ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 25/03/2021 ರಂದು ರಾತ್ರಿ 8:00 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ  ಗ್ರಾಮದ ದೂಪದಕಟ್ಟೆ ಎಂಬಲ್ಲಿ ಅತ್ತೂರು ಚರ್ಚ್ ನ ದ್ವಾರದ  ಬಳಿ ರಾಜ್ಯ ಹೆದ್ದಾರಿಯಲ್ಲಿ KA-20-EE-1138 ನೇ ನಂಬ್ರದ ಬೈಕ್ ಸವಾರನು ಬೆಳ್ಮಣ್ ಕಡೆಯಿಂದ ಕಾರ್ಕಳ ಕಡೆಗೆ ತನ್ನ ಬೈಕ್ ನ್ನು ಚಲಾಯಿಸಿಕೊಂಡು ಬರುತ್ತಿದ್ದಾಗ ಅತ್ತೂರು ಪಂಚಾಯತ್ ರಸ್ತೆಯಿಂದ KA-20-M-3421 ನೇ ನಂಬ್ರದ ಕಾರು ಚಾಲಕ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಾಜ್ಯ ಹೆದ್ದಾರಿ ರಸ್ತೆಗೆ ಒಮ್ಮೇಲೆ ನುಗ್ಗಿಸಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ  ಗಣೇಶ್ ರವರು ರಸ್ತೆಗೆ ಬಿದ್ದು,  ಅವರ ಎಡಕಾಲಿನ ಪಾದ ಮೂಳೆ ಮುರಿತ ಮತ್ತು ನರ ಕಟ್ಟಾಗಿರುತ್ತದೆ.  ಚಿಕಿತ್ಸೆ ಬಗ್ಗೆ ಕಾರ್ಕಳ ಸಿಟಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ,ನಂತರ  ಹೆಚ್ಚಿನ ಚಿಕಿತ್ಸೆ ಬಗ್ಗೆ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾ ಹೆಚ್ ಕೃಷ್ಣ ಶೆಣೈ (59), ತಂದೆ: ದಿ ಕೊಗ್ಗಪ್ಪ ಶೆಣೈ, ವಾಸ: ಲಕ್ಷ್ಮೀ ದಾಮೋದರ ನಿಲಯ 28 ಹಾಲಾಡಿ ಗ್ರಾಮ  ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರ ಅಣ್ಣನ ಮಗ ಪ್ರೇಮಾನಂದ ಶೆಣೈ (50)ರವರು ವಿಪರೀತ ಕುಡಿತದ ಚಟ ಹೊಂದಿದ್ದು ಇದರಿಂದಾಗಿ ಆರೋಗ್ಯದಲ್ಲಿ ಅಸ್ವಸ್ಥಗೊಂಡು ದಿನಾಂಕ 26/03/2021 ರಂದು ಬೆಳಿಗ್ಗೆ 08:00 ಗಂಟೆಗೆ ಬಾಯಲ್ಲಿ ರಕ್ತ ಬರುತ್ತಿದ್ದವರನ್ನು ಚಿಕಿತ್ಸೆಯ ಬಗ್ಗೆ ಹಾಲಾಡಿ ದುರ್ಗಾ ಆಸ್ಪತ್ರೆಗೆ ಕೊಂಡು ಹೋದಲ್ಲಿ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿ ವೈದ್ಯರು ಮೃತ ಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ ಕ್ರಮಾಂಕ 12/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ ಶೃತಿ (28), ಗಂಡ: ಪ್ರಶಾಂತ್‌ ಆಚಾರಿ, ವಾಸ: ಕುಚ್ಚೂರು ಗ್ರಾಮದ ಮಂಡಗದ್ದೆ ಹೆಬ್ರಿ ತಾಲೂಕು ಇವರ ಗಂಡ ಪ್ರಶಾಂತ  ಆಚಾರಿ (36) ರವರು  ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು ವಿಪರೀತ ಮದ್ಯಪಾನ ಮಾಡಿ ನಸಿಕ ಖಿನ್ನತೆಗೆ ಒಳಗಾಗಿದ್ದವರನ್ನು ಕುಡಿತದ ಚಟವನ್ನು ಬಿಡಿಸಲು ಉಡುಪಿ ಜಿಲ್ಲಾ ಆಸ್ಪತ್ರೆ ಹಾಗೂ ಉಡುಪಿ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಕೂಡಾ ಕುಡಿತವನ್ನು ಬಿಟ್ಟಿರುವುದಿಲ್ಲ ಹಾಗೂ ಈ ಹಿಂದೆ  2- 3 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು  ಇದೇ ವಿಚಾರದಲ್ಲಿ ಮನನೊಂದು ಮಾನಸಿಕ ಖಿನ್ನತೆಯಿಂದ ದಿನಾಂಕ 26/03/2021 ರಂದು  ಬೆಳಿಗ್ಗೆ 11:00  ಗಂಟೆಯಿಂದ ಮಧ್ಯಾಹ್ನ 12:30  ಗಂಟೆಯ ಮಧ್ಯಾವಧಿಯಲ್ಲಿ ಕುಚ್ಚೂರು ಗ್ರಾಮದ ಮಂಡಗದ್ದೆ ಎಂಬಲ್ಲಿರುವ ವಾಸದ ಮನೆಯ ಮಾಳಿಗೆ ಮಾಡಿನ ಜಂತಿಗೆ ಬಟ್ಟೆಯ ದಾರನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ  ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 10/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ

ಇತರ ಪ್ರಕರಣ

  • ಉಡುಪಿ: 1 ನೇ ಆರೋಪಿ ದಿವಾಕರ ಪೂಜಾರಿ ಮತ್ತು ಪಿರ್ಯಾದಿದಾರರಾದ ಶ್ರೀಮತಿ ಶ್ಯಾಮಲಾ ಪೂಜಾರಿ (39), ಗಂಡ: ದಿವಾಕರ  ಪೂಜಾರಿ, ವಾಸ: ಚೆರ್ಕಾಡಿ ಶಾನ ರ ಬೆಟ್ಟು ಪೇತ್ರಿ ಬ್ರಹ್ಮಾವರ ತಾಲೂಕು ಉಡುಪಿ ಇವರ ವಿವಾಹವು ದಿನಾಂಕ 09/05/2010 ರಂದು ಹೆಬ್ರಿ ನಾರಾಯಣ ಗುರು ಸಭಾ ಭವನದಲ್ಲಿ ನೆರವೇರಿರುತ್ತದೆ. ಆರೋಪಿ ಮದುವೆ ಸಂಧರ್ಭದಲ್ಲಿ ಪಿರ್ಯಾದಿದಾರರ ಮನೆಯವರಿಂದ 1,25,000/- ರೂಪಾಯಿ ವರದಕ್ಷಿಣೆ ಹಣವನ್ನು ಪಡೆದುಕೊಂಡಿರುತ್ತಾನೆ. ಮದುವೆ ನಂತರ ಪಿರ್ಯಾದಿದಾರರು ಆರೋಪಿ ಮನೆಯಾದ ಬ್ರಹ್ಮಾವರ ತಾಲೂಕು ಚೇರ್ಕಾಡಿ ಗ್ರಾಮದ ಶಾನಾರ್ ಬೆಟ್ಟುವಿಗೆ ಬಂದಿರುತ್ತಾರೆ. ದಿನಾಂಕ 30/04/2019 ರಂದು ಆರೋಪಿ ಚೇರ್ಕಾಡಿ ಗ್ರಾಮದ ಶಾನಾರ್ ಬೆಟ್ಟುವಿನಲ್ಲಿ ಹೊಸ ಮನೆ ಕಟ್ಟಿಸಿ ಗೃಹ ಪ್ರವೇಶ ಮಾಡಿಸಿದ್ದು, ಆ ದಿನದಿಂದ ಆರೋಪಿ ಪಿರ್ಯಾದಿದಾರರಿಗೆ ಹೊಡೆದು ಬಡಿದು ಅವಾಚ್ಯ ಶಬ್ದದಿಂದ ಬೈದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುತ್ತಾನೆ. ಈ ಕೃತ್ಯಕ್ಕೆ ಉಳಿದ ಆರೋಪಿತರಾದ 1 ನೇ ಆರೋಪಿಯ ಅಮ್ಮ ರತಿ ಪೂಜಾರ್ತಿ, ಆರೋಪಿಯ ತಂಗಿ ಪುಷ್ಪ ಹಾಗೂ ಆರೋಪಿ ತಂಗಿ ಗಂಡ ಶಂಕರ ಪೂಜಾರಿ ಸಹಕಾರ ನೀಡಿದ್ದು, ಅಲ್ಲದೇ ಆರೋಪಿತರು ಹೆಚ್ಚಿನ ವದಕ್ಷಿಣೆ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. 2 ನೇ ಆರೋಪಿ ರೂಪ ಇವರು ಪಿರ್ಯಾದಿದಾರರಿಗೆ ಫೋನ್ ಮಾಡಿ ನಿಂದಿಸಿರುತ್ತಾರೆ.  ದಿನಾಂಕ 24/03/2021 ರಂದು ಸಂಜೆ 5:00 ಗಂಟೆಗೆ 1 ನೇ ಆರೋಪಿ ಪಿರ್ಯಾದಿದಾರರ ಕುತ್ತಿಗೆಯ ಹಿಂಭಾಗಕ್ಕೆ ಹೊಡೆದು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2021 ಕಲಂ: 498(A),323,504,506 ಜೊತೆಗೆ 34 ಐಪಿಸಿ ಜೊತೆಗೆ 3 & 4 DP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
     

ಇತ್ತೀಚಿನ ನವೀಕರಣ​ : 26-03-2021 05:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080