ಅಭಿಪ್ರಾಯ / ಸಲಹೆಗಳು

ಅಪಘಾತಪ್ರಕರಣ

 • ಮಣಿಪಾಲ:ಪಿರ್ಯಾದಿದಾರರಾದ ಹಮ್ಜತ್ (44) ತಂದೆ: ದಿ. ಅಬ್ದುಲ್‌ ರೆಹಮಾನ್‌ , ವಾಸ:ನೂರುಲ್‌ ಹುದಾ, ಗುಂಡಿಬೈಲು , ದೊಡ್ಡಣಗುಡ್ಡೆ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ,  ಶಿವಳ್ಳಿ ಗ್ರಾಮ, ಕುಂಜಿಬೆಟ್ಟು ಪೊಸ್ಟ್ ಉಡುಪಿ ಇವರು ದಿನಾಂಕ 25/03/2022 ರಂದು ರಾತ್ರಿ ಸುಮಾರು 7:15 ಗಂಟೆಗೆ ತನ್ನ KA-20-EH-0904 ಸ್ಕೂಟರ್‌ನಲ್ಲಿ ಅಕ್ಕನ ಮಗ ಮೊಹಮ್ಮದ್ ಇರ್ಫಾನ್‌ ನನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಮನೋಳಿಗುಜ್ಜೆಯಿಂದ ಚಕ್ರತೀರ್ಥ ಕಡೆಗೆ ಹೋಗುತ್ತಾ ಮನೋಳಿಗುಜ್ಜಿ ಸಂತೋಷ್‌ ರವರ ಮನೆಯ ಬಳಿ ತಲುಪಿದಾಗ ಎದುರುಗಡೆ ಚಕ್ರತೀರ್ಥ ಕಡೆಯಿಂದ KA-18 EH-2820 ನೇ ಮೋಟಾರ್‌ ಸೈಕಲ್‌ನ್ನು   ಅದರ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಬಲಭಾಗಕ್ಕೆ ಸವಾರಿ ಮಾಡಿಕೊಂಡು ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಮ್ಜತ್ ಹಾಗೂ ಅವರ ಅಕ್ಕನ ಮಗ ಸ್ಕೂಟರ್ ಸಮೇತರಸ್ತೆಗೆ ಬಿದ್ದು ಇಬ್ಬರಿಗೂ ತೀವ್ರ ತರದ ರಕ್ತ ಗಾಯವಾಗಿದ್ದು ಆರೋಪಿತನಿಗೂ ಸಾದಾ ಸ್ವರೂಪದ ರಕ್ತಗಾಯವಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 46/2022 ಕಲಂ :279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಫಿರ್ಯಾದಿದಾರರಾದ ಚಂದ್ರ ನಾಯ್ಕ (47) ತಂದೆ: ಬಾಬಣ್ಣ ನಾಯ್ಕ ವಾಸ:ಹೊರಳಿ ಜಡ್ಡು ಹೆಗ್ಗುಂಜೆ ಗ್ರಾಮ ಮಂದಾರ್ತಿ ಅಂಚೆ ಬ್ರಹ್ಮಾವರ ಇವರು ದಿನಾಂಕ 25/03/2022 ರಂದು ಇವರು ತನ್ನ ಮಗನನ್ನು ಆತನಿಗಿರುವ ಅಲರ್ಜಿಯ ಬಗ್ಗೆ ಚಿಕಿತ್ಸೆಗಾಗಿ  ತನ್ನ ಮೋಟಾರ್ ಸೈಕಲ್ KA-20 EB-2931 ನೇದರಲ್ಲಿ ಮಗನನ್ನು ಹಿಂಬದಿ ಕುಳ್ಳಿರಿಸಿಕೊಂಡು ಚಿಕಿತ್ಸೆ ಕೊಡಿಸಿ ವಾಪಾಸ್ಸು ಜಾನುವಾರುಕಟ್ಟೆ ಮಾರ್ಗವಾಗಿ ಬರುತ್ತಿರುವಾಗ ಬೆಳಿಗ್ಗೆ ಸುಮಾರು 11;00 ಗಂಟೆಯ ಸಮಯಕ್ಕೆ ಬನ್ನೆರುಕಟ್ಟೆ ಎಂಬಲ್ಲಿ ಶರತ್  ಭಂಢಾರಿಯವರ ಮನೆಯ ಬಳಿ ಇಳಿಜಾರು ರಸ್ತೆಯಲ್ಲಿ ಚಂದ್ರ ನಾಯ್ಕ ಇವರ ಹಿಂಬದಿ ಯಿಂದ KA-20 C-0426 ಟಿಪ್ಪರ್ ಚಾಲಕ ತನ್ನ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಓವರ್ ಮಾಡಿಕೊಂಡು ಮುಂದೆ ಹೋಗಿ ಏಕಾಏಕಿ ಒಮ್ಮೆಲೆ ಬ್ರೇಕ್ ಹಾಕಿರುವುದರಿಂದ ಚಂದ್ರ ನಾಯ್ಕ ಇವರ ಮೋಟಾರ್ ಸೈಕಲಿಗೆ ಬ್ರೇಕ್ ತಾಗದೇ ಎದುರಿನ ಟಿಪ್ಪರ್ ಗೆ ಹಿಂಬದಿಯ ಬಲ ಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇವರು ಹಾಗೂ ಹಿಂಬದಿಯ ಸವಾರ  ಪ್ರವೀಣ್ ನು ಮೋಟಾರ್ ಸೈಕಲ್ ಸಮೇತ ಡಾಮರು ರಸ್ತೆಗೆ ಬಿದ್ದ ಪರಿಣಾಮ ಇವರ ಎಡ ಬದಿಯ ತುಟಿಗೆ ರಕ್ತಗಾಯವಾಗಿದ್ದು ಅಲ್ಲದೇ ಎಡ ಬದಿಯ ಎದೆಯ ಪಕ್ಕೆಲುಬುಗಳಿಗೆ  ಗುದ್ದಿದ್ದು ಒಳ ನೋವಾಗಿರುತ್ತದೆ. ಹಿಂಬದಿಯ ಸವಾರನಿಗೆ ಎದೆಗೆ ಗುದ್ದಿದ್ದು ಯಾವುದೇ ನೋವುಗಳಾಗಿರುವುದಿಲ್ಲ.ಅಲ್ಲದೇ ಚಂದ್ರ ನಾಯ್ಕ ಇವರ ಎಡ ಕಿವಿಯಲ್ಲಿ ಬಿದ್ದ ಪರಿಣಾಮ ರಕ್ತ ಬಂದಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 38/2022 ಕಲಂ: 279.,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ; ದಿನಾಂಕ 24/03/2022  ರಂದು ಸಂಜೆ ಸುಮಾರು 6:45 ಗಂಟೆಗೆ, ಕುಂದಾಪುರ  ತಾಲೂಕಿನ, ಕೊಟೇಶ್ವರ  ಗ್ರಾಮದ  ಮೆಜೆಸ್ಟಿಕ್‌‌ ಹಾಲ್‌ಬಳಿ ಸರ್ವಿಸ್‌ರಸ್ತೆಯಲ್ಲಿ, ಆಪಾದಿತ ಭರತ್‌ಎಂಬವರು KA-04-MR-7288  ಮಾರುತಿ Swift  ಕಾರನ್ನು ಹಿಮ್ಮುಖವಾಗಿ ಚಲಾಯಿಸಿ,  ಅದೇ  ಸರ್ವಿಸ್‌ರಸ್ತೆಯಲ್ಲಿ, ಕುಂದಾಪುರ ಕಡೆಯಿಂದ ಕೊಟೇಶ್ವರ ಕಡೆಗೆ ನಡೆದುಕೊಂಡು ಬರುತ್ತಿದ್ದ ಪಿರ್ಯಾದಿದಾರರಾದ ರಾಜೇಶ್‌ ವಿ (42) ತಂದೆ : ಗಣಪ ವಾಸ:   ಮಠದಬೆಟ್ಟು, ವಡೇರಹೋಬಳಿ ಗ್ರಾಮ ಕುಂದಾಪುರ ರವರ ಮಾವ ಹೆರಿಯ @ ಮಹಾಬಲ ರವರಿಗೆ ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಹೆರಿಯ @ ಮಹಾಬಲ ರವರು  ರಸ್ತೆಗೆ ಬಿದ್ದ  ಸಮಯ ಅವರ ಬಲ ಕೈಯ ಮೇಲೆ ಕಾರಿನ ಚಕ್ರ ಹಾದು ಹೋಗಿ ಅವರ ಕೈಗೆ ಜಜ್ಜಿದ  ಹರಿದ ರಕ್ತಗಾಯವಾಗಿ ಕೊಟೇಶ್ವರ ಎನ್‌. ಆರ್‌ಆಚಾರ್ಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ. ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 43/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಉಡುಪಿ; ಪಿರ್ಯಾದಿದಾರರಾದ ಶ್ರೀಮತಿ ಜಯಂತಿ (50) ಗಂಡ: ದಿ. ವಿಶ್ವನಾಥಪೂಜಾರಿವಾಸ: ಮನೆನಂಬ್ರ 11-3-31, ಧೂಮಾವತಿರಸ್ತೆ, ಶೀರಿಬೀಡು, ಮೂಡನಿಡಂಬೂರು ಗ್ರಾಮ, ಉಡುಪಿ ಇವರ ಮೈದುನನಾದ ಹರಿಶ್ಚಂದ್ರ (52)ರವರು ಅವಿವಾಹಿತನಾಗಿದ್ದು, ಪೈಂಟಿಂಗ್‌ ಕೆಲಸ ಮಾಡಿಕೊಂಡಿದ್ದವನು ತನ್ನ ವಯೋವೃದ್ಧ ತಾಯಿ ಹಾಗೂ ಮಾನಸಿಕ ಅಸ್ವಸ್ಥೆಯಾದ ತಂಗಿಯೊಂದಿಗೆ ವಾಸವಿದ್ದವರು ವಿಪರೀತ ಮದ್ಯ ವ್ಯಸನಿಯಾಗಿದ್ದವನು ಸುಮಾರು ಎರಡು ಮೂರು ದಿನಗಳ ಹಿಂದೆ ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಮೃತಪಟ್ಟು, ಕೊಳೆತ ಸ್ಥಿತಿಯಲ್ಲಿ ದಿನಾಂಕ 25/03/2022 ರಂದು ಸಂಜೆ 7:30  ಗಂಟೆ ಸುಮಾರಿಗೆ ಕಂಡು ಬಂದಿರುವುದಾಗಿದೆ  ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 18/2022ಕಲಂ; 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕುಂದಾಪುರ; ಪಿರ್ಯಾದಿದಾರರಾಧ ಸದಾಶಿವ ಕೋಟೆಗಾರ್ (56) ತಂದೆ: ನಾರಾಯಾಣ ಕೋಟೆಗಾರ್ ವಾಸ: ನರಿಗುಡ್ಡೆ ಮನೆ, ಕುಂದೇಶ್ವರ ದೇವಸ್ಥಾನದ ಹತ್ತಿರ, ಕಸನಾ ಗ್ರಾಮ, ಕುಂದಾಪುರ ಇವರು ದಿನಾಂಕ 25/03/2022 ರಂದು 19:45 ಗಂಟೆಗೆ  ಕುಂದಾಪುರದ ನವೀನ್ ಡ್ರೈವ್ ಇನ್ ಬಾರಿನ ಬಳಿಯ ಓಣಿಯಲ್ಲಿ ಸಿಗರೇಟ್ ಸೇದುತ್ತಾ ನಿಂತಿರುವಾಗ ಸದಾಶಿವ ಕೋಟೆಗಾರ್ ರವರಿಗೆ ಪರಿಚಯವಿಲ್ಲದ ನಾಲ್ಕು ಜನ ಅಪರಿಚಿತರು ಇವರ ಬಳಿ ಬಂದು ಇಬ್ಬರು ಅವರನ್ನು ದೂಡಿದ್ದು ಸದಾಶಿವ ಕೋಟೆಗಾರ್ ಇವರು ನೆಲಕ್ಕೆ ಬಿದ್ದಾಗ ಆರೋಪಿತರ ಪೈಕಿ ಓರ್ವನು ಸದಾಶಿವ ಕೋಟೆಗಾರ್ ಇವರ ಬಲ ಮೊಣಕಾಲಿಗೆ ದೊಣ್ಣೆಯಿಂದ ಹೊಡೆದಿದ್ದು ಉಳಿದಿಬ್ಬರು ಕೈಯಲ್ಲಿ ಕಬ್ಬಿಣದ ರಾಡ್ ಮತ್ತು ತಲವಾರುಹಿಡಿದುಕೊಂಡಿದ್ದುಆರೋಪಿತರೆಲ್ಲಾ  ಕಾಲಿನಿಂದ ತುಳಿದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಆರೋಪಿತರು ನಡೆಸಿದ ಹಲ್ಲೆಯಿಂದಾಗಿ ಸದಾಶಿವ ಕೋಟೆಗಾರ್ ರವರು ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಇವರು ಆರ್.ಟಿ.ಐ ಕಾರ್ಯಕರ್ತನಾಗಿದ್ದು ಅಕ್ರಮದ ಕುರಿತು ಹಲವಾರು ದೂರನ್ನು ದಾಖಲಿಸಿದ್ದು ಇದರಿಂದಾಗಿ ಸಿಟ್ಟಾಗಿರುವ ಯಾರೋ ಸದ್ರಿ ಕೃತ್ಯವನ್ನು ನಡೆಸಿರಬಹುದುದಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 37/2022 ಕಲಂ: 324,323, 504,506 R/W 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-03-2022 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080