ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾಧ ಶೇಖರ ಸುವರ್ಣ (63) ತಂದೆ: ಬಿ.ಸಿ ಕುಂದರ್ ವಾಸ: ಪಡು ಹರ್ತಟ್ಟು ಗಿಳಿಯಾರು ಗ್ರಾಮ ಕುಂದಾಪುರ ಇವರು ದಿನಾಂಕ 25/02/2022 ರಂದು ಸಂಜೆ 15:15 ರ ಸಮಯ ಕೋಟ ಸರ್ವಿಸ್ ಬಸ್ಟಾಪ್ ನಲ್ಲಿರುವ ಮಣಿಪಾಲ ಬೇಕರಿ ಎದುರು ನಿಂತುಕೊಂಡಿರುವಾಗ ಗುಲಾಬಿ ಪೂಜಾರ್ತಿ (55) ಎಂಬುವವರು ಕೋಟಾ ಬಸ್ಟಾಪ್ ನಿಂದ ಅಂದರೆ ಕುಂದಾಪುರ-ಉಡುಪಿ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ತಾಗಿಕೊಂಡಿರುವ ಸರ್ವಿಸ್ ರಸ್ತೆಯ ಪೂರ್ವ ಬದಿಯಲ್ಲಿರುವ ಬಸ್ಟ್ಯಾಂಡ್ ನಿಂದ ಉಡುಪಿ ಕಡೆಗೆ ಹೋಗುವ ಎಕ್ಸಪ್ರೆಸ್ ಬಸ್ಸನ್ನು ಹತ್ತಲು ಸರ್ವಿಸ್ ರಸ್ತೆ ದಾಟುವಾಗ ಕೋಟ ಕಡೆಯಿಂದ ಮಹಾಲಿಂಗೇಶ್ವರ ದೇವಸ್ಥಾನದ ಕಡೆಗೆ ಹೋಗುವ KA-20 AB-0544 ನೇದರ ಆಟೋ ಚಾಲಕ ನವೀನ ತನ್ನ ಆಟೋವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು  ರಸ್ತೆದಾಟುತ್ತಿದ್ದ ಹೆಂಗಸಿಗೆ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದಿದ್ದು ಪಾದಾಚಾರಿ ಹೆಂಗಸು ಗುಲಾಬಿ ಎಂಬುವವರಿಗೆ ತಲೆಗೆ ಕೈಗೆ ಹಾಗೂ ಸೊಂಟಕ್ಕೆ ತೀವೃ ತರಹದ ರಕ್ತಗಾಯವಾಗಿರುತ್ತದೆ. ಅವರನ್ನು ಚಿಕಿತ್ಸೆಗಾಗಿ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಆಸ್ವಾಭಾವಿಕ ಮರಣ ಪ್ರಕರಣ

 • ಕುಂದಾಪುರ: ದಿನಾಂಕ 25/02/2022 ರಂದು ರಾತ್ರಿ ಸುಮಾರು 20:30 ಗಂಟೆಗೆ ಮೃತ ಪ್ರಶಾಂತ ದೇವಾಡಿಗ ಹಾಗೂ ಶ್ರೀಧರ ಎಂಬವರು ಸೌಕೂರು ಗ್ರಾಮದ ಶ್ರೀದುರ್ಗಾ ಹೋಟೆ್ಲ್ ಬಳಿ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮ್ ರ ಬಳಿ ಶ್ರೀ ಸೌಕೂರು ದುರ್ಗಾ ಪರಮೇಶ್ವರಿ ದೇವಸ್ಥಾನದ ಜಾತ್ರೆಯ ಬಗ್ಗೆ ಶುಭಕೋರುವ ಫ್ಲೆಕ್ಸ್ ಅಳವಡಿಸುವ ಸಮಯ ಕಬ್ಬಿಣದ ಫ್ಲೆಕ್ಸ್ ಆಕಸ್ಮಿಕವಾಗಿ ವಿದ್ಯುತ್ ಟ್ರಾನ್ಸ್ ಫಾರ್ಮ್ ನ ತಂತಿಗೆ ತಗುಲಿ ವಿದ್ಯುತ್ ಅಘಾತ ಉಂಟಾಗಿ ಪ್ರಶಾಂತ ದೇವಾಡಿಗ ಸ್ಥಳದಲ್ಲಿಯೇ ಮೃತಪಟ್ಟಿದ್ದು ಶ್ರೀಧರನು ತೀವೃ ಅಸ್ವಸ್ಥಗೊಂಡಿದ್ದಾಗಿದ್ದು ಪ್ರಶಾಂತ ದೇವಾಡಿಗರವರ ಈ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬುದಾಗಿ ಸುಮುಖ ದೇವಾಡಿಗ (37) ತಂದೆ: ಸೋಮನಾಥ  ದೇವಾಡಿಗ ವಾಸ: ಸೌಕೂರು ಗುಲ್ವಾಡಿ ಗ್ರಾಮ ಕುಂದಾಪುರ ಇವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್  ಠಾಣಾ ಯು.ಡಿ.ಆರ್‌ ಕ್ರಮಾಂಕ 05/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ,
