ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ದಿನಾಂಕ 24/05/2023 ರಂದು 21:10 ಗಂಟೆಗೆ ಪಿರ್ಯಾದಿದಾರರಾದ ಮಹಾಲಕ್ಷ್ಮೀ  (39), ಗಂಡ:ಮಹಾದೇವ ಎನ್ ಎಮ್, ವಾಸ: ಕೆಂಪಿನಕೇರಿ ಮನೆ , ಬಾಡಾ , ಬೈಂದೂರು ಗ್ರಾಮ ಮತ್ತು ತಾಲೂಕು ಇವರು ಮನೆಯ ಅಂಗಳದಲ್ಲಿ ನಿಂತುಕೊಂಡಿರುವಾಗ ಅವರ ಮನೆಯ ಎದುರಿನ ಬೈಂದೂರಿನಿಂದ ಗಂಗಾನಾಡಿಗೆ  ಹೋಗುವ ಡಾಮಾರು ರಸ್ತೆಯಲ್ಲಿ ಪರಿಚಯದ  ಸುಬ್ರಹ್ಮಣ್ಯ ರವರು ತೊಂಡೆಮಕ್ಕಿ ಕಡೆಯಿಂದ ಬೈಂದೂರು ಕಡೆಗೆ ಅವರ ಹೆಂಡತಿ ನಾಗರತ್ನ ರವರನ್ನು ಕುಳ್ಳಿರಿಸಿಕೊಂಡು  ಸೈಕಲ್ ನ್ನು  ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ  ಬೈಂದೂರು ಕಡೆಯಿಂದ ತೊಂಡೆಮಕ್ಕಿ ಕಡೆಗೆ KA-20-AB-7464 ನೇ ಆಟೋರಿಕ್ಷಾ  ಚಾಲಕ ಪ್ರಶಾಂತ್ ನು ಆತನ ಆಟೋ ರಿಕ್ಷಾವನ್ನು ಅತೀ ವೇಗ ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ರಸ್ತೆಯ ತೀರಾ ಬಲಕಡೆಗೆ  ಬಂದು  ಸುಬ್ರಹ್ಮಣ್ಯರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ   ಸೈಕಲ್ ಗೆ ಡಿಕ್ಕಿ  ಹೊಡೆದ ಪರಿಣಾಮ ಸೈಕಲ್ ಸವಾರ ಸುಬ್ರಹ್ಮಣ್ಯ ಹಾಗೂ ಸಹ ಸವಾರಳಾದ ನಾಗರತ್ನ ರವರು  ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು  ಫಿರ್ಯಾದಿದಾರರು ಸ್ಥಳಕ್ಕೆ  ಹೋಗಿ  ಎತ್ತಿ ಉಪಚರಿಸಿದ್ದು ಅಪಘಾತದಿಂದ ಸುಬ್ರಹ್ಮಣ್ಯರವರಿಗೆ ತುಟಿಗೆ, ದವಡೆ ಭಾಗಕ್ಕೆ, & ತಲೆಗೆ ರಕ್ತಗಾಯವಾಗಿದ್ದು,  ನಾಗರತ್ನ ರವರಿಗೆ  ಮೈ ಕೈಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ. ಗಾಯಗೊಂಡವರನ್ನು ಪಿರ್ಯಾದಿದಾರರು ಕಾರಿನಲ್ಲಿ ಚಿಕಿತ್ಸೆ ಬಗ್ಗೆ  ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದು ಕೊಂಡು  ಬಂದಲ್ಲಿ  ವೈದ್ಯರು ನಾಗರತ್ನ  ಸುಬ್ರಹ್ಮಣ್ಯ ರವರಿಗೆ ಪ್ರಥಮ ಚಿಕಿತ್ಸೆ ನೀಡಿ ಸುಬ್ರಹ್ಮಣ್ಯ ರವರನ್ನು ಹೆಚ್ಚಿನ ಚಿಕಿತ್ಸೆ  ಬಗ್ಗೆ  ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ  108 ಅಂಬುಲೆನ್ಸ್  ನಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು  ಹೆಚ್ಚಿನ ಚಿಕಿತ್ಸೆ  ಮಂಗಳೂರಿನ  ವೆನ್ಲಾಕ್  ಆಸ್ಪತ್ರೆಗೆ ಕಳುಹಿಸಿದ್ದು ಸುಬ್ರಹ್ಮಣ್ಯ ರವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ  ಒಳರೋಗಿಯಾಗಿ  ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 85/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 25/05/2023 16:00 ಗಂಟೆಗೆ NL-O1-AF-3305 ನೇ ಟ್ರೈಲರ್ ಲಾರಿ ಚಾಲಕ ವಿನೋದ್ ಯಾದವ್  ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು  ಬ್ರಹ್ಮಾವರ ತಾಲೂಕು ಚಿತ್ರಪಾಡಿ    ಗ್ರಾಮದ ಸಾಲಿಗ್ರಾಮ ಜಂಕ್ಷನ್ ಬಳಿ ಹೆದ್ದಾರಿ ಮಧ್ಯದಲ್ಲಿ ನವಯುಗ ಕಂಪೆನಿಯವರು ಅಳವಡಿಸಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬವು ಸಂಪೂರ್ಣ ಜಖಂಗೊಂಡಿದ್ದು ಅದರ  ಮೊತ್ತ ರೂಪಾಯಿ 2,04,622/- ರಷ್ಟು ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 101/2023  ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 25/05/2023 ರಂದು ಸಂಜೆ 4:15  ಗಂಟೆಗೆ ಕುಂದಾಪುರ  ತಾಲೂಕಿನ ಕಾವ್ರಾಡಿ  ಗ್ರಾಮದ ದೂಪದಕಟ್ಟೆ ಜಂಕ್ಷನ್‌ ಬಳಿ,  ಆಪಾದಿತ ಅಬ್ದುಲ್‌‌ಹನೀಜ್‌ KA-20-P-7526ನೇ  RITZ  ಕಾರನ್ನು ಪಡು  ವಾಲ್ತೂರು ಕಡೆಯಿಂದ ದೂಪದಕಟ್ಟೆ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷತನದಿಂದ  ಚಾಲನೆ ಮಾಡಿಕೊಂಡು ಬಂದು ಒಮ್ಮೇಲೆ ನಿಧಾನಿಸಿ ಯಾವುದೇ ಸೂಚನೆ ನೀಡದೇ ರಸ್ತೆಯ ಬಲಬದಿಗೆ ತಿರುಗಿಸಿ,  ಕಾರಿನ ಹಿಂಬದಿಯಲ್ಲಿ ಪಿರ್ಯಾದಿದಾರರಾದ ನಾಗರಾಜ ರವರು  ಸವಾರಿ ಮಾಡಿಕೊಂಡು ಬರುತ್ತಿದ್ದ KA-20-Q-2642ನೇ ಹೀರೋ ಹೋಂಡ ಬೈಕಿಗೆ ಅಪಘಾತಪಡಿಸಿದ ಪರಿಣಾಮ ನಾಗರಾಜ ರವರ ಎಡಕಾಲಿಗೆ ಮೂಳೆ ಮುರಿತವಾದ ಗಾಯವಾಗಿ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 67/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ  ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ನಾರಾಯಣ ಮೇಸ್ತ  (43), ತಂದೆ: ದಿ. ಪುಂಡಲೀಕ ಮೇಸ್ತ ವಾಸ: ಪದ್ಮಾವತಿ ನಿಲಯ, ಮದ್ದುಗುಡ್ಡೆ, ಕಸಬಾ ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 25/05/2023 ರಂದು ಬೆಳಿಗ್ಗೆ ಕೆಲಸದ ನಿಮಿತ್ತ ಅಮಾಸೆಬೈಲಿಗೆ ಹೋಗಿದ್ದು,  ಅಣ್ಣ ಸದಾನಂದ ಮೇಸ್ತ (46) ಇವರು ಮನೆಯಲ್ಲೆ ಇರುತ್ತಾರೆ. ಪಿರ್ಯಾದಿದಾರರು ಸಂಜೆ 05:30 ಗಂಟೆಗೆ ಕೆಲಸ ಮುಗಿಸಿ ವಾಪಸ್ಸು ಮನೆಗೆ ಬಂದಾಗ ಪಿರ್ಯಾದಿದಾರರ ಅಣ್ಣ ಸದಾನಂದ ರವರು ಮಧ್ಯಾಹ್ನದಿಂದ  ಸ್ವಲ್ಪ ಜ್ವರ ದಿಂದ ಮಲಗಿದ್ದು, ಇನ್ನು ಕೂಡ ಎದ್ದಿರುವುದಿಲ್ಲ ಎಂದು ಪಿರ್ಯಾಧಿದಾರರ ಅಕ್ಕ ತಿಳಿಸಿದ್ದು, ನಂತರ ಪಿರ್ಯಾದಿದಾರರು ಸದಾನಂದ ನೋಡಲಾಗಿ ಮೈ ವಿಪರೀತ ಬಿಸಿಯಾಗಿ ಅಸ್ವಸ್ಥಗೊಂಡಿದ್ದವರನ್ನು ವಾಹನದಲ್ಲಿ 06:20 ಗಂಟೆಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಅಲ್ಲಿ ಪರೀಕ್ಷಿಸಿದ ವೈಧ್ಯರು ಪಿರ್ಯಾದಿದಾರರ ಅಣ್ಣ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ ಅಣ್ಣ ಸದಾನಂದ ಮೇಸ್ತ ಇವರು ಹೃದಯಾಘಾತ ಅಥವಾ ಯಾವುದೋ ಆರೋಗ್ಯ ಸಮಸ್ಯೆಯಿಂದ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 27/2023 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಪಿರ್ಯಾದಿದಾರರಾದ ಭಾಸ್ಕರ ಎಸ್.ಎಮ್ (49), ತಂದೆ: ಸಂಜೀವ ನಾಯ್ಕ, ವಾಸ: ಮಾವಿನಗುಳಿ, ಕರ್ಕುಂಜೆ ಗ್ರಾಮ ಕುಂದಾಪುರ  ತಾಲೂಕು ಇವರ  ಚಿಕ್ಕಮ್ಮನ ಮಗ  ಕೃಷ್ಣ ಮೋಗವೀರ (35)  ಇವರು  ಜೀವನದಲ್ಲಿ ಜೀಗುಪ್ಸೆಗೊಂಡು  ದಿನಾಂಕ 23/03/2023 ರಂದು ಬೆಳಗ್ಗಿನ ಜಾವ 02:30 ಗಂಟೆಗೆ  ಕುಂದಾಪುರ ತಾಲೂಕಿನ  ಅಂಪಾರು   ಗ್ರಾಮದ  ನೆಲ್ಲಿಕಟ್ಟೆಯ ಮೆಲಬೈಲು  ಎಂಬಲ್ಲಿ ವಾಸದ ಮನೆಯ ಹತ್ತಿರದ ತೋಟದಲ್ಲಿ ವಿಷ ಸೇವನೆ ಮಾಡಿದ್ದು, ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ.ಎಮ್.ಸಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು, ಚಿಕಿತ್ಸೆಯಲ್ಲಿ  ಇದ್ದ  ಕೃಷ್ಣ ಮೋಗವೀರ  ಇವರು  ದಿನಾಂಕ  25/05/2023 ರಂದು 14:10 ಗಂಟೆಗೆ   ಚಿಕಿತ್ಸೆ  ಫಲಕಾರಿಯಾಗದೇ   ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 15/2023  ಕಲಂ:174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಬ್ರಹ್ಮಾವರ: ದಿನಾಂಕ 25/05/2023 ರಂದು ಮಹಾಂತೇಶ ಉದಯ ನಾಯಕ, ಪೊಲೀಸ್‌ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ  ಬ್ರಹ್ಮಾವರ ತಾಲೂಕು ಕಚ್ಚೂರು ಗ್ರಾಮದ ಬಾರಕೂರು ಯೂನಿಯನ್‌ಬ್ಯಾಂಕ್‌ ‌ಹಿಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಆರೋಪಿಗಳು ಓಡಿ ಹೋಗಲು ಪ್ರಯತ್ನಿಸಿದ್ದು, ಆಗ ಅದರಲ್ಲಿ ಒಬ್ಬ ಆರೋಪಿ ಕಾರ್ತಿಕ್‌ ಎಂಬಾತನನ್ನು ಹಿಡಿದಿದ್ದು, ಉಳಿದ ಆರೋಪಿಗಳು ತಪ್ಪಿಸಿಕೊಂಡಿರುತ್ತಾರೆ. ವಶಕ್ಕೆ ಪಡೆದ ಆರೋಪಿಯಲ್ಲಿಓಡಿ ಹೋದ ಉಳಿದ ಆರೋಪಿಗಳ ಹೆಸರು ಕೇಳಲಾಗಿ ಪ್ರಶಾಂತ, ಸುಧೀರ್‌ಪೂಜಾರಿ, ಚೇತನ್‌ಪೂಜಾರಿ, ಪಾಯಸ್‌, ಇಪ್ಪು @ ಇಪ್ತಿಕಾರ್‌ ಎಂಬುದಾಗಿ ತಿಳಿಸಿರುತ್ತಾನೆ.  