Feedback / Suggestions

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಮಹಾಬಲ ಗೌಡ (35), ತಂದೆ:ಕೃಷ್ಣ ಗೌಡ,  ವಾಸ:ಕುರುಡ ಬೇರು,ಬೊಳಂಬಳ್ಳಿ ಕಾಲ್ತೋಡು ಗ್ರಾಮ,ಬೈಂದೂರು ತಾಲೂಕು ಇವರು ದಿನಾಂಕ 24/05/2021 ರಂದು ಸಂಜೆ 6:00 ಗಂಟೆಗೆ ಮನೆಯಲ್ಲಿರುವಾಗ ಪಿರ್ಯಾದಿದಾರರ ತಮ್ಮ ಸುರೇಶ ಮೊಬೈಲ್ ಕರೆ ಮಾಡಿ ಅಣ್ಣ ನಾಗರಾಜನು ಕಾಲ್ತೋಡಿನಿಂದ ಕಿರಿಮಂಜೇಶ್ವರ ಆಸ್ಪತ್ರೆಗೆ ರೋಗಿಯನ್ನು ಆತನ KA-20-AA-8994 ನೇದರ ಅಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಬಿಟ್ಟು ವಾಪಸ್ಸು ಮನೆಗೆ ಬರುವಾಗ ಬೈಂದೂರು ತಾಲೂಕು ಹೇರೂರು ಗ್ರಾಮದ ಯೆರುಕೋಣೆಯ ಆಲ್ಗದ್ದೆ ಕ್ರಾಸ್ ನ ರಸ್ತೆಯಲ್ಲಿ ಸಂಜೆ 4:30 ಗಂಟೆಗೆ ರಿಕ್ಷಾವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಹತೋಟಿ ತಪ್ಪಿ ರಿಕ್ಷಾ ಪಲ್ಟಿಯಾಗಿ ರಸ್ತೆಗೆ ಬಿದ್ದ  ಪರಿಣಾಮ ನಾಗರಾಜನಿಗೆ ತಲೆಗೆ ತೀವೃ ತರಹದ ಪೆಟ್ಟಾಗಿದ್ದು ಗಾಯಗೊಂಡ ನಾಗರಾಜನನ್ನು 108 ಅಂಬುಲೆನ್ಸ್ ನಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದು ಕೊಂಡು ಹೋಗುವಂತೆ ತಿಳಿಸಿದ್ದರಿಂದ ಆದರ್ಶ ಆಸ್ಪತ್ರೆಗೆ ದಾಖಲಿಸಿರುತ್ತೇನೆ ಎಂಬುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 95/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಶಂಕರ್ ಕುಮಾರ್ ಮೊಂಡಲ್ (37), ತಂದೆ: ಸ್ವಪನ್ ಕುಮಾರ್ ಮೊಂಡಲ್, ವಾಸ: ಹಸನಾಬಾದ್ ಗ್ರಾಮ, ಬಸಿರಾತ್ ತಾಲೂಕು, ನಾರ್ತ್‌24 ಪರಗಣಾಸ್ ಜಿಲ್ಲೆ, ಪಶ್ಚಿಮ ಬಂಗಾಳ ರಾಜ್ಯ ಇವರು  Under Water Service Company Ltd. Mumbai ಎಂಬ ಕಂಪನಿಯಲ್ಲಿ ಸೈಟ್ ಎಂಜಿನಿಯರ್ ಆಗಿದ್ದು, ಮಂಗಳೂರಿನ ಕೂಳೂರಿನಲ್ಲಿರುವ ಕಛೇರಿಯಲ್ಲಿ ಕೆಲಸ ಮಾಡುತ್ತಿರುವುದಾಗಿದೆ. ಈ ಕಂಪನಿಯಲ್ಲಿ ಪವನ್ ಚಾಂದ್ ಕಾಟೋಚ್, ನಸೀಮ್ ಅಹಮ್ಮದ್, ಝಿಬಾನುಲ್ ಹಕ್ ಮಂಡಲ್, ವನೀರುಲ್ಲಾ ಮುಲ್ಲಾ, ಕರಿಬುಲ್ ಶೇಖ್, ಮೈನುದ್ದೀನ್ ಶೇಖ್, ಅಶ್ಫಕ್ ಅಲಿ ಕಲ್ಬೆ(68) ಹಾಗೂ ಸೆಕ್ಯೂರಿಟಿ ಆಫೀಸರ್ ಹೇಮಕಾಂತ್ ಝಾ ಇವರು MRPL ಕಂಪನಿಗೆ ಹೊರದೇಶದಿಂದ ಹಡಗು ಮುಖಾಂತರ ಬರುವ ಕಚ್ಚಾ ತೈಲವನ್ನು NMPT ಯಿಂದ 20 ಕಿ.ಮೀ ದೂರ ಅರಬ್ಬೀ ಸಮುದ್ರದಲ್ಲಿ  ಇರುವ Single Point Moaring ಎಂಬ ಸ್ಥಳಕ್ಕೆ VS Marain Company  ಗೆ ಸೇರಿದ Alliance ಎಂಬ ಬೋಟಿನಲ್ಲಿ ದಿನಾಂಕ 13/05/2021 ರಂದು ಬೆಳಿಗ್ಗೆ 03:45 ಗಂಟೆಗೆ NMPT ಬಂದರಿನಿಂದ ತೆರಳಿ ಅಲ್ಲಿ ಕೆಲಸ ನಿರ್ವಹಿಸಿತ್ತಿದ್ದರು.  