ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ದಿನಾಂಕ 16/02/2021 ರಂದು ಬೆಳಿಗ್ಗೆ 11:00 ಗಂಟೆಗೆ ಕಾರ್ಕಳ ತಾಲೂಕು, ಕೌಡೂರು ಗ್ರಾಮದ ರಂಗನ ಪಲ್ಕೆಯ ಮಿರಾಂಡ ಗ್ರೀನ್‌ ವೀವ್‌ ಕಾಂಪ್ಲೆಕ್ಸ್ ಎಂಬಲ್ಲಿ ಸಾರ್ವಜನಿಕ ವಾಹನಗಳು ಓಡಾಡುವ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿಟ್ಟಿದ್ದ KA20P4575 ನೇ ನಂಬ್ರದ ಕಾರನ್ನು ಅದರ ಚಾಲಕನು ಯಾವುದೇ ಸೂಚನೆ ನೀಡದೆ, ನಿರ್ಲಕ್ಷತದಿಂದ ಅತೀ ವೇಗವಾಗಿ ಹಿಂದಕ್ಕೆ ಚಲಾಯಿಸಿ ಹಿಂದುಗಡೆಯಿಂದ ನಡೆದುಕೊಂಡು ಬರುತ್ತಿದ್ದ ಪಿರ್ಯಾದಿ ಶ್ರೀಮತಿ ಯಶೋಧ ಪ್ರಸಾದ್‌ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ಬಲ ಕಾಲಿನ ಪಾದದ ಬಳಿ ರಕ್ತಗಾಯ, ಎಡಕಿವಿಯ ಬಳಿ ಗಾಯ ಹಾಗೂ ಬೆನ್ನಿಗೆ ಒಳನೋವು ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2021 ಕಲಂ 279, 337 ಐಪಿಸಿ 134(A&B) IMV ACT ನಂತೆ  ಪ್ರಕರಣ ದಾಖಲಾಗಿರುತ್ತದೆ.
 • ಅಜೆಕಾರು: ಪಿರ್ಯಾದಿ ಕೃಷ್ಣ ಮೂರ್ತಿ ನಾಯಕ್  ಇವರು ದಿನಾಂಕ: 25/02/2021 ರಂದು ಬೆಳಿಗ್ಗೆ ಸಮಯ ಸುಮಾರು 9:50 ಗಂಟೆಗೆ ಮರ್ಣೆ ಗ್ರಾಮದ ಎಣ್ಣೆಹೊಳೆಯಲ್ಲಿರುವ ತನ್ನ ಮನೆಯಿಂದ ತರಕಾರಿ ತೆಗೆದುಕೊಂಡು ಮಾರಾಟ ಮಾಡಲು ಎಣ್ಣೆಹೊಳೆ ಅಂಗಡಿಗೆ ಕೊಡಲು ರಸ್ತೆ ದಾಟಲು ಅಂಗನವಾಡಿ ಶಾಲೆಯ ಎದುರುಗಡೆ ರಸ್ತೆಯ ಬದಿಯಲ್ಲಿ ನಿಂತಿರುವಾಗ, ಅಜೆಕಾರು ಕಡೆಯಿಂದ ಎಣ್ಣೆಹೊಳೆ  ಮಾರ್ಗವಾಗಿ ಓರ್ವ ಬೈಕ್ ಸವಾರನ್ನು ತನ್ನ  ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಪಿರ್ಯಾದಿದಾರರಿಗೆ ಡಿಕ್ಕಿಹೊಡೆದ ಪರಿಣಾಮವಾಗಿ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಬಲಕೈಯ ಕೋಲುಕೈಗೆ, ಬಲಭುಜಕ್ಕೆ, ತಲೆಯ ಹಿಂಬಾಗ ರಕ್ತ ಗಾಯವಾಗಿದ್ದು, ಅಲ್ಲಿದ್ದ ಜನರು ಉಪಚರಿಸಿ 108 ಆ್ಯಂಬುಲೆನ್ಸ್ ಮೂಲಕ ಚಿಕಿತ್ಸೆಯ ಬಗ್ಗೆ ಕಾರ್ಕಳ ಸರಕಾರಿ ಆಸ್ವತ್ರೆಗೆ ದಾಖಲಿಸಿರುವುದಾಗಿದೆ. ಈ ಅಫಘಾತ ಪಡಿಸಿದ ಬೈಕ್ ನಂಬ್ರ ಕೇಳಲಾಗಿ KA-20-EW-1399 ಎಂಬುದಾಗಿ  ತಿಳಿಯಿತು. ಆತನಿಗೂ ಸಣ್ಣಪುಟ್ಟ ತರಚಿದ ಗಾಯವಾಗಿದ್ದು, ಈ ಅಪಘಾತಕ್ಕೆ  KA-20-EW-1399 ನೇ ದರ  ಬೈಕ್  ಸವಾರನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಅಜೆಕಾರು  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 07/2021  ಕಲಂ 279 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಉಡುಪಿ: ಪಿರ್ಯಾದಿ ಅಬ್ದುಲ್ ಫರ್ಮಾನ್ ಇವರು ಆದಿಉಡುಪಿ ಶಾಖೆಯ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹಾಗೂ ಅದೇ ಬ್ಯಾಂಕ್ ನ ಎ.ಟಿ.ಎಂ. ಕಾರ್ಡ್‌ ಹೊಂದಿರುತ್ತಾರೆ. ಆದರೆ, ದಿನಾಂಕ 17.11.2020 ರಂದು ರಾತ್ರಿ 11:33 ಗಂಟೆ ಸಮಯದಲ್ಲಿ ಅವರ ಖಾತೆಯಿಂದ ರೂಪಾಯಿ 25,000/- ಹಣ,  ಬೆಂಗಳೂರಿನ ಎ.ಟಿ.ಎಂ. ಸೆಂಟರ್ ನಲ್ಲಿ ವಿದ್ ಡ್ರಾ ಆಗಿರುವ ಬಗ್ಗೆ ಪಿರ್ಯಾದಿದಾರರ ಮೊಬೈಲ್ ಗೆ ಸಂದೇಶ ಬಂದಿದ್ದು, ಈ ಬಗ್ಗೆ ಪಿರ್ಯಾದಿದಾರರು ಬ್ಯಾಂಕಿಗೆ ತೆರಳಿ ಖಾತೆ ಹಾಗೂ ಎ.ಟಿ.ಎಂ. ಕಾರ್ಡ್‌ ನ್ನು ಬ್ಲಾಕ್ ಮಾಡಿಸಿರುತ್ತಾರೆ. ಆದರೆ, ದಿನಾಂಕ 25.02.2021 ರಂದು ಮಂಗಳೂರು ಪೊಲೀಸರು ಸ್ಕಿಮ್ಮಿಂಗ್ ನಡೆಸಿ, ಹಣ ವಂಚಿಸುತ್ತಿದ್ದ ಆರೋಪಿಗಳನ್ನು ಹಿಡಿದಿರುವ ಬಗ್ಗೆ ದಿನಪತ್ರಿಕೆಯಲ್ಲಿ ಓದಿ ತಿಳಿದುಕೊಂಡ ಪಿರ್ಯಾದಿದಾರರು, ಅವರ ಖಾತೆಯಿಂದಲೂ ಇದೇ ರೀತಿಯಾಗಿ ಸ್ಕಿಮ್ಮಿಂಗ್ ನಡೆಸಿ, ಹಣವನ್ನು ವಂಚಿಸಿರಬಹುದೆಂದು ತಿಳಿದು, ಈ ದಿನ ಉಡುಪಿ ಸೈಬರ್ ಠಾಣೆಗೆ ಬಂದು, ಪಿರ್ಯಾದಿದಾರರ ಹಣವನ್ನು ಅವರ ಅರಿವಿಗೆ ಬಾರದೇ ಮೋಸದಿಂದ ವಿದ್ ಡ್ರಾ ಮಾಡಿದ ಆರೋಪಿಗಳ ವಿರುದ್ದ ಮತ್ತು ಪಿರ್ಯಾದಿದಾರರ ಹಣವನ್ನು ಸೂಕ್ತ ಭದ್ರಿಕೆಯಲ್ಲಿಡದೇ ವಿದ್ ಡ್ರಾ ಆಗುವ ಹಾಗೆ ಮಾಡಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವರೆ ಕೋರಿಕೊಂಡಿರುವುದು ದೂರಿನ ಸಾರಾಂಶವಾಗಿರುತ್ತದೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2021   ಕಲಂ 66(C), 66(D) ಐ.