ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಗಣೇಶ್ (33),ಗಂಡ: ಸೀನ ಪೂಜಾರಿ, ವಾಸ: ಕೊತ್ತಾಡಿ ಮಳಿಗೆ ಮನೆ ಬನ್ನಾಡಿ ವಡ್ಡರ್ಸೆ  ಗ್ರಾಮ ಬ್ರಹ್ಮಾವರ ತಾಲೂಕು ಇವರ ಅಣ್ಣ ಪ್ರಕಾಶ್ (38) ಎಂಬುವವರು ಬೆಂಗಳೂರಿನಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದು 15 ದಿನಗಳ ಹಿಂದೆ ಪಿರ್ಯಾದಿದಾರರ ಅಣ್ಣನಿಗೆ ಹೆಣ್ಣು ಮಗುವಾಗಿದ್ದು ಮಗುವನ್ನು ನೋಡಲು ಊರಿಗೆ ಬಂದಿರುತ್ತಾರೆ. ದಿನಾಂಕ 24/02/2021 ರಂದು ಸಂಜೆ 06:30 ಗಂಟೆಗೆ ಜಪ್ತಿ ಗ್ರಾಮದ ದಬ್ಬೆಕಟ್ಟೆ ಹೆಂಡತಿ ಮನೆಯಲ್ಲಿರುವಾಗ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದು ರವಿ ಎಂಬುವವರು ಆಟೋ ರಿಕ್ಷಾದಲ್ಲಿ ಕೋಟೇಶ್ವರ  ಎನ್ ಆರ್ ಆಚಾರ್ಯ ಆಸ್ಪತ್ರೆ ಗೆ ಕರೆದು ಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಮತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 04/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಉಡುಪಿ: ಉಡುಪಿ ತಾಲೂಕು ಬನ್ನಂಜೆಯ ಪಾರ್ಥ ಲಾಡ್ಜನ ಮಾಲೀಕರಾದ ಶ್ರೀಮತಿ ಶುಭಲಕ್ಷ್ಮಿ ಎಸ್ ಪ್ರಭು , ಸ್ವಾಗತಕಾರ ವಸಂತ್ ನಾಯಕ್, ಮ್ಯಾನೇಜರ್ ಪ್ರಭಾಕರ ಇವರು ಶ್ರೀಲಂಕಾ ದೇಶದ ಪ್ರಜೆಯಾದ ಕನಿಲನ್ ನದರಾಝಾ (59), ತಂದೆ: ನದರಾಝಾ, ವಾಸ: 75th Main Street, Balangoda City , ಶ್ರೀಲಂಕಾ ಇವರಿಗೆ  ಪಾರ್ಥ ಲಾಡ್ಜನ  ರೂಂ. ನಂಬ್ರ. 511 ರಲ್ಲಿ ದಿನಾಂಕ 13/11/2020 ರಿಂದ  ತಂಗಲು  ಅವಕಾಶ ಮಾಡಿಕೊಟ್ಟು, ವಿದೇಶಿ  ಪ್ರಜೆ ತಂಗಿದ್ದ  ಬಗ್ಗೆ  ಸಿ ಫಾರ್ಮನ್ನು ಭರ್ತಿ ಮಾಡಿ ಪೊಲೀಸರಿಗೆ  ಕಾನೂನು ಸಮ್ಮತವಾಗಿ  ಮಾಹಿತಿಯನ್ನು  ತಲುಪಿಸಲು ವಿಧಿಬಧ್ಧರಿರುವ  ಬಗ್ಗೆ  ಗೊತ್ತಿದ್ದರೂ  ಸಹ  ನಿರ್ಲಕ್ಷ್ಯ ಮಾಡಿ ಅಪರಾಧವೆಸಗಿತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2021 ಕಲಂ: 176 ಐಪಿಸಿ, ಕಲಂ: 7(2),14 Foreigners Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ವಿಜಯಕುಮಾರ್ ಕೆ. (25), ತಂದೆ: ಶಿವಮೂರ್ತಯ್ಯ, ವಾಸ: ಬೋಳಾರ ಮಾರಿಗುಡಿ ದೇವಸ್ಥಾನ ಹತ್ತಿರ, ಮಂಗಳೂರು ಇವರು KA-20-D-3079 ನೇ ಎಸ್.ಎನ್.ಡಿ.ಪಿ ಬಸ್  ಡ್ರೈವರ್ ಆಗಿ  ಕೆಲಸ ಮಾಡಿಕೊಂಡಿದ್ದು ದಿನಾಂಕ 25/02/2020 ರಂದು 4:55 ಗಂಟೆಯ ಸಮಯಕ್ಕೆ KA-20-AA-1389 ನೇ ಡಿಸೆಂಟ್ ಟ್ರಾವೆಲ್ಸ್ ಬಸ್ಸಿನ  ಡ್ರೈವರ್ ಮುನಾಫ್ ಮತ್ತು ಕಂಡಕ್ಟರ್ ಇರ್ಫಾನ್ ಮತ್ತು ಅದರಲ್ಲಿದ್ದ ಅಫಾಕ್ ಮೊಹಮ್ಮದ್ ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ಪಿರ್ಯಾದಿದಾರರ ಬಸ್ ನ್ನು ಅಡ್ಡಗಟ್ಟಿ ಬಸ್ಸಿನ ಒಳಗಡೆ ನುಗ್ಗಿ ಬಸ್ಸಿನ ಟೈಮ್ ವಿಚಾರದಲ್ಲಿ ಗಲಾಟೆ ಮಾಡಿ ಪಿರ್ಯಾದಿದಾರರ ಎಡಬದಿಯ ಕೆನ್ನೆಗೆ, ಕುತ್ತಿಗೆಗೆ, ಕೈ ಮುಷ್ಠಿಯಿಂದ ಗುದ್ದಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2021 ಕಲಂ: 323, 341, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಶಂಕರನಾರಾಯಣ: ದಿನಾಂಕ 25/02/2021 ರಂದು 20:00 ಗಂಟೆಗೆ ಹೆಬ್ರಿ ತಾಲೂಕು ಬೆಳ್ವೆ  ಗ್ರಾಮದ ಗೊಳಿಯಂಗಡಿ ಜನತಾ ಕಾಲೋನಿ ಬಳಿ ಸೋಮೇಶ್ವರ – ಹಾಲಾಡಿ ರಾಜ್ಯ ಹೆದ್ದಾರಿಯಲ್ಲಿ ಪಿರ್ಯಾದಿದಾರರಾದ ಅವಿನಾಶ್‌ ಶೆಟ್ಟಿ (26), ತಂದೆ: ವಸಂತ ಶೆಟ್ಟಿ, ವಾಸ ಶ್ರೀ ನಾಗರತಿ ಗುಮ್ಮಹೊಲ ಬೆಳ್ವೆ ಗ್ರಾಮ ಹೆಬ್ರಿ ತಾಲೂಕು ಉಡುಪಿ ಜಿಲ್ಲೆ ಇವರ ಮನೆಯ ಮೇಯಲು ಬಿಟ್ಟ ಕಂದು ಹಾಗು ಕಪ್ಪು ಮಿಶ್ರಿತ ದನವನ್ನು ಆಪಾದಿತರಾದ ತಬ್ರೀಜ್‌ ಹಾಗೂ ಇತರೇ ಇಬ್ಬರು ಕದ್ದು ಹಗ್ಗದಿಂದ ಕುತ್ತಿಗೆ ಹಾಗು ಕಾಲುಗಳಿಗೆ ಹಿಂಸಾತ್ಮಕವಾಗಿ ಬಿಗಿದು ಕಟ್ಟಿ ಪ್ಯಾಸೆಂಜರ್‌ ಆಟೋ ರಿಕ್ಷಾ ನಂಬ್ರ KA-20-C-9540 ನೇದರಲ್ಲಿ ಹಾಕಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದುದ್ದನ್ನು ಸಾರ್ವಜನಿಕರು ಪ್ಯಾಸೆಂಜರ್‌ ಆಟೋ ರಿಕ್ಷಾ ನಿಲ್ಲಿಸಿದ್ದು ದನ ಇದ್ದ ಪ್ಯಾಸೆಂಜರ್‌ ಆಟೋ ರಿಕ್ಷಾ ಹಾಗೂ ಅದನ್ನು ಹಿಂಬಾಲಿಸಿಕೊಂಡು ಬಂದ ಮೋಟಾರು ಸೈಕಲ್‌ ನಂಬ್ರ KA-20-V-8440 ನ್ನು ಆಪಾದಿತರು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2021 ಕಲಂ: 379 ಐಪಿಸಿ ಮತ್ತು 8,9,11 ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964 ಮತ್ತು 11 (1) (ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆ 1966 ರಂತೆ ಪ್ರಕರಣ ದಾಖಲಾಗಿರುತ್ತದೆ.     
     
     

ಇತ್ತೀಚಿನ ನವೀಕರಣ​ : 26-02-2021 09:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080