ಅಭಿಪ್ರಾಯ / ಸಲಹೆಗಳು

ಹೆಂಗಸು ಕಾಣೆ ಪ್ರಕರಣಗಳು

  • ಕಾರ್ಕಳ: ಪಿರ್ಯಾದಿ ನಂಜಮ್ಮ (50) ಗಂಡ: ಅಂಗಮುತ್ತು ವಾಸ: ತುಪ್ಪೆಪಾದೆ ಪದವು ಶಿರ್ವ ಗ್ರಾಮ, ಕಾಪು ಇವರ ಮಗಳು   ಆಶಾ (32) ಜನವರಿ ತಿಂಗಳಲ್ಲಿ ವಿದೇಶಕ್ಕೆ ಹೋದವಳು ದಿನಾಂಕ 23/04/2022  ರಂದು ವಾಪಸು ಊರಿಗೆ ಬಂದವಳು ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ  ಜಂತ್ರದಲ್ಲಿರುವ ಗಂಡನ ಸಂಬಂಧಿಕರ ಮನೆಯಲ್ಲಿ   ವಾಸವಾಗಿದ್ದು, ,ದಿನಾಂಕ  25/4/22 ರಂದು ಮದ್ಯಾಹ್ನ 13:00 ಗಂಟೆಗೆ ಆಶಾಳು ಯಾರಿಗೂ ಹೇಳದೇ ಮನೆಯಿಂದ  ಹೋದವಳು ವಾಪಾಸು ಬಾರದೇ ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಾಡಿದರೂ  ಈ ತನಕ ಪತ್ತೆಯಾಗಿರುವುದಿಲ್ಲ . ಕಾಣೆಯಾದವರ ಚಹರೆ ಗುರುತು: ಶ್ರೀಮತಿ ಆಶಾ ಪ್ರಾಯ: 32 ವರ್ಷ, ಎಣ್ಣೆಗೆಂಪು ಮೈಬಣ್ಣ, ಎತ್ತರ: 5 ಅಡಿ 02 ಇಂಚು, ಕನ್ನಡ,ತಮಿಳು, ತುಳು,ಹಿಂದಿ ಕೊಂಕಣಿ  ಭಾಷೆ ಮಾತನಾಡುತ್ತಾಳೆ.ಬಿಳಿ ಮತ್ತು ಕಪ್ಪು ಗೆರೆಯ ತುಂಬು ತೋಳಿನ ಟೀ ಶರ್ಟ್, ಪಿಂಕ್ಬಣ್ಣದ ಜಾಕೆಟ್ಟ ಧರಿಸಿರುತ್ತಾಳೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾದ ಕ್ರಮಾಂಕ 50/2022  ಕಲಂ: ಹೆಂಗಸು  ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

 ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ : ಪಿರ್ಯಾದಿ ಗಣೇಶ್‌ ಪೂಜಾರಿ (32), ತಂದೆ: ಬಾಬಣ್ಣ ಪೂಜಾರಿ, ವಾಸ: ಸೌಹಾರ್ಧ ನಿಲಯ, ಕಳುವಿನ ಬಾಗಿಲು, ಕಚ್ಚೂರು ಗ್ರಾಮ, ಬಾರ್ಕೂರು ಇವರ ಅಣ್ಣನಾದ ಭಾಸ್ಕರ ಪೂಜಾರಿ, ಪ್ರಾಯ: 34 ವರ್ಷ ಎಂಬವರು ಬ್ರಹ್ಮಾವರದ ಆಶ್ರಯ ಹೊಟೇಲ್‌ನಲ್ಲಿ ರೂಮ್‌ ಬಾಯ್‌ ಆಗಿ ಕೆಲಸ ಮಾಡಿಕೊಂಡಿದ್ದು, ಅವರಿಗೆ  ಲಿವರ್‌  ಖಾಯಿಲೆ ಇದ್ದು ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಈ ಬಗ್ಗೆ ಚಿಕಿತ್ಸೆ ಪಡೆದು ಕೆಲಸಕ್ಕೆ ಹೋಗುತ್ತಿದ್ದರು. ಅವರಿಗೆ ಇರುವ ಹೊಟ್ಟೆ ನೋವಿನ ಬಗ್ಗೆ ಜೀವನದಲ್ಲಿ ಜೀಗುಪ್ಸೆಗೊಂಡು  ಈ ದಿನ ದಿನಾಂಕ 26.04.2022 ರಂದು ಬ್ರಹ್ಮಾವರದ ಆಶ್ರಯ ಹೊಟೇಲ್‌ಗೆ ಕೆಲಸಕ್ಕೆ ಹೋಗಿದ್ದಾಗ ಬೆಳಿಗ್ಗೆ 08:00 ಗಂಟೆಯಿಂದ 08:30  ಗಂಟೆಯ ಮಧ್ಯಾವಧಿಯಲ್ಲಿ ಆಶ್ರಯ ಹೊಟೇಲ್‌ನ ರೂಮ್‌ ನಂ. 302 ರಲ್ಲಿ ಸೀಲಿಂಗ್‌ ಫ್ಯಾನಿಗೆ ನೈಲಾನ್‌ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಭಾಸ್ಕರ ಪೂಜಾರಿ ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ  ಯುಡಿಆರ್ ನಂ. 20/2022 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಹೆಬ್ರಿ: ಪಿರ್ಯಾದಿ ದಿವಾಕರ ನಾಯ್ಕ (46) ತಂದೆ: ನಾರಾಯಣ ನಾಯ್ಕ ವಾಸ: ದೇಕಿಬೆಟ್ಟು ಬಂಗಾರಗುಡ್ಡೆ ಹೆಬ್ರಿ ಇವರ ತಂದೆ ನಾರಾಯಣ ನಾಯ್ಕ್ ಇವರು ಪ್ರಾಯಸ್ಥರಾಗಿದ್ದು. ಅವರಿಗೆ ಸುಮಾರು 78 ವರ್ಷ ಪ್ರಾಯವಾಗಿರುತ್ತದೆ. ಅವರ ಎರಡು ಕಾಲಿನ ನೋವಿನ ಬಗ್ಗೆ ಸುಮಾರು 2 ವರ್ಷಗಳಿಂದ ಹಲವು ಅಸ್ಪತ್ರೆಗಳಲ್ಲಿ ತೋರಿಸಿ ಚಿಕಿತ್ಸೆಯನ್ನು ಮಾಡಿಸಿದ್ದು. ವೈದ್ಯರು ಅವರಿಗೆ ಯಾವುದೇ ನೋವು ಇರುವುದಿಲ್ಲ ಎಂದು ತಿಳಿಸಿರುತ್ತಾರೆ. ಅದರೂ ತಂದೆಯವರು ನನಗೆ ಎರಡು ಕಾಲುಗಳು ನೋವು ಇರುತ್ತದೆ ಎಂದು ಮಾನಸಿಕ ಖಿನ್ಯತೆಗೆ ಒಳಗಾಗಿ ಸುಮಾರು 3-4 ಸಾರಿ  ನಮ್ಮಲ್ಲಿ ತಾನು ಸಾಯುತ್ತೇನೆಂದು ಎಂದು ಹೇಳಿ ಅತ್ಮಹತ್ಯೆಗೆ ಪ್ರಯತ್ನಿಸಿರುತ್ತಾರೆ ಮೇಲಿನ ವಿಚಾರದಲ್ಲಿ ನಿನ್ನೆ ದಿನ ದಿನಾಂಕ; 25/04/2022 ರಂದು ರಾತ್ರಿ 9-30  ಗಂಟೆಯಿಂದ ರಾತ್ರಿ 11-45 ಗಂಟೆಯ ಮದ್ಯಾವಧಿಯಲ್ಲಿ ಹೆಬ್ರಿ ಗ್ರಾಮದ ಬಂಗಾರುಗುಡ್ಡೆ ದೇಕಿಬೆಟ್ಟು ಎಂಬಲ್ಲಿ ತನ್ನ ಮನೆಯ ಹಿಂದುಗಡೆ ಇರುವ ದನದ ಕೊಟ್ಟಿಗೆಯ ಹೊರಭಾಗದಲ್ಲಿರುವ ಮೇಲಿನ ಮರದ ಜಂತಿಗೆ ಹುರಿಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ನೇಣು ಹಾಕಿಕೊಂಡು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ UDR NO 18/2022 U/s 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 26-04-2022 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080