ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಬಿ ಅಶೋಕ ಮೆಂಡನ್ , ತಂದೆ: ಅಣ್ಣು ಮರಕಾಲ, ವಾಸ: ಶೆಟ್ಟಿ ಬೆಟ್ಟು ಮನೆ ನಿರಸ್ವಾಲೆ ರಸ್ತೆ  ಕೋಟೇಶ್ವರ ಅಂಚೆ ಬೀಜಾಡಿ ಗ್ರಾಮ ಕುಂದಾಪುರ ತಾಲೂಕು ಇವರ ತಮ್ಮ ಸದಾನಂದರ  ಮಕ್ಕಳು ಕೂಡಾ ಮನೆಯಲ್ಲಿ ವಾಸವಾಗಿದ್ದರು, ಮಗಳು ಪ್ರಾದಾನ್ಯ  09 ವರ್ಷ ಬೇಸಿಗೆ ರಜೆಯಾದ್ದರಿಂದ ಮನೆಯಲ್ಲಿದ್ದವಳು ದಿನಾಂಕ 25/04/2022 ರಂದು ಮನೆಯಲ್ಲಿ ಇತರ ಮಕ್ಕಳೊಂದಿಗೆ ಮನೆಯ ಅಂಗಳದಲ್ಲಿ  ಮನೆಯ ಎದುರುಗಡೆ  ಮರಕ್ಕೆ ಸೀರೆಯಿಂದ  ಜೋಕಾಲಿ  ಕಟ್ಟಿ ಕುಳಿತು ಆಟ ಆಡುತ್ತಿರುವಾಗ  ಸಂಬಂಧಿಕರ ಹೊಂಡಾ ಕಂಪನಿಯ KA-20-MA-3630  ನೇ  ಕಾರನ್ನು  ಪಿರ್ಯಾದಿದಾರರ ಅಣ್ಣನ ಮಗ ಸಂತೋಷ  ಕಾರನ್ನು ಹತ್ತಿ ಒಮ್ಮಲೇ ನಿರ್ಲಕ್ಷತನದಿಂದ ಅತೀ ವೇಗವಾಗಿ ಮುಂದಕ್ಕೆ  ಚಲಾಯಿಸಿ ಜೋಕಾಲಿ ಆಡುತ್ತಿದ್ದ  ಪ್ರಾದಾನ್ಯಳಿಗೆ  ಡಿಕ್ಕಿಹೊಡೆದ  ಪರಿಣಾಮ  ಆಕೆಯು ಅಂಗಾತನೆ ಬಿದ್ದು  ತಲೆಗೆ  ತೀವೃರಕ್ತಗಾಯವಾಗಿ  ಚಿಕಿತ್ಸೆ ಬಗ್ಗೆ   ಎನ್ ಎಆರ್ ಆಚಾರ್ಯ ಆಸ್ಪತ್ರೆ  ಕೊಟೇಶ್ವರ ಕ್ಕೆ ಕರೆ ತಂದು  ಪರೀಕ್ಷಿ ಸಿದ ಅಲ್ಲಿನ ವೈದ್ಯರು  ಪ್ರಾದಾನ್ಯಳು 03:40 ಗಂಟೆಗೆ ಮೃತ ಪಟ್ಟಿದ್ದಾಳೆಂದು  ತಿಳಿಸಿರುತ್ತಾರೆ .  ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2022  ಕಲಂ: 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 25/04/2022 ರಂದು ಪಿರ್ಯಾದಿದಾರರಾದ ಸುನೀತಾ (43), ತಂದೆ: ಬಬ್ಬು ಸೇರಿಗಾರ, ವಾಸ: ಮೆನ ನಂ:3-108 ನಡುಮನೆ ಹತ್ತಿರ ಪಡುಅಲೆವೂರು, ಅಲೆವೂರು ಗ್ರಾಮ, ಗುಡ್ಡೆಯಂಗಡಿ ಅಂಚೆ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಕೆಲಸದ ಪ್ರಯುಕ್ತ ಉಡುಪಿ ಪಿ.ಪಿ.ಸಿ ಕಾಲೇಜು ರಸ್ತೆಯ ಕಡೆಯಿಂದ ಪಿಶ್ ಮಾರ್ಕೆಟ್ ರಸ್ತೆಯಾಗಿ ಮುಖ್ಯರಸ್ತೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಪಿ.ಪಿ.ಸಿ ರಸ್ತೆಯ ಬೈಲೂರು ಕಾಂಪ್ಲೆಕ್ಸ್ ನ  ಮುಂಭಾಗ ತಲುಪುವಾಗ ಬೆಳಿಗ್ಗೆ 11:30 ಗಂಟೆಗೆ KA-04-MB-4950ನೇ ಕಾರು ಚಾಲಕ ಸುರೇಶ್ ಆಚಾರ್ಯ ಎಂಬುವವರು ಪಿ.ಪಿ.