ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾಧ ಸುಲೇಮಾನ್ ಆಸೀಫ್ (39) ತಂದೆ: ದಿ. ಮೊಯ್ದು ಕುಟ್ಟಿ, ವಾಸ: #5-141 ಸಿ, ಸುಲ್ತಾನ್ ರಸ್ತೆ, ಹೆಜಮಾಡಿ ಗ್ರಾಮ, ಕಾಪು ತಾಲೂಕು, ಉಡುಪಿ ಇವರ ಅಕ್ಕನ ಮಗ ಮೊಯ್ದಿನ್ ಸಿಯಾಜ್ ಹುಸೈನ್(20) ಎಂಬುವರು ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿಕೊಂಡಿದ್ದು, ಪ್ರತಿದಿನವೂ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತಿದ್ದು, ಅದರಂತೆ ದಿನಾಂಕ 25/01/2023 ರಂದು ಅವರ ಬಾಬ್ತು KA-20-EW-9374 ನೇ ನಂಬ್ರದ ಮೋಟಾರ್ ಸೈಕಲ್ ನಲ್ಲಿ ಕಾಲೇಜಿಗೆ ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಸಾಗುವ ರಾಜ್ಯ ಹೆದ್ದಾರಿ-01 ರಲ್ಲಿ ಹೋಗುತ್ತಿರುವ ಸಮಯ ಸುಮಾರು 08:30 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಕಂಚಿನಡ್ಕದ ಸಮ್‌ಕಾಮ್ ಚಿಕನ್ ಎದುರು, ಮೋಟಾರ್ ಸೈಕಲ್ಲಿನ ಎದುರಿನಿಂದ ಹೋಗುತ್ತಿದ್ದ KA-20-AB-5957  ನೇ ನಂಬ್ರದ  ಪಿಕಪ್ ವಾಹನವನ್ನು ಅದರ ಚಾಲಕ ಅರವಿಂದ ಶೆಟ್ಟಿ ಹೆಬ್ರಿ ಎಂಬಾತನು ತನ್ನ ಪಿಕಪ್‌ವಾಹನವನ್ನು ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸುತ್ತಾ ಯಾವುದೇ ಮುನ್ಸೂಚನೆ ನೀಡದೇ ಒಮ್ಮೆಲೇ ಸಮ್‌ಕಾಮ್ ಕೋಳಿ ಅಂಗಡಿ ಕಡೆಗೆ ಬಲಕ್ಕೆ ಚಲಾಯಿಸಿದ್ದರಿಂದ ಹಿಂದಿನಿಂದ ಬರುತ್ತಿದ್ದ ಮೊಯ್ದಿನ್ ಸಿಯಾಜ್ ಹುಸೈನ್ ನ ಮೋಟಾರ್‌ಸೈಕಲ್ಲಿಗೆ ಪಿಕಪ್‌‌ನ ಬಲಭಾಗದ ಹಿಂಬದಿಯ ಟಯರ್ ಡಿಕ್ಕಿಯಾಗಿ ಮೋಟಾರ್‌ ಸೈಕಲ್ ಸಮೇತ ರಸ್ತೆಗೆ ಬಿದ್ದಿರುತ್ತಾನೆ. ಸದ್ರಿ ಅಪಘಾತದಿಂದ ಮೊಯ್ದಿನ್ ಸಿಯಾಜ್ ಹುಸೈನ್ ನ ಮುಖಕ್ಕೆ, ಹಣೆಗೆ ತೀವ್ರ ತರಹದ ಗಾಯಗಳಾಗಿರುತ್ತವೆ. ನಂತರ ಆತನನ್ನು ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಐ.ಸಿ.