ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರಾದ ನರೇಂದ್ರ ಕುಮಾರ್ (49), ತಂದೆ: ಜಾನ್ ಹಾಡಿ ಮನೆ, ವಾಸ: ಮನೆ ನಂ 100 ಚೇತನ ವಿಹಾರ್  ಬೆಂಗೇರಿ ಹುಬ್ಬಳ್ಳಿ ಇವರು ದಿನಾಂಕ 24/12/2021 ರಂದು ತನ್ನ ಕುಟುಂಬ ಸದಸ್ಯರೊಂದಿಗೆ ತನ್ನ ಕಾರು ನಂಬ್ರ KA-22-MB-7190 ನೇದರಲ್ಲಿ ಹುಬ್ಬಳ್ಳಿ ಯಿಂದ ಹೊರಟು ಬೈಂದೂರು ಮಾರ್ಗವಾಗಿ  ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬರುವಾಗ NH 766C ಕೊಲ್ಲೂರು- ಬೈಂದೂರು ರಸ್ತೆಯ ಆನೆಜರಿ  ತಿರುವಿನಲ್ಲಿ ಬರುವಾಗ ಮದ್ಯಾಹ್ನ ಮಧ್ಯಾಹ್ನ 1:30 ಗಂಟೆಗೆ ಎದುರುಗಡೆಯಿಂದ ಕೊಲ್ಲೂರಿನಿಂದ ಹಾಲ್ಕಲ್ ಕಡೆಗೆ KA-41-MB-1529  ನೇ ಕಾರು ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಮುಂದಿನಿಂದ ಡಿಕ್ಕಿ ಹೊಡೆದ ಪರಿಣಾಮ  2 ಕಾರು  ಜಖಂಗೊಂಡಿರುತ್ತವೆ.  ಪಿರ್ಯಾದಿದಾರರ ಕಾರಿನಲ್ಲಿದ್ದ   ಶ್ರೀಮತಿ ರೂಪ ರವರಿಗೆ ಬಲ ಭುಜ ಹಾಗೂ ಬೆನ್ನಿಗೆ ಗುದ್ದಿದ ನೋವು , ಮಗ ನಂದನ್ ಮತ್ತು  ನಮನ್ ಎಂಬುವರಿಗೆ  ಕುತ್ತಿಗೆ  ಹಿಂಭಾಗ  ಗುದ್ದಿನ ಒಳನೋವು  , ಮತ್ತು ಅತ್ತಿಗೆ ಸರೋಜ ರವರಿಗೆ ಬಲಬದಿ ಕಾಲು ಹಾಗೂ ಕುತ್ತಿಗೆ ಗುದ್ದಿದ ನೋವು ಉಂಟಾಗಿರುತ್ತದೆ.  ಅಪಾಘಾತವೆಸಗಿದ ಕಾರಿನ ಪ್ರಯಾಣಿಕರಾದ ನಂದಿನಿ ಎಂಬುವವರಿಗೆ ಬಲ ಹಣೆಗೆ ರಕ್ತಗಾಯವಾಗಿರುತ್ತದೆ, ಚಿಂತನ್ ರವರಿಗೆ ತಲೆಗೆ ರಕ್ತಗಾಯವಾಗಿದ್ದು  , ಚರಿತ್ ರವರಿಗೆ ಕಾಲಿಗೆ ಮೂಳೆ ಮುರಿತ ರಕ್ತಗಾಯ ಉಂಟಾಗಿರುತ್ತದೆ.  ಪಿರ್ಯಾದಿದಾರರು ಅವರನ್ನು ಉಪಚರಿಸಿ 108 ಅಂಬ್ಯುಲೆನ್ಸ್  ಮೂಲಕ ಚಿಕಿತ್ಸೆ ಬಗ್ಗೆ ಕುಂದಾಪುರ ಸರ್ಕಾರಿ  ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಪಿರ್ಯಾದಿದಾರರು ಹಾಗೂ ಅವರ ಕುಟುಂಬದವರು ಕೊಲ್ಲೂರು ಪ್ರಾಥಮಿಕ ಆರೋಗ್ಯ  ಕೇಂದ್ರದಲ್ಲಿ  ಚಿಕಿತ್ಸೆ  ಪಡೆದಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕೊಲ್ಲೂರು: ಪಿರ್ಯಾದಿದಾರರಾದ ಸಂತೋಷ್ ವಿ.