ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾಪು: ಪಿರ್ಯಾದಿದಾರರಾದ ಫ್ರಾನ್ಸಿಸ್ ವಲೇರಿಯನ್ ಡಿಸೋಜ (44) ತಂದೆ: ಮ್ಯಾಕ್ಸಿಂ ಡಿಸೋಜ, ವಾಸ: ಮಾರ್ನಿಂಗ್ ಸ್ಟಾರ್, ವೆಸ್ಟ್, ಮಣಿಪುರ ಪೋಸ್ಟ್ ವಯ: ಕಟಪಾಡಿ ಇವರ ತಂದೆ ಮ್ಯಾಕ್ಸಿಂ ಡಿ’ಸೋಜ (75)ರವರಿಗೆ ಸುಮಾರು 15 ವರ್ಷಗಳಿಂದ ಮಾನಸಿಕ ಸಮಸ್ಯೆ ಉಂಟಾಗಿ ಉಡುಪಿಯ ಮಿತ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆವು. ದಿನಾಂಕ 25/04/2021 ರಂದು ರಾತ್ರಿ 9:30 ಗಂಟೆ ಸಮಯಕ್ಕೆ ಮನೆಯವರೆಲ್ಲಾ ಊಟ ಮಾಡಿ ಮನೆಯ ಜಗುಲಿಯಲ್ಲಿ  ಮಲಗಿರುವಾಗ ಫ್ರಾನ್ಸಿಸ್ ವಲೇರಿಯನ್ ಡಿಸೋಜ ಇವರ ತಂದೆ ಮ್ಯಾಕ್ಸಿಂ ಡಿ’ಸೋಜರವರು ಮನೆಯ ಒಳಗಡೆ ಕೋಣೆಯಲ್ಲಿ ಮಲಗಿದ್ದು, ಮರು ದಿನ ದಿನಾಂಕ 26/04/2021 ರಂದು ಬೆಳಿಗ್ಗೆ 06:15 ಗಂಟೆಗೆ ಎದ್ದು ನೋಡುವಾಗ ತಂದೆಯವರು ರೂಮಿನ ಮಾಡಿನ ಜಂತಿಯ ಹುಕ್ಕಿಗೆ ಶಾಲನ್ನು ಕಟ್ಟಿಕೊಂಡು ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದು ಕೊಂಡು ನೇತಾಡುತ್ತಿದ್ದು, ಕೂಡಲೇ ಕೆಳಗಡೆ ಇಳಿಸಿ ನೋಡುವಾಗ ತಂದೆಯವರು ಮೃತಪಟ್ಟಿರುವುದಾಗಿ ತಿಳಿದು ಬಂತು. ಫ್ರಾನ್ಸಿಸ್ ವಲೇರಿಯನ್ ಡಿಸೋಜ ರವರ ತಂದೆಯವರು ಮನೆಯ ರೂಮಿನ ಮಾಡಿನ ಜಂತಿಯ ಹುಕ್ಕಿಗೆ ಶಾಲನ್ನು ಕಟ್ಟಿಕೊಂಡು ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವುದಾಗಿದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ವನಜಾ (65) ಗಂಡ: ಯೀರು ಮೂಲ್ಯ ವಾಸ ಇಚೋಡಿಗುಡ್ಡೆ, 5 ಸೆಂಟ್ಸ್, ಬೋಳ ವಂಜಾರಕಟ್ಟೆ, ಬೋಳ ಗ್ರಾಮ, ಕಾರ್ಕಳ ಇವರ ಹಿರಿಯ ಮಗ ವಿಶ್ವನಾಥ ಮೂಲ್ಯ (45) ಇವರು ಮದ್ಯಪಾನ ಮಾಡುವ ಅಬ್ಯಾಸ ಹೊಂದಿದ್ದು ಕೆಲವು ಸಮಯದಿಂದ ಅಸ್ತಮಾ ಮತ್ತು ಕೆಮ್ಮಿನ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆ ಪಡೆಯುತಿದ್ದನು, ವಿಪರೀತ ಮದ್ಯ ಸೇವಿಸಿ ಹಾಗೂ ತನಗಿದ್ದ ಖಾಯಿಲೆಯಿಂದ ಮನನೊಂದು 25/04/2021 ರಂದು ರಾತ್ರಿ 09:೦೦ ಗಂಟೆಯಿಂದ ದಿನಾಂಕ 26/04/2021 ರಂದು 