ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 25/07/2021 ರಂದು ಪಿರ್ಯಾದಿದಾರರಾದ ವಿಖ್ಯಾತ್ ಶೆಟ್ಟಿ (31), ತಂದೆ: ಶರತ್ ಕುಮಾರ್ ಶೆಟ್ಟಿ, ವಾಸ: ವಿಶ್ರುತಧಾಮ, ನಂ. 45-2, ನಡೂರು, ತೆಂಕಮನೆ ಅಂಚೆ, ಮಂದಾರ್ತಿ, ಬ್ರಹ್ಮಾವರ ತಾಲೂಕು ಇವರು  ಮನೆಯ ಡೈನಿಂಗ್ ಟೇಬಲ್‌ನ ಗ್ಲಾಸ್ ಬದಲಾಯಿಸಲು ಅವರ ಸ್ನೇಹಿತ ರಕ್ಷಿತ್ ರವರ KA-20-B-4505 ನಂಬ್ರದ ಟಾಟಾ 407 ಟಿಪ್ಪರ್ ವಾಹನದಲ್ಲಿ ಗ್ಲಾಸ್‌ನ್ನು ತುಂಬಿಸಿಕೊಂಡು ಕುಂದಾಪುರ-ಉಡುಪಿ ರಾಷ್ಟ್ರೀಯ ಹೆದ್ದಾರಿ 66  ರಲ್ಲಿ  ಉಡುಪಿಗೆ ಹೋಗುತ್ತಿದ್ದಾಗ ಮಧ್ಯಾಹ್ನ 12:30 ಗಂಟೆಗೆ ಹೇರೂರು ಗ್ರಾಮದ ಶ್ಯಾಮಿಲಿ ಶನಾಯ ಹಾಲ್‌ನ ಮುಂದುಗಡೆ ರಸ್ತೆಯಲ್ಲಿ  ಉಡುಪಿ ಕಡೆಯಿಂದ ಆರೋಪಿ ಮಹೇಶ್ ಕುಮಾರ್ KA-19-MA-0906 ನಂಬ್ರದ ಮಾರುತಿ ಆಲ್ಟೋ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಮಧ್ಯದ DENLATOR ಗೆ ಗುದ್ದಿ ಡಿವೈಡರ್ ಹತ್ತಿ ಪಿರ್ಯಾದಿದಾರರ ಟಿಪ್ಪರ್ ವಾಹನದ ಪಕ್ಕದ ಲೇನ್‌ನಲ್ಲಿ ಉಡುಪಿ ಕಡೆಗೆ ರಾಜೇಶ್ ರವರು ಸವಾರಿ ಮಾಡುತ್ತಿದ್ದ KA-20-EW-1262 ನಂಬ್ರದ ಹೊಂಡಾ ಡಿಯೋ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ಅದೇ ರಭಸದಲ್ಲಿ ಪಿರ್ಯಾದಿದಾರರ ಟಿಪ್ಪರ್ ವಾಹನದ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ವಾಹನ ಹತೋಟಿ ತಪ್ಪಿ ಬಲಭಾಗ ತಿರುಗಿ ರಸ್ತೆಯ ಮಧ್ಯದ ಡಿವೈಡರ್ ಹತ್ತಿ ನಿಂತಿರುತ್ತದೆ.  ಈ ಅಪಘಾತದಿಂದ ಹೊಂಡಾ ಡಿಯೋ ದ್ವಿಚಕ್ರ ವಾಹನ ಸಮೇತ ಅದರ ಸವಾರ ರಾಜೇಶ್ ರವರು ರಸ್ತೆಗೆ ಬಿದ್ದು ಅವರ ಬಲಕಾಲಿನ ಮಂಡಿಯ ಕೆಳಗೆ ಒಳನೋವು ಆಗಿರುತ್ತದೆ ಹಾಗೂ  ದ್ವಿಚಕ್ರ ವಾಹನ ರಸ್ತೆಯ ಡಿವೈಡರ್ ಮೇಲೆ ಬಿದ್ದು ಸಂಪೂರ್ಣ ಜಖಂಗೊಂಡಿರುತ್ತದೆ. ಅಲ್ಲದೇ ಅಪಘಾತದಿಂದ ಪಿರ್ಯಾದಿದಾರರ ಟಿಪ್ಪರ್ ವಾಹನದ ಮುಂಭಾಗದ ಗ್ಲಾಸ್, ಬಂಪರ್, ಡೀಸಿಲ್ ಟ್ಯಾಂಕ್, ಚೆಸ್ಸಿ ಹಾಗೂ ಮುಂಭಾಗ ಮತ್ತು ಬ್ಲೇಡ್ ಸೆಟ್, ಕೆಳಭಾಗ  ಸಂಪೂರ್ಣ ಜಖಂಗೊಂಡಿರುತ್ತದೆ, ಟಿಪ್ಪರ್‌ನ ಹಿಂದೆ ಇದ್ದ ಡೈನಿಂಗ್ ಟೇಬಲ್‌ನ ಗ್ಲಾಸ್ ತುಂಡಾಗಿರುತ್ತದೆ. ಆರೋಪಿಯ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುತ್ತದೆ. ಪಿರ್ಯಾದಿದಾರರ ವಾಹನದಲ್ಲಿದ್ದರಿಗೂ ಹಾಗೂ ಆರೋಪಿಗೂ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 141/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 25/07/2021 ರಂದು ಪಿರ್ಯಾದಿದಾರರಾದ ರಹೀಮ್ ಸಾಹೇಬ್  (45), ತಂದೆ: ದಿ. ಉಸ್ಮಾನ್ ಸಾಹೇಬ್, ವಾಸ: ಮನೆ ನಂ: 21/67 ಉಸ್ಮಾನ್ ಮಂಜಿಲ್ ಮೂಡುಬೆಟ್ಟು ತಾಲೂಕು, ಉಡುಪಿ ಜಿಲ್ಲೆ ಇವರು ಹೊಸ ಆಕ್ಟಿವಾ ( ಇಂಜಿನ್ ನಂಬ್ರ JF 91EG 0434990 ) ದಲ್ಲಿ ತನ್ನ ಬಾವ ಅಬ್ದುಲ್ ಕಲಾಂ ಸಾಹೇಬ್ ರವರನ್ನು ಸಹ ಸವರರನ್ನಾಗಿ ಕುಳ್ಳಿರಿಸಿಕೊಂಡು ತನ್ನ ಕೆಲಸದ ಬಗ್ಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಟಪಾಡಿಯಿಂದ ಉಡುಪಿ ಕಡೆಗೆ  ಸವಾರಿ ಮಾಡಿಕೊಂಡು ಬರುತ್ತಿರುವಾಗ ಬೆಳಿಗ್ಗೆ 11:00 ಗಂಟೆಗೆ ಬಲೈಪಾದೆ ಜಂಕ್ಷನ್ ತಲುಪುವಾಗ KA-20-ET-1712 ನೇದರ ಸ್ಕೂಟರ್ ಚಾಲಕ ಶ್ರೇಯಸ್.ಕೆ ಶೆಟ್ಟಿ  ಕಿನ್ನಿಮುಲ್ಕಿ ಕಡೆಯಿಂದ ಉದ್ಯಾವರದ ಕಡೆಗೆ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಹೊಸ ಆಕ್ಟಿವಾ ಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಹ ಸವಾರ ಅಬ್ದುಲ್ ಕಲಾಂ ಸಾಹೇಬ್ ರವರು ರಸ್ತೆಗೆ ಬಿದ್ದು, ಎರಡು ಕೈಗಳಿಗೆ ಮೂಳೆ ಮುರಿತ ಉಂಟಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 43/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 24/07/2021 ರಂದು ಪಿರ್ಯಾದಿದಾರರಾದ ಮಣಿಕಂಠ (29),  ತಂದೆ: ಸ್ವಾಮಿ ಪೂಜಾರಿ, ವಾಸ: ಆಚಾರ ಕೇರಿ,ಮೇಲ್ಪಂಕ್ತಿ ಶಿರೂರು ಗ್ರಾಮ, ಬೈಂದೂರು ತಾಲೂಕು ಇವರು ಮೋಟಾರು ಸೈಕಲ್ ನಲ್ಲಿ ಸ್ನೇಹಿತ ಶಶಿಯವರ ಮನೆಗೆ ಹೊರಟು ರಾಷ್ಟ್ರೀಯ ಹೆದ್ದಾರಿಯಿಂದ ಪಶ್ಚಿಮ ಬದಿಯ ರಸ್ತೆಯಲ್ಲಿ  ಸಂಜೆ 7:00 ಗಂಟೆಗೆ ಬೈಂದೂರು ತಾಲೂಕು ಶಿರೂರು ಆರ್ಮಿ ಕರಿಕಟ್ಟೆಯ ಬಳಿ ಇರುವ ದುರ್ಗಾಂಬಿಕಾ ಸಭಾಭವನದಿಂದ ಸ್ವಲ್ಪ ಮುಂದೆ ಹೋಗುತ್ತಿರುವಾಗ ಪಿರ್ಯಾದಿದಾರರ ಎದುರಿನಲ್ಲಿ KA-20-V-2333 ನೇ ನಂಬ್ರದ ಮೋಟಾರ್ ಸೈಕಲ್ ಸವಾರನು ಸಹ ಸವಾರನೊಂದಿಗೆ ಹೋಗುತ್ತಿರುವಾಗ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಕಾರಿನ ನಂಬ್ರ DL-3-CAW-1144 ನೇದರ ಕಾರು ಚಾಲಕನು ತನ್ನ  ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರ ಎಡಬದಿಗೆ ಚಲಾಯಿಸಿ ಪಿರ್ಯಾದಿದಾರರ ಎದುರಿನಿಂದ ಹೋಗುತ್ತಿರುವ ಮೋಟಾರ್ ಸೈಕಲ್ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ,ಸಹ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರು ಅಲ್ಲಿಗೆ ಹೋಗಿ ನೋಡಲಾಗಿ ಮೋಟಾರ್ ಸೈಕಲ್ ಸವಾರ ಪರಿಚಯದ ವಿಷ್ಣು ಆಚಾರ್ಯ ಆಗಿದ್ದು ಮೋಟಾರ್ ಸೈಕಲ್ ಸವಾರನಿಗೆ  ಬೆನ್ನಿಗೆ,ಮುಖಕ್ಕೆ,ಎರಡು ಕಾಲಿಗೆ ತರಚಿದ ಗಾಯವಾಗಿದ್ದು, ಮೋಟಾರ್ ಸೈಕಲ್ ಸಹ ಸವಾರ ನಾರಾಯಣ ಆಚಾರಿಗೆ ಎಡಬದಿಯ ಭುಜಕ್ಕೆ,ಎರಡು ಕಾಲಿಗೆ,ಮುಖಕ್ಕೆ ತರಚಿದ ಗಾಯ ಆಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 120/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಮೊಹಮ್ಮದ್ ರಫೀಕ್ (50), ತಂದೆ: ದಿ. ಎಂ ಆಜಬ್ಬ, ವಾಸ: ಮನೆ ನಂಬ್ರ 2-86-1 ಬೈತುಲ್ ಆಯಿಷಾ ಈಸ್ಟ್ ವೆಸ್ಟ್ ನರ್ಸರಿ ಹತ್ತಿರ ಮುಳೂರು ಗ್ರಾಮ ಇವರು ದಿನಾಂಕ 23/07/2021 ರಂದು ಸಂಜೆ 6:00 ಗಂಟೆಗೆ ಪಿರ್ಯಾದಿದಾರರು ಹಾಗೂ ಅವರ ಹೆಂಡತಿ ಮಕ್ಕಳು ಮನೆಗೆ ಬೀಗ ಹಾಕಿ ಮಂಗಳೂರಿಗೆ ತಮ್ಮನ ಮನೆಗೆ  ಹೋಗಿದ್ದು, ದಿನಾಂಕ 25/07/2021 ರಂದು ಬೆಳಿಗ್ಗೆ 8:00 ಗಂಟೆಗೆ ವಾಪಾಸು ಮನೆಗೆ ಬಂದು ಮನೆಯ ಬಾಗಿಲನ್ನು ತೆರೆಯುವಾಗ ಮನೆಯ ಬಾಗಿಲು ಒಳಗಿನಿಂದ ಚಿಲಕ ಹಾಕಿದ್ದು ಕಂಡು ಬಂದಿದ್ದು, ಹಿಂಬದಿ ಬಾಗಿಲನ್ನು ನೋಡಲಾಗಿ ಹಿಂಬದಿಯ ಬಾಗಿಲಿನ ಚಿಲಕವನ್ನು ಮುರಿದು ಬಾಗಿಲು ತೆರದಿರುವುದು ಕಂಡು ಬಂದಿದ್ದು, ಮನೆಯ ಒಳಗೆ ಹೋಗಿ ನೋಡಲಾಗಿ ರೂಮಿನ ಒಳಗಿದ್ದು 4 ಕಪಾಟುಗಳ ಬಾಗಿಲು ತೆರೆದಿದ್ದು ಕಪಾಟಿನ ಒಳಗಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು,  ರೂಮಿನಲ್ಲಿದ್ದ ಇನ್ನೊಂದು