ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 25-03-2022 ರಂದು ಮಧ್ಯಾಹ್ನ  ಸುಮಾರು 12:50  ಗಂಟೆಗೆ, ಕುಂದಾಪುರ ತಾಲೂಕಿನ  ಬೀಜಾಡಿ  ಗ್ರಾಮದ  ಪೂಜಾ ಟೈಲ್ಸ್‌ ಬಳಿ  ಎನ್‌‌‌.ಹೆಚ್‌ 66 ರಸ್ತೆಯಲ್ಲಿ,  ಆಪಾದಿತ ಗೋಪಾಲ ನಾಯ್ಕ  ಎಂಬುವರು  KA20-AA-1166ನೇ ಬಸ್‌‌‌ನ್ನು  ಕುಂದಾಪುರ  ಕಡೆಯಿಂದ  ತೆಕ್ಕಟ್ಟೆ  ಕಡೆಗೆ  ಆತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಅದೇ  ದಿಕ್ಕಿನಲ್ಲಿ  ಪಿರ್ಯಾದಿ ಗೋವಿಂದ ಪ್ರಾಯ 46 ವರ್ಷ ತಂದೆ ಕೂಸ ಮೋಗವೀರ ವಾಸ: ನಂಬ್ರ 4/217,  ಹರಪ್ಪನ ಕೆರೆ ಬೆಟ್ಟು, ತೆಕ್ಕಟ್ಟೆ ಗ್ರಾಮ ಎಂಬವರು KA20-EQ7886  Hero Duet ಸ್ಕೂಟರ್‌‌ನಲ್ಲಿ ಅವರ ಪತ್ನಿ ಗೀತಾರವರನ್ನು ಸಹ ಸಹ ಸವಾರಳಾಗಿ  ಕುಳ್ಳಿರಿಸಿಕೊಂಡು  ಸವಾರಿ ಮಾಡಿಕೊಂಡು  ಹೋಗುತ್ತಿದ್ದ  ಸದ್ರಿ  ಸ್ಕೂಟರ್‌ ಗೆ ಹಿಂದಿನಿಂದ  ಅಪಘಾತಪಡಿಸಿದ ಪರಿಣಾಮ  ಸ್ಕೂಟರ್‌ ಸಮೇತ  ರಸ್ತೆಗೆ ಬಿದ್ದು  ಗೋವಿಂದ ಹಾಗೂ  ಗೀತಾ ರವರು ಗಾಯಗೊಂಡು, ಗೀತಾ ರವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಗೋವಿಂದ ರವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ   ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2022  ಕಲಂ 279,337   IPC  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಪಡುಬಿದ್ರಿ:  ಪಿರ್ಯಾದಿ ದಾದಾಫೀರ್  ಪ್ರಾಯ: 51 ವರ್ಷ, ತಂದೆ:ದಿ/ ಹುಸೇನ ಸಾಬ್ , ವಾಸ:ಮನೆ ನಂಬ್ರ: 2-105 (17) ರಾಜೀವ ನಗರ ಪಲಿಮಾರು ಇವರ ಮಕ್ಕಳಾದ ಹಸನ್ ಆಲಿ ಮತ್ತು ಮಲ್ಲಿಕ್ ಜಾನ್  ಎಂಬವರ ಪೈಕಿ ಮಲ್ಲಿಕ ಜಾನ್ ರವರು ಹಸನ್ ಆಲಿಯನ್ನು  ದಿನಾಂಕ: 24/03/2022 ರಂದು KA-20-FJ-6712 ನೇ ಸ್ಕೂಟರಿನಲ್ಲಿ ಹಿಂದುಗಡೆ ಕುಳ್ಳಿರಿಸಿಕೊಂಡು ಪಡುಬಿದ್ರಿಯಿಂದ ಪಲಿಮಾರು ಕಡೆಗೆ  ಅಡ್ವೆ–ಪಲಿಮಾರು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ 15:15 ಗಂಟೆಗೆ ನಂದಿಕೂರು ಗ್ರಾಮದ ವಿಲ್ಸನ್  ಹೋಲೋ ಬ್ಲಾಕ್ ಬಳಿ ತಲುಪಿದಾಗ ಪಲಿಮಾರು ಕಡೆಯಿಂದ ಅಡ್ವೆ ಕಡೆಗೆ  ಆರೋಪಿ ಅಭಿಜಿತ್ ಎಂಬಾತನು ತನ್ನ ಬಾಬ್ತು KA-19-HF-5471ನೇ ನಂಬ್ರದ ಬುಲೆಟ್  ಮೋಟಾರ್ ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಾಗ ರಸ್ತೆಯ ತಿರುವಿನಲ್ಲಿ ನಿಯಂತ್ರಣ ಕಳೆದ ಮೋಟಾರು ಸೈಕಲ್, ಮಲ್ಲಿಕ್ ಜಾನ್ ಚಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡು ಹಸನ್ ಆಲಿಯ ಬಲಕಾಲಿನ ಮೂಳೆ ಮುರಿತ ಹಾಗೂ ಮಲ್ಲಿಕ್ ಜಾನ್ ಇವರ ಬಲಕೈ ಮೂಳೆ ಮುರಿತ ಉಂಟಾಗಿದ್ದು, ಫಿರ್ಯಾದುದಾರರು ಗಾಯಾಳುಗಳನ್ನು ಚಿಕಿತ್ಸೆಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ ಗಾಯಾಳುಗಳನ್ನು ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ.ಫಿರ್ಯಾದುದಾರರು ತನ್ನ ಮಕ್ಕಳ ಆರೈಕೆಯಲ್ಲಿ ಇದ್ದುದರಿಂದ ದೂರ ನೀಡಲು ತಡವಾಗಿದ್ದು, ಈ ದಿನ ದಿನಾಂಕ; 25/03/2022 ರಂದು ಅಪಘಾತ ಸ್ಥಳಕ್ಕೆ ಬಂದು ನೋಡಿದಾಗ ಆರೋಪಿಯು ತನ್ನ ವಾಹನವನ್ನು ಸ್ಥಳದಿಂದ ತೆಗೆದುಕೊಂಡು ಹೋಗಿರುವುದಲ್ಲದೆ ಠಾಣೆಗೆ ಮಾಹಿತಿಯನ್ನು ನೀಡಿರುವುದಿಲ್ಲ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2022 ಕಲಂ 279,338 ಐಪಿಸಿ. ಮತ್ತು 134 (ಎ) (ಬಿ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಹಿರಿಯಡ್ಕ : ಪಿರ್ಯಾದಿ ಭಕ್ತರಾಜ್ (25) ತಂದೆ:  ಕೃಷ್ಣ ಮೂರ್ತಿ  ಮಡಿವಾಳ ವಾಸ: ಶ್ರೀ ದುರ್ಗಾನಿಯ, ಮಡಿವಾಳ ಬೆಟ್ಟು ಇವರ ತಂದೆ ಹಿಂದಿನಿಂದಲೂ ಧೂಮಪಾನ ಮಾಡುವ ಅಭ್ಯಾಸ ಹೊಂದಿದ್ದು ಸುಮಾರು 3-4 ವರ್ಷದಿಂದ ವಿಪರೀತ ಬೀಡಿ ಸೇದುತ್ತಿದ್ದುದ್ದ ರಿಂದ ಆಗಾಗ ಸ್ವಾಶಕೋಶಕ್ಕೆ ಸಂಬಂದಿಸಿದ ಖಾಯಿಲೆಯಿಂದ ಬಳಲುತ್ತಿದ್ದರು . ದಿನಾಂಕ: 22/03/2022 ರಂದು  ಅವರು ಹೊಸನಗರದ ಅವರ ಮನೆಗೆ ಹೋಗಿದ್ದು ಅಲ್ಲಿ ಅವರಿಗೆ ಕೆಮ್ಮು ಜಾಸ್ತಿಯಾಗಿದ್ದು  ಪಿರ್ಯಾದುದಾರರ ಚಿಕ್ಕಮ್ಮ  ಹೊಸನಗರ ಅಸ್ಪತ್ರೆಗೆ  ದಾಖಲಿಸಿದ್ದು ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆಎಂಸಿ ಮಣಿಪಾಲ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಪಿರ್ಯಾದುದಾರರ ತಂದೆಯವರು ದಾರಿ ಮಧ್ಯೆಯೆ ಮೃತಪಟ್ಟಿರುವುದಾಗಿ  4: 30 ಗಂಟೆಗೆ ತಿಳಿಸಿರುತ್ತಾರೆ. ಈ .ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ನಂಬ್ರ:12/2022 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 26-03-2022 10:48 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080