ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ದಿನಾಂಕ 25/06/2022 ರಂದು ಬೆಳಿಗ್ಗೆ 08:15 ಗಂಟೆಗೆ ಪಿರ್ಯಾದಿದಾರರಾದ ಬೆಂಜಮಿನ್ ದಲ್ಮೇದ (49) ತಂದೆ ಪೌಲ್ ದಲ್ಮೇಡ ವಾಸ ಅರ್ಕಲ್ ಮನೆ, ಬೆಳ್ಮಣ್ ಬಸ್‌ಸ್ಟಾಂಡ್  ಬಳಿ, ಬೆಳ್ಮಣ್   ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಇವರು ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಬೆಳ್ಮಣ್ ಟೆಂಪೋ ಸ್ಟಾಂಡ್‌ನಲ್ಲಿ ನಿಂತುಕೊಂಡಿರುವಾಗ ಬೆಳ್ಮಣ್ ಕಡೆಯಿಂದ ಪಡುಬಿದ್ರೆ ಕಡೆಗೆ ರಾಜ್ಯ ಹೆದ್ದಾರಿಯಲ್ಲಿ KA-20 P-0828 ನೇ ನಂಬ್ರದ ಕಾರು ಚಾಲಕ ರಾಯನ್ ಪ್ರಶಾಂತ್ ಪಿಂಟೋ ಎಂಬಾತನು ತನ್ನ ಕಾರನ್ನು ಯಾವುದೇ ಸೂಚನೆಯನ್ನು ನೀಡದೇ ನಿರ್ಲಕ್ಷತನದಿಂದ ಬಲಗಡೆಗೆ ಚಲಾಯಿಸಿ ಪಡುಬಿದ್ರೆ ಕಡೆಯಿಂದ ಬೆಳ್ಮಣ್ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್‌ ಸೈಕಲ್‌ ನಂಬ್ರ KA-05 LC-6223 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ನಿಶಾಂತ್ ನು ವಾಹನ ಸಮೇತ ರಸ್ತೆಗೆ ಬಿದ್ದು, ಆತನ ತಲೆಗೆ ಪೆಟ್ಟಾಗಿ ರಕ್ತ ಗಾಯವಾಗಿದ್ದು, ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 89/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಪಡುಬಿದ್ರಿ: ಪಿರ್ಯಾದಿದಾರರಾಧ ಅಬ್ದುಲ್ ಖಾದರ್, (77) ತಂದೆ: ದಿ. ಸೂಫಿ ಬ್ಯಾರಿ, ವಾಸ: ಕೈರುನ್ನೀಸಾ ಮಂಜಿಲ್, ಮಜೂರು ಗ್ರಾಮ, ಕಾಪು ತಾಲೂಕು, ಉಡುಪಿ. ಇವರು ಮಂಗಳೂರಿನಲ್ಲಿ ಅಡ್ವೊಕೇಟ್‌ ಒಬ್ಬರ ಆಫೀಸ್‌‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಅವರ ಸಂಬಂಧಿಯೊಬ್ಬರಿಗೆ ಅಪಘಾತವಾಗಿ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರನ್ನು ನೋಡಲೆಂದು ದಿನಾಂಕ 25/06/2022 ರಂದು ತಮ್ಮ ಮಗಳ ಬಾಬ್ತು KA-20-EV-2497 ನೇ ನಂಬ್ರದ ಸ್ಕೂಟರಿನಲ್ಲಿ ಮನೆಯಿಂದ ಹೊರಟು ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಹೋಗುತ್ತಾ ಬೆಳಿಗ್ಗೆ ಸಮಯ 08:06 ಗಂಟೆಯ ವೇಳೆಗೆ ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ ಅದಮಾರು