ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಉಮೇಶ ಆಚಾರ್ಯ (49), ತಂದೆ; ಸುಬ್ರಾಯ ಆಚಾರ್ಯ, ವಾಸ;  ಶ್ರೀ ಕಾಳಿಕಾಂಬ ನಿಲಯ, ಜೋಡುಕಟ್ಟೆ, ಗುಡ್ಡೆಯಂಗಡಿ ಅಂಚೆ,ಬೊಮ್ಮರಬೆಟ್ಟು ಗ್ರಾಮ, ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 25/04/2023 ರಂದು ಬೆಳಿಗ್ಗೆ 08:30 ಗಂಟೆಗೆ ತನ್ನ KA-20-Y-5023 ನೇ ನೋಂದಣಿ ಸಂಖ್ಯೆಯ ಆ್ಯಕ್ಟಿವಾ ಹೋಂಡಾ ಸ್ಕೂಟಿಯಲ್ಲಿ ಸಾಣೂರಿನಿಂದ ಹೊರಟು, ಪುಲ್ಕೇರಿ –ಜೋಡುರಸ್ತೆ ರಾಜ್ಯ ರಸ್ತೆಯ ಮೂಲಕ ಸವಾರಿ ಮಾಡಿಕೊಂಡು ಹೋಗುತ್ತಾ 08:45 ಗಂಟೆಗೆ ಕಾರ್ಕಳ ತಾಲೂಕು ಕಾರ್ಕಳ ಕಸಬಾ ಗ್ರಾಮದ ಕೃಷ್ಣ ಮಂದಿರ ಜಂಕ್ಷನ್‌ ‌ತಲುಪುವಾಗ, ಆನೆಕೆರೆ ಕಡೆಯಿಂದ ಕುಂಟಲ್ಪಾಡಿ ಕಡೆಗೆ ಮಾರುತಿ ವ್ಯಾಗನರ್‌‌ ಕಾರು ನಂಬ್ರ KA-20-ME-5527 ನೇಯದನ್ನು ಅದರ ಚಾಲಕನು ಮುಖ್ಯ ರಸ್ತೆಗೆ ಬರುವ ಸಮಯ ಬ್ರೇಕ್‌ ಹಾಕದೇ ಅತೀವೇಗ ಹಾಗೂ ನಿರ್ಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟಿಗೆ  ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಎಡಕೈಯ ಮಣಿಗಂಟು ಮತ್ತು ಎಡಕಾಲಿನ ಮಂಡಿಗೆ ರಕ್ತ ಗಾಯವಾಗಿದ್ದು, ಗಾಯಗೊಂಡ ಉಮೇಶ್ ಆಚಾರ್ಯರವರು  ಚಿಕಿತ್ಸೆಯ ಬಗ್ಗೆ ಕಾರ್ಕಳದ ನಿಟ್ಟೆ ಗಾಜ್ರಿಯಾ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ  ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 53/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಜಗನ್ನಾಥ ಮಡಿವಾಳ (51), ತಂದೆ: ದಿ. ಸೂರು ಮಡಿವಾಳ, ವಾಸ: ಬೀಚಿ ನಿವಾಸ, ಭಾಸ್ಕರನಗರ, ಉಚ್ಚಿಲ, ಬಡಾ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಅಣ್ಣ ಗೋವಿಂದ ಮಡಿವಾಳ (58) ಎಂಬುವವರು ಈ ಹಿಂದೆ ಬಟ್ಟೆಗಳಿಗೆ ಇಸ್ತ್ರಿ ಹಾಕುವ ಕೆಲಸ ಮಾಡಿಕೊಂಡಿದ್ದು, ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು, ಅವರಿಗೆ ಇತ್ತೀಚೆಗೆ ಅಸೌಖ್ಯ ಉಂಟಾಗಿ ಕೆಲಸ ಮಾಡಲು ಆಗದೇ ಮನೆಯಲ್ಲಿ ಇದ್ದವರು, ನಿತ್ರಾಣಗೊಂಡವರಿಗೆ ಸ್ಥಳೀಯ ವೈದ್ಯರಲ್ಲಿ ಮದ್ದು ಕೊಡಿಸುತ್ತಿದ್ದು, ಅವರಿಗೆ ದಿನಾಂಕ 25/04/2023 ರಂದು ಬೆಳಿಗ್ಗೆ 10:00 ಗಂಟೆಯ ವೇಳೆಗೆ ಮನೆಯಲ್ಲಿ ತೀರ ಅಸ್ವಸ್ಥಗೊಂಡವರನ್ನು ಅವರ ಮಗ ಚಿಕಿತ್ಸೆಯ ಬಗ್ಗೆ ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಫತ್ರೆಗೆ 12:30 ಗಂಟೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿದಾಗ ಗೋವಿಂದ ಮಡಿವಾಳ ರವರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 12/2023, ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಶ್ರೀಮತಿ ನಯನ ಸಾಗರ್ (38), ಗಂಡ: ಸಾಗರ್ ಎಸ್‌ಕುಮಾರ್, ವಾಸ: ಸೈಟ್ ನಂಬ್ರ 112/61, ರತಿ ನಿಲಯ, ಕೃಷ್ಣಾಪುರ,  ಸುರತ್ಕಲ್, ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರು ಉಡುಪಿ ಜಿಲ್ಲೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಸಾಸ್ ಬಿಲ್ಡಿಂಗ್‌‌ನಲ್ಲಿ ಶ್ರೀಶಾ ಅಪಾರೆಲ್ಸ್ ಹೆಸರಿನ ಬಟ್ಟೆ ಅಂಗಡಿ ನಡೆಸಿಕೊಂಡಿದ್ದು, ಎಂದಿನಂತೆ ದಿನಾಂಕ 24/04/2023 ರಂದು ರಾತ್ರಿ 19:45 ಗಂಟೆಯ ವೇಳೆಗೆ ಅಂಗಡಿಯ ಶೆಟರಿಗೆ ಬೀಗ ಹಾಕಿ ಹೋಗಿದ್ದು, ನಂತರ ಯಾರೋ ಕಳ್ಳರು ದಿನಾಂಕ 24/04/2023 ರಂದು 19:45 ಗಂಟೆಯಿಂದ ದಿನಾಂಕ 25/04/2023 ರ ಬೆಳಿಗ್ಗೆ 08:00 ಗಂಟೆಯ ಮಧ್ಯಾವಧಿಯಲ್ಲಿ ಶ್ರೀಶಾ ಅಪಾರೆಲ್ಸ್ ಹೆಸರಿನ ಬಟ್ಟೆ ಅಂಗಡಿಗೆ ಹಾಕಿದ್ದ ಶೆಟರ್‌‌ನ ಬೀಗವನ್ನು ಯಾವುದೋ ಆಯುಧದಿಂದ ಮೀಟಿಸಿ ಮುರಿದು ಬಾಗಿಲನ್ನು ತೆರೆದು ಒಳ ಪ್ರವೇಶಿಸಿ, 1] U.S, ಪೋಲೋ, ಲೆವಿಸ್, ಸಾಟ್‌ಜಿ, ಸ್ಟಾರ್, ರೆಬೆಲ್ ಕಂಪನಿಯ ಸುಮಾರು 100 ಜೀನ್ಸ್ ಪ್ಯಾಂಟ್‌‌ಗಳು (ಮೌಲ್ಯ ರೂಪಾಯಿ 90,000/-), 2] U.S, ಪೋಲೋ, ಆಕ್ಸಿರೇಟ್, ಫಾಕ್ಸ್ ಆರೋ, ಕಂಪನಿಯ ಸುಮಾರು 250 ಶರ್ಟ್‌‌ಗಳು (ಮೌಲ್ಯ ರೂಪಾಯಿ 1,70,000/-), 3] ಸ್ಕೂಲ್ ಬ್ಯಾಗ್‌‌‌ಗಳು -15 (ಮೌಲ್ಯ ರೂಪಾಯಿ 9,000/-), 4] ಸಾಫ್ ಜಾಕೇಟ್  20 ಪೀಸ್‌ ( ಮೌಲ್ಯ  4,000/-), 5] ಟೈರಾ ಲೆಗ್ಗಿಂಗ್ಸ್ - 35 ( ಮೌಲ್ಯ  8,500/-), 6] ಡ್ರಾವರ್‌‌‌ನಲ್ಲಿದ್ದ ನಗದು  2,000/-  ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಎಲ್ಲಾ ವಸ್ತುಗಳ ಒಟ್ಟು ಮೌಲ್ಯ  2,83,500/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 54/2023, ಕಲಂ:  457,  380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-04-2023 09:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080