 • ಹೆಬ್ರಿ: ಪಿರ್ಯಾದಿದಾರರಾದ ಕುಟ್ಟಿ ಪೂಜಾರಿ (65) ತಂದೆ: ದಿ/ ಪದ್ದು ಪೂಜಾರಿ ವಾಸ:ಮೂಡುಬೆಟ್ಟು ವರಂಗ ಗ್ರಾಮ ಹೆಬ್ರಿ ತಾಲೂಕು ಇವರ ಪತ್ನಿ ಶ್ರೀಮತಿ ಸುಂದರಿ ಪೂಜಾರ್ತಿ (60) ರವರಿಗೆ ಸುಮಾರು 9 ವರ್ಷಗಳ  ಹಿಂದೆ ಗರ್ಭಕೋಶದಲ್ಲಿ ಸಮಸ್ಯೆ ಉಂಟಾಗಿ ಗರ್ಭಕೋಶವನ್ನು ತೆಗೆಸಿದ್ದು, ಆ ಬಳಿಕ ಅವರಿಗೆ ಕೆಲಸ ಮಾಡುವಾಗ ಆಯಾಸವಾಗುತ್ತಿದ್ದು ಇದರಿಂದ ಜಾಸ್ತಿ ಕೆಲಸ ಮಾಡದೆ ಮನೆಯಲ್ಲೇ ಸುಮ್ಮನೆ ಕುಳಿತುಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ದಿನಾಂಕ 25/02/2022 ರಂದು ರಾತ್ರಿ 09:30 ಗಂಟೆಯಿಂದ ಮರುದಿನ ದಿನಾಂಕ 26/02/2022 ರ ಮುಂಜಾನೆ ಸಮಯ 01:15 ಗಂಟೆಯ ಮದ್ಯಾವಧಿಯಲ್ಲಿ ಸುಂದರಿ ಪೂಜಾರ್ತಿ ರವರು ಮೇಲಿನ ವಿಚಾರದಲ್ಲಿ ಮನನೊಂದು ಮಾನಸಿಕ ಖಿನ್ಯತೆಗೆ ಒಳಗಾಗಿ ವರಂಗ ಗ್ರಾಮದ ಮೂಡುಬೆಟ್ಟು ಎಂಬಲ್ಲಿ ಮೃತರ ಮನೆಯಿಂದ ಸುಮಾರು 300 ಮೀಟರ್ ದೂರದಲ್ಲಿರುವ ಗುಡ್ಡೆಯ ಜಾಗದಲ್ಲಿ ಯಾವುದೇ ವಿಷ ಪಧಾರ್ಥವನ್ನು ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದು. ಮೃತರ ಮರಣದಲ್ಲಿ ಯಾವುದೇ ಸಂದೇಹ ಇರುವುದಿಲ್ಲವಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣಾ ಯು.ಡಿ.ಆರ್‌ ಕ್ರಮಾಂಕ 10/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ,
 • ಪಡುಬಿದ್ರಿ: ಪಿರ್ಯಾದಿದಾರರಾಧ ಶ್ರೀನಿವಾಸ ರಾವ್, (38) ತಂದೆ:ದಿ ವೆಂಕಟೇಶ್ವರಲು, ವಾಸ: ಬಸ್‌‌ನಿಲ್ದಾಣದ ಬಳಿ, ವರಗಾಣಿ ಗ್ರಾಮ, ಪೆಡನಂದಿಪಡು ತಾಲೂಕು, ಗುಂಟೂರು ಜಿಲ್ಲೆ, ಆಂಧ್ರಪ್ರದೇಶ ಇವರು AP-07-TB-3479 ನೇ ನಂಬ್ರದ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದು, ಸದ್ರಿ ಲಾರಿಯ ಚಾಲಕರಾದ ಶಂಕರ ಬೊಲ್ಲ(37) ಎಂಬುವರ ಜೊತೆ  ಲಾರಿಯಲ್ಲಿ ಆಂದ್ರ ಪ್ರದೇಶ ರಾಜ್ಯದ ಗುಂಟೂರಿನಿಂದ ದಿನಸಿ ಸಾಮಗ್ರಿಗಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಬಂದು ದಿನಾಂಕ 25/02/2022 ರಂದು ರಾತ್ರಿ 