ಟಿ.ಆಕ್ಟ್ & ಕಲಂ: 420  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿ ಸುಷ್ಮಾ ಇವರು ಬ್ರಹ್ಮಾವರದ ಕೊಳಲಗಿರಿ ಶಾಖೆಯ ಬ್ಯಾಂಕ್ ಆಫ್ ಬರೋಡಾ (ವಿಜಯ ಬ್ಯಾಂಕ್) ನಲ್ಲಿ ಉಳಿತಾಯ ಖಾತೆ ಹಾಗೂ ಅದೇ ಬ್ಯಾಂಕ್ ನ ಎ.ಟಿ.ಎಂ. ಕಾರ್ಡ್‌ ಹೊಂದಿರುತ್ತಾರೆ. ಆದರೆ, ದಿನಾಂಕ 04.01.2021  ರಂದು 18:56:33 ಗಂಟೆ ಸಮಯದಲ್ಲಿ ಅವರ ಖಾತೆಯಿಂದ ರೂಪಾಯಿ 6,000/- ಹಣ,  ವಿದ್ ಡ್ರಾ ಆಗಿರುವ ಬಗ್ಗೆ ಪಿರ್ಯಾದಿದಾರರ ಮೊಬೈಲ್ ಗೆ ಸಂದೇಶ ಬಂದಿದ್ದು, ಈ ಬಗ್ಗೆ ಪಿರ್ಯಾದಿದಾರರು ಬ್ಯಾಂಕಿಗೆ ತೆರಳಿ ಖಾತೆ ಹಾಗೂ ಎ.ಟಿ.ಎಂ. ಕಾರ್ಡ್‌ ನ್ನು ಬ್ಲಾಕ್ ಮಾಡಿಸಿರುತ್ತಾರೆ. ಆದರೆ, ದಿನಾಂಕ 25.02.2021 ರಂದು ಮಂಗಳೂರು ಪೊಲೀಸರು ಸ್ಕಿಮ್ಮಿಂಗ್ ನಡೆಸಿ, ಹಣ ವಂಚಿಸುತ್ತಿದ್ದ ಆರೋಪಿಗಳನ್ನು ಹಿಡಿದಿರುವ ಬಗ್ಗೆ ದಿನಪತ್ರಿಕೆಯಲ್ಲಿ ಓದಿ ತಿಳಿದುಕೊಂಡ ಪಿರ್ಯಾದಿದಾರರು, ಅವರ ಖಾತೆಯಿಂದಲೂ ಇದೇ ರೀತಿಯಾಗಿ ಸ್ಕಿಮ್ಮಿಂಗ್ ನಡೆಸಿ, ಹಣವನ್ನು ವಂಚಿಸಿರಬಹುದೆಂದು ತಿಳಿದು, ಈ ದಿನ ಉಡುಪಿ ಸೈಬರ್ ಠಾಣೆಗೆ ಬಂದು, ಪಿರ್ಯಾದಿದಾರರ ಹಣವನ್ನು ಅವರ ಅರಿವಿಗೆ ಬಾರದೇ ಮೋಸದಿಂದ ವಿದ್ ಡ್ರಾ ಮಾಡಿದ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವರೆ ಕೋರಿಕೊಂಡಿರುವುದು ದೂರಿನ ಸಾರಾಂಶವಾಗಿರುತ್ತದೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2021   ಕಲಂ 66(C), 66(D) ಐ.ಟಿ.ಆಕ್ಟ್ & ಕಲಂ: 420  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿ ಮಹೇಶ್ ಸುವರ್ಣ ಇವರು ಉಡುಪಿ ಕಡೆಕಾರು ಶಾಖೆಯ ಕೆನರಾ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹಾಗೂ ಅದೇ ಬ್ಯಾಂಕ್ ನ ಎ.