ಅಭಿಪ್ರಾಯ / ಸಲಹೆಗಳು

ದರೋಡೆ ಪ್ರಕರಣ

  • ಮಣಿಪಾಲ: ಪಿರ್ಯಾದಿ: ಶಾರಾದಾ ಪಾಟೀಲ್(80 ವರ್ಷ)ಗಂಡ : ದಿ. ವಿಠಲ ಪಾಟೀಲ್‌ವಾಸ: ಅಭ್ಯುದಯʼ ಶೆಟ್ಟಿಬೆಟ್ಟು,ಬೊಬ್ಬರ್ಯ ದೇವಸ್ಥಾನದ ಹತ್ತಿರ. ಪರ್ಕಳ, ಹೆರ್ಗಾ ಇವರು ದಿನಾಂಕ: 25.03.2023 ರಂದು ಸಂಜೆ ಸುಮಾರು 06:30 ಗಂಟೆಗೆ ತಮ್ಮ ಮನೆಯ ಅಂಗಳದಲ್ಲಿ ಬಬ್ಬರೇ ವಾಕಿಂಗ್ ಮಾಡುತ್ತಿರುವಾಗ, ಯಾರೋ ಇಬ್ಬರು ಅಪರಿಚಿತ ಗಂಡರು ಬೈಕ್ ನಲ್ಲಿ  ಪಿರ್ಯಾದಿದಾರರ ಮನೆಯ ಬಳಿ ಬಂದು ಬೈಕ್ ನ್ನು ಮನೆಯ ಗೇಟಿನ ಹೊರಗೆ ನಿಲ್ಲಿಸಿ ಬೈಕಿನ ಹಿಂಬದಿಯಲ್ಲಿ ಕುಳಿತ್ತಿದ್ದ  ಅಪರಿಚಿತ ಗಂಡಸು ಮನೆಯ ಗೇಟನ್ನು ತೆರೆದು ಒಳಗೆ ಬಂದು ಪಿರ್ಯಾದಿದಾರರ ಬಳಿ ಸದಾನಂದ ಮೇಸ್ತ್ರಿ ಯವರ ಮನೆಯ ವಿಳಾಸವನ್ನು ಕೇಳಿದ್ದು  ಪಿರ್ಯಾದಿದಾರರು ತನಗೆ ಗೊತ್ತಿಲ್ಲ  ಎಂದು ಹೇಳಿ ಹಿಂತಿರುಗಿ ಮನೆ ಕಡೆ ಹೋಗುವಾಗ ಸದ್ರಿ ವ್ಯಕ್ತಿಯು ಹಿಂದಿನಿಂದ ಬಂದು ಪಿರ್ಯಾದಿದಾರರ ಬಾಯಿಯನ್ನು ಕೈಯಿಂದ ಒತ್ತಿ ಹಿಡಿದ್ದು  ಕೊರಳಲ್ಲಿದ್ದ ಚಿನ್ನ ಅಡ್ಡಿಗೆ ಸರವನ್ನು ಕತ್ತಿನಿಂದ ತೆಗೆದು ಅಲ್ಲೇ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕಿನಲ್ಲಿ ಪರಾರಿಯಾಗಿರುತ್ತಾರೆ, ಸುಲಿಗೆಯಾದ ಚಿನ್ನದ ಅಡ್ಡಿಗೆ ಸರವು ಸುಮಾರು 6 ಪವನ್‌ ತೂಕದಾಗಿದ್ದು, ಅಂದಾಜು ಮೌಲ್ಯ 3 ಲಕ್ಷ ಆಗಿರುತ್ತದೆ, ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ  78/2023, ಕಲಂ: 392 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣ

  • ಬ್ರಹ್ಮಾವರ: ದಿನಾಂಕ 25.03.2023 ರಂದು ಬ್ರಹ್ಮಾವರ ತಾಲೂಕು ಚೇರ್ಕಾಡಿ ಗ್ರಾಮದ ಮಡಿ ಆದರ್ಶ ನಗರ ಎಂಬಲ್ಲಿ ಪಿರ್ಯಾದಿ: ರೊಹನ್‌ ಲ್ಯೆನ್ಸಿ ಡಿʼಸೋಜ, (48), ತಂದೆ: ಮಥಾಯಸ್‌ ಡಿʼಸೋಜ, ವಾಸ: ಆದರ್ಶ ನಗರ, ಮಡಿ, ಚೇರ್ಕಾಡಿ ಗ್ರಾಮ ಇವರು ತನ್ನ ಅಟೋರಿಕ್ಷಾ ದಲ್ಲಿ ಮನೆಗೆ ಹೋಗುವಾಗ  ಮನೆಯ ಸಮೀಪ ಅವರ ತಂಗಿಯ ಮಗನಾದ ಆರೋಪಿ ಎಡ್ಲಿನ್‌ ಎಂಬವನು ಮೋಟಾರ್‌ ಸೈಕಲ್‌ ನಲ್ಲಿ ಪಿರ್ಯಾದಿದಾರರ ಆಟೋ ರಿಕ್ಷಾಕ್ಕೆ ಅಡ್ಡ ಬಂದಿದ್ದು, ಆಗ ಫಿರ್ಯಾದಿದಾರರು ರಿಕ್ಷಾವನ್ನು ನಿಲ್ಲಿಸಿ, ಆರೋಪಿಯ ಬಳಿ ಹೋದಾಗ, ಆರೋಪಿಯು ಏಕಾ ಎಕಿ ಆತನ ಕೈಯಲ್ಲಿರುವ ರೋಡ್‌ ನಿಂದ ಫಿರ್ಯಾದಿದಾರರಿಗೆ ಹೊಡೆಯಲು ಬೀಸಿದ್ದು, ಆಗ  ಫಿರ್ಯಾದಿದಾರರು ಅವರ ಬಲಕೈಯನ್ನು ಅಡ್ಡ ಹಿಡಿದಿದ್ದರಿಂದ ಅವರ ಬಲಕೈಯ ಹೆಬ್ಬೆರಳಿಗೆ ಪೆಟ್ಟು ಬಿದ್ದು ಹೆಬ್ಬೆರಳಿನ ಮೂಳೆ ಮುರಿತವಾಗಿರುತ್ತದೆ.  ಅಲ್ಲದೇ ಆರೋಪಿಯು ಫಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿರುತ್ತಾನೆ. ಈ ಘಟನೆಗೆ ಫಿರ್ಯಾದಿದಾರರು ಅವರ ತಂಗಿಯ ಮಗನಾದ ಆರೋಪಿಯು ಒಂದು ಹುಡುಗಿಯನ್ನು ಪ್ರೀತಿಸುತ್ತಿರುವ ಬಗ್ಗೆ ಆತನ ತಾಯಿಗೆ ಹೇಳಿ, ಆರೋಪಿಗೆ  ಬುದ್ದಿವಾದ ಹೇಳಿದ್ದಕ್ಕೆ, ಆರೋಪಿಯು ಕೋಪಗೊಂಡು ಉದ್ಧೇಶ ಪೂರ್ವಕವಾಗಿ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವುದಾಗಿದೆ ಈ ಬಗ್ಗೆ ಬ್ರಹ್ಮಾವರ ಠಾಣೆ  ಅಪರಾಧ ಕ್ರಮಾಂಕ  64/2023 : ಕಲಂ 341, 324, 506 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಪಡುಬಿದ್ರಿ: ಪಡುಬಿದ್ರಿ ಠಾಣಾ ಪಿಎಸ್‌‌ಐ (ಕಾ,.ಸು & ಸಂಚಾರ) ಆದ ಪುರುಷೋತ್ತಮ ಎ ರವರು ದಿನಾಂಕ  23.03.2023 ರಂದು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿವ ಸಮಯ 19:00 ಗಂಟೆಗೆ ಬೀಟ್ ಸಿಬ್ಬಂದಿಯವರು ಕರೆ ಮಾಡಿ ಕಾಪು ತಾಲೂಕು ಪಲಿಮಾರು ಗ್ರಾಮದ ಅವರಾಲು ಮಟ್ಟು ಎಂಬಲ್ಲಿರುವ ದೂಮವತಿ ದೈವಸ್ಥಾನದ ಬಳಿ ಪಾಳುಬಿದ್ದ ಗದ್ದೆಯ ಬದಿಯಲ್ಲಿ ಕೆಲವರು ಇಸ್ಪೀಟು ಎಲೆಗಳ ಮೇಲೆ ಹಣವನ್ನು ಪಣವಾಗಿಟ್ಟು ಜೂಜಾಟ  ನಡೆಸುತ್ತಿರುವುದಾಗಿ ನೀಡಿದ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿಯವರಾದ ಎ.