21:30 ಗಂಟೆಗೆ ಉಡುಪಿ ಜಿಲ್ಲೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಮಹಾಗಣಪತಿ ಟ್ರೇಡರ್ಸ್ ಗೆ ಬಂದು ರಾತ್ರಿ ಅಲ್ಲಿಯೇ ಲಾರಿಯನ್ನು ನಿಲ್ಲಿಸಿ ಮಲಗಿ, ನಂತರ ದಿನಾಂಕ 26/02/2022 ರಂದು ಪಡುಬಿದ್ರಿಯ ಮಹಾಗಣಪತಿ ಟ್ರೇಡರ್ಸ್ ಗೆ ದಿನಸಿ ಸಾಮಗ್ರಿಗಳನ್ನು ಅನ್‌ಲೋಡ್ ಮಾಡಲು ಬೆಳಿಗ್ಗೆ 08:10 ಗಂಟೆ ವೇಳೆಗೆ ಲಾರಿಯ ಚಾಲಕ ಶಂಕರ ಬೊಲ್ಲ ರವರು ಲಾರಿಯನ್ನು ಹಿಮ್ಮುಖವಾಗಿ ಚಲಿಸುವುದಾಗಿ ತಿಳಿಸಿ ಲಾರಿಯ ಡ್ರೈವರ್ ಸೀಟಿನಲ್ಲಿ ಕುಳಿತವರು ಒಮ್ಮೆಲೇ ಸ್ಟೇರಿಂಗ್ ಮೇಲೆ ಕುಸಿದು ಬಿದ್ದು, ಮೃಪಟ್ಟಿರುತ್ತಾರೆ. ಸದ್ರಿ ಶಂಕರ ಬೊಲ್ಲ ರವರು ಹೃದಯಾಘಾತ, ಹೃದಯ ಸಂಬಂಧಿ ಖಾಯಿಲೆಯಿಂದ ಅಥವಾ ಇನ್ನಾವುದೋ ಖಾಯಿಲೆಯಿಂದ ಮೃತಪಟ್ಟಿದ್ದು, ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣಾ ಯು.ಡಿ.ಆರ್‌ ಕ್ರಮಾಂಕ 06/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ,

ಕಳವು ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾಧ ಪಿಂಟೋ ಪೌಲ್, (35) ತಂದೆ: ಟಿ ಪಿ ಪೌಲ್ ವಿಳಾಸ: 801, ಅನಿರುದ್ದ್ ಹೈಟ್ಸ್, ಪ್ಲಾಟ್ ನಂಬರ್: 168, ಸೆಕ್ಟರ್ 34, ಕಾಮೋತೆ, ಪನ್ವೇಲಿ, ರಾಯಗಢ ಇವರು ವ್ಯವಹಾರದ ಕೆಲಸದ ನಿಮಿತ್ತ ದಿನಾಂಕ 25/02/2022 ರಂದು ರಾತ್ರಿ ಮುಂಬೈನಿಂದ ಮತ್ಸ್ಯಗಂಧ ರೈಲಿನಲ್ಲಿ ಹೊರಟು ದಿನಾಂಕ 26/02/2022 ರಂದು ಬೆಳಿಗ್ಗೆ  ಉಡುಪಿ ರೈಲ್ವೇ ನಿಲ್ದಾಣಕ್ಕೆ ಬಂದು ತಲುಪಿ, ಅವರ POCO M2 Pro ಮೂಬೈಲ್ ಪೋನ್ ನನ್ನು  ಉಡುಪಿ ರೈಲ್ವೇ ನಿಲ್ದಾಣದ ಪ್ಲಾಟ್ ಫಾರಂ 1 ರ ಬಳಿ ಚಾರ್ಜ ಗೆ ಇಟ್ಟಿದ್ದಾಗ  ಸದ್ರಿ ಮೊಬೈಲ್ ಪೋನ್ ನನ್ನು ಬೆಳಿಗ್ಗೆ ಸುಮಾರು 07:00 ಗಂಟೆ ಸುಮಾರಿಗೆ ಇಬ್ಬರು ವ್ಯಕ್ತಿಗಳು ಕಳ್ಳತನ ಮಾಡಿಕೊಂಡು ಓಡಿ ಹೋಗಿದ್ದು ಆಗ ಸ್ಥಳದಲ್ಲಿದ್ದ ಪೊಲೀಸ್ ರು ಹಾಗೂ ರೈಲ್ವೇ ಪೊಲೀಸರು ಆರೋಪಿಗಳನ್ನು ಹಿಡಿದು ಕಳುವಾದ ಪಿಂಟೋ ಪೌಲ್ ರವರ ಮೊಬೈಲ್ ಪೋನ್ ಸಮೇತ್ ಮಣಿಪಾಲ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿರುತ್ತಾರೆ, ಆರೋಪಿಗಳ ಹೆಸರು ವಿಳಾಸ ತಿಳಿದುಕೊಳ್ಳಲಾಗಿ  1) Shahabuddin, S/o: M D Salim, Bihar 2) Tanveer Alam, Age: 28 yrs, S/o:Mohi