ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಬ್ರಹ್ಮಾವರ: ದಿನಾಂಕ 24/02/2023 ರಂದು ಫಿರ್ಯಾದಿದಾರರಾದ ದಾಮೋದರ್‌ಆಚಾರ್ಯ (54)  ತಂದೆ: ದಿ|| ಶ್ಯಾಮರಾಯ ಆಚಾರ್ಯ, ವಾಸ: ಶ್ರೀ ದುರ್ಗಾ ನಿಲಯ, ದೇವಬೈಲು, ಚಾಂತಾರು ಗ್ರಾಮ, ಬ್ರಹ್ಮಾವರ ರವರು ಬ್ರಹ್ಮಾವರದಿಂದ ಸಾಲಿಕೇರಿಗೆ ತನ್ನ ಸೈಕಲ್‌ನಲ್ಲಿ ಸವಾರಿ ಮಾಡಿಕೊಂಡು ಬ್ರಹ್ಮಾವರ ಭರಣಿ ಬಂಕ್‌ಎದುರಿನ ರಸ್ತೆಯಲ್ಲಿ ಹೋಗಿ, ವಾರಂಬಳ್ಳಿ ಗ್ರಾಮದ ಧರ್ಮಾವರಂ ಎದುರು ರಾ.ಹೆ 66 ರ ಕುಂದಾಪುರ – ಉಡುಪಿ ಸರ್ವೀಸ್‌ರಸ್ತೆಯ ತೀರ ಬಲಭಾಗದಲ್ಲಿ ಸೈಕಲ್‌ನಲ್ಲಿ ಬೇಳೂರುಜೆಡ್ಡು ಕ್ರಾಸ್‌ಕಡೆಗೆ ಹೋಗುತ್ತಿರುವಾಗ ಸಮಯ ಸಂಜೆ 6:30 ಗಂಟೆಗೆ ರಾಹೆ 66 ರ ಕುಂದಾಪುರ ಉಡುಪಿ ರಸ್ತೆಯಲ್ಲಿ ಕುಂದಾಪುರ ಕಡೆಯಿಂದ 1 ನೇ ಆರೋಪಿ ವಿಠ್ಠಲ್‌ಸಾಲಿಯಾನ್ ಎಂಬವರು ಅವರ KA-.20.5933 ನೇ ಮೋಟಾರ್‌ಸೈಕಲ್‌ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಅವರ ತೀರಾ ಎಡಭಾಗಕ್ಕೆ ಸವಾರಿ ಮಾಡಿ ಫಿರ್ಯಾದಿದಾರರ ಸೈಕಲ್‌ಗೆ ಡಿಕ್ಕಿ ಹೊಡೆದು,  ಪರಿಣಾಮ ಇವರು ಹಾಗೂ 1ನೇ ಆರೋಪಿಯು ವಾಹನ ಸಮೇತ ರಸ್ತೆಗೆ ಬಿದ್ದಿದ್ದು, ಅದೇ ಸಮಯ 2 ನೇ ಆರೋಪಿ ಶಶಿಧರ ಶೆಟ್ಟಿ ಎಂಬವರು KA-20 MB-3159 ನೇ ಕಾರನ್ನು  ರಾಹೆ 66 ರಲ್ಲಿ ಕುಂದಾಪುರ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ಬಿದ್ದಿದ್ದ ಫಿರ್ಯಾದಿದಾರರ ಮೇಲೆ ಕಾರನ್ನು ಚಲಾಯಿಸಿಕೊಂಡು ಮುಂದೆ ಹೋಗಿ ನಿಲ್ಲಿಸಿರುವುದಾಗಿದೆ. ಈ  ಅಪಘಾತದಿಂದ ಫಿರ್ಯಾದಿದಾರರ ತಲೆಗೆ, ಬಲ ಕಣ್ಣಿನ ಬಳಿ, ಬಲ ಹುಬ್ಬಿಗೆ  ರಕ್ತಗಾಯ ಉಂಟಾಗಿ, ಬೆನ್ನಿನ ಹಿಂಭಾಗಕ್ಕೆ ರಕ್ತಗಾಯ ಆಗಿರುತ್ತದೆ. ಅಲ್ಲದೇ 1 ನೇ ಆರೋಪಿ ವಿಠ್ಠಲ್‌ಸಾಲಿಯಾನ್ ರವರ ತಲೆಗೆ ರಕ್ತಗಾಯವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 31/2023 ಕಲಂ: 279. 