ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕಾರ್ಕಳ: ದಿನಾಂಕ: 26/06/2021 ರಂದು ಬೆಳಿಗ್ಗೆ 5-30 ಗಂಟೆ ವೇಳೆಗೆ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಬೆಳ್ಮಣ್ ಉಜಾಲ ಬಾರ್ ಬಳಿಯಲ್ಲಿ ಕಾರ್ಕಳದಿಂದ ಮಂಗಳೂರು ಕಡೆ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಆರೋಪಿ ಸಂದೀಪ KA-20-EC-6620 ನೇ ದ್ವಿಚಕ್ರ ವಾಹನವನ್ನು ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುವಾಗ ಸ್ಕೀಡ್ ಆಗಿ ಬಿದ್ದು ವಾಹನ ಸಮೇತ ರಸ್ತೆಗೆ ಬಿದ್ದ ಪರಿಣಾಮ ಮೋಟಾರ್ ಸೈಕಲ್ ಸವಾರನ ತಲೆಗೆ ತೀವೃ ರೀತಿಯ ರಕ್ತಗಾಯವಾಗಿದ್ದಲ್ಲದೆ 2 ಕಾಲುಗಳಿಗೆ, ಮುಖಕ್ಕೆ ಕೂಡಾ ರಕ್ತಗಾಯವಾಗಿದ್ದವರನ್ನು ಪಿರ್ಯಾದಿದಾರರಾದ ಸುರೇಶ ಮೂಲ್ಯ (48), ತಂದೆ: ಪರಮೇಶ್ವರ , ವಾಸ: ಕುಂಟೋಟ್ಟು ಮನೆ, ವನದುರ್ಗ ದೇವಸ್ಥಾನದ ರಸ್ತೆ ಬೆಳ್ಮಣ್ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 78/2021 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಸತೀಶ್ (36),ತಂದೆ: ಬಸವ ಮರಕಾಲ ವಾಸ: ಕೊಮೆ ತೆಕ್ಕಟ್ಟೆ ಗ್ರಾಮ ನಿಲಯ , ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ:24/06/2021 ರಂದು ಮಧ್ಯಾಹ್ನ 1:00 ಘಂಟೆಗೆ ತೆಕ್ಕಟ್ಟೆ ಜಂಕ್ಷನ್ ನಲ್ಲಿ ನಿಂತುಕೊಂಡಿದ್ದಾಗ KA20EE0696 TVS ಮೋಟಾರ್ ಸೈಕಲ್ ಸವಾರ ಕೋಟ ಕಡೆಯಿಂದ ಬಂದು ಡಿವೈಡರ್ ಬಳಿ ಇಂಡಿಕೇಟರ್ ಹಾಕಿಕೊಂಡು ಬಲಕ್ಕೆ ಹೋಗಲು ನಿಂತುಕೊಂಡಿರುವಾಗ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಒಬ್ಬ ಬುಲೆಟ್ ಮೋಟಾರ್ ಸೈಕಲ್ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಟಿವಿಎಸ್ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ದ್ವಿಚಕ್ರ ವಾಹನಗಳ ಸವಾರರು ರಸ್ತೆಗೆ ಬಿದ್ದಿರುತ್ತಾರೆ. ಕೂಡಲೇ ಪಿರ್ಯಾದದಾರರು ಹಾಗೂ ಅಲ್ಲಿ ಸೇರಿದ ಜನ ಅವರುಗಳನ್ನು ಉಪಚರಿಸಿ ಹತ್ತಿರದ ಕ್ಲಿನಿಕ್ ಗೆ ಕರೆದುಕೊಂಡು ಹೋಗಿ ನಂತರ ರತ್ನಾಕರ ಆಚಾರ್ಯ ರವರನ್ನು ಮಣಿಪಾಲ ಕೆಎಂಸಿಗೆ ಕರೆದುಕೊಂಡು ಹೋಗಿ ಅಲ್ಲಿ ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. KA 20 EE 0696 TVS MOTOR CYCLE ಸವಾರ ರತ್ನಾಕರ ಆಚಾರ್ಯ ಆಗಿದ್ದು ಅವರಿಗೆ ಹೊಟ್ಟೆಗೆ ತೀವ್ರ ಗಾಯವಾಗಿದ್ದು , ಕೈ, ಕಾಲಿಗೆ ತರಚಿದ ಗಾಯವಾಗಿರುತ್ತದೆ. ಬುಲೆಟ್ ಮೋಟಾರ್ ಸೈಕಲ್ ನಂಬ್ರ: KA 31 EC 9146 ಅದರ ಸವಾರ ಶ್ರೀಧರ ಎಂಬುವವರಾಗಿದ್ದು ಕೈಗೆ ತರಚಿದ ಗಾಯವಾಗಿರುತ್ತದೆ. ಈ ಅಪಘಾತದ ಬಗ್ಗೆ ಪ್ರಕರಣ ದಾಖಲಾಗಿಲ್ಲ ಎಂಬ ಬಗ್ಗೆ ತಿಳಿದಿದ್ದುದರಿಂದ ದೂರು ನೀಡಲು ತಡವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 124/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಾಂಜಾ ಸೇವನೆ ಪ್ರಕರಣ 

  • ಉಡುಪಿ: ದಿನಾಂಕ 25/06/2021 ರಂದು ಮಂಜುನಾಥ, ಪೊಲೀಸ್ ನೀರಿಕ್ಷಕರು , ಸೆನ್ ಅಪರಾಧ ಪೊಲೀಸ್ ಠಾಣೆ,ಉಡುಪಿ ಇವರು ರೌಂಡ್ಸ್ ನಲ್ಲಿರುವಾಗ ಉಡುಪಿ ತಾಲೂಕು, ಪುತ್ತೂರು ಗ್ರಾಮದ ನಿಟ್ಟೂರು ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ರಿತಿಕ್ ಕುಮಾರ್ ಮೌರ್ಯ, ಪ್ರಾಯ 18 ವರ್ಷ, ತಂದೆ: ವಿಜಯ ಕುಮಾರ್ ಮೌರ್ಯ, ವಾಸ: ಕಾಶಿ, ಉತ್ತರ ಪ್ರದೇಶ ಎಂಬಾತನನ್ನು ವಶಕ್ಕೆ ಪಡೆದು, ಠಾಣೆಗೆ ಕರೆತಂದು ಮೆಡಿಕಲ್ ತಪಾಸಣೆಗೊಳಪಡಿಸಿದ್ದು ದಿನಾಂಕ: 26/06/2021 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿ ಬಂದಿದ್ದು, ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 35/2021 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 25/06/2021 ರಂದು ನಾರಾಯಣ, ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ ಇವರಿಗೆ ದೊರೆತ ಮಾಹಿತಿಯಂತೆ ಉಡುಪಿ ತಾಲೂಕು, ಮೂಡನಿಡಂಬೂರು ಗ್ರಾಮದ ಸಿಟಿ ಬಸ್ ನಿಲ್ದಾಣದ ಬಳಿ ಹೋದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಗಾಂಜಾ ಸೇವನೆ ಸೇವಿಸಿರುವಂತೆ ಕಂಡು ಬಂದ ಜಗದೀಶ್ ಪೂಜಾರಿ, ಪ್ರಾಯ 45 ವರ್ಷ, ತಂದೆ: ಶಂಭು ಪೂಜಾರಿ, ವಾಸ: ಶ್ರೀ ಸಾಗರ, ಹನೆಹಳ್ಳಿ, ಮೂಡುತೋಟ, ಬಾರ್ಕೂರು, ಬ್ರಹ್ಮಾವರ ತಾಲೂಕು ಉಡುಪಿ ಎಂಬಾತನನ್ನು ವಶಕ್ಕೆ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿದ್ದು, ದಿನಾಂಕ: 26/06/2021 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿ ಬಂದಿದ್ದು, ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2021 