ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ಫಿರ್ಯಾದಿದಾರರಾಧ ಅಶೋಕ ಜಿ ಪೂಜಾರಿ, (38) ತಂದೆ: ಜಗನ್ನಾಥ ಪೂಜಾರಿ, ವಾಸ: ಮಾತೃನಿಲಯ, ಭೂತಬೆಟ್ಟು ಬಳಿ, ನಲ್ಲೂರು ಗ್ರಾಮ, ಕಾರ್ಕಳ ಇವರು ದಿನಾಂಕ 26/01/2022 ರಂದು  ಬೆಳಿಗ್ಗೆ 09:30 ಗಂಟೆಗೆ ತನ್ನ ಅಟೋರಿಕ್ಷಾವನ್ನು ಚಲಾಯಿಸಿಕೊಂಡು ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ ರಾಷ್ಟ್ರೀಯ ಹೆದ್ದಾರಿ  169 ರಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಅಂದರೆ ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ ಬಜಾಜ್ ಅಟೋ ರಿಕ್ಷಾ KA-20 B-3938 ನ್ನು ಅದರ ಚಾಲಕನು ರಸ್ತೆಯ ಎಡಬದಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ  ಮಿಯಾರು ಚರ್ಚ್ ನಿಂದ ಸ್ವಲ್ಪ ಮುಂದಕ್ಕೆ ನಾಗಬನದ ಬಳಿ ತಲುಪುವಾಗ ಎದುರಿನಿಂದ  ಅಂದರೆ ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ KA-19 MF-1894  ಹುಂಡೈ ಗ್ರಾಂಡ್ ಐ-10 ಕಾರನ್ನು ಅದರ ಚಾಲಕ ತೀರ್ಥೇಶ್ ಎಂಬಾತನು ಅತೀವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸುತ್ತಾ ತನ್ನ ಎಡದಿಂದ ರಸ್ತೆಯ ಬಲಬದಿಗೆ ಚಲಾಯಿಸಿ ಅಟೋ ರಿಕ್ಷಾ KA-20 B-3938 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಮಗುಚಿಬಿದ್ದು ಎರಡೂ ವಾಹನಗಳು ಜಖಂಗೊಂಡು ಅಟೋ ರಿಕ್ಷಾ ಚಾಲಕ  ಚಂದ್ರಶೇಖರ ಮಡಿವಾಳರವರು  (54) ರಸ್ತೆಗೆ ಎಸೆಯಲ್ಪಟ್ಟು ತಲೆಗೆ, ಕೈಕಾಲುಗಳಿಗೆ ಗಂಭೀರ ಗಾಯಗಳಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲಿ ಮೃತಪಟ್ಟಿರುತ್ತಾರೆ. ರಿಕ್ಷಾದಲ್ಲಿದ್ದ ಪ್ರಯಾಣಿಕರಾದ ದಿವಾಕರ (52) ಎಂಬವರ ಕಾಲುಗಳಿಗೆ ಮೂಳೆ ಮುರಿತದ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಕಾರ್ಕಳ ಸರಕಾರಿ ಆಸ್ಪತ್ರೆಯಿಂದ  ಬೇರೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 18/2022  ಕಲಂ 279,338,304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹಿರಿಯಡ್ಕ: ಪಿರ್ಯಾದಿದಾರರಾದ ಸಂಧ್ಯಾ (31) ಗಂಡ: ಸತೀಶ ವಾಸ: ಶಿವ ಸಾನಿಧ್ಯ , ಪುತ್ತಿಗೆ ಮಠದ ಬಳಿ, ಪುತ್ತಿಗೆ ಬೊಮ್ಮರಬೆಟ್ಟು , ಉಡುಪಿ ಇವರು ದಿನಾಂಕ 26/01/2022 ರಂದು ತನ್ನ ಸ್ಕೂಟಿ ನಂ KA-20-W-5351 ನೇ ಸ್ಕೂಟಿಯನ್ನು ಹಿರಯಡ್ಕ ಕಡೆಯಿಂದ ಓಂತಿಬೆಟ್ಟು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗಿ ಸಮಯ ಸುಮಾರು 10: 15 ಗಂಟೆಗೆ ಹಿರಿಯಡ್ಕದ ನಾರಾಯಣ ಗುರು ಸಭಾಭವನದ ಎದುರು ರಾಷ್ಟ್ರೀಯ ಹೆದ್ದಾರಿ 169 ಎ ಡಾಮಾರು ರಸ್ತೆಯಲ್ಲಿ ಹೋಗುತ್ತಿರುವಾಗ ತನ್ನ ಹಿಂಬದಿಯಿಂದ ಅಂದರೆ ಹಿರಿಯಡ್ಕ ಕಡೆಯಿಂದ ಓಂತಿಬೆಟ್ಟು ಕಡೆಗೆ ಕಾರು ನಂಬ್ರ ಕೆಎ-21 ಎನ್-5396 ರನ್ನು ಅದರ ಚಾಲಕ ಸಾಗರ್‌ರವರು ನಿರ್ಲಕ್ಷ್ಯತನದಿಂದ ಮತ್ತು ಅಜಾಗರೂಕತನದಿಂದ ಚಲಾಯಿಸಿ ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪ ರಿಣಾಮ ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಬಲಗಾಲಿನ ಮಣಿಗಂಟಿನ ಬಳಿ  ಮೊಣಗಂಟಿನ ಬಳಿ, ಬಲಕೈ ಮೊಣಗಂಟಿನ ಬಳಿ ,ಬಲಗೈಯ ಬೆರಳಿಗೆ ರಕ್ತಗಾಯವಾಗಿದ್ದಲ್ಲದೆ, ಬಲಹಣೆಯ ಬಳಿ ಗುದ್ದಿದ ಒಳಜಖಂ ಉಂಟಾಗಿರುತ್ತದೆ. ಕಾರು ಚಾಲಕ ಘಟನೆಯ ಬಳಿಕ ಕಾರನ್ನು ನಿಲ್ಲಿಸದೆ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 18/2022  ಕಲಂ 279,338,304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದಿನಾಂಕ 24/01/2022 ರಂದು ಸಂಜೆ 04:30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಮಹೇಶ ಸಾಲಿಯಾನ್‌ (33) ತಂದೆ: ಬಸವ ಮೊಗವೀರ್‌ ವಾಸ: ಶ್ರೀ ಬಸವೇಶ್ವರ ನಿಲಯ ಕೊಮೆ, ತೆಕ್ಕಟ್ಟೆ, ಕುಂದಾಪುರ ಇವರು ತನ್ನ KA-20 C-9026 ನೇ ರಿಕ್ಷಾದಲ್ಲಿ ಶೀನ ಮೊಗವೀರ್‌ ಹಾಗೂ ಅವರ ಮಗ ಗಣೇಶ ಎಂಬುವರನ್ನು ಕೆ ಎಂ ಸಿ ಆಸ್ಪತ್ರೆ ಮಣಿಪಾಲಯಿಂದ ತೆಕ್ಕಟ್ಟೆಗೆ ಪೆರಂಪಳ್ಳಿ ರಸ್ತೆಯಾಗಿ ಹೋಗುವಾಗ ಶಾಂಭವಿ ಸವರಿನ್‌ ಮುಂಬಾಗ ಇರುವ ಡಿವೈಡರ್‌ ನಿಂದ ಒಮ್ಮೇಲೆ KL-08 J-309 ನೇ ZEN ಕಾರನ್ನು ಅದರ ಚಾಲಕನು ಪೆರಂಪಳ್ಳಿ ರಸ್ತೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಮಹೇಶ ಸಾಲಿಯಾನ್‌ ರವರು ಚಲಾಯಿಸಿಕೊಂಡು ಹೋಗುತ್ತಿದ್ದ  KA-20 C-9026 ನೇ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗಿ ರಿಕ್ಷಾ ಸಮೇತ ರಸ್ತೆಗೆ ಬಿದ್ದಿರುತ್ತಾರೆ, ಪರಿಣಾಮ ಶೀನ ಮೊಗವೀರ್‌ ರವರಿಗೆ ಎಡಬುಜಕ್ಕೆ ಮೂಳೆ ಮುರಿತ ಹಾಗೂ ಅವರ ಮಗ ಗಣೇಶ ರವರಿಗೆ ಸೊಂಟಕ್ಕೆ ಒಳನೋವು ಉಂಟಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 10/2022  ಕಲಂ 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಆರೋಪಿ ವಿಕಾಸ್ ಕುಲಕರ್ಣಿ ಎಂಬಾತನು ದಿನಾಂಕ 25/01/2022 ರಂದು 23:15 ಗಂಟೆ ಸಮಯಕ್ಕೆ KA-20 ET-1246 ನೇ ಮೋಟಾರ್ ಸೈಕಲ್ ನಲ್ಲಿ ಬಕೇಶ್ ರವರನ್ನು ಸಹ ಸವಾರನ್ನನಾಗಿ ಕುಳಿರಿಸಿಕೊಂಡು ಈಶ್ವರ ನಗರ ಮಣಿಪಾಲ ಮಸೀದಿ ಬಳಿ NH 169 (A) ರ ಪರ್ಕಳ – ಮಣಿಪಾಲ ಏಕಮುಖ ರಸ್ತೆಯಲ್ಲಿ  ಪರ್ಕಳ ಕಡೆಯಿಂದ ಮಣಿಪಾಲ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿದ ಕಾರಣ ವಿಕಾಸ್ ಮೋಟಾರ್ ಸೈಕಲ್ ನಿಯಂತ್ರಣ ಕಳೆದುಕೊಂಡು ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಗೆ  ಡಿಕ್ಕಿ  ಹೊಡೆದ ಪರಿಣಾಮ ಇಬ್ಬರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಬಕೇಶ್ ನ ಹೊಟ್ಟೆಗೆ, ಮರ್ಮಾಂಗ, ಮುಖ, ತಲೆಗೆ ತೀವ್ರ ಸ್ವರೂಪದ ಗಾಯ,ಬಲಕೈ ಮೂಳೆಮುರಿತ, ಸೊಂಟಕ್ಕೆ ತರಚಿದ ಗಾಯ ಹಾಗೂ ಆರೋಪಿ ವಿಕಾಸ್ ನ ಬಲ ಕೈ, ಬಲಕಾಲು ಮೂಳೆ ಮುರಿತ, ತಲೆಗೆ ರಕ್ತ ಗಾಯ, ಮುಖ ಮೈ, ಕೈಗೆ ತರಚಿದ ಗಾಯ ಉಂಟಾಗಿರುತ್ತದೆ. ಮೋಟಾರ್ ಸೈಕಲ್ ಜಖಂ ಗೊಂಡಿರುತ್ತದೆ. ಗಾಯಾಳುಗಳು ಮಣಿಪಾಲ KMC ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ, ಎಂಬುದಾಗಿ ಅನಂತ ಹರಪ್ಪನಹಳ್ಳಿ (23) ತಂದೆ: ಅರುಣ್ ಹರಪ್ಪನಹಳ್ಳಿ ವಾಸ: ಈಶ್ವರ ನಗರ “ವಿನಾಯಕ” ಸರಳಬೆಟ್ಟು 2 ನೇ ಅಡ್ಡ ರಸ್ತೆ, ಉಡುಪಿ ಖಾಯಂ ವಿಳಾಸ: ಕೇಶವಪುರ ಹುಬ್ಬಳ್ಳಿ ಇವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 11/2022  ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಮಾಸೆಬೈಲು: