ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ:ದಿನಾಂಕ 25/05/2023 ರಂದು ಸುಮಾರು ಸಂಜೆ 07;30  ಕುಂದಾಪುರ ತಾಲೂಕು ಕುಂಬಾಶಿ ಗ್ರಾಮದ ಕುಂಬಾಶಿ ಬಸ್ಸು ನಿಲ್ದಾಣದ ಬಳಿ ಎನ್ ಹೆಚ್ 66 ರ ಕುಂದಾಪುರ ಉಡುಪಿ ರಸ್ತೆಯ ಮಣ್ಣು ರಸ್ತೆಯಲ್ಲಿ ದೂರುದಾರರ ಪರಿಚಯದ ರವೀಂದ್ರ ಮರಕಾಲ ಎಂಬುವವರು ನಿಂತುಕೊಂಡಿರುವಾಗ ಆಪಾದಿತ ಸ್ಕೂಟರ್ ಸವಾರ ವೀನಸ್ ಎಂಬವರು ಸಹ ಸವಾರನನ್ನು ಕುಳ್ಳಿರಿಸಿಕೊಂಡು ಸ್ಕೂಟರ್ ನಂಬ್ರ ಕೆಎ 51 ಎಇ 1483  ಕುಂದಾಪುರ ಕಡೆಯಿಂದ ಉಡುಪಿ ಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ಬದಿ ಬಸ್ಸಿಗೆ ಕಾಯುತ್ತಿದ್ದ ರವೀಂದ್ರ ಮರಕಾಲ ರವರಿಗೆ ಢಿಕ್ಕಿ ಹೊಡೆಸಿದನು ಪರಿಣಾಮ ಸ್ಕೂಟರ್ ಸಹಸವಾರ ಹಾಗೂ ರವೀಂದ್ರ ಮರಕಾಲ ಇಬ್ಬರೂ ರಸ್ತೆಗೆ ,ಸ್ಕೂಟರ್ ಸವಾರ ಸ್ಕೂಟರ್ ಸಮೇತ ಮಣ್ಣು ರಸ್ತೆಗೆ ಬಿದ್ದನು ಈ ಅಫಫಾತದಿಂದ ರವೀಂದ್ರ ಮರಕಾಲ ರವರಿಗೆ ತಲೆಯ ಹಿಂಭಾಗ ಹಾಗೂ ಹಣೆಯ ಮೇಲೆ ಒಳನೋವು ಆಗಿದ್ದು ಸ್ಕೂಟರ್ ಸಹಸವಾರನಿಗೆ ಮುಖಕ್ಕೆ ರಕ್ತ ಗಾಯ ಹಾಗೂ ತಲೆಗೆ ಒಳನೋವು ಆಗಿದ್ದು ಸ್ಕೂಟರ್ ಸವಾರನಿಗೆ ಕಾಲಿಗೆ ಹಾಗೂ ಕೈಗೆ ತರಚಿದ ಗಾಯ ಆಗಿರುತ್ತದೆ . ಈ ಬಗ್ಗೆ ಮಂಜು ಕೆ  ಪ್ರಾಯ 37   ವರ್ಷ  ತಂದೆ  ದಿವಂಗತ ಕೊಟಿ    ವಾಸ:  ಅಂಗಡಿ ಬೆಟ್ಟು ಕೊರವಾಡಿ ಕುಂಬಾಶಿ ಗ್ರಾಮ  ರವರು ದೂರು ನೀಡಿದ್ದು ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2023  ಕಲಂ 279,338    ಐ.ಪಿ.ಸಿ ಯಂತೆ. ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ: ದಿನಾಂಕ 25/05/2023 ರಂದು ರಾತ್ರಿ 20:40 ಗಂಟೆಗೆ ಕಾರ್ಕಳ ತಾಲೂಕಿನ ಕೆದಿಂಜೆ ಗ್ರಾಮದ ಕೆದಿಂಜೆ ಬಿ.ಎಸ್.ಕೆ. ಕ್ಯಾಶ್ಯೂ ಫ್ಯಾಕ್ಟರಿ ಬಳಿ ಇರುವ ಬೊಂಡದ ಅಂಗಡಿ ಬಳಿ ಹಾದು ಹೋಗುವ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ, ಪಿರ್ಯಾದಿ ಲಕ್ಷ್ಮಣ್ ಮುರ್ಮು, (20), ತಂದೆ: ಮೆಗ್ರಾಯ್, ವಾಸ: ಲುಹಾಶೀಲಾ ಅಂಚೆ, ಬೆಟ್ ಜೆರ್ಹಾನ್ , ಮಯೂರ್ ಭಾಂಜ್, ಓಡಿಸ್ಸಾ, ಇವರ ಭಾವ ಘನಶ್ಯಾಮ್ ಮತ್ತು ಕರಣ್ ಮುರ್ಮು ಎಂಬವರ ಜೊತೆ ಮಂಜರಪಲ್ಕೆ ಕಡೆಯಿಂದ ಬಿ.ಎಸ್.ಕೆ. ಫ್ಯಾಕ್ಟರಿ ಕಡೆಗೆ ನಡೆದುಕೊಂಡು ಬರುವಾಗ, ಅದೇ ದಿಕ್ಕಿನಲ್ಲಿ ಅಂದರೆ ಮಂಜರಪಲ್ಕೆ ಕಡೆಯಿಂದ ಕಾರ್ಕಳ ಕಡೆಗೆ ಅಪರಿಚಿತ ವಾಹನ ಚಾಲಕನೊಬ್ಬನು ತನ್ನ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಘನಶ್ಯಾಮ್  ಮತ್ತು ಕರಣ್ ಮುರ್ಮು ಇವರಿಗೆ ಹಿಂದಿನಿಂದ ಢಿಕ್ಕಿ ಹೊಡೆದು, ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ, ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದು, ತೀವೃ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಕೊಡಿಸಿ. ಗಾಯಾಳು ಘನಶ್ಯಾಮ್ ಇವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅಲ್ಲಿಯ ವೈದ್ಯರು ಗಾಯಾಳು ಘನಶ್ಯಾಮ್ ಇವರನ್ನು ಪರೀಕ್ಷಿಸಿ ಅದಾಗಲೇ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆ ಅಪರಾಧ .ಕ್ರಮಾಂಕ 69/2023  ಕಲಂ: 279,337,304(ಎ)ಭಾದಸಂ ರಂತೆ ಪ್ರಕರಣ ದಾಖಲಿಸಲಾಗಿದೆ.
  • ಬ್ರಹ್ಮಾವರ : ದಿನಾಂಕ 25.05.2023 ರಂದು ಫಿರ್ಯಾದಿ  ಮೋಹನ್‌ಸುವರ್ಣ (43), ತಂದೆ: ದಿ. ಯಲ್ಲಪ್ಪ ಕೋಟ್ಯಾನ್‌, ವಾಸ: ಆಶೀರ್ವಾದ, ಎಸ್‌.