ಸಿ ಕಾಲೇಜು ರಸ್ತೆಯ ಕಡೆಯಿಂದ ಪಿಶ್ ಮಾರ್ಕೆಟ್ ರಸ್ತೆಯಾಗಿ ಮುಖ್ಯರಸ್ತೆಯ ಕಡೆಗೆ ದುಡುಕುತನ ಮತ್ತು ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡಬದಿಗೆ ತನ್ನ ಕಾರನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಎಡಕಾಲಿನ ಬೆರಳಿಗೆ ತರಚಿದ ಗಾಯ ಮತ್ತು ಬಲಕಾಲಿಗೆ ಮೂಳೆಮೂರಿತದ ಗಂಭೀರ ಸ್ವರೂಪದ ಗಾಯವಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 24/04/2022 ರಂದು ಪಿರ್ಯಾದಿದಾರರಾದ ರಾಮ ಕುಲಾಲ್‌, ತಂದೆ: ಕಾಳು ಕುಲಾಲ್, ವಾಸ: ಶ್ರೀ ರಾಮ ನಿಲಯ, ಮೂಡು ಬೈಲು, ಬೆಳ್ಳಂಪಳ್ಳಿ ಗ್ರಾಮ ಇವರು KA-20-EM-6616 ನೇ ಮೋಟಾರ್‌ ಸೈಕಲ್‌ನಲ್ಲಿ ರವಿನಾಥ ಶೆಟ್ಟಿ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಹಾವಂಜೆಯಿಂದ ಕೊಳಲಗಿರಿಗೆ ಸವಾರಿ ಮಾಡಿಕೊಂಡು ಹೋಗುತ್ತಾ ಹಾವಂಜೆ ಗ್ರಾಮದ, ಕೀಳಿಂಜೆ ಗಾಳಿ ಮರ ತಲುಪುವಾಗ ಬೆಳಿಗ್ಗೆ 11:30 ಗಂಟೆಗೆ ಅವರ ಎದುರಿನಿಂದ ಕೊಳಗಿರಿ ಕಡೆಯಿಂದ ಆರೋಪಿ ದೇವಿಪ್ರಸಾದ್ KA-19-D-2537 ನೇ ಟಾಟಾ 407 ನೇ ಟೆಂಪೊವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಮುಂಭಾಗದಲ್ಲಿ ಹೋಗುತ್ತಿದ್ದ ಒಂದು ವಾಹನವನ್ನು ಓವರ್‌ಟೇಕ್‌ ಮಾಡಲು ತನ್ನ ತೀರಾ  ಬಲಭಾಗಕ್ಕೆ ಚಲಾಯಿಸಿ, ಬಳಿಕ ಎಡ ಭಾಗಕ್ಕೆ ತಿರುಗಿಸುವಾಗ ಟೆಂಪೊದ ಹಿಂದಿನ ಬಲ ಭಾಗದ ಕಬ್ಬಿಣದ ಗಾರ್ಡ್‌ ಪಿರ್ಯಾದಿದಾರರ ಮೋಟಾರ್‌ ಸೈಕಲ್‌ನ ಹಿಂದಿನ ಬಲಭಾಗದ ಫೈಬರ್‌ ಬಾಕ್ಸ್‌ಗೆ ತಾಗಿದ್ದು, ಪರಿಣಾಮ ಮೋಟಾರ್‌ ಸೈಕಲ್‌ನ ಸಹಸವಾರ ರವಿನಾಥ ಶೆಟ್ಟಿ ಅವರ ಬಲಕಾಲಿನ ಕೋಲಿ ಕಾಲಿಗೆ ಮೂಳೆ ಮುರಿತದ ರಕ್ತಗಾಯ ವಾಗಿದ್ದು, ಅಲ್ಲದೇ ಬಲಕೈಯ ಬೆರಳಿಗೆ ರಕ್ತಗಾಯವಾಗಿರುತ್ತದೆ. ಅವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 72/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶಾಂತಾ ಜಿ ಕುಂದರ್‌(70), ಗಂಡ: ಗಂಗಾಧರ್‌ ಕುಂದರ್‌, ವಾಸ: ವಿಂಗ್‌ 28/2805, ಲೋಧ ಅಮರಾ ಕೋಲ್‌ ಶೇಖ್‌,  ಟಾಣೆ, ಮುಂಬಯಿ ವೆಸ್ಟ್‌, ಮಹಾರಾಷ್ಟ್ರ ಇವರು  ದಿನಾಂಕ 25/04/2022 ರಂದು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದು ದೇವರ ದರ್ಶನ ಪಡೆದು ಊಟ ಮಾಡಿದ್ದು, ಬೆಳಿಗ್ಗೆ 11:15 ಗಂಟೆಯಿಂದ 13:10 