ಕೆ (47),  ತಂದೆ:  ಕೃಷ್ಣ ವಿ. ಎನ್, ವಾಸ:  ಬೀಸಿನಪಾರೆ  ಜಡ್ಕಲ್ ಗ್ರಾಮ  ಬೈಂದೂರು ತಾಲೂಕು ಇವರು ದಿನಾಂಕ 24/12/2021 ರಂದು ತನ್ನ  ಹೆಂಡತಿ  ಪ್ರೀತಿಯವರೊಂದಿಗೆ  ವಂಡ್ಸೆಯಿಂದ ಮಾರಣಕಟ್ಟೆ ಕಡೆಗೆ ತನ್ನ KA-2O-Y-0133 ನೇ ಮೋಟಾರ್ ಸೈಕಲ್ ಹೋಗುತ್ತಿದ್ದಾಗ ಮಧ್ಯಾಹ್ನ 12:45 ಗಂಟೆಗೆ ಪಿರ್ಯಾದಿದಾರರು ಚಿತ್ತೂರು ಜಂಕ್ಷನ್  ಮಾರಣಕಟ್ಟೆ  ದೇವಸ್ಥಾನ ಮುಖಮಂಟಪದ ದ್ವಾರದ ಬಳಿ ತಲುಪಿದಾಗ ಎದುಗಡೆಯಿಂದ ಅಂದರೆ ಮಾರಣಕಟ್ಟೆಯಿಂದ ಇಡೂರು ಕಡೆಗೆ ಹೊರಟು KA-20-EX-1686 ನೇ ಮೋಟಾರ್ ಸೈಕಲ್ ಸವಾರ ಅತೀ ವೇಗ ಅಜಾಗರೂಕತೆಯಿಂದ ತೀರ ಎಡ ಬದಿಗೆ ಚಲಾಯಿಸಿ ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ  ಅವರ ಹೆಂಡತಿ  ಪ್ರೀತಾರವರು  ಮೋಟಾರ್ ಸೈಕಲ್  ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ  ಬಲಕಾಲಿನ ಪಾದಕ್ಕೆ ಗುದ್ದಿದ ಒಳ ಜಖಂ ಹಾಗೂ  ಬಲ ಮೊಣಗಂಟಿನ ಬಳಿ ತರಚಿದ  ರಕ್ತಗಾಯವಾಗಿ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ.  ಮತ್ತು ಪಿರ್ಯಾದಿದಾರರ ಹೆಂಡತಿ  ಪ್ರೀತಾರವರಿಗೆ  ತಲೆಗೆ ರಕ್ತ ಗಾಯ  ಹಾಗೂ  ಬಲಕೈ ಗುದ್ದಿದ  ಒಳಜಖಂ ಆಗಿರುತ್ತದೆ. ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು  ಅಲ್ಲಿನ ವೈದ್ಯರು ಪರಿಕ್ಷೀಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಮ್ ಸಿ  ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 49/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾಪು: ಪಿರ್ಯಾದಿದಾರರಾದ ರಾಜೇಂದ್ರ ಆಚಾರ್ಯ (36), ತಂದೆ: ಗಣಪಯ್ಯ ಆಚಾರ್ಯ, ವಾಸ: ವಿಶ್ವ ಬ್ರಾಹ್ಮಣ ಪುರ ವಕ್ವಾಡಿ ಗ್ರಾಮ ಕುಂದಾಪುರ ತಾಲೂಕು ಉಡುಪಿ ಇವರ ತಂದೆ ಗಣಪಯ್ಯ  ಆಚಾರ್ಯರವರು ಮರದ ಕೆಲಸ ಮಾಡಿಕೊಂಡಿದ್ದು, ದಿನಾಂಕ 23/12/2021 ರಂದು ಕೆಲಸದ ನಿಮಿತ್ತ  ಕಾಪು ಕಡೆಗೆ ಹೋಗಿದ್ದು, ದಿನಾಂಕ 24/12/2021 ರಂದು ಬೆಳಿಗ್ಗೆ 8:25 ಗಂಟೆ ಸಮಯಕ್ಕೆ ಪಿರ್ಯಾದಿದಾರರ ತಂದೆ ಗಣಪಯ್ಯ ಅಚಾರ್ಯ ರವರು ಮೂಳೂರು ಗ್ರಾಮದ ಎಸ್ ಎಂ ನರ್ಸರಿ ಎದುರು ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು ಉಡುಪಿ ರಸ್ತೆಯ ಪಶ್ಚಿಮ ಬದಿಯಲ್ಲಿ ನಿಂತುಕೊಂಡಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ KA-20-MD-9457  ನೇ ಕಾರು ಚಾಲಕ ಶ್ರೀಕರ ತಂತ್ರಿ ರವರು ತನ್ನ ಕಾರನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆಗೆ ಢಿಕ್ಕಿ ಹೊಡೆದ ಪರಿಣಾಮ ಅವರ ಎಡಕಾಲಿನ ಮೊಣಗಂಟಿನ ಕೆಳಗೆ, ಹಣೆಯ ಮುಂಭಾಗ, ರಕ್ತ ಗಾಯ ಮತ್ತು ಮುಖದಲ್ಲಿ ತರಚಿದ ಗಾಯವಾಗಿದ್ದು ಈ ಬಗ್ಗೆ   ಗಣಪಯ್ಯ ಆಚಾರ್ಯರವರು ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ . ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 188/2021  ಕಲಂ: 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಉಡುಪಿ: ಪಿರ್ಯಾದಿದಾರರಾದ ಮಂಜುಳಾ ಶೆಟ್ಟಿ (33), ಗಂಡ: ಉತ್ತಮ್ ಕುಮಾರ್ ಶೆಟ್ಟಿ, ವಾಸ: ದೊಡ್ಡಮನೆ ಕೋಟಾ ಮಣೂರು ಪಡುಕೆರೆ ಬ್ರಹ್ಮಾವರ ತಾಲೂಕು  ಉಡುಪಿ ಜಿಲ್ಲೆ ಇವರು ದಿನಾಂಕ 23/12/2021 ರಂದು ಉಡುಪಿ ಯ  ಬ್ರಹ್ಮಗಿರಿಯ  ಸರ್ಕಲ್  ಕಡೆಯಿಂದ  ಉಡುಪಿ ಜಿಲ್ಲಾ  ಸರಕಾರಿ ಆಸ್ಪತ್ರೆಯ  ಕಡೆಗೆ KA-20-EV- 1907  ನೇ ಸ್ಕೂಟರನ್ನು  ಸವಾರಿಮಾಡಿಕೊಂಡು ಬಂದು  ಜಿಲ್ಲಾ ಸರಕಾರಿ  ಆಸ್ಪತ್ರೆಯ  ಮುಂಬಾಗ  ಡಿವೈಡರ್  ಬಳಿ  ಯು  ಟರ್ನ  ಮಾಡಲು ನಿಲ್ಲಿಸಿಕೊಂಡಿದ್ದಾಗ ಜೋಡುಕಟ್ಟೆ  ಕಟ್ಟೆ ಕಡೆಯಿಂದ KA-20-C-4400 ನೇ ಟೆಂಪೋ  ಚಾಲಕ  ಪವನ್  ಕುಮಾರ  ತನ್ನ ಟೆಂಪೋವನ್ನು  ದುಡುಕುತನ ಮತ್ತು  ನಿರ್ಲಕ್ಷ್ಯತನದಿಂದ  ಚಲಾಯಿಸಿ  ಪಿರ್ಯಾದಿದಾರರ ಸ್ಕೂಟರಿಗೆ  ಹಿಂದಿನಿಂದ  ಡಿಕ್ಕಿ  ಹೊಡೆದ  ಪರಿಣಾಮ  ಪಿರ್ಯಾದಿದಾರ ಮುಖಕ್ಕೆ ಹಾಗೂ ದಂತಪಂಕ್ತಿ ಮೂಗಿನ ಭಾಗಕ್ಕೆ ತಿವೃವಾದ ಗಾಯವಾಗಿದ್ದು ಪಿರ್ಯಾದಿದಾರರು ಆದರ್ಶ ಅಸ್ಪತ್ರೆ ಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 94/2021 ಕಲಂ: 279 , 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಉಡುಪಿ  ತಾಲೂಕು  ಮೂಡನಿಡಂಬೂರು  ಗ್ರಾಮದ  ಬ್ರಹ್ಮಗಿರಿಯ ಫಾರ್ಚೂನ್‌ ಪ್ಲಾಝಾ ಅಪಾರ್ಟಮೆಂಟಿನಲ್ಲಿ ಕಳೆದ  16  ವರ್ಷಗಳಿಂದ  ವಾಚ್‌ ಮ್ಯಾನ್‌ ಕೆಲಸ ಮಾಡಿಕೊಂಡಿದ್ದ ಪಿರ್ಯಾದಿದಾರರಾದ ಸೂರಪ್ಪ ಬಸಪ್ಪ ಕಠಂಬಳ್ಳಿ (50), ವಾಸ: ಸಾಕಾನ್‌ರೆಡೆರ್ ನಾನ ನೂರು ತಾಲ್ಲೂಕು ನರಗುಂದ, ಗದಗ ಜಿಲ್ಲೆ ಇವರ ಅಣ್ಣ ಶರಣಪ್ಪ  ಬಸಪ್ಪ  ಕಟಂಬಲಿ ( 62) ರವರು ದಿನಾಂಕ  24/12/2021 ರಂದು ಬೆಳಿಗ್ಗೆ  6:00  ಗಂಟೆಯಿಂದ  7:45  ಗಂಟೆಯ  ಮಧ್ಯಾವಧಿಯಲ್ಲಿ  ತಾನು  ಕೆಲಸ  ಮಾಡುತ್ತಿದ್ದ ಅಪಾರ್ಟ್‌ಮೆಂಟಿನಲ್ಲಿ ತನಗಿದ್ದ ಯಾವುದೋ ಖಾಯಿಲೆಯಿಂದಾಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 59/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಶ್ರೀಮತಿ ಯಶೋದಾ ಪೂಜಾರಿ (56) , ಗಂಡ: ಸಂಜೀವ ಪೂಜಾರಿ, ವಾಸ: ಲಕ್ಷ್ಮೀ ಸದನ ಮೇಲ್ಮನೆ ಆನಗೋಡು ತ್ರಾಸಿ ಗ್ರಾಮ ಕುಂದಾಪುರ ತಾಲೂಕು ಇವರ ಅಜ್ಜ ಪಂಜು ಪೂಜಾರಿ (91) ರವರು ದಿನಾಂಕ 23/12/2021 ರಂದು ರಾತ್ರಿ 22:00 ಗಂಟೆಗೆ ಊಟ ಮಾಡಿ ಮಲಗಿದ್ದವರು ದಿನಾಂಕ 24/12/2021 ರಂದು ಬೆಳಿಗ್ಗೆ 5:30 ಗಂಟೆಗೆ ಪಿರ್ಯಾದಿದಾರರು ಎದ್ದು ನೋಡಿದಾಗ ಮಲಗಿದ್ದಲ್ಲಿ ಕಾಣಿಸದೇ ಇದ್ದು ಮನೆಯ ಆಸುಪಾಸು, ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಯಾವುದೇ ಮಾಹಿತಿ ಸಿಗದೇ ಇದ್ದು ಮನೆಯ ತೋಟದ ಬಾವಿಯ ಬಳಿ ನೋಡಿದಾಗ  ಮದ್ಯಾಹ್ನ 14:00 ಗಂಟೆಗೆ ಪಂಜು ಪೂಜಾರಿ ರವರ ಮೃತ ದೇಹ ನೀರಿನಲ್ಲಿ ಕಾಣಿಸಿದ್ದು,  ಪಂಜು ಪೂಜಾರಿ ರವರು ಹಲವು ವರ್ಷಗಳಿಂದ ಮಂಡಿನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ವೈಧ್ಯರಲ್ಲಿ ಚಿಕಿತ್ಸೆ ಪಡೆದರೂ ಗುಣಮುಖವಾಗದೇ ಇರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು 23/12/2021 ರಂದು ರಾತ್ರಿ 22:00 ಗಂಟೆಯಿಂದ ದಿನಾಂಕ 24/12/2021 ರಂದು ಬೆಳಿಗ್ಗೆ 5:30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 35/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ರಾಜಾರಾಮ್‌ ‌ಹೆಚ್‌.ಎ (50), ತಂದೆ: ಅನಂತಪದ್ಮನಾಭ ಅಡಿಗ, ವಾಸ: ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಭವನ, ವಿವೇಕಾನಂದ ನಗರ 4ನೇ ಕ್ರಾಸ್‌, ಅಜ್ಜರಕಾಡು, ಉಡುಪಿ ಇವರು ದಿನಾಂಕ 19/12/2021 ರಂದು ಶ್ರೀಕಾಂತ ರಾವ್ ಇವರ ಮಾಲೀಕತ್ವದ ಶೀತಲ್ ಟ್ರಾವೆಲ್ಸ್ ಬಸ್ ನಂಬ್ರ KA-51-AF-4142 ನೇಯದನ್ನು ಬೆಳಿಗ್ಗೆ 05:14 ಗಂಟೆಗೆ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ ಬಳಿ ತಡೆದು ಜಿ.