ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 24/11/2022 ರಂದು ಸಂಜೆ 4:20  ಗಂಟೆಗೆ ಕುಂದಾಪುರ ತಾಲೂಕು, ಕಟ್‌‌ ಬೇಲ್ತೂರು  ಗ್ರಾಮದ ಹರೇಗೋಡು  ನಾವುಡರ ಅಂಗಡಿಯ ಬಳಿ ರಸ್ತೆಯಲ್ಲಿ, ಆಪಾದಿತ  ಜಿ.ಬಿ.  ಶಂಕರ್ ಆಚಾರ್‌  KA-47-E-8617ನೇ ಬುಲೆಟ್‌‌‌‌ನ್ನು  ಹೆಮ್ಮಾಡಿ   ಕಡೆಯಿಂದ ವಂಡ್ಸೆ   ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಪಿರ್ಯಾದಿದಾರರಾದ ಸೂರ ದೇವಾಡಿಗ (75), ತಂದೆ ದಿ. ವೆಂಕಟ ದೇವಾಡಿಗ, ವಾಸ: “ಮಾತಪಿತಾ” ಅಮ್ಲಾಡಿ,  ಕಟ್‌‌‌ ಬೇಲ್ತೂರು ಗ್ರಾಮ, ಕುಂದಾಪುರ ತಾಲೂಕು ಇವರು ಸವಾರಿ ಮಾಡಿಕೊಂಡು  ಹೋಗುತ್ತಿದ್ದ  ಸೈಕಲ್‌‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡಕಾಲಿಗೆ, ಮುಖಕ್ಕೆ, ಗಲ್ಲಕ್ಕೆ,  ಎಡಕೈಗೆ, ಒಳಜಖಂ ಹಾಗೂ ರಕ್ತಗಾಯ ಹಾಗೂ  ಆಪಾದಿತನಿಗೆ ತಲೆಗೆ, ಮುಖ, ಕೈ ಕಾಲುಗಳಿಗೆ ತರಚಿದ ಗಾಯವಾಗಿ ಕುಂದಾಪುರ ಆದರ್ಶ  ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ  ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 125/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾರ್ಕಳ: ಪಿರ್ಯಾದಿದಾರರಾದ ಲೋಟಲಿ ಡಿ ಮೆಲ್ಲೋ (53), ಗಂಡ: ಕೇವಿನ್‌ ಡಿ ಮೆಲ್ಲೋ, ವಾಸ: ಲಿಟ್ಲ್‌ ಪ್ಲವರ್‌, ಅಂಬಡೆ ಕಲ್ಲು ಹೌಸ್‌, ನಿಟ್ಟೆ ಗ್ರಾಮ, ಕಾರ್ಕಳ ತಾಲೂಕು ಇವರು ತನ್ನ ಗಂಡ ಕೇವಿನ್ ಡಿ ಮೆಲ್ಲೋ(57,) ಮಗಳು ಸಿಮೋನಾ, ಹಾಗೂ ತನ್ನ ತಾಯಿರವರೊಂದಿಗೆ ನಿಟ್ಟೆ ಗ್ರಾಮದಲ್ಲಿ ವಾಸವಾಗಿರುತ್ತಾರೆ. ಪಿರ್ಯಾದಿದಾರರ ಗಂಡ ಕೇವಿನ್ ಡಿ ಮೆಲ್ಲೋ ರವರು ಕಾರ್ಕಳ ತಾಲೂಕು ಕಸಬಾ ಗಾಮದ ರಾಮಸಮುದ್ರ ಬಳಿ ಸುಮಾರು 9 ವರ್ಷದ ಹಿಂದೆ ಹೊಸದಾಗಿ ಮನೆ ಕಟ್ಟಿದ್ದು ಅಲ್ಲಿಗೆ ಹೋಗಿಬರುತ್ತಿದ್ದರು. ಪಿರ್ಯಾದಿದಾರರ ಮಗಳು ಸಿಮೋನಾ ರವರಿಗೆ ಕೆಲವು ಸಮಯದಿಂದ ಆರೋಗ್ಯ ಸಮಸ್ಯೆ ಇದ್ದು ಹಾಗೂ ತನಗೂ ಮಾನಸಿಕ ಖಿನ್ನತೆ ಇದ್ದು ದಿನಾಂಕ 24/11/2022 ರಂದು ಬೆಳಗ್ಗೆ 08:30 ಗಂಟೆಯಿಂದ 12:00 ಗಂಟೆಯ ಮದ್ಯಾವಧಿಯಲ್ಲಿ  ಪಿರ್ಯಾದಿದಾರರ ಗಂಡ ಕೇವಿನ್ ಡಿ ಮೆಲ್ಲೋ ರವರು ಕಾರ್ಕಳ ತಾಲೂಕು ಕಸಬಾ ಗಾಮದ ರಾಮಸಮುದ್ರ ಬಳಿ ಇರುವ ತನ್ನ ಮನೆಯ ಕೋಣೆಯ ಒಳಗೆ ತೊಟ್ಟಿಲು ಹುಕ್ಕು ಕೊಂಡಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಯುಡಿಅರ್‌ ಕ್ರಮಾಂಕ 51/2022 ಕಲಂ: 174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ವಿಲ್ಸನ್ ಡಿಸೋಜಾ (30), ತಂದೆ: ಲಿಗೋರಿ ಡಿಸೋಜ, ವಾಸ: ಡಿಸೋಜಾ ವಿಲ್ಲಾ, ದರ್ಖಾಸು ಶಾಲೆ ರಸ್ತೆ, ಹಾವಂಜೆ ಗ್ರಾಮ, ಬ್ರಹ್ಮಾವರ ತಾಲೂಕು ಇವರ ಮನೆಯಲ್ಲಿ ದಿನಾಂಕ 23/11/2022  ರಂದು ನಡೆದ ಮದುವೆಯ ಮಹೆಂದಿ ಕಾರ್ಯಕ್ರಮದಲ್ಲಿ ಡಾನ್ಸ್‌ ಮಾಡುತ್ತಿದ್ದ  ಪಿರ್ಯಾದಿದಾರರ ಚಿಕ್ಕಮ್ಮನ ಮಗಳಾದ ಜೋಸ್ನಾ ಮರಿಯಾ ಕೋತಾ (24)ಎಂಬುವವರು ರಾತ್ರಿ 8:00 ಗಂಟೆಗೆ ಏಕಾ ಏಕಿ ಕುಸಿದು ಬಿದ್ದು, ಯಾವುದೇ ಮಾತನಾಡಲು ಆಗದೇ ಅಸ್ವಸ್ಥಗೊಂಡಿರುತ್ತಾರೆ. ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆಯಲ್ಲಿರುತ್ತಾ, ಚಿಕಿತ್ಸೆ ಫಲಕಾರಿಯಾಗದೇ ಜೋಸ್ನಾ ಮರಿಯಾ ಕೋತಾ ರವರು ದಿನಾಂಕ 24/11/2022 ರಂದು ಬೆಳಿಗ್ಗೆ 09:00 ಗಂಟೆಗೆ ಮೃತ ಪಟ್ಟಿರುವುದಾಗಿ ವೈಧ್ಯರು ತಿಳಿಸಿರುತ್ತಾರೆ. ಜೋಸ್ನಾ ಮರಿಯಾ ಕೋತಾ ರವರಿಗೆ ಎರಡು ವರ್ಷಗಳ ಹಿಂದೆ ನ್ಯೂಮೋನಿಯ ಖಾಯಿಲೆ ಬಂದು ಈ ಬಗ್ಗೆ ಚಿಕಿತ್ಸೆ ಪಡೆದಿದ್ದು, ಅದರ ನಂತರ ಅವರಿಗೆ ಜೋರಾಗಿ ನಡೆದಾಗ ಸುಸ್ತು ಆಗುವುದಾಗಿ ತಿಳಿಸಿರುತ್ತಾರೆ. ಜೋಸ್ನಾ ಮರಿಯಾ ಕೋತಾರವರು ಅವರಿಗಿದ್ದ ನ್ಯೂಮೊನಿಯ ಖಾಯಿಲೆಯಿಂದಲೋ ಅಥವಾ ಹೃದಯಘಾತದಿಂದಲೋ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 59/2022 ಕಲಂ: 174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಲಕ್ಷ್ಮಣ ಮುಖಾರಿ (42), ತಂದೆ: ಪಿಜಿನ ಮುಖಾರಿ, ವಾಸ: ಕುಂಜಿಗುಡ್ಡೆ ಮನೆ, ಹಲಸಿನಕಟ್ಟೆ ಪೋಸ್ಟ್,ಪಿಲಾರು ಗ್ರಾಮ, ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 22/11/2022 ರಂದು ಬೆಳಿಗ್ಗೆ 11:00 ಗಂಟೆಗೆ ಮನೆಯಲ್ಲಿರುವಾಗ ಆಪಾದಿತರಾದ 1)ದೇವಪುತ್ರನ್, 2)ಯಶೆಫ್, 3)ಜಾಕೊಬ್, 4)ಸ್ಟೀಫನ್, 5)ಸ್ಟ್ಯಾನಿ, 6) ಯಾಕೋಬ್ ಇವರು ಸೇರಿಕೊಂಡು ಮರದ ಸೋಂಟೆ ಹಿಡಿದುಕೊಂಡು ಬಂದು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ  ಕಲ್ಲಿನ ಮುಳ್ಳು ತಂತಿ ಬೇಲಿಯನ್ನು ಅಳವಡಿಸಲು ಬಂದಿದ್ದು, ಈ ಜಾಗಕ್ಕೆ ಗಡಿ ತಕರಾರು ಇದ್ದುದರಿಂದ ಪಿರ್ಯಾದಿದಾರರು ಅವರನ್ನು ತಡೆದಾಗ ಆಪಾದಿತರುಗಳು ಪಿರ್ಯಾದಿದಾರರನ್ನು ಉದ್ದೇಶಿಸಿ ಬೈದು ಮರದ ಸೋಂಟೆ ಮತ್ತು ಕೈಕಾಲುಗಳಿಂದ ಹಲ್ಲೆ ಮಾಡಿದರು. ಬಳಿಕ ಈ ವಿಚಾರವನ್ನು ಸ್ಥಳದಲ್ಲಿದ್ದ  ಪಿರ್ಯಾದಿದಾರರ ಪತ್ನಿ ಸರೋಜಿನಿ ಅವರ ಅಣ್ಣ ರಮೇಶ ಮುಖಾರಿಯವರಿಗೆ ಫೋನ್ ಮೂಲಕ ತಿಳಿಸಿದ್ದು ಪಿರ್ಯಾದಿದಾರರನ್ನು ರಮೇಶ್ ಮುಖಾರಿಯವರು ಚಿಕಿತ್ಸೆ ಬಗ್ಗೆ ಶಿರ್ವಾ  ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿರುತ್ತಾರೆ. ಹಲ್ಲೆ ನಡೆಸಿದವರ ಪೈಕಿ ದೇವಪುತ್ರನ್ ಮರದ ಸೋಂಟೆಯಿಂದಲೂ ಹಾಗೂ ಇತರರು ಕೈಗಳಿಂದ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 84/2022, ಕಲಂ: 143,147,148, 323, 324, 447, 504, 506  ಜೊತೆಗೆ 149 ಐಪಿಸಿ & 3(1)(r)(s), 3(2)(v-a) SC/ST (POA) Act ರಂತೆ ಪ್ರಕರಣ ದಾಖಲಾಗಿರುತ್ತದೆ .
  • ಹಿರಿಯಡ್ಕ: ಪಿರ್ಯಾದಿದಾರರಾದ ವಸಂತ ಶೆಟ್ಟಿ ( 65), ತಂದೆ: ಸೂರಪ್ಪ ಹೆಗ್ಡೆ, ವಿಳಾಸ: ಚೆನ್ನಿಬೆಟ್ಟು, ಮದಗ , ಆತ್ರಾಡಿ ಗ್ರಾಮ, ಉಡುಪಿ ತಾಲೂಕು ಇವರ ತಾಯಿ ಸರಸ್ವತಿರವರು  ವಯೋವೃದ್ದರಾಗಿದ್ದು  98 ವರ್ಷ ವಯಸ್ಸಾಗಿರುತ್ತದೆ. ಅವರಿಗೆ  ಕಳೆದ 2 ವರ್ಷಗಳಿಂದ ಎದ್ದು ಕೂರಲು ಆಗುವುದಿಲ್ಲ,  ಜೋರಾಗಿ ಮಾತನಾಡಲು ಆಗುವುದಿಲ್ಲ, ಆದುದರಿಂದ ಕಳೆದ 8-9 ತಿಂಗಳಿನಿಂದ ಅವರ ತಾಯಿಯ ಆರೈಕೆಯನ್ನು ನೋಡಿಕೊಳ್ಳಲು ಉಡುಪಿ ಉಷಾ ಮ್ಯಾರೇಜ್ ಬ್ಯುರೋ  & ಜಾಬ್ ಲಿಂಕ್ಸ್  ಏಜೆನ್ಸಿ ಮುಖಾಂತರ ಹೋಂ ನರ್ಸ್ ರೇಖಾ ಹೆಬ್ಬಾಳ್ಳಿ  ಇವರನ್ನು   ನೇಮಿಸಿ ಕಳುಹಿಸಿದ್ದು   ದಿನಾಂಕ 20/10/2022 ರಿಂದ ರೇಖಾ ಹೆಬ್ಬಳ್ಳಿ,ಪಿರ್ಯಾದಿದಾರರ ತಾಯಿಯ ಆರೈಕೆಯನ್ನು  ನೋಡಿಕೊಂಡಿದ್ದು  ,  ದಿನಾಂಕ 21/11/2022 ರಂದು  ಸಾಯಂಕಾಲ 4:30 ಗಂಟೆಗೆ  ರೇಖಾ  ಹೆಬ್ಬಳ್ಳಿ  ಯಾರಿಗೂ  ಹೇಳದೇ ಮನೆಯಿಂದ ಹೋಗಿರುತ್ತಾಳೆ.  ನಂತರ ಪಿರ್ಯಾದಿದಾರರು ಅಮ್ಮನ ಬಳಿಗೆ ಸಂಜೆ 4:50 ಗಂಟೆಗೆ  ಹೋಗಿ ನೋಡಿದಾಗ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಇರಲಿಲ್ಲ, ಚಿನ್ನದ ಚೈನ್ 3 ½ ಪವನ್‌ತೂಕದ ಡಿ.