ಅಭಿಪ್ರಾಯ / ಸಲಹೆಗಳು

ವಂಚನೆ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾಧ ಸತೀಶ ಹೆಗ್ಡೆ (52) ತಂದೆ: ದಿ. ಕೆ.ಎನ್‌ಹೆಗ್ಡೆ  ವಾಸ: ಫ್ಲ್ಯಾಟ್‌ನಂಬ್ರ: 401, ಎ ಬ್ಲಾಕ್‌, ಮಾಂಡವಿ ಎಕ್ರೋಪೊಲಿಸ್‌, ನಗರಸಭೆ ಕಛೇರಿ ಹಿಂಬದಿ, ಕೆ.ಎಂ ಮಾರ್ಗ, ಉಡುಪಿ ಇವರು ಉಡುಪಿಯ ಮೂಡನಿಡಂಬೂರು ಗ್ರಾಮದ ಸರ್ವಿಸ್‌ಬಸ್‌ನಿಲ್ದಾಣದ ಬಳಿ ಇರುವ ಕೃಷ್ಣಕೃಪಾ ಕಾಂಪ್ಲೆಕ್ಸ್‌ನಲ್ಲಿ ಸುಧೀಂದ್ರ ಫೈನಾನ್ಸ್ ಕಾರ್ಪೋರೇಶನ್‌(ರಿ) ಎಂಬ ಹೆಸರಿನ ಹಣಕಾಸಿನ ಸಂಸ್ಥೆಯನ್ನು ನಡೆಸಿಕೊಂಡಿದ್ದು, 1ನೇ ಆರೋಪಿ ಮೂಡುಸಗ್ರಿ ವಾಸಿ ಭರತ್‌.ಕೆ ಎಂಬಾತನು ಸತೀಶ ಹೆಗ್ಡೆ ರರ ಫೈನಾನ್ಸ್‌ನಲ್ಲಿ ಒಟ್ಟು 5 ಬಾರಿ 280 ಗ್ರಾಂ ತೂಕದ ಚಿನ್ನಾಭರಣಗಳನ್ನು ಅಡವಿಟ್ಟು ಒಟ್ಟು ರೂಪಾಯಿ 9,11,020/- ಹಣವನ್ನು ಸಾಲವಾಗಿ ಪಡೆದಿದ್ದು, 2ನೇ ಆರೋಪಿ ಪೆರ್ಡೂರು ವಾಸಿ ಪ್ರವೀಣ್‌ಶೆಟ್ಟಿ ಎಂಬಾತನು ಒಟ್ಟು 4 ಬಾರಿ 266.800 ಗ್ರಾಂ ತೂಕದ ಚಿನ್ನವನ್ನು ಅಡವಿಟ್ಟು ಒಟ್ಟು ರೂ. 8,96,880/- ಹಣವನ್ನು ಸಾಲವಾಗಿ ಪಡೆದಿರುತ್ತಾರೆ. 1 ಮತ್ತು 2ನೇ ಆಪಾದಿತರು ಪಡೆದ ಸಾಲ ಬಡ್ಡಿ ಸಮೇತ ಒಟ್ಟು ರೂ. 21,64,800/- ಆಗಿದ್ದು, ಅವರುಗಳು ಸಾಲವನ್ನು ಮರು ಪಾವತಿಸಿ ಚಿನ್ನಾಭರಣಗಳನ್ನು ಬಿಡಿಸಿಕೊಂಡು ಹೋಗದೇ ಇದ್ದಾಗ ಸತೀಶ ಹೆಗ್ಡೆ ರವರು 1ನೇ ಆಪಾದಿತನಿಗೆ ಏಲಂ ನೋಟೀಸ್‌ನೀಡಿದ್ದು, ದಿನಾಂಕ 16/02/2022 ರಂದು ಬೆಳಿಗ್ಗೆ 2ನೇ ಆಪಾದಿತ ಮತ್ತು ಎಸ್‌ಡಿಜೆ ಗೋಲ್ಡ್‌ಕಂಪೆನಿಯ ಮೇನೆಜರ್‌ ಆಗಿದ್ದ ಅಭಿಲಾಷ್‌ ಮತ್ತು ಮಂಜುನಾಥ ರವರು ಸತೀಶ ಹೆಗ್ಡೆ ರವರ ಫೈನಾನ್ಸ್‌ಗೆ ಬಂದು ಒಟ್ಟು ರೂಪಾಯಿ 21,64,000/- ಹಣವನ್ನು ನೀಡಿ ಒಟ್ಟು 546 ಗ್ರಾಂ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಅದೇ ದಿನ ಸಂಜೆ ಎಸ್‌ಡಿಜೆ ಗೋಲ್ಡ್‌ನವರು ವಾಪಾಸು ಬಂದು ತಾವು ಪಡೆದ ಚಿನ್ನ ಕಡಿಮೆ ಗುಣಮಟ್ಟದ್ದಾಗಿದ್ದು, ತಮಗೆ ಈ ವ್ಯಾಪಾರ ಸರಿದೂಗುತ್ತಿಲ್ಲ ಎಂಬ ಕಾರಣ ನೀಡಿ 546 ಗ್ರಾಂ ತೂಕದ ಚಿನ್ನ ವಾಪಾಸು ನೀಡಿ ಅವರ ಹಣವನ್ನು ವಾಪಾಸು ಪಡೆದುಕೊಂಡು ಹೋಗಿರುತ್ತಾರೆ. ದಿನಾಂಕ 25/02/2022 ರಂದು 14:30 ಗಂಟೆಗೆ 2ನೇ ಆಪಾದಿತ ಫೈನಾನ್ಸ್‌ಗೆ ಬಂದು ಬೇರೆ ಕಡೆ ಚಿನ್ನ ಮಾರಾಟ ಮಾಡಿ ಹಣ ಕೊಡುವುದಾಗಿ ಹೇಳಿ ಅಡವಿಟ್ಟಿದ್ದ ಚಿನ್ನದಲ್ಲಿ 174.850 ಗ್ರಾಂ ಚಿನ್ನವನ್ನು ಪಡೆದುಕೊಂಡು ಹೋಗಿ ಅಕ್ಕಸಾಲಿಗ ಹರೀಶ್‌ ಆಚಾರ್ಯ ಮತ್ತು ಬ್ಯಾಂಕಿಗೆ ಪರಿಚಯಿಸಲು ಅಲ್ಫೋನ್ಸ್‌ ಮೆನೆಜಸ್‌ರವರನ್ನು ಕರೆದುಕೊಂಡು ಉಡುಪಿಯ ಬ್ಯಾಂಕ್‌ ಆಫ್‌ ಇಂಡಿಯಾಗೆ ಹೋಗಿ ಅಲ್ಲಿ ಚಿನ್ನವನ್ನು ಅಡವಿರಿಸಿ ಸಾಲವನ್ನು ಪಡೆಯಲು ಪ್ರಯತ್ನಿಸಿರುತ್ತಾರೆ. ಆಪಾದಿತರು ನಕಲಿ ಚಿನ್ನಾಭರಣಗಳನ್ನು ಅಸಲಿಯೆಂದು ನಂಬಿಸಿ ಒಟ್ಟು 546 ಗ್ರಾಂ ಚಿನ್ನಾಭರಣಗಳನ್ನು ಅಡವಿರಿಸಿ ಅಸಲು ಹಾಗೂ ಬಡ್ಡಿ ಸಹಿತ ಒಟ್ಟು ರೂ. 21,64,800/- ಹಣವನ್ನು ಕಟ್ಟದೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2022, ಕಲಂ: 406, 417,420  ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಬ್ರಹ್ಮಾವರ: ದಿನಾಂಕ 19/02/2022 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರಾಧ ಅವನೀಶ್ ಶೆಟ್ಟಿ (25), ತಂದೆ: ಚಂದ್ರಶೇಖರ್ ಶೆಟ್ಟಿ, ವಾಸ: ಡಾಕ್ಟರ್‌ ಮನೆ, ಮೈರ್‌ಕೋಮೆ ಮಂದಾರ್ತಿ, ಹೆಗ್ಗುಂಜೆ ಗ್ರಾಮ, ಬ್ರಹ್ಮಾವರ ಇವರ ತಾಯಿಯ ಅಣ್ಣನಾದ ಆರೋಪಿ ವಾದಿರಾಜ ಶೆಟ್ಟಿ ಒಬ್ಬ ಕೆಲಸದಾಳುವನ್ನು ಕರೆದುಕೊಂಡು ಅವನೀಶ್‌‌ ಶೆಟ್ಟಿ ರವರ ಅನುಭೋಗದಲ್ಲಿದ್ದ ತೆಂಗಿನಮರದಿಂದ ಕಾಯಿಯನ್ನು ತೆಗೆಸಲು ಬಂದಿದ್ದು, ಆಗ ಆರೋಪಿಗೆ ಇದು ನಮ್ಮ ಜಾಗ ನೀವು ಯಾಕೆ ತೆಂಗಿನಕಾಯಿ ಕೊಯ್ಯುತ್ತಿದ್ದೀರಿ ಎಂದು ಕೇಳಿ ಆಕ್ಷೇಪಿಸಿದಕ್ಕೆ ಆರೋಪಿಯು ವಾದಿರಾಜ ಶೆಟ್ಟಿ ರವರನ್ನು ಉದ್ದೇಶಿಸಿ ಕೇಳುವುದಕ್ಕೆ ನೀನು ಯಾರು ಎಂದು ಅವಾಚ್ಯ ಶಬ್ದದಿಂದ ಬೈದು ಅವನೀಶ್ ಶೆಟ್ಟಿ ರವರ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು ದೂಡಿದ್ದು, ಆಗ ಅವನೀಶ್ ಶೆಟ್ಟಿ ರವರಿಗೆ ಆರೋಪಿಯ ಕೈ ಉಗುರುಗಳು ಕುತ್ತಿಗೆಗೆ ಪರಚಿ ಗಾಯ ಹಾಗೂ ಮೂಗಿನ ಹತ್ತಿರ ಬಲಕೆನ್ನೆಯಲ್ಲಿ ಗಾಯವಾಗಿರುತ್ತದೆ. ಅಲ್ಲದೇ ಆರೋಪಿಯು ಕೈಯಲ್ಲಿದ್ದ ಕೋಲಿನಿಂದ ಅವನೀಶ್ ಶೆಟ್ಟಿ ರವರಿಗೆ ಹೊಡೆದು ಗಾಯ ಮಾಡಿರುತ್ತಾರೆ. ಆರೋಪಿಯು ಹೊಡೆಯಲು ಯತ್ನಿಸಿದಾಗ ಅವನೀಶ್ ಶೆಟ್ಟಿ ರವರು ತಡೆದು ಕೂಡ ಎಡಕೈ ಮತ್ತು ಎಡಬೆನ್ನಿಗೆ ಗಾಯವಾಗಿರುತ್ತದೆ. ಗಾಯಗೊಂಡ ಬಗ್ಗೆ ಅವನೀಶ್ ಶೆಟ್ಟಿ ರವರು ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಜಾಗದ ತಕರಾರಿನ ವಿಷಯದಲ್ಲಿ ಆರೋಪಿಯು ಹಲ್ಲೆ ಮಾಡಿದ್ದು, ಆರೋಪಿಯು ಪಿರ್ಯಾದಿದಾರರಿಗೆ ಮಾವನಾಗಿರುವುದರಿಂದ ಅವರೊಳಗೆ ಮಾತನಾಡಿಕೊಂಡು ರಾಜಿ ಮಾಡಿಕೊಳ್ಳುವುದಾಗಿ ಭಾವಿಸಿದ್ದು, ರಾಜಿಯಾಗಿರುವುದಿಲ್ಲ. ಆದುದರಿಂದ ದೂರು ನೀಡುವಾಗ ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2022, ಕಲಂ:504, 323, 324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಬ್ರಹ್ಮಾವರ: ದಿನಾಂಕ 19/02/2022 ರಂದು ಬೆಳಿಗ್ಗೆ10:00 ಗಂಟೆಗೆ ಪಿರ್ಯಾದಿದಾರರಾದ ವಾದಿರಾಜ ಶೆಟ್ಟಿ (64), ತಂದೆ: ದಿ. ನಾರಾಯಣ ಶೆಟ್ಟಿ, ಗೋವೆಕೊಡ್ಲು, ಕೊತ್ತೂರು, ಹೆಗ್ಗುಂಜೆ ಗ್ರಾಮ, ಬ್ರಹ್ಮಾವರ ಇವರ ಜಾಗದಲ್ಲಿರುವ ತೆಂಗಿನಮರದಿಂದ ತೆಂಗಿನಕಾಯಿಯನ್ನು ಕ್ಯೊಯಲು ರವಿ ಎಂಬ ಕೂಲಿ ಆಳನ್ನು ಕರೆಸಿ ಅವರ ಮರದ ಹತ್ತಿರ ಹೋದಾಗ ಅವರ ತಂಗಿಯ ಮಗನಾದ ಆರೋಪಿ ಅವನೀಶ್ ಶೆಟ್ಟಿ ಏಕಾ ಏಕಿ ಇವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ವಾದಿರಾಜ ಶೆಟ್ಟಿ ರವರನ್ನು ಉದ್ದೇಶಿಸಿ ಈ ತೆಂಗಿನ ಮರ ಇರುವ ಜಾಗ ನಮ್ಮದು ನೀನು ಇಲ್ಲಿಂದ ಹೋಗದಿದ್ದರೇ ನಿನ್ನ ಕೈಕಾಲು ಮುರಿದು ಹಾಕುತ್ತೇನೆ ಎಂದು ಅವಾಚ್ಯವಾಗಿ ಬೈದು ಬೆದರಿಕೆ ಹಾಕಿ ವಾದಿರಾಜ ಶೆಟ್ಟಿ ರವರನ್ನು ನೆಲಕ್ಕೆ ದೂಡಿ ಮೂಗಿಗೆ, ಮುಖಕ್ಕೆ ರಕ್ತ ಬರುವಂತೆ ಹೊಡೆದಿರುವುದಾಗಿದೆ. ನಂತರ ವಾದಿರಾಜ ಶೆಟ್ಟಿ ರವರು ಅವರಿಗಾದ ಗಾಯದ ಬಗ್ಗೆ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುತ್ತಾರೆ. ವಾದಿರಾಜ ಶೆಟ್ಟಿ ರವರ ಜಾಗದಲ್ಲಿರುವ ತೆಂಗಿನ ಮರ ಆರೋಪಿಯ ಮನೆಯವರಿಗೆ ಬರುತ್ತದೆ ಎಂದು ಹೇಳಿ  ಆರೋಪಿಯು ಹಲ್ಲೆ ಮಾಡಿದ್ದು, ಆರೋಪಿಯು ವಾದಿರಾಜ ಶೆಟ್ಟಿ ರವರಿಗೆ ತಂಗಿಯ ಮಗನಾಗಿರುವುದರಿಂದ ಅವರೊಳಗೆ ಮಾತನಾಡಿಕೊಂಡಿದ್ದು ಇದುವರೆಗೂ ರಾಜಿಯಾಗಿದೇ ಇರುವುದರಿಂದ ದೂರು ನೀಡುವಾಗ ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2022 ಕಲಂ 447, 504, 506, 323 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ದಿನಾಂಕ 24/02/2022 ರಂದು ಸಂಜೆ 6:30 ಗಂಟೆಗೆ ಫಿರ್ಯಾದಿದಾರರಾಧ ಸೈಯದ್ ಅನ್ವರ್ ಅಜೀಂ (36) ತಂದೆ:ದಿ. ಸೈಯದ್ ಹಸನ್ ಸಾಹೇಬ್ ವಾಸ:ತೌಹಿದ್ ಶಾಲೆಯಬಳಿ, ಎನ್ ಹೆಚ್ 66 ,ಶಿರೂರು ಗ್ರಾಮ, ಬೈಂದೂರು ಇವರು ಹಾಗೂ ಅವರ ಹೆಂಡತಿ  ಶಿರೂರು ಗ್ರಾಮದ ತೌಹಿದ್ ಶಾಲೆಯ ಬಳಿಯ  ಮನೆಯಲ್ಲಿರುವಾಗ  ಸೈಯದ್ ಅನ್ವರ್ ಅಜೀಂ ರವರ ತಮ್ಮ ಮೊಯಿನುದ್ದಿನ್, ಅಕ್ಕ ಝುಲೇಕಾ, ಬಾವ ಮಹ್ಮದ್ ಆರೀಫ್ ಹಾಗೂ ಅವರೊಂದಿಗೆ ಇನ್ನೊಬ್ಬ ವ್ಯಕ್ತಿಯು ಸೈಯದ್ ಅನ್ವರ್ ಅಜೀಂ ರವರ ಮನೆಯ ಒಳಗಡೆ ಬಂದು ಇವರಲ್ಲಿ 15 ಲಕ್ಷ ಹಣವನ್ನು ನಿನಗೆ ಕೊಡುತ್ತೇವೆ  ನೀನು ನಿನ್ನ ಹೆಂಡತಿ ಮಗುವನ್ನು ಕರೆದುಕೊಂಡು ಮನೆ ಬಿಟ್ಟು ಹೋಗು ಎಂದು ಹೇಳಿದಾಗ ಸೈಯದ್ ಅನ್ವರ್ ಅಜೀಂ ರವರು  ಆರೋಪಿಯ ಮಾತಿಗೆ  ಆಕ್ಷೇಪಿಸಿದಾಗ  ಮಾತಿಗೆ ಮಾತು ಬೆಳೆದು ಜಗಳವಾಗಿ, ಆರೋಪಿಗಳಾದ ಮೊಯಿನುದ್ದಿನ್ ಮತ್ತು ಮಹ್ಮದ್ ಆರೀಫ್ ರವರಲ್ಲಿ ಆರೋಪಿತಳಾದ ಝುಲೇಕಾಳು ಸೈಯದ್ ಅನ್ವರ್ ಅಜೀಂ ರವರಿಗೆ ಹೊಡೆಯುವಂತೆ ಪ್ರೇರೆಪಿಸಿ, ಆರೋಪಿಗಳಾದ ಮೊಯಿನುದ್ದಿನ್ ಮತ್ತು ಮಹ್ಮದ್ ಆರೀಫ್ ರವರು ಸೈಯದ್ ಅನ್ವರ್ ಅಜೀಂ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಕಾಲಿನಿಂದ ತುಳಿದು ಗಲಾಟೆ ಬಿಡಿಸಲು ಬಂದ ಸೈಯದ್ ಅನ್ವರ್ ಅಜೀಂ ರವರ ಹೆಂಡತಿಯನ್ನು ಆರೋಪಿಗಳು ಕೈಯಿಂದ ದೂಡಿರುತ್ತಾರೆ. ಅಲ್ಲದೇ ಆರೋಪಿತರೊಂದಿಗೆ ಬಂದಿದ್ದ ಇನ್ನೊಬ್ಬ ವ್ಯಕ್ತಿಯು ಸೈಯದ್ ಅನ್ವರ್ ಅಜೀಂ ರವರಲ್ಲಿ ನೀನು 15 ದಿನದಲ್ಲಿ ಮನೆ ಬಿಟ್ಟು ಹೋಗದಿದ್ದರೆ ನಿನ್ನನ್ನು ಹೇಗೆ ನೋಡಿಕೊಳ್ಳಬೇಕು ನನಗೆ ಗೊತ್ತಿದೆ ಎಂದು ಹೇಳಿ ಆರೋಪಿತರೆಲ್ಲರೂ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಆರೋಪಿತರ ಹಲ್ಲೆಯಿಂದ ಸೈಯದ್ ಅನ್ವರ್ ಅಜೀಂ ರವರ ಎಡ ಬದಿಯ ಕಣ್ಣು ಬಾತಿಕೊಂಡಿದ್ದು ಮೈಕೈ ನೋವು ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಗಲಾಟೆಗೆ ಸೈಯದ್ ಅನ್ವರ್ ಅಜೀಂ ರವರಿಗೂ ಹಾಗೂ ಆರೋಪಿತರಿಗೂ ತಂದೆಯ ಆಸ್ತಿಯ ಪಾಲಿನ ವಿಷಯದಲ್ಲಿ ಇರುವ ತಕರಾರೇ ಕಾರಣವಾಗಿರುವುದಾಗಿದೆ.  ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2022 ಕಲಂ: 323, 354,504, 506, 114 ಜೊತೆಗೆ  34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 26-02-2022 10:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080