ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 

 • ಶಿರ್ವ: ಶುಭಕರ ಶೆಟ್ಟಿ ಇವರು ದಿನಾಂಕ 24.12.2022 ರಂದು ಕೆಲಸದ ನಿಮಿತ್ತ  ಉಡುಪಿಯಿಂದ ಹೊರಟು  ಕಟಪಾಡಿ ಮಾರ್ಗವಾಗಿ  ಶಿರ್ವ ಕಡೆಗೆ  ಸಾರ್ವಜನಿಕ ರಸ್ತೆಯಲ್ಲಿ ಕಾರನ್ನು ಚಲಾಯಿಸಿಕೊಂಡು  ಬರುತ್ತಾ  ಸಮಯ ಸುಮಾರು ಸಂಜೆ 5:40  ಗಂಟೆಗೆ ಶಿರ್ವ  ಗ್ರಾಮದ ಪಾಲಮೆ ಕ್ರಾಸ್‌ ಬಳಿ  ತಲುಪುವಾಗ   ಹಿಂದಿನಿಂದ  ಅಂದರೆ  ಕಟಪಾಡಿ  ಕಡೆಯಿಂದ  ಶಿರ್ವ  ಕಡೆಗೆ  ಒಂದು  ಟೆಂಪೋವನ್ನು  ಅದರ  ಚಾಲಕನು  ಅತೀ ವೇಗ  ಮತ್ತು  ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರನ್ನು  ಓವರ್‌ಟೇಕ್‌  ಮಾಡಿ  ಮುಂದಕ್ಕೆ ಹೋಗಿ  ಶಿರ್ವ  ಕಡೆಯಿಂದ  ಕಟಪಾಡಿ  ಕಡೆಗೆ  ಚಲಾಯಿಸಿಕೊಂಡು  ಬರುತ್ತಿದ್ದ  ಕಾರಿಗೆ ಮುಖಾಮುಖಿ  ಡಿಕ್ಕಿ ಹೊಡೆದನು ಪರಿಣಾಮ  ಅಪಘಾತದ  ರಭಸಕ್ಕೆ  ಕಾರು ತಿರುಗಿ  ರಸ್ತೆಯ  ಎಡ ಬದಿಗೆ ನಿಂತಿತು.  ಪಿರ್ಯಾದಿದಾರರು ಆ  ಕೂಡಲೇ  ಕಾರನ್ನು ಬದಿಗೆ ನಿಲ್ಲಿಸಿ  ಸ್ಥಳಕ್ಕೆ  ಹೋಗಿದ್ದು ಆ  ಸಮಯದಲ್ಲಿ  ರಸ್ತೆಯಲ್ಲಿ  ಬಂದ  ಇತರ  ಜನರು ಕೂಡಾ ಸೇರಿದ್ದು ಅಪಘಾತದ  ರಭಸಕ್ಕೆ  ಕಾರಿನ ಎದುರು ಭಾಗ ಸಂಪೂರ್ಣ ಜಖಂಗೊಂಡಿದ್ದು, ಎಲ್ಲರೂ ಸೇರಿ ಕಾರಿನ ಬಾಗಿಲನ್ನು ಒಡೆದು ತೆಗೆದು ಒಳಗಡೆ  ಸಿಲುಕಿಕೊಂಡಿದ್ದ ಕಾರು ಚಾಲಕ ಮತ್ತು ಕಾರಿನ ಒಳಗಡೆ  ಎದುರು ಸೀಟಿನಲ್ಲಿ ಇದ್ದ ಹೆಂಗಸನ್ನು ಹೊರಗೆ ತೆಗೆದು ನೋಡಲಾಗಿ  ಅವರಿಬ್ಬರಿಗೂ  ದೇಹದ  ಎಲ್ಲಾ ಭಾಗಗಳಿಗೆ  ತೀವ್ರ ತರದ  ಗಾಯವಾಗಿ  ಅವರಿಬ್ಬರೂ  ಮಾತನಾಡುತ್ತಿರಲಿಲ್ಲ. ಅವರನ್ನು ಉಪಚರಿಸಿ  ಸ್ಥಳಕ್ಕೆ  ಆಂಬ್ಯುಲೆನ್ಸ್‌ ನ್ನು  ಕರೆಯಿಸಿ  ಚಿಕಿತ್ಸೆ  ಬಗ್ಗೆ ಉಡುಪಿ  ಜಿಲ್ಲಾ  ಸರಕಾರಿ  ಆಸ್ಪತ್ರೆಗೆ  ಕಳುಹಿಸಿಕೊಟ್ಟಿದ್ದು ನಂತರ ವಿಚಾರ ತಿಳಿಯಲಾಗಿ  ಕಾರು ಚಾಲಕನ  ಹೆಸರು  ಪವನ್‌ ಬಿ.ಎಸ್‌. ಎಂತಲೂ ಕಾರಿನ  ಎದುರುಗಡೆ ಕುಳಿತ್ತಿದ್ದ  ಹೆಂಗಸಿನ  ಹೆಸರು  ಸಪ್ನಾ ಶಶಿಧರ್‌ ಎಂದು  ತಿಳಿಯಿತು. ಉಡುಪಿ  ಜಿಲ್ಲಾ ಸರಕಾರಿ  ಆಸ್ಪತ್ರೆಯ  ವೈದ್ಯರು ಪವನ್‌ ಬಿ.ಎಸ್. ರವರನ್ನು ಪರೀಕ್ಷಿಸಿ ಸಂಜೆ 6:25  ಗಂಟೆಗೆ ಮೃತಪಟ್ಟಿರುವುದಾಗಿಯೂ,  ಸಪ್ನಾ ಶಶಿಧರ್‌ ರವರನ್ನು ಸಂಜೆ  6:38 ಗಂಟೆಗೆ ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ ವಿಚಾರ   ತಿಳಿಯಿತು. ಅಪಘಾತಕ್ಕೀಡಾದ ಕಾರಿನ ನಂಬ್ರ ನೋಡಲಾಗಿ  KA03MU7793 ನೇ ನೊಂದಣಿ ಸಂಖ್ಯೆಯ  ಮಾರುತಿ  ಸುಜುಕಿ ಕಂಪೆನಿ  ತಯಾರಿಕೆಯ  ಸ್ವಿಪ್ಟ್‌ ಮಾದರಿಯ  ಕೆಂಪು  ಬಣ್ಣದ ಕಾರು  ಆಗಿದ್ದು, ಸಂಪೂರ್ಣ ಜಖಂಗೊಂಡಿರುತ್ತದೆ.  ಅಪಘಾತವುಂಟು ಮಾಡಿದ  ಟೆಂಪೋದ  ನಂಬ್ರ ನೋಡಲಾಗಿ  KL18H8519 ನೇ ನೊಂದಣಿ  ಸಂಖ್ಯೆಯ  ಟೆಂಪೋ  ಆಗಿದ್ದು,ಎದುರುಗಡೆ ಜಖಂಗೊಂಡಿರುತ್ತದೆ.  ಟೆಂಪೋದ  ಚಾಲಕನು ಸ್ಥಳದಲ್ಲಿಯೇ ಇದ್ದು ಆತನ ಹೆಸರು  ಕೇಳಲಾಗಿ ವಿಷ್ಣುಮೂರ್ತಿ ಎಂದು  ತಿಳಿಸಿದನು.  ಈ ಬಗ್ಗೆ ಶಿರ್ವ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 92/2022 ಕಲಂ 279,   304(ಎ) ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿ  ಗುಂಡಪ್ಪ ಹೊಸಗೌಡ್ರ ಇವರು ದಿನಾಂಕ 23.12.2022 ರಂದು 09:30 ಗಂಟೆಗೆ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಚರ್ಚನ ಎದುರುಗಡೆ ಇರುವ ಹೋಟೆಲ್ ಗೆ ಹೋಗಲು ಅಂಬಾಗಿಲು-ಮಣಿಪಾಲ ರಸ್ತೆಯನ್ನು ದಾಟಲು ರಸ್ತೆಯ ಬದಿಯಲ್ಲಿ ನಿಂತಿರುವಾಗ ಅಂಬಾಗಿಲು ಕಡೆಯಿಂದ ಮಣಿಪಾಲ ಕಡೆಗೆ KA 19 EF 9154 ಮೊಟಾರು ಸೈಕಲನ ಅದರ ಸವಾರರು ಮೋಟಾರು ಸೈಕಲ್ ಅನ್ನುಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡ ಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತವಾಗಿದ್ದು ಅಲ್ಲದೆ  ಬೆನ್ನಿಗೆ ತರಚಿದ ಗಾಯ ಉಂಟಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಗಿರುತ್ತದೆ . ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 224/2022 ಕಲಂ: 279,338, ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕೋಟ: ಪಿರ್ಯಾದಿ ಸದಾನಂದ ಇವರು ಕೂಲಿ ಕೆಲಸ ಮಾಡಿಕೊಂಡಿದ್ದು, ಆರೋಪಿಯಾದ ಥೋಮಸ್ ರೋಡ್ರಿಗಸ್ ರವರು ಪಿರ್ಯಾದಿದಾರರು ಮಾತನಾಡಿದ್ದೆನ್ನಲಾದ ಮಾತನ್ನು ರೇಕಾರ್ಡ್ ಮಾಡಿಕೊಂಡು ಸದ್ರಿ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ಈ ಬಗ್ಗೆ ವಿಚಾರಿಸಿದಾಗ ಆರೋಪಿಯು ನಮ್ಮ ಮನೆಗೆ ಬನ್ನಿ ನಾವು ಸೇರಿ ಮಾತನಾಡುವ ಎಂದು ಕರೆದಿದ್ದು, ಈ ದಿನ ದಿನಾಂಕ: 24/12/2022 ರಂದು ಬೆಳಿಗ್ಗೆ 08:00 ಗಂಟೆಗೆ ಐರೋಡಿ ಗ್ರಾಮದ ಥೋಮಸ್ ರೋಡ್ರಿಗಸ್ ರವರ ಮನೆ ಬಳಿ ಪಿರ್ಯಾದಿದಾರರು ಮತ್ತು ರವೀಂದ್ರ ಮೆಂಡನ್, ರಾಘವೇಂದ್ರ ಆಚಾರಿ, ಚಂದ್ರ ಹಕ್ಲಾಡಿ ಹಾಗೂ ಇತರರು ಸೇರಿ ಹೋದಾಗ  ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು  ನಾನು ಏನು ಬೇಕಾದರೂ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ, ಕೇಳಲು ನೀನು ಯಾರು” ಎಂದು  ಹೇಳಿ ಪಿರ್ಯದಿದಾರರಿಗೂ ಮತ್ತು ಆರೋಪಿಗೂ ಮಾತಿಗೆ ಮಾತಾಗಿದ್ದು, ಆರೋಪಿಯು ಪಿರ್ಯಾದಿದಾರರ ಕುತ್ತಿಗೆಯನ್ನು ಹಿಡಿದುಕೊಂಡಿರುವುದಲ್ಲದೇ  ಕೈಯಿಂದ ಕೆನ್ನೆಗೆ ಹೊಡೆದಿರುತ್ತಾರೆ. ಪಿರ್ಯಾದಿದಾರರ ಜೊತೆಯಲ್ಲಿದ್ದವರು ತಪ್ಪಿಸಲು ಬಂದಾಗ ಅವರಿಗೂ ಸಹ ಬೈದು ಇನ್ನೂ ಮುಂದಕ್ಕೆ ನನ್ನ ಬಳಿ ವಿಚಾರಿಸಲು ಬಂದರೆ ನಿಮ್ಮ ಕೈಕಾಲು ಮುರಿದು ಕೊಲೆ ಮಾಡುವುದಾಗಿ” ಬೆದರಿಕೆ ಹಾಕಿರುವುದಲ್ಲದೇ ಆರೋಪಿಯ  ಮಗನೂ ಕೂಡ ಅವಾಚ್ಯವಾಗಿ ಬೈದು ನೀವು ಏನೂ ಬೇಕಾದರೂ ಮಾಡಿಕೊಳ್ಳಿ ನಾವು ನೋಡಿ ಕೊಳ್ಳುತ್ತೇವೆ ಎಂದು ಹೇಳಿದ್ದು, ಇದರಿಂದ ಪಿರ್ಯಾದಿದಾರರ ಮುಖಕ್ಕೆ ಗುದ್ದಿದ ಒಳನೋವು ಉಂಟಾಗಿರುತ್ತದೆ . ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 232/2022 ಕಲಂ: 323, 504, 506  R/W 34 IPC 3(1)(r) (s), 3(2)(v-a) SC ST ACT   ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಫಿರ್ಯಾದಿ ಥೋಮಸ್ ರೋಡ್ರಿಗಸ್ ಇವರು ಅವರ ಹೆಂಡತಿ ಹಾಗೂ ಅವರ ಮಗ  ದಿನಾಂಕ: 24/12/2022 ರಂದು ಸುಮಾರು 08:15 ಗಂಟೆಗೆ ಮನೆಯಲ್ಲಿ ಇರುವಾಗ 1) ರಾಘವೇಂದ್ರ ಆಚಾರ್ಯ ಅರಾಟೆ 2) ಮನೋಜ ಆಚಾರಿ ಕುಂಜಾಲು 3) ಸದಾ ಮೋವಾಡಿ 4) ನಾಗರಾಜ ಮೂವಾಡಿ 5) ರವಿ ಮೊಗವೀರ ಸೇನಾಪುರ 6) ಚಂದ್ರ ಹತ್ಲಾಡಿ ಅರಾಟೆ ಮತ್ತು ಇತರರು ಸೇರಿ ಅಕ್ರಮ ಕೂಟ ಕಟ್ಟಿಕೊಂಡು ಪಿರ್ಯಾದಿದಾರರ ಮನೆಗೆ ಮಾರಕಾಯುಧಗಳೊಂದಿಗೆ ಅಕ್ರಮ ಪ್ರವೇಶ ಮಾಡಿದ್ದೂ ಆಗ ಭಯದಿಂದ ಪಿರ್ಯಾದುದಾರರ ಹೆಂಡತಿ ಮನೆಯ ಬಾಗಿಲು ಹಾಕಿದಾಗ ಆರೋಪಿತರೆಲ್ಲರೂ  ಪಿರ್ಯಾದಿದಾರರನ್ನು ಉದ್ದೇಶಿಸಿ “ನೀನು ಮನೆಯಿಂದ ಹೊರಗೆ ಬಾರದೇ ನಾಲ್ಕು ಗೋಡೆಯೊಳಗೆ ಎಷ್ಟು ಹೊತ್ತು ಕುಳಿತುಕೊಳ್ಳುತ್ತೀ, ನಾವು ನಿಮ್ಮನ್ನು ನೋಡಿಕೊಳ್ಳುತೇವೆ ಹೊರಗೆ ಬಾ ಹೇಡಿ” ಎಂಬುವುದಾಗಿ ಜೀವ ಬೆದರಿಕೆ ಹಾಕಿದ್ದಲ್ಲದೇ ಇನ್ನೂ ಹೆಚ್ಚಿನ ಜನರನ್ನು ಕರೆದುಕೊಂಡು ಬಂದು ಗಲಾಟೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಪಿರ್ಯಾದುದಾರರು ಹೊಸಾಡು ಸೇನಾಪುರ ಪ್ರದೇಶದಲ್ಲಿ ಸೌಪರ್ಣಿಕಾ ನದಿಯಲ್ಲಿ ನಡೆಯುವ ಅಕ್ರಮ ಮರಳುಗಾರಿಕೆ ವಿರುದ್ಧ ಹೋರಾಟ ನಡೆಸುತ್ತಿರುವುದರಿಂದ ಬೆದರಿಕೆ ಹಾಕುವ ಉದ್ದೇಶವಾಗಿದೆ ಎಂಬಿತ್ಯಾದಿ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 231/2022 ಕಲಂ: 143, 147, 148, 447, 506 R/W 149  ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-12-2022 10:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080