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಯಾವುದೋ ಆಯುಧದಿಂದ ಪಿರ್ಯಾದಿದಾರರ ಬ್ಯಾಗ್‌ನ್ನು ಕತ್ತರಿಸಿ, ಅದರಲ್ಲಿದ್ದ ಪರ್ಸ್‌ ನ್ನು ಕಳವು ಮಾಡಿದ್ದು ಪರ್ಸ್‌ನಲ್ಲಿ ರೂಪಾಯಿ 1,40,000/- ಮೌಲ್ಯದ 30 ಗ್ರಾಂ ತೂಕದ ಹವಳದ ಸರ, ಆಧಾರ್‌ಕಾರ್ಡ್‌, ಪಾನ್‌ಕಾರ್ಡ್‌, ಸ್ವೈಪ್‌ ಕಾರ್ಡ್‌ ಹಾಗೂ ರೂಪಾಯಿ 4,000/- ನಗದು ಇದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 1,44,000/- ಆಗಿರುತ್ತದೆ . ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 62/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಹರ್ಷ ಜೈನ್  (46), ತಂದೆ: ನಾಭಿರಾಜ್ ಜೈನ್, ವಾಸ: ಜಾಣ ಮನೆ ನೂರಾಳ್  ಬೆಟ್ಟು ಗ್ರಾಮ, ಕಾರ್ಕಳ ತಾಲೂಕು ಇವರ  ತಮ್ಮ ಜಿಗೀಶ್ ಜೈನ್ (38)ರ್ಷ ಇವರು  ದಿನಾಂಕ 25/04/2022 ರಂದು 16:00 ಗಂಟೆಗೆ ಮನೆಯ ಜಗಲಿಯಲ್ಲಿ ತಗಡು  ಶೀಟ್ ನ್ನು ಸರಿ ಮಾಡುತ್ತಿರುವಾಗ ಸಿಡಿಲು ಬಡಿದು ಗಾಯಗೊಂಡವರನ್ನು, ಚಿಕಿತ್ಸೆ ಬಗ್ಗೆ ಹೊಸ್ಮಾರು ವಿಜಯ ಕ್ಲಿನಿಕ್ ಗೆ  ಕರೆದುಕೊಂಡು ಹೋಗಿದ್ದು, ಅಲ್ಲಿಯ ವೈದ್ಯರು ಪರೀಕ್ಷಿಸಿ ಜಿಗೀಶ್ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 10/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.       

ಇತರ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಪ್ರವೀಣ (28), ತಂದೆ: ಮೋಹನ್‌ದಾಸ್‌ವಾಸ: ಕೃಷಿ ಕೇಂದ್ರದ ಬಳಿ , ಚಾಂತಾರು ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 24/04/2022 ರಂದು ಮಣಿಪಾಲಕ್ಕೆ ಕೆಲಸದ ಬಗ್ಗೆ ಮನೆಯಿಂದ ಸ್ನೇಹಿತನ KA-20-EV-1758 ರಲ್ಲಿ ಹೊರಟು ಪರೀಕ ರಸ್ತೆಯ ಮುಖೇನ ಎಂ.ಐ.ಟಿ, ಕಾಮತ್‌ ಸರ್ಕಲ್‌ನಿಂದಾಗಿ ಮಣಿಪಾಲ  ಪ್ರೆಸ್‌ ಬಳಿ ಹೋಗುವಾಗ ಮೊಬೈಲ್‌ಗೆ ವಾಟ್ಸಪ್‌ ಕಾಲ್‌ ಬಂತೆಂದು ಮೋಟಾರ್‌ಸೈಕಲ್‌ ನಿಲ್ಲಿಸಿದ್ದು, ಆಗ ಎದುರುಗಡೆಯಿಂದ ಹೋಗುತ್ತಿದ್ದ ಆಟೋರಿಕ್ಷಾವನ್ನು ಅದರ ಚಾಲಕನು ನಿಲ್ಲಿಸಿ ಪಿರ್ಯಾದಿದಾರರ ಬಳಿ ಬಂದು  ನೀನು ಯಾಕೆ ನಮ್ಮ ರಿಕ್ಷಾವನ್ನು ಪಾಲೋ ಮಾಡುತ್ತೀ  ಎಂದು ಹೇಳಿ ಪಿರ್ಯಾದಿದಾರರು ಹಾಕಿಕೊಂಡಿದ್ದ ಹೆಲ್ಮೆಟ್‌ನ್ನು ಕಿತ್ತುಕೊಂಡು ಪಿರ್ಯಾದಿದಾರರ ಎಡ ಹಣೆಗೆ ಹಾಗೂ ಮೈಕೈಗೆ ಹೊಡೆದಿರುತ್ತಾರೆ.  