ಕ್ರಾಸ್ ಬಳಿ ಹೋಗುತ್ತಿರುವಾಗ ಅದೇ ರಸ್ತೆಯಲ್ಲಿ ಹಿಂದಿನಿಂದ KA-40-A-0783 ನೇ ನಂಬ್ರದ ಶಫಾತ್ ಹೆಸರಿನ ಬಸ್ಸು ಚಾಲಕ ತನ್ನ ಬಾಬ್ತು ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿನ ಬಲಬದಿಯ ಹ್ಯಾಂಡಲಿಗೆ ತಾಗಿಸಿ, ನಂತರ ಬಸ್ಸನ್ನು ಸ್ವಲ್ಪ ಸಮಯ ನಿಲ್ಲಿಸಿ ನಂತರ ಅಲ್ಲಿಂದ ಹೋಗಿರುತ್ತಾನೆ. ಸದ್ರಿ ಅಪಘಾತದ ಪರಿಣಾಮ, ಅಬ್ದುಲ್ ಖಾದರ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಅವರ ಬಲಕೈ ಭುಜಕ್ಕೆ ಹಾಗೂ ಎದೆಗೆ ಒಳನೋವು ಆಗಿರುತ್ತದೆ. ನಂತರ ಅವರು ಚಿಕಿತ್ಸೆಯ ಬಗ್ಗೆ ಮೂಲ್ಕಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 82/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಕುಂದಾಫುರ: ದಿನಾಂಕ 25/06/2022 ರಂದು ಸಂಜೆ ಸುಮಾರು 04:25  ಗಂಟೆಗೆ ಕುಂದಾಪುರ ತಾಲೂಕು, ಹಂಗಳೂರು ಗ್ರಾಮದ ಯೂನಿಟಿ ಹಾಲ್‌ಬಳಿ ಎನ್‌. ಹೆಚ್‌66 ರಸ್ತೆಯಲ್ಲಿ, ಆಪಾದಿತ ನಿತಿನ್‌ ಎಂಬವರು ತಲೆಗೆ ಹೆ,ಲ್ಮೆಟ್‌ ಧರಿಸದೇ KA-20-Q-2358ನೇ ಸ್ಕೂಟಿಯನ್ನು ಕುಂದಾಪುರ ಕಡೆಯಿಂದ ಕೊಟೇಶ್ವರ ಕಡೆಗೆ   ಅತೀವೇಗ ಹಾಗೂ  ನಿರ್ಲಕ್ಷ್ಯ ತನದಿಂದ  ಸವಾರಿ  ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಕೃಷ್ಣ ನಾಯ್ಕ ಎಂಬವರು ಚಾಲಕರಾಗಿರುವ ಮತ್ತು ಪಿರ್ಯಾದಿದಾರರಾದ ಹರ್ಷ ಪೂಜಾರಿ (29) ತಂದೆ ಹೆರಿಯ ಪೂಜಾರಿ ವಾಸ: ಹಟ್ಟಿಮನೆ, ಅಮಾಸೆಬೈಲು ಗ್ರಾಮ, ಕುಂದಾಪುರ ರವರು ನಿರ್ವಾಹಕರಾಗಿ ಕುಂದಾಪುರದಿಂದ  ಅಮಾಸೆಬೈಲು ಕಡೆಗೆ ರೂಟ್‌ ಪರವಾನಿಗೆಯಂತೆ ಹೋಗುತ್ತಿದ್ದ  KA20-AA-939ನೇ  ಬಸ್‌ನ್ನು  ಚಾಲಕ ಕೃಷ್ಣ  ನಾಯ್ಕ ರವರು ಪ್ರಯಾಣಿಕರಿಗೆ ಇಳಿಯಲು ಬಸ್‌‌ನ್ನು ನಿಲ್ಲಿಸಿದ ಸಮಯ ಆಪಾದಿತನು ಹಿಂದಿನಿಂದ ಡಿಕ್ಕಿ ಹೊಡೆದು, ಆಪಾದಿತ ನಿತಿನ್‌ ರವರ ಮೂಗಿಗೆ, ಮುಖ, ತಲೆಗೆ ರಕ್ತಗಾಯವಾಗಿ ಚಿಕಿತ್ಸೆಗೆ ಕೊಟೇಶ್ವರ ಸರ್ಜನ್‌ ಆಸ್ಪತ್ರೆಗೆ ಹೋಗಿರುವುದಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 77/2022  ಕಲಂ: 279, 337  IPC & Sec 129 R/W 177 IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.   