ಟಿ.ಎಂ. ಕಾರ್ಡ್‌ ಹೊಂದಿರುತ್ತಾರೆ. ಆದರೆ, ದಿನಾಂಕ 18.11.2020 ರಂದು ರಾತ್ರಿ ಸಮಯದಲ್ಲಿ ಅವರ ಖಾತೆಯಿಂದ ರೂಪಾಯಿ 33,300/- ಹಣ,  ಮಂಗಳೂರು ಕೊಡಿಯಾಲ್ ಬೈಲ್ ಎಂಬಲ್ಲಿನ ಎ.ಟಿ.ಎಂ. ಸೆಂಟರ್ ನಲ್ಲಿ ವಿದ್ ಡ್ರಾ ಆಗಿರುವ ಬಗ್ಗೆ ಪಿರ್ಯಾದಿದಾರರ ಮೊಬೈಲ್ ಗೆ ಸಂದೇಶ ಬಂದಿದ್ದು, ಈ ಬಗ್ಗೆ ಪಿರ್ಯಾದಿದಾರರು ಬ್ಯಾಂಕಿಗೆ ತೆರಳಿ ಖಾತೆ ಹಾಗೂ ಎ.ಟಿ.ಎಂ. ಕಾರ್ಡ್‌ ನ್ನು ಬ್ಲಾಕ್ ಮಾಡಿಸಿರುತ್ತಾರೆ. ಆದರೆ, ದಿನಾಂಕ 25.02.2021 ರಂದು ಮಂಗಳೂರು ಪೊಲೀಸರು ಸ್ಕಿಮ್ಮಿಂಗ್ ನಡೆಸಿ, ಹಣ ವಂಚಿಸುತ್ತಿದ್ದ ಆರೋಪಿಗಳನ್ನು ಹಿಡಿದಿರುವ ಬಗ್ಗೆ ದಿನಪತ್ರಿಕೆಯಲ್ಲಿ ಓದಿ ತಿಳಿದುಕೊಂಡ ಪಿರ್ಯಾದಿದಾರರು, ಅವರ ಖಾತೆಯಿಂದಲೂ ಇದೇ ರೀತಿಯಾಗಿ ಸ್ಕಿಮ್ಮಿಂಗ್ ನಡೆಸಿ, ಹಣವನ್ನು ವಂಚಿಸಿರಬಹುದೆಂದು ತಿಳಿದು, ಈ ದಿನ ಉಡುಪಿ ಸೈಬರ್ ಠಾಣೆಗೆ ಬಂದು, ಪಿರ್ಯಾದಿದಾರರ ಹಣವನ್ನು ಅವರ ಅರಿವಿಗೆ ಬಾರದೇ ಮೋಸದಿಂದ ವಿದ್ ಡ್ರಾ ಮಾಡಿದ ಆರೋಪಿಗಳ ವಿರುದ್ದ ಮತ್ತು ಪಿರ್ಯಾದಿದಾರರ ಹಣವನ್ನು ಸೂಕ್ತ ಭದ್ರಿಕೆಯಲ್ಲಿಡದೇ ವಿದ್ ಡ್ರಾ ಆಗುವ ಹಾಗೆ ಮಾಡಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವರೆ ಕೋರಿಕೊಂಡಿರುವುದು ದೂರಿನ ಸಾರಾಂಶವಾಗಿರುತ್ತದೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 07/2021   ಕಲಂ 66(C), 66(D) ಐ.ಟಿ.ಆಕ್ಟ್ & ಕಲಂ: 420  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ದುರ್ಗಾಪರಮೇಶ್ವರಿ (44), ಗಂಡ:ತಂಗಸ್ವಾಮಿ, ವಾಸ:ವೀರಮಾತೆ ನಿವಾಸ ಗುಂಡ್ಯಡ್ಕ 5 ಸೆಂಟ್ಸ್ ಕುಪ್ಪಬೆಟ್ಟು ಕುಕ್ಕುಂದೂರು ಗ್ರಾಮ ಕಾರ್ಕಳ ಇವರ  ಗಂಡ ತಂಗಸ್ವಾಮಿ (54) ಇವರು ಕಳೆದ 3 ವರ್ಷಗಳಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಖಾಯಿಲೆಯು ಗುಣಮುಖವಾಗದ ಕಾರಣ ದಿನಾಂಕ 26/02/2021 ರಂದು ಬೆಳಗ್ಗೆ 8:30 ಗಂಟೆಯಿಂದ 09:45 