ಎಸ್‌ರೋಡ್‌, ಕಾಂಚನ ಐಸ್‌ಪ್ಲಾಂಟ್‌ಬಳಿ, ಹೆಜಮಾಡಿ ಅಂಚೆ & ಗ್ರಾಮ ರವರು ತನ್ನ ಬಾಬ್ತು KA.20.EX.9468 ನೇ ನಂಬ್ರದ ಹೊಂಡ ಮ್ಯಾಟ್ರಿಕ್ಸ್‌ಡಿಯೋ ಸ್ಕೂಟರ್‌ನಲ್ಲಿ ಬೆಣ್ಣೆ ಕುದ್ರುವಿನಿಂದ ಬ್ರಹ್ಮಾವರ ಮಾರ್ಗವಾಗಿ ರಾ.ಹೆ 66 ರಲ್ಲಿ ಉಡುಪಿಗೆ ಸವಾರಿ ಮಾಡಿಕೊಂಡು ಹೋಗುತ್ತಾ ರಾತ್ರಿ 11:00 ಗಂಟೆಗೆ 52 ನೇ ಹೇರೂರು ಗ್ರಾಮದ, ಬ್ರಹ್ಮಾವರ ದೂಪದ ಕಟ್ಟೆ, ಮಂಜುನಾಥ ಪೆಟ್ರೋಲ್‌ಬಂಕ್‌ನಿಂದ ಸ್ವಲ್ಪ ಹಿಂದೆ ನವ್ಯ ಆಟೋ ವರ್ಕ್ಸ್‌ಬಳಿ ತಲುಪುವಾಗ ಅವರ ಎದುರಿನಿಂದ ಅಂದರೆ ಉಡುಪಿ ಕಡೆಯಿಂದ Wrong Side ನಿಂದ  ಆರೋಪಿ ಕಿರಣ  ಎಂಬವರು ಅವರ ಬಾಬ್ತು KA.20.EB.9460 ನೇ ಸ್ಕೂಟರ್‌ನಲ್ಲಿ ಆದರ್ಶ ಪೂಜಾರಿ ರವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಅತೀ  ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರ ಸ್ಕೂಟರ್‌ರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಎರಡೂ  ಸ್ಕೂಟರ್‌ಸಮೇತ ಸವಾರರು ರಸ್ತೆಗೆ ಬಿದ್ದು, ಫಿರ್ಯಾದಿದಾರರ ಹಣೆಯ ಎಡಭಾಗ, ಗುದ್ದಿದ ಗಾಯ, ಸೊಂಟದ ಬಲಭಾಗ, ಕುತ್ತಿಗೆ ಬಲಭಾಗ, ಗುದ್ದಿದ ನೋವಾಗಿದ್ದು, ಎದೆಗೆ ಗುದ್ದಿದ ನೋವಾಗಿರುತ್ತದೆ. ಅಲ್ಲದೇ ಆರೋಪಿ ಕಿರಣ ರವರ ತಲೆಗೆ, ಮುಖಕ್ಕೆ, ಕೈ ಕಾಲುಗಳಿಗೆ ತೀವ್ರ ರಕ್ತಗಾಯವಾಗಿದ್ದು, ಸಹಸವಾರ ಆದರ್ಶ ಪೂಜಾರಿ ರವರಿಗೆ ಯಾವುದೇ ಗಾಯವಾಗಿರುವುದಿಲ್ಲ. ಗಾಯಗೊಂಡ ಪಿರ್ಯಾದಿದಾರರನ್ನು ಹಾಗೂ ಆರೋಪಿಯನ್ನು ಚಿಕಿತ್ಸೆ ಬಗ್ಗೆ ಮಹೇಶ್‌ಆಸ್ಪತ್ರೆಗೆ ಕರೆದುಕೊಂಡು ಬಂದು, ಫಿರ್ಯಾದಿದಾರರನ್ನು ಮಹೇಶ್‌ಆಶ್ಪತ್ರೆಯಲ್ಲಿ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿವುದಾಗಿದೆ . ಈ ಬಗ್ಗೆ  ಬ್ರಹ್ಮಾವರ ಠಾಣೆ ಅಪರಾಧ  ಕ್ರಮಾಂಕ  108/2023 : ಕಲಂ 279, 338 ಐಪಿಸಿ ರಂತೆ ದಾಖಲಿಸಲಾಗಿದೆ.