 • ಮಣಿಪಾಲ: ದಿನಾಂಕ 25/06/2022 ರಂದು ಸುಮಾರು 00:05 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಅರ್ಜುನ ಕುಮಾರ್ ಪೀರಪ್ಪ ಹರಿಜನ (26) ತಂದೆ: ಪಿರಪ್ಪ ವಾಸ: ಡೋರ್ ನಂ 432 ಹದ್ದಿನಸರ ಹೊಸಳ್ಳಿ ಗ್ರಾಮ ಮತ್ತು ಅಂಚೆ ಯಲ್ಲಾಪುರ ತಾಲೂಕು ಉತ್ತರ ಇವರು ತಮ್ಮ ಲಾರಿಯನ್ನು ಮಣಿಪಾಲದ ಸಿಂಡಿಕೇಟ್ ಸರ್ಕಲ್ ನ ಡಿಸಿ ಆಫೀಸ್ ರಸ್ತೆಯಲ್ಲಿರುವ ಪಿಜ್ಜಾ ಅಂಗಡಿಯ ಬಳಿ ನಿಲ್ಲಿಸಿ ಪಿಜ್ಜಾ ಅಂಗಡಿಗೆ ಬೇಕಾದ ಸಾಮಗ್ರಿಗಳನ್ನು ಅನ್ ಲೋಡ್ ಮಾಡುತ್ತಿರುವ ಸಮಯ ರಸ್ತೆಯ ಬದಿಯಲ್ಲಿರುವಾಗ ಸಿಂಡಿಕೇಟ್ ಸರ್ಕಲ್ ಕಡೆಯಿಂದ ಡಿಸಿ ಆಫೀಸ್ ಕಡೆಗೆ ಯಾವುದೋ ಒಂದು ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅರ್ಜುನ ಕುಮಾರ್ ಪೀರಪ್ಪ ಹರಿಜನ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಇವರು ರಸ್ತೆಗೆ ಬಿದ್ದಿದ್ದು ತಲೆಗೆ ಗಾಯವಾಗಿದ್ದು, ಎಡ ಭುಜದ ಬಳಿ ಮೂಳೆ ಮುರಿತದ ಗಾಯ ಉಂಟಾಗಿರುತ್ತದೆ, ಅಪಘಾತವಾದ ನಂತರ ಅಪಘಾತ ಪಡಿಸಿದ ಕಾರಿನ ಚಾಲಕ ಸ್ಥಳದಲ್ಲಿ ನಿಲ್ಲಸದೇ ಸ್ಥಳದಿಂದ ಕಾರು ಸಮೇತ ಪರಾರಿಯಾಗಿರುತ್ತಾನೆ ಹಾಗೂ ಅರ್ಜುನ ಕುಮಾರ್ ಪೀರಪ್ಪ ಹರಿಜನ ಇವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 93/2022 ಕಲಂ 279, 338 IPC ಮತ್ತು 134(a)(b) R/W 187 IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.    

ಮಟ್ಕಾ ಜುಗಾರಿ ಪ್ರಕರಣ

 • ಕುಂದಾಫುರ: ದಿನಾಂಕ 25/06/2022 ರಂದು 12:30 ಗಂಟೆಗೆ ಸದಾಶಿವ ಆರ್ ಗವರೋಜಿ ಪಿ.ಎಸ್.ಐ. ಕುಂದಾಪುರ ಪೊಲೀಸ್ ಠಾಣೆ ರವರು ಠಾಣೆಯಲ್ಲಿರುವಾಗ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಶಾಸ್ತ್ರೀ ವೃತ್ತದ ಬಳಿ ಫ್ಲೈ ಓವರ್ ಕೆಳಗಡೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ  ಠಾಣಾ 66ನೇ ಸಂತೋಷ್ ರವರು ನೀಡಿದ  ಖಚಿತ ಮಾಹಿತಿ ಮೇರೆಗೆ ಇವರು ಸಿಬ್ಬಂದಿಯವರೊಂದಿಗೆ  ಇಲಾಖಾ ವಾಹನದಲ್ಲಿ  12:45 ಗಂಟೆಗೆ ಸದ್ರಿ ಸ್ಥಳಕ್ಕೆ  ತಲುಪಿ ಮರೆಯಲ್ಲಿ ನಿಂತು ನೋಡಲಾಗಿ ವಡೇರಹೋಬಳಿ ಗ್ರಾಮದ ಶಾಸ್ತ್ರೀ ವೃತ್ತದ ಬಳಿ ಫ್ಲೈ ಓವರ್ ಕೆಳಗಡೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರನ್ನು ಸೇರಿಸಿಕೊಂಡಿದ್ದು, 00 ರಿಂದ 99 ರ ಒಳಗೆ ಯಾವುದೇ ನಂಬರ್‌ಬಂದರೆ 1/-ರೂ ಗೆ 70/-ರೂಪಾಯಿ ಕೊಡುವುದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸ್ವೀಕರಿಸಿಕೊಂಡು ಮಟ್ಕಾ ನಂಬ್ರ ಬರೆದು