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 25/02/2023  ರಂದು  ಸಂಜೆ ಸುಮಾರು 4:00 ಗಂಟೆಗೆ ಕುಂದಾಪುರ ತಾಲೂಕು,  ಹೆಮ್ಮಾಡಿ  ಗ್ರಾಮದ ಕನ್ನಡ ಕುದ್ರು ಕ್ರಾಸ್‌ಬಳಿ ಪೂರ್ವ ಬದಿಯ NH 66  ರಸ್ತೆಯಲ್ಲಿ ಆಪಾದಿತ ದಶ೯ನ್‌ ಎಂಬವರು  KA-20-AA-7663ನೇ ಮಹೀಂದ್ರ ಬೊಲೆರೋ ಗೂಡ್ಸ್‌ವಾಹನವನ್ನು ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಸದ್ರಿ ಬೊಲೆರೋ ಗೂಡ್ಸ್‌ವಾಹನದ ಮುಂಭಾಗದಲ್ಲಿ  ನಾರಾಯಣ ಎಂಬವರು KA-20-AA-3814ನೇ ಅಟೋರಿಕ್ಷಾದಲ್ಲಿ ಪಿರ್ಯಾದಿದಾರರಾದ  ಚಂದ್ರ ಶೇಖರ ಮೆಂಡನ್‌ (53) ತಂದೆ:ದಿ. ಸುಬ್ಬ ಮೆಂಡನ್‌ ವಾಸ : ಕುಂದ್ರಿಮನೆ ತ್ರಾಸಿ ಗ್ರಾಮ ಬೈಂದೂರು ತಾಲೂಕು ‌‌, ಅವರ ಹೆಂಡತಿ ಕುಸುಮಾ, ಮಕ್ಕಳಾದ 17 ವರ್ಷದ ಚಿರಾಗ್‌ಹಾಗೂ 15 ವರ್ಷದ ಜಾಹ್ನವಿಯವರನ್ನು ಪ್ರಯಾಣಿಕರಾಗಿ ತ್ರಾಸಿ ಕಡೆಯಿಂದ ಚಾಲನೆ ಮಾಡಿಕೊಂಡು ಬಂದು, ಇಂಡಿಕೇಟರ್‌ಹಾಗೂ ಕೈ ಸನ್ನೆ ಮಾಡಿ ಪೂರ್ವ ಬದಿಯ NH 66  ರಸ್ತೆಯಿಂದ ಪಶ್ಚಿಮ ಬದಿಗೆ ತಿರುಗಿಸುವಾಗ ಅಟೋರಿಕ್ಷಾದ ಬಲಬದಿಗೆ  ಡಿಕ್ಕಿ ಹೊಡೆದ ಪರಿಣಾಮ ಚಂದ್ರಶೇಖರ ಮೆಂಡನ್‌‌‌ರವರ ಸೊಂಟ, ಬೆನ್ನಿಗೆ ಒಳನೋವಿನ ಗಾಯ ಹಾಗೂ ಮೈಕೈಗೆ ತರಚಿದ ಗಾಯ, ಕುಸುಮಾರವರಿಗೆ ಸೊಂಟ, ಬೆನ್ನಿಗೆ ಒಳಜಖಂ ಹಾಗೂ ರಕ್ತಗಾಯ, ಮೈಕೈಗೆ ತರಚಿದ ಗಾಯ, ಚಿರಾಗ್‌& ಜಾಹ್ನವಿಗೆ ಕೈಕಾಲುಗಳಿಗೆ  ತರಚಿದ ಗಾಯ ಹಾಗೂ ಒಳನೋವಾದ ಗಾಯ, ನಾರಾಯಣರವರಿಗೆ ತಲೆಗೆ ಒಳಜಖಂ ಗಾಯ ಮೈಕೈಗೆ ತರಚಿದ ಗಾಯವಾಗಿದ್ದು, ಚಂದ್ರಶೇಖರ ಮೆಂಡನ್‌‌‌, ಚಿರಾಗ್‌& ಜಾಹ್ನವಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಗಂಭೀರ ಗಾಯಗೊಂಡ ಕುಸುಮಾ ಹಾಗೂ ನಾರಾಯಣರವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ  ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹೋಗಿರುತ್ತಾರೆ ಮತ್ತು ಆಪಾದಿತ ದಶ೯ನ್‌ರವರಿಗೆ  ಮೈಕೈಗೆ ಸಣ್ಣಪುಟ್ಟ ಗಾಯವಾಗಿ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 24/2023 ಕಲಂ: 279. 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ದಿನಾಂಕ 25/02/2023 ರಂದು ಮಧ್ಯಾಹ್ನ 13:30 ಗಂಟೆಗೆ ರಾ.ಹೆ. 66 ಕುಂದಾಪುರ – ಉಡುಪಿ ರಸ್ತೆಯಲ್ಲಿ ಕೋಟದಿಂದ ಕೋಟ ಮೂರುಕೈ ಕಡೆಗೆ ಹೋಗುತ್ತಿರುವಾಗ, ಎದುರುಗಡೆಯಿಂದ ಅಂದರೆ ರಸ್ತೆಯ ವಿರುದ್ದ ದಿಕ್ಕಿನಲ್ಲಿ ನಂ KA-20 C-6509 ನೇ ಟಿಪ್ಪರ್‌ಲಾರಿಯನ್ನು ಅದರ ಚಾಲಕ ಶಿವರಾಜ್‌ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಕೋಟ ಮೂರುಕೈ ಬಳಿಯ ಆಶ್ರಿತ ಕಾಲೇಜಿನ ಎದುರು ತಲುಪುವಾಗ ರಸ್ತೆಯಲ್ಲಿ ಒಮ್ಮೆಲೆ ಎಡಕ್ಕೆ ಚಲಿಸಿದ ಪರಿಣಾಮ ರಸ್ತೆಯಲ್ಲಿ ಕೋಟದಿಂದ ಕೋಟ ಮೂರುಕೈ ಕಡೆಗೆ ಮಹೇಶ್‌ಪೈ ಎಂಬವರು ಹಿಂಬದಿ ಸ್ಕಂದ ಎಂಬಾತನನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಕ್ರಮದಂತೆ ಸವಾರಿ ಮಾಡಿಕೊಂಡಿದ್ದ ನಂ KA-20 EA-4577 ನೇ ಸ್ಕೂಟಿಗೆ ಢಿಕ್ಕಿ ಹೊಡೆದನು. ಅಪಘಾತದಿಂದ ಸ್ಕೂಟಿ ಸವಾರ ಮತ್ತು ಸಹಸವಾರ ಸ್ಕೂಟಿ  ಸಮೇತ ರಸ್ತೆ ಬಿದ್ದ ಪರಿಣಾಮ ಸ್ಕೂಟಿ ಸವಾರ ಮಹೇಶ್‌ಪೈ ರವರಿಗೆ ಎಡಕಾಲು ಮೂಳೆ ಮುರಿತದ ತೀವ್ರ ಗಾಯ,  ಕಿವಿಯಲ್ಲಿ ರಕ್ತಸ್ರಾವ ಹಾಗೂ ಮೈ, ಕೈಗೆ ತರಚಿದ ಗಾಯ ಹಾಗೂ ಸಹಸವಾರ ಸ್ಕಂದ ಎಂಬಾತನ ಎಡಕೈ ಮೂಳೆ ಮುರಿತದ ತೀವ್ರ ಗಾಯ, ಕೈ, ಕಾಲಿಗೆ ತರಚಿದ ಗಾಯಗಳಾಗಿರುತ್ತದೆ. ಗಾಯಾಳುಗಳ ಪೈಕಿ ಸವಾರ ಮಹೇಶ್‌ಪೈ ರವರು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೂ ಹಾಗೂ ಸಹಸವಾರ ಸ್ಕಂದ ರವರು ಕೋಟೇಶ್ವರ ಡಾ. ಎನ್‌‌‌‌.ಆರ್‌‌‌‌‌. ಆಚಾರ್ಯ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಅಪಘಾತಕ್ಕೆ ನಂ KA-20 C-6509 ನೇ ಟಿಪ್ಪರ್‌ಲಾರಿಯ ಚಾಲಕ ಶಿವರಾಜ್‌ಎಂಬಾತನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 30/2023 ಕಲಂ: 279. 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ಪಿರ್ಯಾದಿದಾರರಾದ ಕಿಶನ್‌ ಕುಮಾರ್‌ ಹೆಚ್‌ (32) ತಂದೆ: ಶ್ರೀನಿವಾಸ ಪೂಜಾರಿ ವಾಸ: ಯಕ್ಷೇಶ್ವರಿ ದೇವಸ್ಥಾನದ ಹತ್ತಿರ, ಮರವಂತೆ ಗ್ರಾಮ ಬೈಂದೂರು ರವರು ದಿನಾಂಕ 25/02/2023 ರಂದು ಬೈಂದೂರು ತಾಲೂಕು ಮರವಂತೆ ಪಂಚಾಯತ್‌ ಬಳಿ ರಾ,ಹೆ-66 ರಸ್ತೆಯ ಬದಿಯಲ್ಲಿ ತನ್ನ ಅಟೋವನ್ನು ಬಾಡಿಗೆಗೆ ನಿಲ್ಲಿಸಿಕೊಂಡಿರುವಾಗ ಸಮಯ ಸುಮಾರು 13:30 ಗಂಟೆಗೆ  ನಾವುಂದ ಕಡೆಯಿಂದ ಕುಂದಾಪುರ ಕಡೆಗೆ KA-20 EZ-3992 ನೇ ಮೋಟಾರು ಸೈಕಲ್‌ ನ್ನು ರಾ,ಹೆ-66 ರಸ್ತೆಯಲ್ಲಿ ಶಿಲ್ಪಾ ರವರು ಚಲಾಯಿಸಿಕೊಂಡು ಮರವಂತೆ ಗ್ರಾಮದ ಮರವಂತೆ ಪಂಚಾಯತ್‌ ಬಳಿ ತಲುಪುವಾಗ ಸದ್ರಿ ಮೋಟಾರು ಸೈಕಲ್‌ ನ ಹಿಂದಿನಿಂದ ಅಂದರೆ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ KA-03 MY-6988 ನೇ ಕಾರನ್ನು ಅದರ ಚಾಲಕ ಪ್ರಕಾಶ ಸಾಲಿಯಾನ್‌ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಾಲನೆ ಮಾಡಿಕೊಂಡು ಬಂದು KA-20 EZ-3992 ನೇ ಮೋಟಾರು ಸೈಕಲ್‌ ಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಮೋಟಾರು ಸೈಕಲ್‌ ಸಮೇತವಾಗಿ ಸವಾರಳಾದ ಶಿಲ್ಪಾ ರವರು ರಸ್ತೆಗೆ ಬಿದ್ದು ತಲೆಗೆ ಜಖಂ ಉಂಟಾಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 24/2023 ಕಲಂ: 279. 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾಧ ವಿಜಯ (32) ತಂದೆ: ನಾಗ ಪೂಜಾರಿ ವಾಸ: ದುಗ್ಗನ ಮನೆ , ಕಿರಿಮಂಜೇಶ್ವರ ಗ್ರಾಮ ಬೈಂದೂರು ತಾಲೂಕು. ಇವರು ಕಿರಿಮಂಜೇಶ್ವರ  ಗ್ರಾಮದ ದುಗ್ಗನ ಮನೆ ಎಂಬಲ್ಲಿ  ತಾಯಿ ರುಕ್ಮಿಣಿ (68) ಹಾಗೂ  ಅಕ್ಕನೊಂದಿಗೆ ವಾಸ ಮಾಡಿಕೊಂಡಿದ್ದು,  ಇವರ ತಾಯಿ ರುಕ್ಮಿಣಿ ರವರು ಒಂದು ವರ್ಷದಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಉಡುಪಿಯ ಬಾಳಿಗ ಆಸ್ಪತ್ರೆ  & ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದರು. ವಿಜಯ ರವರು ಅವರ  ಅಕ್ಕನ ಜೊತೆ ಮನೆಯ ಸಮೀಪದ ಭಜನಾ ಕಾರ್ಯಕ್ರಮಕ್ಕೆ ಹೋಗಿದ್ದ ಸಮಯ ವಿಜಯ ಇವರ ತಾಯಿ ರುಕ್ಮಿಣಿ  ರವರು  ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದವರು ಅದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಗೊಂಡು ದಿನಾಂಕ 25/02/2023 ರಂದು  ಮಧ್ಯಾಹ್ನ 3:15 ಗಂಟೆಯಿಂದ 3:30 ಗಂಟೆಯ ಮಧ್ಯಾವಧಿಯಲ್ಲಿ ಕಿರಿಮಂಜೇಶ್ವರ ಗ್ರಾಮದ ನಾಗೂರು ಹೊಸಹಿತ್ಲು ಎಂಬಲ್ಲಿನ ಶಂಕರ ಖಾರ್ವಿಯವರ ಜಾಗದಲ್ಲಿರುವ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 10/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಕಾರ್ಕಳ: ಪಿರ್ಯಾದಿದಾರರಾಧ ಹರೀಶ್‌ ಆಚಾರ್ಯ, (39), ತಂದೆ: ಸುಂದರ ಆಚಾರ್ಯ, ವಾಸ: ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ ಬಳಿ, ಕುಕ್ಕುಂದೂರು ಗ್ರಾಮ, ಕಾರ್ಕಳ ಇವರ ತಮ್ಮ ಸಂತೋಷ (34) ರವರರಿಗೆ 4-5 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾಗ ಹೃದಯಾಘಾತವಾಗಿದ್ದು ಚಿಕಿತ್ಸೆ ಪಡೆದಿರುತ್ತಾರೆ. ದಿನಾಂಕ 25/02/2023 ರಂದು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ದುರ್ಗಾ ಅನುದಾನಿತ ಶಾಲೆಯ ಮೈದಾನದಲ್ಲಿ ವಾಲಿಬಾಲ್‌ ಆಡುತ್ತಿರುವಾಗ ಸಮಯ ಸಂಜೆ 6:20 ಗಂಟೆಗೆ ಮೈದಾನದಲ್ಲಿ ನಿಂತಿದ್ದ ಸಂತೋಷರವರು ಕುಸಿದು ಬಿದ್ದಿದ್ದು ಚಿಕಿತ್ಸೆ ಬಗ್ಗೆ ಸರ್ಕಾರಿ ಆಸ್ಪತ್ರೆಗೆ ಸಂಜೆ 6:35 ಗಂಟೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ದಿನಾಂಕ 25/02/2023 ರಂದು ಸಮಯ ಸಂಜೆ 6:20 ಗಂಟೆಯಿಂದ ಸಂಜೆ 6:35 ಗಂಟೆ ಮದ್ಯಾವಧಿಯಲ್ಲಿ ಸಂತೋಷರವರಿಗೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದು ಮೃತರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 08/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಶಂಕರನಾರಾಯಣ: ಪಿರ್ಯಾದಿದಾರರಾಧ ಮಹೇಂದ್ರ ಭೋವಿ (33) ತಂದೆ, ಶ್ರೀನಿವಾಸ ಬೋವಿ ವಾಸ, ಶಾನ್ಕಟ್ಟು  ಅಂಪಾರು ಗ್ರಾಮ ಕುಂದಾಪುರ  ಇವರು ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಶಾನ್ಕಟ್ಟು ಎಂಬಲ್ಲಿಯ ವಾಸಿಯಾಗಿದ್ದು, ಅವರಿಗೂ  ಆರೋಪಿ ಸುರ್ಜಿತ  ಶೆಟ್ಟಿ ಈತನಿಗೂ  ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್  ಹಾಕಿದ ಬಗ್ಗೆ ಮನಸ್ತಾಪವಿದ್ದು. ಇದೇ   ವಿಷಯದಲ್ಲಿ  ದಿನಾಂಕ 