ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ ಪಿರ್ಯಾದಿ ಗುರುಪ್ರಸಾದ್ ಪ್ರಾಯ 38 ವರ್ಷ, ತಂದೆ: ರವಿರಾಜ್ ಶೆಟ್ಟಿ, ವಾಸ: ಆಶ್ರಯ ನಿಲಯ, ಕಿದಿಯೂರು ಮೇಲ್ ಮನೆ ಕುಂದಾಪುರ ಇವರ ಅಕ್ಕನ ಮಗಳು ಅದಿತಿಯು ದಿನಾಂಕ: 26-07-2022 ರಂದು ಮಣಿಪಾಲಕ್ಕೆ  ಕಾಲೇಜಿಗೆ ಹೋಗುವರೇ ಬ್ರಹ್ಮಗಿರಿಯಲ್ಲಿ KA19C1001 ನೇ ಬಸ್ಸಿಗೆ  ಹತ್ತಿ ಮಣಿಪಾಲ ಕಡೆ ಹೋಗುತ್ತಿರುವಾಗ  ಸಮಯ ಸುಮಾರು ಬೆಳಿಗ್ಗೆ 09-15 ಗಂಟೆಗೆ ಮೂಡನಿಡಂಬುರು ಗ್ರಾಮದ ಕಿದಿಯೂರು ಹೋಟೆಲ್ ನ ಮುಂಭಾಗ ತಲುಪುವಾಗ ಬಸ್ಸಿನ ಚಾಲಕ ಸತೀಶ ಎಂಬಾತನು ತಾನು ಚಲಾಯಿಸುತ್ತಿದ್ದ KA19C1001 ಬಸ್ ನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ತಿರುವು ಇರುವ ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದ ಪರಿಣಾಮ ಬಸ್ಸಿನ ಒಳಗಿದ್ದ ಪಿರ್ಯಾದಿದಾರರ ಅಕ್ಕನ ಮಗಳು ಅದಿತಿಯು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು, ತಲೆಯ ಹಿಂಬದಿ ಮತ್ತು ಮುಂಭಾಗ ಗಾಯ ಮತ್ತು ಒಳಜಖಂ ಆಗಿ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ . ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  57/2022 ಕಲಂ: 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಶಂಕರನಾರಾಯಣ:  ದಿನಾಂಕ: 26/07/2022 ರಂದು  ಪಿರ್ಯಾದಿ ರಾಮನಾಯ್ಕ  (27) ತಂದೆ:ಅಣ್ಣಪ್ಪ ನಾಯ್ಕ  ವಾಸ: ಹಿಲಿಯಾಣ ಜೆಡ್ಡು, ಹಿಲಿಯಾಣ ಗ್ರಾಮ ಬ್ರಹ್ಮಾವರ ಇವರು ಕೂಲಿ ಕೆಲಸದ ಬಗ್ಗೆ  ಮನೆಯಿಂದ    ಹೊರಟು ತನ್ನ ಬಾಬ್ತು  ಮೋಟಾರು ಸೈಕಲ್ ನಂಬ್ರ: KA20EN1637 ನೇ ವಾಹನ ಚಲಾಯಿಸಿಕೊಂಡು ಬೆಳಿಗ್ಗೆ  07.30 ಘಂಟೆಗೆ   ಹೈಕಾಡಿ  ಗೋಳಿಮರದ ಬಳಿ ತಲುಪಿದಾಗ ಶೇಡಿಮನೆ ಕಡೆಯಿಂದ ಕುಂದಾಪುರ ಕಡೆಗೆ KA20 D 9457 ನೇ ಶ್ರೀ ದುರ್ಗಾಂಬ ಬಸ್ಸಿನ ಚಾಲಕನು ಯಾವುದೇ ಸೂಚನೆಯನ್ನು ನೀಡದೇ ಒಮ್ಮೆಲ್ಲೇ ಬಸ್ಸನ್ನು ಬ್ರೇಕ್ ಹಾಕಿ ನಿಲ್ಲಿಸಿದ್ದು,  ಪಿರ್ಯಾದಿದಾರರ ಬೈಕು ಬಸ್ಸಿನ ಹಿಂದೆ ಹೋಗಿ ಡಿಕ್ಕಿ ಹೊಡೆದ  ಪರಿಣಾಮ  ಬೈಕಿನ ನಿಯಂತ್ರಣ  ತಪ್ಪಿ ಬೈಕ್ ಸಮೇತ ರಸ್ತೆಗೆ ಬಿದ್ದು ಬಲಕೈ ಮುಂಗೈ ಹಿಂಬದಿಗೆ, ಮತ್ತುಮೂಗಿನ ಮೇಲೆ , ತುಟಿಗೆ ಗಾಯವಾಗಿದ್ದು  ಮರ್ಮಂಗಕ್ಕೆ ಗುದ್ದಿದ ಒಳನೋವಾಗಿರುತ್ತದೆ  ಈ ಘಟನೆಗೆ ಶ್ರೀ ದುರ್ಗಾಂಭ ಬಸ್ಸಿನ ಚಾಲಕನು ಯಾವುದೇ ಮುನ್ಸೂಚನೆ ನೀಡದೇ ವಾಹನವನ್ನು ಒಮ್ಮೇಲ್ಲೆ ನಿಲ್ಲಿಸಿದ್ದೇ ಕಾರಣವಾಗಿರುತ್ತದೆ.ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  73/2022  ಕಲಂ: 279,337   ಐ.ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.    

ಕಳವು ಪ್ರಕರಣ

 • ಮಲ್ಪೆ: ಪಿರ್ಯಾದಿ ಗೋಕುಲ್ ಟಿ ಪ್ರಾಯ: 31 ವರ್ಷತಂದೆ: ತಂಪಿ ವಾಸ: ಮನೆ ನಂಬ್ರ 4-4-17 ಸೆಟ್ಟಿಗಾರ ಕಾಲೋನಿ, ಕಿನ್ನಿಮೂಲ್ಕಿ ಇವರು  ಕಡೇಕಾರು ಗ್ರಾಮದ ಕಿನ್ನಿಮೂಲ್ಕಿಯ ಸೆಟ್ಟಿಗಾರ ಕಾಲೋನಿ ಯಲ್ಲಿ ಮನೆ ನಂಬ್ರ 4-4-17 ರಲ್ಲಿ ಬಾಡಿಗೆ ಮನೆಯಲ್ಲಿ  ವಾಸವಾಗಿದ್ದು  ,ದಿನಾಂಕ: 01-07-2022 ರಂದು ಸಮಯ ಸುಮಾರು  2:30 ಗಂಟೆಗೆ ಮನೆಗೆ ಬೀಗ ಹಾಕಿ  ಪಿರ್ಯಾದಿದಾರರು ಮತ್ತು ಮನೆಯವರು ತಮ್ಮ ಸ್ವಂತ ಊರಾದ  ಕೇರಳಕ್ಕೆ  ಹೋಗಿರುತ್ತಾರೆ.  ದಿನಾಂಕ:  24-07-2022 ರಂದು  ಬೆಳಿಗ್ಗೆ 11:50  ಗಂಟೆಗೆ   ನೆರೆಮನೆಯವರು  ಪಿರ್ಯಾದಿದಾರರಿಗೆ ಪೋನ್  ಕರೆ ಮಾಡಿ ಪಿರ್ಯಾದಿದಾರರ  ಮನೆಯ  ಬಾಗಿಲಿನ ಬೀಗ ವನ್ನು ಯಾರೋ ಕಳ್ಳರು ಒಡೆದಿರುವ ಬಗ್ಗೆ  ಮಾಹಿತಿ ತಿಳಿಸಿದಂತೆ  ಪಿರ್ಯಾದಿದಾರರು  ದಿನಾಂಕ: 26-07-2022 ರಂದು ಬಂದು  ನೋಡಲಾಗಿ ಮನೆಯ  