ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ದಿನಾಂಕ 25/03/2021 ರಂದು ಬೆಳಿಗ್ಗೆ 12:00 ಗಂಟೆಗೆ ಪಿರ್ಯಾದಿದಾರರಾದ ಸುಧೀರ್ ಶೆಟ್ಟಿ (28), ತಂದೆ:ರಾಮಯ್ಯ ಶೆಟ್ಟಿ, ವಾಸ: ಹೆಗ್ಗೇರಿಮನೆ, ತಗ್ಗರ್ಸೆ  ಗ್ರಾಮ ಬೈಂದೂರು ತಾಲೂಕು ಇವರ ಪರಿಚಯದ ದಾಸಪ್ಪನವರು ಅವರ KA-20-AA-1016 ನೇ ಗೂಡ್ಸ್ ರಿಕ್ಷಾವನ್ನು ಇಟ್ಟುಕೊಂಡು ಪಿರ್ಯಾದಿದಾರರ ಮನೆಯ ಎದುರು ಕೊಲ್ಲೂರು ಯಡ್ತರೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 766ಸಿ ದಕ್ಷಿಣ ಬದಿಯ ಮಣ್ನು ರಸ್ತೆಯಲ್ಲಿ ಬಾಡಿಗೆದಾರರನ್ನು ಕಾಯುತ್ತ ನಿಂತಿರುವಾಗ ಕೊಲ್ಲೂರು ಕಡೆಯಿಂದ ಯಡ್ತರೆ ಕಡೆಗೆ ಸಿಲ್ವರ್ ಬಣ್ಣದ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಣ್ನು ರಸ್ತೆಯಲ್ಲಿ  ಬಾಡಿಗೆದಾರರನ್ನು ಕಾಯುತ್ತ ನಿಂತಿದ್ದ ದಾಸಪ್ಪನವರಿಗೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಸದೇ ಪರಾರಿಯಾಗಿರುತ್ತಾನೆ. ಪರಿಣಾಮ  ದಾಸಪ್ಪರವರು ತೀವ್ರವಾಗಿ ಗಾಯಗೊಂಡಿದ್ದು ಪಿರ್ಯಾದಿದಾರರು ಇತರರೊಂದಿಗೆ ಸೇರಿ ದಾಸಪ್ಪನವರನ್ನು ಎತ್ತಿ ಉಪಚರಿಸಿ ರಿಕ್ಷಾದಲ್ಲಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಲ್ಲಿ ದಾಸಪ್ಪರವರನ್ನು ಪರೀಕ್ಷಿಸಿ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 63/2021 ಕಲಂ: 279, 304(A) ಭಾದಂಸಂ ಮತ್ತು 134 (ಎ) (ಬಿ) ಐಎಮ್ ವಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಗೋವಿಂದರಾಜ್ ಶೆಟ್ಟಿ ಯಾನೆ  ಗೋವಿಂದ ಶೆಟ್ಟಿ (52),  ತಂದೆ: ದಿ. ಪಿ. ಕೆ. ಸಂಜೀವಿನಿ ಸುಬ್ಬಣ್ಣ ಶೆಟ್ಟಿ, ವಾಸ: ಹೌಸ್ ಆರ್ಯಾಡಿ, ಪಾಂಗಾಳ ಅಂಚೆ ಮತ್ತು ಗ್ರಾಮ ಇವರು ಆರೋಪಿತರಾದ ಶ್ರೀಮತಿ ಆಶಾ ಆರ್ ಶೆಟ್ಟಿ ಹಾಗೂ ಇತರರಿಗೆ ಸಂಬಂಧಿಸಿದ ಬಪ್ಪನಾಡು ಗ್ರಾಮದ ಸರ್ವೆ ನಂಬ್ರ 53/14ಪಿ1 ರಲ್ಲಿ 0.97 ಎಕ್ರೆ ಜಮೀನನ್ನು ಖರೀದಿಸುವ ಬಗ್ಗೆ ದಿನಾಂಕ 15/05/2013 ರಂದು ಕ್ರಯದ ಕರಾರನ್ನು ಮಾಡಿದ್ದು, ಕ್ರಯದ ಕರಾರಿನ ಮೂಲಕ ಸಂಪೂರ್ಣ ಪ್ರತಿಫಲ ಮೊತ್ತವನ್ನು ಅವರು ಪಡೆದಿರುತ್ತಾರೆ. ಕರಾರನ್ನು ಮಾಡುವ ಸಂದರ್ಭ ಕ್ರಯದ ಸಂಪೂರ್ಣ ಮೊತ್ತವನ್ನು ಪಿರ್ಯಾದಿದಾರರು ನೀಡಿರುತ್ತಾರೆ. ಕ್ರಯದ ವಹಿವಾಟನ್ನು ಆರೋಪಿ ಆಶಾ ಆರ್‌ ಶೆಟ್ಟಿ ಅವರ ಗಂಡ  ರತ್ನಾಕರ ಆರ್  ಶೆಟ್ಟಿ ಹಾಗೂ ಮಗ ರಿಶಿತ್ ಆರ್ ಶೆಟ್ಟಿ ರವರ ಮೂಲಕ ಮಾಡಿರುತ್ತಾರೆ. ಕರಾರಿನ ಸ್ಥೀರಾಸ್ತಿಯೂ ಭೂ  ನ್ಯಾಯ ಮಂಡಳಿಯ ಆದೇಶದಂತೆ ಬಂದಿದ್ದು, ಕ್ರಯ ಪತ್ರ ನೀಡಲು ಕಾಲಾವಕಾಶ ಇದ್ದ  ಕಾರಣ 2018 ರಲ್ಲಿ ಪಿರ್ಯಾದಿದಾರರ ಹೆಸರಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಕ್ರಯ ಪತ್ರವನ್ನು ಮಾಡುವ ಶರ್ತವನ್ನು ಒಳಗೊಂಡಿರುತ್ತದೆ. ಆದರೆ ಭೂ ನ್ಯಾಯ ಮಂಡಳಿಯ ಆದೇಶದಂತೆ ಮಾರಾಟ ನಿರ್ಬಂಧದ ಕಾಲಾವಕಾಶ ಮುಗಿದ ಬಳಿಕ ಪಿರ್ಯಾದಿದಾರರ ಹೆಸರಿಗೆ ಕ್ರಯದ ಪತ್ರವನ್ನು ಮಾಡಲು ಕೋರಿಕೊಂಡರೂ ಆರೋಪಿಗಳು ವಿವಿಧ ಕಾರಣ ನೀಡಿ ಕ್ರಯ ಪತ್ರವನ್ನು ಪಿರ್ಯಾದಿದಾರರ ಹೆಸರಿಗೆ ಮಾಡದೇ ಸತಾಯಿಸಿ ಮೋಸ ಮಾಡಿರುವುದಾಗಿದೆ.  ಜಮೀನನ್ನು ಅಳತೆ ಮಾಡಿ ಗಡಿ ಗುರುತು ತೋರಿಸುವರೇ ಪಿರ್ಯಾದಿದಾರರು ಹಲವಾರು ಬಾರಿ ಒತ್ತಾಯ ಮಾಡಿದರೂ ಮೋಸ ಮಾಡುವ ಉದ್ದೇಶದಿಂದ ಬೇರೆ ಬೇರೆ ಕಾರಣ ನೀಡಿ ಪಿರ್ಯಾದಿದಾರರನ್ನು ದಾರಿ ತಪ್ಪಿಸುವ ಪ್ರಯತ್ನವನ್ನು ಮಾಡುತ್ತ ಬಂದಿರುತ್ತಾರೆ. ಹೀಗಿರುವಾಗ ಪಿರ್ಯಾದಿದಾರರು ಜಮೀನಿಗೆ ಸಂಬಂಧಿಸಿದ ಮೂಲ್ಕಿ ಸಬ್‌ ರಿಜೀಸ್ಟರ್ ಕಛೇರಿಯಿಂದ  ಇ.ಸಿ. ಯನ್ನು ಪಡೆದು ಪರಿಶೀಲಿಸಿದಾಗ ಆರೋಪಿಗಳು ಪಿರ್ಯಾದಿದಾರರಿಗೆ ತಿಳಿಸದೇ, ಪಿರ್ಯಾದಿದಾರರು ನೀಡಿದ ಹಣವನ್ನು ಹಿಂತಿರುಗಿಸದೇ ಬೇರೆ ವ್ಯಕ್ತಿಗಳಿಂದ ಹಣ ಪಡೆದು ಮಾರಾಟ ಮಾಡಿ, ಅವರ ಹೆಸರಿಗೆ ಕ್ರಯ ಪತ್ರ ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಆರೋಪಿಗಳು ಪಿರ್ಯಾದಿದಾರರ ಹಾಗೂ ಪಿರ್ಯಾದಿದಾರರ ಪತ್ನಿಯ ಫೋರ್ಜರಿ ಸಹಿ ಮಾಡಿ ಪಿರ್ಯಾದಿದಾರರ ಕರಾರನ್ನು ರದ್ದು ಮಾಡಿದ ಬಗ್ಗೆ ನಕಲಿ ದಾಖಲೆ ಸೃಷ್ಟಿ ಮಾಡಿ ಮೋಸ ಮಾಡಿದ್ದು, ಅಲ್ಲದೇ ಪಿರ್ಯಾದಿದಾರರ ಜಮೀನಿಗೆ ಸಂಬಂದಿಸಿದ ದಾಖಲೆಗಳು ಕಳೆದು ಹೋಗಿದೆ ಎಂದು ಹೇಳಿ ದಿನ ಪತ್ರಿಕೆಯಲ್ಲಿ ಸುಳ್ಳು ಪ್ರಕಟಣೆಯನ್ನು ನೀಡಿ ಅದರ ದೃಢೀಕೃತ ನಕಲುಗಳ ಮೂಲಕ 3 ನೇ ವ್ಯಕ್ತಿಗೆ ಮಾರಾಟ ಮಾಡಿರುತ್ತಾರೆ. ಆರೋಪಿಗಳು ಕರಾರಿನಂತೆ ಪಿರ್ಯಾದಿದಾರರ ಹೆಸರಿಗೆ  ಕ್ರಯ ಪತ್ರವನ್ನು ಮಾಡದೇ  ಮೋಸ ವಂಚನೆ ಮಾಡಿ ಪಿರ್ಯಾದಿದಾರರ ಅನುಮತಿ ಇಲ್ಲದೇ ಫೋರ್ಜರಿ ಸಹಿ ಮಾಡಿ, ನಕಲಿ ದಾಖಲೆ ಸೃಷ್ಟಿಸಿ, ಕರಾರಿನಂತೆ ಜಮೀನನ್ನು ಪಿರ್ಯಾದಿದಾರರ ಹೆಸರಿಗೆ ಮಾಡದೇ, ಹಣವನ್ನು ಹಿಂತಿರುಗಿಸದೇ,  ಪಿರ್ಯಾದಿದಾರರಿಗೆ ತೀವೃ ನಷ್ಟವುಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2021 ಕಲಂ: 465, 468, 420  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 26-03-2021 10:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