ಕೆಲಸಗಾರರಿಗೆ ಹವಾಮಾನ ವೈಪರೀತ್ಯ ಹಾಗೂ ಚಂಡಮಾರುತದ ಇರುವುದರಿಂದ ವಾಪಾಸ್ಸು ಬರುವಂತೆ ತಿಳಿಸಿದ್ದು ದಿನಾಂಕ 15/05/2021 ರಂದು ಬೆಳಿಗ್ಗೆ 08:30 ಗಂಟೆಯ ಬಳಿಕ ಈ ಮೇಲಿನ ಕೆಲಸಗಾರರು ಯಾರೂ ಸಂಪರ್ಕಕ್ಕೆ ಸಿಗದೇ ಇದ್ದು,  Alliance ಟಗ್‌ಬೋಟ್ ಅರಬ್ಬೀ ಸಮುದ್ರದಲ್ಲಿ ಚಂಡಮಾರುತದ ಅಲೆಗಳ ಹೊಡೆತಕ್ಕೆ ಮಗುಚಿ ಬಿದ್ದು ಪಡುಬಿದ್ರಿಯ ಬೀಚ್‌ ಬಳಿ ಕಾಡಿಪಟ್ನ ಎಂಬಲ್ಲಿ ಬಂದು ಬಿದ್ದಿರುತ್ತದೆ.  Alliance ಟಗ್ ಬೋಟನ್ನು ದಿನಾಂಕ 25/05/2021 ರಂದು ಬಿಲಾಲ್ ಬದ್ರಿಯಾ ತಂಡ ಹಾಗೂ ಯೋಜಕ್ ತಂಡದ ಜಂಟಿ ಕಾರ್ಯಾಚರಣೆಯಿಂದ ಮೇಲಕ್ಕೆತ್ತುವಾಗ ಬೆಳಿಗ್ಗೆ 09:00 ಗಂಟೆಗೆ ಟಗ್‌‌ನೊಳಗೆ ಅಶ್ಫಕ್ ಅಲಿ ಕಲ್ಪೆ ರವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ದೊರೆತಿರುತ್ತದೆ.  ಅಶ್ಫಕ್ ಅಲಿ ಕಲ್ಪೆ ಹಾಗೂ ಇತರ 7 ಜನ ಕೆಲಸಗಾರರು ಕೆಲಸ ಮುಗಿಸಿ ವಾಪಾಸ್ಸು NMPT ಬಂದರು ಕಡೆಗೆ  ಬರುತ್ತಿರುವ ಸಮಯ ಸಮುದ್ರದಲ್ಲಿ ಎಲ್ಲಿಯೋ ಚಂಡ ಮಾರುತದ ಗಾಳಿಯ ರಭಸಕ್ಕೆ ಅಥವಾ ಸಮುದ್ರದ ಅಲೆಗಳ ಹೊಡೆತಕ್ಕೆ ಬೋಟ್‌‌ಮಗುಚಿ ಬಿದ್ದು ಅದರೊಳಗೆ ಸಿಲುಕಿ  ಅಶ್ಫಕ್ ಅಲಿ ಕಲ್ಪೆ  ರವರು  ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2021, ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಶಂಕರನಾರಾಯಣ: ದಿನಾಂಕ 25/05/2021 ರಂದು 14:30 ಗಂಟೆಗೆ ಪಿರ್ಯಾದಿದಾರರಾದ ದೇವೆಂದ್ರ ನಾಯ್ಕ    (38), ತಂದೆ: ಮಲ್ಲು  ನಾಯ್ಕ, ವಾಸ: ಸಾಣಿಗೇರಿ  ಹೆಂಗವಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರು  ಕುಂದಾಪುರ ತಾಲೂಕು  ಹೆಂಗವಳ್ಳಿ ಗ್ರಾಮದ  ಇರಿಗೆ ಎಂಬಲ್ಲಿ  ಆರೋಪಿ ಕೃಷ್ಣ ನಾಯ್ಕ ಇವರ  ಮನೆಯ  ಎದುರುಗಡೆ ಮಣ್ಣು   ರಸ್ತೆಯಲ್ಲಿ ನಡೆದುಕೊಂಡು  ಹೋಗುತ್ತಿರುವಾಗ  ಆರೋಪಿಯ  ನನ್ನ ಮನೆಯ  ಎದುರುಗಡೆಯ   ದಾರಿಯಲ್ಲಿ  ತಿರುಗಾಡ  ಬೇಡ ಎಂದು ಹೇಳಿದರು ಯಾಕೆ ನೀವು ತಿರುಗಾಡುವುದು ಎಂದು ಕೇಳಿದ್ದು, ಈ ಸಮಯ ಪಿರ್ಯಾದಿದಾರರು ನಮಗೆ ತಿರುಗಾಡಲು ಬೇರೆ ದಾರಿ ಇಲ್ಲ ಅದಕ್ಕೆ ತಿರುಗಾಡುವುದು ಈಗ ಒಂದು ವಾರದ ಹಿಂದೆ    ನನ್ನ ಮಗಳು ಇದೇ  ದಾರಿಯಲ್ಲಿ  ಹೋಗುತ್ತಿರುವಾಗ  ನೀನು ಯಾಕೇ  ಅವಳಿಗೆ   ಹೊಡೆದಿದ್ದು ಎಂದು ಕೇಳಿದಕ್ಕೆ  ಆರೋಪಿಯು ಕೋಪಗೊಂಡು ಒಂದು  ಮರದ  ದೊಣ್ಣೆಯಿಂದ ಪಿರ್ಯಾದಿದಾರರ ತಲೆಗೆ ಹೊಡೆದು  ಬೆದರಿಕೆ  ಹಾಕಿರುತ್ತಾನೆ, ಆರೋಪಿಯು   ದೊಣ್ಣೆಯಿಂದ  ಹಲ್ಲೆ ಮಾಡಿದ್ದರಿಂದ ಪಿರ್ಯಾದಿದಾರರ  ತಲೆಗೆ ರಕ್ತಗಾಯವಾಗಿದ್ದು, ಈ ಬಗ್ಗೆ  