ಮುಖ್ಯದ್ವಾರದ ಬೀಗ  ಒಡೆದಿರುವುದು ಕಂಡುಬಂದಿದ್ದು ,  ಒಳಗೆಹೋಗಿ ನೋಡಲಾಗಿ  ಕಬಾಟಿನಲ್ಲಿ  ಇಟ್ಟಿದ್ದ  ಬಂಗಾರದ  ಚೈನ್ -12 ಗ್ರಾಂ ಹಾಗೂ  ಚಿನ್ನದ ಲಾಕೆಟ್-2 ಗ್ರಾಂ   ಯಾರೋ ಕಳ್ಳರು  ಕಳವು ಮಾಡಿಕೊಂಡು  ಹೋಗಿರುತ್ತಾರೆ.ದಿನಾಂಕ: 01-07-2022  ರಂದು ಮದ್ಯಾಹ್ನ 14:30  ಗಂಟೆಯಿಂದ  ದಿನಾಂಕ: 24-07-2022 ರ ಬೆಳಿಗ್ಗೆ 11:50 ಗಂಟೆಯ ಮಧ್ಯಾವಧಿಯಲ್ಲಿ  ಯಾರೋ ಕಳ್ಳರು ಮನೆಯ ಬಾಗಿಲನ್ನು  ಒಡೆದು ಕಳ್ಳತನ  ಮಾಡಿರುತ್ತಾರೆ ಕಳವಾದ ಚಿನ್ನಾಭರಣಗಳ ಒಟ್ಟು ಅಂದಾಜು   ಮೌಲ್ಯ 50.000 ರೂ  ಆಗಿರುತ್ತದೆ ಈ ಬಗ್ಗೆ ಮಲ್ಪೆ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 61 /2022 . ಕಲಂ 454, 457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಇತರ ಪ್ರಕರಣಗಳು

 • ಕುಂದಾಪುರ: ಪಿರ್ಯಾದಿ ರಾಘವೇಂದ್ರ  ಗೊಲ್ಲ, ಪ್ರಾಯ: 28 ವರ್ಷ, ತಂದೆ:ರಾಜು ಗೊಲ್ಲ, ವಾಸ: ವಿನಾಯಕ ನಿಲಯ ಮಾರ್ಕೋಡು ಕೋಟೇಶ್ವರ ಗ್ರಾಮ, ಕುಂದಾಪುರ ಇವರು  3 ವರ್ಷದ  ಹಿಂದೆ  ಅವರ  ಬಾಬ್ತು  ಏಸ್ ಗೂಡ್ಸ್ ವಾಹನವನ್ನು ಕಾಗೇರಿಯ ಆಪಾದಿತ  ಸತೀಶ್ ಶೆಟ್ಟಿ ರವರಿಗೆ ಮಾರಾಟ ಮಾಡಿದ್ದು ಸತೀಶ್ ಶೆಟ್ಟಿಯವರು  ಲೋನ್ ಹಣವನ್ನು ಕಟ್ಟಿಕೊಂಡು  ಹೋಗುತ್ತೇನೆಂದು ಹೇಳಿ ಲೋನ್ ಕಟ್ಟದೇ  ಇದ್ದ ಕಾರಣ  ಪಿರ್ಯಾದಿದಾರರೇ  ಲೋನ್ ಕಟ್ಟಿದ್ದರು. ಈ ವಿಚಾರದಲ್ಲಿ  ಪಿರ್ಯಾದಿದಾರರಿಗೆ ಮತ್ತು  ಆಪಾದಿತ  ಸತೀಶ್ ಶೆಟ್ಟಿಯವರಿಗೆ  ಗಲಾಟೆ ಆಗಿರುತ್ತದೆ. ಹೀಗಿರುತ್ತಾ ದಿನಾಂಕ 25/07/2022 ರಂದು  ಪಿರ್ಯಾದಿದಾರರು ಅವರ ಬಾಬ್ತು ಸ್ಕೂಟಿ ನಂಬ್ರ KA20ET6943 ನೇಯದರಲ್ಲಿ  ಮನೆಗೆ  ಹೋಗುತ್ತಿದ್ದಾಗ ಆಪಾದಿತ ಸತೀಶ್ ಶೆಟ್ಟಿ  ಮತ್ತು ಅವರ  ಮಗನಾದ ಆಪಾದಿತ ಸನ್ನಿಧಿ ಎಂಬುವವರು KA20ME2609 ನೇ ಕೆಂಪು ಬಣ್ಣದ ಮಹೀಂದ್ರಾ ವಾಹನದಲ್ಲಿ ರಾತ್ರಿ ಸುಮಾರು 9.45 ಗಂಟೆಗೆ ಕೋಟೇಶ್ವರ  ಪ್ರೀತಮ್  ಬಾರ್‌ಬಳಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ  ಮೋಟಾರು ಸೈಕಲ್‌ನ್ನು  ನಿಲ್ಲಿಸಲು  ಸೂಚಿಸಿದ್ದು  ಪಿರ್ಯಾದಿದಾರರು ನಿಲ್ಲಿಸದೇ ಸವಾರಿ ಮಾಡಿಕೊಂಡು ಹೋದಾಗ ಆರೋಪಿತರು  ತಮ್ಮ ವಾಹನವನ್ನು  ತಿರುಗಿಸಿಕೊಂಡು ರಾತ್ರಿ ಸುಮಾರು 10.00 ಗಂಟೆಗೆ  ವರದರಾಜ್ ಶೆಟ್ಟಿ ಕಾಲೇಜು ಬಳಿ  ಪಿರ್ಯಾದಿದಾರರ ಸ್ಕೂಟಿಯ ಎದುರುಗಡೆ ಬಂದು ಅಡ್ಡಗಟ್ಟಿ ನಿಲ್ಲಿಸಿ ವಾಹನದಿಂದ ಇಳಿದು ಬಂದು, ಆರೋಪಿ ಸನ್ನಿಧಿಯು ಪಿಸ್ತೂಲ್‌ನಂತೆ ಕಾಣುವ ಸಲಾಕೆಯಿಂದ  ಪಿರ್ಯಾಧಿದಾರರ ತಲೆಗೆ  ಹಿಡಿದು ನಂತರ  ಆಪಾದಿತ  ಸತೀಶ್ ಶೆಟ್ಟಿಯು ಹಾಕಿ ಸ್ಟಿಕ್ ನಿಂದ  ಬಲಕಾಲಿನ ಕೋಲು ಕಾಲಿಗೆ ಹೊಡೆದಾಗ ಪಿರ್ಯಾದಿದಾರರು  ಅವರಲ್ಲಿ ಯಾಕೆ ಹೀಗೆ ಹೊಡೆಯುತ್ತೀರಿ ಎಂದು  ಕೇಳಿದ್ದಕ್ಕೆ,  ನಿನ್ನ ಮೇಲೆ ನಮಗೆ ಸೇಡು  ಇದೆ,  ನಿನ್ನನ್ನು  ಬಿಡುವುದಿಲ್ಲ  ಎಂದು  ಹೇಳಿ  ಹಾಕಿ ಸ್ಟಿಕ್ ನಿಂದ  ತುಟಿಗೆ  ಹೊಡೆದು ಆರೋಪಿತರು ಅಲ್ಲಿಂದ  ಹೋಗುವಾಗ ನಿನ್ನನ್ನು ಜೀವ ಸಹಿತ  ಬಿಡುವುದಿಲ್ಲ ಎಂದು  ಜೀವ ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಮೋಟಾರು ಸೈಕಲ್‌ಗೆ  ಹಾಕಿ ಸ್ಟಿಕ್‌ನಿಂದ ಹೊಡೆದು ಜಖಂಗೊಳಿಸಿದ್ದು  ಪಿರ್ಯಾದಿದಾರರಿಗೆ ಹಣ ಕೊಡುವ ವಿಚಾರದಲ್ಲಿ ಆಪಾದಿರು ದ್ವೇಷದಿಂದ ಈ ಕೃತ್ಯವನ್ನು ಎಸಗಿರುವುದಾಗಿದೆ.  ಪಿರ್ಯಾದಿದಾರರು ಕೋಟೇಶ್ವರದ  ಎನ್.ಆರ್‌ಆಚಾರ್ಯ ಆಸ್ಪತ್ರೆಯಲ್ಲಿ  ಚಿಕಿತ್ಸೆಯ  ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  79/2022 ಕಲಂ: 341,324,506,427 ಜೊತೆಗೆ 34 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಲಾಗಿದೆ. 