ಪಿರ್ಯಾದಿದಾರರಾದ ಭಾಸ್ಕರ ಶೆಟ್ಟಿ (57) ತಂದೆ:ದಿ: ನಾರಾಯಣ ಶೆಟ್ಟಿ ಮೇಲ್ಬೆಟ್ಟು ಶೇಡಿಮನೆ ಗ್ರಾಮ ಹೆಬ್ರಿ ತಾಲೂಕು ಇವರು ದಿನಾಂಕ 25/01/2022 ರಂದು ತನ್ನ ಮನೆಯಾದ ಜೋರಾಡಿ ಎಂಬಲ್ಲಿಂದ ತನ್ನ ಹೆಂಡತಿ ಮನೆಯಾದ ಶೇಡಿಮನೆ ಮೇಲ್ಬೆಟ್ಟು ಎಂಬಲ್ಲಿಗೆ ಅವರ ಪರಿಚಯದ ಚಂದ್ರ ಎಂಬವರ KA-20 EF-2457  ನೇ ಮೋಟಾರು ಸೈಕಲಿನಲ್ಲಿ ಹಿಂಬದಿ ಸವಾರನಾಗಿ ಕುಳಿತುಕೊಂಡು ಬರುತ್ತಿರುವಾಗ ಶೇಡಿಮನೆ ಗ್ರಾಮದ ವಾರಂಪಾಲು ಸೇತುವೆಯ ಬಳಿ ತಲುಪುವಾಗ 19:00  ಗಂಟೆ ಸಮಯಕ್ಕೆ ಎದುರಿನಿಂದ ಅಂದರೆ ಮಾಂಡಿ ಮೂರುಕೈ ಕಡೆಯಿಂದ KA-20 D-4955  ನೇ ದುರ್ಗಾಂಬಾ ಬಸ್ ಚಾಲಕನು  ಬಸ್ಸನ್ನು ಅತಿ ವೇಗ  ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದಿದ್ದು ಚಂದ್ರ ಎಂಬವರು ಮೋಟಾರು ಸೈಕಲನ್ನು ರಸ್ತೆಯ ತೀರಾ ಎಡ ಬದಿಗೆ ತಂದು ನಿಲ್ಲಿಸಿಕೊಂಡಿರುವಾಗ ಬಸ್ಸಿನ ಹಿಂಬದಿ ಮೋಟಾರು ಸೈಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಭಾಸ್ಕರ ಶೆಟ್ಟಿ ರವರು ಮೋಟಾರು ಸೈಕಲ್ಲಿನಿಂದ ಕೆಳಗೆ ಬಿದ್ದು ಇವರ ಬಲಕಾಲಿನ ಪಾದದ ರಕ್ತ ಗಾಯವುಂಟಾಗಿ ಮೂಳೆ ಮುರಿತ ಉಂಟಾಗಿದ್ದು ಚಿಕಿತ್ಸೆ ಬಗ್ಗೆ  ಕುಂದಾಪುರ ಚಿನ್ಮಯೀ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 02/2022  ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ರೂಪಶ್ರೀ ಭಟ್‌ (48) ಗಂಡ: ಕೆ.ವಿ ಭಟ್‌ ವಾಸ: ಮನೆ ನಂಬ್ರ: 3-3-35ಬಿ, ಸಹರಾ ಹೋಮ್ಸ್‌, ಬಂಕೇರಕಟ್ಟ, ಅಂಬಲ್ಪಾಡಿ ಗ್ರಾಮ, ಉಡುಪಿ ಇವರು ಸುಮಾರು 8 ತಿಂಗಳುಗಳಿಂದ ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರದ ಸರ್ವೇನಂಬ್ರ: 158/8P4 ರಲ್ಲಿ ಹೊಸದಾಗಿ ಮನೆ ನಿರ್ಮಾಣ ಮಾಡಲು ಪ್ರಾರಂಭಿಸಿದ್ದು, ಸದ್ರಿ ಸ್ಥಳದಲ್ಲಿ ಬಾವಿ ನಿರ್ಮಾಣ ಮಾಡಿದ್ದು, ಬಾವಿಗೆ ಪಂಪ್‌ಸೆಟ್‌ ನ್ನು ಅಳವಡಿಸಲಾಗಿದ್ದು, ದಿನಾಂಕ 25/01/2022 ರಂದು 18:30 ಗಂಟೆಯಿಂದ ದಿನಾಂಕ 26/01/2022 ರಂದು ಬೆಳಿಗ್ಗೆ 09:30 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಬಾವಿಗೆ ಅಳವಡಿಸಿದ ರೂಪಾಯಿ 14,830/- ಮೌಲ್ಯದ ಪಂಪ್‌ಸೆಟ್‌ ಹಾಗೂ ರೂಪಾಯಿ 40,000/- ಮೌಲ್ಯದ ಕೇಬಲ್‌ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ. 54,830/- ಆಗಬಹುದುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 14/2022, ಕಲಂ: 379  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಶಿರ್ವಾ: ಪಿರ್ಯಾದಿದಾರರಾದ ಸುಮತಿ ದೇವಾಡಿಗ (42) ಗಂಡ: ರಾಜೇಶ್ ದೇವಾಡಿಗ,ವಾಸ:ಬೆಳ್ಳಿ ಬೆಟ್ಟು,ಶ್ರೀ ದುರ್ಗಾ ನಿಲಯ ಎಲ್ಲೂರು ಗ್ರಾಮ ಕಾಪು ತಾಲೂಕು,  ಉಡುಪಿ ಇವರ ಗಂಡನಾದ ರಾಜೇಶ್ ದೇವಾಡಿಗ (53) ಎಂಬವರು ಮುದರಂಗಡಿಯಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಸದ್ರಿಯವರು ಮನೆ ಕಟ್ಟುವರೇ ಸಾಲ ಮಾಡಿಕೊಂಡಿದ್ದು, ಅಲ್ಲದೇ ಇನ್ನಿತರ ಕೈ ಸಾಲ ಮಾಡಿಕೊಂಡಿರುವುದಾಗಿದೆ ಸದ್ರಿಯವರ ತಾಯಿಗೆ ಸೇರಿದ ಜಾಗವು ಕುರ್ಕಾಲು ಗ್ರಾಮದ ಶಂಕರಪುರ ಎಂಬಲ್ಲಿ ಇದ್ದು, ಸದ್ರಿ ಜಾಗವು ಪಾಲು ಆಗದೇ ಇದ್ದು, ಇದರಿಂದ ಮೃತರು ತುಂಬಾ ನೊಂದಿದ್ದರು ಅಲ್ಲದೇ ತಾನು ಮಾಡಿದ ಸಾಲವನ್ನು ತೀರಿಸಲಾಗದೇ ಜೀವನದಲ್ಲಿ ನೊಂದುಕೊಂಡಿದ್ದು, ಇದೇ ವೇದನೆಯಿಂದ ಅಲ್ಲದೇ ಬೇರೆ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 25/01/2022 ರಂದು ರಾತ್ರಿ 11:30 ಗಂಟೆಯಿಂದ ದಿನಾಂಕ 26/01/2022 ಬೆಳಿಗ್ಗೆ 07:45 ಗಂಟೆಯ ನಡುವಿವ ಅವಧಿಯಲ್ಲಿ ಕುರ್ಕಾಲು ಗ್ರಾಮದ ಶಂಕರಪುರ ಎಂಬಲ್ಲಿರುವ ತನ್ನ ತಮ್ಮನ ಬಾಬ್ತು ಶರೋನ್ ಕ್ಯಾಟರ್ಸಸ್‌ನ ಶೆಡ್‌ನ ಸಿಮೆಂಟ್ ಶೀಟಿನ ಮಾಡಿನ ಕಬ್ಬಿಣದ ಜಂತಿಗೆ ನೈಲಾನ್ ಹಗ್ಗ ಬಿಗಿದು ಕುತ್ತಿಗೆಗೆ ನೇಣುಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ, ಸದ್ರಿಯವರ ಮರಣದಲ್ಲಿ ಸಂಶಯ ಇರುವುದಾಗಿದೆ, ಈ ಬಗ್ಗೆ ಶಿರ್ವಾ ಪೊಲಿಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 03/2022 ಕಲಂ: 174 (C) ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-01-2022 06:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080