ಎಸ್.ಟಿ ಕಾಯ್ದೆ ಅಡಿಯಲ್ಲಿ ಬಸ್ಸಿನಲ್ಲಿದ್ದ ಸರಕುಗಳಿಗೆ ಸರಿಯಾದ ದಾಖಲೆಗಳಿದೆಯೋ ಎಂದು ಪರಿಶೀಲಿಸಲು ಮುಂದಿನ ಕ್ರಮಕ್ಕಾಗಿ ಬಸ್ಸನ್ನು ಪಿರ್ಯಾದಿದಾರರ ಕಛೇರಿಯಾದ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ವಾಣಿಜ್ಯ ಭವನಕ್ಕೆ ತಂದು ಅದರಲ್ಲಿದ್ದ ಪ್ರಯಾಣಿಕರನ್ನು ಇಳಿಸಿ, ಅವರಿಗೆ ಸಂಬಂಧಪಟ್ಟ ಲಗೇಜುಗಳನ್ನು ನೀಡಿ ಪರ್ಯಾಯ ವ್ಯವಸ್ಥೆಯನ್ನು ಮಾಡಿ ಮಂಗಳೂರಿಗೆ ಕಳುಹಿಸಿರುತ್ತಾರೆ. ಬಸ್ಸಿನಲ್ಲಿ 31 ಸರಕಿನ ಪ್ಯಾಕೇಜ್‌ಗಳು ಮತ್ತು 3 ದೊಡ್ಡ ಗಾತ್ರದ ಐಟಿ ಬ್ರಾಂಡಿನ ಬ್ಯಾಗುಗಳನ್ನು ಕಛೇರಿ ಆವರಣದಲ್ಲಿ ಇರಿಸಿದ್ದು, ದಿನಾಂಕ 21/12/2021 ರಂದು ಆರೋಪಿತರುಗಳಾದ 1) ರಜತ್‌ ಕಾಮತ್‌, ವಾಸ: ನಂಬ್ರ:1-23-1859/4, ಭಾಸ್ಕರ ನಿವಾಸ, ಮಾರಿಗುಡಿ ಕ್ರಾಸ್‌ರಸ್ತೆ, ಊರ್ವ, ಮಂಗಳೂರು, 2) ಜಾರ್ಜ್‌ ಕ್ರಾಡ್ರೋಸ್‌, ವಾಸ: ಡ್ರೀಮ್‌ಕ್ಯಾಟಲ್‌, ಬಂಗಾರುಬೆಟ್ಟು, ಮಿಯಾರು, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ಪಿರ್ಯಾದಿದಾರರ ಕಛೇರಿಗೆ ಬಂದು ತಮ್ಮ ಸರಕುಗಳನ್ನು ತಕ್ಷಣವೇ ಬಿಡಬೇಕೆಂದು ಒತ್ತಾಯ ಮಾಡಿದಾಗ ಪಿರ್ಯಾದಿದಾರರು ಈ ಪ್ರಕರಣಕ್ಕೆ ಯುಕ್ತ ಅಧಿಕಾರಿಯವರು ಬೆಂಗಳೂರಿಗೆ ಹೋಗಿರುವುದಾಗಿ ಹೇಳಿದರೂ ಕೇಳದೇ 15:00 ಗಂಟೆಯಿಂದ 15:03 ಗಂಟೆಯ ಮಧ್ಯಾವಧಿಯಲ್ಲಿ ಆರೋಪಿ ಜಾರ್ಜ ಕ್ವಾಡ್ರೋಸ್ ರವರು ಆರೋಪಿ ರಜತ್ ಕಾಮತ್ ರವರ ಸಹಾಯದಿಂದ ಪಿರ್ಯಾದಿದಾರರ ಕಛೇರಿಯ ಸಿಬ್ಬಂದಿಯವರು ಕುಳಿತುಕೊಳ್ಳುವ ಕೊಠಡಿಯ ಬಾಗಿಲಿನ ಕಡೆಗೆ ಮುಖ ಮಾಡಿ ನಿಂತು, ತಮ್ಮ ಶರೀರದಿಂದ ಸರಕುಗಳನ್ನು ಇಟ್ಟಿರುವ ಕೊಠಡಿಯ ನೋಟವನ್ನು ಮರೆ ಮಾಡಿ ಆರೋಪಿ ಜಾರ್ಜ್‌ ಕ್ವಾಡ್ರೊಸ್‌ರವರ ಅವರ ಒಂದು ಬ್ಯಾಗ್‌ನ್ನು ತೆಗೆದುಕೊಂಡು ಹೋಗಲು ಸಹಾಯ ಮಾಡಿದ್ದು, ನಂತರ ಆರೋಪಿ ಜಾರ್ಜ್ ಕ್ವಾಡ್ರೋಸ್‌ರವರು ಆರೋಪಿ ಕಾಮತ್‌ರವರಂತೆಯೇ ಸಿಬ್ಬಂದಿಯವರು ಕುಳಿತುಕೊಳ್ಳುವ ಕೊಠಡಿಯ ಬಾಗಿಲಿನ ಕಡೆಗೆ ಮುಖ ಮಾಡಿ ನಿಂತು ತಮ್ಮ ಶರೀರದಿಂದ ಸರಕುಗಳನ್ನು