ಬೆಳ್ವೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 59/2021 ಕಲಂ: 324,504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾರ್ಕಳ: ಪಿರ್ಯಾದಿದಾರರಾದ ಡಾ. ಎಸ್‌  ಸತೀಶ್‌‌, ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಚ್ಚೇರಿಪೇಟೆ, ಮುಂಡ್ಕೂರು ಗ್ರಾಮ ಇವರು  ಪ್ರಾಥಮಿಕ ಆರೋಗ್ಯ ಕೇಂದ್ರ, ಸಚ್ಚೇರಿಪೇಟೆ, ಮುಂಡ್ಕೂರು ಗ್ರಾಮ ಇದರ ವೈದ್ಯಾಧಿಕಾರಿಯಾಗಿದ್ದು  ನವದುರ್ಗ ರೈಸ್ ಮಿಲ್‌ ಸಚ್ಚೇರಿಪೇಟೆ ಇಲ್ಲಿ ಕೋವಿಡ್‌ -19 ಪ್ರಾಥಮಿಕ ಸಂಪರ್ಕಿತರಲ್ಲಿ ಓರ್ವರಾದ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆ, ಪಿಲಿಮಂಡೆ ವಾಸಿ ಜಯಂತ್‌ ಇವರಿಗೆ ದಿನಾಂಕ 22/05/2021 ರಂದು RTPCR report POSITIVE ಬಂದಿರುತ್ತದೆ. ಹೋಮ್‌ ಐಸೋಲೇಸನ್‌ ಇದ್ದ ಅವಧಿಯಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೇ ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ: 07/06/2021 ರವೆರೆಗೆ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಕೋವಿಡ್‌ ಕಾಯ್ದೆಯನ್ನು ಉ್ಲಲಂಘನೆ ಮಾಡಿ ಆಳ್ವಾಸ್‌ ಆಸ್ಪತ್ರೆ ಮೂಡಬಿದಿರೆ ಇಲ್ಲಿ 22/05/2021 ರಂದು RAT ಪರೀಕ್ಷೆ ನಡೆಸಿ ನೆಗೆಟಿವ್‌ ವರದಿ ಪಡೆದಿರುತ್ತಾರೆ. ತದನಂತರ  ಜಯಂತ್‌ರವರ ಪತ್ನಿ ಪಿರ್ಯಾದಿದಾರರಿಗೆ  ದೂರವಾಣಿ ಕರೆ ಮಾಡಿ ವಿನಾಕಾರಣ    ಆಪಾದನೆ ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64/2021 ಕಲಂ: 269, 270, 271, 504  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ದಿನಾಂಕ 25/05/2021 ರಂದು ಸಕ್ತಿವೇಲು ಈ, ಪೊಲೀಸ್ ಉಪನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ ಇವರು ಹೂಡೆ ಯಲ್ಲಿ  ರೌಂಡ್ಸ್ ನಲ್ಲಿರುವ  ಸಮಯ ಕೆಮ್ಮಣ್ಣು ಸಿಂಡಿಕೇಟ್ ಬ್ಯಾಂಕ್ ಬಳಿ  ಇರುವ  ಸ್ನೇಹ ಟೆಕ್ಸ್ ಟೈಲ್ಸ್ ಕೆಮ್ಮಣ್ಣು ಬಟ್ಟೆ ಅಂಗಡಿಯಲ್ಲಿ  ಮುಂಜಾಗೃತಾ ಕ್ರಮವಾಗಿ ಯಾವುದೇ ಮಾಸ್ಕ, ಗ್ಲೌಸ್ ಹಾಕದೇ ಹಾಗೂ ಸಾಮಾಜಿಕ ಅಂತರವನ್ನು  ಕಾಯ್ದುಕೊಳ್ಳದೆ ,ಬಟ್ಟೆ ಅಂಗಡಿಯನ್ನು ತೆರೆಯದಂತೆ ಆದೇಶವಿದ್ದರೂ ಸಹ ಆದೇಶವನ್ನು ಉಲ್ಲಂಘಿಸಿ ಬಟ್ಟೆ ಮಾರಾಟ ಮಾಡುತ್ತಿರುವುದು  ಕಂಡು ಬರುವುದನ್ನು ಗಮನಿಸಿ ಬಟ್ಟೆ ಅಂಗಡಿಯ  ಒಳಗಡೆ ತೆರಳಿ ಬಟ್ಟೆ ತೆಗೆದುಕೊಳ್ಳಲು ಬಂದಿದ್ದವರನ್ನು ವಿಚಾರಿಸಲಾಗಿ  1)ಸಚಿನ್  ಜತ್ತನ್,  2)ಅನಿಲ್ ಎಂಬುದಾಗಿ ತಿಳಿಸಿದ್ದು ಗ್ರಾಹಕರಿಗೆ ಅಂಗಡಿ ಒಳಗಡೆ ಮುಖಕ್ಕೆ ಮಾಸ್ಕ ಧರಿಸದೇ ನಿಷೇದಾಜ್ಞೆ ಯನ್ನು ಉಲ್ಲಂಘಿಸಿ ಅಂಗಡಿಯೊಳಗೆ ಬಟ್ಟೆ ಮಾರಾಟ ಮಾಡುತ್ತಿದ್ದವರ ಹೆಸರು ವಿಳಾಸ ವಿಚಾರಿಸಲಾಗಿ ಸುದೇಶ ಸಾಲಿಯಾನ್ (50) , ತಂದೆ :ದಿವಂಗತ ದೇಜ ಬೆಳ್ಚಡ, ವಾಸ : ಹರಹರಿ ತಾಳೆಹಿತ್ಲು ಕೆಮ್ಮಣ್ಣು ಪಡುತೋನ್ಸೆ ಗ್ರಾಮ ಉಡುಪಿ ತಾಲೂಕು ಎಂದು ತಿಳಿಸಿದ್ದು , ವ್ಯಕ್ತಿ ಮಾರಣಾಂತಿಕ ಕೋವಿಡ್ 19 ಸೋಂಕನ್ನು ಸಾರ್ವಜನಿಕರಿಗೆ ಹರಡುವ ಸಂಭವ ವಿರುವುದರಿಂದ ಸಾರ್ವಜನಿಕರ ಹಿತದೃಷ್ಠಿಯಿಂದ ಸರಕಾರದ ಸ್ವಷ್ಟ ಆದೇಶವಿದ್ದರೂ ಸಹಾ ಆದೇಶವನ್ನು ಪಾಲಿಸದೆ ಸ್ವೆಚ್ಛಾಚಾರದಿಂದ ಹಾಗೂ ನಿರ್ಲಕ್ಷ್ಯತನದಿಂದ ಬಟ್ಟೆ ಅಂಗಡಿಯಲ್ಲಿ  ಮಾಸ್ಕ  ಹಾಗೂ ಗ್ಲೌಸ್ ಧರಿಸದೇ  ಬಟ್ಟೆ ಮಾರಾಟ ಮಾಡಿ ಕಾನೂನು ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2021  ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ಕೋವಿಡ್ ಕರ್ಪ್ಯೂ ವಿಧಿಸಿದ್ದು ಕರ್ಪ್ಯೂ ಜ್ಯಾರಿಗೊಳಿಸುವ ಬಗ್ಗೆ ಆದೇಶ ಹೊರಡಿಸಿದ್ದು ಈ ಬಗ್ಗೆ  ದಿನಾಂಕ 25/05/2021 ರಂದು ಸದಾಶಿವ ಆರ್ ಗವರೋಜಿ, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಕುಂದಾಪುರ ತಾಲೂಕು ಕುಂದಾಪುರ ಕಸಬಾ ಗ್ರಾಮ ಮೀನು ಮಾರ್ಕೆಟ್ ರಸ್ತೆಯಲ್ಲಿ ವಾಹನ ತಪಾಸಣೆ ಕರ್ತವ್ಯದಲ್ಲಿರುವಾಗ 19:00 ಗಂಟೆಯಿಂದ 19:30 ಗಂಟೆಯ ಮಧ್ಯಾವಧಿಯಲ್ಲಿ  ಮೀನು ಮಾರ್ಕೆಟ್ ರಸ್ತೆಯ ಮೂಲಕ ಕೆಲವೊಂದು ವಾಹನಗಳನ್ನು  ಅದರ ಸವಾರರು ಚಲಾಯಿಸಿಕೊಂಡು ಬರುತ್ತಿದ್ದನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ  ಈ ಕೆಳಕಂಡ ವಾಹನಗಳನ್ನು ಸವಾರರು ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. 1) KA 20 EW 7839 ದ್ವಿಚಕ್ರ ವಾಹನ ಸವಾರ: ಅನಿಲ್ ಕುಮಾರ್ (43) ತಂದೆ: ಎಸ್ ಅಮ್ಮಣ್ಣ, ವಾಸ: ಮೀನು ಮಾರ್ಕೆಟ್ ರಸ್ತೆ, ಕುಂದಾಪುರ ಕಸಬಾ ಗ್ರಾಮ ಕುಂದಾಪುರ ತಾಲೂಕು, 2) KA EC 6970 ದ್ವಿಚಕ್ರ ವಾಹನ ಸವಾರ:  ಪ್ರಸಾದ್, 30 ವರ್ಷ, ತಂದೆ: ಗೋವರ್ಧನ್ ಗಾಣಿಗ, ವಾಸ: ನಾಗ ಬೊಬ್ಬರ್ಯ ದೇವಸ್ಥಾನ ಹತ್ತಿರ, ಮೀನು ಮಾರ್ಕೆಟ್ ರಸ್ತೆ, ಕುಂದಾಪುರ ಕಸಬಾ ಗ್ರಾಮ ಕುಂದಾಪುರ ತಾಲೂಕು, 3) KA 20 S 2256 ದ್ವಿಚಕ್ರ ವಾಹನ, ಸವಾರ: ಸುಖ್ ಪಾಲ್ ಖಾರ್ವಿ, 38 ವರ್ಷ, ತಂದೆ: ಮಂಜುನಾಥ್ ಖಾರ್ವಿ, ವಾಸ: ಗಂಗೊಳ್ಳಿ, ಕುಂದಾಪುರ ತಾಲೂಕು ಮೇಲ್ಕಂಡ ವಾಹನ ಸವಾರರು ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಯವರು ಉಡುಪಿ ಜಿಲ್ಲೆ ಉಡುಪಿ ಇವರು ದಿನಾಂಕ 24/05/2021ರ ಬೆಳಿಗ್ಗೆ 6:00 ಗಂಟೆಯಿಂದ ದಿನಾಂಕ 07/06/2021 ರ ಬೆಳಿಗ್ಗೆ 6:00 ಗಂಟೆಯವರೆಗೆ ಉಡುಪಿ ಜಿಲ್ಲಾದ್ಯಾಂತ ಸಿ.ಆರ್.ಪಿ.ಸಿ ಸೆಕ್ಷನ್ 144(3) ಅನ್ನು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಅನ್ವಯವಾಗುವಂತೆ ಮಾರ್ಗಸೂಚಿಗಳನ್ನು ಹೊರಡಿಸಿ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿರುತ್ತಾರೆ. ಆದೇಶದಲ್ಲಿ ಸ್ಟೀಲ್ ಪಾತ್ರೆ, ಪ್ಲಾಸ್ಕು, ಪ್ಲಾಸ್ಟಿಕ್ ಬಕೆಟ್, ಮಗ್ಗು ಒಟ್ಟಾರೆ ಗೃಹ ಉಪಯೋಗಿ ಸಲಕರಣೆಗಳನ್ನು ಮಾರಾಟ ಮಾಡಲು ನಿಷೇಧ ಇರುತ್ತದೆ. ದಿನಾಂಕ 25/05/2021 ರಂದು ಪುರಂದರ, ತಹಶೀಲ್ದಾರರು ಹೆಬ್ರಿ ತಾಲೂಕು ಇವರು  ಸಿಬ್ಬಂದಿಯವರೊಂದಿಗೆ ಹೆಬ್ರಿ ಪಟ್ಟಣದಲ್ಲಿ ಅನುಮತಿಸದೇ ಇರುವ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿರುವ ಬಗ್ಗೆ ಪರಿಶೀಲನೆಗೆ ತೆರಳಿದ್ದು ಬೆಳಿಗ್ಗೆ 8.25 ಗಂಟೆಗೆ ಹೆಬ್ರಿ ಕುಚ್ಚೂರು ರಸ್ತೆಯಲ್ಲಿ ಹೋಗುತ್ತಿರುವಾಗ ಅಂಗಡಿ ಹೆಸರು “ಶೆಣೈ ಟ್ರೇಡರ್ಸ್”ನ ಮಾಲೀಕರಾದ ಶಶಿಧರ ಶೆಣೈ ಇವರು ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಾ ಇರುವುದು ಕಂಡು ಬರುತ್ತದೆ. ಅಂಗಡಿಯಲ್ಲಿ ಶೇಕಡಾ 90 % ಸ್ಟೀಲ್ ಪಾತ್ರೆ, ಪ್ಲಾಸ್ಕು, ಪ್ಲಾಸ್ಟಿಕ್ ಬಕೆಟ್, ಮಗ್ಗು ಒಟ್ಟಾರೆ ಗೃಹ ಉಪಯೋಗಿ ಸಲಕರಣೆಗಳು ಇದ್ದು, ಮಾನ್ಯ ಜಿಲ್ಲಾಧಿಕಾರಿಗಳು ಜಾರಿಗೊಳಿಸಿರುವ ಆದೇಶದಲ್ಲಿ ಸ್ಟೀಲ್ ಪಾತ್ರೆ, ಪ್ಲಾಸ್ಕು, ಪ್ಲಾಸ್ಟಿಕ್ ಬಕೆಟ್, ಮಗ್ಗು ಒಟ್ಟಾರೆ ಗೃಹ ಉಪಯೋಗಿ ಸಲಕರಣೆಗಳನ್ನು ಮಾರಾಟ ಮಾಡಲು ಅನುಮತಿಸಲಾಗಿರುವುದಿಲ್ಲ. ಮಾನ್ಯ ಜಿಲ್ಲಾಧಿಕಾರಿಗಳು ಕೋವೀಡ್ -19 ನ 2 ನೇ ಅಲೆಯ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ಹೊರಡಿಸಿರುವ ಅದೇಶದ ವಿಚಾರ ಮೇಲಿನ ಅಂಗಡಿಯ ಮಾಲಕರಿಗೆ ತಿಳಿದಿದರೂ ಕೂಡಾ  ಅಂಗಡಿಯನ್ನು ತೆರೆದು ವ್ಯಾಪಾರ ಮಾಡಿ ಮಾನ್ಯ ಜಿಲ್ಲಾಧಿಕಾರಿ ರವರ ಅದೇಶವನ್ನು ಉಲ್ಲಂಘನೆ ಮಾಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2021 ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ದಿನಾಂಕ 24/05/2021 ರಬೆಳಿಗ್ಗೆ 6:00 ಗಂಟೆಯಿಂದ ದಿನಾಂಕ 07/06/2021ರ ಬೆಳಿಗ್ಗೆ 6:00 ಗಂಟೆಯವರಗೆ ಉಡುಪಿ ಜಿಲ್ಲಾದ್ಯಾಂತ ಸಿ.ಆರ್.ಪಿ.ಸಿ ಸೆಕ್ಷನ್ 144(3) ಅನ್ನು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಅನ್ವಯ ವಾಗುವಂತೆ ಮಾರ್ಗಸೂಚಿಗಳನ್ನು ಹೊರಡಿಸಿ, ನಿಷೇದಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿರುತ್ತಾರೆ. ಆದೇಶದಲ್ಲಿ FRIDGE, ಪ್ಯಾನ್, ಮಿಕ್ಸಿ, ಕುಕ್ಕರ್, ಟಿವಿ ಇತರೆ ಗೃಹಾಪಯೋಗಿ ಯಂತ್ರೋಪಕರಣಗಳನ್ನು ಮಾರಾಟ ಮಾಡಲು ನಿಷೇಧ ಇರುತ್ತದೆ. ದಿನಾಂಕ 25/05/2021 ರಂದು ಕೆ.