25/02/2023 ರಂದು  ಬೆಳಿಗ್ಗೆಆರೋಪಿ ಸುರ್ಜಿತ್  ಶೆಟ್ಟಿ ಆತನ  ಮೊಬೈಲ್ ನಂಬ್ರದಿಂದ  ಪೋನ್ ಮಾಡಿ ದಮ್ಕಿ  ಹಾಕಿರುತ್ತಾನೆ ಆ ಬಳಿಕ  ಅವರೊಳಗೆ ಊರಿನ ಗಣ್ಯರ  ಮದ್ಯಸ್ಥಿಕೆಯಲ್ಲಿ   ರಾಜಿ ಆಗಿರುತ್ತದೆ, ಆ ನಂತರ  ಮಹೇಂದ್ರ ಭೋವಿ ರವರು ಅವರ  ಮೊಬೈಲ್  ಪೋನಿನ  ಸ್ಟೇಟಸ್‌‌ನಲ್ಲಿ   “ನನಗೆ ಬೆದರಿಕೆ ಹಾಕಿ  ದಮ್ಕಿ   ಹಾಕಿದರೇ  ಬಗ್ಗಲ  ಎಂದು  ಹಾಕಿದ್ದು “ , ಈ   ವಿಷಯದಲ್ಲಿ ಆರೋಪಿ ಮಂಜುನಾಥ  ಶೆಟ್ಟಿ  ಈತನು  ಆತನ ಮೊಬೈಲ್ ನಂಬ್ರದಿಂದ ಮೆಸೇಜ್  ಮಾಡಿ  ಎಲ್ಲಿದಿಯಾ  ಎಂದು   ಕೇಳಿರುತ್ತಾನೆ, ಆ  ಬಳಿಕ ಮಹೇಂದ್ರ ಭೋವಿ ರೌರು  ಕೆಲಸ  ಮುಗಿಸಿ ವಾಪಾಸು  ಮನೆಗೆ ಹೋಗುವರೇ ಸುಮಾರು   17:30  ಘಂಟೆಗೆ  ಅಂಪಾರು  ಗ್ರಾಮದ  ಕಂಚಾರು ಎಂಬಲ್ಲಿ ಅವರ   ಸ್ನೇಹಿತ  ಪ್ರದೀಪ್ ಎಂಬುವರೊಂದಿಗೆ ಹೋಗುತ್ತಿರುವಾಗ ಆರೋಪಿಗಳು ಸಮಾನ ಉದ್ದೇಶದಿಂದ  ಅಕ್ರಮ ಕೂಟ  ಕೂಡಿಕೊಂಡು ಕೆಎ-20 ಎಮ್‌‌ಬಿ-6173, ಕೆಎ-01 ಎಮ್‌ಎಸ್-2841 ಹಾಗೂ  ಕೆಎ-20 ಎಮ್‌‌ಇ-0326ನೇ ನಂಬ್ರದ  ಕಾರಿನಲ್ಲಿ  ಬಂದು  ಮಹೇಂದ್ರ ಭೋವಿ ರವರ  ಮೋಟಾರ್  ಸೈಕಲ್‌‌ಗೆ  ಕಾರನ್ನು  ಅಡ್ಡ ಇಟ್ಟು,  ಕೈಯಿಂದ   ಮರದ  ದೊಣ್ಣೆಯಿಂದ ಹಲ್ಲೆ  ಮಾಡಿ  ಅವಾಚ್ಯ   ಶಬ್ದದಿಂದ  ಬೈದು  ನಿನ್ನ  ಕೊಲ್ಲದೆ  ಬಿಡುವುದಿಲ್ಲ  ಎಂದು  ಜೀವ  ಬೆದರಿಕೆ  ಹಾಕಿರುತ್ತಾರೆ, ಆ   ಬಳಿಕ  ಆರೋಪಿ ಉದಯ  ಈತನೊಂದಿಗೆ ಸೇರಿ  ಪುನ: ಅಂಪಾರು ಪೇಟೆಯಲ್ಲಿ ಮಹೇಂದ್ರ ಭೋವಿ ರವರನ್ನು ಹುಡುಕುತ್ತಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 17/2023 ಕಲಂ: 143 ,147, 148,323,324,504,506,341 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಶಂಕರನಾರಯಣ: ಪಿರ್ಯಾದಿದಾರರಾಧ ಸರ್ಜಿತ್  ಎಮ್ (33)  ತಂದೆ, ಸುಬ್ಬಣ್ಣ  ಶೆಟ್ಟಿ ವಾಸ ಮುಡುಬಗ್ಗೆ  ಅಂಪಾರು ಗ್ರಾಮ ಕುಂದಾಪುರ ಇವರಿಗೂ  ಆರೋಪಿ  ಮಹೇದ್ರ  ಭೋವಿ ಈತನಿಗೂ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್    ಹಾಕಿದ  ಬಗ್ಗೆ  ಅವರೊಳಗೆ ಮನಸ್ತಾಪ  