ಆರೋಪಿತರು ಇಸ್ಪಿಟ್‌ಜುಗಾರಿ ಆಟಕ್ಕೆ ಬಳಸಿದ ನಗದು ರೂಪಾಯಿ 1,46,000/- ಮತ್ತು ಇಸ್ಪೀಟ್ ಎಲೆಗಳು 52, ಹಾಗೂ ಅವುಗಳನ್ನು ಹಾಕಿದ್ದ ಬೆಡ್‌ಶೀಟ್‌-1 ನ್ನು ವಶಕ್ಕೆ ಪಡೆದಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 107/2023 ಕಲಂ: 87 KP Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ  ಸುರೇಶ್ ಹೆಚ್.ಎಸ್, ಆಹಾರ ನಿರೀಕ್ಷಕರು, ಕುಂದಾಪುರ ರವರು ಇವರಿಗೆ ದಿನಾಂಕ 25/05/2023 ರಂದು ಕುಂದಾಪುರ ತಾಲ್ಲೂಕು ಗುಜ್ಜಾಡಿ ಗ್ರಾಮದ ಕಂಚುಗೋಡು ಎಂಬಲ್ಲಿ ಪೆಡ್ರಿಕ್ ಡಯಾಸ್ ರವರ ಮನೆಯಲ್ಲಿ ಹಂಝಾ (56) ಇವರುಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ದಾಸ್ತಾನು ಇರಿಸಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ  ಗಂಗೊಳ್ಳಿ ಪೊಲೀಸ್ ಠಾಣಾ ಸಿಬ್ಬಂದಿಯವರೊಂದಿಗೆ ಹೊರಟು 18:00 ಗಂಟೆಗೆ ಮಾಹಿತಿ ಬಂದ ಪೆಡ್ರಿಕ್  ಡಯಾಸ್ ರವರ ಮನೆ ತಲುಪಿ ಮನೆಯ ಬಾಡಿಗೆ ಕೋಣೆಯನ್ನು ಪರಿಶೀಲಿಸಲಾಗಿ ಕೋಣೆಯ ಒಳಗಡೆ ಅಕ್ಕಿ ಚೀಲಗಳನ್ನು ದಾಸ್ತಾನು ಇರಿಸಿರುವುದು ಕಂಡುಬಂದಿದ್ದು ಅಕ್ಕಿ ಚೀಲಗಳನ್ನು ಪರಿಶೀಲಿಸಲಾಗಿ ತಲಾ 50 ಕೆ.ಜಿಯ 26 ಚೀಲ ಬೆಳ್ತಿಗೆ ಅಕ್ಕಿ ಇದ್ದು ಅಕ್ಕಿಯ ಒಟ್ಟು ಮೌಲ್ಯ 32,500/- ರೂಪಾಯಿ ಆಗಿರುತ್ತದೆ. ಅಕ್ಕಿ ಚೀಲಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಆಪಾದಿತ ಹಂಝಾ ಸರಕಾರದಿಂದ ಉಚಿತವಾಗಿ ದೊರೆಯುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ ಹೆಚ್ಚಿನ ಬೆಲೆಗೆ ಅಂಗಡಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಪೆಡ್ರಿಕ್ ಡಯಾಸ್  ರವರ ಮನೆಯ ಬಾಡಿಗೆ ಕೋಣೆಯಲ್ಲಿ ಅಕ್ರಮವಾಗಿ ದಾಸ್ತಾನು  ಇರಿಸಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2023 ಕಲಂ: 3, 6, 7 ಅವಶ್ಯಕ ವಸ್ತುಗಳ ಅಧಿನಿಯಮ ಕಾಯ್ದೆ-1995 ರಂತೆ ಪ್ರಕರಣ ದಾಖಲಾಗಿರುತ್ತದೆ.


ಇತ್ತೀಚಿನ ನವೀಕರಣ​ : 26-05-2023 09:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080