ಪುರಂದರ, ತಹಶೀಲ್ದಾರರು ಹೆಬ್ರಿ ತಾಲೂಕು ಇವರು ಸಿಬ್ಬಂದಿಯವರೊಂದಿಗೆ ಹೆಬ್ರಿ ಪಟ್ಟಣದಲ್ಲಿ ಅನುಮತಿಸದೇ ಇರುವ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿರುವ ಬಗ್ಗೆ ಪರಿಶೀಲನೆಗೆ ತೆರಳಿದ್ದು ಬೆಳಿಗ್ಗೆ 8:35 ಗಂಟೆಗೆ ಹೆಬ್ರಿ ಆಗುಂಬೆ ರಸ್ತೆಯಲ್ಲಿ ಹೋಗುತ್ತಿರುವಾಗ ಅಂಗಡಿ ಹೆಸರು “ಅಶ್ವಿನಿ ಇಲೆಕ್ಟ್ರಾನಿಕ್ಸ್” ನ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಾ ಇರುವುದು ಕಂಡು ಬಂದಿದ್ದು, ಅಂಗಡಿಯಲ್ಲಿದ್ದ ಶ್ರೀಮತಿ ಅರ್ಚನಾ ಇವರು ಮೌಖಿಕವಾಗಿ ತಿಳಿಸಿ ತನ್ನ ಪತಿ ಚೇತನ್ ಭಟ್ ಇವರ ಹೆಸರಿನಲ್ಲಿ ಟ್ರೇಡ್ ಲೈಸೆನ್ಸ್ ಇರುವುದಾಗಿ ಹೇಳಿರುತ್ತಾರೆ. ಅಂಗಡಿಯಲ್ಲಿ FRIDGE, ಪ್ಯಾನ್, ಮಿಕ್ಸಿ, ಕುಕ್ಕರ್, ಟಿವಿ ಇತರೆ ಗೃಹಾಪಯೋಗಿ ಯಂತ್ರೋಪಕರಣಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಮಾನ್ಯ ಜಿಲ್ಲಾಧಿಕಾರಿಗಳು ಜಾರಿಗೊಳಿಸಿರುವ ಆದೇಶದಲ್ಲಿ FRIDGE, ಪ್ಯಾನ್, ಮಿಕ್ಸಿ, ಕುಕ್ಕರ್, ಟಿವಿ ಇತರೆ ಗೃಹಾಪಯೋಗಿ ಯಂತ್ರೋಪಕರಣಗಳನ್ನು ಮಾರಾಟ ಮಾಡಲು ಅನುಮತಿಸಲಾಗಿರುವುದಿಲ್ಲ. ಮಾನ್ಯ ಜಿಲ್ಲಾಧಿಕಾರಿಗಳು  ಕೋವೀಡ್ -19 ನ 2 ನೇ ಅಲೆಯ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ಹೊರಡಿಸಿರುವ ಅದೇಶದ ವಿಚಾರ ಮೇಲಿನ ಅಂಗಡಿಯ ಮಾಲಕರಿಗೆ ತಿಳಿದಿದರೂ ಕೂಡಾ ಅಂಗಡಿಯನ್ನು ತೆರೆದು ವ್ಯಾಪಾರ ಮಾಡಿ ಮಾನ್ಯ ಜಿಲ್ಲಾಧಿಕಾರಿ ರವರ ಅದೇಶವನ್ನು ಉಲ್ಲಂಘನೆ ಮಾಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021 ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ದಿನಾಂಕ 24/05/2021 ರಬೆಳಿಗ್ಗೆ 6:00 ಗಂಟೆಯಿಂದ ದಿನಾಂಕ 07/06/2021ರ ಬೆಳಿಗ್ಗೆ 6:00 ಗಂಟೆಯವರಗೆ ಉಡುಪಿ ಜಿಲ್ಲಾದ್ಯಾಂತ ಸಿ.ಆರ್.ಪಿ.ಸಿ ಸೆಕ್ಷನ್ 144(3) ಅನ್ನು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಅನ್ವಯ ವಾಗುವಂತೆ ಮಾರ್ಗಸೂಚಿಗಳನ್ನು ಹೊರಡಿಸಿ, ನಿಷೇದಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿರುತ್ತಾರೆ. ದಿನಾಂಕ 25/05/2021 ರಂದು ಕೆ.