ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ದಿನಾಂಕ 25/01/2022 ರಂದು ಪಿರ್ಯಾದಿದಾರರಾದ  ಸತೀಶ್ ಖಾರ್ವಿ (32), ತಂದೆ: ರಾಮಚಂದ್ರ ಖಾರ್ವಿ,  ವಾಸ: ಮನೆ ನಂಬ್ರ 4082 ಗುಡ್ಡೆಕೇರಿ ಗಂಗೊಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರು ದಾಮೋದರ ಖಾರ್ವಿ ರವರು ಸವಾರಿ ಮಾಡಿಕೊಂಡಿದ್ದ  KA-20-ES-2179 ನೇ ಸ್ಕೂಟರ್‌ ನಲ್ಲಿ  ಸಹ ಸವಾರನಾಗಿ ಕುಳಿತುಕೊಂಡು ತಲ್ಲೂರು ಕಡೆಯಿಂದ ಗಂಗೊಳ್ಳಿ ಕಡೆಗೆ ಹೋಗುತ್ತಿರುವಾಗ ದಾಮೋದರ ಖಾರ್ವಿ ಯವರು ಸ್ಕೂಟರ್‌ ಅನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಮಧ್ಯಾಹ್ನ 2:30 ಗಂಟೆಗೆ  ಕುಂದಾಪುರ  ತಾಲೂಕು ಗುಜ್ಜಾಡಿ ಗ್ರಾಮದ ಬೆಣ್ಗೆರೆ ಕ್ರಾಸ್‌ ಬಳಿ ತಲುಪುವಾಗ ಎದುರಿನಿಂದ ರಸ್ತೆಗೆ ನಾಯಿಯೊಂದು ಅಡ್ಡ ಬಂದಿದ್ದರಿಂದ ಸ್ಕೂಟರ್‌  ಸವಾರ ಸ್ಕೂಟರ್‌ ಗೆ ಒಮ್ಮೆಲೆ ಬ್ರೇಕ್‌ ಹಾಕಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸ್ಕೂಟರ್‌  ಸವಾರ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರಿಗೆ ಎಡ ಭುಜಕ್ಕೆ ಮೂಳೆ ಮುರಿತದ ಗಾಯ, ಎಡಮುಂಗೈ ಹಾಗೂ ಎರಡೂ ಮುಂಗಾಲಿಗೆ ರಕ್ತಗಾಯವಾಗಿರುತ್ತದೆ. ಆಪಾದಿತ ಸ್ಕೂಟರ್‌ ಸವಾರನಿಗೆ ಹಣೆಗೆ, ಮುಖಕ್ಕೆ, ಕೈಗಳಿಗೆ ರಕ್ತಗಾಯವಾಗಿದ್ದು  ಇಬ್ಬರನ್ನೂ ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 10/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
  • ಕಾರ್ಕಳ: ದಿನಾಂಕ 25/01/2022 ರಂದು ಬೆಳಿಗ್ಗೆ 09:30 ಗಂಟೆಗೆ ಪಿರ್ಯಾದಿದಾರರಾದ ಅಭಿಜಿತ್ ರಾವ್ (27), ತಂದೆ: ದಿ. ಜನಾರ್ಧನ ರಾವ್, ವಾಸ: ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ, ಹಿರಿಯಂಗಡಿ,  ಕಸಬಾ ಗ್ರಾಮ, ಕಾರ್ಕಳ ತಾಲೂಕು ಇವರು ತನ್ನ KA-20-EV-0636 ನೇ ದ್ವಿಚಕ್ರ ವಾಹನದಲ್ಲಿ ತನ್ನ ಅಜ್ಜಿ ಜಯಂತಿ ರಾವ್ (70) ರವರನ್ನು ಹಿಂಬದಿ ಸವಾರರಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಹೊರಟು ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನಕ್ಕೆ ಹೋಗಿ ವಾಪಾಸು  ತನ್ನ ಮನೆ ಕಡೆಗೆ ಹೊರಟು ಶಿವತಿಕೆರೆ ಪೆಟ್ರೋಲ್‌ ಬಂಕ್‌ ನ ಎದುರುಗಡೆ 10:00 ಗಂಟೆಗೆ ತಲುಪಿದಾಗ, ರಸ್ತೆ ವಿಭಾಜಕದ ಬದಿಯಲ್ಲಿ ತನ್ನ ಮನೆಗೆ ಹೋಗಲು ಬಲಕ್ಕೆ ತಿರುಗಲು ಸೂಚನೆಯನ್ನು ಕೊಟ್ಟಿದ್ದು,  ಆ ವೇಳೆಗೆ ಹಿಂದುಗಡೆಯಿಂದ ಬರುತಿದ್ದ ಅಂದರೆ ಶಿವತಿಕೆರೆ ಕಡೆಯಿಂದ KA-12-9819 ನೇ ಈಚರ್ ಟೆಂಪೋ ಚಾಲಕನು ತನ್ನ ಟೆಂಪೋವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು ಪಿರ್ಯಾದಿದಾರರ ದ್ವಿಚಕ್ರ ವಾಹನದಲ್ಲಿ ಹಿಂಬದಿ ಕುಳಿತ್ತಿದ್ದ ಜಯಂತಿ ರಾವ್‌ ರವರ ಕಾಲಿಗೆ ಡಿಕ್ಕಿ ಹೊಡೆದ  ಪರಿಣಾಮ  ಜಯಂತಿ ರಾವ್‌ ರವರು ರಸ್ತೆಗೆ ಎಸೆಯಲ್ಪಟ್ಟು ತಲೆಯ ಹಿಂಬದಿಗೆ ತೀವ್ರವಾಗಿ ಗಾಯಗೊಂಡಿದ್ದು ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ  ಬೇರೆ ಆಸ್ಪತ್ರೆಗೆ ಹೋಗಲು ತಿಳಿಸಿದಂತೆ ಮಣಿಪಾಲ  ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಕಾರ್ಕಳ  ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ 25/01/2022 ರಂದು ಪಿರ್ಯಾದಿದಾರರಾದ ನಿಧಿ (42), ಗಂಡ: ನಂದಕುಮಾರ್‌ ಗೋಡೆ, ವಾಸ:ನಿಧಿ ನಂದಕುಮಾರ್‌   ಗೋಡೆ A 73 ಕ್ರಿಶ್ಚಿಯಲ್ ನ್ಯೂ ಲಿಂಕ್ಸ್‌ ರೋಡ್‌ ಧಾನುಕಾರವಾಡ್ಡಿ ಕಾದಿಲಿವೆಸ್ಟ್ ಮುಂಬೈ ಮಹಾರಾಷ್ಟ್ರ ರಾಜ್ಯ  ಇವರು ತನ್ನ ಪತಿ ನಂದಕುಮಾರ್‌ ಗೋಡೆ ಯವರೊಂದಿಗೆ MH-47-AY-8981 ನೇ ಕಾರಿನಲ್ಲಿ ಮಧ್ಯಾಹ್ನ 2:00 ಗಂಟೆಗೆ ಬ್ರಹ್ಮಾವರದಿಂದ ಮುಂಬಯಿಗೆ  ಹೋಗುತ್ತಿರುವಾಗ ಮಧ್ಯಾಹ್ನ 2:45 ಗಂಟೆಗೆ ತ್ರಾಸಿ ಗ್ರಾಮದ ತ್ರಾಸಿ ಬೀಚ್‌ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಂದಕುಮಾರ್‌ ಗೋಡೆ ರವರು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಕಾರು ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿ ಬಿದ್ದಿದ್ದು ಪರಿಣಾಮ ಕಾರಿನ ಚಾಲಕನ ಬಲಬದಿಯ ಬಾಡಿ ಮತ್ತು ಎಡಬದಿಯ ಬಾಡಿ ಜಖಂಗೊಂಡಿರುತ್ತದೆ.  ಪಿರ್ಯಾದಿದಾರರಿಗೆ ಹಾಗೂ ನಂದಕುಮಾರ್‌ ಗೋಡೆ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ.  ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2022 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಸ್ವಸ್ತಿಕ್‌ ಆಚಾರ್ಯ (23), ತಂದೆ: ಸುರೇಶ್‌ ಆಚಾರ್ಯ, ವಾಸ: ಮನೆ ನಂಬ್ರ: 10, ಹೀರಾಬಾಗ್‌, ಬನ್ನಂಜೆ, ಮೂಡನಿಡಂಬೂರು ಗ್ರಾಮ, ಉಡುಪಿ ತಾಲೂಕು ಇವರ ತಂದೆ ಸುರೇಶ್‌ ಆಚಾರ್ಯ (52) ರವರು ಮನೆಯಲ್ಲಿಯೇ ಚಿನ್ನದ ಕೆಲಸ ಮಾಡಿಕೊಂಡಿದ್ದು, ದಿನಾಂಕ 19/01/2022 ರಂದು 16:00 ಗಂಟೆಗೆ ಉಡುಪಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಬನ್ನಂಜೆ ಹೀರಾಭಾಗ ಎಂಬಲ್ಲಿರುವ ಮನೆಯಿಂದ ಹೋಗಿದ್ದು ವಾಪಾಸು ಮನೆಗೆ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುಧಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2022 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಪ್ರವೀಣ ಆಚಾರ್ಯ (45), ತಂದೆ: ದಿ.ಗೋವಿಂದ ಆಚಾರ್ಯ, ವಾಸ:  ಜ್ಯೋತಿ ನಿವಾಸ, ಫಲಿಮಾರು ಗ್ರಾಮ, ಕಾಪು ತಾಲೂಕು ಇವರ ಹೆಂಡತಿ ಶ್ರೀಮತಿ ಜಯಶ್ರೀ ರವರು ಹಲವು ವರ್ಷಗಳಿಂದ ಉಬ್ಬಸ ಖಾಯಿಲೆ ಹೊಂದಿ ಚಳಿಗಾಲದಲ್ಲಿ ಉಬ್ಬಸ ಖಾಯಿಲೆಯು ಉಲ್ಬಣಗೊಳ್ಳುತ್ತಿದ್ದು, ಈ ಬಗ್ಗೆ ಆರ್ಯುವೇದ, ನಂದಿಕೂರು ಖಾಸಗಿ ಆಸ್ಫತ್ರೆಯಿಂದ ಮತ್ತು ಮುಲ್ಕಿ ಕಾರ್ನಾಡ್ ಸರಕಾರಿ  ಆಸ್ಫತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದು, ಉಬ್ಬಸ ಖಾಯಿಲೆ ಯಿಂದ ಬಳಲುತ್ತಿದ್ದ ಜಯಶ್ರೀ ರವರಿಗೆ ದಿನಾಂಕ 25/01/2022 ರಂದು ಪಿರ್ಯಾದಿದಾರರು ಅಸ್ತಲಿನ್ ಇನ್ ಹಿಲರ್ ನ್ನು ಕೊಟ್ಟು, ತನ್ನ ಮಗನ ಉಪನಯನ ಆಮಂತ್ರಣ ಪತ್ರ ನೀಡಲು ಬಂಟ್ವಾಳಕ್ಕೆ ಹೋಗಿದ್ದ ಸಂದರ್ಭದಲ್ಲಿ ಜಯಶ್ರೀರವ್ರು ತೀರಾ ಅಸ್ವಸ್ಥಗೊಂಡು ಮನೆಯಲ್ಲಿ ಬಿದ್ದಿರುವುದನ್ನು ಕಂಡ ಪಿರ್ಯಾದಿದಾರರ ಅತ್ತಿಗೆ ಪಿರ್ಯಾದಿದಾರರಿಗೆ ಕರೆ ಮಾಡಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಹೆಂಡತಿಯನ್ನು ಅತ್ತಿಗೆಯವರಾದ ಶುಭ ಮತ್ತು ಜ್ಯೋತಿಯವರ ಮುಖಾಂತರ ಆಟೋ ರಿಕ್ಷಾದಲ್ಲಿ ಚಿಕಿತ್ಸೆಗೆ ಕಳುಹಿಸಿಕೊಟ್ಟಿರುತ್ತಾರೆ. ಶುಭ ಮತ್ತು ಜ್ಯೋತಿಯವರು ಜಯಶ್ರೀ ಯವರನ್ನು ಪಡುಬಿದ್ರಿ ಸಿದ್ದಿವಿನಾಯಕ ಆಸ್ಫತ್ರೆಗೆ ಕರೆದುಕೊಂಡು ಹೋದಾಗ  ಅಲ್ಲಿ ವೈದ್ಯರು ಇಲ್ಲದ ಕಾರಣ ಕಾರ್ನಾಡ್ ಸರಕಾರಿ ಆಸ್ಫತ್ರೆಗೆ ಜಯಶ್ರೀ ರವರನ್ನುಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಜಯಶ್ರೀಯವರನ್ನು ಪರೀಕ್ಷಿಸಿದಾಗ ಮಧ್ಯಾಹ್ನ 2:00 ಗಂಟೆಗೆ ಜಯಶ್ರೀ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 02/2022, ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ಶೀಲಾ (40), ಗಂಡ:ರಘುರಾಮ ಶೆಟ್ಟಿ, ವಾಸ:ಗುಡ್ಡಿಬೆಟ್ಟು ಮನೆ ಸಳ್ವಾಡಿ ಕಾಳಾವರ ಗ್ರಾಮ ಕುಂದಾಪುರ ತಾಲೂಕು ಇವರ ಗಂಡ ರಘುರಾಮ ಶೆಟ್ಟಿ (53) ರವರು ಈ ಹಿಂದೆ ಬಾಗಲಕೋಟೆಯಲ್ಲಿ ಹೋಟೇಲ್‌ ಉದ್ಯೋಗ ಮಾಡಿಕೊಂಡಿದ್ದವರು ಇತ್ತೀಚೆಗೆ ಊರಿಗೆ ಬಂದು ನೆಲೆಸಿದ್ದು ಅವರು ದಿನಾಂಕ 24/01/2022 ರಂದು ರಾತ್ರಿ 9:00 ಗಂಟೆ ಸಮಯಕ್ಕೆ ಕಾಳಾವರ ಸಳ್ವಾಡಿಯ ಅಭಿಮಾನ್‌ ಬಾರ್‌ ನ ಎದುರು ನಡೆದ ಯಕ್ಷಗಾನಕ್ಕೆಂದು ಮನೆಯಿಂದ ಹೋದವರು ಬೆಳಗ್ಗಿನ ತನಕ ಮನೆಗೆ ಬಾರದೇ ಇದ್ದು ದಿನಾಂಕ 25/01/2022 ರಂದು ಬೆಳಿಗ್ಗೆ 08:45 ಗಂಟೆಗೆ ಮೊಬೈಲ್‌ ಅಂಗಡಿ ಕೆಲಸಕ್ಕೆಂದು ಕೋಟೇಶ್ವರಕ್ಕೆಂದು ಹೋಗುತ್ತಿದ್ದ ಸುಶಾನ್‌ ಎಂಬುವವರು ಸಳ್ವಾಡಿ ಕರಿಕಲ್ಲುಕಟ್ಟೆ ನಿರಂಜನ ಹೆಗ್ಡೆ ವಕೀಲರ ಮನೆಯ ಹಿಂಬದಿಯ ಕಾಲುದಾರಿಯ ಪಕ್ಕದಲ್ಲಿರುವ ಸುರೇಶ್‌ ಶೆಟ್ಟಿ ಎಂಬುವವರ ಆವರಣವಿಲ್ಲದ ಬಾವಿಯಲ್ಲಿ ತಲೆ ಮೇಲಕ್ಕೆ ಕಾಲು ಕೆಳಕಾಗಿ ತೇಲುತ್ತಿರುವ ಸ್ಥಿತಿಯಲ್ಲಿ ರಘುರಾಮ ಶೆಟ್ಟಿರವರ ದೇಹ ಕಂಡು ಬಂದ ವಿಚಾರವನ್ನು ಹತ್ತಿರದವರಿಗೆ ತಿಳಿಸಿದ ವಿಚಾರ ತಿಳಿದ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಿದಾಗ, ರಘುರಾಮ ಶೆಟ್ಟಿ ರವರು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿರುವುದಾಗಿದೆ. ಮೃತ ರಘುರಾಮ ಶೆಟ್ಟಿ ರವರು ಯಕ್ಷಗಾನ ಕಾರ್ಯಕ್ರಮ ಮುಗಿಸಿಕೊಂಡು ವಾಪಾಸು ದಿನಾಂಕ 24/01/2022 ರಂದು ರಾತ್ರಿ 09:30 ಗಂಟೆಯಿಂದ ದಿನಾಂಕ 25/01/2022 ರಂದು ಬೆಳಿಗ್ಗೆ 08:45 ಗಂಟೆಯ ಮಧ್ಯಾವಧಿಯಲ್ಲಿ ಮನೆಗೆ ಬರುವ ಸಲುವಾಗಿ ಕಾಲುದಾರಿಯಲ್ಲಿ ನಡೆದುಕೊಂಡು ಬರುವಾಗ ಆಕಸ್ಮಿಕವಾಗಿ ಸಳ್ವಾಡಿ ಕರಿಕಲ್ಲುಕಟ್ಟೆ ನಿರಂಜನ ಹೆಗ್ಡೆ ವಕೀಲರ ಮನೆಯ ಹಿಂಬದಿಯ ಕಾಲುದಾರಿಯ ಪಕ್ಕದಲ್ಲಿರುವ ಸುರೇಶ್‌ ಶೆಟ್ಟಿ ಎಂಬುವವರ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 02/2022 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಇಲಿಯಾಸ್ (37), ತಂದೆ: ಪಿ ಮೊಹಮ್ಮದ್ ಕುಂಙ್ಞಿ, ವಾಸ: ರಿಯಾಜ್ ಮಂಜಿಲ್, ಪುತ್ತಿಗೆ ಪದವು, ಸಂಪಿಗೆ ಗ್ರಾಮ, ಮೂಡಬಿದ್ರೆ ತಾಲೂಕು. ದ.ಕ ಜಿಲ್ಲೆ ಇವರು ಲ್ಯಾಂಡ್ ಲಿಂಕ್ಸ್ ಕೆಲಸ ಮಾಡಿಕೊಂಡಿದ್ದು ಮಂಗಳೂರು ಬೈಕಂಪಾಡಿಯ ಹಬೀಬ್ ಎಂಬಾತನೊಂದಿಗೆ  ವ್ಯವಹಾರದ ಬಗ್ಗೆ ಹಣ ನೀಡಲು ಇದ್ದು ಈ ಹಣವನ್ನು ಪಿರ್ಯಾದುದಾರರ ಪರಿಚಯದ ಸಂದೀಪ್  ಭಟ್ ಎಂಬುವವರು ತೀರಿಸುವುದಾಗಿ  ಅಗ್ರಿಮೆಂಟ್ ಮಾಡಿಕೊಂಡಿರುತ್ತಾರೆ. ಸಂದೀಪ್ ಭಟ್ ಪ್ರಸ್ತುತ ಡೆಲ್ಲಿಗೆ  ಹೋಗಿದ್ದು ಅವರು ಫೋನ್ ರಿಸೀವ್ ಮಾಡಲಿಲ್ಲ  ಎಂದು ಕೋಪಗೊಂಡು ಅಪಾದಿತ ಹಬೀಬ್‌ನು ಆತನ ಅಣ್ಣ ಸಿದ್ದೀಕ್ ಎಂಬಾತನೊಂದಿಗೆ ಮೋಟಾರ್ ಸೈಕಲ್‌ನಲ್ಲಿ  ದಿನಾಂಕ 24/01/2022 ರಂದು ಮಧ್ಯಾಹ್ನ 12:30 ಗಂಟೆಗೆ ಪಿರ್ಯಾದಿದಾರರು ಕೆಲಸ ಮಾಡುತ್ತಿದ್ದ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಮಂಗಲಪಾದೆ ಎಂಬಲ್ಲಿರುವ ಸರ್ವೆ ನಂಬ್ರ 280/1ಎ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ತಕರಾರು ತೆಗೆದು ಪಿರ್ಯಾದಿದಾರರಿಗೆ ಪಿಕಾಸಿಯ ಮರದ ಹಿಡಿಯಿಂದ ಹೊಡೆದಾಗ ಪಿರ್ಯಾದಿದಾರರು ನೆಲಕ್ಕೆ ಬಿದ್ದಾಗ ಹಣಕೊಡದಿದ್ದರೆ ಕೊಲ್ಲುವುದಾಗಿ  ಜೀವಬೆದರಿಕೆ ಹಾಕಿದ್ದಲ್ಲದೇ ಇಬ್ಬರೂ ಕೈಯಿಂದ ಹೊಡೆದು ತುಳಿದಿರುತ್ತಾರೆ.  ಅಪಾದಿತರು ಹಲ್ಲೆ ನಡೆಸಿದ ಪರಿಣಾಮ ಪಿರ್ಯಾದಿದಾರರ ಬಲಕೈ ಮೊಣಗಂಟಿಗೆ  ಒಳಜಖಂ ಆಗಿದ್ದು ಕಾರ್ಕಳ ಸ್ಪಂದನ ಆಸ್ಪತ್ರೆಗೆ ಬಂದು ಹೊರರೋಗಿಯಾಗಿ ಚಿಕಿತ್ಸೆ  ಪಡೆದಿದ್ದು, ನೋವು ಜಾಸ್ತಿಯಾದ ಕಾರಣ  ದಿನಾಂಕ 25/01/2022 ರಂದು  ಒಳರೋಗಿಯಾಗಿ  ಚಿಕಿತ್ಸೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2022  ಕಲಂ: 447, 324, 506(2) ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 26-01-2022 07:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080