ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಫಿರ್ಯಾದಿ ಮಹಮ್ಮದ್ ಅಶ್ರಫ್ ಇವರು ದಿನಾಂಕ 24-11-2021 ರಂದು ರಾತ್ರಿ  19-30 ಗಂಟೆಗೆ  ಕುಕ್ಕುಂದೂರು ಗ್ರಾಮದ ದುರ್ಗಾನಗರ ಅಶ್ವಥ ಕಟ್ಟೆ ಹತ್ತಿರ ದಿನಸಿ ಅಂಗಡಿಯಲ್ಲಿ ಇರುವಾಗ ಫಿರ್ಯಾದುದಾರರ ಅಣ್ಣ ಮಹಮ್ಮದ್ ರಫೀಕ್ ಎಂಬವರು ಇನ್ನೊಬ್ಬ ಅಣ್ಣ ನಜೀರ್ ಎಂಬವರ ಜೊತೆಗೆ ಓಮಿನಿ ವಾಹನದಲ್ಲಿ  ಉಡುಪಿಯಿಂದ ಮನೆಗೆ ಹೋಗಲು ಬರುತ್ತಿದ್ದವರು  ದುರ್ಗಾನಗರ ಅಶ್ವಥಕಟ್ಟೆ ಹತ್ತಿರ ವಾಹನ ನಿಲ್ಲಿಸಿ ಮಹಮ್ಮದ್ ರಫೀಕ್ ರಸ್ತೆ ದಾಟಲು  ನಿಂತುಕೊಂಡಿರುವಾಗ ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಕಾರು KA20P9880 ಅನ್ನು ಅದರ ಚಾಲಕ ಅರವಿಂದ ಕಾಮತ್ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆದಾಟಲು ನಿಂತಿದ್ದ  ಮಹಮ್ಮದ್ ರಫೀಕ್‌ವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಮಹಮ್ಮದ್  ರಫೀಕ್ ರವರ ತಲೆಗೆ ಹಿಂಬದಿ ತೀವ್ರ ರಕ್ತಗಾಯವಾಗಿದ್ದು ಎಡಕೈ ಮೊಣಗಂಟಿಗೆ ರಕ್ತಗಾಯವಾಗಿದ್ದು ಅವರನ್ನು ಚಿಕಿತ್ಸೆ ಬಗ್ಗೆ  ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ತಾರೀಕು 25-11-2021 ರಂದು ಬೆಳಿಗ್ಗೆ 08-20 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಈ  ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 156/2021 ಕಲಂ 279, 304(A)ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 25/11/2021 ರಂದು 10:15 ಗಂಟೆಗೆ ಶಿವಳ್ಳಿ ಗ್ರಾಮದ ಲಕ್ಷ್ಮಿಂದ್ರ ನಗರ Bachus Inn Bar  ಬಳಿ ಪಿರ್ಯಾದಿ ಶರತ್ ಇವರ ಬಾಬ್ತು KA 20 EE 3027 ನೇ ಮೋಟಾರು ಸೈಕಲ್ ನಲ್ಲಿ ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಹೋಗುತ್ತಿರುವಾಗ ಹಿಂಬದಿಯಿಂದ KA20 EU 9428 ನೇ FZ ಬೈಕ್ ಚಾಲಕ ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಕೈಯ ಹೆಬ್ಬೆರಳಿಗೆ ಮೂಳೆ ಮುರಿತದ ಗಾಯ ಉಂಟಾಗಿರುತ್ತದೆ ಹಾಗೂ ಮೋಟಾರು ಸೈಕಲ್ ಎದುರುಭಾಗ ಸಂಪೂರ್ಣ ಜಖಂ ಗೊಂಡಿರುತ್ತದೆ. ಈ  ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 152/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಕಾಪು: ರಾಘವೇಂದ್ರ ಸಿ, ಪಿ.ಎಸ್.