ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಶೇಖರ ಪಿ (54), ತಂದೆ: ದಿ. ತಿಮ್ಮ, ವಾಸ:ಮೂಡಹಡು ಮೂಡಹಡು ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 22/11/202 ರಂದು ತನ್ನ ಮಾವ ಭಾಸ್ಕರ ರವರನ್ನು ತನ್ನ ಮನೆಯಿಂದ ಅವರ ಮನೆಯಾದ ಉದ್ಯಾವರಕ್ಕೆ ಹೋಗಲು ಬಸ್ಸಿಗೆ ಕಳುಹಿಸಲು ಸಾಸ್ತಾನ  ಬಸ್ ನಿಲ್ದಾಣಕ್ಕೆ ಬಂದು ನಿಂತಿದ್ದಾಗ  ಕುಂದಾಪುರದಿಂದ ಉಡುಪಿ ಕಡೆಗೆ ಹೋಗುವ KA-20-AA-8081ನೇ ನಂಬ್ರದ ಬಸ್ ಬಂದಿದ್ದು ಅದರಲ್ಲಿ ಮಾವನವರನ್ನು ಹತ್ತಿಸಲು ಹೋಗಿ ಬಸ್ಸಿನ ಹಿಂದಿನ ಬಾಗಿಲಿನಿಂದ ಮಾವ ಭಾಸ್ಕರರವರು ಬಸ್ಸಿನ ಮೆಟ್ಟಿಲು ಹತ್ತುತ್ತಿರುವಾಗ ಸುಮಾರು 5:30 ಗಂಟೆಗೆ ಏಕಾಏಕಿ ಬಸ್ಸನ್ನು ನಿರ್ವಾಹಕ ಪ್ರಜ್ವಲ್ ರವರ ಸೂಚನೆಯಂತೆ ಬಸ್ಸಿನ ಚಾಲಕ ಆಶ್ರಯ ಬಸ್ಸನ್ನು ಚಲಾಯಿಸಿದ ಪರಿಣಾಮ ಭಾಸ್ಕರವರು ರಸ್ತೆಗೆ ಬಿದ್ದು ತಲೆಯ ಹಿಂಬದಿ ರಕ್ತಗಾಯವಾಗಿದ್ದು  ಮತ್ತು ಬಲ ಕಣ್ಣಿನ ಸುತ್ತ ಮುತ್ತ ರಕ್ತ ಹೆಪ್ಪುಗಟ್ಟಿದ  ಗಾಯವಾಗಿರುತ್ತದೆ. ಪಿರ್ಯಾದಿದಾರರು ಆಸ್ಪತ್ರೆಯಲ್ಲಿ ಗಾಯಾಳುವಿನ ಆರೈಕೆಯಲ್ಲಿ ಇದ್ದುದರಿಂದ ದೂರು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 199/2021 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಬಿ.ಎಸ್. ಮುರಹರಿ ರಾವ್ (70), ತಂದೆ: ಬಿ.ಜೆ ಸೇತುರಾಮ ರಾವ್. ವಾಸ: 8/72ಎ-3, ದೇವಿ ಕೃಪಾ, ಮಸೀದಿ ರಸ್ತೆ, ಅಂಚನ್ ಫ್ಯಾಕ್ಟರಿ ಬಳಿ, ಪಡುಬಿದ್ರಿ ಅಂಚೆ, ನಡ್ಸಾಲು  ಗ್ರಾಮ, ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 16/11/2021 ರಂದು ಸಂಜೆ ಪಡುಬಿದ್ರಿ ಪೇಟೆಯಲ್ಲಿ ಹೂವು ಖರೀದಿಸಿ ಪೇಟೆಯಲ್ಲಿರುವಾಗ ಅವರ ಚಿಕ್ಕಪ್ಪನ ಮಗ ಬಿ ಎ ಸತೀಶ್ ರಾವ್(50) ರವರೂ ಸಹ ಪೇಟೆಗೆ ಬಂದಿದ್ದು, ಉಡುಪಿ ಬಸ್ಸು ನಿಲ್ದಾಣದ ಬಳಿ ಪಿರ್ಯಾದಿದಾರರ ಬಳಿ ಮಾತನಾಡಿ 18:30 ಗಂಟೆಯ ವೇಳೆಗೆ ಹೂವು ತರಲು ಹೋಗುವುದಾಗಿ ಹೇಳಿ ರಸ್ತೆಯನ್ನು ದಾಟಿ ಪೂರ್ವ ಬದಿಯ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ-66 ರ ಡಿವೈಡರ್ ಬಳಿ ಸರ್ವಿಸ್ ರಸ್ತೆಗೆ ಇಳಿಯುತ್ತಿರುವ ಸಮಯ KA-19-HB-5467 ನೇ ನಂಬ್ರದ ಸ್ಕೂಟಿ ಸವಾರ ಶರವಣ ಕುಮಾರ್ ತನ್ನ ಸ್ಕೂಟಿಯನ್ನು ಹೆಡ್‌‌ಲೈಟ್ ಇಲ್ಲದೇ ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೇ  ಬಿ.ಎ ಸತೀಶ್ ರಾವ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ, ಬಿ ಎ ಸತೀಶ್ ರಾವ್ ರವರು ರಸ್ತೆಗೆ ಬಿದ್ದುದಲ್ಲದೇ, ಸ್ಕೂಟಿ ಸವಾರ ಸಹ ಸ್ಕೂಟಿ ಸಮೇತ ರಸ್ತೆಗೆ ಬಿದ್ದಿರುತ್ತಾನೆ. ಅಪಘಾತದಿಂದ ಬಿ ಎ ಸತೀಶ್ ರಾವ್ ರವರ ಎಡ ತೊಡೆಗೆ ಮೂಳೆ ಮುರಿತದ ಒಳ ಜಖಂ ಮತ್ತು ಎಡ ಕೈ ಭುಜಕ್ಕೆ ಪೆಟ್ಟಾಗಿರುತ್ತದೆ. ನಂತರ ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಪಡುಬಿದ್ರಿಯ ಸಿದ್ದಿ ವಿನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಮಂಗಳೂರಿನ ವೆನ್‌‌ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲಸಿರುವುದಾಗಿದೆ. ಸ್ಕೂಟಿ ಸವಾರ ಮೊದಲು ಚಿಕಿತ್ಸೆಯ ಖರ್ಚು ವೆಚ್ಛವನ್ನು ನೀಡುವುದಾಗಿ ಹೇಳಿ, ನಂತರ ನಿರಾಕರಿಸಿರುವುದರಿಂದ ದೂರು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 110/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ತಾರೀಕು 24/11/2021 ರಂದು ಬೆಳಿಗ್ಗೆ 08:45 ಗಂಟೆಗೆ ಪಿರ್ಯಾದಿದಾರರಾದ ರಹೀಮ್ (31), ತಂದೆ: ಶಾಬುದ್ದೀನ್, ವಾಸ: ಅಯ್ಯಪ್ಪನಗರ, ಕುಕ್ಕುಂದೂರು ಗ್ರಾಮ, ಕಾರ್ಕಳ ಇವರು ಕಾರ್ಕಳದಿಂದ ಬಜಗೋಳಿಗೆ ಹೋಗುತ್ತಾ ಕಾರ್ಕಳ ಕಸಬಾದ  ಗೋಮಟಬೆಟ್ಟ ಕ್ರಾಸ್ , ಗ್ಯಾಸ್ ಗೋಡೌನ್ ಬಳಿ ತಲುಪುವಾಗ ಸುಜುಕಿ ದ್ವಿಚಕ್ರ ವಾಹನ KA-20-S-9335 ನ್ನು ಅದರ ಸವಾರ ಸಂತೋಷ ಕಾರ್ಕಳ ಕಡೆಯಿಂದ ಮಿಯಾರು  ಕಡೆಗೆ  ಅತೀ ವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ತೀರಾ ಬಲಬದಿಗೆ  ಚಲಾಯಿಸಿ ಎದುರಿನಿಂದ   ಮಿಯಾರು ಕಡೆಯಿಂದ ಕಾರ್ಕಳ ಕಡೆಗೆ  ಅಬ್ಬು ಸಾಹೇಬ್ ಎಂಬುವವರು ಸವಾರಿ ಮಾಡಿಕೊಂಡು ಬರುತ್ತಿದ್ದ ಬಜಾಜ್ ಪಲ್ಸರ್  ಮೋಟಾರ್ ಸೈಕಲ್  KA-20-EU-2065 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನಗಳೊಂದಿಗೆ ರಸ್ತೆಗೆ ಬಿದ್ದ ಪರಿಣಾಮ ಅಬ್ಬು ಸಾಹೇಬ್ ರವರಿಗೆ ತಲೆಗೆ, ಮುಖಕ್ಕೆ ಹಾಗೂ ಕೈಕಾಲುಗಳಿಗೆ ರಕ್ತಗಾಯವಾಗಿದ್ದು ಮಾತನಾಡುತ್ತಿರಲಿಲ್ಲ ,ಸಂತೋಷ ಕುಮಾರವರಿಗೆ ಬೆರಳಿಗೆ  ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 155/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕೋಟ: ದಿನಾಂಕ 24/11/2021  ರಂದು ಪಿರ್ಯಾದಿದಾರರಾದ ರೋಹಿತ್‌ (26), ತಂದೆ: ಹರೀಶ, ವಾಸ:  ಲಕ್ಷ್ಮೀ ನಿವಾಸ, ಅಚ್ಲಾಡಿ ಗ್ರಾಮ, ಬ್ರಹ್ಮಾವರ  ತಾಲೂಕು, ಉಡುಪಿ ಜಿಲ್ಲೆ ಇವರು ಸ್ನೇಹಿತ ನಿರಂಜನ ಎಂಬುವವರೊಂದಿಗೆ ಮೋಟಾರ್‌ ಸೈಕಲ್‌ ನಂಬ್ರ KA-04-JM-6130 ನೇದರಲ್ಲಿ ಸಹಸವಾರನಾಗಿ ಕೋಟ ಮೂರಕೈ  ಜಂಕ್ಷನ್‌ನಲ್ಲಿ  ಕುಂದಾಪುರ-ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವಬದಿಯಲ್ಲಿ ಸೈಬ್ರಕಟ್ಟೆ-ಕೋಟ ಮೂರಕೈ ರಸ್ತೆಯಲ್ಲಿ ಮಧ್ಯಾಹ್ನ 1:45 ಗಂಟೆಗೆ ನಿಂತುಕೊಂಡಿರುವಾಗ ಕುಂದಾಪುರ  ಕಡೆಯಿಂದ ಕಾರ್‌ ನಂಬ್ರ KA-20-MD-5701 ನೇದನ್ನು ಅದರ   ಚಾಲಕ ಸುಬ್ರಹ್ಮಣ್ಯ ಆಚಾರ್ಯ ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರ ಎಡಬದಿಗೆ ಚಲಾಯಿಸಿಕೊಂಡು ಬಂದು ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ನಿರಂಜನ ಮತ್ತು ಸಹಸವಾರನಾಗಿದ್ದ ಪಿರ್ಯಾದಿದಾರರು  ಮೋಟಾರ್‌ ಸೈಕಲ್‌ ಸಮೇತ  ರಸ್ತೆಗೆ  ಬಿದ್ದಿದ್ದು ಪರಿಣಾಮ ನಿರಂಜನ  ರವರ ಬಲಕಾಲಿನ ಮೂಳೆ ಮುರಿತ ಹಾಗೂ ಎದೆಗೆ ಗುದ್ದಿದ ಗಾಯವಾಗಿರುತ್ತದೆ. ಪಿರ್ಯಾದಿದಾರರ ಎಡಕಾಲಿನ ಹಾಗೂ ತಲೆಯ ಹಿಂಬದಿ  ತೀವ್ರ  ಸ್ವರೂಪದ  ಗಾಯವಾಗಿರುತ್ತದೆ. ಸ್ಥಳದಲ್ಲಿ  ಸೇರಿದ  ಸಾರ್ವಜನಿಕರು ಅಂಬುಲೆನ್ಸ್‌ ನಲ್ಲಿ ಚಿಕಿತ್ಸೆ ಬಗ್ಗೆ ಉಡುಪಿ ಹೈಟೆಕ್‌ ಆಸ್ಪತ್ರೆಗೆ  ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 200/2021 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ನಾರಾಯಣ ಬರ್ಮನ್ (37), ತಂದೆ:ಸಚಿನ್ ಬರ್ಮನ್, ವಾಸ: ಚೋಟೊ ಕಿಸ್ರಿಬರಿ , ಜಯನ್ ದಾಹೋ, ಕೊಚ್ ಬಿಹಾರ್ ವೆಸ್ಟ್ ಬಂಗಾಲ್ ಇವರ ಜೊತೆ ಬೈಂದೂರು ತಾಲೂಕು ಪಡುವರಿ ಗ್ರಾಮದ ವತ್ತಿನೆಣೆ ಎಂಬಲ್ಲಿ  ಕಟ್ಟಡ ನಿರ್ಮಾಣ ಕೆಲಸವನ್ನು ಮಾಡಿಕೊಂಡಿದ್ದ  ಪಶ್ಚಿಮ ಬಂಗಾಳ ಮೂಲದ ಅಕಿಲ್ ಚಂದ್ರ ಬರಾಯಿ (50)  ಎಂಬುವವರಿಗೆ ದಿನಾಂಕ 20/11/2021 ರಂದು ಕೋವಿಡ್ ವ್ಯಾಕ್ಸಿನ್ ಹಾಕಿಕೊಂಡಿದ್ದರಿಂದ ಜ್ವರ ಬಂದಿದ್ದು  ಕಟ್ಟಡದ ರೂಮಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ದಿನಾಂಕ 24/11/2021 ರಂದು ಬೆಳಿಗ್ಗೆ  08:00 ಗಂಟೆಗೆ ಕಟ್ಟಡ ನಿರ್ಮಾಣ ಕೆಲಸಕ್ಕೆ ಬಂದವರು ಅನಾರೋಗ್ಯದ ಕಾರಣ ಕೆಲಸ ಮಾಡದೇ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಒಂದು ಕೋಣೆಯಲ್ಲಿ ವಿಶ್ರಾಂತಿಯಲ್ಲಿದ್ದವರು ಪಿರ್ಯಾದುದಾರರು ಮಧ್ಯಾಹ್ನ 1:00 ಗಂಟೆಗೆ ರೂಮಿಗೆ ಊಟಕ್ಕೆ ಬಂದು ಊಟ ಮಾಡಲು ಅಕಿಲ್ ಚಂದ್ರ ಬರಾಯಿ ಯವರನ್ನು ಎಬ್ಬಿಸಿದಾಗ ಮಾತನಾಡದೇ ಇದ್ದುದರಿಂದ  ಚಿಕಿತ್ಸೆ ಬಗ್ಗೆ ಬೈಂದೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  ಕರೆ ತಂದಲ್ಲಿ ಪರೀಕ್ಷೀಸಿದ  ವೈದ್ಯರು ಅಕಿಲ್ ಚಂದ್ರ ಬರಾಯಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 48/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಚೇತನ ಎಂ ಎನ್‌ (34), ತಂದೆ: ಎಂ. ನಾರಾಯಣ ಯಾದವ್‌, ಗಂಡ: ನವೀನ್‌ವೈ ಎಲ್‌., ವಾಸ: ಸಚೇನ ಮಾನ್ಯ, ಇಂದಿರಾ ನಗರದ ಬಳಿ, ಕೋಟೆ ಗ್ರಾಮ, ಕಟಪಾಡಿ, ಉಡುಪಿ ಜಿಲ್ಲೆ ಇವರು ದಿನಾಂಕ 25/01/2019 ರಂದು 1ನೇ ಆರೋಪಿ ನವೀನ್‌ವೈ. ಎಲ್‌. (34), ತಂದೆ: ಎಂ.ಓ. ಲಕ್ಷ್ಮೀನಾರಾಯಣ ಇವರನ್ನು ಮದುವೆಯಾಗಿದ್ದು, ಮದುವೆ ಆದ 3 ತಿಂಗಳು ಅನ್ಯೋನ್ಯತೆಯಿಂದ ಜೀವನ ನಡೆಸಿಕೊಂಡಿದ್ದು, ನಂತರ ಆರೋಪಿಗಳಾದ 2. ಸೌಭಾಗ್ಯಮ್ಮ (68), ಗಂಡ: ಎಂ.