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಬೈಂದೂರು: ದಿನಾಂಕ 25/06/2021 ರಂದು ಸಂತೋಷ್ ಎ ಕಾಯ್ಕಿಣಿ ,ವೃತ್ತ ನಿರೀಕ್ಷಕರು, ಬೈಂದೂರು ವೃತ್ತ, ಬೈಂದೂರು ಇವರು ರಾಹೆ 66 ರಲ್ಲಿ ಬರುತ್ತಾ ನಾವುಂದ ಮಸ್ಕಿ ಎಂಬಲ್ಲಿ ಹಳೆಯ ಗ್ರಾಮ ಪಂಚಾಯತ್ ಆಫೀಸು ಕ್ರಾಸ್ ಬಳಿ ತಲುಪುವಾಗ ನಾವುಂದ ಮಸ್ಕಿ ಗೋಪಾಲಕೃಷ್ಣ ದೇವಸ್ಥಾನದ ಬಳಿ ಉಮ್ರುಲ್ ಫಾರುಕ್ ರವರ ಮನೆಯ ಕಂಪೌಂಡ್ ನಿಂದ ಹೊಂಡಾ ಡಿಯೋ ಸ್ಕೂಟರ್ ನಂಬ್ರ KA20ET6574 ಹಾಗೂ ಸುಜುಕಿ ಆಕ್ಸೆಸ್ ಸ್ಕೂಟರ್ ನಂಬ್ರ KA20EV8072 ಗಳಲ್ಲಿ ಇಬ್ಬರು ವ್ಯಕ್ತಿಗಳು ಹೆಲ್ಮೇಟ್ ಹಾಗೂ ಮಾಸ್ಕ ಧರಿಸದೇ, ಯಾವುದೇ ಸಿಗ್ನಲ್ ನೀಡದೇ ಏಕಾಏಕಿ ಅತೀವೇಗದಿಂದ ರಾಹೆ 66 ನೇದರಲ್ಲಿ ಏಕಮುಖ ಸಂಚಾರದ ಪಶ್ಚಿಮ ಬದಿಯ ರಸ್ತೆಗೆ ವಿರುದ್ಧ ದಿಕ್ಕಿನಿಂದ ಸುಮಾರು 5 ಮೀಟರ್ ನಷ್ಟು ಅತೀವೇಗವಾಗಿ ಬಂದು, ಪೊಲೀಸ್ ಜೀಪನ್ನು ನೋಡಿ ಯಾವುದೇ ಸೂಚನೆಯನ್ನು ನೀಡದೇ, ಅಜಾಗರೂಕತೆಯಿಂದ ಒಮ್ಮೆಲೆ ಸ್ಕೂಟರ್ ಗಳನ್ನು ತಿರುಗಿಸಿ ಅತೀವೇಗದಿಂದ ವಾಪಾಸು ಕಂಪೌಂಡ್ ಒಳಗೆ ಚಲಾಯಿಸಿ ಕಂಪೌಂಡ್ ಒಳಗೆ ಇರುವ ಮನೆಯ ಬಳಿ ಸ್ಕೂಟರ್ ನ್ನು ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿ ಅಲ್ಲಿಂದ ಓಡಿ ಹೋಗಿದ್ದು, ಆರೋಪಿತರು ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 22/06/2021 ರಿಂದ ದಿನಾಂಕ 05/07/2021 ರವೆರೆಗೆ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಸಮಯದಲ್ಲಿ ಅನಗತ್ಯ ಜನರ ಹಾಗೂ ವಾಹನಗಳ ಓಡಾಟವನ್ನು ನಿಷೇಧಿಸಿದ್ದು, ಆದರೂ ಸಕಾರಣವಿಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸಿಕೊಂಡು ನಿರ್ಲಕ್ಷ್ಯತನದಿಂದ ಸರಕಾರ ಹಾಗೂ ಜಿಲ್ಲಾಡಳಿತ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಹೆಲ್ಮೇಟ್ ಧರಿಸದೇ ಮಾಸ್ಕ್ ಹಾಕದೇ ಜೀವಕ್ಕೆ ಅಪಾಯಕಾರಿಯಾದ ರೋಗವು ಹರಡುವಂತೆ ವರ್ತಿಸಿ ನಿರ್ಲಕ್ಷ್ಯತನ ತೋರಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 106/2021 ಕಲಂ: 279. 269 ಐಪಿಸಿ ಮತ್ತು 128, 230(ಎ) ಐಎಮ್ ವಿ ರೂಲ್ ಹಾಗೂ 177 ಐಎಮ್ ವಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 26-06-2021 06:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080