  • ಕುಂದಾಪುರ: ದಿನಾಂಕ 26/05/2023 ರಂದು ಬೆಳಿಗ್ಗೆ ಸಮಯ ಸುಮಾರು 10:00   ಗಂಟೆಗೆ, ಕುಂದಾಪುರ  ತಾಲೂಕಿನ ಹೆಮ್ಮಾಡಿ ಗ್ರಾಮದ ಜಾಲಾಡಿಯ  ಹೊಸ ಟೊಯೊಟಾ ಷೋ ರೂಮ್‌ ಬಳಿ,  ಪೂರ್ವ ಬದಿಯ NH 66 ರಸ್ತೆಯಲ್ಲಿ  , ಆಪಾದಿತ  ಅಂಜಿನಪ್ಪ ಎಂಬವರು KA53-AA-8684ನೇ   ಟ್ಯಾಂಕರನ್ನು ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷತನದಿಂದ  ಚಾಲನೆ ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಟ್ಯಾಂಕರ್‌‌‌ನ ಮುಂದುಗಡೆಯಲ್ಲಿ ಪಿರ್ಯಾದಿ ಮಂಜು ಪೂಜಾರಿ  ಪ್ರಾಯ 63  ವರ್ಷ ತಂದೆ ರಾಮ ವಾಸ: ಮರೀನ್‌ಮನೆ, ಕುಂಬಾರ್‌‌‌‌ಮಕ್ಕಿ, ಹೊಸಾಡು   ಗ್ರಾಮ ಇವರು KA20-Y-7809ನೇ ಹೀರೋಹೊಂಡ ಸ್ಪ್ಲೆಂಡರ್‌ ಬೈಕನ್ನು  ಸವಾರಿ ಮಾಡಿಕೊಂಡು ಬಂದು ಇಂಡಿಕೇಟರ್‌ ಹಾಗೂ ಕೈ ಸನ್ನೆ ಮಾಡಿ ಪಶ್ಚಿಮ ಬದಿಯ NH 66 ರಸ್ತೆಗೆ ತಿರುಗಿಸುವ ಸಮಯ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ  ಮಂಜು ಪೂಜಾರಿಯವರ ಬಲಕೈ, ಬಲಕಾಲಿಗೆ ಮೂಳೆ ಮುರಿತವಾಗ ಗಾಯ ಹಾಗೂ ಹಣೆಗೆ ಮತ್ತು ಮುಖಕ್ಕೆ ತರಚಿದ ಗಾಯವಾಗಿ ಕುಂದಾಪುರ ಆದರ್ಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ  ಕ್ರಮಾಂಕ 69/2023   ಕಲಂ 279,338   ಐಪಿಸಿ ರಂತೆ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣ

  • ಬ್ರಹ್ಮಾವರ: ದಿನಾಂಕ: 23.05.2023 ರಂದು ಬ್ರಹ್ಮಾವರ ತಾಲೂಕು, 33 ನೇ ಶಿರೂರು ಗ್ರಾಮದ  ಮುದ್ದುಮನೆ ಎಂಬಲ್ಲಿ ಫಿರ್ಯಾದಿ ಬಾಲಕೃಷ್ಣ ಶೆಟ್ಟಿ (59) ತಂದೆ: ದಿವಂಗತ ಮಹಾಲಿಂಗ ಶೆಟ್ಟಿ, ವಾಸ: ಮುದ್ದುಮನೆ ಅಂಚೆ, 33 ಶಿರೂರು  ಗ್ರಾಮ ಇವರು  ರಾತ್ರಿ ಮನಯೆಲ್ಲಿರುವಾಗ ಆರೋಪಿ ರಮೇಶ ದೇವಾಡಿಗರು ಟ್ಯಾಂಕ್‌ ನೀರು ತುಂಬಿಸಿಕೊಂಡು ಬಂದಿದ್ದು, ಫಿರ್ಯಾದಿದಾರು ಬೇರೆ ಗೂಡ್ಸ್‌ ರಿಕ್ಷಾ ನೀರು ತುಂಬಿಸುವ ಜಾಗದಲ್ಲಿ ಇದೆಯಾ ಎಂದು ಕೇಳಿದ್ದಕ್ಕೆ ಆರೋಪಿಯು ಎರಡು ರಿಕ್ಷಾ ಇದೆ ಎಂದು ಹೇಳಿರುತ್ತಾರೆ. ಫಿರ್ಯಾದಿದಾರರು ನೀರು ತುಂಬಿಸುವ ಮನೆ ಬಳಿ ಬಂದು ನೋಡಿದಲ್ಲಿ ಯಾವುದೇ ರಿಕ್ಷಾ ಇಲ್ಲದಿರುವುದನ್ನು ನೋಡಿ ಆರೋಪಿ ರಮೇಶ ದೇವಾಡಿಗರವರಲ್ಲಿ ಏಕೆ ಸುಳ್ಳು ಹೇಳುತ್ತಿ ಎಂದು ಕೇಳಿದ್ದಕ್ಕೆ “ನಾನು ನಿಮ್ಮ ಜನ ಅಲ್ಲ ಬೇಕಾದರೆ ನೀವೇ ಹೋಗಿ ನೋಡಿ, ಇಲ್ಲ ಫೋನ್‌ ಮಾಡಿ ಕೇಳಿ, ನನ್ನ ಬಳಿ ಏನು ಮಾತಾನಾಡುವುದು” ಎಂದು ಹೇಳಿದ್ದು, ಆಗ ಫಿರ್ಯಾದಿದಾರರು ಮನೆ ಕಡೆಗೆ ಹೋಗುತ್ತಿರುವಾಗ ಸಮಯ ರಾತ್ರಿ 9:00 ಗಂಟೆಗೆ ಆರೋಪಿಯು ರಿಕ್ಷಾದಿಂದ ಇಳಿದು ಓಡಿ ಬಂದು ಫಿರ್ಯಾದಿದಾರರನ್ನು ಅಡ್ಡಕಟ್ಟಿ, ಕೈಯಲ್ಲಿ ಮುಷ್ಠಿ ಕಟ್ಟಿ ಫಿರ್ಯಾದಿದಾರರ ಮುಖಕ್ಕೆ ಮೂಗಿಗೆ ಹಾಗೂ ತುಟಿಗೆ ಹೊಡೆದು, ಅಲ್ಲಿಂದ ಹೋಗುವಾಗ ಫಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದು ಮುಂದಕ್ಕೆ ನಿನ್ನನ್ನು ಬಿಡುವುದಿಲ್ಲ ಎಂದು, ಬೆದರಿಕೆ ಹಾಕಿ ರಿಕ್ಷಾದಲ್ಲಿ ಹೋಗಿರುತ್ತಾನೆ. ಆರೋಪಿಯು ಹೊಡೆದ ಪರಿಣಾಮ ಫಿರ್ಯಾದಿದಾರರ ಮೂಗಿನಲ್ಲಿ ಹಾಗೂ ತುಟಿಯಲ್ಲಿ ರಕ್ತ ಬಂದಿದ್ದು, ಅಲ್ಲದೇ ಬಲಕಣ್ಣಿನ ಕೆಳಭಾಗಕ್ಕೆ ಗುದ್ದಿದ ನೋವಾಗಿದ್ದು, ಬಲಕಣ್ಣು ಕೆಂಪಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆ   ಅಪರಾಧ  ಕ್ರಮಾಂಕ  109/2023 : ಕಲಂ 341, 323, 504, 506  ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ಪಿರ್ಯಾದಿ: ಸಚಿನ್‌ ಕುಮಾರ್‌ ಪ್ರಾಯ: 28 ವರ್ಷ ತಂದೆ: ಶಂಕರ ಪೂಜಾರಿ ವಾಸ: ಕಾಸಾನಮಕ್ಕಿ, ನಡ್ಪಾಲು ಗ್ರಾಮ, ಇವರು ಶಿವಮೊಗ್ಗ-ಉಡುಪಿ ಮಾರ್ಗದಲ್ಲಿ ಸಂಚರಿಸುವ ಡಿವೈನ್‌ ಎಂಬ ಖಾಸಗಿ ಬಸ್ಸಿನಲ್ಲಿ ನಿರ್ವಾಹಕರಾಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 24/05/2023 ರಂದು ಸಂಜೆ ಪಿರ್ಯಾದುದಾರರಿಗೂ ಆಪಾದಿತರಿಗೂ ಬಸ್ಸಿನ ಟೈಮಿಂಗ್‌ ವಿಚಾರದಲ್ಲಿ ಮಾತಿಗೆ ಮಾತಾಗಿರುತ್ತದೆ. ಇದೇ ಕಾರಣದಿಂದ ದಿನಾಂಕ 25/05/2023 ರಂದು 16:30 ಗಂಟೆಗೆ ಪಿರ್ಯಾದುದಾರರು ಉಡುಪಿ ಸರ್ವೀಸ್‌ ಬಸ್‌ ನಿಲ್ದಾಣದಲ್ಲಿ ತಮ್ಮ ಬಸ್ಸಿನ ಕಡೆಗೆ ಹೋಗುತ್ತಿರುವಾಗ ಆಪಾದಿತರು ಸಮಾನ ಉದ್ದೇಶದಿಂದ ಒಟ್ಟು ಸೇರಿ, 1 ಮತ್ತು 2ನೇ ಆಪಾದಿತರು ಪಿರ್ಯಾದುದಾರರನ್ನು ಅಡ್ಡಗಟ್ಟಿ, ಅವಾಚ್ಯವಾಗಿ  ಬೈದು ಕೈಯಿಂದ ದೂಡಿರುದ್ದಲ್ಲದೆ ಕೈಯಿಂದ ಕೆನ್ನೆಗೆ ಹೊಡೆದಿದ್ದು, ಇತರ ಇಬ್ಬರು ಬಂದು ಏಕಾಏಕಿಯಾಗಿ ಪಿರ್ಯಾದುದಾರರ ಮುಖಕ್ಕೆ, ತಲೆಗೆ ಹಾಗೂ ಬೆನ್ನಿಗೆ ಗುದ್ದಿ ನೋವು ಉಂಟು ಮಾಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  74/2023 ಕಲಂ: 341, 323, 504 Rw 34 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.    