ಐ. ಕಾಪು ಪೊಲೀಸ್ ಠಾಣೆ ಇವರು ದಿನಾಂಕ 25.11.2021 ರಂದು ರೌಂಡ್ಸ್ ನಲ್ಲಿರುವಾಗ ಮೂಡಬೆಟ್ಟು  ಗ್ರಾಮದ ಲತಾ ವೈನ್ಸ್  ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಡುತ್ತಿರುವುದಾಗಿ 11.30 ಗಂಟೆಗೆ ಬೀಟ್ ನಲ್ಲಿರುವ ಬೀಟ್ ಸಿಬ್ಬಂದಿ ಅರುಣ ಕುಮಾರ ಕೆ ಎಂ, ರವರು ಮಾಹಿತಿ ನೀಡಿದಂತೆ ಹೆಚ್ ಸಿ, ಮಹಾಬಲ ಶೆಟ್ಟಿಗಾರ ರವರೊಂದಿಗೆ  ಸ್ಥಳಕ್ಕೆ ಹೊರಟು 11:45 ಗಂಟೆಗೆ ಕಟಪಾಡಿ ತಲುಪಿ ಬೀಟ್ ನಲ್ಲಿರುವ ಅರುಣ ಕುಮಾರ ಕೆ ಎಂ ಮತ್ತು ಕಟಪಾಡಿ ಹೊರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ದಯಾನಂದ ಎ ಎಸ್ ಐ ರವರನ್ನು ಕರೆದುಕೊಂಡು ಹೊರಟು 11.50 ಗಂಟೆಗೆ ಮಾಹಿತಿ ಬಂದ ಮೂಡಬೆಟ್ಟು ಗ್ರಾಮದ  ಲತಾ ವೈನ್ಸ್ ಸಮೀಪ ಹೋಗಿ ಸ್ಥಳೀಯ ಪಂಚರನ್ನು ಸ್ಥಳಕ್ಕೆ ಬರಮಾಡಿಕೊಂಡು ಮರೆಯಲ್ಲಿ ನಿಂತು ನೋಡಲಾಗಿ ಲತಾ ವೈನ್ಸ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು ಅವರಲ್ಲಿ ಓರ್ವ ವ್ಯಕ್ತಿ  ನೇರಳೆ ಬಣ್ಣದ ತುಂಬು ತೋಳಿನ ಶರ್ಟ್ & ಬಿಳಿ ಬಣ್ಣದ   ಪ್ಯಾಂಟ್ ಧರಿಸಿದ್ದ ವ್ಯಕ್ತಿಯು  ಕೈಯಲ್ಲಿ ಚೀಟಿ ಬರೆಯುತ್ತಾ 1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ  ಜೋರಾಗಿ ಹೇಳುತ್ತಿದ್ದನು. ಸಾರ್ವಜನಿಕರು ಹಣವನ್ನು ನಂಬ್ರಗಳ ಮೇಲೆ ಪಣವಾಗಿ ಕಟ್ಟುತ್ತಿದ್ದು ಸದ್ರಿ ವ್ಯಕ್ತಿಗಳು  ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸುತ್ತಿದ್ದು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ 12.00  ಗಂಟೆಗೆ ದಾಳಿ ನಡೆಸಿದಾಗ ಅಲ್ಲಿ ಹಣ ಕಟ್ಟಲು ಸೇರಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ಅವರನ್ನು ನೋಡಿ ಓಡಿ ಹೋಗಿದ್ದು ಮಟ್ಕಾ ಚೀಟಿ ಬರೆಯುತ್ತಿದ್ದ  ನೇರಳೆ ಬಣ್ಣದ ತುಂಬು ತೋಳಿನ ಶರ್ಟ್ & ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಶೌನ್ ಬಿ ಕೋಟ್ಯಾನ್ ಪ್ರಾಯ : 42 ವರ್ಷ  ತಂದೆ : ದಿ ಪ್ರಭಾಕರ ಸಂಜೀವ ಕೋಟ್ಯಾನ್ ವಾಸ : ವಿಶ್ವನಾಥ ದೇವಸ್ಥಾನದ ಹಿಂಭಾಗ  ಕೋಟೆ ಗ್ರಾಮ ಕಟಪಾಡಿ ಕಾಪು ತಾಲ್ಲೂಕು ಎಂದು ತಿಳಿಸಿರುತ್ತಾರೆ. ಅಲ್ಲದೇ ತಾನು ಮಟ್ಕಾ ಜೂಜಾಟದಿಂದ ಸಂಗ್ರಹಿಸಿದ ಹಣವನ್ನು ನಾನು ನನ್ನ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುವುದಾಗಿ  ತಿಳಿಸಿರುತ್ತಾರೆ.  ಆತನ ಅಂಗ ಜಪ್ತಿ ಮಾಡಲಾಗಿ ಪ್ಯಾಂಟ್ ಕಿಸೆಯಲ್ಲಿ ಮಟ್ಕಾ ಬರೆಯಲು ಬಳಸಿದ ಬಾಲ್ ಪೆನ್-1 ಮತ್ತು ಆತನ ಕೈಯಲ್ಲಿದ್ದ ಮಟ್ಕಾ ನಂಬ್ರ ಬರೆಯಲು ಬಳಸಿದ ಮಟ್ಕಾ ಚೀಟಿ -1 ನಗದು ರೂ 970/- ರೂಪಾಯಿಗಳಿದ್ದು, ಸದ್ರಿ ಸೊತ್ತುಗಳನ್ನು ಪಂಚರ ಸಮಕ್ಷಮ ಮುಂದಿನ ಕ್ರಮದ ಬಗ್ಗೆ ಮಹಜರು ಮುಖೇನ ಸ್ವಾದೀನಪಡಿಸಿಕೊಂಡಿದ್ದು ಈ  ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 174/2021  ಕಲಂ: 78(1)&(III) KP ACT ನಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ತಿಮ್ಮೇಶ ಬಿ. ಎನ್. (ತನಿಖೆ) ಪಿ.ಎಸ್.ಐ. ಕಾಪು ಪೊಲೀಸ್ ಠಾಣೆ ಇವರು ದಿನಾಂಕ 25.11.2021   ರಂದು ಠಾಣೆಯಲ್ಲಿರುವಾಗ ಸಿಬ್ಬಂದಿ ಪರಶುರಾಮ ರವರು ತನ್ನ ಬೀಟ್ ವ್ಯಾಪ್ತಿಯ ಪಡು ಗ್ರಾಮ ಕಾಪು ಪೇಟೆಯ ಪ್ರೀತಿ ವೈನ್ಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಡುತ್ತಿರುವುದಾಗಿ 11.00  ಗಂಟೆಗೆ  ಮಾಹಿತಿ ನೀಡಿದಂತೆ ಠಾಣಾ ಸಿಬ್ಬಂದಿಯವರೊಂದಿಗೆ  ಹೊರಟು 11.10  ಗಂಟೆಗೆ ಮಾಹಿತಿ ಬಂದ ಪಡು ಗ್ರಾಮ ಕಾಪು ಪೇಟೆಯ ಪ್ರೀತಿ ವೈನ್ಸ್ ಬಳಿ ಹೋಗಿ ಸ್ಥಳೀಯ ಪಂಚರನ್ನು ಸ್ಥಳಕ್ಕೆ ಬರಮಾಡಿಕೊಂಡು ಮರೆಯಲ್ಲಿ ನಿಂತು ನೋಡಲಾಗಿ ಕಾಪು ಪೇಟೆಯ ಪ್ರೀತಿ ವೈನ್ಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು   ಅವರಲ್ಲಿ ಓರ್ವ ವ್ಯಕ್ತಿ   ಬಿಳಿ  ನೀಲಿ ಬಣ್ಣದ  ಚೌಕುಳಿಯುಳ್ಳ ಪಿಂಕ್ ತುಂಬು ತೋಳಿನ ಶರ್ಟ ಮತ್ತು  ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದ ವ್ಯಕ್ತಿಯು  ಕೈಯಲ್ಲಿ ಚೀಟಿ ಬರೆಯುತ್ತಾ  1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ  ಜೋರಾಗಿ ಹೇಳುತ್ತಿದ್ದನು. ಸಾರ್ವಜನಿಕರು ಹಣವನ್ನು ನಂಬ್ರಗಳ ಮೇಲೆ ಪಣವಾಗಿ ಕಟ್ಟುತ್ತಿದ್ದು ಸದ್ರಿ ವ್ಯಕ್ತಿಗಳು  ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸುತ್ತಿದ್ದು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ 11.15  ಗಂಟೆಗೆ ದಾಳಿ ನಡೆಸಿದಾಗ ಅಲ್ಲಿ ಹಣ ಕಟ್ಟಲು ಸೇರಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಮಟ್ಕಾ ಚೀಟಿ ಬರೆಯುತ್ತಿದ್ದ  ವ್ಯಕ್ತಿಯನ್ನು ಹಿಡಿದು ವಿಚಾರಸಲಾಗಿ ತನ್ನ ಹೆಸರು ಸುರೇಶ ಪ್ರಾಯ : 48 ವರ್ಷ  ತಂದೆ : ರಾಮ ಸ್ವಾಮಿ ವಾಸ : ಹೊಸ ಮಾರಿಗುಡಿ ಹಿಂಬದಿ ಸಾಮಿಲ್ ತೋಟ ಪಡು ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ. ಎಂದು ತಿಳಿಸಿರುತ್ತಾರೆ. ಅಲ್ಲದೇ ತಾನು ಮಟ್ಕಾ ಜೂಜಾಟದಿಂದ ಸಂಗ್ರಹಿಸಿದ ಹಣವನ್ನು ನಾನು ನನ್ನ ಸ್ವಂತ ಲಾಭಕ್ಕಾಗಿ ಬಳಿಸಿಕೊಳ್ಳುವುದಾಗಿ  ತಿಳಿಸಿರುತ್ತಾರೆ.  ಆತನ ಅಂಗ ಜಪ್ತಿ ಮಾಡಲಾಗಿ ಪ್ಯಾಂಟ್ ಕಿಸೆಯಲ್ಲಿ ಮಟ್ಕಾ ಬರೆಯಲು ಬಳಸಿದ ಬಾಲ್ ಪೆನ್-1 ಮತ್ತು ಆತನ ಕೈಯಲ್ಲಿದ್ದ ಮಟ್ಕಾ ನಂಬ್ರ ಬರೆಯಲು ಬಳಸಿದ ಮಟ್ಕಾ ಚೀಟಿ -1 ನಗದು ರೂ 620/- ರೂಪಾಯಿಗಳಿದ್ದು, ಸದ್ರಿ ಸೊತ್ತುಗಳನ್ನು ಪಂಚರ ಸಮಕ್ಷಮ ಮುಂದಿನ ಕ್ರಮದ ಬಗ್ಗೆ ಮಹಜರು ಮುಖೇನ ಸ್ವಾದೀನಪಡಿಸಿಕೊಂಡಿದ್ದು ಈ  ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 173/2021  ಕಲಂ: 78(1)&(III) KP ACT ನಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-11-2021 05:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080