ಯು. ವಿಭಾಗದಲ್ಲಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 09/2023, ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ದಿನಾಂಕ: 25/01/2023 ರಂದು ಬೆಳಿಗ್ಗೆ 09:30 ಗಂಟೆಗೆ ಹೆಬ್ರಿ ಗ್ರಾಮದ ಪ್ರವಾಸಿ ಮಂದಿರದ ಬಳಿ ಮಂಜುನಾಥ ಹೆಗ್ಡೆ ರವರು ಅವರ KA-20 .MA-3955 ನೇ ರಿಡ್ಜ್  ಕಾರನ್ನು ರಸ್ತೆಯ ಎಡಬದಿಯ ಕಚ್ಚಾ ರಸ್ತೆಯಲ್ಲಿ ನಿಲ್ಲಿಸಿ ಕಾರಿನಲ್ಲಿ ಕುಳಿತು ಕೊಂಡಿದ್ದು. ಅವರ ಸ್ನೇಹಿತ ನಾಗೇಶ್ ಇವರು ತಮ್ಮ KA-20 EN-7535 ನೇ ಸ್ಕೂಟರ್ ನಲ್ಲಿ ಅಲ್ಲಿಗೆ ಬಂದು ಕಾರಿನ ಬಲಬದಿಯ ಮುಂದಿನ ಡೂರ್ ನ ಬಳಿ ಸ್ಕೂಟರ್‌ ನಿಲ್ಲಿಸಿ ಸ್ಕೂಟರ್ ನಲ್ಲಿ ಕುಳಿತು ಕೊಂಡು ಮಂಜುನಾಥ ಹೆಗ್ಡೆ ಇವರಲ್ಲಿ ಮಾತನಾಡುತ್ತಿರುವಾಗ ಅವರ ಹಿಂದುಗಡೆಯಿಂದ ಅಂದರೆ ಹೆಬ್ರಿ ಕಡೆಯಿಂದ ಮುದ್ರಾಡಿ ಕಡೆಗೆ KA-20 C-9400 ನೇ ಬೊಲೇರೋ ಪಿಕಾಪ್ ವಾಹನವನ್ನು ಅದರ ಚಾಲಕ ಸುನೀಲ್ ರವರು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ರಸ್ತೆಯ ಎಡಬದಿಗೆ ಬಂದು ನಾಗೇಶ್ ಇವರ ಸ್ಕೂಟರ್ ಗೆ ಮತ್ತು ಕಾರಿನ ಬಲಬದಿಯ ಮುಂದಿನ ಡೂರ್ ಗೆ ಡಿಕ್ಕಿ ಹೊಡೆದು ಪಿಕಪ್ ವಾಹನವು ಮುಂದಕ್ಕೆ ಹೋಗಿ ರಸ್ತೆಯ ಎಡಬದಿಯಲ್ಲಿರುವ ಸಿಮೆಂಟ್ ಚರಂಡಿಯ ಮೇಲೆ ಬಲಮುಗ್ಗಲಾಗಿ ಬಿದ್ದುಕೊಂಡಿರುತ್ತದೆ. ಈ ಘಟನೆಯಿಂದ ನಾಗೇಶ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಅವರ ಎಡಕಾಲಿನ ಬಳಿ ತೀವ್ರ ಸ್ವರೂಪದ ಗಾಯವಾಗಿದ್ದು. ಎಡಭುಜದ ಬಳಿ ಗುದ್ದಿದ ನೋವಾಗಿರುತ್ತದೆ. ಮಂಜುನಾಥ ಹೆಗ್ಡೆ ಇವರಿಗೆ ಬಲಕಾಲಿನ ಬಳಿ ತರಚಿದ ಗಾಯವಾಗಿರುತ್ತದೆ  ಅಪಘಾತ ಪಡಿಸಿದ ಬೊಲೇರೋ ಪಿಕಪ್ ವಾಹನದ ಚಾಲಕ ಸುನೀಲ್ ಇವರಿಗೆ ಕಾಲಿನ ಬಳಿ ಗುದಿದ್ದ ನೋವಾಗಿದ್ದು ಮೂರು ವಾಹನಗಳು ಜಖಂ ಅಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 05/2023, ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಾಧಕ ವಸ್ತು ಸೇವನೆ ಪ್ರಕರಣ

  • ಕುಂದಾಫುರ: ದಿನಾಂಕ 24/01/2023 ರಂದು ಪಿರ್ಯಾದಿದಾರರಾಧ ಪ್ರಸಾದ್ ಕುಮಾರ್ ಕೆ ಪಿಎಸ್ ಐ ( ತನಿಖೆ) ಕುಂದಾಪುರ ಪೊಲೀಸ್ ಠಾಣೆ ಇವರು  ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯವರೊಂದಿಗೆ  ಇಲಾಖಾ ಜೀಪು ನಂಬ್ರ ಕೆಎ-20 ಜಿ-356 ನೇದರಲ್ಲಿ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ ಕರ್ತವ್ಯದಲ್ಲಿರುವ ಸಮಯ ಬಾತ್ಮೀದಾರರೊಬ್ಬರು ಕರೆ ಮಾಡಿ ಕೊಟೇಶ್ವರ ಗ್ರಾಮದ ಹಾಲಾಡಿ ಜಂಕ್ಷನ್ ಬಳಿ ಗಾಂಜಾ ಸೇವನೆ  ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದು ಅದರಂತೆ, ಪಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ 21:30 ಗಂಟೆಗೆ ಸ್ಥಳಕ್ಕೆ ತೆರಳಿ ನೋಡಿದಾಗ ಅಲ್ಲಿ ಓರ್ವ ವ್ಯಕ್ತಿ ತೂರಾಡಿಕೊಂಡು ಅಮಲಿನಲ್ಲಿರುವುದು ಕಂಡುಬಂದಿದ್ದು, ಆತನನ್ನು  ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಮಂಜುನಾಥ , ಪ್ರಾಯ: 24  ವರ್ಷ, ತಂದೆ: ದಿವಂಗತ ಸಂಜೀವ ಪೂಜಾರಿ , ವಾಸ: ಶ್ರೀ ಮಂಜುನಾಥ ನಿಲಯ ಹಳೆಅಳಿವೆ ರೋಡ್  ಕೋಟೇಶ್ವರ  ಗ್ರಾಮ, ಕುಂದಾಪುರ ಇತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ವೈದ್ಯಕೀಯ ತಪಾಸಣೆ ಬಗ್ಗೆ ಠಾಣಾ ಸಿಬ್ಬಂದಿಯವರ ಮುಖೇನ ಶ್ರೀ ಮಾತಾ  ಆಸ್ಪತ್ರೆ ಕುಂದಾಪುರದ  ವೈದ್ಯಾಧಿಕಾರಿಯವರ  ಮುಂದೆ ಹಾಜರುಪಡಿಸಿದ್ದು, ಇತನನ್ನು  ಪರೀಕ್ಷಿಸಿದ ವೈದ್ಯರು ಇವರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿದೆ  ದಿನಾಂಕ 25/01/2023 ರಂದು ವರದಿ ನೀಡಿರುವುದಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 10/2023 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಫುರ: ದಿನಾಂಕ 25/01/2023 ರಂದು ಪಿರ್ಯಾದಿದಾರರಾಧ ಪ್ರಮೋದ್ ಕೆ (24) ತಂದೆ: ಕೃಷ್ಣ ಎಸ್  ಪೂಜಾರಿ ವಾಸ: ಶ್ರೀ ಗುರುಕೃಪ  ನಿಲಯ,  ಹಳೆಅಳಿವೆ ಕೋಟೇಶ್ವರ  ಗ್ರಾಮ, ಕುಂದಾಪುರ ಇವರು  ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯವರೊಂದಿಗೆ  ಇಲಾಖಾ ಜೀಪು ನಂಬ್ರ ಕೆಎ-20 ಜಿ-263 ನೇದರಲ್ಲಿ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ ಕರ್ತವ್ಯದಲ್ಲಿರುವ ಸಮಯ ಬಾತ್ಮೀದಾರರೊಬ್ಬರು ಕರೆ ಮಾಡಿ ಕೊಟೇಶ್ವರ ಗ್ರಾಮದ ಕಾಮತ್ ಪೆಟ್ರೋಲ್ ಬಂಕ್ ಬಳಿ ಗಾಂಜಾ ಸೇವನೆ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದು ಅದರಂತೆ, ಪಿರ್ಯಾದಿದಾರರು ಸಿಬ್ಬಂದಿಯವರೊಂದಿ ಬೆಳಿಗ್ಗೆ 11:45 ಗಂಟೆಗೆ ಸ್ಥಳಕ್ಕೆ ತೆರಳಿ ನೋಡಿದಾಗ ಅಲ್ಲಿ ಓರ್ವ ವ್ಯಕ್ತಿ ತೂರಾಡಿಕೊಂಡು ಅಮಲಿನಲ್ಲಿರುವುದು