ಕಪಾಟನ್ನು ನೋಡಲಾಗಿ ಕಪಾಟಿನ ಒಳಗಡೆ ಲಾಕರ್‌‌ನ  ಬೀಗವನ್ನು ತೆರೆದಿದ್ದು ಕಂಡು ಬಂದಿದ್ದು ಲಾಕರ್ ‌ನಲ್ಲಿ ಇಟ್ಟಿದ್ದ, 7 ಪವನ್ ತೂಕದ ಒಂದು ಜೊತೆ ಬಳೆ, 7 ಪವನ್ ತೂಕದ ಚಿನ್ನದ ಚೈನು -1, 2 ಪವನ್ ತೂಕದ ಉಂಗುರ-4, 3 ಪವನ್ ತೂಕದ 2 ಜೊತೆ ಬೆಂಡೋಲೆ,  1 ಪವನ್ ತೂಕದ ಉಂಗುರ-2, ನಗದು 20,000/- ರೂಪಾಯಿ ಒಟ್ಟು 5,00,000/- ರೂಪಾಯಿ ಮೌಲ್ಯದ ಸೊತ್ತುಗಳು ಕಳವಾಗಿದ್ದು  ಸೊತ್ತುಗಳನ್ನು ಯಾರೋ ಕಳ್ಳರು ದಿನಾಂಕ 23/07/2021 ರಂದು ಸಂಜೆ 6:00 ಗಂಟೆಯಿಂದ  ದಿನಾಂಕ 25/07/2021 ರಂದು ಬೆಳಿಗ್ಗೆ 8:00 ಗಂಟೆಯ ಮಧ್ಯಾವಧಿಯಲ್ಲಿ ಹಿಂದಿನ ಬಾಗಿಲಿನ ಚಿಲಕವನ್ನು ಮುರಿದು ಪಿರ್ಯಾದಿದಾರರ ಮನೆಯ ಒಳಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 125/2021  ಕಲಂ: 454,457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಇಬ್ರಾಹಿಂ ಮೊಹಮ್ಮದ್ ಹಸನ್ (53), ತಂದೆ: ದಿ. ಕೆ ಮೊಹಮ್ಮದ್, ವಾಸ: ಮಧುರಾ ಕಾಂಪೌಂಡು, ಸೊಸೈಟಿ ಹಿಂಭಾಗ ಮೂಳೂರು ಗ್ರಾಮ, ಕಾಪು ತಾಲೂಕು ಹಾಗೂ ಅವರ ಹೆಂಡತಿ ನಜೀಮ ರವರು ಮಧುರಾ ಕಾಂಪೌಂಡು, ಸೊಸೈಟಿ ಹಿಂಭಾಗ ಮೂಳೂರು ಗ್ರಾಮ ಇಲ್ಲಿ ವಾಸಮಾಡಿಕೊಂಡಿದ್ದು ದಿನಾಂಕ 24/07/2021 ರಂದು ಮಧ್ಯಾಹ್ನ 12:50 ಗಂಟೆಗೆ ಪಿರ್ಯಾದಿದಾರರು ಹಾಗೂ ಅವರ ಹೆಂಡತಿ ಮನೆಗೆ ಬೀಗ ಹಾಕಿ ಕುಂದಾಪುರಕ್ಕೆ ಹೋಗಿದ್ದು, ದಿನಾಂಕ 25/07/2021 ರಂದು ಬೆಳಿಗ್ಗೆ 09:30 ಗಂಟೆಗೆ ವಾಪಾಸು ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳಪ್ರವೇಶಿಸಿ  ಬೆಡ್ ರೂಮಿನ ಬಾಗಿಲನ್ನು ಮುರಿದು ಅಲ್ಲಿದ್ದ ಕಪಾಟಿನ ಬಾಗಿಲನ್ನು ಮುರಿದು, ಕಪಾಟಿನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು, ಅಲ್ಲದೇ ಮನೆಯ ಇನ್ನೊಂದು ರೂಮಿನ ಕಪಾಟಿನ ಬಾಗಿಲನ್ನು ಮುರಿದು ಅದರಲ್ಲಿದ್ದ ವಸ್ತಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು, ಅಲ್ಲದೇ ಮನೆಯ ಮೇಲಂತಸ್ತಿನ ರೂಮಿನ ಬಾಗಿಲನ್ನು ಒಡೆದು ರೂಮಿನಲ್ಲಿದ್ದ ಕಪಾಟಿನ ಬೀಗವನ್ನು ಮುರಿದು ಕಪಾಟಿನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕಪಾಟಿನಲ್ಲಿದ್ದ,  60,000/- ರೂಪಾಯಿ ಬೆಲೆಯ ಒಂದು ರಾಡೋ ವಾಚ್, 30,000/- ರೂಪಾಯಿ ಬೆಲೆಯ ಒಂದು ಮೊಬೈಲ್ ಹಾಗೂ 20,000/- ರೂಪಯಿ ನಗದು ಒಟ್ಟು 1,10,000/- ರೂಪಾಯಿ ಮೌಲ್ಯದ ಸೊತ್ತುಗಳು ಕಳವಾಗಿದ್ದು, ಸೊತ್ತುಗಳನ್ನು ಯಾರೋ ಕಳ್ಳರು ದಿನಾಂಕ 24/07/2021 ರಂದು ಮಧ್ಯಾಹ್ನ 12:50 ಗಂಟೆಯಿಂದ  ದಿನಾಂಕ 25/07/2021 ರಂದು ಬೆಳಿಗ್ಗೆ 09:30 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ಮನೆಯ ಬಾಗಿಲಿನ ಬೀಗವನ್ನುಮುರಿದು ಒಳಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 126/2021  ಕಲಂ 454,457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಶಹನಾಜ್ (43), ಗಂಡ: ಅಬ್ದುಲ್ ರಜಾಕ್, ವಾಸ: ಮಧುರ ಕಂಪೌಂಡ್ ಮೂಳೂರು ಅಂಚೆ, ಉಚ್ಚಿಲ, ಕಾಪು ಇವರು ದಿನಾಂಕ 24/07/2021 ರಂದು ಸಂಜೆ 6:00 ಗಂಟೆಗೆ  ಮನೆಗೆ ಬೀಗ ಹಾಕಿ ತನ್ನ  ಗಂಡ ಮತ್ತು ಮಕ್ಕಳೊಂದಿಗೆ ಮೂಳೂರು ಫಿಶರೀಷ್ ರಸ್ತೆಯಲ್ಲಿರುವ ಗಂಡನ ಮನೆಗೆ ಹೋಗಿದ್ದು ದಿನಾಂಕ 25/07/2021 ರಂದು ಬೆಳಿಗ್ಗೆ 09:30 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಮುಂದಿನ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಮುರಿದಿದ್ದು ಮನೆಯ ಒಳಗೆ ಹೋಗಿ ನೋಡಿದಾಗ ಮನೆಯ ಕಪಾಟಿನ ಬೀಗ ಮುರಿದಿದ್ದು ಅದರಲ್ಲಿದ್ದ ಬಟ್ಟೆ ಹಾಗೂ ಇತರ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕಪಾಟಿನಲ್ಲಿ ನೋಡಿದಾಗ ಕಪಾಟಿನಲ್ಲಿಟ್ಟಿದ್ದ 30,000/- ರೂಪಾಯಿ ನಗದು ಒಂದು ಜೊತೆ ಕಿವಿಯ ರಿಂಗ್ (1/4 ಪವನ್), ಒಂದು ಜೊತೆ ಹೊವಿನ ಡಿಸೈನ್ ಇರುವ ಕಿವಿಯ ಬೆಂಡೋಲೆ (1/4 ಪವನ್) ಮತ್ತು ಒಂದು ಸಪೂರ ಚಿನ್ನದ ಸರ (1/2 ಪವನ್) ಒಟ್ಟು 30,000/- ರೂಪಾಯಿ ಮೌಲ್ಯದ ಚಿನ್ನದ ಭರಣವು ಕಳವಾಗಿದ್ದು, ದಿನಾಂಕ 24/07/2021 ರಂದು ಸಂಜೆ 6:00 ಗಂಟೆಯಿಂದ ದಿನಾಂಕ 25/07/2021 ರಂದು ಬೆಳಿಗ್ಗೆ 09:30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರಾದ ಮನೆಯ ಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿ ಮನೆಯ ಒಳಗೆ ಕೋಣೆಯಲ್ಲಿ ಇರಿಸಿದ್ದ ಮರದ ಕಪಾಟಿಗೆ ಹಾಕಿದ ಬೀಗ ಮುರಿದು ಅದರಲ್ಲಿದ್ದ 30,000/- ರೂಪಾಯಿ ನಗದು ಹಾಗೂ 30,000/- ರೂಪಾಯಿ ಬೆಲೆ ಬಾಳುವ ಚಿನ್ನದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 127/2021  ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ರಘುವೀರ್ ಪ್ರಭು (43), ತಂದೆ: ಚಂದ್ರಹಾಸ ಪ್ರಭು, ವಾಸ: ಚೆನ್ನಕೇಶವ ಕಲ್ಯಾಣ ಮಂಟಪದ ಹತ್ತಿರ, ಸಾಸ್ತಾನ, ಪಾಂಡೇಶ್ವರ ಇವರ ತಂದೆ ಚಂದ್ರಹಾಸ ಪ್ರಭು (81) ರವರು ಕಳೆದ ಹತ್ತು ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರೂ ಸಂಪೂರ್ಣವಾಗಿ ಗುಣಮುಖರಾಗಿರುವುದಿಲ್ಲ. ಚಂದ್ರಹಾಸ ಪ್ರಭು ರವರು ಅವರಿಗಿದ್ದ ಮಾನಸಿಕ ಖಾಯಿಲೆಯಿಂದ ಜೀವನದಲ್ಲಿ ಜೀಗುಪ್ಸೆಗೊಂಡು ದಿನಾಂಕ 25/07/2021 ರಂದು ಬೆಳಿಗ್ಗೆ 09:00 ಗಂಟೆಯಿಂದ ಸಂಜೆ 5:25 ಗಂಟೆಯ ಮಧ್ಯಾವಧಿಯಲ್ಲಿ ಬ್ರಹ್ಮಾವರ ತಾಲೂಕು, ಹಂದಾಡಿ ಗ್ರಾಮದ, ಸೂಲ್‌ಕುದ್ರು ಹೋಗುವ ರಸ್ತೆಯ ಪೂರ್ವ ದಿಕ್ಕಿನಲ್ಲಿರುವ ಸೀತಾನದಿಯ ಕವಲು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 43/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಶಕುಂತಳ (62), ಗಂಡ: ಕುಮಾರ್ ಅಮ್ಮಣ್ಣ, ವಾಸ: ಸುಖೇಶ ಚಾಲ್ವೆಟ್, ಕಾಳಿಕಾಂಬ ಭಜನಾ ಮಂದಿರ ಹಿಂಬದಿ, ತೆಂಕನಿಡಿಯೂರು, ಕೊಡವೂರು ಗ್ರಾಮ ಇವರ ಅಕ್ಕ ಗೀತಾ(64) ರವರು ಮಲ್ಪೆ ಕೊಳದಲ್ಲಿ ಅವರ ತಂದೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದು ಅವರು ಅವಿವಾಹಿತರಾಗಿರುತ್ತಾರೆ. ಅವರು ಮಲ್ಪೆಯಲ್ಲಿ ಮೀನು ಕಟ್ಟಿಂಗ್ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 25/07/2021 ರಂದು ಸಂಜೆ 7:00 ಗಂಟೆಗೆ ಪಿರ್ಯಾದಿದಾರರಿಗೆ ಅವರ ಅಕ್ಕನ ಮನೆಯ ನೆರೆಮನೆಯವರಾದ ಮೇರಿ ರವರು ಪೋನ್ ಕರೆ ಮಾಡಿ ನಿಮ್ಮ ಅಕ್ಕನ ಮನೆಯಿಂದ ವಾಸನೆ ಬರುತ್ತಿರುವ ವಿಷಯ ತಿಳಿಸಿದ್ದು