ಗಂಡಸು ಕಾಣೆ ಪ್ರಕರಣ

  •  ಕುಂದಾಪುರ: ಫಿರ್ಯಾದಿ  ಶ್ರೀಮತಿ ಭಾರತಿ  ಪ್ರಾಯ: 28 ವರ್ಷ, ಗಂಡ: ರಾಘವೇಂದ್ರ ವಾಸ: ರಾಘವೇಂದ್ರ ನಿಲಯ ಜನತಾ ಕಾಲೋನಿ ವಕ್ವಾಡಿ  ಗ್ರಾಮ ಇವರು ದಿನಾಂಕ 24/05/2023 ರಂದು ಬೆಳಿಗ್ಗೆ 08.30 ಗಂಟೆಗೆ  ಎಂದಿನಂತೆ ಸೆಂಟ್ರಿಂಗ್‌ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವರು ಕೆಲಸಕ್ಕೂ ಹೋಗದೇ ಮನೆಗೂ ವಾಪಾಸ್ಸು ಬಾರದೇ ಕಾಣೆಯಾಗಿದ್ದು,  ಸಂಬಂಧಿಕರ ಮನೆಗಳಲ್ಲಿ ಹಾಗೂ ನೆರೆಕರೆಯಲ್ಲಿ  ಹುಡುಕಾಡಿದರು ಪತ್ತೆಯಾಗಿರುವುದಿಲ್ಲ .ಈ ಬಗ್ಗೆ ಕುಂದಾಪುರ ಪೊಲೀಸ್‌ಠಾಣೆ  ಅಪರಾಧ ಕ್ರಮಾಂಕ  54-2023 ಕಲಂ: Man Missing ರಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಕೋಟ : ಪಿರ್ಯಾದಿ: ಬಾಬು ನಾಯರಿ ಪ್ರಾಯ 59 ವರ್ಷ ತಂದೆ: ಗಣಪಯ್ಯ  ನಾಯರಿ ವಾಸ: ಬೈಲ್ಮನೆ ಕುಂಜಿ ಗುಡಿ ಕಾರ್ಕಡ  ಗ್ರಾಮ ಇವರ ದೊಡ್ಡಮ್ಮನ ಮಗಳು ವಿನೋದ ಹಾಗೂ ಅವಳ ಗಂಡ ಹಾಗೂ ಮಕ್ಕಳು ಪಿರ್ಯಾದಿದಾರರ ಮನೆಗೆ ತಾಗಿಕೊಂಡಿರುವಲ್ಲಿ ವಾಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ಮತ್ತು ವಿನೋದರವರು ಇರುವ ಜಾಗವು  ಪಿತ್ರಾರ್ಜಿತ  ಆಸ್ತಿಯಾಗಿದ್ದು ಅದರಲ್ಲಿ ಪಿರ್ಯಾದಿದಾರರು ಹಾಗೂ ವಿನೋದರವರು ವಾಸ ಮಾಡಿಕೊಂಡಿರುವುದಾಗಿದೆ. ವಿನೋದ ಹಾಗೂ ಅವಳ ಮಗಳು ಆಶಾ ರವರು ಸಣ್ಣ ಪುಟ್ಟ ವಿಚಾರಕ್ಕೆಲ್ಲಾ ಪಿರ್ಯಾದಿದಾರರೊಂದಿಗೆ ಗಲಾಟೆ  ಮಾಡುತ್ತಿದ್ದು, ದಿನಾಂಕ 21/05/2023 ರಂದು ಸಂಜೆ ಸಮಯ ಪಿರ್ಯಾದಿದಾರರು ಮನೆಯಲ್ಲಿರುವಾಗ ಬಾವಿಯ ನೀರು ಹೋಗುವ ಪೈಪಿನ ವಿಚಾರದಲ್ಲಿ ಪಿರ್ಯಾದಿದಾರರಿಗೆ ಬೈದು ಕೈಯಿಂದ ದೂಡಿರುತ್ತಾರೆ. ಪಿರ್ಯಾದಿದಾರರು ಅವರ ಸಂಬಂಧಿಯಾಗಿರುವುದರಿಂದ ಸುಮ್ಮನಾಗಿದ್ದು, ನಿನ್ನೆ ದಿನ ದಿನಾಂಕ 25/05/2023 ರಂದು 20:00 ಗಂಟೆಯ ಸುಮಾರಿಗೆ  ಪಿರ್ಯಾದಿದಾರರು ಮನೆಯಿಂದ ಹೊರಗೆ ಬಂದಾಗ ವಿನೋದ ಹಾಗೂ ಆಶಾ ಇಬ್ಬರೂ ಸೇರಿಕೊಂಡು ಅಂಗವಿಕಲರಾದ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ  ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರಿಗೆ ಕೈಯಿಂದ ಕೆನ್ನೆಗೆ ಹೊಡೆದು ದೂಡಿ ಕೆಳಗೆ ಬೀಳಿಸಿರುತ್ತಾರೆ. ಪಿರ್ಯಾದಿದಾರರು ಇಟ್ಟಿಗೆ ತುಂಡಿನ ಮೇಲೆ ಬಿದ್ದಿರುತ್ತಾರೆ ಹಾಗೂ ಅಲ್ಲಿಯೇ ಬಿದ್ದಿರುವ ಇಟ್ಟಿಗೆ ತುಂಡಿನಿಂದ ಪಿರ್ಯಾದಿದಾರರಿಗೆ ಹೊಡೆದಿದ್ದಲ್ಲದೇ “ಇನ್ನು ಮುಂದಕ್ಕೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 102-2023  ಕಲಂ: 341, 323, 324, 504, 506 RW 34 IPC ರಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಪಿರ್ಯಾದಿ: ವಿಠಲ ಪೂಜಾರಿ ಪ್ರಾಯ: 65 ವರ್ಷ ತಂದೆ: ನಾಗಪ್ಪ ಪೂಜಾರಿ ವಾಸ: ನೂಜಿ, ಹಿರೇಬೆಟ್ಟು ಇವರ  ತಮ್ಮನಾದ  ಸುಧಾಕರ್ ಪೂಜಾರಿ ಪ್ರಾಯ: 53 ವರ್ಷ ಇವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದವರು, ಅವರಿಗೆ ಮಧುಮೇಹ ಖಾಯಿಲೆ ಕೂಡಾ ಇದ್ದು ಇದರ ಜೊತೆಗೆ ಇನ್ನಿತರ ಖಾಯಿಲೆಯಿಂದ ಬಳಲುತ್ತಿದ್ದವರು ದಿನಾಂಕ: 23.05.2023 ರಂದು ಮಣಿಪಾಲ ಶಾಂತಿ ನಗರ ಬಳಿ ಇರುವ ಬಸ್ಸು ನಿಲ್ದಾಣದಲ್ಲಿ ಅಸ್ವಸ್ಥರಾಗಿ  ಇದ್ದವನನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 26.05.2023 ರಂದು ಬೆಳಿಗ್ಗೆ 04:45 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ ನಂಬ್ರ 28/2023 ಕಲಂ: 174  ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 26-05-2023 06:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080