ಇಟ್ಟಿರುವ ಕೊಠಡಿಯ ನೋಟವನ್ನು ಮರೆ ಮಾಡಿ ಆರೋಪಿ ರಜತ್‌ ಕಾಮತ್‌ರವರಿಗೆ ಅವರ ಒಂದು ಪ್ಯಾಕೇಜ್‌ನ್ನು ಪಿರ್ಯಾದಿದಾರರ ಅನುಮತಿ ಇಲ್ಲದೆ ಕಳವು ಮಾಡಿಕೊಂಡು ಹೋಗಿದ್ದು, ಕೃತ್ಯವು ಸಿಸಿ ಟಿವಿ ಪುಟೇಜ್‌ನ್ನು ಪರಿಶೀಲನೆ ಮಾಡಿದ ಬಳಿಕ ಗಮನಕ್ಕೆ ಬಂದಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 191/2021 ಕಲಂ: 379 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ವಿಲ್ಮಾ ಲೀಯಾ ಡಿಸೋಜಾ, ಗಂಡ: ಸೂರಜ್ ಡಿಸೋಜಾ, ವಾಸ: ಮನೆ ನಂಬ್ರ: 3-20-02, ಇಮ್ಯಾನುವಲ್, ಕುಂಟಲ್ ಗುಂಡಿ ಹೌಸ್, ಕೆದಿಂಜೆ ಅಂಚೆ ನಂದಳಿಕೆ ಗ್ರಾಮ ಕಾರ್ಕಳ ತಾಲೂಕು ಇವರಿಗೂ ಹಾಗೂ ಆರೋಪಿ ಮಹೇಶ್ ಗಾಣಿಗ ಇವರಿಗೂ ಬಸ್ ವ್ಯವಹಾರದ ವಿಚಾರದಲ್ಲಿ ತಕರಾರು ಇದ್ದು ಅದೇ ಕಾರಣದಿಂದ ಆರೋಪಿ ಮಹೇಶ್ ಗಾಣಿಗ ದಿನಾಂಕ 24/12/2021 ರಂದು ಸಂಜೆ 5:15 ಗಂಟೆಗೆ KA-20-MD-7797 ನೇ ನಂಬ್ರದ ಮಾರುತಿ ಸ್ವಿಪ್ಟ್ ಕಾರಿನಲ್ಲಿ ತನ್ನ ಸ್ನೇಹಿತ ನಿತಿನ್ ಶೆಟ್ಟಿ ಎಂಬುವವನೊಂದಿಗೆ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಕುಂಟಲ್ ಗುಂಡಿ ಎಂಬಲ್ಲಿ ಇರುವ ಪಿರ್ಯಾದಿದಾರರ ಮನೆ ನಂಬ್ರ: 3-20-02 ನೇದರ ಜಗುಲಿಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ದೂಡಿದ್ದು ಆ ಸಮಯ ತಪ್ಪಿಸಲು ಬಂದ ಪಿರ್ಯಾದಿದಾರರ ತಾಯಿ ಶ್ರೀಮತಿ ನತಾಲಿಯಾ ಅರಹ್ನಾ ರವರ ಕೈಯನ್ನು ತಿರುಗಿಸಿ ನೋವುಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 140/2021 ಕಲಂ: 447, 504, 506, 323, 354 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ಪಿರ್ಯಾದಿದಾರರಾದ ಆನಂದ ಕುಲಾಲ್‌(48), ತಂದೆ: ರಾಮ ಕುಲಾಲ್‌, ವಾಸ: ಕಟ್ಕೇರಿ, ಕೊರ್ಗಿ ಗ್ರಾಮ, ಕುಂದಾಪುರ ಇವರು ದಿನಾಂಕ 23/12/2021 ರಂದು ರಾತ್ರಿ 8:00 ಗಂಟೆಗೆ ತಮ್ಮ ಕೆಲಸ ಮುಗಿಸಿಕೊಂಡು, ಕೊರ್ಗಿ ಸತೀಶ್‌ರವರ ಅಂಗಡಿಯ ಬಳಿ ಬಂದಾಗ ಅವರ ಸ್ನೇಹಿತರಾದ ಅಶೋಕ್‌ ಮತ್ತು ವಿಘ್ನೇಶ್‌ ಎಂಬುವವರು ಇದ್ದು ಅವರೆಲ್ಲರೂ ಸೇರಿ ಅಶೋಕ್‌ರವರ ಓಮಿನಿ ಕಾರಿನಲ್ಲಿ ಚಾರುಕೊಟ್ಟಿಗೆ ಎಂಬಲ್ಲಿಗೆ ಊಟ ಮಾಡಲು ಹೋದವರು