ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿ ಶ್ರೀಮತಿ ಹಾಜಿರಾ ಇವರು ದಿನಾಂಕ:25-11-2022 ರಂದು ಮೂಡನಿಡಂಬೂರು ಗ್ರಾಮ ಉಡುಪಿ ಸಿ.ಟಿ ಬಸ್ ನಿಲ್ದಾಣದ ಬಳಿ ಹಾದು ಹೋಗಿರುವ ರಾ.ಹೆ- 169(ಎ)ರ ಸಾರ್ವಜನಿಕ ಡಾಮಾರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 08-00 ಗಂಟೆಗೆ ಶಿರಿಬೀಡು ಕಡೆಯಿಂದ ಕಲ್ಸಂಕದ ಕಡೆಗೆ KA20ET9041 ನೇ ಸ್ಕೂಟರ್ ಸವಾರ ನಿಹಾಲ್ ಎಂಬಾತನು ತಾನು ಸವಾರಿ ಮಾಡುತ್ತಿದ್ದ ಸ್ಕೂಟರ್ ನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ರಸ್ತೆಯ ತೀರಾ ಬದಿಗೆ ಸವಾರಿ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರಿಗೆ ಹೊಡೆದ ಪರಿಣಾಮ ರಸ್ತೆಗೆ ಬಿದ್ದು, ಎಡ ಕಾಲಿನ ಮೂಳೆಮುರಿತ ಮತ್ತು ತಲೆಗೆ ಗುದ್ದಿದ್ದ ಒಳನೋವು ಆಗಿ ಉಡುಪಿ ಗಾಂಧಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 96/2022 ಕಲಂ: 279, 338 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ದಿನಾಂಕ:02.11.2022 ರಂದು ಮುದ್ರಾಲೋನ್‌ ಯೋಜನೆಯಡಿ ಸಾಲ ನೀಡುವುದಾಗಿ ಪಿರ್ಯಾದಿ ಸತೀಶ್‌ ಜೈನ್ ಇವರ ಮೊಬೈಲ್ ಗೆ ಸಂದೇಶ ಬಂದಿದ್ದು, ಸದ್ರಿ ಸಂದೇಶದಲ್ಲಿ ನಮೂದಿಸಿದ ಮೊಬೈಲ್‌ ಗೆ ಪಿರ್ಯಾದಿದಾರರು ಕರೆ ಮಾಡಿದಲ್ಲಿ, ತಾನು ಮುದ್ರ ಲೋನ್ ಸಂಸ್ಥೆಯ ಮ್ಯಾನೇಜರ್ ಎಂಬುದಾಗಿ, ಸಾಲ ನೀಡುವುದಾಗಿ ಪಿರ್ಯಾದಿದಾರರನ್ನು ನಂಬಿಸಿ, ಲೋನ್‌ಗೆ ಸಂಬಂಧಿಸಿ ದಾಖಲಾತಿಯನ್ನು ಪಡೆದು, ರಿಜಿಸ್ಟ್ರೇಶನ್ ಚಾರ್ಜ್‌ ರೂ. 3,200/- ನ್ನು ಜಮೆ ಮಾಡುವಂತೆ ಖಾತೆ ನಂಬ್ರವನ್ನು ನೀಡಿದ್ದು, ಅದಕ್ಕೆ ದಿನಾಂಕ 03.11.2022 ರಂದು ಪಿರ್ಯಾದಿದಾರರು ಹಣ ಜಮೆ ಮಾಡಿರುತ್ತಾರೆ. ಆ ಬಳಿಕ ಯಾರೋ ಅಪರಿಚಿತ ವ್ಯಕ್ತಿಗಳು ಮುದ್ರಾ ಲೋನ್ ಸಂಸ್ಥೆಯಿಂದ ಎಂದು ಪಿರ್ಯಾದಿದಾರರನ್ನು ನಂಬಿಸಿ, ಅಪರಿಚಿತ ನಂಬ್ರಗಳಿಂದ ಪಿರ್ಯಾದಿದಾರರಿಗೆ ಕರೆ ಮಾಡಿ ಪ್ರೋಸೆಸ್‌ ಚಾರ್ಜ್, ಇನ್ಸುರೆನ್ಸ್ ಚಾರ್ಜ, ಎನ್.ಓ.ಸಿ, ಆರ್.ಬಿ.ಐ ಟ್ಯಾಕ್ಸ್, ಕಮಿಷನ್‌ ಇತ್ಯಾದಿಗಳಿಗೆ ಹಣ ಕಟ್ಟುವಂತೆ ತಿಳಿಸಿ ದಿನಾಂಕ: 03.11.2022 ರಿಂದ  ದಿನಾಂಕ: 10.11.2022 ರ ತನಕ ಆರೋಪಿಗಳು ತಿಳಿಸಿದ ವಿವಿಧ ಖಾತೆಗಳಿಗೆ ಪಿರ್ಯಾದಿದಾರರು ಅವರ ಹಾಗೂ ಅವರ ಹೆಂಡತಿಯ ಆಕ್ಯಿಸ್ ಬ್ಯಾಂಕ್ ಕಾರ್ಕಳ ಖಾತೆಯ ಉಳಿತಾಯ ಖಾತೆಯಿಂದ ಇಂಟರ್‌ನೆಟ್‌ ಬ್ಯಾಕಿಂಗ್‌ ಮುಖೇನಾ ಹಂತ ಹಂತವಾಗಿ ಒಟ್ಟು ರೂ,2,38,420/- ಹಣವನ್ನು ಪಡೆದು, ಸಾಲವನ್ನು ನೀಡಿದೇ, ಪಿರ್ಯಾದಿದಾರರು ಕಟ್ಟಿದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 89/2022 ಕಲಂ:  66(C), 66(D) ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ ‌

  • ಕೋಟ: ಪಿರ್ಯಾದಿ ರಾಮ ದೇವ ಕಾರಂತ ಇವರ ಅಕ್ಕ ಮೃತ ನಾಗವೇಣಿ (84) ರವರು ದಿನಾಂಕ 19/11/2022 ರಂದು ಸಂಜೆ ಸುಮಾರು 6.30 ಗಂಟೆಯ ಸಮಯಕ್ಕೆ ಮನೆಯ ಬಳಿಯಲ್ಲಿರುವ ದೈವಸ್ಥಾನದಲ್ಲಿ ದೇವರಿಗೆ ದೀಪ ಇಡುವಾಗ ಆಕಸ್ಮಿಕವಾಗಿ ಬೆಂಕಿ ಸೀರೆಗೆ ತಗುಲಿ ಸುಟ್ಟಿದ್ದು ಕೂಡಲೇ ಚಿಕಿತ್ಸೆಯ ಬಗ್ಗೆ  ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿದ್ದು,  ಚಿಕಿತ್ಸೆಯಲ್ಲಿರುತ್ತಾ  ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ 24/11/2022 ರಂದು ಸಂಜೆ 6.15 ಗಂಟೆಗೆ  ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ  ಪೊಲೀಸ್‌ ಠಾಣೆ ಯು.ಡಿ.ಆರ್ 50/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 25-11-2022 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080