 • ಕುಂದಾಪುರ: ಪಿರ್ಯಾದಿ ಸತೀಶ್ ಶೆಟ್ಟಿ, ಪ್ರಾಯ: 47 ವರ್ಷ, ತಂದೆ: ದಿವಂಗತ ನರಸಿಂಹ ಶೆಟ್ಟಿ, ವಾಸ: ಮಹಾದೇವಿ ನಿಲಯ, ಕಾಗೇರಿ  ಕೋಟೇಶ್ವರ ಇವರುರು ಅವರ ಮಗನಾದ ಸನ್ನಿಧಿ ಎಂಬವರೊಂದಿಗೆ ದಿನಾಂಕ 25/07/2022 ರಂದು  ಅವರ ಬಾಬ್ತು  ಮಹೇಂದ್ರ ಥಾರ್ ವಾಹನ ಸಂಖ್ಯೆ  ಕೆಎ-20 ಎಮ್‌ ಈ-2609 ನೇದರಲ್ಲಿ ಹಾಲಾಡಿ  ಕಡೆಯಿಂದ ಕೋಟೇಶ್ವರ ಕಡೆಗೆ ಬಂದು  ಪಿರ್ಯಾದಿದಾರರನ್ನು ಮನೆಯ ಬಳಿ ಬಿಟ್ಟು  ಸನ್ನಿಧಿಯು ಕೋಟೇಶ್ವರದಲ್ಲಿರುವ  ಪ್ಲ್ಯಾಟ್‌ಗೆ ಬರಲು ವಾಹನ ಚಲಾಯಿಸಿಕೊಂಡು ಬರುತ್ತಿದ್ದಾಗ ಕೋಟೇಶ್ವರ ವರದರಾಜ್ ಶೆಟ್ಟಿ ಕಾಲೇಜಿನ  ಬಳಿ  ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿತರು ವಾಹನವನ್ನು ಕೋಟೇಶ್ವರ ಬೈಪಾಸ್ ಬಳಿ  ಬಂದು  ತಡೆದಾಗ  ಸನ್ನಿಧಿಯು ಪಿರ್ಯಾದಿದಾರರಿಗೆ  ಮೊಬೈಲ್ ಪೋನ್  ಕರೆ ಮಾಡಿ ವಿಷಯ ತಿಳಿಸಿ ವಾಹನವನ್ನು ವಾಪಾಸ್ಸು ತಿರುಗಿಸಿ ಮನೆಯ ಕಡೆಗೆ  ಹೋಗುವಾಗ ರಾತ್ರಿ ಸಮಯ ಸುಮಾರು 9.45 ಗಂಟೆಗೆ ವರದರಾಜ್ ಶೆಟ್ಟಿ ಕಾಲೇಜಿನ ಬಳಿ  ಆರೋಪಿತರಾದ ರಾಘವೇಂದ್ರ ಗೊಲ್ಲ, ನಿರಂಜನ್  ಮತ್ತು  ಇನ್ನೊಬ್ಬ ಕುಳ್ಳನೆಯ ವ್ಯಕ್ತಿಯು ದ್ವಿಚಕ್ರ ವಾಹನದಿಂದ ಪಿರ್ಯಾದಿದಾರರ ಮಗನು ಚಲಾಯಿಸಿಕೊಂಡಿದ್ದ ವಾಹನವನ್ನು ತಡೆದರು. ನಿರಂಜನ್ ಎಂಬಾತನು ಆತನ ಕೈಯಲ್ಲಿದ್ದ ದೊಣ್ಣೆಯಿಂದ ಪಿರ್ಯಾದಿದಾರರ ಎಡಕಾಲಿನ ತೊಡೆಗೆ ಹೊಡೆದು ಮೂವರು ಸೇರಿಕೊಂಡು ಕೈಯಿಂದ ಹೊಡೆಯುತ್ತಿದ್ದಾಗ  ತಪ್ಪಿಸಲು ಬಂದ ಪಿರ್ಯಾದಿದಾರರ ಮಗನಾದ ಸನ್ನಿಧಿಗೂ ಕೂಡಾ ಕೈಯಿಂದ ಹೊಡೆದಿರುತ್ತಾರೆ. ಹಾಗೂ  ಆರೋಪಿತರು  ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಸಹಿತ ಬಿಡುವುದಿಲ್ಲ ಎಂದು  ಜೀವ ಬೆದರಿಕೆ ಹಾಕಿದ್ದು   ಈ  ಹಲ್ಲೆಯಿಂದ ಪಿರ್ಯಾದಿದಾರರು ಮತ್ತು ಅವರ ಮಗನಾದ ಸನ್ನಿಧಿಯು ಕುಂದಾಫುರ ಸರಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆದಿರುತ್ತಾರೆ ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  80/2022 ಕಲಂ: 341,324,323,504,506 ಜೊತೆಗೆ 34 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಲಾಗಿದೆ. 
 • ಹಿರಿಯಡ್ಕ: ಪಿರ್ಯಾದಿ ಆಶಾ (43)  ಗಂಡ: ದಯಾನಂದ ಪೂಜಾರಿ  ವಾಸ:  41 ನೇ ಶೀರೂರು , ಹರಿಖಂಡಿಗೆ ,  ಬಂಡ್ಸಾಲೆ,  ಇವರ ಮಗನ ಪರಿಚಯದ ಖಲೀಲ್ ಎಂಬವನು ದಿನಾಂಕ: 24/07/2022 ರಂದು ಮದ್ಯಾಹ್ನ 2:00 ಗಂಟೆಗೆ ಪಿರ್ಯಾದುದಾರರ ಮನೆಯ ಅಂಗಳಕ್ಕೆ  ಬಂದು ಪಿರ್ಯಾದುದಾರರ ಮಗನಾದ ದೀರಜ್ ಇದ್ದಾನೆಯೇ ಎಂದು ವಿಚಾರಿಸಿದ್ದು ಅ ಸಮಯ ಪಿರ್ಯಾದುದಾರರು ಮನೆಯಿಂದ ಹೊರಗೆ ಬಂದಾಗ ಅವರ ಮೊಬೈಲ್ ಸಂಖ್ಯೆಯನ್ನು ಕೇಳಿದ್ದು ಅದಕ್ಕೆ ನೀನಗೇಕೆ ಮೊಬೈಲ್  ಸಂಖ್ಯೆ  ಎಂದು ಕೇಳಿದಾಗ ಆಗ ಅವನು ಪಿರ್ಯಾದುದಾರರ ನೈಟಿಯನ್ನು ಎಳೆದಿರುತ್ತಾನೆ. ಅ ಸಮಯ ಪಿರ್ಯಾದುದರರು ಬೊಬ್ಬೆ ಹಾಕಿದ್ದು  ನೆರೆಮನೆಯ ಅವರ ತಮ್ಮ ಉದಯ ಓಡಿ ಬಂದಿದ್ದು ಆತನನ್ನು ನೋಡಿ ನೀನು ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಜೀವ ಸಮೇತ ಬಿಡುವುದಿಲ್ಲ   ಎಂಬುದಾಗಿ ಜೀವ ಬೆದರಿಗೆ ಹಾಕಿರುತ್ತಾನೆ. ಪಿರ್ಯಾದುದರು  ಹೆದರಿ ವಿಷಯವನ್ನು ಯಾರಿಗೂ ತಿಳಿಸದಿದ್ದು ಈ ದಿನ ಮಗನೊಂದಿಗೆ ಚರ್ಚಿಸಿ  ತಡವಾಗಿ ನೀಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ. ಅಪರಾಧ ಕ್ರಮಾಂಕ 38/2022    ಕಲಂ:  354, 447, 506 ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಉಡುಪಿ: ಪಿರ್ಯಾದಿ ಓಂ ಪ್ರಕಾಶ, ಪ್ರಾಯ:33   ವರ್ಷತಂದೆ: ಅಖೀಲೇಶ್ ಪ್ರಸಾದ್ ಸಿಂಗ್ ವಾಸ:.