ಇರುತ್ತದೆ, ಈ  ವಿಷಯದಲ್ಲಿ  ದಿನಾಂಕ  25/02/2023 ರಂದು ಬೆಳಿಗ್ಗೆ  ಆರೋಪಿಯ  ಮೊಬೈಲ್  ನಂಬ್ರಕ್ಕೆ  ಸರ್ಜಿತ್  ಎಮ್ ರವರು  ಪೋನ್  ಮಾಡಿ  ನೀನು ಬೇಡದ  ಮೆಸೇಜ್  ಹಾಕಿ  ನನ್ನ  ಮನಸ್ಸಿಗೆ  ನೋವು ಉಂಟು  ಮಾಡಬೇಡ ಎಂದು  ಹೇಳಿರುತ್ತಾರೆ, ಈ  ಸಮಯ  ಆರೋಪಿ  ಮಹೇಂದ್ರ  ಭೋವಿ  ಈತನು  ಪೋನಿನಲ್ಲಿ ಬೈದು ಎನ್ನ ಬೇಕಾದರೂ  ಮಾಡುತ್ತೇನೆ ಎಂದು  ಹೇಳಿರುತ್ತಾನೆ, ಆ ನಂತರ  ಊರಿನ ಮುಖಂಡರು  ಎರಡು ಜನರನ್ನು ಕರೆದು ರಾಜಿ ಮಾಡಿರುತ್ತಾರೆ,  ನಂತರ ಸರ್ಜಿತ್  ಎಮ್ ರವರು ಕೆಲಸ  ಮುಗಿಸಿ ವಾಪಾಸು ಮನೆಗೆ ಹೋಗುವರೇ ಸುಮಾರು 17:30  ಘಂಟೆಗೆ ಕುಂದಾಪುರ ತಾಲೂಕಿನ  ಅಂಪಾರು ಗ್ರಾಮದ ಕಂಚಾರು ಮದಗ ಎಂಬಲ್ಲಿ  ಮೋಟಾರ್  ಸೈಕಲ್‌ನಲ್ಲಿ ಹೋಗುತ್ತಿರುವಾಗ ಆರೋಪಿ ಮಹೇಂದ್ರ  ಭೋವಿ  ಮೋಟಾರ್  ಸೈಕಲ್‌ನಿಲ್ಲಿಸಿಕೊಂಡು ಉಳಿದ  ಆರೋಪಿಗಳಾದ  ನವೀನ್  ಶಟ್ಟಿ , ಪ್ರಕಾಶ ಶೆಟ್ಟಿ, ಸುಕೇಶ  ಶೆಟ್ಟಿ  ಇವರೊಂದಿಗೆ ನಿಂತಿದ್ದು, ಈ  ಸಮಯ ಸರ್ಜಿತ್  ಎಮ್ ರವರ  ಮೋಟಾರ್ ಸೈಕಲ್  ನಿಲ್ಲಿಸುವಂತೆ   ಹೇಳಿದ್ದು,ಆಗ ಸರ್ಜಿತ್  ಎಮ್ ರವರು  ಮೋಟಾರ್ ಸೈಕಲ್ ನಿಲ್ಲಿಸಿದಾಗ  ಆರೋಪಿಗಳು  ಸಮಾನ ಉದ್ದೇಶದಿಂದ ಸರ್ಜಿತ್  ಎಮ್ ರವರಿಗೆ ಅವಾಚ್ಯ  ಶಬ್ದದಿಂದ ಬೈದು   ಕೈಯಿಂದ ಕಪಾಲಕ್ಕೆ  ಹೊಡೆದು  ಕಾಲಿನಿಂದ ತುಳಿದು ಇದನ್ನು  ಮುಂದುವರಿಸಿಕೊಂಡು ಹೋದರೆ ನಿನ್ನ ಉಳಿಸುವುದಿಲ್ಲ ಎಂದು ಬೆದರಿಕೆ   ಹಾಕಿರುತ್ತಾರೆ,   ಆ ಬಳಿಕ ಸರ್ಜಿತ್  ಎಮ್ ರವರು  ಅಂಪಾರು ಪೇಟೆಗೆ  ಹೋದಾಗ  ಅಲ್ಲಿ ಮೇಲೆ  ಕಾಣಿಸಿದ  ಆರೋಪಿಗಳು ಇತರ  2-3 ಜನ  ಆರೋಪಿಗಳೊಂದಿಗೆ  ಸೇರಿ   ಅಕ್ರಮ ಕೂಟ  ಕೂಡಿಕೊಂಡು  ಸರ್ಜಿತ್  ಎಮ್ ರವರನ್ನು ಅಡ್ಡಗಟ್ಟಿ ಹೊಡೆಯಲು  ಬಂದಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 18/2023 ಕಲಂ: 143 ,147, 323,,504,506,341 ಜೊತೆಗೆ 149  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 26-02-2023 10:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080