ಎಸ್.ಐ ದಿವಾಕರ ಜೆ ಸುವರ್ಣ, ಹೆಚ್‌‌‌‌‌‌.ಸಿ.389 ನರೇಶ್, ಪಿ.ಸಿ.2485 ಮಧುಸೂದನ್, ಪಿ.ಸಿ.2559 ಕರಿಬಸಜ್ಜ, ಪಿ.ಸಿ.1240 ಸಂದೇಶ. ಪಿ.ಸಿ.27 ಶಶಿಕುಮಾರ ರವರೊಂದಿಗೆ ಹಾಗೂ  ಪಂಚರನ್ನು ಕರೆದುಕೊಂಡು ಠಾಣೆಯಿಂದ ಹೊರಟು 19:30 ಗಂಟೆಗೆ ಸ್ಥಳಕ್ಕೆ ತಲುಪಿ ನೋಡಿದಾಗ, 7  ಜನರು  ವೃತ್ತಾಕಾರದಲ್ಲಿ ನೆಲದ ಮೇಲೆ ಪೇಪರನ್ನು ಹಾಸಿ  ಕುಳಿತುಕೊಂಡಿದ್ದು ಅವರಲ್ಲಿ ಒಬ್ಬನ ಕೈಯಲ್ಲಿ ಇಸ್ಪೀಟು  ಎಲೆಗಳನ್ನು ಪೇಪರ್‌ನ ಮೇಲೆ  ಹಾಕುತ್ತಾ  ಉಲಾಯಿ-ಪಿದಾಯಿ  ಎಂದು  ಹೇಳುತ್ತಾ  ಹಣವನ್ನು  ಪಣವಾಗಿ ಇಟ್ಟು ಅದೃಷ್ಟದ ಇಸ್ಪೀಟು ಆಟ ಆಡುತ್ತಿರುವುದು ಖಚಿತ ಪಡಿಸಿಕೊಂಡು, ಪಂಚರ ಸಮಕ್ಷಮ 19:30 ಗಂಟೆಗೆ ದಾಳಿ ನಡೆಸಿ, ಆರೋಪಿಗಳಿಂದ ಇಸ್ಪೀಟು ಎಲೆಗಳು-52, ನಗದು 14,900/- ರೂ. ಅರ್ಧ ಹೊತ್ತಿ ಉರಿದ ಕ್ಯಾಂಡಲ್-2, ಹಳೆಯ ನ್ಯೂಸ್‌‌‌‌‌‌ ಪೇಪರ್‌‌‌-2 ಸ್ವಾಧೀನಪಡಿಸಿಕೊಂಡು, ವರದಿಯನ್ನು ನೀಡಿದ್ದು, ಇದು ಅಸಂಜ್ಞೇಯ ಪ್ರಕರಣವಾಗಿದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ ದಿನಾಂಕ: 26.03.2023 ರಂದು ಆರೋಪಿಗಳ ವಿರುದ್ಧ ಕಲಂ: 87 ಕೆ.ಪಿ ಆಕ್ಟ್‌‌‌‌ ನಂತೆ ಪ್ರಕರಣ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2023,  ಕಲಂ:  87, ಕೆ.ಪಿ. ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ

ಇತ್ತೀಚಿನ ನವೀಕರಣ​ : 26-03-2023 06:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080