ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

 • ಕಾರ್ಕಳ : ಕಾರ್ಕಳ ತಾಲೂಕು ಈದು ಗ್ರಾಮದ ಹೊಸ್ಮಾರ್ ಎಂಬಲ್ಲಿ ಬಾಡಿಗೆ ಮನೆಯಾದ ಶಾಂತಾದುರ್ಗ ನಿಲಯದಲ್ಲಿ  ವಾಸ ಇರುವ ಪಿರ್ಯಾದಿದಾರರು ದಿನಾಂಕ: 23-06-2021  ರಂದು ಹೆಂಡತಿ ಮನೆಯಾದ ಕುಮಟಕ್ಕೆ ಸಂಸಾರ ಸಮೇತ ಹೋಗಿದ್ದು ದಿನಾಂಕ  25-06-2021 ರಂದು  ಬೆಳಿಗ್ಗೆ 10:00 ಗಂಟೆಗೆ ಮನೆಗೆ ಬಂದಾಗ ಮನೆಯ ಮುಂಬಾಗಿಲಿನ ಚಿಲಕವನ್ನು ಮುರಿದಿದ್ದು ಕಂಡು ಬಂದಿದ್ದು, ಯಾರೋ ಕಳ್ಳರು ಮನೆಯೊಳಗಿದ್ದ  ಗೊಡ್ರೇಜ್ ಕಪಾಟಿನಲ್ಲಿದ್ದ 40 ಗ್ರಾಂ ತೂಕದ ಕರಿಮಣಿ ಸರ-1, 20 ಗ್ರಾಂ ತೂಕದ 2 ಬಳೆಗಳು, 10 ಗ್ರಾಂ ತೂಕದ ಚಿನ್ನದ ಸರ -1, ಹಾಗೂ 5 ಗ್ರಾಂ  ತೂಕದ ಕಿವಿಯೋಲೆ ಒಂದು ಜೊತೆ ಚಿನ್ನಾಭರಣಗಳನ್ನು ಕಳವು ಮಾಡಿದ್ದು ಒಟ್ಟು ಸುಮಾರು 2,00,000/- ರೂಪಾಯಿ ಆಗಬಹುದು. ದಿನಾಂಕ 23/06/2021 ರಂದು 14:00 ಗಂಟೆಯಿಂದ ದಿನಾಂಕ  25/06/2021 ರ ಬೆಳಿಗ್ಗೆ 10:00 ಗಂಟೆ ಮದ್ಯಾವಧಿಯಲ್ಲಿ ಕಳವು  ಮಾಡಿಕೊಂಡು ಹೋಗಿರುವುದಾಗಿ ಗಣಪತಿ ಶಂಭು ನಾಯ್ಕ ಪ್ರಾಯ: 50 ವರ್ಷ ತಂದೆ: ಶಂಭು ನಾಗಪ್ಪ ನಾಯ್ಕ, ವಾಸ: ಶಾಂತಾದುರ್ಗ ನಿಲಯ ಹೊಸ್ಮಾರು ನೂರಾಳ್ ಬೆಟ್ಟು ರಸ್ತೆ  ಈದು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಕ್ರ 77/2021  ಕಲಂ: 454,457,380 ಭಾದಸಂರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಪುರ : ಪಿರ್ಯಾದಿ ಪಿಯುಷ್ ಬರೆಟ್ಟೋ  37 ವರ್ಷ, ತಂದೆ: ಫಿಲಿಫ್ ಬರೆಟ್ಟೋ, ವಾಸ: ಕಳಂಜೆ ಆನಗಳ್ಳಿ ಗ್ರಾಮ ಕುಂದಾಪುರ ಇವರ ಚಿಕ್ಕಪ್ಪನ ಹೆಂಡತಿಯಾದ ಶ್ರೀಮತಿ ಎವ್ಲಿನ್ ಬರೆಟ್ಟೋರವರ ಗಂಡ ಸುಮಾರು 1 ವರ್ಷಗಳ ಹಿಂದೆ ಖಾಯಿಲೆಯಿಂದ ಮೃತಪಟ್ಟಿದ್ದು ಅವರಿಗೆ ಮಕ್ಕಳಿಲ್ಲದೇ ಇದ್ದು ಇದರಿಂದ ಶ್ರೀಮತಿ ಎವ್ಲಿನ್‌ರವರು ಖಿನ್ನತೆಗೊಳಗಾಗಿ ಊಟ ತಿಂಡಿ ಸರಿಯಾಗಿ ಸೇವಿಸದೇ ಹಾಗೂ ಯಾರೊಂದಿಗೂ ಮಾತನಾಡದೇ ಮೌನಿಯಾಗಿದ್ದು ದಿನಾಂಕ: 24/06/2021 ರಂದು ರಾತ್ರಿ ಸುಮಾರು 11 ಗಂಟೆಗೆ ಅವರ ಮನೆಯಂಗಳದಲ್ಲಿ ತಿರುಗಾಡಿಕೊಂಡಿದ್ದು ದಿನಾಂಕ 25-06-2021 ರಂದು ಬೆಳಿಗ್ಗೆ ಫಿರ್ಯಾದಿದಾರರ ಪಕ್ಕದವರು ಕೋಣಿ ಗ್ರಾಮದ ಚಟ್ಲಿಕೆರೆಯಲ್ಲಿ ಒಂದು ಹೆಂಗಸಿನ ಮೃತದೇಹ ಇರುವುದಾಗಿ ತಿಳಿಸಿದ ಮೇರೆಗೆ ಫಿರ್ಯಾದಿದಾರರ ಚಿಕ್ಕಮ್ಮ ಶ್ರೀಮತಿ ಎವ್ಲಿನ್‌ರವರು  ತಮ್ಮ ಮನೆಯಲ್ಲಿಲ್ಲದಿರುವುದನ್ನು ಕಂಡು ಚಟ್ಲಿಕೆರೆಗೆ ಹೋಗಿ ನೋಡಲಾಗಿ ಸದ್ರಿ ಮೃತದೇಹವು ಫಿರ್ಯಾದಿದಾರರ ಚಿಕ್ಕಮ್ಮನಾದ ಶ್ರೀಮತಿ ಎವ್ಲಿನ್‌ರವರದ್ದಾಗಿದ್ದು. ಮೃತರು ದಿನಾಂಕ: 24/06/2021 ರಂದು 23:00 ಗಂಟೆಯಿಂದ ದಿನಾಂಕ 25-06-2021 ರಂದು ಬೆಳಿಗ್ಗೆ 07:00 ಗಂಟೆಯ ನಡುವೆ ಕೋಣಿ ಗ್ರಾಮದ ಚಟ್ಲೆ ಕೆರೆಯ ಮಧ್ಯೆ ಇರುವ ಅಂಚಿನ ಮೇಲೆ ನಡೆದುಕೊಂಡು ಹೋಗುವಾಗ ಆಯತಪ್ಪಿ ಬಿದ್ದು ನೀರಿನಲ್ಲಿ ಮುಳುಗಿ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ  ಕುಂದಾಪುರ ಪೊಲೀಸ್‌ ಠಾಣೆ  ಯುಡಿಆರ್ ಕ್ರಮಾಂಕ 23/2021 ಕಲಂ: 174 CrPCಯಂತೆ ಪ್ರಕರಣ ದಾಖಲಿಸಿಕೊಳ್ಲಲಾಗಿದೆ.