ಸಿ  ಮಾದರಿ ಚೈನಾಗಿದ್ದು ,ಅದರ ಮೌಲ್ಯ 1,45,000/-ರೂಪಾಯಿ ಆಗಿರುತ್ತದೆ. ರೇಖಾ ರವರಿಗೆ ಫೋನ್ ಮಾಡಿದಾಗ ಆಕೆಯು ಫೋನ್ ಸ್ವೀಕರಿಸುತ್ತಿರಲಿಲ್ಲ, ಪಿರ್ಯಾದಿದಾರರ ತಾಯಿಯ ಚಿನ್ನದ ಚೈನ್ ಕಳವಾಗಿದ್ದು ಚೈನನ್ನು  ರೇಖಾ ಕಳವು  ಮಾಡಿಕೊಂಡು ಹೋಗಿರುವ ಬಗ್ಗೆ  ಸಂಶಯ ಇರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 78/2022 ಕಲಂ : 381 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    
  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಲೈಲಾ ತೋಮಸ್ (44), ಗಂಡ; ಪ್ರಾನ್ಸಿಸ್ ಡಿ`ಸಿಲ್ವ,  ವಾಸ; ಶಿವ ನಿಲಯ, 1ನೇ ಕ್ರಾಸ್ , ಸದಾನಂದ ಕಾಮತ್   ರಸ್ತೆ, ಕಾರ್ಕಳ ಕಸಬಾ ಗ್ರಾಮ, ಕಾರ್ಕಳ ಇವರು ಕಾರ್ಕಳ ಪುರಸಭಾ ಕಛೇರಿಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾಗಿ ಸರಕಾರಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 24/11/2022 ರಂದು ಸಂಜೆ 4:00 ಗಂಟೆಗೆ ಕಾರ್ಕಳ ಪುರಸಭಾ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಆಪಾದಿತ ಉಮೇಶ್ ಕಲ್ಲೊಟ್ಟೆ   ಪಿರ್ಯಾದಿದಾರರು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿಯ ಒಳಗೆ ಬಂದು ಟೇಬಲ್ ಬಳಿ ನಿಂತು ಪಿರ್ಯಾದಿದಾರರಲ್ಲಿ  `` ನಾನು ಈ ಹಿಂದೆ ಆಡು ಮತ್ತು ಕುರಿ ಮಾಂಸದ ಅಂಗಡಿ ನಡೆಸಲು ಟ್ರೇಡ್ ಲೈಸೆನ್ಸ್‌ ಕೋರಿ ಅರ್ಜಿ ಸಲ್ಲಿಸಿದ್ದರೂ ಕೂಡಾ ಈ ವರೆಗೆ ನನಗೆ ಯಾಕೆ ಟ್ರೇಡ್ ಲೈಸೆನ್ಸ್‌‌ ನೀಡಿರುವುದಿಲ್ಲ``ಎಂದು ಏರುಧ್ವನಿಯಲ್ಲಿ ಕೇಳಿದ್ದು, ಅದಕ್ಕೆ ಪಿರ್ಯಾದಿದಾರರು ಆಪಾದಿತನಲ್ಲಿ ಟ್ರೇಡ್ ಲೈಸೆನ್ಸ್‌‌  ನೀಡುವ ಬಗ್ಗೆ ನಮ್ಮ ಮೇಲಾಧಿಕಾರಿಯವರಲ್ಲಿ ಕೇಳುವಂತೆ ತಿಳಿಸಿದ್ದು ಅದಕ್ಕೆ ಆಪಾದಿತನು ಪಿರ್ಯಾದಿದಾರರಿಗೆ  ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 142/2022 ಕಲಂ:  353, 504, 506 509  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 25-11-2022 09:02 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080