ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ಅಶೋಕ್, ತಂದೆ: ಪ್ರಭಾಕರ ನಾಯ್ಕ ವಾಸ: ಅಶ್ವಿನಿ ನಿಲಯ, ಬಚ್ಚಪ್ಪು, ಹೆಬ್ರಿ ಗ್ರಾಮ ಮತ್ತು ತಾಲೂಕು  ಇವರ ತಂದೆ ಪ್ರಭಾಕರ ನಾಯ್ಕ್ ( 57) ರವರು ಕೃಷಿಕರಾಗಿದ್ದು, ದಿನಾಂಕ 24/04/2021 ರಂದು ಪ್ರಭಾಕರ ನಾಯ್ಕ್ ರವರು ಕೃಷಿಗೆ ಬೇಕಾದ ಸೊಪ್ಪುಗಳನ್ನು ತರಲು ಹೆಬ್ರಿ ಗ್ರಾಮದ ಬಚ್ಚಪ್ಪು ಅಂಗನವಾಡಿ ಕೇಂದ್ರದ ಎದುರುಗಡೆ ಇರುವ ರಂಜಾಳ ಮರವನ್ನು ಹತ್ತಿ 40 ಅಡಿ ಎತ್ತರದಲ್ಲಿ ಮರದಲ್ಲಿರುವ ಸೊಪ್ಪುಗಳನ್ನು ಕಡಿಯುತ್ತಿರುವಾಗ ಬೆಳಿಗ್ಗೆ 10:00 ಗಂಟೆಗೆ ಅವರು ನಿಂತ ಮರದ ಕೊಂಬೆಯು ಅಕಸ್ಮಿಕವಾಗಿ ಮುರಿದ ಕಾರಣ ಅವರು ಕೊಂಬೆ ಸಹಿತ ಕೆಳಗೆ ಬಿದ್ದು ಅವರ ಎದೆಯ ಬಳಿ ಗುದ್ದಿದ ತೀವ್ರ ಸ್ವರೂಪದ ನೋವಾಗಿ ಮಾತನಾಡದ ಕಾರಣ ಅವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಅಸ್ಪತ್ರೆಗೆ ಕರೆದು ಕೊಂಡು ಹೋಗಿ ದಾಖಲು ಮಾಡಿದ್ದು. ಅವರು ಚಿಕಿತ್ಸೆ ಸ್ಪಂದಿಸದೇ ಮದ್ಯಾಹ್ನ 1:00 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 13/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಶಿವಾನಂದ ನಾಯಕ್ (50), ವಾಸ: ಅಳಸಿಕಟ್ಟೆ ಸಿರಿಯಾರ್ ಹೌಸ್ ಮುದರಂಗಡಿ ಕಾಪು ತಾಲೂಕು ಇವರ ತಂಗಿ ವಿನಯಾ ಭಟ್, ಗಂಡ: ವಾಮನ್ ಭಟ್, ವಾಸ: ಅಲೆವೂರು ಇವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದವರು ದಿನಾಂಕ 23/04/2021 ರಂದು ಸಂಜೆ 6:30 ಗಂಟೆಗೆ ವಾಕಿಂಗ್ ಗಾಗಿ ಅಲೆವೂರು ನೈಲಪಾದೆ ಮಾರ್ಗವಾಗಿ ಅಲೆವೂರು ಜುಮಾದಿ ದೈವಸ್ಥಾನದ ಕಡೆಗೆ ವಾಕಿಂಗ್ ಹೋದವರು ಮನೆಗೆ ಬಾರದೇ ಇದ್ದ ಕಾರಣ ಪತ್ತೆಗಾಗಿ ಹುಡುಕಾಡಿದಾಗ ದಿನಾಂಕ 24/04/2021 ರಂದು ಸಂಜೆ 6:00 ಗಂಟೆಗೆ ಅಲೆವೂರಿನ ದಿ.