ಈ ಬಗ್ಗೆ ಪಿರ್ಯಾದಿದಾರರು  ಹಾಗೂ ಅವರ ಮಗಳು ಸುಷ್ಮಾ ಸವಿತ್ ರವರೊಂದಿಗೆ ಪಿರ್ಯಾದಿಯ ಅಕ್ಕ ಗೀತಾ ರವರ ಮನೆಯ ಕೋಣೆಯ ಒಳಗಡೆ ಹೋಗಿ ನೋಡಲಾಗಿ ಗೀತಾ ರವರ ಮೃತ ದೇಹವು ಮಲಗಿದ ಸ್ಥಿತಿಯಲ್ಲಿದ್ದು ಸಂಪೂರ್ಣ ಕೊಳೆತ  ಸ್ಥಿತಿಯಲ್ಲಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 35/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಂಕರನಾರಾಯಣ: ದಿನಾಂಕ 25/07/2021 ರಂದು ಪಿರ್ಯಾದಿದಾರರಾದ ವಿಲ್ಪೇಡ್ ಡಿ’ಸೋಜಾ (50), ತಂದೆ: ಐಸಾಕ್  ಡಿ’ಸೋಜಾ, ವಾಸ: ಹೆಡ್ ಕಾನ್ಸಟೇಬಲ್ ಶಂಕರನಾರಾಯಣ  ಪೊಲೀಸ್  ಠಾಣೆ ಇವರು 12:30 ಗಂಟೆಗೆ ಶಂಕರನಾರಾಯಣ  ಗ್ರಾಮದ ಶಂಕರನಾರಾಯಣ ಪೊಲೀಸ್  ಠಾಣೆಯ ಎದುರುಗಡೆ  ರಾಜ್ಯ ರಸ್ತೆಯಲ್ಲಿ ಸಮವಸ್ತ್ರ ಧರಿಸಿ ಸಹ ಸಿಬ್ಬಂದಿಯವರೊಂದಿಗೆ ಕೋವಿಡ್ -19 ಮಾರ್ಗಸೂಚಿಯಂತೆ ಕರೋನಾ ವೈರಸ್ ಹರಡದಂತೆ  ಮುನ್ನೆಚ್ಚರಿಕೆ ಕ್ರಮಕ್ಕಾಗಿ ಮಾಸ್ಕ ಧರಿಸದೇ  ತಿರುಗಾಟ ಮಾಡುವವರ  ತಪಾಸಣೆ ಮಾಡುತ್ತಿರುವಾಗ  ಮಾಸ್ಕ ಧರಿಸದೇ KA-19-MD-9794 ನೇ  ನಂಬ್ರದ ಕಾರಿನಲ್ಲಿ  4 ಜನ ಪ್ರಯಾಣ ಮಾಡುತ್ತಿದ್ದನ್ನು ನೋಡಿ ಕಾರನ್ನು  ನಿಲ್ಲಿಸುವಂತೆ ಸೂಚನೇ ನೀಡಿ ಕಾರಿನಲ್ಲಿ ಮಾಸ್ಕ ಹಾಕದೇ ಪ್ರಯಾಣ ಮಾಡುತ್ತಿದ್ದ ಬಗ್ಗೆ ವಿಚಾರಿಸುತ್ತಿರುವಾಗ ಕಾರಿನ ಚಾಲಕ  ಆರೋಪಿ ಇದಿನಬ್ಬ ಸಾಹೀದ್ ಕಾರಿನಿಂದ ಇಳಿದು ಬಂದು  ಏಕಾಏಕೀ ಪಿರ್ಯಾದಿದಾರರ ಮೈ ಮೇಲೆ ಎರಗಿ ಹಲ್ಲೆ ಮಾಡಿ ಅವರು ಧರಿಸಿದ ಸಮವಸ್ತ್ರವನ್ನು ಹರಿದು ಹಾಕಿ ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುತ್ತಾನೆ. ಆತನು ಹಲ್ಲೆ ಮಾಡಿದರಿಂದ  ಈ ಬಗ್ಗೆ ಚಿಕಿತ್ಸೆ ಪಡೆಯಲು  ಕುಂದಾಪುರ  ಸರಕಾರಿ ಆಸ್ಪತ್ರೆಗೆ ಹೋಗಿ  ಅಲ್ಲಿ ಒಳ ರೋಗಿಯಾಗಿ ದಾಖಲು ಆಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 76/2021  ಕಲಂ: 332,353 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 

ಇತ್ತೀಚಿನ ನವೀಕರಣ​ : 26-07-2021 11:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080