ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಕಾರ್ತಿಕ್ ಶೆಟ್ಟಿ (21), ತಂದೆ: ಚಂದ್ರ ಶೇಖರ ಶೆಟ್ಟಿ, ವಾಸ: ಗುಟ್ರು ಗೋಡು ಮನೆ ಜಪ್ತಿ ಗ್ರಾಮ ಕುಂದಾಪುರ ತಾಲೂಕು ಇವರು ತನ್ನ  ತಂದೆ ಚಂದ್ರಶೇಖರ ಶೆಟ್ಟಿ (45 ) ಹಾಗೂ ಅಜ್ಜ ಭುಜಂಗ ಶೆಟ್ಟಿ (76) ರವರು ಕೊರ್ಗಿ ಕೆರೆ ಮನೆ ಎಂಬಲ್ಲಿ ಸಂಬಂದಿಕರ ಮನೆಯ ಕುರಿ ಪೂಜೆ ಕಾರ್ಯಕ್ರಮ ಮುಗಿಸಿ ತಂದೆ ಚಂದ್ರಶೇಖರ ಶೆಟ್ಟಿಯವರು ಅವರ KA-19-EP-3506 ನೇ ಡಿಸ್ಕವರಿ ಮೋಟಾರ್ ಸೈಕಲಿನಲ್ಲಿ  ಅಜ್ಜ ಭುಜಂಗ ಶೆಟ್ಟಿಯವರನ್ನು ಹಿಂಬದಿ ಕೂರಿಸಿಕೊಂಡು ಹುಣ್ಸೆಮಕ್ಕಿ  ಬೇಳೂರು ರಸ್ತೆಯಲ್ಲಿ  ಬೇಳೂರು ಕಡೆಯಿಂದ ಹುಣ್ಸೆಮಕ್ಕಿ ಕಡೆಗೆ  ಹೊರಟಿದ್ದು ಪಿರ್ಯಾದಿದಾರರು  ಅವರ ಹಿಂದಿನಿಂದ ತನ್ನ ಸ್ಕೂಟಿಯಲ್ಲಿ ಹೊರಟಿರುತ್ತಾರೆ ರಾತ್ರಿ 9:15 ಗಂಟೆಯ ಸಮಯಕ್ಕೆ ಕ್ಯಾಸನ ಮಕ್ಕಿ ಎಂಬಲ್ಲಿ ಬರುತ್ತಿರುವಾಗ ಎದುರುಗಡೆಯಿಂದ ಹುಣ್ಸೆಮಕ್ಕಿ ಕಡೆಯಿಂದ ಬೇಳೂರು ಕಡೆಗೆ KA-47-M-3020 ಕಾರು ಚಾಲಕ ಪ್ರವೇಶ್ ಶೆಟ್ಟಿ  ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ  ಪಿರ್ಯಾದಿದಾರರ ಮುಂದಿನಿಂದ ಕ್ರಮದಂತೆ ಹೋಗುತ್ತಿದ್ದ ಪಿರ್ಯಾದಿದಾರರ ತಂದೆಯವರು ಚಲಾಯಿಸುತ್ತಿದ್ದ  ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಂದೆ ಹಾಗೂ ಸಹ ಸವಾರ ಅಜ್ಜ ಭುಜಂಗ ಶೆಟ್ಟಿರವರು ಬೈಕ್ ಸಮೇತ ರಸ್ತೆಗೆ ಬಿದ್ದರು  ತಂದೆಯ ಬಲ ಕೈ  ಮತ್ತು ಬಲ ಕಾಲಿಗೆ ಹಾಗೂ ಅಜ್ಜನ ಬಲ ಕೈ ಹಾಗೂ ಬಲ ಕಾಲಿಗೆ ತೀವೃ ಸ್ವರೂಪದ ರಕ್ತಗಾಯವಾಗಿರುತ್ತದೆ. ನಂತರ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2022 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 25 /05/2022 ರಂದು 02:30  ಗಂಟೆಗೆ ಕುಂದಾಪುರ  ತಾಲೂಕಿನ, ತಲ್ಲೂರು ಗ್ರಾಮದ  ತಲ್ಲೂರು ಜಂಕ್ಷನ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಪಿರ್ಯಾದಿದಾರರಾದ ಸುರೇಶ ಪೂಜಾರಿ (53), ತಂದೆ: ದಿ . ರಾಮ ಪೂಜಾರಿ, ವಾಸ:  ಅಂಬಿಕಾ ನಿಲಯ ಚಿತ್ತೂರು, ಚಿತ್ತೂರು  ಗ್ರಾಮ ಕುಂದಾಪುರ ತಾಲೂಕು ಇವರು ಸಾಹೀದ್ ರವರ KA-19-EJ-9739 ನೇ ಮೋಟಾರ ಸೈಕಲ್ ನಲ್ಲಿ ಸಹ ಸವಾರನಾಗಿ ಕುಳಿತು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಹೋಗುತ್ತಿರುವಾಗ ಆಪಾದಿತ ರಾಜೀವ ಕುಲಾಲ   KA-20-AA-4041 ನೇ ಕಾರನ್ನು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಕಾರಿನ ಮುಂದೆ ಹೋಗುತ್ತಿದ್ದ ಪಿರ್ಯಾದಿದಾರರ ಬೈಕಿಗೆ ಬಲ ಬದಿಗೆ ಡಿಕ್ಕಿಹೊಡೆದ ಪರಿಣಾಮ ಸಾಹೀದ್ ಹಾಗೂ ಸುರೇಶ ಪೂಜಾರಿಯವರು  ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಸಾಹಿದ್ ರವರಿಗೆ ಬಲಕೈ ಭುಜಕ್ಕೆ, ಬಲಕೈ ಗೆ ಹಾಗೂ ಹಣೆಗೆ ತರಚಿದ ಗಾಯವಾಗಿದ್ದು, ಸುರೇಶ ಪೂಜಾರಿಯವರಿಗೆ  ಬಲಕೈ, ಬಲ ಭುಜಕ್ಕೆ, ಹಾಗೂ ಬಲ ಕಾಲು ಮೊಣಗಂಟಿಗೆ  ಒಳನೋವು ಉಂಟಾಗಿ ಕುಂದಾಪುರ ಚಿನ್ಮಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 69/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಮಣಿಪಾಲ: ದಿನಾಂಕ 25/05/2022 ರಂದು 17:05 ಗಂಟೆಗೆ KA-19-EJ-6507 ನೇ ಮೋಟಾರ್ ಸೈಕಲ್ ನಲ್ಲಿ  ಶೋಧನ ಶೆಟ್ಟಿ ಎಂಬುವವರು ಪಿರ್ಯಾದಿದಾರರಾದ ಅಲ್ ಡ್ರಿನ್ ವಾಜ್  (21), ತಂದೆ:ಅರ್ತೂರ್ ವಾಜ್, ವಾಸ: ಸೆಂಟ್ ಆ್ಯನ್ಸ ಚೆರ್ಚ ಬಳಿ ತೊಟ್ಟಮ ಗ್ರಾಮ ಮಲ್ಪೆ ಉಡುಪಿ ತಾಲೂಕು ಇವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು  NH 169(a) ರಸ್ತೆಯಲ್ಲಿ ಮಣಿಪಾಲದಿಂದ ಉಡುಪಿಕಡೆಗೆ ಸವಾರಿಮಾಡಿಕೊಂಡು ಹೋಗುತ್ತಾ ಲಕ್ಷ್ಮೀಂದ್ರ ನಗರ ಬ್ಲೂ ಡಾರ್ಟ್ ಕಛೇರಿ ಬಳಿ ಸದರಿ ಮೋಟಾರ್ ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲಬಾಗಕ್ಕೆ ಚಲಾಯಿಸಿ ಮೋಟಾರ್ ಸೈಕಲ್ ನಿಯಂತ್ರಣ ಕಳೆದುಕೊಂಡ ಕಾರಣ ಮೋಟಾರ್ ಸೈಕಲ್ ರಸ್ತೆಯ  ಡಿವೈಡರ್  ಗೆ ಡಿಕ್ಕಿಹೊಡೆದು ಇಬ್ಬರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು  ಪಿರ್ಯಾದಿದಾರರ ತಲೆಗೆ ಭುಜಕ್ಕೆ ಕೈ ಕಾಲುಗಳಿಗೆ ತೀವ್ರ ಸ್ವರೂಪದ ಗಾಯ ಹಾಗೂ ಮೈ ಕೈಗೆ ಗುದ್ದಿದ ಗಾಯ ಉಂಟಾಗಿರುತ್ತದೆ ಹಾಗೂ ಮೋಟಾರ್ ಸೈಕಲ್ ಸವಾರ ಶೋಧನ ಶೆಟ್ಟಿ ರವರ ತಲೆ ಮತ್ತು ಮುಖಕ್ಕೆ, ತೀವ್ರ ಸ್ವರೂಪದ ರಕ್ತ ಗಾಯವಾಗಿ ಮೃತ ಪಟ್ಟಿರುವುದಾಗಿದೆ ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2022 ಕಲಂ: 279, 338, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2022 ಕಲಂ: 279, 338, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಮಟ್ಕಾ ಜುಗಾರಿ ಪ್ರಕರಣ