ಆ ಸಮಯ ಪಿರ್ಯಾದಿದಾರರ ಮೋಟಾರ್‌ಸೈಕಲ್‌ ಕೆಳಗೆ  ಬಿದ್ದಿದ್ದು  ಅದನ್ನು ಸರಿಯಾಗಿ ನಿಲ್ಲಿಸಲು ಹೋದಾಗ ರಿಕ್ಷಾ ಚಾಲಕನು ಪಿರ್ಯಾದಿದಾರರಿಗೆ ಕಾಲಿನಿಂದ ಒದ್ದಿರುತ್ತಾನೆ. ಆಗ ರಿಕ್ಷಾದಲ್ಲಿ ಕುಳಿತ್ತಿದ್ದ ಪಿರ್ಯಾದಿದಾರರ ಪರಿಚಯದ ಕುಕ್ಕೆಹಳ್ಳಿಯ ಪುಷ್ಪಲತಾ ಪಿರ್ಯಾದಿದಾರರನ್ನು ಉದ್ದೇಶಿಸಿ ಬೈದಿದ್ದು, ರಿಕ್ಷಾ ಚಾಲಕನು ಮತ್ತೆ ಕೈಯಿಂದ ಪಿರ್ಯಾದಿದಾರರ ಕೆನ್ನೆಗೆ ಹೊಡೆದಿದ್ದು, ಪಿರ್ಯಾದಿದಾರರು ಬೈಕ್‌ಸ್ಟಾರ್ಟ್  ಮಾಡಿ ಅಲ್ಲಿಂದ ಹೊರಟಾಗ ರಿಕ್ಷಾ ಚಾಲಕನು  ಜೀವ ಬೆದರಿಕೆ ಒಡ್ಡಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2022 ಕಲಂ: 323, 324, 504, 506, 114 R/W 34 IPC & 3(1)(s), 3(1)(r), 3(2)V-A SC/ST POA Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: , ಆರೋಪಿತರಾದ 1) ಸಂತೋಷ್ ಮಲಿಕ್, 2) ಅಜಿತ್ ಜಯನ್, 3) ಅಬ್ದುಲ್ಲಾ ನೌಮಾನ್ ಎ.ಆರ್, 4) ಜಿತು ಮುಂಬೈ, 5) ಹಾರೀಫ್ @ ಆರೀಫ್ 6) ಬಿ. ರಘುನಾಥ ಪೈ @ ಗುರು, 7) ದಸ್ತಗಿರ್, 8) ಕಾಂಚಿವರದ ರಾಜು ಇವರು ಸಮಾನ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವುಗಳನ್ನು ಜಿಎಸ್ಟಿ ಪ್ರಾಧಿಕಾರಕ್ಕೆ ನೀಡಿರುವುದಲ್ಲದೆ ನಕಲಿ ಜಿಪಿಎ ತಯಾರಿಸಿ ಮಾನ್ಯ ಹೈಕೋರ್ಟ್ ನಲ್ಲಿ ಸಲ್ಲಿಸಲು ಬಳಸಿ, ಪಿರ್ಯಾದಿದಾರರಾದ ನಾಗರತ್ನ ಎನ್‌. ಕಾಮತ್‌ (48), ಗಂಡ: ಎಂ. ಪ್ರಶಾಂತ್‌ ನಾಯಕ್‌, ವಾಸ: ವಾಣಿಜ್ಯ ತೆರಿಗೆ ನಿರೀಕ್ಷಕರು, ವಾಣಿಜ್ಯ ತೆರಿಗೆ ಭವನ, ವಿವೇಕಾನಂದ ನಗರ 4ನೇ ಕ್ರಾಸ್‌, ಅಜ್ಜರಕಾಡು, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಕಾರ್ಯ ನಿರ್ವಹಿಸುವ ಸಂಸ್ಥೆಗೆ ಮೋಸ ಮಾಡಿರುವುದಾಗಿದೆ.  ನಕಲಿ ಜಿಪಿಎ ಹಾಗೂ ದಾಖಲೆಗಳನ್ನು ಪಿರ್ಯಾದಿದಾರರ ಕಛೇರಿಗೆ ಸುಹೇಲ್ ಖಾದರ್ ಎಂಬುವವರು ಕಳುಹಿಸಿಕೊಟ್ಟಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2022 ಕಲಂ: 419, 420, 465, 468, 471 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 26-04-2022 10:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080