ಓ. ಲಕ್ಷ್ಮೀನಾರಾಯಣ, 3. ಎಂ.ಓ. ಲಕ್ಷ್ಮೀನಾರಾಯಣ (75), ತಂದೆ: ಓರಗಂಟಪ್ಪ ಎಲ್ಲರ ವಾಸ: ನಂ: 25, 1ನೇ ಮುಖ್ಯ ರಸ್ತೆ, 25ನೇ ಕ್ರಾಸ್‌, ಮಾರುತಿ ನಗರ, ಯಲಹಂಕ- ಬೆಂಗಳೂರು ಇವರು ಪಿರ್ಯಾದಿದಾರರು ಮದುವೆಯ ಸಮಯದಲ್ಲಿ ಚಿನ್ನ ಹಾಗೂ ವರದಕ್ಷಿಣೆ ಕೊಟ್ಟಿಲ್ಲ ಎನ್ನುವ ಕ್ಷುಲ್ಲಕ ನೆಪ ಒಡ್ಡಿ ಫಿರ್ಯಾದಿದಾರರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡಲು ಪ್ರಾರಂಭಿಸಿರುತ್ತಾರೆ. 2 ಮತ್ತು 3ನೇ ಆರೋಪಿತರು 1ನೇ ಆರೋಪಿಗೆ ದುರ್ಭೋದನೆ ಮಾಡಿ 1ನೇ ಆರೋಪಿ ಪಿರ್ಯಾದಿದಾರರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುವಂತೆ ಮಾಡಿದ್ದು, ಪಿರ್ಯಾದಿದಾರರಿಂದ ಮನೆಯ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದ್ದರು. ಮದುವೆ ಖರ್ಚ್ ನ್ನು ಪಿರ್ಯಾದಿದಾರರ ಮನೆಯವರು ಭರಿಸಿದ್ದು, ಆರೋಪಿಗಳು ಈಗ ಪಿರ್ಯಾದಿದಾರರಿಗೆ ಹೆಚ್ಚಿಗೆ 250 ಗ್ರಾಂ ಚಿನ್ನ ಮತ್ತು ವರದಕ್ಷಿಣೆ ಕೊಡಬೇಕೆಂದು ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುತ್ತಿದ್ದರು. ಆರೋಪಿತರು ಕೊಡುತ್ತಿದ್ದ ಹಿಂಸೆಯಿಂದ ಪಿರ್ಯಾದಿದಾರರ ಆರೋಗ್ಯ ತುಂಬಾ ಕೆಟ್ಟಿದ್ದು, ಪಿರ್ಯಾದಿದಾರರಿಗೆ ಬೆನ್ನುನೋವು ಹಾಗೂ ಸೊಂಟ ನೋವು ಶುರುವಾಗಿ ಪಿರ್ಯಾದಿದಾರರಿಗೆ ಮೊದಲಿನಂತೆ ಕೆಲಸ ಮಾಡಲು ಆಗದೇ ಇದ್ದುದನ್ನು ಗಮನಿಸಿ ಪಿರ್ಯಾದಿದಾರರನ್ನುಹಾಗೂ ಮಗುವನ್ನು ದಿನಾಂಕ 03/07/2021 ರಂದು ಮನೆಯಿಂದ ಹೊರಗೆ ಹಾಕಿರುತ್ತಾರೆ. ನಂತರ ದಿನಾಂಕ 24/10/2021 ರಂದು ಪಿರ್ಯಾದಿದಾರರು ತನ್ನ ತಂದೆಯೊಂದಿಗೆ ತನ್ನ ಗಂಡನ ಮನೆಗೆ ಹೋದಾಗ ಆರೋಪಿಗಳು ಪಿರ್ಯಾದಿದಾರರಿಗೆ ಮತ್ತು ಅವರ ತಂದೆಗೆ ಅವಾಚ್ಯ ಶಬ್ದಗಳಿಂದ ಬೈದು ಹೊರಗೆ ಹೋಗುವಂತೆ ಹೇಳಿರುತ್ತಾರೆ. ದಿನಾಂಕ: 21/11/2021 ರಂದು ಸಂಜೆ 6:00 ಗಂಟೆಗೆ ಆರೋಪಿಗಳೂ ಸಮಾನ ಉದ್ದೇಶದಿಂದ ಅಕ್ರಮ ಕೂಟ ಕಟ್ಟಿಕೊಂಡು ಪಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ಕೈಯಿಂದ ಪಿರ್ಯಾದಿದಾರರಿಗೆ ಹೊಡೆದು ಮಗುವನ್ನು ಬಲತ್ಕಾರವಾಗಿ ಎಳೆದು ವರದಕ್ಷಿಣೆ ಮತ್ತು ಹೆಚ್ಚಿನ ಚಿನ್ನವನ್ನು ಕೊಡಬೇಕೆಂದು ಬೆದರಿಸಿ ಅವಾಚ್ಯ ಶಬ್ದಗಳಿಂದ ಬೈದು ಪೊಲೀಸರಿಗೆ ತಿಳಿಸಿದರೆ ಕೊಂದು ಮುಗಿಸುವುದಾಗಿ ಕೊಲೆ ಬೆದರಿಕೆ ಹಾಕಿ ಹೋಗಿರುವುದಾಗಿ ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2021 ಕಲಂ: 498(A), 504, 323, 506, 448 R/w 34 ಐಪಿಸಿ & Sec 4 D.P  Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಕಾರ್ತಿಕ (26), ತಂದೆ: ರವಿ, ವಾಸ: ರಾಜೀವನಗರ ಆಶ್ರಯ ಕಾಲೋನಿ ಶಕ್ತಿನಗರ  ಪದವು ಗ್ರಾಮ ಮಂಗಳೂರು ಇವರ ಪರಿಚಯದ ಕೊಳಲಗಿರಿ ಚಕ್ಕುಲಿಕಟ್ಟೆ  ನಿವಾಸಿ ಶ್ರೀಮತಿ ಲಕ್ಷ್ಮೀ ಯವರ ಜೊತೆ ವಾಸ್ತವ್ಯ ಇದ್ದ ರಂಜಿತ್ ಪಿಂಟೊ ಇತನು ಮೊಬೈಲ್ ನಲ್ಲಿ ಲಕ್ಷ್ಮೀ ಹಾಗೂ ಶಾಂಭವಿರವರಿಗೆ  ಅವಾಚ್ಯ ಶಬ್ದಗಳಿಂದ ಬೈದು ಮಾತನಾಡುತ್ತಿದ್ದು ಈ ವಿಚಾರವನ್ನು ಶಾಂಭವಿ ಯವರು ಪಿರ್ಯಾದಿದಾರರಿಗೆ ತಿಳಿಸಿದ್ದು  ದಿನಾಂಕ 24/11/2021 ರಂದು ರಂಜಿತ್  ಪಿಂಟೋಗೆ  ಪೋನ್ ಕರೆ ಮಾಡಿ ಅಚಾಚ್ಯ ಶಬ್ದಗಳಿಂದ ನಿಂದಿಸಿದ ಬಗ್ಗೆ ಪಿರ್ಯಾದಿದಾರರು ರಂಜಿತ್ ಪಿಂಟೋರವರಲ್ಲಿ ಪೋನ್ ನಲ್ಲಿ ಕೇಳಿದಾಗ ಆತನು ಸಂತೆಕಟ್ಟೆಗೆ ಬರುವಂತೆ ತಿಳಿಸಿದಂತೆ ,ಪಿರ್ಯಾದಿದಾರರು ಕೊಳಲಗಿರಿಯಿಂದ ಸಂತೆಕಟ್ಟೆಗೆ ಬಂದು ಸ್ಕೂಟರಿನಲ್ಲಿ  ರಂಜಿತ್  ಪಿಂಟೋ ರವರನ್ನು ಅವರ ಮನೆಯಾದ ಕಲ್ಯಾಣಪುರಕ್ಕೆ ಕರೆದುಕೊಂಡು ಹೋಗಿದ್ದು , ಸಂಜೆ 4:30 ಗಂಟೆ ಸಮಯಕ್ಕೆ  ರಂಜಿತ್ ಪಿಂಟೋ ಹಾಗೂ ಪಿರ್ಯಾದಿದಾರರಿಗೂ ಮಾತಿಗೆ ಮಾತು ಬೆಳೆದು ರಂಜಿತ್ ಪಿಂಟೋ ಮನೆಯಲ್ಲಿದ್ದ ಕತ್ತಿಯಿಂದ ಪಿರ್ಯಾದಿದಾರರಿಗೆ ಎದೆಯ ಬಲಬದಿಗೆ , ಎಡಕೈಯ ಮೊಣಗಂಟಿನ ಮೇಲೆ, ಹಾಗೂ ಬಲಕೈಯ ಹಸ್ತಕ್ಕೆ  ಕತ್ತಿಯಿಂದ ಕಡಿದು ಗಾಯ ಉಂಟುಮಾಡಿದ್ದು ಗಾಯಗೊಂಡ ಪಿರ್ಯಾದಿದಾರರನ್ನು  ಶಾಂಭವಿಯ ಅಕ್ಕನ ಗಂಡ  ಸಂದೀಪರವರು  ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪಿರ್ಯಾದಿದಾರರು  ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 126 /2021 ಕಲಂ: 504, 324  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಬ್ರಹ್ಮಾವರ: ಪಿರ್ಯಾದಿದಾರರಾದ ಕೃಷ್ಣ (38), ತಂದೆ: ತಬಟಿ, ವಾಸ: ಮನೆ ನಂಬ್ರ 1-84(1) ಕೊರಗ ಕಾಲೋನಿ ಮೈಕ್ರೋ ಇನ್‌‌ ಸಮೀಪ,‌ಇನ್ನಾ ಗ್ರಾಮ ಕಾರ್ಕಳ ತಾಲೂಕು ಇವರಿಗೆ ಎಸ್‌‌‌ಸಿ/ಎಸ್‌‌ಟಿ ಕೋಟಾದಡಿಯಲ್ಲಿ ಜಿಲ್ಲಾಡಳಿತವು ಸಾಂಪ್ರದಾಯಿಕ ಮರಳುಗಾರಿಕೆ ನಡೆಸಲು  ಪರವಾನಿಗೆ ನೀಡಿದ್ದು  ಅದರಂತೆ  ಪಿರ್ಯಾದಿದಾರರು ಹಾರಾಡಿ ಗ್ರಾಮದ ಸ್ವರ್ಣ ನದಿ ತೀರದ  ಕುಕ್ಕುಡೆ ಭಜನಾ ಮಂದಿರದ ಬಳಿ ಇರುವ ಉಲ್ಲಾಸ್‌ ಶೆಟ್ಟಿ  ಎಂಬುವವರ  ಪಟ್ಟಾ ಸ್ಧಳವನ್ನು ಬಾಡಿಗೆ ಪಡೆದು ಅಲ್ಲಿ  ಮರಳು ಧಕ್ಕೆಯನ್ನು ನಿರ್ಮಿಸಿದ್ದು, ದಿನಾಂಕ 21/11/2021 ರಂದು ಸಂಜೆ 5:00 ಗಂಟೆಗೆ ಪಿರ್ಯಾದಿದಾರರು ಅವರ ಧಕ್ಕೆಯಲ್ಲಿ  ದೋಣಿಯನ್ನು ಕಟ್ಟುತ್ತಿರುವಾಗ ಏಕಾಏಕಿ  ಆರೋಪಿಗಳಾದ 1ನೇ ದಯಾನಂದ , 2ನೇ ಸುಖಾನಂದ, 3ನೇ ಉದಯ ಸುವರ್ಣ ಹಾಗೂ ಇತರೇ ಇಬ್ಬರೂ  ವ್ಯಕ್ತಿಗಳಿದ್ದು ಅದರಲ್ಲಿ 1ನೇ ಆರೋಪಿಯ ಕೈಯಲ್ಲಿ ಕತ್ತಿ ಯಿದ್ದು 2ನೇ ಆರೋಪಿಯ ಕೈಯಲ್ಲಿ ದೊಣ್ಣೆ ಇದ್ದು, ಅದರಿಂದ  ಪಿರ್ಯಾದಿದಾರರಿಗೆ ಹೊಡೆಯಲುಯತ್ನಿಸಿರುತ್ತಾರೆ.  1ನೇ ಆರೋಪಿಯು  ಕತ್ತಿಯಿಂದ  ಕಡಿಯಲು ಬಂದಿದ್ದು  2 & 3ನೇ ಆರೋಪಿಗಳು ಪಿರ್ಯಾದಿದಾರರ ಕುತ್ತಿಗೆಯನ್ನು ಬಲವಾಗಿ ಅದುಮಿ ಹಿಡಿದಿದ್ದು  ನೀರಿನಲ್ಲಿ  ಮುಳುಗಿಸಲು ಪ್ರಯತ್ನಿಸಿರುತ್ತಾರೆ. ನಂತರ 1ನೇ ಆರೋಪಿಯು ಪಿರ್ಯಾದಿದಾರರನ್ನು ಕೊಲ್ಲುತ್ತೇನೆಂದು ಕತ್ತಿ ಹಿಡಿದು ಮುನ್ನುಗಿ ಬರುವಾಗ ಪಿರ್ಯಾದಿದಾರರು ಜೀವ ಭಯದಿಂದ ಓಡಿ ಹೋಗಲು ಪ್ರಯತ್ನಿಸಿದ್ದು  ಆ ಸಂದರ್ಭದಲ್ಲಿ  ಪಿರ್ಯಾದಿದಾರರು ಪಜ್ಞೆ ತಪ್ಪಿದಂತಾಗುವ ಮಟ್ಟದಲ್ಲಿದ್ದು  ಆಗ ಆರೋಪಿಗಳು ಅವರನ್ನು ಕೊಲ್ಲುವ ಉದ್ದೇಶದಿಂದ  ನಿಂದನೆ ಮಾಡಿ  ಹಲ್ಲೆಗೆ ಪ್ರಯತ್ನಿಸಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾದ ಕ್ರಮಾಂಕ 190/2021 ಕಲಂ: 143, 147, 148, 323, 504, 506 ಜೊತೆಗೆ 149 ಐಪಿಸಿ ಮತ್ತು ಕಲಂ: 3(1)(r)(s), 3(2) (v-a) SC/ST ACT  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 24/11/2021 ರಂದು ಮುಂಜಾನೆ 00:30 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಸಂದೀಪ್ (28), ತಂದೆ: ದಾಮೋದರ್ ಕುಂದರ್, ವಾಸ : “ ಅಮ್ಮ ಹೌಸ್” ಮಾರುತಿ ನಗರ ಪರ್ಕಳ, ಶೆಟ್ಟಿಬೆಟ್ಟು, ಹೆರ್ಗ ಗ್ರಾಮ, ಉಡುಪಿ ತಾಲೂಕು ಇವರು ಈ ಹಿಂದೆ ಉಡುಪಿಯಲ್ಲಿನ ಬಟ್ಟೆ ಅಂಗಡಿಯ ಬ್ಯುಸಿನೆಸ್ ಪಾರ್ಟನರ್ ಆಗಿದ್ದ ಈಶ್ವರನಗರದ ಹರೀಶ್ ಪೂಜಾರಿ ಎಂಬಾತನು ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಪಿರ್ಯಾದಿದಾರರ ಮನೆಯ ಕಾಲಿಂಗ್ ಬೆಲ್ ಮಾಡಿದ್ದು, ಪಿರ್ಯಾದಿದಾರರು ಬಾಗಿಲು ತೆರೆದು ಹೊರಗೆ ಬರುತ್ತಿದ್ದಾಗ ಹರೀಶ್ ಪೂಜಾರಿ ಪಿರ್ಯಾದಿದಾರನ್ನು ದೂಡಿಕೊಂಡು ಮನೆಯ ಒಳಗೆ ಬಂದು ಏನು ನನ್ನಲ್ಲಿ ದುಡ್ಡು ಕೇಳುತ್ತೀಯ ನಿನಗೆ ಹಣ ಕೊಡುವುದಿಲ್ಲ ಏನು ಮಾಡುತ್ತೀಯ ಎಂದು ಹೇಳಿ ಪಿರ್ಯಾದಿದಾರರ ಟೀಶರ್ಟ್ ನ ಕಾಲರ್ ಹಿಡಿದು ನಿನ್ನನ್ನು ಇದೇ ಮರದ ರೀಪಿನಿಂದ ಹೊಡೆದು ಕೊಂದೇ ಬಿಡುತ್ತೇನೆ ಎಂದು ಹೇಳಿದ್ದು, ಆ ಸಮಯ ಮಲಗಿದ್ದ ಪಿರ್ಯಾದಿದಾರರ ಅಣ್ಣ ಭರತ್ ಎದ್ದು ಬಂದು ಹರೀಶನಿಂದ ಬಿಡಿಸಿದ್ದು, ಆತನಿಗೂ ಕೂಡ ಹೊಡೆಯಲು ಬಂದಿರುತ್ತಾನೆ. ಗಲಾಟೆ ಶಬ್ದ ಕೇಳಿ ಪಿರ್ಯಾದಿದಾರರ ಸ್ನೇಹಿತ ಲೋಹಿತ್ ಹಾಗು ಅಕ್ಕಪಕ್ಕದವರು ಬರುತ್ತಿರುವುದನ್ನು ನೋಡಿ ನಿಮ್ಮನ್ನೆಲ್ಲ ಮುಂದಕ್ಕೆ ನೋಡಿಕೊಳ್ಳುತ್ತೇನೆ ಎಂದು ಹೇಳಿ ಆತನು ಬಂದಿದ್ದ ಮೋಟಾರು ಸೈಕಲಿನಲ್ಲಿ ಹೋಗಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 151/2021 ಕಲಂ: 447, 448, 504, 506(2) ಜೋತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-11-2021 10:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080