ಸಿ. ವಿಂಗ್, ರೀಗಲ್ ಮೋನಾರ್ಕ್ ಅಪಾರ್ಟಮೆಂಟ್, ರೂಮ್ ನಂಬ್ರ: 401, ಶಿರಿಬೀಡು, ಉಡುಪಿ ರವರು ಎಕ್ಸಿಸ್ ಬ್ಯಾಂಕಿನಿಂದ ಕ್ರೆಡಿಟ್ ಕಾರ್ಡ ನಂ. 5305620510951797 ನೇದನ್ನು ಹೊಂದಿದ್ದು, ದಿನಾಂಕ:25-07-2022 ರಂದು    15:01 ನೇ ಗಂಟೆಯ ಸಮಯಕ್ಕೆ ಆರೋಪಿ ಅಪರಿಚಿತ ವ್ಯಕ್ತಿ ನಂಬ್ರ: 18605005555 ನೇದರಿಂದ ಕರೆ ಮಾಡಿ ತಾನು ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಧಿಕಾರಿ ಎಂದು ನಂಬಿಸಿ, ಪಿರ್ಯಾದಿದಾರರ ಹೊಂದಿರುವ ಸದ್ರಿ ಕ್ರೆಡಿಟ್ ಕಾರ್ಡ ಬ್ಲಾಕ್ ಆಗಿರುವುದಾಗಿ ತಿಳಿಸಿ ಯಾವುದೋ ರೀತಿಯಲ್ಲಿ ಕಾರ್ಡನ ಮಾಹಿತಿಯನ್ನು ಪಡೆದು ಅದರಿಂದ ಕ್ರಮವಾಗಿ ರೂ. 90,900/-,98,980/-ರಂತೆ ಒಟ್ಟು ರೂ.1,89,880/- ಹಣವನ್ನು ಕಾನೂನುಬಾಹಿರವಾಗಿ ವಿದ್  ಡ್ರಾ ಮಾಡಿಸಿಕೊಂಡಿ ಕೊಂಡು ನಷ್ಟ ಉಂಟು ಮಾಡಿರುವುದುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 36/2022 ಕಲಂ 66(c),66 (D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಉಡುಪಿ: ಪಿರ್ಯಾದಿ G.ಯೋಗಾನಂದ, ಪ್ರಾಯ: 67 ವರ್ಷ, ತಂದೆ: ದಿವಂಗತ. ಗವಿಯಯ್ಯ, ವಾಸ: ನಂ. 204, ಸಾಯಿರಾಧ ಎನ್ ಕ್ಲೇವ್, ಮಿಷನ್ ಕಂಪೌಂಡ್, ಚಂದು ಮೈದಾನ್ ರಸ್ತೆ, ಉಡುಪಿ. ರವರು ಇಂಟರ್‌ನೆಟ್‌ನಲ್ಲಿ ಹರಿಯಾಣದಲ್ಲಿರುವ ಅಧೀಕೃತ ವಾಗಿರುವ ಜೆ.ಸಿ.ಬಿ ಇಂಡಿಯಾ ಗ್ರೂಪ್ ಎಂಬ ಹೆಸರಿನ ಸಂಸ್ಥೆ ಎಂಬುದಾಗಿ ನಂಬಿಕೊಂಡು. ಸದ್ರಿ ಸಂಸ್ಥೆಯಲ್ಲಿ ಉಪಕರಣಗಳ ಖರೀದಿಗಾಗಿ ವಿವಿಧ ಲಾಭದಾಯಕ ಯೋಜನೆಗಳಲ್ಲಿ ಸಾರ್ವಜನಿಕರಿಂದ ಹಣ ಹೂಡಿಕೆ ಬಗ್ಗೆ ಬೇಡಿಕೆಯನ್ನು ಇಂಟರ್ ನೆಟ್ ನಲ್ಲಿ ಸಂದೇಶವನ್ನು ಇಟ್ಟಿದ್ದು, ಇದನ್ನು ಪಿರ್ಯಾಧಿದಾರರು ದಿನಾಂಕ 09-7-2022 ರಂದು  ನೋಡಿ ಅದರಲ್ಲಿ ನಮೂದಿಸಿದ ಸದ್ರಿ ಸಂಸ್ಥೆಯ ಎಡ್ಮೀನ್  ರಾದ 1, ಪಲ್ಲವಿ, ಮೊಬೈಲ್ ನಂಬ್ರ:+601119423413 ಹಾಗೂ 2.