ಕೊಡುತ್ತಿದ್ದು, ಮಟ್ಕಾ ಜುಗಾರಿ ಆಟ ಆಡುತ್ತಿದ್ದುದನ್ನು  ಖಚಿತಪಡಿಸಿಕೊಂಡು, ಸ್ಥಳಕ್ಕೆ ಪಂಚಾಯತುದಾರರನ್ನು ಬರಮಾಡಿಕೊಂಡು 13:00 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಸಾರ್ವಜನಿಕರು ಓಡಿ ಹೋಗಿದ್ದು , ಮಟ್ಕಾ ಬರೆಯುತ್ತಿದ್ದ ವ್ಯಕ್ತಿಯನ್ನುಹಿಡಿದಾಗ ಆತನು ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ತನ್ನ ತಪ್ಪಿತವನ್ನು ಒಪ್ಪಿಕೊಂಡಿದ್ದು  ಆತನ  ವಿಳಾಸ  ಸುರೇಶ ದೇವಾಡಿಗ (48) ತಂದೆ: ದಿ. ನಾರಾಯಣ ದೇವಾಡಿಗ ವಾಸ: ಮದ್ದುಗುಡ್ಡೆ ಹೊಸಕೇರಿ ಕುಂದಾಪುರ ಕಸಬಾ ಗ್ರಾಮ  ಕುಂದಾಪುರ ಇತನನ್ನು ವಶಕ್ಕೆ ಪಡೆದು ಆತನಿಂದ  ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ  ನಗದು ರೂಪಾಯಿ 880/-, ಬಾಲ್ ಪೆನ್-1 ಮತ್ತು ಮಟ್ಕಾ ನಂಬ್ರ ಬರೆದ ಚೀಟಿ -1 ನ್ನು ಮುಂದಿನ ಕ್ರಮದ ಬಗ್ಗೆ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 63/2022 ಕಲಂ: 78 (i) (iii) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಮಣಿಪಾಲ: ದಿನಾಂಕ 24/06/2022 ರಂದು 16:00 ಗಂಟೆಗೆ  ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಅಪಾದಿತರು ತಕ್ಷೀರು ನಡೆಸುವ ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ, ಆಪಾದಿತ ಶರತ್ ಭಂಡಾರಿಯು ಪಿರ್ಯಾದಿದಾರರಾದ ಧನಂಜಯ (38) ತಂದೆ: ಮನೋಹರ ಪಿ ವಾಸ: ಮಾತಾನು ಗ್ರಹ 5-63 ಆ, ಡಾ ಅಂಬೇಡ್ಕರ್ ರಸ್ತೆ ಪುತ್ತೂರು ಪೋಸ್ಟ್ ಮತ್ತು ಗ್ರಾಮ ಸಂತೆಕಟ್ಟೆ ಉಡುಪಿ ಇವರಿಗೆ ಕೈ ಯಿಂದ ಹೊಡೆದು ಅವಾಚ್ಯವಾಗಿ ಬೈದು ಪ: ಜಾತಿಗೆ ಸೇರಿದ ಪಿರ್ಯಾದಿದಾರರಿಗೆ ಜಾತಿ ನಿಂದನೆ ಮಾಡಿ ಬೈದು ಬೆದರಿಕೆ ಹಾಕಿದ್ದಲ್ಲದೆ ಎಲ್ಲಾ ಆಪಾದಿತ 1) ಸಂದೀಪ್, 2) ಶರತ್ ಭಂಡಾರಿ, 3)ಇಶಾಂತ್, ದೊಡ್ಡಣಗುಡ್ಡೆ, 4) ನಿಶಾಂತ್ ಅಂಬಾಗಿಲು ಮತ್ತು ಇತರರು ಸೇರಿ ಧನಂಜಯ ರವರಿಗೆ  ಮತ್ತು ಅವರ ಸ್ವೇಹಿತ ಶೋಯಿಬ್ ಯಾಸಿನ್ ರವರಿಗೆ ಕೈಯಿಂದ ಹೊಡೆದು ಮುಂದಕ್ಕೆ  ನಮ್ಮ ವಿಷಯಕ್ಕೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ  ಒಡ್ಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 92/2022 ಕಲಂ: 143,147,323,506 R/W 149 IPC Sec: 3(1) ( r )( s ),3(2)(VA)  SC/ST Act ರಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 26-06-2022 10:16 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080