ರಾತ್ರಿ 11:30 ಗಂಟೆಗೆ ಊಟ ಮುಗಿಸಿ ವಾಪಾಸು ಕೊರ್ಗಿ ಹಾಲು ಡೈರಿ ಹತ್ತಿರ ಇರುವ ಶಾಲೆಯ ಬಳಿ ಬಂದಿದ್ದು, ಆಗ ಪಿರ್ಯಾದಿದಾರರು ತಮ್ಮ ಬೈಕ್‌ ಮೇಲೆ ಕುಳಿತು, ಅಶೋಕ್‌ ಮತ್ತು ವಿಘ್ನೇಶ್‌ರವರೊಂದಿಗೆ ಮಾತನಾಡುತ್ತಿದ್ದು,  ಆಗ ವಿಘ್ನೇಶನು ಸಿಟ್ಟಿನಿಂದ ಪಿರ್ಯಾದಿದಾರರ ಕೈಯನ್ನು ಹಿಡಿದು ಎಳೆದು, ಕಾಲಿನಿಂದ ಬೈಕಿಗೆ ತುಳಿದಿರುತ್ತಾನೆ. ಆಗ ಪಿರ್ಯಾದಿದಾರರು ಆಯತ್ಪಪಿ ನೆಲಕ್ಕೆ ಬಿದ್ದ ಪರಿಣಾಮ ಬಲ ಕೈ ಮೊಣಗಂಟಿಗೆ ತೀವ್ರ ಒಳನೋವು ಉಂಟಾಗಿರುತ್ತದೆ. ಈ ಘಟನೆಯ ಸಮಯ ಪಿರ್ಯಾದಿದಾರರ ಮೊಬೈಲ್ ಫೋನ್ ಎಲ್ಲೋ ಬಿದ್ದು ಕಳೆದು ಹೋಗಿರುತ್ತದೆ. ಘಟನೆಯ ಬಳಿಕ ಪಿರ್ಯಾದಿದಾರರು ಅಶೋಕ್‌ ರವರೊಂದಿಗೆ ರಾತ್ರಿ ಮನೆಗೆ ಹೋಗಿದ್ದು, ಪಿರ್ಯಾದಿದಾರರಿಗೆ  ಕೈ ನೋವು ದಿನಾಂಕ 24/12/2021 ರಂದು ಬೆಳಿಗ್ಗೆ ಹೆಚ್ಚಾದ ಕಾರಣ, ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಬಂದು ಒಳರೋಗಿಯಾಗಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 72/2021 ಕಲಂ : 323,341 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಜ್ಯೋತಿ ಹಿಣಿ (34), ಗಂಡ:ಮದ್ವರಾಜ್ ಖಾರ್ವಿ  ವಾಸ; ಕುಮ್ಟಿಮನೆ, ಮಡಿಕಲ್ , ಉಪ್ಪುಂದ ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ  24/12/2021 ರಂದು ಮನೆಯಲ್ಲಿರುವಾಗ ಮದ್ಯಾಹ್ನ  4:00 ಗಂಟೆಗೆ ನೆರೆಮನೆಯ ಆರೋಪಿ 1) ಮಹೇಂದ್ರ ಖಾರ್ವಿ ಯು ಪಿರ್ಯಾದಿದಾರರ ಮನೆಯ ಟಾಯ್ಲೇಟ್ ಫಿಟ್ಟಿನ(ಹೊಂಡ) ಮೇಲಿರುವ ಹಾಸು ಕಲ್ಲನ್ನು ಸುತ್ತಿಗೆಯಿಂದ ಒಡೆಯುತ್ತಿರುವಾಗ ಪಿರ್ಯಾದಿದಾರರು ಯಾಕೆ ಟಾಯ್ಲೇಟ್ ಫಿಟ್ ಒಡೆಯುತ್ತಿಯಾ ಎಂದು ಕೇಳಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ಬೈದಿದ್ದು,  ನಂತರ 1 ನೇ ಆರೋಪಿಯು ಟಾಯ್ಲೇಟ್ ಹೊಂಡವನ್ನು ಮುಚ್ಚಲು ಒಂದು ಲಾರಿಯಲ್ಲಿ ಮಣ್ಣನ್ನು ತರಿಸಿದ್ದು ಪಿರ್ಯಾದಿದಾರರು ಲಾರಿ ಚಾಲಕನಲ್ಲಿ ನೀವು ಮಣ್ಣನ್ನು ಹಾಕಿದರೆ ನಿಮಗೆ ತೊಂದರೆ ಆಗುತ್ತದೆ ಎಂದಾಗ ಲಾರಿ ಚಾಲಕನು ಅಲ್ಲಿಂದ ವಾಪಾಸ್ಸು ಹೋಗಿರುತ್ತಾರೆ. ಇದರಿಂದ ಸಿಟ್ಟಾದ 1 ನೇ ಆರೋಪಿಯು  ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿರುತ್ತಾನೆ. ಆರೋಪಿ 2  ಚಂದು ರವರು ಪಿರ್ಯಾದಿದಾರರಿಗೆ ಹೊಡೆಯುವಂತೆ ಆರೋಪಿ 1 ನೇ ರವರಿಗೆ ಪ್ರಚೋದನೆ ನೀಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 210/2021 ಕಲಂ: 427, 354,  323, 504, 506,114 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 24/12/2021 ರಂದು 23:00 ಗಂಟೆಗೆ ಶ್ರೀಕಾಂತ್ ಕೆ, ಪೊಲೀಸ್ ಉಪಾಧೀಕ್ಷಕರು, ಕುಂದಾಪುರ ಉಪ ವಿಭಾಗ ಇವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುಂದಾಪುರ ವಡೇರ ಹೋಬಳಿ ಗ್ರಾಮದ ಬಸ್ರೂರು ಮೂರುಕೈ ಬಳಿ ತಲುಪಿದಾಗ ಬಸ್ರೂರು ಮೂರುಕೈಯ ಬಸ್ಸು ನಿಲ್ದಾಣದ ಎದುರು ಶ್ರೀ ನಂದಿಕೇಶ್ವರಿ ಬೇಕರಿ ಮುಂಭಾಗ ಒಬ್ಬ ವ್ಯಕ್ತಿ ಒಂದು ಸ್ಕೂಲ್ ಬ್ಯಾಗನ್ನು ಬೆನ್ನಿಗೆ ಹಾಕಿಕೊಂಡು ಅನುಮಾನಾಸ್ಪದವಾಗಿ ನಿಂತುಕೊಂಡಿದ್ದು, ಆತನ ಹೆಸರು ವಿಳಾಸವನ್ನು ಮತ್ತು ಎಲ್ಲಿಗೆ ಹೋಗುತ್ತಿರುವುದಾಗಿಯೂ ವಿಚಾರಿಸಲಾಗಿ ತನ್ನ ಹೆಸರು ವಿಶ್ವ ಪ್ರಸನ್ನ ಗೋಡೆ(20), ತಂದೆ:ದಿವಂಗತ ರಾಧಾಕೃಷ್ಣ ಗೋಡೆ, ವಾಸ: ಮನೆ ನಂಬ್ರ.616/ಎಫ್‌-18 , ಗೋಡೆಮನೆ, ಚಟ್ಕೆರೆ, ವಿಠಲವಾಡಿ,ವಡೇರ ಹೋಬಳಿ ಗ್ರಾಮ,ಕುಂದಾಪುರ ತಾಲೂಕು ಎಂದು ತಿಳಿಸಿದ್ದು, ಬೆನ್ನಿನಲ್ಲಿ ಹಾಕಿಕೊಂಡ ಬ್ಯಾಗನ್ನು ಬಿಚ್ಚಿ ತೋರಿಸುವಂತೆ ಹೇಳಿದಾಗ ಬ್ಯಾಗಿನಲ್ಲಿ ಬಟ್ಟೆ ಇರುವುದಾಗಿಯೂ ಹಾಗೂ ಆಟೋ ರಿಕ್ಷಾವನ್ನು ಕಾಯುತ್ತಿರುವುದಾಗಿಯೂ ತಿಳಿಸಿದ್ದು, ಬ್ಯಾಗನ್ನು ಬಿಚ್ಚಿದಾಗ ಬ್ಯಾಗಿನಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಸುಮಾರು 1 ಕೆ.ಜಿ 84 ಗ್ರಾಂ ತೂಕದ ಗಾಂಜಾ  ಮೌಲ್ಯ 20,000/- ರೂಪಾಯಿ ಮತ್ತು ಆತನ ವಶದಲ್ಲಿ 250/- ರೂಪಾಯಿ ಮತ್ತು ಒಂದು ಮೊಬೈಲ ನ್ನು ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 136/2021 ಕಲಂ: 8-A(C), 20 (b)(ii)(B) , ಎನ್.ಡಿ.ಪಿ.ಎಸ್. ಕಾಯ್ದೆ-1985 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-12-2021 10:23 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080