  • ಕುಂದಾಪುರ: ದಿನಾಂಕ 25/05/2022 ರಂದು ಸದಾಶಿವ ಆರ್ ಗವರೋಜಿ, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಪೊಲೀಸ್ ಠಾಣೆ ಇವರಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ಕೋಣಿ ಗ್ರಾಮದ ಗ್ರಾಮ ಪಂಚಾಯತ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಕೋಣಿ  ಗ್ರಾಮದ ಪಂಚಾಯತ್ ಕಟ್ಟಡದ ಬಳಿ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರನ್ನು ಸೇರಿಸಿಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿದ್ದಲ್ಲಿಗೆ ದಾಳಿ ಮಾಡಿದಾಗ ಸಾರ್ವಜನಿಕರು ಓಡಿ ಹೋಗಿದ್ದು , ಮಟ್ಕಾ ಬರೆಯುತ್ತಿದ್ದು ಅಶೋಕ  ಪೂಜಾರಿ (45). ತಂದೆ: ದಿವಂಗತ ಕೃಷ್ಣ ಪೂಜಾರಿ. ವಾಸ: ಹೆಚ್‌.ಎಮ್‌.ಟಿ ರೋಡ್,  ಕೋಣಿ ಗ್ರಾಮ, ಕುಂದಾಪುರ ತಾಲೂಕು ಉಡುಪಿ  ಜಿಲ್ಲೆ ಎಂಬಾತನ್ನು ವಶಕ್ಕೆ ಪಡೆದು ಆತನಿಂದ  ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ  ನಗದು ರೂಪಾಯಿ 630/-, ಬಾಲ್ ಪೆನ್-1 ಮತ್ತು ಮಟ್ಕಾ ನಂಬ್ರ ಬರೆದ ಚೀಟಿ -1 ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 55/2022 ಕಲಂ: 78 (i) (iii) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ನಿಕೇಶ್‌ ಪೂಜಾರಿ (25), ತಂದೆ: ರಾಜೇಶ್‌ ಪೂಜಾರಿ, ವಾಸ: ರಾಮಮೋಹನ್‌ ನಗರ, ಪಾಲಡ್ಕ, ಮೂಡಬಿದ್ರಿ ತಾಲೂಕು, ದ.ಕ ಜಿಲ್ಲೆ ಇವರು ಹೋಟೇಲ್‌ ಕೆಲಸಕ್ಕಾಗಿ ದಿನಾಂಕ 24/05/2022 ರಂದು ಬೆಳಿಗ್ಗೆ ಉಡುಪಿಗೆ ಬಂದಿದ್ದು, ರಾತ್ರಿ 9:00 ಗಂಟೆಗೆ ಉಡುಪಿ ಸಿಟಿ ಬಸ್‌ ನಿಲ್ದಾಣದ ಬಳಿ ನಿಂತುಕೊಂಡಿರುವಾಗ ವೈಶಾಲಿ ಬಾರ್‌ ಎದುರುಗಡೆ ಕೆಲವು ಜನರು ಗಲಾಟೆ ಮಾಡುತ್ತಿದ್ದು, ಪಿರ್ಯಾದಿದಾರರ ಅವರಲ್ಲಿ ಏನು ಗಲಾಟೆ ಮಾಡುತ್ತಿದ್ದೀರಿ ಎಂದು ಕೇಳಿದಾಗ, ಓರ್ವ ಆಪಾದಿತನು ಪಿರ್ಯಾದಿದಾರರ ಕೆನ್ನೆಗೆ ಹೊಡೆದು, ದೂಡಿಕೊಂಡು ಬಂದು ಕೆಂಪು ಬಣ್ಣದ ಸ್ವಿಫ್ಟ್ ಡಿಸೈರ್‌ ಕಾರಿನ ಒಳಗೆ ಕೂರಿಸಿದ್ದು, ಉಳಿದ 5 ಆರೋಪಿತರೊಂದಿಗೆ ಸಮಾನ ಉದ್ದೇಶದಿಂದ ಒಟ್ಟು ಸೇರಿ, ಕಾರನ್ನು ಚಲಾಯಿಸಿಕೊಂಡು ಬಂದು ಕುತ್ಪಾಡಿ ಗ್ರಾಮದ ಸಮುದ್ರ ಬದಿಗೆ ಎಳೆದುಕೊಂಡು ಬಂದು  ಕೆನ್ನೆಗೆ, ಬೆನ್ನಿಗೆ, ಕಣ್ಣಿಗೆ ಹಲ್ಲೆ ಮಾಡಿದ್ದಲ್ಲದೆ, ಮರಳಿನ ಮೇಲೆ ದೂಡಿ ಹಾಕಿ ಬೆನ್ನಿಗೆ ಕಾಲಿನಿಂದ ತುಳಿದಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 89/2022 ಕಲಂ: 143, 147, 363, 323 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಬೈಂದೂರು: ದಿನಾಂಕ 24/05/2022 ರಂದು ಮಹಾಬಲ, ಪೊಲೀಸ್ ಉಪನಿರೀಕ್ಷಕರು, ಬೈಂದೂರು ಪೊಲೀಸ್ ಠಾಣೆ ಇವರು  ರೌಂಡ್ಸ್ ಕರ್ತವ್ಯದಲ್ಲಿರುವಾಗ ಗೋಳಿಹೊಳೆ ಗ್ರಾಮದ ಹೆಲಿಪ್ಯಾಡ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಒರ್ವ ವ್ಯಕ್ತಿಯು ಅಮಲು ಪದಾರ್ಥ ಸೇವನೆ ಮಾಡುತ್ತಿರುವುದಾಗಿ ಮಾಹಿತಿ ಬಂದಂತೆ ಗೋಳಿಹೊಳೆ  ಗ್ರಾಮದ ಹೆಲಿಪ್ಯಾಡ್ ಬಳಿಯ ಸಾರ್ವಜನಿಕ ಸ್ಥಳಕ್ಕೆ ಹೋದಲ್ಲಿ ಅಲ್ಲಿ ಒಬ್ಬ ವ್ಯಕ್ತಿಯು ತೂರಾಡಿಕೊಂಡು ಅಮಲಿನಲ್ಲಿರುವುದನ್ನು ಕಂಡು ಆತನ ಬಳಿ ಹೋಗಿ ಆತನ ಹೆಸರು ಕೇಳಿದಾಗ ತೊದಲುತ್ತಾ ರಜತ್ ಎಂಬುದಾಗಿ ಹೇಳಿದ್ದು ಆತನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಯಾವುದೋ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿ ವಿಳಾಸ ತಿಳಿದುಕೊಳ್ಳಲಾಗಿ ರಜತ್ (22),  ತಂದೆ: ಹರೀಶ್ , ವಾಸ: ರಶ್ಮೀತಾ ನಿಲಯ, ಕಲ್ಯಾಣಿಗುಡ್ಡೆ, ಕೊಲ್ಲೂರು ಗ್ರಾಮ ಬೈಂದೂರು ತಾಲೂಕು ಎಂಬುದಾಗಿ ತಿಳಿಸಿದ್ದು ಆತನು ಗಾಂಜಾದಂತಹ ಅಮಲು  ಪದಾರ್ಥ ಸೇವಿಸಿರುವ ಬಗ್ಗೆ ಅನುಮಾನವಿದ್ದು  ಪ್ರೊಫೆಸರ್ ಅಂಡ್ ಹೆಡ್  ಕೆಎಂಸಿ ಪೊರೆನ್ಸಿಕ್ ವಿಭಾಗರವರಿಂದ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಗಾಂಜಾ ಸೇವಿಸಿರುವ ಬಗ್ಗೆ ವೈಧ್ಯರು ದೃಢಪತ್ರ ನೀಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 99/2022 ಕಲಂ: 27(B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 24/05/2022 ರಂದು ಮಂಜುನಾಥ, ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರು ರೌಂಡ್ಸ್ ನಲ್ಲಿರುವಾಗ ಉಡುಪಿ ತಾಲೂಕು 76 ಬಡಗಬೆಟ್ಟು ಗ್ರಾಮದ ಮಹಿಷಮರ್ದಿನಿ ದೇವಸ್ಥಾನದ ಬಳಿ, ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ಸಮೀತ್ (22), ತಂದೆ: ಪ್ರಭಾಕರ, ವಾಸ:ಆರ್‌.ಸಿ ಶಾಲೆಯ ಹತ್ತೀರ, ಉದ್ಯಾವರ ಮೇಲ್‌ಪೇಟೆ ಕಾಪು ತಾಲೂಕು, ಉಡುಪಿ ಜಿಲ್ಲೆ ಎಂಬಾತನನ್ನು ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿದ್ದು,  ದಿನಾಂಕ 25/05/2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು ಸ್ವೀಕರಿಸಿದ್ದು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2022  ಕಲಂ: 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-05-2022 10:08 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080