ಕಂಡುಬಂದಿದ್ದು, ಆತನನ್ನು  ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಪ್ರಮೋದ್ ಕೆ  (24) ತಂದೆ: ಕೃಷ್ಣ ಎಸ್ ಪೂಜಾರಿ ವಾಸ: ಶ್ರೀ ಗುರುಕೃಪ  ನಿಲಯ,  ಹಳೆಅಳಿವೆ ಕೋಟೇಶ್ವರ  ಗ್ರಾಮ, ಕುಂದಾಪುರ   ಇವರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ವೈದ್ಯಕೀಯ ತಪಾಸಣೆ ಬಗ್ಗೆ ಠಾಣಾ ಸಿಬ್ಬಂದಿಯವರ ಮುಖೇನ ಶ್ರೀ ಮಾತಾ  ಆಸ್ಪತ್ರೆ ಕುಂದಾಪುರದ  ವೈದ್ಯಾಧಿಕಾರಿಯವರ  ಮುಂದೆ ಹಾಜರುಪಡಿಸಿದ್ದು, ಇತನನ್ನು  ಪರೀಕ್ಷಿಸಿದ ವೈದ್ಯರು ಇವರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ  ದಿನಾಂಕ 25/01/2023 ರಂದು ವರದಿ ನೀಡಿರುವುದಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 11/2023 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಫುರ: ಪಿರ್ಯಾದಿದಾರರಾಧ ಚಂದಮ್ಮ ಶೆಟ್ಟಿ, (86) ಗಂಡ: ದಿ. ಶೀನಪ್ಪ ಶೆಟ್ಟಿ, ವಾಸ:  ದರ್ಖಾಸು ಮನೆ, ಸಳ್ವಾಡಿ, ಕಾಳಾವರ ಗ್ರಾಮ, ಕುಂದಾಪುರ ಇವರ ಮಗ ಗೋವಾದಲ್ಲಿ ಹೊಟೇಲ್‌ಕೆಲಸ ಮಾಡಿಕೊಂಡಿದ್ದು ಪಿರ್ಯಾದಿದಾರರ ಮಗನ ಹೊಟೇಲ್‌ನಲ್ಲಿ ಅನಾಥನಾಗಿ ಕೆಲಸ ಮಾಡಿಕೊಂಡಿದ್ದ ವಿಠಲ (48) ಎಂಬವರನ್ನು ಚಂದಮ್ಮ ಶೆಟ್ಟಿ,  ರವರನ್ನು ನೋಡಿಕೊಂಡು ಮನೆಯಲ್ಲಿ ಇರುವವಂತೆ ಸುಮಾರು 5 ವರ್ಷಗಳ ಹಿಂದೆ ಚಂದಮ್ಮ ಶೆಟ್ಟಿ, ರವರ ಮಗ ಬಿಟ್ಟು ಹೋಗಿರುತ್ತಾರೆ. ಚಂದಮ್ಮ ಶೆಟ್ಟಿ, ಇವರನ್ನು ನೋಡಿಕೊಂಡು ಇದ್ದಿದ್ದ ವಿಠಲನು ಇತ್ತೀಚೆಗೆ ಮದ್ಯಪಾನ ಚಟವನ್ನು ರೂಡಿಸಿಕೊಂಡಿದ್ದು ಮದ್ಯಪಾನ ಮಾಡಲು ಹಣ ನೀಡುವಂತೆ ಒತ್ತಾಯ ಮಾಡುತ್ತಿದ್ದನು. ದಿನಾಂಕ 25/01/2023 ರಂದು ಬೆಳಿಗ್ಗೆ 11:00 ಗಂಟೆ ಸುಮಾರಿಗೆ ವಿಠಲನು ಚಂದಮ್ಮ ಶೆಟ್ಟಿ, ರವರಲ್ಲಿ ಮದ್ಯಪಾನ ಮಾಡಲು ಹಣ ಕೇಳಿದ್ದು ಇವರು ಹಣ ನೀಡದೇ ಇದ್ದಾಗ ವಿಠಲನು ಸಿಟ್ಟಿನಿಂದ ಎದ್ದು ಹೋಗಿ ಮನೆಯ ಹತ್ತಿರ ಇರುವ ಕೊಟ್ಟಿಗೆಯ ಜಂತಿಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ವಿಠಲನು ಮದ್ಯಪಾನ ಮಾಡುವ ಚಟದಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 05/2023 ಕಲಂ:174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