ಲಕ್ಷ್ಮಿ ಅಮ್ಮ ಎಂಬುವವರಿಗೆ ಸೇರಿದ ಹಾಡಿಯಲ್ಲಿನ ಬಾವಿಯ ನೀರಿನಲ್ಲಿ ವಿನಯ ಭಟ್ ರವರು ಮೃತದೇಹವು ತೇಲುತ್ತಿದ್ದ ಸ್ಥಿತಿಯಲ್ಲಿ ಕಂಡುಬಂದಿರುತ್ತದೆ. ವಿನಯ ಭಟ್ ರವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 44/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಶ್ರೀಮತಿ ಅಮ್ಮಕ್ಕ (73), ತಾಯಿ: ಗುರುವಮ್ಮ, ವಾಸ: ಬಿಜೂರು ಗ್ರಾಮ,  ಬೈಂದೂರು ತಾಲೂಕು ಇವರು ಹಾಗೂ ಆಪಾದಿತರಾದ 1) ದೇವಿ (69), ತಾಯಿ ವೆಂಕಮ್ಮ, ವಾಸ; ಪಡುವಾಯನಹಿತ್ಲು, ಬಿಜೂರು ಗ್ರಾಮ, ಬೈಂದೂರು ತಾಲೂಕು, 2) ಕೃಷ್ಣ ದೇವಾಡಿಗ (49), ತಾಯಿ: ದೇವಿ , ವಾಸ; ಪಡುವಾಯನಹಿತ್ಲು, ಬಿಜೂರು ಗ್ರಾಮ, ಬೈಂದೂರು ತಾಲೂಕು, 3) ಹರೀಶ ದೇವಾಡಿಗ (41), ತಂದೆ; ಮರ್ಲ ದೇವಾಡಿಗ, ವಾಸ; ಹಾಡಿಮನೆ, ಉಪ್ಪುಂದ ಗ್ರಾಮ, ಬೈಂದೂರು ತಾಲೂಕು ಇವರು ಹಿರಿಯವರಿಗೆ ಸೇರಿದ ಕುಟುಂಬದ ಆಸ್ತಿಯನ್ನು ಹೊಂದಿದ್ದು. ಪಿರ್ಯಾದಿದಾರರು ಅವರಿಗೆ ಸಂಬಂಧಿಸಿದ ಪಹಣಿಯನ್ನು ತೆಗೆಸಿದಾಗ ಪಹಣಿ ಪತ್ರಿಕೆ ಬೇರೆಯವರ ಹೆಸರಿನಲ್ಲಿ ಇರುವುದು ಗಮನಕ್ಕೆ ಬಂದಿದ್ದು. ಸ್ಥಿರಾಸ್ತಿಯನ್ನು ಆಪಾದಿತ 1 ಮತ್ತು 2ನೇಯವರು ತಮಗೆ ಯಾವುದೇ ಹಕ್ಕು ಇಲ್ಲವೆಂದು ತಿಳಿದಿದ್ದರೂ ಕೂಡಾ ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ವಿಭಾಗ ಪತ್ರ ಮಾಡಿಕೊಂಡು ಪಹಣಿ ಪತ್ರಿಕೆಯನ್ನು ಅವರ ಹೆಸರಿಗೆ ಮಾಡಿಕೊಂಡಿದ್ದು, ಬಿಜೂರು ಗ್ರಾಮದ ಸ,ನಂ 88/17 ರಲ್ಲಿರುವ 25 ಸೆಂಟ್ಸ್ ಸ್ಥಿರಾಸ್ತಿಯನ್ನು ಆಪಾದಿತ 3ನೇಯವರಿಗೆ ಮಾರಾಟ ಮಾಡಿದ್ದು, ಈ ಬಗ್ಗೆ ಬೈಂದೂರು ಉಪನೊಂದಣಾಧಿಕಾರಿ ಕಛೇರಿಯಲ್ಲಿ ದಿನಾಂಕ 28/08/2017 ರಂದು ನೊಂದಣಿಯಾಗಿರುತ್ತದೆ. ಪಿರ್ಯಾದಿದಾರರು ಹಿರಿಯರರಿಂದ ಬಂದ ಸ್ಥಿರಾಸ್ತಿಯನ್ನು ವಿಭಾಗ ಮಾಡಬೇಕೆಂದು ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣದ ದಾಖಲಾಗಿ ತನಿಖೆಯಲ್ಲಿರುತ್ತದೆ. ಆಪಾದಿತ 1 ರಿಂದ 3ನೇ ಯವರು  ಬೈಂದೂರು ಉಪನೊಂದಣಿ ಕಛೇರಿಯಲ್ಲಿ ಸ್ಥಿರಾಸ್ತಿಗೆ ಸಂಬಂಧಿಸಿ ಸುಳ್ಳು ಪ್ರಮಾಣ ಪತ್ರ ಬರೆದು ನೀಡಿರುತ್ತಾರೆ. ಆರೋಪಿತರು ಪಿರ್ಯಾದಿದಾರರಿಗೆ ಮೋಸ ಮಾಡಿ ನಷ್ಟವುಂಟು ಮಾಡುವ ಉದ್ದೇಶದಿಂದ ಈ ಕೃತ್ಯವನ್ನು ಮಾಡಿರುತ್ತಾರೆ. ಪಿರ್ಯಾದಿದಾರರು ವಯೋವೃದ್ದರಾಗಿದ್ದು ನಡೆದಾಡಲಾಗದೇ ಇದ್ದು ಆರೋಪಿತರ ಕೃತ್ಯವು ಇತ್ತೀಚೆಗೆಗಷ್ಟೆ ತಿಳಿದು ಬಂದಿದ್ದರಿಂದ ದೂರು ನೀಡಲು ವಿಳಂಬವಾಗಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 79/2021 ಕಲಂ:  417, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ರಾಜ ಕುಮಾರ್‌‌, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರು ದಿನಾಂಕ 25/04/2021 ರಂದು ರೌಂಡ್ಸನಲ್ಲಿ ಇರುವಾಗ ಕುಂದಾಪುರ ತಾಲೂಕು ಕಂದಾವರ   ಗ್ರಾಮದ ಗ್ಲೋರಿಯ ಬಾರ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮರಾಟ ಮಾಡುತ್ತಿರುವ ಬಗ್ಗೆ  ಬಂದ  ಮಾಹಿತಿಯ ಮೇರೆಗೆ ದಾಳಿ ನಡೆಸಿದಾಗ ಆರೊಪಿತರಲ್ಲಿ ಬಸವ ಎಂಬಾತ ಓಡಿ ಹೋಗಿದ್ದು ಇನ್ನೋರ್ವ ಆರೋಪಿ   ಸುಧೀರ (35), ತಂದೆ: ಗಿರೀಯ ಪೂಜಾರಿ, ವಾಸ: ಕೊಳಲಗಿರಿ ಹೈಸ್ಕೂಲ್ ಬಳಿ ಲಕ್ಷ್ಮೀ ನಗರ ಉಡುಪಿ ಎಂಬಾತನನ್ನು ವಶಕ್ಕೆ ಪಡೆದು ಆತನ  ವಶದಲ್ಲಿದ್ದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾರ್ವಜನಿಕರಿಗೆ ಮಾರಾಟ ಮಾಡಲು ಸಂಗ್ರಹಿಸಿ ಇಟ್ಟಿರುವ HAYWARDS CHEERS WHISKY ‌ಹೆಸರಿನ ವಿಸ್ಕಿ 180 ಎಂ.ಎಲ್  11ಟೆಟ್ರಪ್ಯಾಕ್‌ಗಳು( ಮೌಲ್ಯ86 ರೂಪಾಯಿ) ಮತ್ತು BAGPIPER WHISKY ‌ಹೆಸರಿನ ವಿಸ್ಕಿ 180 ಎಂ.ಎಲ್  47 ಟೆಟ್ರಪ್ಯಾಕ್‌ಗಳು (ಒಟ್ಟು ಮೌಲ್ಯ 4992.81 ರೂಪಾಯಿ) ಹಾಗೂ UB EXPORT STRONG PREMIUM BEER ಹೆಸರಿನ ಬೀಯರ್ 650 ಎಂ.ಎಲ್  12 ಬಾಟಲಿಗಳು ( ಒಟ್ಟು ಮೌಲ್ಯ 1500 ರೂಪಾಯಿ) ನ್ನು ಹಾಗೂ ಮದ್ಯ ಮಾರಾಟಕ್ಕೆ ಬಳಸಿದ 320 ರೂಪಾಯಿ ನಗದು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2021 ಕಲಂ: 15,32,34 ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

     

ಇತ್ತೀಚಿನ ನವೀಕರಣ​ : 26-04-2021 01:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080