05:00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ವಾಸ್ತವ್ಯದ ಮನೆಯ ಊಟದ ಹಾಲಿನ ಛಾವಣಿಗೆ ಹಾಕಿದ ಜಂತಿಗೆ ಸೀರೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾಧ ದಿವಾಕರ ಕುಂದರ್‌, ತಂದೆ:ದಿ. ಜೋಗಿ, ವಾಸ: ಕಾಮತ್‌ ಸರ್ಕಲ್‌ ಹತ್ತಿರ, ಪುಡ್‌‌ಕೋರ್ಟ್‌ ಹತ್ತಿರ, ಪವಿತ್ರನಗರ, ಶಿವಳ್ಳಿ ಗ್ರಾಮ, ಉಡುಪಿ. ಇವರ ಮಣಿಪಾಲದ ಪವಿತ್ರನಗರದಲ್ಲಿರುವ ಬಾಡಿಗೆ ಮನೆಯಲ್ಲಿ ಮೂಡುಬೆಳ್ಳೆಯ ಸುಧೀರ್‌ ಕೊರಗ ಹಾಗೂ ಇನ್ನೊಂದು ಬಾಡಿಗೆ ಮನೆಯಲ್ಲಿ ಕೆನರಾ ಬ್ಯಾಂಕಿನ್ನಲ್ಲಿ ಸೆಕ್ಯೂರಿಟಿ ಗಾರ್ಡ್‌ಕೆಲಸ ಮಾಡಿಕೊಂಡಿರುವ ಸುರೇಶ್‌ಕುಮಾರ್ ಎಂಬವರು ವಾಸವಾಗಿದ್ದು, ದಿನಾಂಕ 25/04/202೦ ರಂದು ರಾತ್ರಿ ಸುಮಾರು 10:15 ಗಂಟೆಗೆ ಆಪಾದಿತ ಸುರೇಶ್‌ ಕುಮಾರ್‌‌ನು ಸುಧೀರ್‌ರವರಿಗೆ ಹಲ್ಲೆ ಮಾಡುತ್ತಿದ್ದು, ಇದನ್ನು ನೋಡಿದ ದಿವಾಕರ ಕುಂದರ್‌ ರವರು ಹಾಗೂ ರತ್ನ, ವಿನೋದ್‌ರವರು ಜಗಳ ಬಿಡಿಸಲು ಪ್ರಯತ್ನಿಸಿದ್ದು, ಆವೇಳೆಗೆ ಅಪಾದಿತ ಸುರೇಶ್ ಕುಮಾರ್‌ ಒಂದು ಸಣ್ಣ ತರಕಾರಿ ಕತ್ತರಿಸುವ ಚೂರಿ ತಂದು ಸುಧೀರ್‌‌ರವರನ್ನು ಉದ್ದೇಶಿಸಿ 'ಈ ಅದಿ ದ್ರಾವಿಡನದ್ದು ಜಾತಿಯಾಯಿತು. ನಿನ್ನನ್ನು ಸಾಯಿಸದೇ ಬಿಡುವುದಿಲ್ಲ ಎಂದು ಹೇಳುತ್ತಾ ಸುಧೀರನ ಬೆನ್ನಿಗೆ, ಹೊಟ್ಟೆಗೆ ಹಾಗೂ ಎದೆಯ ಭಾಗಕ್ಕೆ ಐದಾರು ಬಾರಿ ಚುಚ್ಚಿದನು. ಸುಧೀರನು ಜೋರಾಗಿ ಬೊಬ್ಬೆ ಹೊಡೆಯುತ್ತಾ ನೆಲದ ಮೇಲೆ ಬಿದ್ದಿರುತ್ತಾನೆ.  ಆಪಾದಿತ ಸುರೇಶ್‌ಕೂಡ ಅದೇ ಚಾಕುವಿನಿಂದ ತನ್ನ ಬಲಕಾಲಿನ ತೋಡೆಗೆ ಕೊಯ್ದಿಕೊಂಡು ಗಾಯ ಮಾಡಿಕೊಂಡಿದ್ದು, ದಿವಾಕರ ಕುಂದರ್‌ ಹಾಗೂ ಇತರರು ಸೇರಿ ಸುಧೀರ್‌ ‌ಹಾಗೂ ಸುರೇಶ್‌‌ನನ್ನು ಉಪಚರಿಸಿ ಒಂದು ಅಂಬುಲೆನ್ಸ್‌‌ನ್ನಲ್ಲಿ ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ಅಲ್ಲಿಂದ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 57/2021 ಕಲಂ: 307 ಐಪಿಸಿ & ಕಲಂ 3(2)(ವಿ) ಎಸ್ಸಿ/ಎಸ್ಟಿ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 26-04-2021 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080