    ಹೆಬ್ರಿ: ಪಿರ್ಯಾದಿದಾರರಾದ ಮಂಜು ಹಾಂಡ (70) ತಂದೆ: ವೆಂಕಟ ಕುಲಾಲ ವಾಸ: ಜನತಅ ಕಾಲೋನಿ ಸೋಮೇಶ್ವರ ನಾಡ್ಪಾಲು ಗ್ರಾಮ ಹೆಬ್ರಿ ಇವರ ಮಗ ವಿಜಯ (45) ರವರು ಮದ್ಯಪಾನ ಚಟವನ್ನು ಹೊಂದಿದ್ದು ವಿಪರೀತ ಮದ್ಯಪಾನ ಚಟವನ್ನು ಹೊಂದಿರುತ್ತಾರೆ. ವಿಜಯ ರವರು ವಿಪರೀತ ಮದ್ಯಪಾನ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ದಿನಾಂಕ 25/01/2023 ರಂದು ಮಧ್ಯಾಹ್ನ 01:15 ಗಂಟೆಯಿಂದ 02:00 ಗಂಟೆಯ ಮಧ್ಯಾವಧಿಯಲ್ಲಿ ನಾಡ್ಪಾಲು ಗ್ರಾಮದ ಸೊಮೇಶ್ವರ ಜನತಾ ಕಾಲೋನಿ ಎಂಬಲ್ಲಿರುವ ಅವರ ಮನೆಯ ಮಲಗುವ ಕೋಣೆಯಲ್ಲಿ ಪ್ಲಾಸ್ಟಿಕ ಕುರ್ಚಿಯ ಮೇಲೆ ಹತ್ತಿ ಕೋಣೆಯಲ್ಲಿರುವ ಮೇಲಿನ ಮರದ ಜಂತಿಗೆ ಸೀರೆಯನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿಲ್ಲವಾಗಿದೆ. . ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 03/2023 ಕಲಂ:174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ನಾರಾಯಣ ಹೊಬಳಿದಾರ ತಂದೆ: ದಿ. ಗಣಪಯ್ಯ ಹೊಬಳಿದಾರ ವಾಸ: ಎಲ್ಲೂರು ಗೋಳಿಹೊಳೆ ಗ್ರಾಮ, ಬೈಂದೂರು ತಾಲೂಕು ಇವರು ಗೋಳಿಹೊಳೆ ಗ್ರಾಮದ ಎಲ್ಲೂರಿನಲ್ಲಿ ವಾಸ ಮಾಡಿಕೊಂಡಿದ್ದು  ದಿನಾಂಕ 25/01/2023 ರಂದು ಮಧ್ಯಾಹ್ನ 3:00 ಗಂಟೆಗೆ ಆರೋಪಿ ಕಿರಣ ಹೋಬಳಿದಾರ ಈತನು ಇನ್ನೊಬ್ಬ ಅಪರಿಚಿತ ವ್ಯಕ್ತಿಯೊಂದಿಗೆ ಇವರ ಜಮೀನಿನಲ್ಲಿರುವ ಮರವನ್ನು ಬಲಾತ್ಕಾರವಾಗಿ ಕಡಿಯುತ್ತಿರುವಾಗ ನಾರಾಯಣ ಇವರು ಆಕ್ಷೇಪ ಮಾಡಿದಾಗ ಆರೋಪಿ ಕಿರಣ ಹೋಬಳಿದಾರನು ನಾರಾಯಣ ರವರ ಮನೆಯ ಜಗಲಿಗೆ ಅಕ್ರಮ ಪ್ರವೇಶ ಮಾಡಿ ನಾರಾಯಣ ಇವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಎದೆಗೆ ಹೊಡೆದು ಹೆಚ್ಚು ಮಾತನಾಡಿದರೆ ನಿನ್ನನ್ನು  ಕೊಲ್ಲದೇ ಬಿಡುವುದಿಲ್ಲ  ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 15/2023, ಕಲಂ: 448,504, 323, 506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 26-01-2023 09:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080