾಗೂ ಅದಕ್ಕೆ ಸಂಬಂಧಪಟ್ಟ ಉಪಕರಣಗಳ ಮಾರಾಟ ಸಂಸ್ಥೆಯಾಗಿದ್ದು, 2022 ರ ಮಾರ್ಚ್‌ 22 ರಿಂದ ಇಲ್ಲಿ ತನಕ ಯಾರೋ ಅಪರಿಚಿತ ವ್ಯಕ್ತಿಯು ಕಂಪೆನಿಯ GST ಮತ್ತು PAN ನಂಬ್ರ ವನ್ನುಆನ್‌‌ಲೈನ್ ಮುಖೇನ ಕದ್ದು, ಅದನ್ನು ದುರ್ಬಳಕೆ ಮಾಡಿಕೊಂಡು ಕಾನೂನುಬಾಹಿರವಾಗಿ ಆಮೆಜಾನ್‌ ಮೂಲಕ ಅವ್ಯವಹಾರ ನಡೆಸುತ್ತಿದ್ದ ಬಗ್ಗೆ ಪಿರ್ಯಾದಿದಾರರ ಗಮನಕ್ಕೆ ಬಂದಿರುತ್ತದೆ. ಬಾಳಿಗಾ ಫಿಶ್‌ ನೆಟ್‌ ಸಂಸ್ಥೆಯ GST ಮತ್ತು PAN ನಂಬ್ರವನ್ನು ಆನ್‌‌ಲೈನ್ ಮುಖೇನ ಕದ್ದು, ಅದನ್ನು ದುರ್ಬಳಕೆ ಮಾಡಿ ಕಾನೂನುಬಾಹಿರವಾಗಿ ಆಮೆಜಾನ್‌ ಮೂಲಕ ಅವ್ಯವಹಾರ ನಡೆಸಿ ಸಂಸ್ಥೆಗೆ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 35/2022 ಕಲಂ: 66(c), 66 (D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ನಾರಾಯಣ ಮಡಿವಾಳ (74), ತಂದೆ: ವಿ ವೆಂಕಟ ಮಡಿವಾಳ, ವಾಸ: ಕಾರಂತ ಬೀದಿ ಆಂಜನೇಯ ದೇವಸ್ಥಾನದ ಬಳಿಯಲ್ಲಿ  ಸಾಲಿಗ್ರಾಮ ಪಾರಂಪಳ್ಳಿ ಗ್ರಾಮ ಬ್ರಹ್ಮಾವರ ತಾಲೂಕು ಇವರು ಸಾಲಿಗ್ರಾಮ ಆಂಜನೇಯ ದೇವಸ್ಥಾನದ ಬಳಿಯಲ್ಲಿ  ಇಸ್ತ್ರಿ ಅಂಗಡಿ ಇಟ್ಟುಕೊಂಡಿದ್ದು,  25/07/2022 ರಂದು ಬೆಳಿಗ್ಗೆ 10:30 ಗಂಟೆಗೆ  ಪಿರ್ಯಾದಿದಾರರು ಅಂಗಡಿಯಲ್ಲಿರುವಾಗ ಅಂಗಡಿ ಕಟ್ಟಡಕ್ಕೆ ಹೊಂದಿಕೊಂಡಿರುವ ಹಿಂಬದಿ ಸ್ಥಳಕ್ಕೆ  ಆರೋಪಿತರಾದ 1) ವೆಂಕಟೇಶ ನಾಯಕ್,  2)  ಗಣಪತಿ ನಾಯಕ್, 3)  ಸತ್ಯ ನಾರಾಯಣ ನಾಯರಿ  ಹಾಗೂ ಇತರ 5 ಜನರು  ಸೇರಿ ಅಕ್ರಮ ಪ್ರವೇಶ ಮಾಡಿ ಕಟ್ಟಡಕ್ಕೆ ಹಾನಿ ಮಾಡಲು ಪ್ರಯತ್ನಿಸಿದ್ದು ಆಕ್ಷೇಪಿಸಿದಾಗ ವೆಂಕಟೇಶ ನಾಯಕ್ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದಿದಾರರಿಗೆ ಬೀಸಿದಾಗ ಪಿರ್ಯಾದಿದಾರರು ಹಲ್ಲೆ ಮಾಡದಂತೆ ತಡೆದು ಕೈಯನ್ನು ಎತ್ತಿದಾಗ   ಎಡ ಕೈಗೆ ಕತ್ತಿ ತಾಗಿ ಗಾಯವಾಗಿರುತ್ತದೆ ಅಲ್ಲದೇ  ,ಅವರ ಜೊತೆಯಲ್ಲಿದ್ದ ಗಣಪತಿ ನಾಯಕ್ ,ಸತ್ಯ ನಾರಾಯಣ ನಾಯರಿ  ಹಾಗೂ ಇತರರು ಸೇರಿ ಪಿರ್ಯಾದಿದಾರರ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 117/2022 ಕಲಂ: 143, 147, 447, 504, 506(2), 324, 323, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 26-07-2022 09:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080