ಅಶ್ಮಿತಾ ರಕ್ಷೆ, ಮೊಬೈಲ್  ನಂಬ್ರ 9036871750 ನೇ ನಂಬ್ರದೊಂದಿಗೆ ವ್ಯವಹರಿಸಿದಲ್ಲಿ ಅವರು ಅಧಿಕೃತವಾಗಿರುವ ಸಂಸ್ಥೆ ಎಂಬುದಾಗಿ ತಿಳಿಸಿ ವಿವಿಧ ಯೋಜನೆಗಳ ಪ್ಲ್ಯಾನ್ ಗಳನ್ನು ಹಾಗೂ ಅದರಿಂದ ಬರಬಹುದಾದ ಹಣದ ಲಾಭಗಳ ಬಗ್ಗೆ ತಿಳಿಸಿದ್ದು, ಇದರಿಂದ ಪಿರ್ಯಾದಿದಾರರು  ಆಕರ್ಷಿತರಾಗಿ ಅವರ ಮಾತನ್ನು ನಂಬಿಕೊಂಡು ತನ್ನ ಉಡುಪಿ ಶಾಖೆಯ ಸರಸ್ವತ ಕೋ-ಆಪರೇಟಿವ್ ಬ್ಯಾಂಕ್ ನಿಂದ ದಿನಾಂಕ:09-07-2022 ರಂದು ಕ್ರಮವಾಗಿ ರೂ.1,500/-,1500/-, 1500/-,1,500/-,15,000/-, 15,000/-,15,000/-, 10.000/-,10.000/-, 10.000/-, ಒಟ್ಟು. ರೂ.  81,000/- ಹಣವನ್ನು ಜೆ.ಸಿ.ಬಿ ಇಂಡಿಯಾ ಗ್ರೂಪ್ ನ ಯೋಜನೆಗಳಲ್ಲಿ ಸೂಚಿಸಿದ ಖಾತೆಗಳಿಗೆ ಕ್ರೆಡಿಟ್ ಮಾಡಿದ್ದು, ನಂತ್ರ ಸಂಸ್ಥೆಯಿಂದ ಪಿರ್ಯಾಧಿದಾರರಿಗೆ ಸಿಗಬೇಕಾದ ಲಾಭಾಂಶವನ್ನು  ಸಂದೇಶದಲ್ಲಿ ತೋರಿಸಿ, ಪಿರ್ಯಾದಿಯ ಬ್ಯಾಂಕ್ ಖಾತೆಗೆ ಡಿಪಾಸಿಟ್ ಮಾಡದೆ, ಸದ್ರಿ ಸಂಸ್ಥೆಯನ್ನು ಯಾವುದೇ ಮಾಹಿತಿ ನೀಡದೆ ಸ್ಥಗಿತಗೊಳಿಸಿ, ಪಿರ್ಯಾದಿದಾರರನ್ನು ಮೋಸಗೊಳಿಸಿ,  ಹಣ ಪಡೆದು ನಷ್ಟ ಉಂಟು ಮಾಡಿರುವುದಾಗಿದೆ .ಈ ಬಗ್ಗೆ ಸೆನ್ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 37/2022 ಕಲಂ 66(c),66 (D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ.
   

ಇತ್ತೀಚಿನ ನವೀಕರಣ​ : 26-07-2022 06:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080