ಪುರಂದರ, ತಹಶೀಲ್ದಾರರು ಹೆಬ್ರಿ ತಾಲೂಕು ಇವರು ಸಿಬ್ಬಂದಿಯವರೊಂದಿಗೆ ಹೆಬ್ರಿ ಪಟ್ಟಣದಲ್ಲಿ ಅನುಮತಿಸದೇ ಇರುವ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿರುವ ಬಗ್ಗೆ ಪರಿಶೀಲನೆಗೆ ತೆರಳಿದ್ದು ಬೆಳಿಗ್ಗೆ 8:39 ಗಂಟೆಗೆ ಹೆಬ್ರಿ ಆಗುಂಬೆ ರಸ್ತೆಯಲ್ಲಿ ಹೋಗುತ್ತಿರುವಾಗ ಅಂಗಡಿ ಹೆಸರು “ದುರ್ಗಾಪರಮೇಶ್ವರಿ ಮೊಬೈಲ್ ಕೇರ್ ” ನ ಮಾಲೀಕರಾದ  ಜಯಂತ್ ಬಿ ಶೆಟ್ಟಿ ಇವರು ವ್ಯಾಪಾರ ಮಾಡಲು ಅಂಗಡಿಯನ್ನು ತೆರೆದಿರುವುದು ಕಂಡುಬರುತ್ತದೆ. ಅಂಗಡಿಯಲ್ಲಿ ಮೊಬೈಲ್ ಪೋನ್ ಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಉಪಕರಣಗಳು ಇರುವುದು ಕಂಡು ಬಂದಿದ್ದು . ಮಾನ್ಯ ಜಿಲ್ಲಾಧಿಕಾರಿಗಳು ಜಾರಿಗೊಳಿಸಿ ರುವ ಆದೇಶದಲ್ಲಿ ಮೊಬೈಲ್ ಪೋನ್ ಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಉಪಕರಣಗಳು ಮಾರಾಟ ಮಾಡಲು ಅನುಮತಿಸಲಾಗಿರುವುದಿಲ್ಲ. ಮಾನ್ಯ ಜಿಲ್ಲಾಧಿಕಾರಿಗಳು  ಕೋವೀಡ್ -19 ನ 2 ನೇ ಅಲೆಯ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ಹೊರಡಿಸಿರುವ ಅದೇಶದ ವಿಚಾರ ಅಂಗಡಿಯ ಮಾಲಕರಿಗೆ ತಿಳಿದಿದರೂ ಕೂಡಾ ಅಂಗಡಿಯನ್ನು ತೆರೆದು ಮಾನ್ಯ ಜಿಲ್ಲಾಧಿಕಾರಿರವರ ಅದೇಶವನ್ನು ಉಲ್ಲಂಘನೆ ಮಾಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 35/2021 ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ದಿನಾಂಕ 24/05/2021 ರಬೆಳಿಗ್ಗೆ 6:00 ಗಂಟೆಯಿಂದ ದಿನಾಂಕ 07/06/2021ರ ಬೆಳಿಗ್ಗೆ 6:00 ಗಂಟೆಯವರಗೆ ಉಡುಪಿ ಜಿಲ್ಲಾದ್ಯಾಂತ ಸಿ.ಆರ್.ಪಿ.ಸಿ ಸೆಕ್ಷನ್ 144(3) ಅನ್ನು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಅನ್ವಯ ವಾಗುವಂತೆ ಮಾರ್ಗಸೂಚಿಗಳನ್ನು ಹೊರಡಿಸಿ, ನಿಷೇದಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿರುತ್ತಾರೆ. . ದಿನಾಂಕ 25/05/2021 ರಂದು ಕೆ.ಪುರಂದರ, ತಹಶೀಲ್ದಾರರು ಹೆಬ್ರಿ ತಾಲೂಕು ಇವರು ಸಿಬ್ಬಂದಿಯವರೊಂದಿಗೆ ಹೆಬ್ರಿ ಪಟ್ಟಣದಲ್ಲಿ ಅನುಮತಿಸದೇ ಇರುವ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿರುವ ಬಗ್ಗೆ ಪರಿಶೀಲನೆಗೆ ತೆರಳಿದ್ದು ಬೆಳಿಗ್ಗೆ 9:10 ಗಂಟೆಗೆ ಹೆಬ್ರಿ ಆಗುಂಬೆ ರಸ್ತೆಯಲ್ಲಿ ಹೋಗುತ್ತಿರುವಾಗ ಅಂಗಡಿ ಹೆಸರು “ಶ್ರೀ ಮಾನಸ ಟ್ರೇಡರ್ಸ್” ನ ಮಾಲೀಕರಾದ ಎಸ್ ವೆಂಕಟರಮಣ ಭಕ್ತ ಇವರು ವ್ಯಾಪಾರ ಮಾಡಲು ಅಂಗಡಿಯನ್ನು ತೆರೆದಿರುವುದು ಕಂಡು ಬಂದಿದ್ದು. ಅಂಗಡಿಯಲ್ಲಿ ಗ್ಲಾಸ್ ಪೈವುಡ್ ಇರುವುದು ಕಂಡುಬರುತ್ತದೆ ಮಾನ್ಯ ಜಿಲ್ಲಾಧಿಕಾರಿಗಳು ಜಾರಿಗೊಳಿಸಿರುವ ಆದೇಶದಲ್ಲಿ ಗ್ಲಾಸ್ ಪೈವುಡ್ ಉಪಕರಣಗಳನ್ನು ಮಾರಾಟ ಮಾಡಲು ಅನುಮತಿಸಲಾಗಿರುವುದಿಲ್ಲ. ಮಾನ್ಯ ಜಿಲ್ಲಾಧಿಕಾರಿ ರವರು  ಕೋವೀಡ್ -19 ನ 2 ನೇ ಅಲೆಯ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ಹೊರಡಿಸಿರುವ ಅದೇಶದ ವಿಚಾರ ಅಂಗಡಿಯ ಮಾಲಕರಿಗೆ ತಿಳಿದಿದರೂ ಕೂಡಾ ಅಂಗಡಿಯನ್ನು ತೆರೆದು ಮಾನ್ಯ ಜಿಲ್ಲಾಧಿಕಾರಿ ರವರ ಅದೇಶವನ್ನು ಉಲ್ಲಂಘನೆ ಮಾಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2021 ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ದಿನಾಂಕ 24/05/2021 ರಬೆಳಿಗ್ಗೆ 6:00 ಗಂಟೆಯಿಂದ ದಿನಾಂಕ 07/06/2021ರ ಬೆಳಿಗ್ಗೆ 6:00 ಗಂಟೆಯವರಗೆ ಉಡುಪಿ ಜಿಲ್ಲಾದ್ಯಾಂತ ಸಿ.ಆರ್.ಪಿ.ಸಿ ಸೆಕ್ಷನ್ 144(3) ಅನ್ನು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಅನ್ವಯ ವಾಗುವಂತೆ ಮಾರ್ಗಸೂಚಿಗಳನ್ನು ಹೊರಡಿಸಿ, ನಿಷೇದಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿರುತ್ತಾರೆ. ದಿನಾಂಕ 25/05/2021 ರಂದು ಕೆ.ಪುರಂದರ, ತಹಶೀಲ್ದಾರರು ಹೆಬ್ರಿ ತಾಲೂಕು ಇವರು ಸಿಬ್ಬಂದಿಯವರೊಂದಿಗೆ ಹೆಬ್ರಿ ಪಟ್ಟಣದಲ್ಲಿ ಅನುಮತಿಸದೇ ಇರುವ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿರುವ ಬಗ್ಗೆ ಪರಿಶೀಲನೆಗೆ ತೆರಳಿದ್ದು ಬೆಳಿಗ್ಗೆ ಬೆಳಿಗ್ಗೆ 9:07 ಗಂಟೆಗೆ ಹೆಬ್ರಿ ಉಡುಪಿ ರಸ್ತೆಯಲ್ಲಿ ಹೋಗುತ್ತಿರುವಾಗ ಅಂಗಡಿ ಹೆಸರು “ತುಳಸಿ ಎಲೆಕ್ರ್ಟಾನಿಕ್ಸ್” ನ ಮಾಲೀಕರಾದ ದಿನೇಶ್ ನಾಯ್ಕ ಇವರು ವ್ಯಾಪಾರ ಮಾಡಲು ಅಂಗಡಿಯನ್ನು ತೆರೆದಿರುವುದು ಕಂಡು ಬರುತ್ತದೆ. ಅಂಗಡಿಯಲ್ಲಿ FRIDGE, ಪ್ಯಾನ್, ಮಿಕ್ಸಿ, ಕುಕ್ಕರ್, ಟಿವಿ ಇತರೆ ಗೃಹಾಪಯೋಗಿ ಯಂತ್ರೋಪಕರಣಗಳು ಇರುವುದು ಕಂಡುಬರುತ್ತದೆ. ಮಾನ್ಯ ಜಿಲ್ಲಾಧಿಕಾರಿಗಳು ಜಾರಿಗೊಳಿಸಿರುವ ಆದೇಶದಲ್ಲಿ FRIDGE, ಪ್ಯಾನ್, ಮಿಕ್ಸಿ, ಕುಕ್ಕರ್, ಟಿವಿ ಇತರೆ ಗೃಹಾಪಯೋಗಿ ಯಂತ್ರೋಪಕರಣಗಳನ್ನು ಮಾರಾಟ ಮಾಡಲು ಅನುಮತಿಸಲಾಗಿರುವುದಿಲ್ಲ. ಮಾನ್ಯ ಜಿಲ್ಲಾಧಿಕಾರಿ ರವರು ಕೋವೀಡ್ -19 ನ 2 ನೇ ಅಲೆಯ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ಹೊರಡಿಸಿರುವ ಅದೇಶದ ವಿಚಾರ ಮೇಲಿನ ಅಂಗಡಿಯ ಮಾಲಕರಿಗೆ ತಿಳಿದಿದರೂ ಕೂಡಾ ಅಂಗಡಿಯನ್ನು ತೆರೆದು ಮಾನ್ಯ ಜಿಲ್ಲಾಧಿಕಾರಿ ರವರ ಅದೇಶವನ್ನು ಉಲ್ಲಂಘನೆ ಮಾಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2021 ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.



Last Updated: 26-05-2021 09:48 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080