 • ಉಡುಪಿ : ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆಯ ಜಿಎಸ್ಜೆ ರಾಯಲ್ ಎ  ಅಪಾರ್ಟ್ಮೆಂಟಿನ ತಳಂತಸ್ತಿನ ಸೆಕ್ಯೂರಿಟಿ ರೂಮಿನಲ್ಲಿ ಒಬ್ಬರೇ ವಾಸವಿದ್ದ ಕೇರಳ  ಮೂಲದ ತಂಗನ್(60ವರ್ಷ)ರವರು ಕಳೆದ ಐದಾರು ವರ್ಷಗಳಿಂದ ಫಿರ್ಯಾದು ಸಂತೋಷ  ಕೋಟ್ಯಾನ್ (42), ತಂದೆ:ವಸಂತ ಪೂಜಾರಿ, ವಾಸ:ಮನೆನಂಬ್ರ 181,'ಕಿನ್ನೊಟ್ಟು  ಹೌಸ್', ಎರ್ಮಾಳು,  ತೆಂಕ  ಗ್ರಾಮ,  ಕಾಪು ತಾಲೂಕು, ಉಡುಪಿ  ಜಿಲ್ಲೆ ಇವರು ಮ್ಯಾನೇಜರ್  ಆಗಿರುವ ಜಿಎಸ್ಜೆ ಡೆವಲಪರ್ಸ್ನಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದವರು ಸಕ್ಕರೆ ಖಾಯಿಲೆ  ಮತ್ತು ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದು, ತನಗಿದ್ದ ಆರೋಗ್ಯ ಸಮಸ್ಯೆಯಿಂದಲೋ  ಅಥವಾ  ಇನ್ನಾವುದೋ  ಕಾರಣಕ್ಕೆ  ಜೀವನದಲ್ಲಿ  ಜಿಗುಪ್ಸೆ ಹೊಂದಿ ದಿನಾಂಕ: 25/06/2021ರಂದು  ಮಧ್ಯಾಹ್ನ  1:00  ಗಂಟೆಯಿಂದ 4:00 ಗಂಟೆಯ ಮಧ್ಯಾವಧಿಯಲ್ಲಿ  ತಾನು  ವಾಸವಿದ್ದ  ರೂಮಿನ  ಸೀಲಿಂಗ್  ಹುಕ್ಕಿಗೆ ನೈಲಾನ್  ಹಗ್ಗವನ್ನು  ಕಟ್ಟಿ  ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆ ಯುಡಿ ಆರ್  27/2021 ಕಲಂ 174 CrPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಹಿರಿಯಡ್ಕ : ಪಿರ್ಯಾದಿ ವಿನೋದ (28), ಗಂಡ: ಸುದೀರ ಸೇರ್ವೇಗಾರ, ವಾಸ: ಕುಕ್ಕುಂಡಿ ಕೊರಗ ಕಾಲೋನಿ ಪೆರ್ಡೂರು ಗ್ರಾಮ, ಉಡುಪಿ ತಾಲೂಕು ಇವರ ಗಂಡನಾದ  ಸುದೀರ (31)ವಿಪರೀತ ಕುಡಿತದ ಚಟ ಹೊಂದಿದ್ದು ಮದುವೆಯಾದ ಬಳಿಕ ಹೆಚ್ಚಾಗಿ ತನ್ನ ಹೆಂಡತಿಯ ಮನೆಯಾದ ಪೆರ್ಡೂರು ಗ್ರಾಮದ ಅಲಂಗಾರು ಕುಕ್ಕುಂಡಿಯಲ್ಲಿ ಇರುತ್ತಿದ್ದು ಅವರಿಗೆ ಕುಡಿತದ ಚಟ ಬಿಡಿಸುವರೇ  ಉಡುಪಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದು ಆದಾಗ್ಯೂ ಕುಡಿತದ ಚಟ ಬಿಟ್ಟಿರುವುದಿಲ್ಲ. ದುಡಿದ ಹಣವನ್ನು ಕುಡಿತಕ್ಕೆ ಉಪಯೋಗಿಸುತ್ತಿದ್ದು ವಿಪರೀತವಾಗಿ ಕುಡಿದು ಕೆಲವು ಸಲ ಎಲ್ಲೆಂದರಲ್ಲಿ ಮಲಗುತ್ತಿದ್ದನು. ದಿನಾಂಕ  25/06/2021 ರಂದು ಸಂಜೆ 4:30 ಗಂಟೆಗೆ ಮನೆಯಲ್ಲಿ  ಊಟ ಮಾಡಿ ಹೋದವನು ತುಂಬ ಹೊತ್ತಾದರೂ ಬಾರದೇ ಇದ್ದುದನ್ನು ಕಂಡು ಹುಡುಕಾಡಿದಾಗ ಸಂಜೆ 7:00 ಗಂಟೆಗೆ ಪಿರ್ಯಾದಿದಾರರ ತಂದೆಯವರಿಗೆ ಸಂಬಂದಿಸಿದ ಮನೆ ಹಿಂದಿನ ಪಟ್ಟಾ ಜಾಗದ ಕಾಡಿನಲ್ಲಿ  ಇರುವ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗ ಕಟ್ಟಿ  ಕುತ್ತಿಗೆಗೆ  ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರ ಗಂಡ ವಿಪರೀತ ಕುಡಿತದ ಚಟ ಹೊಂದಿದ್ದು ಇದೇ ಕಾರಣದಿಂದ ಖಿನ್ನತೆಗೆ ಒಳಗಾಗಿದ್ದು ದಿನಾಂಕ 25/06/2021 ರಂದು ಸಂಜೆ 4:30 ಗಂಟೆಯಿಂದ ಸಂಜೆ 7:00 ಗಂಟೆಯ ಮದ್ಯಾವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ  ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2021 ಕಲಂ: 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಕಾರ್ಕಳ: ಪಿರ್ಯಾದು ಸಂತೋಷ ಲೊಲ್ಲಯ್ಯ ಮೇಸ್ತ(34), ತಂದೆ: ಲೊಲ್ಲಯ್ಯ ಮೇಸ್ತ, ವಾಸ: ಕೆಳಗಿನ ಪಾಳ್ಯ, ಹೊನ್ನಾವರ, ಹೊನ್ನಾವರ ತಾಲೂಕು, ಉತ್ತರ ಕನ್ನಡ ಜಿಲ್ಲೆ ಇವರ ಅಕ್ಕ ಕೆ. ಪ್ರೇಮಾ ಕಾಮತ್, ಈಕೆಯನ್ನು ಸುಮಾರು 10 ವರ್ಷಗಳ ಹಿಂದೆ ಕಾರ್ಕಳ ತಾಲೂಕು, ಕಾರ್ಕಳ ಕಸಬ ಗ್ರಾಮದ ಸಾಲ್ಮರ, ಮಾಹಾಲಸ ಕಾಂಪೌಂಡ್ ನಿವಾಸಿ ರಾಜೇಶ್ ಕಾಮತ್ ಎಂಬವರ ಜೊತೆ ಮದುವೆ ಮಾಡಿಕೊಟ್ಟಿದ್ದು, ಕೆ. ಪ್ರೇಮಾ ಕಾಮತ್, ಪ್ರಾಯ 40 ವರ್ಷ ಇವರಿಗೆ ದಿನಾಂಕ 25/06/2021 ರಂದು ಸಂಜೆ ಸುಮಾರು 4:00 ಗಂಟೆಗೆ ಮನೆಯಲ್ಲಿದ್ದ ಸಮಯ ತೀವೃ ಎದೆ ನೋವು ಕಾಣಿಸಿಕೊಂಡು ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳದ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಕೆ. ಪ್ರೇಮಾ ಕಾಮತ್ ರವರನ್ನು ಪರೀಕ್ಷಿಸಿ ಅವರು ಮೃತಪಟ್ಟ ವಿಚಾರ ತಿಳಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಯುಡಿಆರ್‌ ನಂ 19/2021 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 26-06-2021 10:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080