ಗಂಟೆಯ ಮಧ್ಯೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಜೀವನದಲ್ಲಿ ಜುಗುಪ್ಸೆ ಹೊಂದಿ ತನ್ನ ವಾಸ್ತವ್ಯದ ಮನೆಯೊಳಗೆ ತಾನು ಮಲಗುವ ಕೋಣೆಯ ಮಾಡಿನ ಜಂತಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ  03/2021 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ಪಿರ್ಯಾದಿದಾರರಾದ ನಾಗಪ್ಪ ದಲವಾಯಿ (65), ತಂದೆ:  ದಿ. ಅಯ್ಯಪ್ಪ, ವಾಸ:  ಮಂಡಲಗೇರಿ ಯಲಾಬುರ್ಗ ತಾಲೂಕು  ಕೊಪ್ಪಳ ಜಿಲ್ಲೆ  ಹಾಗೂ  ಅವರ  ಊರಿನ  ಶಿವನಗೌಡ (50) ಇವರು ಮಲ್ಪೆ  ಬಂದರಿನಲ್ಲಿ   ವಿಷ್ಣು  ಚಕ್ರ  ಎಂಬ ಹೆಸರಿನ  ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಮೀನುಗಾರಿಕೆ ಮುಗಿಸಿ ದಿನಾಂಕ 16/02/2021 ರಂದು ವಾಪಸ್ಸು  ಮಲ್ಪೆ  ಬಂದರಿಗೆ  ಬಂದು ಬಾಪುತೋಟ  ಹಳೆ ಕಚೇರಿ ಬಳಿ ದಕ್ಕೆಯಲ್ಲಿ  ಬೋಟನ್ನು  ಕಟ್ಟಿರುತ್ತಾರೆ.  ಪಿರ್ಯಾದಿದಾರರು ಹಾಗೂ ಶಿವನಗೌಡ  ರಾತ್ರಿ  ಬೋಟಿನಲ್ಲಿ ಮಲಗುತ್ತಿದ್ದರು. ದಿನಾಂಕ 25/02/2021 ರಂದು  ರಾತ್ರಿ 8:30 ಗಂಟೆಗೆ  ಬೋಟಿನಲ್ಲಿ ಮಲಗಿದ್ದು  ದಿನಾಂಕ 26/02/2021 ರಂದು ಬೆಳಿಗ್ಗೆ 05:00 ಗಂಟೆಗೆ  ಪಿರ್ಯಾದಿದಾರರು ಎದ್ದು ನೋಡುವಾಗ ಶಿವನಗೌಡ ಬೋಟಿನಲ್ಲಿ ಕಾಣದೆ ಇದ್ದು ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ದಿನಾಂಕ 26/06/2021 ರಂದು  ಬೆಳಿಗ್ಗೆ 8:00 ಗಂಟೆಗೆ ಮಲ್ಪೆ ಬಾಪುತೋಟ ದಕ್ಕೆಯ ನೀರಿನಲ್ಲಿ  ಶಿವನಗೌಡ ರವರ  ಮೃತ ಶರೀರ ಪತ್ತೆಯಾಗಿರುತ್ತದೆ. ಶಿವನಗೌಡ ರವರು ಬೋಟಿನಲ್ಲಿ ಆಕಸ್ಮಿಕವಾಗಿ  ಕಾಲು ಜಾರಿ ದಕ್ಕೆಯ ನೀರಿಗೆ   ಬಿದ್ದು ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 12/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 26-02-2021 05:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