Uddin, R/o:, Araria, Bihar ಆಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2022, ಕಲಂ; 379. ಜೊತೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾಧ ಪ್ರಿಯಾಂಕ, (21) ತಂದೆ: ರಾಜು ಮೊಗವೀರ, ವಾಸ: ಹೊದ್ರೋಳಿ ಬೀಜಾಡಿ ಗ್ರಾಮ, ಕೋಟೇಶ್ವರ ಅಂಚೆ, ಕುಂದಾಪುರ ಇವರು ದಿನಾಂಕ 25/10/2021 ರಂದು ಕೊಲ್ಲೂರಿನಲ್ಲಿ ಆಪಾದಿತ ಪ್ರದೀಪ ಇತನನ್ನು ಪ್ರೀತಿಸಿ ಮದುವೆಯಾಗಿದ್ದು, ಮದುವೆಯ ನಂತರ ಬರೆಕಟ್ಟುವಿನಲ್ಲಿರುವ ಆರೋಪಿತನ ಮನೆಯಲ್ಲಿ ವಾಸಿಸುತ್ತಿದ್ದು ಸ್ವಲ್ಪ ದಿನ ಕಳೆದ ನಂತರ ಆಪಾದಿತನು ಪ್ರಿಯಾಂಕ ರವರನ್ನು ಅಸಡ್ಡೆಯಿಂದ ನೋಡಿ ದೈಹಿಕ ಹಲ್ಲೆ ಮಾಡಿ ತವರು ಮನೆಯಿಂದ ವರದಕ್ಷಿಣೆ ರೂಪದಲ್ಲಿ ಚಿನ್ನ ಮತ್ತು ಹಣ ತೆಗೆದುಕೊಂಡು ಬಾ ಇಲ್ಲದಿದ್ದಲ್ಲಿ ಸಾಯಿಸುವುದಾಗಿ ಕುತ್ತಿಗೆ ಒತ್ತುತ್ತಿದ್ದು, ಈ ಕೃತ್ಯಕ್ಕೆ ಆಪಾದಿತನ ತಂದೆ ಪ್ರಕಾಶ ಪೂಜಾರಿ ಇವರು ಪ್ರೋತ್ಸಾಹ ನೀಡುತ್ತಿದ್ದುದಾಗಿದೆ. ಈ ತನ್ಮದ್ಯೆ ಪ್ರಿಯಾಂಕ ರವರು ಗರ್ಭಿಣಿಯಾಗಿದ್ದು ದಿನಾಂಕ 22/02/2022ರಂದು 20:00 ಗಂಟೆಗೆ ಆಪಾದಿತನು ಪ್ರಿಯಾಂಕ ರವರಿಗೆ ಹೊಡೆದು ಕಾಲಿನಿಂದ ತುಳಿದು ದೇಹಕ್ಕೆ ಸಿಗರೇಟಿನಿಂದ ಚುಚ್ಚಿ ಗಾಯವುಂಟು ಮಾಡಿ ನಂತರ ಪ್ರಿಯಾಂಕ ಇವರನ್ನು ಮತ್ತು ಮಗುವನ್ನು ಕೊಲ್ಲುವುದಾಗಿ ಹೇಳಿ ಹೊಟ್ಟೆಗೆ ತುಳಿಯಲು ಬಂದಾಗ ಇವರು ತಪ್ಪಿಸಿಕೊಂಡಿದ್ದು ಸೊಂಟಕ್ಕೆ ಪೆಟ್ಟು ಬಿದ್ದಿರುವುದಾಗಿದೆ. ಸದ್ರಿ ಕೃತ್ಯದ ವೀಡಿಯೋ ರೆಕಾರ್ಡ ಮಾಡಿ ಪ್ರಿಯಾಂಕ ರವರ ತಂದೆ ತಾಯಿಗೆ ಕಳುಹಿಸಿ 2 ಲಕ್ಷ ರೂಪಾಯಿ ಹಣ ಹಾಗೂ 4 ಪವನ್ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಬೇಕಾಗಿ ಹೇಳಿ ನೀಡದೇ ಇದ್ದಲ್ಲಿ ಪ್ರಿಯಾಂಕ ರವರ ಶವವನ್ನು ಮನೆಗೆ ಕಳುಹಿಸುವುದಾಗಿ ಹೇಳಿ ಕೊಲೆ ಬೆದರಿಕೆ ಹಾಕಿರುವುದಾಗಿದೆ.  ಇತನು ವರದಕ್ಷಿಣೆಗಾಗಿ  ದೈಹಿಕ ಹಲ್ಲೆ ನಡೆಸಿ ಹಿಂಸೆ ನೀಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2022 ಕಲಂ: 498(a) 323, 324, 504, 506 R/W 34 IPC & U/S 3,4  DP Act ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 26-02-2022 05:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080